ಪತ್ನಿ ಬೃಂದಾ ಅವರ ಬೇಬಿ ಬಂಪ್ ಫೋಟೋ ಶೇರ್ ಮಾಡಿ, ತಾಯಂದಿರ ದಿನದ ಶುಭಾಶಯಗಳು. ನೀವು ಇಲ್ಲದೇ ಈ ಜಗತ್ತು ಅಸ್ತಿತ್ವದಲ್ಲಿರುತ್ತಿರಲಿಲ್ಲ ಎಂದು ವಾಸುಕಿ ಬರೆದುಕೊಂಡಿದ್ದಾರೆ. ಪತ್ನಿ ತಾಯಿಯಾಗುತ್ತಿರುವ ಶುಭಸುದ್ದಿಯನ್ನು ಅವರು ತಿಳಿಸಿದ್ದಾರೆ. ಈ ಜೋಡಿಗೆ ಮಾನ್ವಿತಾ ಕಾಮತ್, ಅಮೃತಾ ಪ್ರೇಮ್, ಚೈತ್ರಾ ವಾಸುದೇವನ್ ಸೇರಿದಂತೆ ಅನೇಕರು ಶುಭಕೋರಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ರಂಜಿತ್
ರಂಗಭೂಮಿಯಲ್ಲಿ ಬೃಂದಾ ವಿಕ್ರಮ್ (Brunda Vikram) ಅವರು ವಾಸುಕಿಗೆ ಪರಿಚಯವಾಗಿತ್ತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. 2023ರಲ್ಲಿ ಗುರುಹಿರಿಯರ ಸಮ್ಮತಿ ಪಡೆದು ಮದುವೆಯಾದರು.
‘ತೂತ್ ಕಾಸು’ (Thooth Kasu) ಸ್ಯಾಂಡಲ್ ವುಡ್ ನಲ್ಲಿ ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ಸಿನಿಮಾ. ಹೊಸಬರು ಸೇರಿಕೊಂಡು ಮಾಡಿರುವ ಈ ಸಿನಿಮಾ ಇದಾಗಿದ್ದು ಇತ್ತೀಚಿಗಷ್ಟೇ ಚಿತ್ರತಂಡ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡುವ ನೆಪದಲ್ಲಿ ಮಾಧ್ಯಮದ ಮುಂದೆ ಹಾಜರಾಗಿತ್ತು. ವಿಶೇಷ ಎಂದರೆ ಹಂಸಲೇಖ ಅವರ ದೇಸಿ ಶಾಲೆಯಲ್ಲಿ ಪಳಗಿದ ಒಂದಿಷ್ಟು ಪ್ರತಿಭೆಗಳು ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದೆ.
ಕಾಮಿಡಿ ಜಾನರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ರವಿ ತೇಜಸ್ (Ravi Tejas) ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ರವಿತೇಜಸ್ ಅವರಿಗೆ ಇದು ಮೊದಲ ಸಿನಿಮಾ. ‘ತೂತ್ ಕಾಸು’ ಚಿತ್ರದಲ್ಲಿ ನಾಯಕನಾಗಿ ವರುಣ್ ದೇವಯ್ಯ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕಿಯರಾಗಿ ಪ್ರಿಷಾ ಹಾಗೂ ಪ್ರೇರಣ ಭಟ್ ಮಿಂಚಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರವಿ ತೇಜಸ್ ‘ತೂತ್ ಕಾಸು’ 1942ರಿಂದ 1947ರವರೆಗೆ ಚಲಾವಣೆಯಲ್ಲಿದ್ದ ನಾಣ್ಯ. ಸ್ವಾತಂತ್ರ್ಯ ನಂತರ ತೂತ್ ಕಾಸಿನ ಚುನಾವಣೆಯನ್ನು ನಿಲ್ಲಿಸಲಾಯಿತು. ಸಿನಿಮಾದಲ್ಲಿ ಇದೊಂದು ಕೋಡ್ ವರ್ಡ್ ಆಗಿ ಬಳಸಲಾಗಿದೆ. ನಮ್ಮ ಚಿತ್ರ ಮಾಫಿಯಾ ಗ್ಯಾಂಗ್ ಬಗ್ಗೆ ಇದೆ’ ಎಂದು ಹೇಳಿದರು.
ಇನ್ನು ನಾಯಕ ವರುಣ್ ದೇವಯ್ಯ ಮಾತನಾಡಿ, ’10 ವರ್ಷದ ಗ್ಯಾಪ್ ನ ನಂತರ ಮಾಡಿರುವ ಸಿನಿಮಾ ಇದು. ನಾವೆಲ್ಲ ಚಿತ್ರಕ್ಕಾಗಿ ತುಂಬಾ ಎಫರ್ಟ್ ಹಾಕಿದ್ದೇವೆ. ಸಿನಿಮಾ ನೋಡಿ ಸಪೋರ್ಟ್ ಮಾಡಿ’ ಎಂದರು. ಚಿತ್ರದಲ್ಲಿ ವಿನೋದ್ ಆನಂದ್ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ಬಿಗ್ ಬಾಸ್ ಸೀಸನ್ 7 (Bigg Boss Kannada 7) ಸ್ಪರ್ಧಿ ವಾಸುಕಿ ವೈಭವ್ (Vasuki Vaibhav) ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ನವೆಂಬರ್ 16ರಂದು ಹೊಸ ಬಾಳಿಗೆ ಕಾಲಿಟ್ಟಿದ್ದರು. ಮದುವೆಯಾಗಿ ಒಂದು ತಿಂಗಳ ನಂತರ ಇದೀಗ ಮದುವೆಯ ಸುಂದರ ಫೋಟೋಗಳನ್ನ ಶೇರ್ ಮಾಡಿದ್ದಾರೆ.
ವಾಸುಕಿ- ಬೃಂದಾ ಜೋಡಿ ರಂಗಭೂಮಿಯಲ್ಲಿರುವಾಗಲೇ ಪರಿಚಿತರು. ಹಲವು ವರ್ಷಗಳು ಪ್ರೀತಿಸಿ ಇತ್ತೀಚೆಗೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಇದೀಗ ಇಬ್ಬರ ಮದುವೆ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ವಾಸುಕಿ ಮದುವೆಗೆ ಡಾಲಿ, ಕಿಶನ್, ದೀಪಿಕಾ ದಾಸ್, ಸಾನ್ಯ ಅಯ್ಯರ್, ಶೈನ್ ಶೆಟ್ಟಿ, ಕೃಷಿ ತಾಪಂಡ, ಶೃತಿ ಹರಿಹರನ್, ಮೇಘನಾ ರಾಜ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದರು. ಇದನ್ನೂ ಓದಿ:ರಾಮಮಂದಿರ ಉದ್ಘಾಟನೆಗೆ ರಾಕಿಭಾಯ್ ಗೂ ಆಹ್ವಾನ
ಚಿತ್ರರಂಗದಲ್ಲಿ ಗಾಯಕ, ನಟ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ವಾಸುಕಿ ಸಂಗೀತ ಸಂಯೋಜನೆಗೆ ಸಿನಿಮಾರಂಗದಲ್ಲಿ ಹೆಚ್ಚಿನ ಬೇಡಿಕೆ ಇದೆ.
ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ (Vasuki Vaibhav) ಇಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ವಾಸುಕಿ ಮದುವೆ ಆಗುತ್ತಿರುವ ಬೃಂದಾ (Brunda) ಯಾರು ಎನ್ನುವ ವಿಚಾರವನ್ನು ಈವರೆಗೂ ವಾಸುಕಿ ಯಾರ ಜೊತೆಯೂ ಹಂಚಿಕೊಂಡಿರಲಿಲ್ಲ. ಬೃಂದಾ ಕೂಡ ರಂಗಭೂಮಿ ಕಲಾವಿದರು. ಸಾಕಷ್ಟು ನಾಟಕಗಳಲ್ಲಿ ಅವರು ನಟಿಸಿದ್ದಾರೆ. ಸ್ವತಃ ವಾಸುಕಿ ಜೊತೆಯೇ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ಹಲವು ವರ್ಷಗಳಿಂದಲೂ ಈ ಜೋಡಿ ಪ್ರೀತಿಸುತ್ತಿದ್ದ ಎನ್ನುತ್ತವೆ ಮೂಲಗಳು.
ವಾಸುಕಿ ಅವರ ಮದುವೆ ತೀರಾ ಸರಳವಾಗಿ ಇಂದು ನಡೆದಿದೆ. ನಟ ಸಿಹಿ ಕಹಿ ಸೇರಿದಂತೆ ಹಲವು ಕಲಾವಿದರು, ಎರಡು ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಮದುವೆ ತೀರಾ ಖಾಸಗಿ ಆಗಿರಲಿ ಎಂದು ಅವರು ಮಾಧ್ಯಮಗಳಿಗೂ ಮದುವೆ ವಿಚಾರವನ್ನು ತಿಳಿಸಿರಲಿಲ್ಲ.
ಮದುವೆ ವಿಚಾರವನ್ನು ವಾಸುಕಿ ಗುಟ್ಟಾಗಿದ್ದರು. ಅಚಾನಕ್ಕಾಗಿ ನಟಿ (Actress) ತಾರಾ ಈ ವಿಷಯವನ್ನು ಹೇಳಿಕೊಂಡಿದ್ದರು. ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ಮದುವೆ ಆಗುವ ಗಂಡಿನ ಪಾತ್ರ ಮಾಡಿದ್ದರು. ಈ ಕುರಿತಾಗಿ ಮಾತನಾಡುತ್ತಾ ನಟಿ ತಾರಾ ಅತೀ ಶೀಘ್ರದಲ್ಲೇ ವಾಸುಕಿ ಮದುವೆ (Marriage) ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಹಲವು ತಿಂಗಳ ಹಿಂದೆಯೇ ವಾಸುಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿತ್ತು. ಬಹುಕಾಲದ ಗೆಳೆತಿಯೊಂದಿಗೆ ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾದಂತೆ ಕಾಣುತ್ತಿದೆ. ಇಂದು ವಾಸುಕಿ ಸಪ್ತಪದಿ ತುಳಿಯಲಿದ್ದಾರೆ ಎನ್ನುವುದು ತಾಜಾ ಸಮಾಚಾರ.
ಮದುವೆ ಕುರಿತಂತೆ ವಾಸುಕಿ ಒಪ್ಪಿಕೊಂಡಿದ್ದರು. ತಾರಾ ಅವರಿಗೆ ‘ಅಯ್ಯೋ.. ಹೇಳಬೇಡಿ’ ಎಂದು ಕೇಳಿಕೊಂಡಿದ್ದರೂ, ವಿಷಯವಂತೂ ಬಹಿರಂಗವಾಗಿತ್ತು. ಆದರೆ, ಅಧಿಕೃತವಾಗಿ ಈ ವಿಷಯದ ಕುರಿತು ವಾಸುಕಿ ವೈಭವ್ ಅವರೇ ಅಧಿಕೃತವಾಗಿ ಹೇಳಬೇಕಿತ್ತು. ಇಂದು ಅವರು ಮದುವೆ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕನ್ನಡದ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ (Vasuki Vaibhav) ಇಂದು ವೈವಾಹಿಕ (Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ, ರಂಗಭೂಮಿ ಕಲಾವಿದೆ ಬೃಂದಾ (Brunda) ಜೊತೆ ಇಂದು ಅವರು ಸಪ್ತಪದಿ ತುಳಿದಿದ್ದಾರೆ. ನಟ ಸಿಹಿ ಕಹಿ ಸೇರಿದಂತೆ ಹಲವು ಕಲಾವಿದರು, ಎರಡು ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.
ಮದುವೆ ವಿಚಾರವನ್ನು ವಾಸುಕಿ ಗುಟ್ಟಾಗಿದ್ದರು. ಅಚಾನಕ್ಕಾಗಿ ನಟಿ ತಾರಾ ಈ ವಿಷಯವನ್ನು ಹೇಳಿಕೊಂಡಿದ್ದರು. ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ಮದುವೆ ಆಗುವ ಗಂಡಿನ ಪಾತ್ರ ಮಾಡಿದ್ದರು. ಈ ಕುರಿತಾಗಿ ಮಾತನಾಡುತ್ತಾ ನಟಿ ತಾರಾ ಅತೀ ಶೀಘ್ರದಲ್ಲೇ ವಾಸುಕಿ ಮದುವೆ (Marriage) ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಹಲವು ತಿಂಗಳ ಹಿಂದೆಯೇ ವಾಸುಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿತ್ತು. ಬಹುಕಾಲದ ಗೆಳೆತಿಯೊಂದಿಗೆ ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾದಂತೆ ಕಾಣುತ್ತಿದೆ. ಇಂದು ವಾಸುಕಿ ಸಪ್ತಪದಿ ತುಳಿಯಲಿದ್ದಾರೆ ಎನ್ನುವುದು ತಾಜಾ ಸಮಾಚಾರ.
ಮದುವೆ ಕುರಿತಂತೆ ವಾಸುಕಿ ಒಪ್ಪಿಕೊಂಡಿದ್ದರು. ತಾರಾ ಅವರಿಗೆ ‘ಅಯ್ಯೋ.. ಹೇಳಬೇಡಿ’ ಎಂದು ಕೇಳಿಕೊಂಡಿದ್ದರೂ, ವಿಷಯವಂತೂ ಬಹಿರಂಗವಾಗಿತ್ತು. ಆದರೆ, ಅಧಿಕೃತವಾಗಿ ಈ ವಿಷಯದ ಕುರಿತು ವಾಸುಕಿ ವೈಭವ್ ಅವರೇ ಅಧಿಕೃತವಾಗಿ ಹೇಳಬೇಕಿತ್ತು. ಇಂದು ಅವರು ಮದುವೆ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಚಿತ್ರರಂಗದ (Sandalwood) ಯುವ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ (Vasuki Vaibhav) ಕೆಲವೇ ದಿನಗಳಲ್ಲೇ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾಹಿತಿಯಿದೆ. ಅಚಾನಕ್ಕಾಗಿ ನಟಿ ತಾರಾ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ಮದುವೆ ಆಗುವ ಗಂಡಿನ ಪಾತ್ರ ಮಾಡಿದ್ದರು. ಈ ಕುರಿತಾಗಿ ಮಾತನಾಡುತ್ತಾ ನಟಿ ತಾರಾ ಅತೀ ಶೀಘ್ರದಲ್ಲೇ ವಾಸುಕಿ ಮದುವೆ (Marriage) ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಹಲವು ತಿಂಗಳ ಹಿಂದೆಯೇ ವಾಸುಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಹರಿದಾಡುತ್ತಿತ್ತು. ಬಹುಕಾಲದ ಗೆಳೆತಿಯೊಂದಿಗೆ ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾದಂತೆ ಕಾಣುತ್ತಿದೆ. ಇದೇ ನವೆಂಬರ್ 16ರಂದು ವಾಸುಕಿ ಸಪ್ತಪದಿ ತುಳಿಯಲಿದ್ದಾರೆ ಎನ್ನುವುದು ತಾಜಾ ಸಮಾಚಾರ.
ಮದುವೆ ಕುರಿತಂತೆ ವಾಸುಕಿ ಒಪ್ಪಿಕೊಂಡಿದ್ದರು. ತಾರಾ ಅವರಿಗೆ ‘ಅಯ್ಯೋ.. ಹೇಳಬೇಡಿ’ ಎಂದು ಕೇಳಿಕೊಂಡಿದ್ದರೂ, ವಿಷಯವಂತೂ ಬಹಿರಂಗವಾಗಿದೆ. ಆದರೆ, ಅಧಿಕೃತವಾಗಿ ಈ ವಿಷಯದ ಕುರಿತು ವಾಸುಕಿ ವೈಭವ್ ಅವರೇ ಹೇಳಬೇಕಿದೆ. ಬಹುಶಃ ಮುಂದಿನ ದಿನಗಳಲ್ಲಿ ಮದುವೆ ಬಗ್ಗೆ ವಾಸುಕಿ ಮಾಹಿತಿ ನೀಡಬಹುದು.
ಪತ್ರಕರ್ತನಾಗಿ, ನಟನಾಗಿ ಇದೀಗ ನಿರ್ದೇಶಕನಾಗಿಯೂ ಗುರುತಿಸಿಕೊಂಡಿರುವ ಯತಿರಾಜ್ (Yathiraj) ನಿರ್ದೇಶಿಸಿರುವ ಸಂಜು (Sanju) ಚಿತ್ರ ಸಿದ್ದವಾಗಿದೆ. ಪ್ರೀತಿ ಮತ್ತು ಭಾವನೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಯತಿರಾಜ್ ಅವರೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ.
ವಿಜಯ್ ಹರಿತ್ಸ ಸಂಗೀತ ನಿರ್ದೇಶಿಸಿರುವ ಎರಡು ಹಾಡುಗಳು ಈ ಚಿತ್ರದಲ್ಲಿದ್ದು, ಎರಡೂ ಹಾಡುಗಳನ್ನು (Song) ಆಕಾಶ್ ಹಾಸನ್ ಬರೆದಿದ್ದಾರೆ. ಡ್ಯುಯೆಟ್ ಹಾಡನ್ನು ಖ್ಯಾತ ಗಾಯಕ ವಾಸುಕಿ ವೈಭವ್ (Vasuki Vaibhav) ಹಾಗೂ ಗಾಯಕಿ ಐಶ್ವರ್ಯ ರಂಗರಾಜನ್ (Aishwarya Rangarajan) ಹಾಡಿದ್ದಾರೆ. ಮತ್ತೊಂದು ವಿಭಿನ್ನ ಶೈಲಿಯ ಗೀತೆಯನ್ನು ಹೆಸರಾಂತ ಗಾಯಕ ನವೀನ್ ಸಜ್ಜು(Naveen Sajju) ಹಾಡಿದ್ದಾರೆ. ಈ ಎರಡು ಹಾಡುಗಳನ್ನು ರೇಣು ಸ್ಟುಡಿಯೋ ಹಾಗೂ ಪಾರೇಕ್ ಸ್ಟುಡಿಯೋದಲ್ಲಿ ಇತ್ತೀಚೆಗೆ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ ಎಂದು ಗಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ರಮ್ಯಾ ಬದಲು ರಚಿತಾ ರಾಮ್: ಎರಡು ಬಾರಿ ರಮ್ಯಾ ಸ್ಥಾನ ತುಂಬಿದ ರಚ್ಚು
ಮೈಸೂರಿನ ಸಂತೋಷ್ ಡಿ ಎಂ ನಿರ್ಮಿಸಿರುವ ಈ ಚಿತ್ರಕ್ಕೆ ವಿದ್ಯಾ ನಾಗೇಶ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ. ಮನ್ವಿತ್ ಈ ಚಿತ್ರದ ನಾಯಕನಾಗಿ ನಟಿಸಿದ್ದು, ಶ್ರಾವ್ಯ ನಾಯಕಿಯಾಗಿದ್ದಾರೆ. ಯತಿರಾಜ್, ಸುಂದರಶ್ರೀ, ಬಾಲ ರಾಜ್ವಾಡಿ, ಮಹಂತೇಶ್, ಅಪೂರ್ವ, ಚಂದ್ರಪ್ರಭ, ಪ್ರಕಾಶ್ ಶೆಣೈ, ವಿನೋದ್, ಬೌ ಬೌ ಜಯರಾಂ, ಬೇಬಿಶ್ರೀ, ರಾಜೇಗೌಡ, ನಾಗರತ್ನ, ಚೇತನ್, ಕುರಿ ರಂಗ, ಕಾತ್ಯಾಯಿನಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಮಡಿಕೇರಿಯ ಮೂರ್ನಾಡು ಎಂಬ ಅದ್ಭುತ ಸ್ಥಳದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ. ಅಲ್ಲಿ ಬಸ್ ನಿಲ್ದಾಣದ ಸೆಟ್ ಸಹ ಹಾಕಲಾಗಿತ್ತು. ಈ ಬಸ್ ನಿಲ್ದಾಣ ಚಿತ್ರದಲ್ಲಿ ಪ್ರಮುಖಪಾತ್ರ ವಹಿಸಿದೆ. ಶೀಘ್ರದಲ್ಲೇ ಹಾಡುಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ನಿರ್ದೇಶಕ ಯತಿರಾಜ್ ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಗೆ (Bigg Boss House) ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಇದೀಗ ದೀಪಿಕಾ ದಾಸ್ ಆಸೆಯಂತೆ ವಾಸುಕಿ ವೈಭವ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವಾಸುಕಿ ವೈಭವ್ (Vasuki Vaibhav) ಎಂಟ್ರಿಯಿಂದ ದೀಪಿಕಾ ದಾಸ್ (Deepika Das) ಖುಷಿಪಟ್ಟಿದ್ದಾರೆ.
ದೊಡ್ಮನೆಯ ಆಟ ಕಡೆಯ ಘಟ್ಟದಲ್ಲಿರುವ ಕಾರಣ, ಸ್ಪರ್ಧಿಗಳ ಆಸೆಯನ್ನ ನೆರವೇರಿಸುವುದಾಗಿ ಹೇಳಿದ್ದರು. ಅದರಂತೆ ರೂಪೇಶ್ ಶೆಟ್ಟಿ ಆಸೆಯಂತೆ ಹುಲಿವೇಷ ತಂಡ ಮನೆಗೆ ಎಂಟ್ರಿ ಕೊಟ್ಟಿತ್ತು. ಬಳಿಕ ಅರವಿಂದ್ ಕೆ.ಪಿ (Aravind Kp) ಎಂಟ್ರಿ ನಂತರ ಈಗ ವಾಸುಕಿ ವೈಭವ್ ದೊಡ್ಮನೆಗೆ ಬಂದಿದ್ದಾರೆ.
ನಮ್ಮ ಸೀಸನ್‌ನಲ್ಲಿನ (ಬಿಗ್ ಬಾಸ್ 7) ನನ್ನ ಕ್ಲೋಸ್ ಫ್ರೆಂಡ್ಸ್‌ನಿಂದ ಕಾಲ್ ಬರಬೇಕು ಎಂಬ ಆಸೆ ಇದೆ. ವಾಸುಕಿ ವೈಭವ್, ಶೈನ್ ಶೆಟ್ಟಿ, ಪ್ರಿಯಾಂಕಾ, ಕಿಶನ್, ಭೂಮಿ ಕಡೆಯಿಂದ ಕಾಲ್ ಬಂದು ನಾನು ಮಾತನಾಡಬೇಕು ಎಂಬ ಆಸೆ ಇದೆ. ಇಷ್ಟು ಜನರು ಈ ಮನೆಯೊಳಗೆ ಗೆಸ್ಟ್ ಆಗಿ ಬಂದು ನನ್ನೊಂದಿಗೆ ಟೈಮ್ ಸ್ಪೆಂಡ್ ಮಾಡಬೇಕು ಎಂದು ದೀಪಿಕಾ ದಾಸ್ ಕೋರಿದ್ದರು. ವಾಸುಕಿ ವೈಭವ್ ಬರುವ ಮೂಲಕ ದೀಪಿಕಾ ದಾಸ್ (Deepika Das) ಅವರ ಇಚ್ಛೆಯನ್ನ ಬಿಗ್ ಬಾಸ್ ಈಡೇರಿಸಿದ್ದಾರೆ. ಇದನ್ನೂ ಓದಿ: ರಾಕಿಭಾಯ್ ಜೊತೆ ಕಾಣಿಸಿಕೊಂಡ ಪಾಂಡ್ಯ ಬ್ರದರ್ಸ್ – KGF 3 ಟ್ರೆಂಡಿಂಗ್
ಬಿಗ್ ಬಾಸ್ ಮನೆಗೆ ಬಂದ್ಮೇಲೆ ಮತ್ತೆ ನಮ್ಮ ಸೀಸನ್ ಮೆಮೊರೀಸ್ ರೀಕಾಲ್ ಆಗುತ್ತಿದೆ ಎಂದರು ವಾಸುಕಿ. ಜೈಲಿನ ಬಳಿ ಹೋದ ವಾಸುಕಿ ವೈಭವ್, ಜೈಲು ನಿಜವಾಗಿಯೂ ರಿಯಲೈಸೇಷನ್ ಸೆಂಟರ್. ನಮ್ಮ ಸೀಸನ್‌ನಲ್ಲಿ ಆಲ್ಮೋಸ್ಟ್ ಎಲ್ಲರೂ ಹೋಗಿದ್ವಿ. ದೀಪಿಕಾನ ಬಿಟ್ಟು ಎಂದರು. ಹಾಗೇ ಮನಸ್ಸಿಂದ ಯಾರೂನೂ ಕೆಟ್ಟವರಲ್ಲ ಹಾಡನ್ನ ವಾಸುಕಿ ವೈಭವ್ ಹಾಡಿದರು. ಬಳಿಕ ಮತ್ತೆ ಇಲ್ಲಿಗೇ ಬಂದು ಇದೇ ಜಾಗದಲ್ಲಿ ಹಾಡುವ ಅವಕಾಶ ಸಿಕ್ತಲ್ಲ ಎಂದು ವಾಸುಕಿ ವೈಭವ್ ಸಂತಸ ವ್ಯಕ್ತಪಡಿಸಿದರು.
ನಮ್ಮ ಸೀಸನ್‌ನ ಪ್ರೈಡ್ ದೀಪಿಕಾ ದಾಸ್. ನಾವು ಕಡೆಯವರೆಗೂ ತಲೆ ಸುತ್ತಿ ಬೀಳಲಿಲ್ಲ ಅಂದ್ರೆ ಅದಕ್ಕೆ ಕಾರಣ ದೀಪಿಕಾ ದಾಸ್. ತಾಯಿ ತರಹ ನಮ್ಮನ್ನೆಲ್ಲಾ ನೋಡಿಕೊಂಡಿದ್ದಾರೆ. ಯಾವುದಕ್ಕೂ ಕಮ್ಮಿಯಾಗದ ತರಹ ನೋಡಿಕೊಂಡಿದ್ದಾರೆ. ಈ ಸೀಸನ್‌ನ ಬೆಸ್ಟ್ ಅಂದ್ರೆ, ದೀಪಿಕಾ ಮತ್ತು ಅರಣ್ ಸಾಗರ್ (Arun Sagar) ಮಾಡಿದ ಆಕ್ಟ್ ಎಂದು ವಾಸುಕಿ ಹಾಡಿ ಹೊಗಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಟಗರು ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟ ಡಾಲಿ ಧನಂಜಯ್ ಸ್ಯಾಂಡಲ್ ವುಡ್ ಅಂಗಳದ ಬಹು ಬೇಡಿಕೆಯ ನಟ. ಆದ್ರೆ ಕೇವಲ ನಟನಾಗಿ ಮಾತ್ರ ಉಳಿಯದೇ ನಿರ್ಮಾಪಕನಾಗಿಯೂ ಡಾಲಿ ಗಮನ ಸೆಳೆಯುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ಮೂಲಕ ಸಿನಿಮಾ ನಿರ್ಮಾಣವನ್ನು ಮಾಡುತ್ತಿದ್ದು ಮೊದಲೆರಡು ಸಿನಿಮಾವಾಗಿ ‘ಬಡವ ರಾಸ್ಕಲ್’ ಹಾಗೂ ‘ಹೆಡ್ ಬುಶ್’ ನಿರ್ಮಾಣ ಮಾಡಲಾಗಿತ್ತು. ಇತ್ತೀಚೆಗೆ ಡಾಲಿ ಪಿಕ್ಚರ್ಸ್ ಮೂರನೇ ಸಿನಿಮಾ ‘ಟಗರು ಪಲ್ಯ’ ಅನೌನ್ಸ್ ಆಗಿತ್ತು. ಮೋಷನ್ ಪೋಸ್ಟರ್ ಮೂಲಕ ಸುದ್ದಿಯಾಗಿದ್ದ ‘ಟಗರು ಪಲ್ಯ’ ಇದೀಗ ಸೆಟ್ಟೇರೋಕೆ ರೆಡಿಯಾಗಿದೆ.
‘ಟಗರು ಪಲ್ಯ’ ಮೂಲಕ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆ ಮಾಡಿಕೊಟ್ಟಿದೆ. ಚಿತ್ರದಲ್ಲಿ ನಾಗಭೂಷಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಮೂಲಕ ಉಮೇಶ್ ಕೆ ಕೃಪ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯೋಗರಾಜ್ ಭಟ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ‘ಟಗರು ಪಲ್ಯ’ ಕಂಟೆಂಟ್ ಆಧಾರಿತ ಸಿನಿಮಾವಾಗಿದ್ದು, ಒಂದೊಳ್ಳೆ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಸಿನಿಮಾ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ
ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರಕ್ಕೆ ನಾಯಕಿ ಯಾರೆಂಬುದು ಸದ್ಯದಲ್ಲೇ ರಿವೀಲ್ ಆಗಲಿದ್ದು, ರಂಗಾಯಣ ರಘು, ನಾಗಭೂಷಣ್, ತಾರಾ, ಶರತ್ ಲೋಹಿತಾಶ್ವ ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.
Live Tv
[brid partner=56869869 player=32851 video=960834 autoplay=true]
ಕನ್ನಡದ ಹೆಸರಾಂತ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ (Vasuki Vaibhav) ಮತ್ತು ಒಂದು ಗುಂಪಿನ ನಡುವೆ ಕಿರಕ್ ಆಗಿದ್ದು, ಈ ಗಲಾಟೆ ಪೊಲೀಸ್ ಸ್ಟೇಶನ್ ಮೆಟ್ಟಿಲು ಹತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾದ ವೀಕ್ಷಣೆಗೆಂದು ಬೆಂಗಳೂರಿನ ಊರ್ವಶಿ (Urvashi) ಚಿತ್ರಮಂದಿರಕ್ಕೆ ತನ್ನ ಫ್ರೆಂಡ್ಸ್ ಜೊತೆ ವಾಸುಕಿ ಹೋಗಿದ್ದರು. ಈ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಜಗಳ ತಾರಕ್ಕೇರಿ ಪೊಲೀಸ್ ಠಾಣೆ ಮೆಟ್ಟಿಲು ಏರುವಂತೆ ಮಾಡಿದೆ.
ಅಕ್ಟೋಬರ್ 3 ರಂದು ಸಂಜೆ ಗಾಯಕ ವಾಸುಕಿ ವೈಭವ್, ಸ್ನೇಹಿತ ದರ್ಶನ್ ಗೌಡ (Darshan) ಮತ್ತು ವಾಸುಕಿ ಸ್ನೇಹಿತೆ ಹೀಗೆ ಮೂವರು ಕಾಂತಾರ ಸಿನಿಮಾ ವೀಕ್ಷಿಸಲು ಊರ್ವಶಿ ಥಿಯೇಟರ್ ಗೆ ಹೋಗಿದ್ದಾರೆ. ಅದೇ ಥಿಯೇಟರ್ ಗೆ ಸಿನಿಮಾ ವೀಕ್ಷಿಸಲು ಬಂದಿದ್ದ ನಾಲ್ಕೈದು ಜನರ ಗುಂಪುವೊಂದು ವಾಸುಕಿ ಕುಳಿತಿದ್ದ ಸೀಟ್ ಮುಂದೆ ಹೋಗುವಾಗ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಗೊಬ್ಬರಗಾಲ ಮೈ ಮೇಲೆ ದೆವ್ವ: ಹೆದರಿ ಓಡಿದ ನವಾಜ್, ರೂಪೇಶ್ ರಾಜಣ್ಣ
ಟಿಕೆಟ್ ತೆಗೆದುಕೊಂಡು ಮೊದಲೇ ಸೀಟ್ ನಲ್ಲಿ ಕುಳಿತಿದ್ದ ವಾಸುಕಿ ವೈಭವ್ ಹಾಗೂ ಸ್ನೇಹಿತರು. ಈ ವೇಳೆ ವಾಸುಕಿ ಕುಳಿತಿದ್ದ ಸೀಟ್ ಮುಂದೆ ಕೂರಲು ನಾಲ್ಕೈದು ಜನರಿದ್ದ ಗುಂಪು ಬಂದಿದೆ. ಸಿನಿಮಾ ಶುರುವಾಗಿದ್ದರಿಂದ ಬೇಗ ಹೋಗಿ ಕುಳಿತುಕೊಳ್ಳುವಂತೆ ಅವರಿಗೆ ವಾಸುಕಿ ಸ್ನೇಹಿತ ದರ್ಶನ್ ಗೌಡ ಹಾಗೂ ಅವರ ಗೆಳತಿ ಹೇಳಿದ್ದಾರೆ. ಇದರಿಂದ ಕುಪಿತರಾದ ಮುರುಳಿ, ಬಸವರಾಜ್ ಹಾಗೂ ಸ್ನೇಹಿತರಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಾಸುಕಿ ಹಾಗೂ ಗೆಳತಿಗೆ ಅಸಭ್ಯ ಪದ ಬಳಸಿ ನಿಂದಿಸಿದ್ದರಿಂದ ಗಲಾಟೆ ಶುರುವಾಗಿದೆ.
ಕೂಡಲೇ ವಾಸುಕಿ ಪೊಲೀಸರಿಗೆ (Police) ಕರೆ ಮಾಡಿ ಕರೆಯಿಸಿಕೊಂಡಿದ್ದಾರೆ. ಆಗ ಎದುರಾಳಿ ಗುಂಪಿನಲ್ಲಿದ್ದ ಬಸವರಾಜ್, ಮುರುಳಿ ಮತ್ತಿತರರ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಲಾಗಿದೆ. ಕೇಸ್ ಏನು ಬೇಡ ಗಾಯಕ ವಾಸುಕಿ ವೈಭವ್ ಹಾಗೂ ಸ್ನೇಹಿತರು ಹೇಳಿದ್ದರಿಂದ ಹಾಗೂ ಸಾರಿ ಕೇಳಿದ್ರೆ ಸಾಕು ಎಂದಿದ್ದ ವಾಸುಕಿ ವೈಭವ ಹಾಗೂ ಫ್ರೆಂಡ್ಸ್ ಹೇಳಿದ ಕಾರಣದಿಂದಾಗಿ ವಾಸುಕಿ ವೈಭವ್ ಮತ್ತು ಸ್ನೇಹಿತೆಗೆ ಗಲಾಟೆ ಮಾಡಿದ ಗುಂಪು ಕ್ಷಮೆ ಕೇಳಿದೆ. ನಂತರ ಕೆಲ ಗಂಟೆಗಳ ಕಾಲ ಸ್ಟೇಷನ್ ನಲ್ಲಿ ಇದ್ದ ಗಾಯಕ ವಾಸುಕಿ ವೈಭವ್, ನಿರ್ದೇಶಕ ಪನ್ನಾಗಭರಣ ಹಾಗೂ ಸ್ನೇಹಿತರು ಎರಡೂ ಗುಂಪಿನ ನಡುವೆ ಸಂಧಾನ ಮಾಡಿ ಕಳಿಸಿದ್ದಾರೆ ಕಲಾಸಿಪಾಳ್ಯ (, Kalasipalya) ಪೊಲೀಸರು.
Live Tv
[brid partner=56869869 player=32851 video=960834 autoplay=true]