Tag: ವಾಸೀಂ ಪಠಾಣ್

  • ಹುಬ್ಬಳ್ಳಿ ಗಲಭೆ ಕೇಸ್‌ – ವಾಸೀಂ ಪಠಾಣ್‌ಗೆ ನ್ಯಾಯಾಂಗ ಬಂಧನ

    ಹುಬ್ಬಳ್ಳಿ ಗಲಭೆ ಕೇಸ್‌ – ವಾಸೀಂ ಪಠಾಣ್‌ಗೆ ನ್ಯಾಯಾಂಗ ಬಂಧನ

    ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮಾಸ್ಟರ್ ಮೈಂಡ್ ವಾಸೀಂ ಪಠಾಣ್‌ಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.

    ಹುಬ್ಬಳ್ಳಿಯ ನಾಲ್ಕನೇ ಜೆಎಂಎಫ್‌ಸಿ ಕೋರ್ಟ್ ಏಪ್ರಿಲ್ 30 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ದಿವ್ಯಾ ಹಾಗರಗಿ ವಾರದಲ್ಲಿ ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು – ನ್ಯಾಯಾಲಯ ಆದೇಶ

    ವಾಸೀಂ ಪಠಾಣ್‌ ಮತ್ತು ತೌಫೀಲ್ ಮುಲ್ಲಾ ಅವರನ್ನು ಹೆಚ್ಚಿನ ವಿಚಾರಣೆಗೆಂದು ಪೊಲೀಸರು 5 ದಿನಗಳ ಹಿಂದೆ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು. ಇಂದು ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ‌ ಹಾಜರು ಪಡಿಸಿದ್ದರು.

  • ಹುಬ್ಬಳ್ಳಿ ಗಲಭೆಗೆ ಮುಂಬೈ ನಂಟು!

    ಹುಬ್ಬಳ್ಳಿ ಗಲಭೆಗೆ ಮುಂಬೈ ನಂಟು!

    ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ತನಿಖೆಯ ಆಳಕ್ಕೆ ಪೊಲೀಸರು ಇಳಿದಂತೆಲ್ಲಾ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಗಲಭೆ ಹಿಂದಿನ ಕರಾಳ ಕೈಗಳು ಮುಂಬೈವರೆಗೂ ಚಾಚಿವೆ.

    ಹುಬ್ಬಳ್ಳಿಯ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಮುಂಬೈ ಮೂಲದ ರಝಾ ಅಕಾಡೆಮಿ ವಿರುದ್ಧ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಕೇಳಿಬಂದಿದೆ. ನಿನ್ನೆ ಬೆಂಗಳೂರಲ್ಲಿ ಬಂಧಿಸಲ್ಪಟ್ಟ ತೌಫಿಕ್ ಮುಲ್ಲಾ ರಝಾ ಅಕಾಡೆಮಿಯ ಸದಸ್ಯ ಎಂದು ತಿಳಿದುಬಂದಿದೆ. ನಿನ್ನೆಯೆಲ್ಲಾ ನಾನು ಅಮಾಯಕ ಎಂದಿದ್ದ ವಾಸೀಂ ಪಠಾಣ್ ಇಂದು ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ವಾಸೀಂನನ್ನು ಮತ್ತೆ ಐದು ದಿನ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯ ಮಾಸ್ಟರ್‌ಮೈಂಡ್ ಆರೋಪಿ ಅರೆಸ್ಟ್

    ವಾಸೀಂ ಬೇಪಾರಿ, ತೌಫಿಕ್ ಮುಲ್ಲಾ ಜೊತೆ ಸೇರಿ ಮಸಲತ್ತು ನಡೆಸಿದ್ದು ನಿಜ ಎಂದು ಬಾಯ್ಬಿಟ್ಟಿದ್ದಾನೆ. ವಾಟ್ಸಪ್ ಗ್ರೂಪ್ ರಚಿಸಿದ್ದು, ಪ್ರತಿಭಟನೆ, ಗಲಾಟೆಗೆ ಕರೆ ನೀಡಿದ್ದು ಹೌದು. ಆದರೆ ಅಷ್ಟೊಂದು ದೊಡ್ಡ ಪ್ರಮಾಣದ ಕಲ್ಲುಗಳು ಅಲ್ಲಿ ಹೇಗೆ ಬಂದ್ವು ಅನ್ನೋದು ಗೊತ್ತಿಲ್ಲ ಅಂತೆಲ್ಲಾ ಪೊಲೀಸರ ಮುಂದೆ ವಾಸೀಂ ಹೇಳಿದ್ದಾನೆ ಎನ್ನಲಾಗಿದೆ. ಇದೇ ವೇಳೆ ವಾಸೀಂ ಮೊಬೈಲ್ ವಶಕ್ಕೆ ಪಡೆದಿರೋ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಮುಖ ಆರೋಪಿ ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆಗೆ ಹಾಜರ್

    ಇತ್ತ ಹುಬ್ಬಳ್ಳಿ ಗಲಭೆಯ ಪ್ರಮುಖ ಆರೋಪಿಯಾಗಿರುವ ಅಭಿಷೇಕ್ ಹಿರೇಮಠ್ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾನೆ. ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಪ್ರಮುಖ ಆರೋಪಿಯಾಗಿರುವ ಅಭಿಷೇಕ್ ಅಶೋಕನಗರದ ಉಪ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ. ಪರೀಕ್ಷೆ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಪೆÇಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆದಿದ್ದು, ಅಭಿಷೇಕ್‍ಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.