Tag: ವಾಹನಗಳು

  • ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ – 15 ದಿನಕ್ಕೆ 45 ಕೋಟಿ ದಾಟಿದ ದಂಡ ಪಾವತಿಯ ಮೊತ್ತ

    ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ – 15 ದಿನಕ್ಕೆ 45 ಕೋಟಿ ದಾಟಿದ ದಂಡ ಪಾವತಿಯ ಮೊತ್ತ

    ಬೆಂಗಳೂರು: ಟ್ರಾಫಿಕ್ ಫೈನ್ (Traffic Fine) ಪಾವತಿಗೆ 50% ಡಿಸ್ಕೌಂಟ್ ನೀಡಿದ್ದಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, 15 ದಿನಕ್ಕೆ ದಂಡದ ಪಾವತಿ ಮೊತ್ತ 45 ಕೋಟಿ ರೂ. ದಾಟಿದೆ.

    ವಾಹನ ಮಾಲೀಕರು 16,21,721 ಬಾಕಿ ಕೇಸ್‌ಗಳಿಗೆ ದಂಡ ಪಾವತಿಸಿದ್ದು, ಇಲ್ಲಿವರೆಗೆ 45.52 ಕೋಟಿ ರೂ. ದಂಡ ಪಾವತಿಯಾಗಿದೆ. ಇದನ್ನೂ ಓದಿ: ಬಂಡೀಪುರ | ಸಫಾರಿ ವಾಹನವನ್ನು ಅಟ್ಟಾಡಿಸಿದ ಕಾಡಾನೆ – ವೀಡಿಯೋ ವೈರಲ್

    ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು ರಿಯಾಯಿತಿ ನೀಡಿದ್ದರು. ಇನ್ನೂ ಸೆ.12ರವರೆಗೆ ದಂಡ ಪಾವತಿ ಮಾಡಲು ಕಾಲಾವಕಾಶವಿದ್ದು, ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 2 ಮಕ್ಕಳ ತಂದೆಯಿಂದ ನಿರಂತರ ಅತ್ಯಾಚಾರ – ಹೆರಿಗೆಯಾದ ಅರ್ಧ ಗಂಟೆಯಲ್ಲೇ ಮಗು ಸಾವು

    ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಆದೇಶ ಹೊರಡಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ 50% ಮೊತ್ತವನ್ನು ಪಾವತಿಸುವಂತೆ ರಿಯಾಯಿತಿ ಘೋಷಿಸಿದ್ದರು. ಇದನ್ನೂ ಓದಿ: ಇಂದು ವರ್ಷದ ಕೊನೆಯ ಗ್ರಹಣ; ಮಧ್ಯಾಹ್ನವೇ ದೇವಾಲಯಗಳು ಬಂದ್ – ವಿಶೇಷ ಪೂಜೆ, ಪುನಸ್ಕಾರ

  • 9 ಲಕ್ಷಕ್ಕೂ ಹೆಚ್ಚು ವಾಹನಗಳಿಗೆ ಗೇಟ್‌ಪಾಸ್‌ – ನಿತಿನ್‌ ಗಡ್ಕರಿ

    9 ಲಕ್ಷಕ್ಕೂ ಹೆಚ್ಚು ವಾಹನಗಳಿಗೆ ಗೇಟ್‌ಪಾಸ್‌ – ನಿತಿನ್‌ ಗಡ್ಕರಿ

    ನವದೆಹಲಿ: 15 ವರ್ಷಕ್ಕಿಂತ ಹಳೆಯದಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಾರಿಗೆ ನಿಗಮಗಳು, ಸಾರ್ವಜನಿಕ ವಲಯದ ಉದ್ಯಮಗಳ ಒಡೆತನದ 9 ಲಕ್ಷಕ್ಕೂ ಹೆಚ್ಚು ವಾಹನಗಳು ಏಪ್ರಿಲ್‌ 1ರಿಂದ ರಸ್ತೆಗಿಳಿಯುವುದಿಲ್ಲ. ಅವುಗಳು ಸೇವೆಯಿಂದ ಹೊರಗುಳಿಯಲಿವೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari) ತಿಳಿಸಿದ್ದಾರೆ.

    ಉದ್ಯಮ ಸಂಸ್ಥೆ ಎಫ್‌ಐಸಿಸಿಐ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಹಳೆಯ ವಾಹನಗಳ ಬದಲಿಗೆ ಹೊಸ ವಾಹನಗಳು ರಸ್ತೆಗಿಳಿಯಲಿವೆ. ಎಥೆನಾಲ್, ಮೆಥನಾಲ್, ಬಯೋ-ಸಿಎನ್‌ಜಿ, ಬಯೋ-ಎಲ್‌ಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸುಗಮಗೊಳಿಸಲು ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Union Budget 2023: ಮಂಗಳವಾರದಿಂದ ಬಜೆಟ್ ಅಧಿವೇಶನ – ಫೆ. 1ಕ್ಕೆ ಬಜೆಟ್ ಮಂಡನೆ

    ನಾವು ಈಗ 15 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಒಂಭತ್ತು ಲಕ್ಷಕ್ಕೂ ಹೆಚ್ಚು ಸರ್ಕಾರಿ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಅನುಮೋದಿಸಿದ್ದೇವೆ. ಮಾಲಿನ್ಯಕಾರಕ ಬಸ್‌ಗಳು ಮತ್ತು ಕಾರುಗಳು ರಸ್ತೆಯಿಂದ ಹೊರಗುಳಿಯುತ್ತವೆ. ಪರ್ಯಾಯ ಇಂಧನಗಳೊಂದಿಗೆ ಹೊಸ ವಾಹನಗಳು ರಸ್ತೆಗಿಳಿಯಲಿವೆ. ಇದು ವಾಯುಮಾಲಿನ್ಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಏಪ್ರಿಲ್ 1 ರಿಂದ 15 ವರ್ಷಕ್ಕಿಂತ ಹಳೆಯದಾದ, ಸಾರಿಗೆ ನಿಗಮಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಒಡೆತನದ ಬಸ್‌ಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಡೆತನದ ಎಲ್ಲಾ ವಾಹನಗಳ ನೋಂದಣಿ ರದ್ದುಗೊಳಿಸಲಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಇತ್ತೀಚಿನ ಅಧಿಸೂಚನೆ ಹೊರಡಿಸಿತ್ತು. ಇದನ್ನೂ ಓದಿ: ಕಾಶ್ಮೀರದ ಬೀದಿಗಳಲ್ಲಿ ನಡೆಯಲು ಅಮಿತ್ ಶಾ ಸಹಿತ ಬಿಜೆಪಿ ನಾಯಕರಿಗೆ ಅಸಾಧ್ಯ – ಅವರಿಗೆ ಭಯವಿದೆ: ರಾಹುಲ್ ಗಾಂಧಿ

    ದೇಶದ ರಕ್ಷಣೆ, ಕಾನೂನು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆ ನಿರ್ವಹಣೆಯ ಕಾರ್ಯಾಚರಣೆ ಉದ್ದೇಶಗಳಿಗಾಗಿ ಬಳಸುವ ವಾಹನಗಳಿಗೆ (ಶಸ್ತ್ರಸಜ್ಜಿತ ಮತ್ತು ಇತರ ವಿಶೇಷ ವಾಹನಗಳಿಗೆ) ಈ ನಿಯಮ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರೀ ಅಗ್ನಿ ಅವಘಡ – 90ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿ

    ಭಾರೀ ಅಗ್ನಿ ಅವಘಡ – 90ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ 10 ಕಾರುಗಳು, 1 ಮೋಟಾರ್ ಸೈಕಲ್, 2 ಸ್ಕೂಟಿ, 30 ಹೊಸ ಇ-ರಿಕ್ಷಾ, 50 ಹಳೆಯ ಇ-ರಿಕ್ಷಾಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

    ಜಾಮಿಯಾ ನಗರ ಮೆಟ್ರೋ ನಿಲ್ದಾಣ ಬಳಿ ಇರುವ ಎಲೆಕ್ಟ್ರಿಕ್ ಮೋಟಾರ್ ಪಾರ್ಕಿಂಗ್‌ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ 5 ಗಂಟೆಯ ಸುಮಾರು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು, 11 ಅಗ್ನಿ ಶಾಮಕದಳ ವಾಹನಗಳ ಮೂಲಕ ಬೆಂಕಿಯನ್ನು ನಂದಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ಪಿಯುಸಿ ತರಗತಿಗಳು ಪ್ರಾರಂಭ- ಹಿಜಬ್ ನಿಷೇಧ

    ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾದರೂ ದೊಡ್ಡ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹಾನಿಯಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವೂ ಎಲೆಕ್ಟ್ರಿಕ್ ವಾಹನಗಳಾಗಿರುವ ಹಿನ್ನೆಲೆ ಇದು ಶಾರ್ಟ್ ಸಕ್ಯೂರ್ಟ್ ನಿಂದ ಆಗಿರುವ ಸಾಧ್ಯತೆ ಇದೆ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರೆಪೋ ರೇಟ್ ಏರಿಸಿದ ಆರ್‌ಬಿಐ – ಹೆಚ್ಚಳವಾಗಲಿದೆ ಲೋನ್, ಇಎಂಐಗಳ ಬಡ್ಡಿ ದರ

    ದೆಹಲಿಯಲ್ಲಿ ಕಳೆದ ಕೆಲವು ವಾರಗಳಿಂದ ಹಲವು ಕಡೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಇತ್ತೀಚೆಗೆ ಮುಂಡ್ಕಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 27 ಜನರು ಸಾವನ್ನಪ್ಪಿದ್ದರು ಹಾಗೂ ಅನೇಕರು ಗಾಯಗೊಂಡರು. ಮೃತ ದೇಹಗಳ ಗುರುತು ಸಿಗದ ಕಾರಣ ಡಿಎನ್‌ಎ ಪ್ರೊಫೈಲಿಂಗ್ ಮೂಲಕ ಪತ್ತೆ ಮಾಡಲಾಗಿತ್ತು.

  • ರೋಡಿಗೆ ಬಂದ ನಾಗರಹಾವು- ಅರ್ಧ ಗಂಟೆ ಸಂಚಾರ ಬಂದ್

    ರೋಡಿಗೆ ಬಂದ ನಾಗರಹಾವು- ಅರ್ಧ ಗಂಟೆ ಸಂಚಾರ ಬಂದ್

    ಚಿಕ್ಕೋಡಿ: ನಾಗರಹಾವು ರಸ್ತೆಗೆ ಬಂದು ಅರ್ಧ ಗಂಟೆಗಳ ಕಾಲ ಸಂಚಾರ ಬಂದ್ ಮಾಡಿರಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಸಂಭವಿಸಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಈ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಇಂದು ಸಂಜೆ ನಾಗರಹಾವು ಕಾಣಿಸಿಕೊಂಡು, ರೋಡಿನ ಮೇಲೆ ಹೆಡೆ ಎತ್ತಿ ಕೆಲಕಾಲ ಆಟ ಆಡಿದೆ. ಇದನ್ನೂ ಓದಿ: ಥಿಯೇಟರ್‌ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ

    ಅರ್ಧ ಗಂಟೆಗಳ ಕಾಲ ರೋಡಿನ ಮೇಲೆ ಆಟ ಆಡಿದ ನಂತರ ಪಕ್ಕದ ಹುಲ್ಲು ಗಾಡಿಗೆ ಸೇರಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತು. ವಾಹನ ಸವಾರರು ಮಾತ್ರ ಹಾವು ನೋಡುತ್ತ ಮೂಕ ಪ್ರೇಕ್ಷಕರಂತೆ ನಿಂತಿದ್ದರು.

  • ಮಹಾರಾಷ್ಟ್ರ ಗಡಿಯಲ್ಲಿ ಕಾಟಾಚಾರಕ್ಕೆ ಕೊರೊನಾ ರಿಪೋರ್ಟ್ ಚೆಕ್ಕಿಂಗ್

    ಮಹಾರಾಷ್ಟ್ರ ಗಡಿಯಲ್ಲಿ ಕಾಟಾಚಾರಕ್ಕೆ ಕೊರೊನಾ ರಿಪೋರ್ಟ್ ಚೆಕ್ಕಿಂಗ್

    – ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೇ ಸಂಚಾರ

    ಚಿಕ್ಕೋಡಿ: ಶೀಘ್ರದಲ್ಲೇ ಕೊರೊನಾ ಮೂರನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರ ಮಹಾರಾಷ್ಟ್ರ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ, ಕೊರೊನಾ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಿಸಲು ಬಿಡಬೇಕೆಂದು ಆದೇಶಿಸಿದೆ. ಆದರೆ ಚೆಕ್ ಪೋಸ್ಟ್ ಗಳಲ್ಲಿ ಕಾಟಾಚಾರಕ್ಕೆ ತಪಾಸಣೆ ಮಾಡಲಾಗುತ್ತಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರ ವಲಯದಲ್ಲಿ ಮಹಾರಾಷ್ಟ್ರದ ಗಡಹಿಂಗ್ಲಜ್ ತಾಲೂಕಿನ ಗಡಿಯಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಕಾಟಾಚಾರಕ್ಕೆ ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ತಪಾಸಣೆ ಮಾಡದೇ ನಿದ್ರಾವಸ್ಥೆಯಲ್ಲಿದ್ದಾರೆ. ಹೀಗಾಗಿ ಮಹಾರಾಷ್ಟ್ರದಿಂದ ಜನರು ನಿರಾತಂಕವಾಗಿ ನೆಗೆಟಿವ್ ವರದಿ ಇಲ್ಲದೇ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಆರೋಪಿಗಳನ್ನು ಗಲ್ಲಿಗೇರಿಸಬೇಕು: ಯತ್ನಾಳ್

    ಕಡ್ಡಾಯವಾಗಿ ಕೊರೊನಾ ನೆಗೆಟಿವ್ ವರದಿ ಇದ್ದವರು ಮಾತ್ರ ರಾಜ್ಯ ಪ್ರವೇಶಿಸಬೇಕೆಂದು ಆದೇಶ ಹೊರಡಿಸಲಾಗಿದೆ. ಆದರೆ ಅಧಿಕಾರಿಗಳು ಡೋಂಟ್ ಕೇರ್ ಎಂದು ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ನಿರ್ಲಕ್ಷ್ಯ ವಹಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಲಾಕ್‍ಡೌನ್ ವೇಳೆ ಪೊಲೀಸರು ವಶಕ್ಕೆ ಪಡೆದ ವಾಹನಗಳಿಗೆ ಬಿಡುಗಡೆ ಭಾಗ್ಯ

    ಲಾಕ್‍ಡೌನ್ ವೇಳೆ ಪೊಲೀಸರು ವಶಕ್ಕೆ ಪಡೆದ ವಾಹನಗಳಿಗೆ ಬಿಡುಗಡೆ ಭಾಗ್ಯ

    – ರಿಲೀಸ್‍ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

    ಬೆಂಗಳೂರು: ಲಾಕ್‍ಡೌನ್ ವೇಳೆ ಸೀಜ್ ಆಗಿದ್ದ ವಾಹನ ರಿಲೀಸ್ ಮಾಡಲು ಪೊಲೀಸರಿಗೆ ಅಧಿಕಾರವನ್ನು ನೀಡಿ ಹೈಕೋರ್ಟ್ ಆದೇಶ ನೀಡಿದೆ. ಪೊಲೀಸರೇ ದಂಡ ಕಟ್ಟಿಸಿಕೊಂಡು ಬಿಡಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

    ವಾಹನ ಬಿಡುಗಡೆಗಾಗಿ ನ್ಯಾಯಾಲಯಕ್ಕೆ ಓಡಾಡುವ ಅಗತ್ಯವಿಲ್ಲ. ಈ ರೀತಿ ಅಲೆದಾಡುವ ಬದಲು ಪೊಲೀಸರೇ ಗಾಡಿಯನ್ನು ರಿಲೀಸ್ ಮಾಡಬಹುದು. ಪೊಲೀಸರಿಗೇ ವಾಹನ ರಿಲೀಸ್ ಅಧಿಕಾರ ನೀಡಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ರೂಲ್ಸ್ ಬ್ರೇಕ್ ಮಾಡಿ ರಸ್ತೆಗಿಳಿದಿದ್ದ ಲಕ್ಷಾಂತರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಸಮಸ್ಯೆಯಾಗಿತ್ತು ಈ ಹಿನ್ನೆಲೆಯಲ್ಲಿ ನಿರ್ದೇಶನ ಕೋರಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು.

    ಸದ್ಯದ ಲಾಕ್‍ಡೌನ್ ಮುಗಿಯೋಕೆ ಇನ್ನು 6 ದಿನಗಳಷ್ಟೇ ಇದೆ. ಆದರೆ ಬೆಂಗಳೂರಲ್ಲಿ ಜೂನ್ 14ಕ್ಕೂ ಮೊದಲೇ ಅನ್‍ಲಾಕ್ ಆಗೋ ಎಲ್ಲಾ ಸಾಧ್ಯತೆ ಇದೆ. ತಜ್ಞರು ಹೇಳಿರುವಂತೆ ಬೆಂಗಳೂರು ಅನ್‍ಲಾಕ್‍ಗೆ ಪಾಸಿಟಿವಿಟಿ ರೇಟ್ ಶೇ.3 ಇಳಿಯಬೇಕು. ಇದೀಗ ಸೋಂಕು ಪ್ರಮಾಣ ಶೇಕಡಾ 3.82ಕ್ಕೆ ಇಳಿದಿದೆ. ಕಳೆದ 4 ದಿನಗಳಿಂದ ಬೆಂಗಳೂರಿನಲ್ಲಿ ಸೋಂಕು ಪ್ರಮಾಣ ಶೇಕಡಾ 5ರೊಳಗೆ ಇದೆ. ಪಾಲಿಕೆಯ 8 ವಲಯಗಳಲ್ಲೂ 300ಕ್ಕಿಂತ ಕಡಿಮೆ ಕೇಸ್ ದಾಖಲಾಗಿದೆ. ಇನ್ನು ಅನ್‍ಲಾಕ್ ಬಗ್ಗೆ ಖುದ್ದು ಬಿಬಿಎಂಪಿ ಮುಖ್ಯ ಆಯುಕ್ತರೇ ಸುಳಿವು ಕೊಟ್ಟಿದ್ದಾರೆ.

    ಸೋಂಕು ಪ್ರಮಾಣ ಶೇಕಡಾ 5ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿಸಬಹುದು ಎನ್ನಲಾಗುತ್ತಿದೆ. ಬೀದರ್ ನಲ್ಲಿ ಕಳೆದ ಒಂದು ವಾರದಿಂದ ಪಾಸಿಟಿವಿಟಿ ರೇಟ್ ಶೇಕಡಾ 1ಕ್ಕಿಂತ ಕಡಿಮೆ ಇದೆ. ಈ ಮೂಲಕ ಬೀದರ್ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಡಿಸಿಎಂ ಅಶ್ವಥ್ ನಾರಾಯಣ ಕೂಡ ಅನ್‍ಲಾಕ್ ಸುಳಿವು ಕೊಟ್ಟಿದ್ದಾರೆ.

    ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಹತೋಟಿಗೆ ಬಂದಿದೆ. ಇನ್ನು 2-3 ದಿನದಲ್ಲಿ ಸಿಎಂ ತೀರ್ಮಾನ ಕೈಗೊಳ್ತಾರೆ ಎಂದು ತಿಳಿಸಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ, ಜೂನ್ 14ರ ನಂತರ ಲಾಕ್ ಸಡಿಲಿಕೆ ಆಗಲಿದೆ. ಹಂತಹಂತವಾಗಿ ಬಸ್‍ಗಳನ್ನು ಕಾರ್ಯಾರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

  • ಮಂಗಳೂರಿನಲ್ಲಿ ಲಾಕ್‍ಡೌನ್ ಮುಗಿದೇ ಹೋಯ್ತು ಅನ್ನೋ ಮಟ್ಟಿಗೆ ವಾಹನ ದಟ್ಟಣೆ

    ಮಂಗಳೂರಿನಲ್ಲಿ ಲಾಕ್‍ಡೌನ್ ಮುಗಿದೇ ಹೋಯ್ತು ಅನ್ನೋ ಮಟ್ಟಿಗೆ ವಾಹನ ದಟ್ಟಣೆ

    ಮಂಗಳೂರು: ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್‍ಡೌನ್ ಇದ್ದರೂ ನಗರದ ಜನ ಮಾತ್ರ ಲಾಕ್ ಡೌನ್ ಮುಗಿದೇ ಹೋಯ್ತು ಅಂದುಕೊಂಡಂತಿದೆ. ಇಂದು ಬೆಳಗ್ಗೆ 10 ಗಂಟೆಯವರೆಗಿನ ದೃಶ್ಯ ನೋಡಿದರೆ ಲಾಕ್‍ಡೌನ್ ಇದೆಯೇ ಎಂಬ ಸಂದೇಹ ಮೂಡುತ್ತದೆ. ಅಷ್ಟರ ಮಟ್ಟಿಗೆ ವಾಹನ ದಟ್ಟಣೆ ಸಂಭವಿಸಿದೆ.

    ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಟ್ಟಿದ್ದನ್ನೇ ಲಾಭವನ್ನಾಗಿಸಿದ ಜನ ಬೇಕಾಬಿಟ್ಟಿ ರಸ್ತೆಯಲ್ಲಿ ಓಡಾಟ ನಡೆಸಿದರು. ಎಲ್ಲ ಪ್ರಮುಖ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಮಾಮೂಲಿ ದಿನಕ್ಕಿಂತಲೂ ಹೆಚ್ಚು ವಾಹನಗಳು ರಸ್ತೆಯಲಿದ್ದವು.

    ಟ್ರಾಫಿಕ್ ಪೊಲೀಸರಿಗೆ ವಾಹನಗಳನ್ನು ಕಂಟ್ರೋಲ್ ಮಾಡೋದೇ ಸವಾಲಾಗಿತ್ತು. ಬೆಳಗ್ಗೆ 10 ಗಂಟೆಯವರೆಗೂ ಪೊಲೀಸರು ರಸ್ತೆಗಿಳಿದು ತಪಾಸಣೆ ಮಾಡುವುದಿಲ್ಲ ಎಂದು ಗೊತ್ತಿದ್ದೇ ಜನ ಈ ರೀತಿ ತಮ್ಮ ಇತರೆ ಕೆಲಸಗಳಿಗೂ ಬೇಕಾ ಬಿಟ್ಟಿ ಓಡಾಟ ನಡೆಸಿದರು. ಇದನ್ನೆಲ್ಲ ಗಮನಿಸುತ್ತಿರುವ ಪೊಲೀಸ್ ಇಲಾಖೆ ಮಾತ್ರ ಬೆಳಗ್ಗೆ 10 ಗಂಟೆಯವರೆಗೆ ಕಣ್ಣು ಮುಚ್ಚಿ ಕುಳಿತಂತಿತ್ತು.

  • ಟೋಲ್‍ಗಳಲ್ಲಿ 10 ಸೆಕೆಂಡ್ ಮಾತ್ರ ವೇಟಿಂಗ್

    ಟೋಲ್‍ಗಳಲ್ಲಿ 10 ಸೆಕೆಂಡ್ ಮಾತ್ರ ವೇಟಿಂಗ್

    – 100 ಮೀ.ಗೂ ಹೆಚ್ಚು ಸರದಿ ನಿಂತರೆ ಶುಲ್ಕ ಪಾವತಿಸುವಂತಿಲ್ಲ
    – ಫಾಸ್ಟ್ ಟ್ಯಾಗ್ ಅಳವಡಿಸಿರುವ ವಾಹನಗಳಿಗೆ ಮಾತ್ರ ಅನ್ವಯ

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನದಟ್ಟಣೆಯ ಸಮಯ ಸೇರಿ ಎಲ್ಲ ಸಮಯದಲ್ಲೂ ಪ್ರತಿ ವಾಹನದ ಟೋಲ್ ಶುಲ್ಕ ಪಾವತಿ ಸಮಯ 10 ಸೆಕೆಂಡ್ ಮೀರದಿರುವುದನ್ನು ಖಾತರಿಪಡಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‍ಎಚ್‍ಎಐ) ತಿಳಿಸಿದೆ.

    ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿರುವ ಪ್ರಾಧಿಕಾರ, ಟೋಲ್ ಶುಲ್ಕ ಪಾವತಿ ಸಮಯ 10 ಸೆಕೆಂಡ್ ಮೀರುವಂತಿಲ್ಲ. ಅಲ್ಲದೆ ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ ಗಿಂತ ಹೆಚ್ಚು ವಾಹನಗಳ ಸರದಿ ನಿಲ್ಲಲು ಅವಕಾಶವಿಲ್ಲ. ಒಂದು ವೇಳೆ ಯಾವುದಾದರು ಕಾರಣಕ್ಕೆ ಕಾಯುತ್ತಿರುವ ವಾಹನಗಳ ಸರದಿ 100 ಮೀಟರ್ ಗಿಂತ ಹೆಚ್ಚಾದರೆ ಟೋಲ್ ಬೂತ್ ಗಳಲ್ಲಿ ವಾಹನಗಳ ಸರದಿ 100 ಮೀಟರ್ ಒಳಗಿನ ವಾಹನಗಳು ಟೋಲ್ ಪಾವತಿಸದೆ ಸಂಚರಿಸಬಹುದು.

    ಟೋಲ್ ಬೂತ್ ನಲ್ಲಿ ಪ್ರತಿಯೊಂದು ಟೋಲ್ ಮಾರ್ಗದಲ್ಲಿ 100 ಮೀಟರ್ ದೂರದಲ್ಲಿ ಹಳದಿ ಪಟ್ಟಿ ಹಾಕಲಾಗುತ್ತದೆ. ಒಂದು ವೇಳೆ 100 ಮೀಟರ್‍ಗೂ ಅಧಿಕ ಸರದಿ ನಿಂತರೆ ಈ ಹಳದಿ ಪಟ್ಟಿ ಒಳಗಿನ ವಾಹನಗಳು ಟೋಲ್ ಪಾವತಿಸದೇ ಉಚಿತವಾಗಿ ಸಂಚರಿಸಬಹುದಾಗಿದೆ. ಇದು ಫಾಸ್ಟ್ಯಾಗ್ ಅಳವಡಿಸಿಕೊಂಡ ವಾಹನಗಳಿಗೆ ಮಾತ್ರ ಅನ್ವಯವಾಗಲಿದೆ. ಫಾಸ್ಟ್ಯಾಗ್ ಅಳವಡಿಸದ ವಾಹನಗಳಿಗೆ ವೇಟಿಂಗ್ ಪಿರಿಯಡ್ ನಿಯಮ ಅನ್ವಯವಾಗುವುದಿಲ್ಲ ಎಂದು ಎನ್‍ಎಚ್‍ಎಐ ಸ್ಪಷ್ಟಪಡಿಸಿದೆ.

    2021ರ ಫೆಬ್ರವರಿ ಮಧ್ಯದಿಂದೀಚೆಗೆ ಟೋಲ್ ಪ್ಲಾಜಾಗಳನ್ನು ಎನ್‍ಎಚ್‍ಎಐ ಶೇ.100ರಷ್ಟು ನಗದುರಹಿತ ವಹಿವಾಟನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಎನ್‍ಎಚ್‍ಎಐ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿರುವ ಪ್ರಮಾಣ ಶೇ.96ರಷ್ಟು ಮತ್ತು ಹಲವು ಪ್ಲಾಜಾಗಳಲ್ಲಿ ಶೇ.99ರಷ್ಟಿದೆ. ದೇಶದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ (ಇಟಿಸಿ) ಪ್ರಮಾಣವನ್ನು ಗಮನದಲ್ಲಿರಿಸಿಕೊಂಡು ಹೊಸ ವಿನ್ಯಾಸ ಟೋಲ್ ಫ್ಲಾಜಾಗಳನ್ನು ಹೊಂದಲು ಹಾಗೂ ಮುಂದಿನ ಹತ್ತು ವರ್ಷಗಳ ವಾಹನಗಳ ಅಂದಾಜು ಮಾಡಿ ಟೋಲ್ ಪ್ಲಾಜಾಗಳನ್ನು ನಿರ್ಮಿಸಿ ಪರಿಣಾಮಕಾರಿ ಟೋಲ್ ಸಂಗ್ರಹ ವ್ಯವಸ್ಥೆಗೆ ಒತ್ತು ನೀಡಲಾಗಿದೆ.

  • ಅನಾವಶ್ಯಕ ಓಡಾಟ, ಕಡ್ಡಾಯವಾಗಿ ವಾಹನ ಪರಿಶೀಲಿಸಿ- ಕಮಲ್ ಪಂಥ್ ಸೂಚನೆ

    ಅನಾವಶ್ಯಕ ಓಡಾಟ, ಕಡ್ಡಾಯವಾಗಿ ವಾಹನ ಪರಿಶೀಲಿಸಿ- ಕಮಲ್ ಪಂಥ್ ಸೂಚನೆ

    ಬೆಂಗಳೂರು: ಲಾಕ್‍ಡೌನ್ ವೇಳೆಯೂ ಅನಾವಶ್ಯಕ ವಾಹನಗಳ ಓಡಾಡ ಹೆಚ್ಚಳವಾಗಿದ್ದು, ಕಡ್ಡಾಯವಾಗಿ ಎಲ್ಲ ವಾಹನಗಳ ಪರಿಶೀಲನೆ ನಡೆಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.

    ಈ ಸಂಬಂಧ ಹಿರಿಯ ಅಧಿಕಾರಿಗಳ ಜೊತೆಗೆ ನಗರದ ಪೊಲೀಸ್ ಆಯುಕ್ತ ಕಮಲ್ ಪಂಥ್ ಸಭೆ ನಡೆಸಿದ್ದು, ವಾಹನಗಳ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಬೆಳಗ್ಗೆ 10 ಗಂಟೆ ನಂತರವೂ ವಾಹನಗಳ ಓಡಾಡ ಹೆಚ್ಚಾಗುತ್ತಿದೆ. ಪೊಲೀಸರು ಪರಿಶೀಲನೆ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಹೀಗಾಗಿ ಕಡ್ಡಾಯವಾಗಿ ವಾಹನಗಳನ್ನು ತಡೆದು ಪರಿಶೀಲನೆ ಮಾಡಬೇಕು. ಅನಾವಶ್ಯಕವಾಗಿ ರಸ್ತೆಗಿಳಿದರೆ ವಾಹನಗಳನ್ನು ಸೀಜ್ ಮಾಡಬೇಕು ಎಂದು ಆದೇಶಿಸಿದ್ದಾರೆ.

    ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು, ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮೌಖಿಕವಾಗಿ ಸೂಚಿಸಿದ್ದಾರೆ. ಲಾಕ್‍ಡೌನ್ ಜಾರಿಯಲ್ಲಿದ್ದರೂ ಕಳೆದ ಕೆಲ ದಿನಗಳಿಂದ ಬೆಳಗ್ಗೆ 10 ಗಂಟೆ ನಂತರವೂ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ಪೊಲೀಸರು ತಪಾಸಣೆ ನಡೆಸುತ್ತಿಲ್ಲ ಎಂಬ ದೂರು ಸಹ ಕೇಳಿ ಬಂದಿವೆ. ಹೀಗಾಗಿ ಕಮಲ್ ಪಂತ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

  • ಕೋವಿಡ್ ನಿಯಮ ಉಲ್ಲಂಘನೆ- 14 ವಾಹನಗಳ ವಿರುದ್ಧ ಕೇಸ್, 4 ವಾಹನಗಳು ವಶಕ್ಕೆ

    ಕೋವಿಡ್ ನಿಯಮ ಉಲ್ಲಂಘನೆ- 14 ವಾಹನಗಳ ವಿರುದ್ಧ ಕೇಸ್, 4 ವಾಹನಗಳು ವಶಕ್ಕೆ

    ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ಶ್ರಮಪಡುತ್ತಿದೆ. ಇಂದು ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಸಮರ ಸಾರಿದ್ದಾರೆ.

    ಸರ್ಕಾರದ ಕೋವಿಡ್-19ರ ಮಾರ್ಗಸೂಚಿ ಅನ್ವಯ ಬಸ್, ಮೋಟಾರು ಕ್ಯಾಬ್, ಟೆಂಪೋ ಟ್ರಾವೆಲರ್ ವಾಹನಗಳಿಗೆ ಅನುಮತಿ ನೀಡಿರುವ ಆಸನಕ್ಕಿಂತ ಹೆಚ್ವಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವಾಹನಗಳಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ವಾಹನಗಳು ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಬೇಕಿದ್ದು, ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಶೇ.50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ಕೆಎಸ್‍ಆರ್‍ಟಿಸಿಯ 2, ಬೇಂದ್ರೆ ನಗರ ಸಾರಿಗೆಯ 3, ಬಿಆರ್‍ಟಿಎಸ್ ಕಂಪನಿಯ 2, ಪಿಎಸ್‍ಎ 1 ಬಸ್ ಹಾಗೂ 3 ಮೋಟಾರು ಕ್ಯಾಬ್‍ಗಳು ಹಾಗೂ 3 ಮ್ಯಾಕ್ಸಿಕ್ಯಾಬ್ ಸೇರಿ ಒಟ್ಟು 14 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಒಂದು ಬೇಂದ್ರೆ ನಗರ ಸಾರಿಗೆಯ ಬಸ್ ಹಾಗೂ 3 ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 4 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.