ಬೆಂಗಳೂರು: ಡೀಸೆಲ್ (Diesel) ಬೆಲೆ ಹೆಚ್ಚಳದ (Price Hike) ಹೊರೆಯನ್ನು ಪೋಷಕರ ಹೆಗಲಿಗೆ ಹಾಕಲು ಖಾಸಗಿ ಶಾಲಾ ವಾಹನ ಸಂಘ (Private School Vehicle Association) ನಿರ್ಧಾರ ಕೈಗೊಂಡಿದೆ.
ಮಾರ್ಚ್ 31 ವರೆಗೆ ಡೀಸೆಲ್ ಮಾರಾಟ ತೆರಿಗೆ ದರ 18.44% ಇತ್ತು. ರಾಜ್ಯ ಸರ್ಕಾರ ಏಪ್ರಿಲ್ 1 ರಿಂದ ಮಾರಾಟ ತೆರಿಗೆ ದರವನ್ನು 21.17% ಕ್ಕೆ ಹೆಚ್ಚಳ ಮಾಡಿತ್ತು. ಈ ಮೂಲಕ ಪ್ರತಿ ಲೀಟರ್ ಡೀಸೆಲ್ ದರವು 2 ರೂಪಾಯಿ ಏರಿಕೆಯಾಗಿದೆ.
ಬೆಂಗಳೂರು: ದಿನ ಕಳೆದಂತೆ ಒಂದೊಂದು ವಸ್ತುವಿನ ಬೆಲೆ ಏರಿಕೆಯಾಗುತ್ತಿರುತ್ತದೆ. ಇದೀಗ ವಾಹನಗಳ ಸರದಿ. ಏಪ್ರಿಲ್ ತಿಂಗಳಿಂದ ಹೊಸ ವಾಹನಗಳ (Vehicles) ಬೆಲೆ ಪ್ರತಿ ವಾಹನದ ಮೇಲೆ ಶೇ.4ರಷ್ಟು ದರ ಏರಿಕೆಯಾಗಲಿದ್ದು, ತಯಾರಿಕಾ ಕಂಪನಿಗಳು ಹೊಸ ವಾಹನಗಳ ದರ ಏರಿಕೆ (Price Hike) ಬಗ್ಗೆ ಮಾಹಿತಿ ನೀಡಿವೆ.
ಉಕ್ಕಿನ ದರ ಹೆಚ್ಚಳ, ವಿದೇಶಿ ಅಮದು, ತಯಾರಿಕಾ ವೆಚ್ಚ ಹೆಚ್ಚಳವೇ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಇದೇ ಏಪ್ರಿಲ್‌ನಿಂದಲೇ ಕಾರು, ಬೈಕ್, ಆಟೋ ದರ 4%ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎಲ್ಲಾ ವಾಹನ ತಯಾರಿಕಾ ಕಂಪನಿಗಳು ದರ ಏರಿಕೆ ಮಾಡಲು ತೀರ್ಮಾನ ಮಾಡಿದೆ. 2 ವೀಲರ್ ಮೇಲೆ 2% ನಷ್ಟು, ಕಾರಿನ ಮೇಲೆ 4%ರಷ್ಟು ದರ ಏರಿಕೆಯಾಗಲಿದೆ. ಒಂದು ಲಕ್ಷ ರೂ. 2 ವೀಲರ್ ಖರೀದಿ ಮಾಡಿದರೆ 2 ರಿಂದ 3 ಸಾವಿರ, ಎರಡು ಲಕ್ಷ ರೂ. ಮೌಲ್ಯದ ವಾಹನ ಖರೀದಿ ಮಾಡಿದರೆ 5 ರಿಂದ 6 ಸಾವಿರ ಹೀಗೆ ವಾಹನಗಳ ಬೆಲೆ ಹೆಚ್ಚಾದಂತೆ ದರವು ಏರಿಕೆ ಆಗಲಿದೆ. ಇದನ್ನೂ ಓದಿ: ನಾಗ್ಪುರ ಕೋಮು ಗಲಭೆ – ಮಾಸ್ಟರ್‌ಮೈಂಡ್ ಮನೆ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗ!
ಇನ್ನೂ ಐದು ಲಕ್ಷ ರೂ. ಇರುವ ಎಕ್ಸ್ ಷೋ ರೂಂ ಕಾರಿನ ಮೇಲೆ 15 ರಿಂದ 20 ಸಾವಿರ ರೂ.ವರೆಗೆ ದರ ಏರಿಕೆ ಆಗಲಿದೆ. 10 ಲಕ್ಷ ರೂ. ಮೌಲ್ಯದ ಕಾರು ಖರೀದಿ ಮಾಡಿದರೆ 30 ರಿಂದ 40 ಸಾವಿರ ರೂ.ವರೆಗೆ ಏರಿಕೆ ಆಗಲಿದೆ. ಇದು ಕೇವಲ ಕೆಲ ಕಾರುಗಳಿಗೆ ಮಾತ್ರ ಸೀಮಿತ ಅಲ್ಲ. ಸಾಮಾನ್ಯ ಮಧ್ಯಮ ವರ್ಗ ಬಳಸುವ ಕಾರಿನಿಂದ ಹಿಡಿದು ಕೋಟಿ ಬೆಲೆಯ ಕಾರಿನವರೆಗೂ ಅನುಗುಣವಾಗಿ ದರ ಏರಿಕೆಯಾಗಲಿದೆ. ಇದು ಹೆಚ್ಚಾಗಿ ಕಾರು, ಆಟೋ ನಂಬಿ ಜೀವನ ಸಾಗಿಸುವ ಚಾಲಕರ ಮೇಲೆ ಹೆಚ್ಚು ಹೊರೆಯಾಗುವ ಸಾಧ್ಯತೆ ಇದೆ. ಜೊತೆಗೆ ಕನಸಿನ ಕಾರು ಖರೀದಿ ಮಾಡಬೇಕು ಎಂಬ ಮಧ್ಯಮ ವರ್ಗದ ಜನರ ಕನಸು ಕೂಡ ಕೊಂಚ ದುಬಾರಿಯಾಗಲಿದೆ. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಹೇಳಿಕೆ ಡಿಕೆಶಿ ಬಂಡವಾಳ ಬಯಲು ಮಾಡಿದೆ: ಬಿವೈವಿ
ನವದೆಹಲಿ: ಟೋಲ್ (Toll) ಇರುವ ಹೆದ್ದಾರಿಯಲ್ಲಿ ನೀವು ವಾಹನ ಚಾಲನೆ ಮಾಡುತ್ತೀರಾ? ಹಾಗಾದ್ರೆ ಇನ್ನು ಮುಂದೆ ಪ್ರಯಾಣ ನಡೆಸುವ ಒಂದು ಗಂಟೆಯ ಮೊದಲು ಫಾಸ್ಟ್‌ಟ್ಯಾಗ್ (FASTag) ಸಕ್ರಿಯವಾಗಿದೆಯೋ ಇಲ್ವೋ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ.
ಹೌದು. ಕಡಿಮೆ ಬ್ಯಾಲೆನ್ಸ್, ವಿಳಂಬ ಪಾವತಿ, ಕೆವೈಸಿ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಅಥವಾ ಕಪ್ಟುಪಟ್ಟಿಗೆ (Black List) ಸೇರ್ಪಡೆಯಾದ ಫಾಸ್ಟ್‌ಟ್ಯಾಗ್‌ಗಳಿಗೆ ದಂಡ ವಿಧಿಸುವ ಈ ಹೊಸ ನಿಯಮ ಇಂದಿನಿಂದ(ಫೆ.17) ಜಾರಿಗೆ ಬಂದಿದೆ.
ನಿಯಮ ಏನು ಬದಲಾವಣೆ?
1. ವಾಹನ ಟೋಲ್ ದಾಟುವ 60 ನಿಮಿಷ ಮೊದಲು ಮತ್ತು ಟೋಲ್ ದಾಟಿದ ಕನಿಷ್ಠ 10 ನಿಮಿಷ ಫಾಸ್ಟ್‌ಟ್ಯಾಗ್ ಸಕ್ರಿಯ ಆಗಿರುವಂತೆ ನೋಡಿಕೊಳ್ಳಬೇಕು.
2. ಕಡಿಮೆ ಬ್ಯಾಲೆನ್ಸ್ ಅಥವಾ ತಾಂತ್ರಿಕ ಸಮಸ್ಯೆಗಳಿಂದಾಗಿ ಕಪ್ಪುಪಟ್ಟಿಗೆ ಸೇರಿಸಿದ್ದರೆ ಬಳಕೆದಾರರು ತಮ್ಮ ಖಾತೆಯನ್ನು ರೀಚಾರ್ಜ್ ಮಾಡಲು 70 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
3. ಟೋಲ್‌ನಲ್ಲೇ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ ಅವರನ್ನೇ ಹೊಣೆ ಮಾಡಲಾಗುತ್ತದೆ.
ಪಾವತಿಗಳನ್ನು ಯಾವಾಗ ತಿರಸ್ಕರಿಸಲಾಗುತ್ತದೆ?
ವಾಹನ ಟೋಲ್ ದಾಟುವ 60 ನಿಮಿಷ ಮೊದಲು ಮತ್ತು ಟೋಲ್ ದಾಟಿದ ಕನಿಷ್ಠ 10 ನಿಮಿಷ ಫಾಸ್ಟ್‌ಟ್ಯಾಗ್ ಸಕ್ರಿಯ ಆಗಿರುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಆ ಫಾಸ್ಟ್‌ಟ್ಯಾಗ್ ವಹಿವಾಟು ನಿರಾಕರಿಸಲಾಗುತ್ತದೆ. ಸಕ್ರಿಯ ಆಗಿರದೇ ಇದ್ದರೆ ಟೋಲ್ ಸಿಸ್ಟಮ್‌ನಲ್ಲಿ ‘ಎರರ್ ಕೋಡ್ 176’ ಎಂದು ತೋರಿಸಲಾಗುತ್ತದೆ ಮತ್ತು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಕಪ್ಪುಪಟ್ಟಿಗೆ ಸೇರಿಸಿದ ಫಾಸ್ಟ್ಯಾಗ್‌ನೊಂದಿಗೆ ಟೋಲ್ ಪ್ರವೇಶಿಸಿದರೆ ವಾಹನ ಮಾಲೀಕರಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ.
FASTag ಕಪ್ಪುಪಟ್ಟಿಗೆ ಹೇಗೆ ಹೋಗುತ್ತೆ?
– ಸಾಕಷ್ಟು ಬ್ಯಾಲೆನ್ಸ್ ಇಲ್ಲದಿರುವುದು.
– ಟೋಲ್ ತೆರಿಗೆ ಪಾವತಿಸದಿರುವುದು.
– ಪಾವತಿ ವೈಫಲ್ಯಗಳು.
– ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ವಿವರಗಳನ್ನು ಸರಿಯಾಗಿ ನವೀಕರಣ ಮಾಡದೇ ಇರುವುದು.
– ವಾಹನದ ಚಾಸಿಸ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯಲ್ಲಿನ ವ್ಯತ್ಯಾಸ.
ಹಣ ಇಲ್ಲದೇ ಇದ್ದರೂ ಪ್ರವೇಶ:
ಒಂದು ವೇಳೆ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಅಗತ್ಯ ಹಣ ಇಲ್ಲದೇ ಇದ್ದರೂ ಟೋಲ್‌ಗೇಟ್‌ನಲ್ಲಿ ಪ್ರವೇಶ ನೀಡಲಾಗುತ್ತದೆ. ಟೋಲ್ ಪ್ರವೇಶವಾದ ಕೂಡಲೇ ‘ನಿಮ್ಮ ಖಾತೆಯಲ್ಲಿ ಅಗತ್ಯ ಹಣ ಇಲ್ಲ, ಅದನ್ನು ಕೂಡಲೇ ಭರ್ತಿ ಮಾಡಿ’ ಎಂಬ ಮೆಸೇಜ್ ಮೊಬೈಲ್‌ಗೆ ಬರುತ್ತದೆ. ಮಸೇಜ್ ಬಂದ ಬಂದ 10 ನಿಮಿಷದ ಒಳಗಡೆ ಅಗತ್ಯ ಹಣ ಹಾಕಿಕೊಂಡರೆ ಯಾವುದೇ ದಂಡ ಇರುವುದಿಲ್ಲ. ಇಲ್ಲದೇ ಇದ್ದಲ್ಲಿ ಟೋಲ್ ಶುಲ್ಕದ ಎರಡು ಪಟ್ಟು ಹಣ ಕಟ್ಟಬೇಕಾಗುತ್ತದೆ. ನೆಗೆಟಿವ್ ಬ್ಯಾಲೆನ್ಸ್ ಇದ್ದಲ್ಲಿ ಟೋಲ್ ಶುಲ್ಕವನ್ನು ಭದ್ರತಾ ಠೇವಣಿಯಿಂದ ಕಡಿತಗೊಳಿಸಲಾಗುತ್ತದೆ.
15 ದಿನದ ಬಳಿಕ ದೂರು:
ಹೆಚ್ಚುವರಿ ಹಣ ಕಡಿತ ಅಥವಾ ತಪ್ಪು ಶುಲ್ಕಕ್ಕೆ ಸಂಬಂಧಿಸಿ ಸವಾರರು 15 ದಿನಗಳ ಕೂಲಿಂಗ್ ಅವಧಿಯ ನಂತರ ಬ್ಯಾಂಕ್‌ಗಳಲ್ಲಿ ದೂರು ಸಲ್ಲಿಸಬಹುದಾಗಿದೆ.
FASTag ಬಳಕೆದಾರರಿಗೆ ಪ್ರಮುಖ ಸಲಹೆಗಳು
– FASTag ವ್ಯಾಲೆಟ್‌ನಲ್ಲಿ ಸಾಕಷ್ಟು ಹಣ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಿ, ಕನಿಷ್ಠ 100 ರೂ. ಬ್ಯಾಲೆನ್ಸ್ ಅನ್ನು ಖಚಿತಪಡಿಸಿಕೊಳ್ಳಿ.
– ಬ್ಯಾಂಕಿನಿಂದ ಬರುವ SMS ಎಚ್ಚರಿಕೆಗಳು ಮತ್ತು ಮೆಸೇಜ್‌ಗಳನ್ನು ಗಮನಿಸಿ.
– MyFASTag ಅಪ್ಲಿಕೇಶನ್ ಮೂಲಕ FASTag ಬ್ಯಾಲೆನ್ಸ್ ಮತ್ತು ಸ್ಥಿತಿಯನ್ನು ಪರಿಶೀಲಿಸಿ.
– ವಾಹನದ ವಿಂಡ್‌ಶೀಲ್ಡ್‌ನಲ್ಲಿ FASTag ಸ್ಟಿಕ್ಕರ್ ಅನ್ನು ಸರಿಯಾಗಿ ಅಂಟಿಸಿ.
– ಸಮಸ್ಯೆಗಳನ್ನು ತಡೆಗಟ್ಟಲು ಪ್ರತಿ ವಾಹನಕ್ಕೆ ಒಂದೇ FASTag ಮಾತ್ರ ಬಳಸಿ.
ಬೆಂಗಳೂರು: ಜೆಡಿಎಸ್ ಕಚೇರಿ ಪಕ್ಕದ ಮೈದಾನದಲ್ಲಿ ಅಗ್ನಿ ಅವಘಡ ಸಂಭವಿಸಿ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿಯಾಗಿದೆ.
ಜಪ್ತಿ ಮಾಡಿದ್ದ ವಾಹನಗಳನ್ನು ಪೊಲೀಸರು ಶೇಷಾದ್ರಿಪುರಂ ಬಳಿಯ ಜಕ್ಕರಾಯನ ಕೆರೆ ಗ್ರೌಂಡ್‌ನಲ್ಲಿ ಪಾರ್ಕ್ ಮಾಡಿದ್ದರು. ಈ ಜಾಗಕ್ಕೆ ಇಂದು ಬೆಳಗ್ಗೆ ಬೆಂಕಿ ಬಿದ್ದಿದೆ.
ಈಗಾಗಲೇ ಐದು ಕಾರು, ಐದು ಆಟೋ, 50 ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಹೋಗಿವೆ. ಮತ್ತಷ್ಟು ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ನಂದಿಸುವ ಕೆಲಸ ಮಾಡುತ್ತಿದೆ.
ಮೈದಾನದಲ್ಲಿ ಹುಲ್ಲು, ಗಿಡ ಬೆಳೆದುಕೊಂಡಿತ್ತು. ಇಂದು ಯಾರೋ ಸಿಗರೇಟ್‌ಗಾಗಿ ಬೆಂಕಿ ಕಡ್ಡಿ ಗೀರಿ ಎಸೆದು ಹೋಗಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಕಾರವಾರ: ಮೀನು ತುಂಬಿಕೊಂಡಿದ್ದ ಬುಲೆರೋ ವಾಹನ ಕಾರ್ಮಿಕನ ಮೇಲೆ ಹಾದು ಹೋಗಿ ಸ್ಥಳದಲ್ಲೇ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ (Karwar) ಬೈತಕೋಲ್‌ನಲ್ಲಿ (Baithkol) ನಡೆದಿದೆ.
ಮೃತ ಕಾರ್ಮಿಕನನ್ನು ಹಾವೇರಿ (Haveri) ಮೂಲದ ಹನುಮಂತ್ ವಡ್ಡರ್ (27) ಎಂದು ಗುರುತಿಸಲಾಗಿದ್ದು, ಮುಂದಿನ ತಿಂಗಳು ಕಾರ್ಮಿಕನ (Labour) ಮದುವೆ ಕೂಡ ನಿಶ್ಚಯವಾಗಿತ್ತು. ಕಾರವಾರದ ಬೈತಕೋಲ್‌ನಲ್ಲಿ ಮೀನುಗಾರಿಕಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಬುಧವಾರ ಕೊಪ್ಪಳದ ಐದು ಜನ ಸ್ನೇಹಿತರೊಂದಿಗೆ ಕೆಲಸ ಮುಗಿಸಿ ಬಂದರಿನಲ್ಲಿ ಮಲಗಿದ್ದ.ಇದನ್ನೂ ಓದಿ: ನಾನು ಬಳ್ಳಾರಿ ಹೋಗೋವಾಗ ಪಾದಯಾತ್ರೆ ಮಾಡಿ ಸಿಎಂ ಆದವರು ಮನ:ಶಾಂತಿ ಕಳೆದುಕೊಂಡಿದ್ದಾರೆ: ಜನಾರ್ದನ ರೆಡ್ಡಿ
ಗುರುವಾರ ಮುಂಜಾನೆ ಮೀನು ತುಂಬಿಕೊಂಡಿದ್ದ ಬುಲೆರೋ ವಾಹನ ಹೊರಡುವ ಸಮಯದಲ್ಲಿ ಚಾಲಕ ಈ ಕಾರ್ಮಿಕನನ್ನು ಮಲಗಿರುವುದನ್ನು ನೋಡದೇ ವಾಹನ ಚಲಾಯಿಸಿದ್ದು, ಈತನ ತಲೆಯ ಮೇಲೆ ಹರಿದು ಸ್ಥಳದಲ್ಲೇ ಮೃತಟ್ಟಿದ್ದಾನೆ.
ಬೆಂಗಳೂರು: ಇಷ್ಟು ದಿನ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ (HSRP Number Plate) ಸರ್ಕಾರ ಮತ್ತು ಕೋರ್ಟ್ ಗಡುವು ನೀಡಿತ್ತು. ಪದೇ ಪದೇ ಗಡುವು ವಿಸ್ತರಣೆಯಾಗುತ್ತಾ ಬಂದಿತ್ತು. ಇದೀಗ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿರುವ ಡೆಡ್ ಲೈನ್‌ಗೆ ಕೇವಲ ಒಂದು ವಾರ ಮಾತ್ರ ಬಾಕಿ ಇದೆ.
ಸೆಪ್ಟೆಂಬರ್ 15ಕ್ಕೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊಟ್ಟಿರುವ ಡೆಡ್‌ಲೈನ್ ಮುಗಿಯಲಿದೆ. ರಾಜ್ಯದಲ್ಲಿ ಒಟ್ಟಾರೆ 2 ಕೋಟಿಯಷ್ಟು ವಾಹನಗಳಿದ್ದು, ಇದರಲ್ಲಿ ಇಲ್ಲಿಯವರೆಗೆ 51 ಲಕ್ಷ ವಾಹನಗಳು ಮಾತ್ರ ಹೆಚ್‌ಎಸ್‌ಆರ್‌ಪಿ ನಂಬರ್ ಹಾಕಿಸಿದ್ದಾರೆ. ಉಳಿದ 1.49 ಕೋಟಿ ವಾಹನಗಳು ಇನ್ನೂ ಹೆಚ್‌ಎಸ್‌ಆರ್‌ಪಿ ಹಾಕಿಸಿಲ್ಲ. ಸೆ.16ರಿಂದಲೇ ನಮ್ಮ ಇಲಾಖೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ಸ್ಪೆಷಲ್ ಡ್ರೈವ್ ಮಾಡಿ 500 ರೂ. ದಂಡ ಹಾಕುತ್ತೇವೆ. ಮೊದಲ ಸಲ 500 ರೂ. ದಂಡ ವಿಧಿಸಿದರೇ ಎರಡನೇ ಸಲಕ್ಕೆ 1,000 ರೂ. ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ (Department of Transport) ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್‌ಟಿ ದರ ಕಡಿತ
ಕೇಂದ್ರ ಸರ್ಕಾರ ಇಡೀ ದೇಶದಲ್ಲೇ ಏಕ ಮಾದರಿಯ ನಂಬರ್ ಪ್ಲೇಟ್ ಇರಬೇಕೆಂಬ ದೃಷ್ಟಿಯಿಂದ ಮತ್ತು ಅಪರಾಧ ಕೃತ್ಯಗಳ ಬಗ್ಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ನಿಂದ ಮಾಹಿತಿ ಸಿಗಲಿದೆ ಎಂಬ ಉದ್ದೇಶದಿಂದ ಹೆಚ್‌ಎಸ್‌ಆರ್‌ಪಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದನ್ನು ಜನ ಇನ್ನೂ ತಮ್ಮ ವಾಹನಗಳಿಗೆ ಹಾಕಿಸಿಕೊಳ್ಳದೇ ಸುಮ್ಮನೇ ಇದ್ದು ಕೊನೇ ಗಳಿಗೆಯಲ್ಲಿ ಆನ್‌ಲೈನ್‌ನಲ್ಲಿ ಬುಕ್ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಒಂದು ವಾರ ಕಾಲಾವಕಾಶ ಇದೆ.ಬಳಿಕ ನಾವು ದಂಡ ಹಾಕುತ್ತೇವೆ. ಜೊತೆಗೆ ಟ್ರಾಫಿಕ್ ಪೊಲೀಸರೂ (Traffic Police) ಸಹ ಇದಕ್ಕೆ ದಂಡ ಹಾಕುತ್ತಾರೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: 3 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ
– ಆದ್ಯತೆ ಮೇರೆಗೆ ಮೆಜೆಸ್ಟಿಕ್ ಸುತ್ತಮುತ್ತ ಟೋಯಿಂಗ್‌ಗೆ ಅನುಮತಿ
ಬೆಂಗಳೂರು: ಕೋವಿಡ್ ಕಾಲದಲ್ಲಿ ನಿಂತಿದ್ದ ಟೋಯಿಂಗ್ (Towing) ಇದೀಗ ಬೆಂಗಳೂರಲ್ಲಿ (Bengaluru) ಪುನರಾರಂಭವಾಗಿದೆ. ಟೋಯಿಂಗ್ ಸಿಬ್ಬಂದಿಗಳ ಮೇಲೆ ಸಾಲು ಸಾಲು ಆರೋಪಗಳು ಬಂದ ಹಿನ್ನೆಲೆ ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ಇದೀಗ ಮೆಜೆಸ್ಟಿಕ್ (Mejestic) ಏರಿಯಾದಲ್ಲಿ ಮತ್ತೆ ಟೋಯಿಂಗ್ ಕಾರ್ಯಾರಂಭವಾಗಿದೆ.
ಅದು ಕೋವಿಡ್ ಕಾಲ. ಬೆಂಗಳೂರಲ್ಲಿ ಟೋಯಿಂಗ್ ಸಿಬ್ಬಂದಿ ವಾಹನ ಸವಾರರ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ನೋ ಪಾರ್ಕಿಂಗ್‌ನಲ್ಲಿರುವ ವೆಹಿಕಲ್‌ಗಳನ್ನು ಟೋ ಮಾಡುವ ಮೊದಲು ಅನೌನ್ಸ್ ಮಾಡುತ್ತಿಲ್ಲ ಎಂದು ಸಾಕಷ್ಟು ದೂರುಗಳು ಬಂದಿದ್ದವು. ದೂರುಗಳು ಬಂದ ಹಿನ್ನೆಲೆ ಟೋಯಿಂಗ್ ಸಂಪೂರ್ಣವಾಗಿ ಸ್ಟಾಪ್ ಮಾಡಿಸಲಾಗಿತ್ತು. ಇದೀಗ ಮತ್ತೆ ಮೂರ್ನಾಲ್ಕು ವರ್ಷಗಳ ಬಳಿಕ ಟೋಯಿಂಗ್ ಆರಂಭವಾಗಿದೆ. ಇದನ್ನೂ ಓದಿ: ಮೆಡಿಕಲ್ ಸೀಟ್ ಸಿಗದೇ ಮನನೊಂದು ಯುವತಿ ಆತ್ಮಹತ್ಯೆ
ಆದ್ಯತೆ ಮೇರೆಗೆ ಮೆಜೆಸ್ಟಿಕ್‌ನಲ್ಲಿ ಎರಡು ಟೋಯಿಂಗ್ ವಾಹನಗಳು ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಾಗಿದೆ. ಮೆಜೆಸ್ಟಿಕ್‌ನ ಜನಸಂದಣಿ ಪ್ರದೇಶದಲ್ಲಿ ನೋ ಪಾರ್ಕಿಂಗ್‌ನಲ್ಲಿರೋ ವೆಹಿಕಲ್‌ಗಳನ್ನು ಉಪ್ಪಾರಪೇಟೆ ಸಂಚಾರ ಪೊಲೀಸರು ಟೋ ಮಾಡುತ್ತಿದ್ದಾರೆ. ಟೋಯಿಂಗ್ ಮಾಡುವ ಮುನ್ನ 5 ನಿಮಿಷಗಳ ಕಾಲ ಅನೌನ್ಸ್ ಮಾಡುತ್ತಿದ್ದು, ಐದು ನಿಮಿಷಗಳ ಒಳಗಾಗಿ ವಾಹನ ತೆಗೆಯದಿದ್ದರೆ ಟೋಯಿಂಗ್ ಮಾಡಲಾಗುತ್ತಿದೆ. ಬಿಬಿಎಂಪಿ ವೆಹಿಕಲ್‌ಗಳನ್ನು ನೀಡಿರೋ ಹಿನ್ನೆಲೆ ಟೋಯಿಂಗ್ ಚಾರ್ಜ್ ಹಾಕದೆ ಕೇವಲ ನೋ ಪಾರ್ಕಿಂಗ್ ಫೈನ್ 1,000 ರೂ. ಹಾಕಲಾಗುತ್ತಿದೆ. ಇದನ್ನೂ ಓದಿ: ಜಲ ಜೀವನ್ ಮಿಷನ್ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡರ್ ಹಣ ಮುಟ್ಟುಗೋಲು
ಹಂತ ಹಂತವಾಗಿ ಬೆಂಗಳೂರಿನಾದ್ಯಂತ ಟೋಯಿಂಗ್ ವೆಹಿಕಲ್‌ಗಳು ತಮ್ಮ ಕೆಲಸ ಆರಂಭಿಸಬಹುದು. ಅನೌನ್ಸ್ ಮೆಂಟ್ ರೂಲ್ಸ್ ಏನಿದೆಯೋ ಅದನ್ನು ಪೊಲೀಸರು ಫಾಲೋ ಮಾಡಬೇಕು. ಇನ್ನು ನೋ ಪಾರ್ಕಿಂಗ್‌ನಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡುವ ಸವಾರರು 1,000 ರೂ ಹೆಚ್ಚುವರಿಯಾಗಿ ಇಟ್ಟುಕೊಂಡಿರಿ. ಇಲ್ಲ ಪಾರ್ಕಿಂಗ್ ಜಾಗದಲ್ಲೇ ವೆಹಿಕಲ್ ಪಾರ್ಕಿಂಗ್ ಮಾಡಿ. ಇದನ್ನೂ ಓದಿ:
ಇತ್ತೀಚಿನ ದಿನಗಳಲ್ಲಿ ಯಾವುದೇ ವಾಹನವನ್ನು(Vehicle) ಖರೀದಿಸುವಾಗ, ಹೆಚ್ಚಿನ ಜನರು ಸುರಕ್ಷತೆಯ ವೈಶಿಷ್ಟ್ಯಗಳನ್ನು ನೋಡುವುದಕ್ಕಿಂತ, ಒಳ್ಳೆ ಲುಕ್ ಇರುವ ವಾಹನವನ್ನು ಖರೀದಿಸುತ್ತಾರೆ. ತಮ್ಮ ಸುರಕ್ಷತೆಗಿಂತಲೂ ಇನ್ನೊಬ್ಬರ ಮುಂದೆ ಶೋ ಮಾಡುವ ಸಲುವಾಗಿ ಔಟ್‌ಲುಕ್ ಚೆನ್ನಾಗಿರುವ ವಾಹನಗಳ ಖರೀದಿಗೆ ಆದ್ಯತೆಯನ್ನು ನೀಡುತ್ತಾರೆ.
ಯಾವುದೇ ವಾಹನವಾಗಿರಲಿ ಅದರಲ್ಲಿ ಸೇಫ್ಟಿ ಫೀಚರ್‌ಗಳು ಇದ್ದಷ್ಟು ಒಳ್ಳೆಯದೇ. ಜಗತ್ತಿನಲ್ಲಿ ಕಾರುಗಳನ್ನು (Car) ತಯಾರಿಸುವ ಕಂಪನಿಗಳು ಬಹಳಷ್ಟು ಇವೆ. ಅದರಲ್ಲಿ ಒಂದಷ್ಟು ಕಂಪನಿಗಳು ಬಿಲ್ಡ್ ಕ್ವಾಲಿಟಿಗೆ ಆದ್ಯತೆ ನೀಡಿ ಕಾರನ್ನು ನಿರ್ಮಾಣ ಮಾಡಿದರೆ, ಇನ್ನೊಂದಷ್ಟು ಕಂಪನಿಗಳು ಲುಕ್‌ಗೆ ಆದ್ಯತೆ ನೀಡುತ್ತವೆ. ಎರಡೂ ರೀತಿಯ ವಾಹನಗಳಿಗೆ ಗ್ರಾಹಕರು (Consumers) ಇರೋದೂ ಹೌದು. ಇನ್ನೂ ಕೆಲವು ಕಂಪನಿಗಳು, ಬಿಲ್ಡ್ ಕ್ವಾಲಿಟಿಯ ಜೊತೆಗೆ ಎರ್ ಬ್ಯಾಗ್, ಸ್ಟೆಬಿಲಿಟಿಯಂತಹ ಸೆಫ್ಟಿ ಫೀಚರ್ಸ್ ಗಳನ್ನು ಕೂಡ ಅಳವಡಿಸಿರುತ್ತಾರೆ. ಇಂತಹ ಸೇಫ್ಟಿ ಫೀಚರ್ಸ್ ಗಳು ಕಾರಿಗೆ ತುಂಬಾ ಅಗತ್ಯವಾದದ್ದು. ಇದನ್ನೂ ಓದಿ: ಆಸ್ತಿ, ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ: ದರ್ಶನ್‌ಗೆ ಜೈಲೂಟ ಫಿಕ್ಸ್ – ಕೋರ್ಟ್ ಹೇಳಿದ್ದೇನು?
ಗಾಡಿಯ ಬಿಲ್ಡ್ ಕ್ವಾಲಿಟಿ ಚೆನ್ನಾಗಿರುವುದರಿಂದ ಎಷ್ಟೋ ಪ್ರಾಣ ಉಳಿದದ್ದು ಇದೆ. ಬಿಲ್ಡ್ ಕ್ವಾಲಿಟಿ ಸರಿಯಾಗಿ ಇಲ್ಲದಿರುವುದರಿಂದ ಎಷ್ಟೋ ಪ್ರಾಣಗಳು ಹೋಗಿದ್ದೂ ಇವೆ. ನಾವುಗಳು ಅಷ್ಟು ದುಡ್ಡು ಕೊಟ್ಟು ಒಂದು ಗಾಡಿ ಖರೀದಿ ಮಾಡುತ್ತೇವೆ ಅಂದರೆ ಒಳ್ಳೆಯ ಬಿಲ್ಡ್ ಕ್ವಾಲಿಟಿ ಹಾಗು ಸೇಫ್ಟಿ ಫೀಚರ್ಸ್ ಇರುವ ಗಾಡಿಯನ್ನು ಯಾಕೆ ಖರೀದಿಸಬಾರದು ಎಂದು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು.
ಸಾಮಾನ್ಯವಾಗಿ ಒಳ್ಳೆಯ ಬಿಲ್ಡ್ ಕ್ವಾಲಿಟಿ ಇಲ್ಲದ ಕಾರುಗಳು ಲೈಟ್ ವೇಯ್ಟ್ ಸ್ಟೈನ್‌ಲೆಸ್ ಸ್ಟೀಲ್ ಮೆಟೀರಿಯಲ್ಸ್ ಗಳನ್ನು ಉಪಯೋಗಿಸುತ್ತಾರೆ. ಅದನ್ನು ಆಟೊಗ್ರೇಡ್ ಸ್ಟೀಲ್ ಎಂದು ಕರೆಯುತ್ತಾರೆ. ಅದೇ ರೀತಿ ಬಿಲ್ಡ್ ಕ್ವಾಲಿಟಿ ಒಳ್ಳೆಯದಿರುವ ಕಾರುಗಳಲ್ಲಿ ಅಲ್ಯುಮೀನಿಯಂ, ಮೆಗ್ನೀಸಿಯಂ ಹಾಗೂ ಸ್ಟೀಲ್‌ಗಳನ್ನು ಮಲ್ಟಿ ಲೇಯರ್‌ನಲ್ಲಿ ಬಲಿಷ್ಟವಾಗಿ ತಯಾರಿಸುತ್ತಾರೆ. ಈ ಗಾಡಿಯಯಲ್ಲಿ 55% ಉಕ್ಕು ಮತ್ತು ಕಬ್ಬಿಣವನ್ನು ಬಳಸಿದರೆ, 9% ಅಲ್ಯೂಮಿನಿಯಂ 7% ರಬ್ಬರ್, 11% ಪ್ಲಾಸ್ಟಿಕ್ ಮತ್ತು 14% ಬೇರೆ ವಸ್ತುಗಳನ್ನು ಬಳಸಲಾಗುತ್ತದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್ ಮುಕ್ತ – ಈ ಷರತ್ತು ಅನ್ವಯ
ಕೆಲವು ಕಂಪನಿಗಳು, ತಾವು ತಯಾರಿಸಿದ ಕಾರುಗಳನ್ನು ಮಾರುಕಟ್ಟೆಗೆ ಬಿಡುವ ಮೊದಲೇ ಅದರ ಬಿಲ್ಡ್ ಕ್ವಾಲಿಟಿಯನ್ನು ಪರೀಕ್ಷಿಸಿ ಅದರ ವೀಡಿಯೋಗಳನ್ನೂ ಬಿಡುಗಡೆ ಮಾಡುತ್ತವೆ. ಹೊಸ ಕಾರು ಖರೀದಿಸುವವರು ಇಂತಹ ವೀಡಿಯೋಗಳನ್ನು ನೋಡುವುದರ ಜೊತೆಗೆ ವಿಮರ್ಶೆಗಳನ್ನು ನೋಡಿ ಖರೀದಿಸುವುದು ಉತ್ತಮ. – ಪ್ರಜ್ವಲ್ ಗೌಡ
ಮಸ್ಕತ್: ಒಮಾನ್‌ನಲ್ಲಿ ಸೋಮವಾರ ಭಾರೀ ಮಳೆ (Rain In Oman) ಮುಂದುವರಿದಿದ್ದು, ಹಠಾತ್ ಪ್ರವಾಹ ಸೃಷ್ಟಿಯಾಗಿದೆ. ಪರಿಣಾಮ 13 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ನೋಡ ನೋಡುತ್ತಿದ್ದಂತೆಯೇ ವಾಹನಗಳು ಕೊಚ್ಚಿ ಹೋಗಿವೆ.
Families, and children trapped inside homes due to flash floods in Oman; rescue efforts underway pic.twitter.com/teWqeHqIiM
ಉತ್ತರ ಅಲ್ ಶರ್ಕಿಯಾ ಗವರ್ನರೇಟ್‌ನಲ್ಲಿ ನಾಗರಿಕ ರಕ್ಷಣಾ ಮತ್ತು ಅಂಬುಲೆನ್ಸ್ ವಿಭಾಗದ ಶೋಧ ತಂಡಗಳ ಕಾರ್ಯಾಚರಣೆಯಿಂದಾಗಿ ಓರ್ವನ ಶವವನ್ನು ಹೊರತೆಗೆಯಲಾಗಿದೆ. ಮಗು ಸೇರಿದಂತೆ ಉಳಿದ ಮೂವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಪ್ರವಾಹದಿಂದಾಗಿ ಭಾನುವಾರ ಕನಿಷ್ಟ 12 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ 9 ವಿದ್ಯಾರ್ಥಿಗಳು, ಇಬ್ಬರು ಸ್ಥಳೀಯ ನಿವಾಸಿಗಳು ಮತ್ತು ವಲಸಿಗರೊಬ್ಬರು ಸೇರಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ 3 ದಿನ ಒಣಹವೆ – ಏ.18 ರಿಂದ ವಿವಿಧೆಡೆ ಮಳೆ
ಧಾರಾಕಾರ ಮಳೆಯಿಂದಾಗಿ ಒಮಾನ್‌ನ ಹಲವು ಭಾಗಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಜನರು ತಮ್ಮ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಒಮಾನ್‌ನ ಬೀದಿಗಳಲ್ಲಿ ಪ್ರವಾಹದ ನೀರು ಹರಿಯುತ್ತಿದ್ದಂತೆ ವಾಹನಗಳು ಜಲಾವೃತಗೊಂಡಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಯಲ್ ಓಮನ್ ಪೊಲೀಸ್, ರಾಯಲ್ ಆರ್ಮಿ ಆಫ್ ಒಮಾನ್, ನಾಗರಿಕ ರಕ್ಷಣಾ ಪ್ರಾಧಿಕಾರ ಮತ್ತು ಅಂಬುಲೆನ್ಸ್ ತಂಡಗಳು ಶಾಲೆಗಳಿಂದ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದವು.
ತುರ್ತು ನಿರ್ವಹಣೆಗಾಗಿ ಒಮಾನ್‌ನ ರಾಷ್ಟ್ರೀಯ ಸಮಿತಿಯು ಮಳೆಯಿಂದ ಪ್ರಭಾವಿತವಾಗಿರುವ ಎಲ್ಲಾ ಗವರ್ನರೇಟ್‌ಗಳನ್ನು ಎಚ್ಚರಿಸಿದೆ ಎಂದು ವರದಿ ತಿಳಿಸಿದೆ. ಒಮಾನ್ ಹೊರತುಪಡಿಸಿ, ಯುಎಇ ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು, ಮಿಂಚು ಮತ್ತು ಗುಡುಗು ಸೇರಿದಂತೆ ಭಾರೀ ಮಳೆಯಾಗುವ ಸಾಧ್ಯತೆಗಳಿರುವುದಾಗಿ ವರದಿಯಾಗಿದೆ.
ಹಾವೇರಿ: ದಿಢೀರ್ ಮೆಣಸಿನಕಾಯಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು (Farmers) ಮಾರುಕಟ್ಟೆ ಆಡಳಿತ ಕಚೇರಿಗೆ (Market Administration Office) ಕಲ್ಲುತೂರಿ, ವಾಹನಗಳಿಗೆ ಬೆಂಕಿ ಇಟ್ಟ ಘಟನೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ (Byadgi Chilli Market) ನಡೆದಿದೆ.
ಪ್ರತಿ ಕ್ವಿಂಟಾಲ್ ಮೆಣಸಿನಕಾಯಿಗೆ ಕಳೆದ ವಾರ 20 ಸಾವಿರ ರೂ. ದರ ನಿಗದಿಯಾಗಿತ್ತು. ಆದರೆ ಈ ವಾರ 12 ಸಾವಿರ ರೂ. ದರ ನಿಗದಿ ಮಾಡಿದ್ದಕ್ಕೆ ಆಕ್ರೋಶಗೊಂಡ ರೈತರು ಎಪಿಎಂಸಿ ಕಚೇರಿ ಮುಂದೆ ಇರುವ ಆಡಳಿತ ಕಚೇರಿಗೆ ಕಲ್ಲು ತೂರಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ – ಕೇಂದ್ರದಿಂದ ಅಧಿಸೂಚನೆ ಪ್ರಕಟ
ಕಚೇರಿಯ ಮುಂದೆ ನಿಂತಿದ್ದ ಸರ್ಕಾರಿ ಕಾರಿನ ಗಾಜು ಪುಡಿಪುಡಿಯಾಗಿದೆ. ಇನ್ನೊಂದು ಕಾರನ್ನು ಎತ್ತಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಆಡಳಿತ ಕಚೇರಿಯ ಮುಂಭಾಗದಲ್ಲಿ ಅಗ್ನಿಶಾಮಕ ದಳ ವಾಹನ, ಎಪಿಎಂಸಿ ಕಾರಿನ ಜೊತೆ ಖಾಸಗಿ ವ್ಯಕ್ತಿಗಳ ಎರಡು ಕಾರು, 10 ಬೈಕಿಗೆ ಬೆಂಕಿ ಹಚ್ಚಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.