Tag: ವಾಹನ ಸವಾರರು

  • ವಾಹನ ಸವಾರರಿಗೆ ಬೆಸ್ಕಾಂನಿಂದ ಗುಡ್ ನ್ಯೂಸ್

    ವಾಹನ ಸವಾರರಿಗೆ ಬೆಸ್ಕಾಂನಿಂದ ಗುಡ್ ನ್ಯೂಸ್

    ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸುಸ್ತಾಗಿರುವ ವಾಹನ ಸವಾರರಿಗೆ ಬೆಸ್ಕಾಂ ಗುಡ್ ನ್ಯೂಸ್ ಕೊಡುತ್ತಿದೆ.

    ಹೌದು. ವಾಹನ ಸವಾರರಿಗೆ ಬೆಸ್ಕಾಂ ಸಂಜೀವಿನಿ ನೀಡಿದೆ. ಕಡಿಮೆ ದರದಲ್ಲಿ ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಮಾಡುವ ಕೇಂದ್ರಗಳಿಗೆ ಚಾಲನೆ ನೀಡಿದೆ. ನೂತನ ಚಾರ್ಜಿಂಗ್ ಕೇಂದ್ರಗಳಿಗೆ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ.

    ಬೈಕ್ ಮತ್ತು ಕಾರ್ ಗಳಿಗೆ ಚಾರ್ಜಿಂಗ್ ಕೇಂದ್ರದ ಮೂಲಕ ಚಾರ್ಜ್ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ 14 ಕಡೆ ಚಾರ್ಜಿಂಗ್ ಸ್ಟೇಷನ್‍ ಗಳ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬೆಸ್ಕಾಂ ಕೇಂದ್ರ ಕಚೇರಿ, ವಿಧಾನಸೌಧ ಹಾಗೂ ಕೆಇಆರ್ ಸಿ ಕಚೇರಿಯಲ್ಲಿ ಈ ವ್ಯವಸ್ಥೆ ಇರಲಿದೆ. ಪ್ರತಿ ಯೂನಿಟ್ ಚಾರ್ಜ್ ಗೆ 4 ರೂಪಾಯಿ 85 ಪೈಸೆ ನಿಗದಿ ಪಡಿಸಿದ್ದು, ಕಿಲೋ ವ್ಯಾಟ್ ಗೆ 50 ರೂಪಾಯಿ ಆಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರು ಹೇಳಿದ್ದಾರೆ.

    ಚಾರ್ಜಿಂಗ್ ಹೇಗೆ..?
    * ಎರಡು ಹಂತದಲ್ಲಿ ಚಾರ್ಜಿಂಗ್ ವ್ಯವಸ್ಥೆ
    1- ಡಿಸಿ ಫಾಸ್ಟ್ ಚಾರ್ಜಿಂಗ್
    2- ಎಸಿ ಸ್ಲೋ ಚಾರ್ಜಿಂಗ್
    * ಪೂರ್ತಿ ಚಾರ್ಜ್ ಆಗಲು 90 ನಿಮಿಷ ಬೇಕಾಗಿದ್ದು 15 ಕಿಲೋ ವ್ಯಾಟ್ ವಿದ್ಯುತ್.
    * ಪೂರ್ತಿ ಚಾರ್ಜ್ ಗೆ 6-7 ಗಂಟೆ. 3.3 ಕಿಲೋ ವ್ಯಾಟ್ ವಿದ್ಯುತ್.
    * ಎಸಿ ರಹಿತ ವಾಹನ 120 ಕಿಲೋ ಮೀಟರ್ ಬಳಸಬಹುದು.
    * ಎಸಿ ಸಹಿತ 100 ಕಿಲೋಮೀಟರ್ ದೂರ ಬಳಸಬಹುದು.

    ಹೀಗಾಗಿ ಜನರು ವಿದ್ಯುತ್ ಚಾರ್ಜಿಂಗ್ ವಾಹನ ಬಳಕೆ ಮಾಡಿದರೆ ಹಣವನ್ನು ಉಳಿಸಬಹುದು ಜೊತೆಗೆ ಮಾಲಿನ್ಯವನ್ನ ತಡೆಯಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳಲ್ಲಿ ಸಂಚರಿಸೋ ವಾಹನ ಸವಾರರಿಗೆ ಕಹಿ ಸುದ್ದಿ

    ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳಲ್ಲಿ ಸಂಚರಿಸೋ ವಾಹನ ಸವಾರರಿಗೆ ಕಹಿ ಸುದ್ದಿ

    ಬೆಂಗಳೂರು: ವಾಹನ ಸವಾರರಿಗೆ ಇದು ಕಹಿ ಸುದ್ದಿ. ಬೆಂಗಳೂರಿನ ಟ್ರಾಫಿಕ್‍ನಲ್ಲಿ ಒದ್ದಾಡುವವರು ತಪ್ಪದೇ ಈ ಸುದ್ದಿಯನ್ನು ಓದ್ಲೇಬೇಕು. ಯಾಕೆ ಅಂದ್ರೇ ಬೆಂಗಳೂರಿನ ಹೃದಯಭಾಗದ ಕೆಲ ರಸ್ತೆಗಳು ಬಂದ್ ಆಗಲಿವೆ.

    ಉದ್ಯಾನ ನಗರಿ ಬೆಂಗಳೂರಿನ ಹೃದಯ ಭಾಗದ ನಾಲ್ಕು ರಸ್ತೆ ಬಂದ್ ಆಗುವ ಸಾಧ್ಯತೆಗಳಿವೆ. ಬೆಂಗಳೂರಿನ ಸೆಂಟರ್ ಆಫ್ ಪಾಯಿಂಟ್ ಕಬ್ಬನ್ ಪಾರ್ಕಿನ ಒಳಗೆ ನಾಲ್ಕು ಗೇಟ್‍ಗಳನ್ನ ಬಂದ್ ಮಾಡಬೇಕು ಅನ್ನೊ ಪ್ರಸ್ತಾವನೆಯನ್ನ ತೋಟಗಾರಿಕಾ ಇಲಾಖೆ ಮಾಡಿದೆ. ಭಾನುವಾರ ಮಾತ್ರ ವಾಹನ ಓಡಾಟಕ್ಕೆ ನಿರ್ಬಂಧವಿತ್ತು. ಅದರೆ ಈಗ 4 ಗೇಟ್‍ಗಳಿಗೆ ಬೀಗ ಬೀಳುವ ಸಾಧ್ಯತೆಯಿದೆ. ವಿಪರೀತವಾಗಿ ಹೆಚ್ಚುತ್ತಿರುವ ಮಾಲಿನ್ಯವನ್ನ ತಡೆಯುವ ನಿಟ್ಟಿನಲ್ಲಿ ಈ ರಸ್ತೆಗಳನ್ನು ಮುಚ್ಚಲೇಬೇಕು ಅನ್ನೋದು ತೋಟಗಾರಿಕಾ ಇಲಾಖೆಯ ಒತ್ತಾಯವಾಗಿದೆ.

    ಬಾಲಭವನ ಗೇಟ್, ಬಿಎಸ್‍ಎನ್‍ಎಲ್ ಗೇಟ್, ಹಡ್ಸನ್ ಗೇಟ್, ಕೆಆರ್ ಸರ್ಕಲ್ ಗೇಟ್ ಈ ನಾಲ್ಕು ಗೇಟ್‍ಗಳಲ್ಲಿ ಎರಡನ್ನು ಮುಚ್ಚೋದು ಗ್ಯಾರೆಂಟಿ. ಇನ್ನೆರಡು ಗೇಟ್‍ಗಳನ್ನು ಮುಚ್ಚುವ ಬಗ್ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಾವ ನಿರ್ಧಾರಕ್ಕೆ ಬರಬಹುದು ಅನ್ನೋದು ಇನ್ನು ಕೆಲ ದಿನಗಳಲ್ಲಿ ಗೊತ್ತಾಗಲಿದೆ.

    ಒಂದು ಕಡೆ ಉದ್ಯಾನನಗರಿ ಎನ್ನುವ ಹೆಸರಿಗೆ ಕಾರಣವಾಗಿರುವ ಸುಮಾರು 200 ಎಕರೆಯ ಕಬ್ಬನ್ ಪಾರ್ಕನ್ನು ಪಾರ್ಕ್ ಆಗಿಯೇ ಉಳಿಸಬೇಕು ಎನ್ನುವ ಒತ್ತಾಯವನ್ನು ವಾಕರ್ಸ್ ಆಸೋಸಿಯೆಶನ್ ಅಧ್ಯಕ್ಷ ಉಮೇಶ್ ಮಾಡಿದ್ದಾರೆ. ಆದ್ರೆ ಮತ್ತೊಂದು ಕಡೆ ವಾಹನ ಸವಾರರು ಸುಮಾರು ಎರಡು ವರ್ಷಗಳಿಂದ ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳನ್ನ ಬಳಸುತ್ತಿದ್ದು, ಈಗ ಈ ಪ್ರಸ್ತಾಪಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿ ಗೇಟ್‍ಗಳನ್ನ ಮುಚ್ಚಿದ್ರೆ ನಾವು ಮೂರು-ನಾಲ್ಕು ಕಿ.ಮೀ. ಸುತ್ತಿ ಬರಬೇಕು. ತುಂಬಾ ಸಮಸ್ಯೆ ಎದುರಿಸಬೇಕಾಗುತ್ತೆ. ನಮ್ಮ ಟೈಮ್ ಸಹ ವೇಸ್ಟ್ ಆಗುತ್ತೆ ಅನ್ನೋದು ವಾಹನ ಸವಾರರ ಅಳಲು.

    ಒಂದು ಕಡೆ ಕಬ್ಬನ್ ಪಾರ್ಕ್ ರಕ್ಷಣೆ ಮಾಡಬೇಕು ಅನ್ನೊದಾದ್ರೇ ಇನ್ನೊಂದು ಕಡೆ ಈ ಬೆಂಗಳೂರು ಟ್ರಾಫಿಕ್ ತಲೆನೋವು. ಸರ್ಕಾರ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುತ್ತೋ ಅಥವಾ ಮಾಲಿನ್ಯ ಕಡಿಮೆ ಮಾಡಿ ಪಾರ್ಕಿನ ರಕ್ಷಣೆ ಮಾಡುತ್ತೋ ಕಾದುನೋಡಬೇಕಿದೆ