Tag: ವಿಂಟೇಜ್ ಕಾರ್

  • ದೇಶ-ವಿದೇಶಗಳ 22, ಬೆಂಗ್ಳೂರಿನ 16, ರಾಜ್ಯದ 12- ಒಟ್ಟು 50 ವಿಂಟೇಜ್ ಕಾರ್ ಗಳ ರ್‍ಯಾಲಿ

    ದೇಶ-ವಿದೇಶಗಳ 22, ಬೆಂಗ್ಳೂರಿನ 16, ರಾಜ್ಯದ 12- ಒಟ್ಟು 50 ವಿಂಟೇಜ್ ಕಾರ್ ಗಳ ರ್‍ಯಾಲಿ

    ಬೆಂಗಳೂರು: ಸದಾ ಕಾಲ ರಾಜಕೀಯದ ಹಗ್ಗಜಗ್ಗಾಟ ನಡೆಯುವ ವಿಧಾನಸೌಧದಲ್ಲಿ ಭಾನುವಾರ ವಿಂಟೇಜ್ ಕಾರ್ ಗಳ ಮೆರವಣಿಗೆ ನಡೆದಿದೆ.

    ಈ ಮೆರವಣಿಗೆಯಲ್ಲಿ ರಾಜ್ಯದ ನಾಯಕರು ಭಾಗಿಯಾಗಿ ವಿಧಾನಸೌಧ ಸುತ್ತ ವಿಂಟೇಜ್ ಕಾರಿನಲ್ಲಿ ಒಂದು ರೌಂಡ್ ಹಾಕಿದ್ದಾರೆ. ಅಲ್ಲದೇ ವಿದೇಶಿ ಅತಿಥಿಗಳ ಜೊತೆ ಕಾಲ ಕಳೆದು, ದಸರಾದ ಪ್ರಯುಕ್ತ ಆಯೋಜನೆ ಮಾಡಿದ ಅಂತರಾಷ್ಟ್ರೀಯ ಮಟ್ಟದ ವಿಂಟೇಜ್  ರ್‍ಯಾಲಿಗೆ ಅದ್ಧೂರಿ ಚಾಲನೆ ನೀಡಿದ್ದಾರೆ.

    ನಾಡಹಬ್ಬ ದಸರಾ ಪ್ರಯುಕ್ತ ಬೆಂಗಳೂರಿನಿಂದ ಮೈಸೂರಿಗೆ ಆಯೋಜನೆ ಮಾಡಿದ್ದ ವಿಂಟೇಜ್ ಕಾರುಗಳ ರ್‍ಯಾಲಿಗೆ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ಚಾಲನೆ ನೀಡಿದ್ದರು. ಜೊತೆಗೆ ವಿದೇಶಗಳಿಂದ ಬಂದಿದ್ದ ಅತಿಥಿಗಳಿಗೆ ಮೈಸೂರು ಪೇಟ ತೊಡಿಸಿ ಸನ್ಮಾನ ಕೂಡ ಮಾಡಿದ್ದಾರೆ.

    ದೇಶ ವಿದೇಶಗಳ 22 ವಿಂಟೇಜ್ ಕಾರುಗಳು, ಬೆಂಗಳೂರಿನ 16 ಕಾರು, ರಾಜ್ಯದ 12 ಕಾರುಗಳು ಸೇರಿದಂತೆ ಒಟ್ಟು 50 ವಿಂಟೇಜ್ ಕಾರುಗಳು ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದವು. 1924ರ ಅತ್ಯಂತ ಹಳೆಯ ಲ್ಯಾನ್ಚೆಸ್ಟರ್ ಕಾರು, ಜೊತೆಗೆ ನಮ್ಮ ಮೊದಲ ಪ್ರಧಾನಿ ನೆಹರು ಬಳಸಿದ್ದ ಕಾರು ಎಲ್ಲರ ಗಮನ ಸೆಳೆಯಿತು. ಈ ವಿಂಟೇಜ್ ಕಾರುಗಳು ಎರಡು ದಿನ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವಿಶ್ವ ಪ್ರಸಿದ್ಧ ದಸರಾಗೆ ಮೆರಗು ನೀಡಲಿದೆ ಎಂದು ಆಯೋಜಕರು ಡಾ. ರವಿಪ್ರಕಾಶ್ ಹೇಳಿದ್ದಾರೆ.

    ಸದಾ ರಾಜಕೀಯ ಬೆಳವಣೆಗೆಗಳು ನಡೆಯುವ ವಿಧಾನಸೌಧದಲ್ಲಿ ಭಾನುವಾರ ವಿಂಟೇಜ್ ಕ್ವೀನ್‍ಗಳ ಹಬ್ಬವೇ ನಡೆದಿದೆ. ಹತ್ತಾರು ದೇಶ ವಿದೇಶದ ತರಹೇವಾರಿ ವಿಂಟೇಜ್ ಕ್ವೀನ್‍ಗಳನ್ನ ನೋಡಿದ ಗಾರ್ಡನ್ ಸಿಟಿ ಮಂದಿ ಸಖತ್ ಎಂಜಾಯ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv