Tag: ವಾಲ್ಮೀಕಿ ಹಗರಣ

  • ವಾಲ್ಮೀಕಿ ಹಗರಣ| ಬಳ್ಳಾರಿ ಬಿಜೆಪಿ ನಾಯಕನ ಮನೆ ಮೇಲೆ ಸಿಬಿಐ ದಾಳಿ

    ವಾಲ್ಮೀಕಿ ಹಗರಣ| ಬಳ್ಳಾರಿ ಬಿಜೆಪಿ ನಾಯಕನ ಮನೆ ಮೇಲೆ ಸಿಬಿಐ ದಾಳಿ

    ಬಳ್ಳಾರಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ (Valmiki Scam) ಸಂಬಂಧಿಸಿದಂತೆ ಹುಟ್ಟುಹಬ್ಬದ ದಿನವೇ ಮಾಜಿ ಸಚಿವ ಬಿ ನಾಗೇಂದ್ರ (B Nagendra) ಅವರಿಗೆ ಸಿಬಿಐ (CBI) ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ವಾಲ್ಮೀಕಿ ಹಗಣ ಸಂಬಂಧವಾಗಿ ಬಳ್ಳಾರಿಯಲ್ಲಿ (Ballari) ಮೊಟ್ಟೆ ವ್ಯಾಪಾರಿ ಕುಮಾರಸ್ವಾಮಿ ಹಾಗೂ ಅವರ ಮಗ ಬಿಜೆಪಿ ಕಾರ್ಪೊರೇಟರ್ ಗೋವಿಂದರಾಜು ಮನೆ ಮೇಲೆ 10ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ವಾಲ್ಮೀಕಿ ನಿಗಮ ಪ್ರಕರಣದ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಖಾತೆಯಿಂದ ಗೋವಿದರಾಜು ಖಾತೆಗೆ 60 ಲಕ್ಷ ರೂ. ಹಣ ವರ್ಗಾಣೆಯಾಗಿತ್ತು. ಇದೇ ವಿಚಾರಕ್ಕೆ ಸಿಬಿಐ ಕಚೆರಿಯಲ್ಲಿ ಗೋವಿಂದರಾಜು ವಿಚಾರಣೆಯನ್ನೂ ಎದುರಿಸಿದ್ದರು. ಇದನ್ನೂ ಓದಿ: ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಪ್ರತಾಪ್‌ ಸಿಂಹ ಸೇರಿ ಮೂವರು ಸಲ್ಲಿಸಿದ್ದ ಅರ್ಜಿ ವಜಾ

    ನೆಕ್ಕಂಟಿ ನಾಗರಾಜ್‌ನಿಂದ ನಾನು 60 ಲಕ್ಷ ರೂ. ಸಾಲ ಪಡೆದಿದ್ದೆ ಎಂದು ಹೇಳಿಕೆ ಕೊಟ್ಟಿದ್ದರು. ಅಲ್ಲದೇ ಡಿಸೆಂಬರ್ ವೇಳೆಗೆ ಸಾಲದ ಹಣವನ್ನು ವಾಪಸ್‌ ನೀಡುವುದಾಗಿಯೂ ಗೋವಿಂದರಾಜು ಹೇಳಿದ್ದರು.

    ಈ ಬೆನ್ನಲ್ಲೇ ಸಿಬಿಐ ಗೋವಿಂದರಾಜು ಹಾಗೂ ಅವರ ತಂದೆ ಕುಮಾರಸ್ವಾಮಿ ಮನೆ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ ಸಿಬಿಐ ಅಧಿಕಾರಿಗಳು ಬ್ಯಾಂಕ್ ವಹಿವಾಟಿನ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ಸಂಗ್ರಹಿಸಿ, ಬ್ಯಾಂಕ್ ವಹಿವಾಟಿನ ಕುರಿತು ದಾಖಲೆಗಳನ್ನ ಮುಂದಿಟ್ಟುಕೊಂಡು ತಂದೆ ಮಗ ಇಬ್ಬರಿಗೂ ಸಿಬಿಐ ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ.

  • ವಾಲ್ಮೀಕಿ ಹಗರಣ| ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ – ಎಸ್‌ಐಟಿ ರದ್ದು, ಸಿಬಿಐ ತನಿಖೆಗೆ ಆದೇಶ

    ವಾಲ್ಮೀಕಿ ಹಗರಣ| ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ – ಎಸ್‌ಐಟಿ ರದ್ದು, ಸಿಬಿಐ ತನಿಖೆಗೆ ಆದೇಶ

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Board) ಬಹುಕೋಟಿ ಹಣ ದುರ್ಬಳಕೆ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸಿ ಹೈಕೋರ್ಟ್‌ (High Court) ಮಹತ್ವದ ಆದೇಶ ಪ್ರಕಟಿಸಿದೆ.

    ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ವಿಶೇಷ ತನಿಖಾ ತಂಡದ (SIT) ತನಿಖೆಯನ್ನು ರದ್ದುಗೊಳಿಸಿದೆ. ಅಷ್ಟೇ ಅಲ್ಲದೇ ಎಸ್‌ಐಟಿ ಸಂಗ್ರಹಿಸಿದ ಎಲ್ಲಾ ದಾಖಲೆಗಳನ್ನು ಸಿಬಿಐಗೆ ವರ್ಗಾಯಿಸುವಂತೆ ಆದೇಶಿಸಿದೆ.

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank Of India) ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ 2024ರ ಸೆಪ್ಟೆಂಬರ್ 30ರಂದು ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಹೈಕೋರ್ಟ್‌ ಆದೇಶದಿಂದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

    ಬೆಂಗಳೂರು ಪೂರ್ವ ವಲಯದ ಯೂನಿಯನ್ ಬ್ಯಾಂಕ್‌ ಡಿಜಿಎಂ ಜೆ. ಮಹೇಶ್ ಎಂಬುವವರು ಸರ್ಕಾರಿ ಅಧಿಕಾರಿಗಳು,‌ ಜನಪ್ರತಿನಿಧಿಗಳು, ಖಾಸಗಿ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳ ಪತ್ರದ ಅನ್ವಯ ಬ್ಯಾಂಕಿನ ಮೂವರು ಸೇರಿ ಐವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲು ಮಾಡಿ ಈಗಾಗಲೇ ತನಿಖೆ ಆರಂಭಿಸಿದೆ.  ಇದನ್ನೂ ಓದಿ: ಹೆಚ್ಚುತ್ತಿರುವ ಹೃದಯಾಘಾತ ಮೈಸೂರಿನ ಜಯದೇವ ಆಸ್ಪತ್ರೆಗೆ ತಪಾಸಣೆಗೆ ಬರುವವರ ಸಂಖ್ಯೆ ದಿಢೀರ್ ಏರಿಕೆ

    ಏನಿದು ಪ್ರಕರಣ?
    ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ (Chandrashekaran) ಇತ್ತೀಚೆಗೆ ಶಿವಮೊಗ್ಗದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ ಮೂವರು ಹೆಸರು ಹಾಗೂ ಬಹುಕೋಟಿ ಹಗರಣ ನಡೆದಿರುವ ಬಗ್ಗೆ ಉಲ್ಲೇಖಿಸಿದ್ದರು. ಈ ಬೆನ್ನಲ್ಲೇ ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್‌, ಮೆಸೇಜ್‌ ಬಂದಿಲ್ಲ. ಬ್ಯಾಂಕ್‌ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

    ಈ ಪ್ರಕರಣಕ್ಕೆ ಸಂಬಂದಿಸಿದಂತೆ ಜಾರಿ ನಿರ್ದೇಶನಾಲಯ ಸಹ ತನಿಖೆ ನಡೆಸುತ್ತಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಶಾಸಕ ನಾಗೇಂದ್ರ ನಿಗಮದ ಅಧ್ಯಕ್ಷರಾದ, ಶಾಸಕ ಬಸನಗೌಡ ದದ್ದಲ್‌ ಅವರು ಈ ಹಣವನ್ನು ಲೋಕಸಭಾ ಚುನಾವಣೆಗೆ ಬಳಕೆ ಮಾಡಿರುವ ಬಗ್ಗೆ ಆರೋಪ ಬಂದಿದೆ. ಈ ಹಗರಣದ ಬಗ್ಗೆ ತನಿಖೆ ನಡೆಸಿದ್ದ ಎಸ್‌ಐಟಿ ನಾಗೇಂದ್ರ ಮತ್ತು ದದ್ದಲ್‌ ಅವರಿಗೆ ಕ್ಲಿನ್‌ ಚಿಟ್‌ ನೀಡಿತ್ತು.

  • ನನ್ನ ಮನೆಯಲ್ಲಿ ಒಂದು ತುಂಡು ಸೀಜ್‌ ಆಗಿಲ್ಲ: ನಾರಾ ಭರತ್‌ ರೆಡ್ಡಿ

    ನನ್ನ ಮನೆಯಲ್ಲಿ ಒಂದು ತುಂಡು ಸೀಜ್‌ ಆಗಿಲ್ಲ: ನಾರಾ ಭರತ್‌ ರೆಡ್ಡಿ

    ಬಳ್ಳಾರಿ: ನನ್ನ ಮನೆಯಲ್ಲಿ ಒಂದು ತುಂಡನ್ನೂ ಸೀಜ್‌ ಮಾಡಿಲ್ಲ ಎಂದು ಕಾಂಗ್ರೆಸ್‌ (Congress)  ಶಾಸಕ ನಾರಾ ಭರತ್‌ ರೆಡ್ಡಿ (Nara Bharat Reddy) ಹೇಳಿದ್ದಾರೆ.

    ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸತತ 14 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ (ED) ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ಎರಡು ಬ್ಯಾಗ್‌ನಲ್ಲಿ ಸಂಗ್ರಹಿಸಿ ತೆಗೆದುಕೊಂಡು ಹೋಗಿದ್ದಾರೆ.

    ಇಡಿ ವಿಚಾರಣೆ ಅಂತ್ಯದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಾರಾ ಭರತ್‌ ರೆಡ್ಡಿ, ಇಡಿ ಅಧಿಕಾರಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ನಮ್ಮ ವ್ಯವಹಾರ, ವಾಲ್ಮೀಕಿ ನಿಗಮದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ: ದಿನೇಶ್ ಗುಂಡೂರಾವ್

     

    ವಿಚಾರಣೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದೇನೆ. ಪಂಚನಾಮೆ ಮಾಡಿದ್ದು ಅದರಲ್ಲಿ ಸ್ಪಷ್ಟವಾಗಿ ಏನನ್ನೂ ವಶಪಡಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ. 40 ಕೋಟಿ ರೂ., 50 ಕೋಟಿ ರೂ. ಜಪ್ತಿಯಾಗಿದೆ ಎಂದು ಹರಿದಾಡುತ್ತಿದೆ. ಇದೆಲ್ಲ ಸುಳ್ಳು ಮಾಹಿತಿ ಎಂದು ಹೇಳಿದರು. ಇದನ್ನೂ ಓದಿ: ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ; ಮತದಾರರಿಗೆ ತಲಾ 200 ರೂ. ಹಂಚಿಕೆ – ಯಾವ ಕ್ಷೇತ್ರಕ್ಕೆ ಎಷ್ಟು?

    ರಾಜಕೀಯ ಅಂದರೆ ವಿರೋಧ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ಆದರೆ ಯಾರು ಏನೇ ಮಾಡಿದರೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಜನರ ಪ್ರೀತಿಯಿಂದ ಗೆದ್ದಿದ್ದೇನೆ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ ಎಂದು ತಿಳಿಸಿದರು.

    ಮುಂದೆ ಅಧಿಕಾರಿಗಳು ಏನೇ ದಾಖಲಾತಿ ಕೊಟ್ಟರೆ ಅವರಿಗೆ ಕೊಡುವೆ. ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿಲ್ಲ ಎಂದು ಈ ವೇಳೆ ಹೇಳಿದರು.

  • ವಾಲ್ಮೀಕಿ ಹಗರಣ ತನಿಖೆಗೂ ಇ.ಡಿಗೂ ಏನ್ ಸಂಬಂಧ? – ಬಸವರಾಜ ರಾಯರೆಡ್ಡಿ

    ವಾಲ್ಮೀಕಿ ಹಗರಣ ತನಿಖೆಗೂ ಇ.ಡಿಗೂ ಏನ್ ಸಂಬಂಧ? – ಬಸವರಾಜ ರಾಯರೆಡ್ಡಿ

    – ಬಳ್ಳಾರಿಯಲ್ಲಿ ಇಡಿ ದಾಳಿಗೆ ರಾಯರೆಡ್ಡಿ ಖಂಡನೆ
    – ಕಾಂಗ್ರೆಸ್ ನಾಯಕರನ್ನ ಕುಗ್ಗಿಸಲು ದಾಳಿ

    ನವದೆಹಲಿ: ವಾಲ್ಮೀಕಿ ಹಗರಣ (Valmiki Scam) ತನಿಖೆಗೂ ಇಡಿಗೂ (ED) ಏನು ಸಂಬಂಧ ಎಂದು ಬಳ್ಳಾರಿಯಲ್ಲಿ ಸಂಸದ ಹಾಗೂ ಮೂವರು ಶಾಸಕರ ಮನೆ ಮೇಲೆ ಇಡಿ ದಾಳಿಯನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraj Rayareddy) ಖಂಡಿಸಿದ್ದಾರೆ.

    ಈ ಕುರಿತು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಟಿ ಹಾಗೂ ಇಡಿ ಇತ್ತಿಚಿನ ವರ್ಷಗಳಲ್ಲಿ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸೇಡಿನ ರಾಜಕರಣ ಮಾಡುತ್ತಿದೆ. ಬರೀ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ಮಾಡೋದು ಸರಿಯಲ್ಲ. ಇದು ಪೂರ್ವ ನಿಯೋಜಿತ, ಇದು ಸರಿಯಿಲ್ಲ. ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ದಾಳಿ ಮಾಡಲಾಗುತ್ತಿದೆ. ವಾಲ್ಮೀಕಿ ಹಗರಣ ಆಗಿಲ್ಲ ಎಂದು ಹೇಳುತ್ತಿಲ್ಲ. ತನಿಖೆ ನಡೆಯುತ್ತಿದೆ, ತನಿಖೆಯಿಂದ ಸತ್ಯ ಹೊರ ಬರಲಿದೆ. ತನಿಖೆ ಆಗಲಿ ಎಂದರು. ಇದನ್ನೂ ಓದಿ: ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ; ಮತದಾರರಿಗೆ ತಲಾ 200 ರೂ. ಹಂಚಿಕೆ – ಯಾವ ಕ್ಷೇತ್ರಕ್ಕೆ ಎಷ್ಟು?

    ಜಾತಿ ಗಣತಿ ಸರ್ವೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಸಿಎಂ ಸಿದ್ದರಾಮಯ್ಯಗೆ ಹಿನ್ನಡೆ ಅಲ್ಲ. ವರದಿ ಪ್ರಕಟಿಸಿ ಎಂದು ನಾನೇ ಮೊದಲು ಹೇಳಿದ್ದು. ಸತ್ಯ ಹೊರಬರಲಿ ಎಂದು ಸಿಎಂಗೆ ನಾನು ಮೊದಲೇ ಹೇಳಿದ್ದೆ. ಸಮೀಕ್ಷೆ ತಿದ್ದುಪಡಿ ಮಾಡಿ ಅಂತಾ ಹೇಳಿದ್ದೆ. ಹತ್ತು ವರ್ಷಗಳ ಹಿಂದೆ ಮಾಡಿದ್ದ ಸರ್ವೆ ಸರಿಯಿಲ್ಲ ಎಂದು ಹಲವರು ಹೇಳಿದ್ದರು. ಸದ್ಯ ಹೈಕಮಾಂಡ್ ಕೂಡ ಮರುಸರ್ವೆ ಮಾಡಲು ಹೇಳಿದೆ. ಪ್ರಬಲ ಸಮುದಾಯದ ಒತ್ತಾಯ ಅಂತಾ ಅಲ್ಲ, ಜಾತಿ ಸಮೀಕ್ಷೆ ಮಾಡುವಾಗ ಬರೆಸುವಾಗ ಸರಿಯಾಗಿ ಬರೆಸಿದ್ದರೆ ಹಾಗೆ ಆಗುತ್ತಿರಲಿಲ್ಲ. ಸರಿಯಾಗಿ ಬರೆಸಿ ಎಂದು ಆಯಾ ಮುಖಂಡರು ಹೇಳಿದ್ದಾರೆ. ಹೀಗಾಗಿ ಆಯಾ ಮುಖಂಡರು ಸರಿಯಾಗಿ ಹೇಳಿ ಬರೆಸಲಿ. ಈ ಬಾರಿ ಸರಿಯಾಗಿ ಬರೆಸಿದರೆ ಯಾವುದೇ ತೊಂದರೆ ಆಗಲ್ಲ. ಆಧಾರ್ ಪಡೆದು ಅದರ ಮೇಲೆ ಸಹಿ ಹಾಕಿ ಈ ಬಾರಿ ಜಾತಿ ಸಮೀಕ್ಷೆ ನಡೆಸಲು ಸಲಹೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ – ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು

    ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಮಾತನಾಡಿದ ಅವರು, ಇದೆಲ್ಲಾ ಊಹಾಪೋಹ. ಪುನರ್ ರಚನೆ ವಿಚಾರ ಸಿಎಂಗೆ ಬಿಟ್ಟದ್ದು. ನಾನು 8 ಬಾರಿ ಶಾಸಕನಾದವನು, ನನ್ನ ಸಚಿವರಾಗಿ ಮಾಡಬೇಕು ಅಂದರೆ ಮಾಡಲಿ. ಸಚಿವರಾಗಿ ಮಾಡಿದರೆ ಸೇವೆ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ – ಬೆಂಕಿ ತಗುಲಿ 48 ಗಂಟೆ ಕಳೆದ್ರೂ ಆರದ ಬೆಂಕಿಯ ಜ್ವಾಲೆ

  • ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ; ಮತದಾರರಿಗೆ ತಲಾ 200 ರೂ. ಹಂಚಿಕೆ – ಯಾವ ಕ್ಷೇತ್ರಕ್ಕೆ ಎಷ್ಟು?

    ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ಹಣ ಬಳಕೆ; ಮತದಾರರಿಗೆ ತಲಾ 200 ರೂ. ಹಂಚಿಕೆ – ಯಾವ ಕ್ಷೇತ್ರಕ್ಕೆ ಎಷ್ಟು?

    ಬಳ್ಳಾರಿ/ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು (Valmiki Scam) ಬಳ್ಳಾರಿ ಚುನಾವಣೆಗೆ (Bellary Election) ಬಳಸಿಕೊಂಡಿರುವ ಆರೋಪದಡಿ ಸಂಸದ ತುಕಾರಾಂ ಹಾಗೂ ಮೂವರು ಶಾಸಕರ ಮನೆ ಹಾಗೂ ಕಚೇರಿಗಳ ಮೇಲೆ ಇಡಿ (ED) ದಾಳಿ ನಡೆಸಿದೆ. ವಾಲ್ಮೀಕಿ ನಿಗಮದ ಹಣದಲ್ಲಿ ಮತದಾರರಿಗೆ ತಲಾ 200 ರೂ. ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಸಂಸದ ತುಕಾರಾಂ ಅವರನ್ನು ಇಡಿ ವಶಕ್ಕೆ ಪಡೆದಿದೆ.

    ನಾಗೇಂದ್ರ ಪಿಎ ವಿಜಯ್ ಕುಮಾರ್ ಗೌಡಗೆ ಎಲೆಕ್ಷನ್ ಹಣ ಹಂಚುವ ಹೊಣೆ ವಹಿಸಲಾಗಿತ್ತು ಅನ್ನೋದು ಇಡಿ ತನಿಖೆಯಲ್ಲಿ ಗೊತ್ತಾಗಿತ್ತು. ಈ ಬಗ್ಗೆ ವಿಜಯ್ ಕುಮಾರ್ ಗೌಡ ಕೂಡ ಇಡಿಗೆ ಹೇಳಿಕೆ ಕೊಟ್ಟಿದ್ದಾರೆ. ನಾಗೇಂದ್ರ ಸೂಚನೆ ಮೇರೆಗೆ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಹಂಚಿರುವುದಾಗಿ ವಿಜಯ್ ಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ವಿಜಯ್ ಕುಮಾರ್ ಮೊಬೈಲ್ ಫೋನ್‌ನಲ್ಲಿ ಕಂತೆ ಕಂತೆ ಹಣದ ಫೋಟೋ ಕೂಡ ಪತ್ತೆಯಾಗಿದೆ. ಇದನ್ನೂ ಓದಿ:  ಜನಾರ್ದನ ರೆಡ್ಡಿಗೆ ಬಿಗ್‌ ರಿಲೀಫ್‌ – ತೆಲಂಗಾಣ ಹೈಕೋರ್ಟ್‌ನಿಂದ ಜಾಮೀನು

    ಬಳ್ಳಾರಿ ಲೋಕಸಭೆ ವ್ಯಾಪ್ತಿಯ ಯಾವಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಕೋಟಿ ಕೊಡಲಾಗಿದೆ ಎಂಬ ಪಟ್ಟಿಯೂ ಮೊಬೈಲ್‌ನಲ್ಲಿ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ತುಕಾರಾಂ ಪರ ಮತದಾರರಿಗೆ ಹಣ ಹಂಚಲಾಗಿದೆ ಎಂಬ ಗಂಭೀರ ಆರೋಪವನ್ನು ಇಡಿ ಮಾಡಿದೆ. ವಾಲ್ಮೀಕಿ ನಿಗಮದ ಹಣದಲ್ಲಿ ಮತದಾರರಿಗೆ ತಲಾ 200 ರೂ. ಹಂಚಲಾಗಿದೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ಕೇರಳ ಕರಾವಳಿಯಲ್ಲಿ ಹಡಗು ಅಗ್ನಿ ದುರಂತ – ಬೆಂಕಿ ತಗುಲಿ 48 ಗಂಟೆ ಕಳೆದ್ರೂ ಆರದ ಬೆಂಕಿಯ ಜ್ವಾಲೆ

    ಯಾವ ಕ್ಷೇತ್ರಕ್ಕೆ ಎಷ್ಟು ಹಂಚಿಕೆ?
    ಬಳ್ಳಾರಿ ಗ್ರಾಮಾಂತರ – 5,23,72,400 ರೂ.
    ಬಳ್ಳಾರಿ ನಗರ – 3,75,00,000 ರೂ.
    ಕಂಪ್ಲಿ – 3,38,00,000 ರೂ.
    ಕೂಡ್ಲಿಗಿ – 3,16,00,00 ರೂ.

  • ವಾಲ್ಮೀಕಿ ಹಗರಣ | ಸಿಬಿಐ ತನಿಖೆ ಚುರುಕು ಮೂವರು ಆರೋಪಿಗಳಿಗೆ ನೋಟಿಸ್

    ವಾಲ್ಮೀಕಿ ಹಗರಣ | ಸಿಬಿಐ ತನಿಖೆ ಚುರುಕು ಮೂವರು ಆರೋಪಿಗಳಿಗೆ ನೋಟಿಸ್

    – ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗುತ್ತಾ?

    ಬೆಂಗಳೂರು: ವಾಲ್ಮೀಕಿ ಬಹುಕೋಟಿ ಹಗರಣ (Valmiki Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI)  ತನಿಖೆಯನ್ನು ಚುರುಕುಗೊಳಿಸಿದೆ. ಪ್ರಕರಣದ ಮೂವರು ಆರೋಪಿಗಳಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಪ್ರಕರಣದ ಪ್ರಮುಖ ಆರೋಪಿ ಚಂದ್ರಮೋಹನ್ ಮತ್ತು ಕುಟುಂಬಸ್ಥರಿಗೆ ಸಿಬಿಐ ನೋಟಿಸ್ ನೀಡಿದ್ದು, ಈ ಹಿಂದೆ ಚಂದ್ರಮೋಹನ್ ವಾಲ್ಮೀಕಿ ಪ್ರಕರಣದಲ್ಲಿ 89 ಕೋಟಿ ರೂ. ವರ್ಗಾವಣೆ ಮಾಡಿದ್ದ ಆರೋಪ ಹೊಂದಿದ್ದರು.ಇದನ್ನೂ ಓದಿ: ಕರ್ನಾಟಕದಲ್ಲಿ ದ್ವೇಷ ಭಾಷಣಕ್ಕೆ 3 ವರ್ಷ ಜೈಲು – ಹೊಸ ಬಿಲ್ ತರಲು ರಾಜ್ಯ ಸರ್ಕಾರ ಸಿದ್ಧತೆ?

    ಕೋಟಿ ಕೋಟಿ ಹಣವನ್ನು ಶೇಕಡಾವಾರು ಲೆಕ್ಕದಲ್ಲಿ ವಹಿವಾಟು ಮಾಡಿದ್ದ ಚಂದ್ರಮೋಹನ್ 100ಕ್ಕೂ ಹೆಚ್ಚು ನಕಲಿ ಅಕೌಂಟ್‌ಗಳ ಸೃಷ್ಟಿ ಮಾಡಿ ಚಂದ್ರಮೋಹನ್ ಹಾಗೂ ಕುಟುಂಬಸ್ಥರು ಸೇರಿ ಹಣ ಗಳಿಸಿದ್ದರು.

    ಈಗಾಗಲೇ ಪರಶುರಾಮ್, ಸತ್ಯನಾರಾಯಣ ಇಟಕಾರಿಗೆ ನೋಟಿಸ್ ನೀಡಿದ್ದ ಸಿಬಿಐ ಇದೀಗ ವಿಚಾರಣೆ ನಡೆಸುತ್ತಿದೆ.ಇದನ್ನೂ ಓದಿ: ರಘು ಪಾಂಡೇಶ್ವರ ಈಗ ಅಧಿಪತ್ರದ ಪಟ್ಟಾಭಿರಾಮ!

  • ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಕಾಂಗ್ರೆಸ್: ರೇಣುಕಾಚಾರ್ಯ ವಾಗ್ದಾಳಿ

    ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಕಾಂಗ್ರೆಸ್: ರೇಣುಕಾಚಾರ್ಯ ವಾಗ್ದಾಳಿ

    ಬೆಂಗಳೂರು: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ (Siddaramaiah) ಮತ್ತು ಕಾಂಗ್ರೆಸ್ ಎಂದು ಮಾಜಿ ಸಚಿವ ರೇಣುಕಾಚಾರ್ಯ ( M P Renukacharya) ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿಯಿಂದ (BJP) ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಸಿಎಂ ಆರೋಪ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸಿಎಂ ಆದ್ಮೇಲೆ ದ್ವೇಷದ ರಾಜಕೀಯ ಮಾಡ್ತಿದ್ದಾರೆ. ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ತಮ್ಮ ಮೇಲೆ ವಾಲ್ಮೀಕಿ, ಮುಡಾ, ವಕ್ಫ್ ವಿವಾದ ಇದೆ. ಅಲ್ಪಸಂಖ್ಯಾತರ ಗುತ್ತಿಗೆದಾರಿಗೆ ಶೇ.4 ಮೀಸಲಾತಿ ನೀಡುವ ವಿವಾದ ಇದೆ. ಯಾವಾಗ ಮುಡಾ ತನಿಖೆ ಗಂಭೀರವಾಗಲು ಪ್ರಾರಂಭ ಆಯ್ತೋ ಆಗ ಕೋವಿಡ್ ವಿಚಾರದಲ್ಲಿ ಯಡಿಯೂರಪ್ಪ ಮೇಲೆ ಎಸ್‌ಐಟಿ ರಚನೆ ಮಾಡಿರುವುದಕ್ಕೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದಾರೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ

    SIDDARAMAIHA SPOKE

    ಸಿದ್ದರಾಮಯ್ಯ ಮುಡಾ (MUDA) ಸೈಟ್ ವಾಪಸ್ ಕೊಡಲಿಲ್ವಾ? ನೀವು ಅಧಿವೇಶನದಲ್ಲಿ 63 ಕೋಟಿ ರೂ. ಕೇಳಿದ್ರಿ ನಿಮಗೆ ಯಾವ ನೈತಿಕತೆ ಇದೆ? ವರ್ಗಾವಣೆ ದಂಧೆಯಲ್ಲಿ ಹಗಲುದರೋಡೆ ಮಾಡಿದ್ದೀರಾ. ಯಾದಗಿರಿಯಲ್ಲಿ ಪಿಎಸ್‌ಐ ಸಾವು ಆಯ್ತು. ಬೆಳಗಾವಿಯಲ್ಲಿ ಎಸ್‌ಡಿಎ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಸಿದ್ದರಾಮಯ್ಯನವರೇ ಭ್ರಷ್ಟಾಚಾರಕ್ಕೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಾ? ಎಸ್‌ಐಟಿ ಅಂದರೆ ಸಿದ್ದರಾಮಯ್ಯ, ಶಿವಕುಮಾರ್ ಇನ್ವೆಸ್ಟಿಗೆಷನ್ ಟೀಮ್ ಎಂದು ಹೇಳಿದರು. ಇದನ್ನೂ ಓದಿ: ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್‌

    ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಮೇಲೆ ಎಸ್‌ಐಟಿ ರಚನೆ ಮಾಡಿದ್ರಿ. ಇಡಿ ಪ್ರವೇಶ ಆದ್ಮೇಲೆ ಇಂಚಿಂಚಾಗಿ ಭ್ರಷ್ಟಾಚಾರ ಬಯಲಿಗೆ ಎಳೆದರು. ವಾಲ್ಮೀಕಿ ನಿಗಮದ ಹಣ ಎಲ್ಲೆಲ್ಲಿಗೆ ಹೋಯ್ತು? ಭ್ರಷ್ಟಾಚಾರ ಸಾಬೀತು ಆಯ್ತು ನಾಗೇಂದ್ರ ರಾಜೀನಾಮೆ ಕೊಟ್ರು. ನಾಗೇಂದ್ರ ಅವರನ್ನು ಮತ್ತೆ ಸಚಿವರಾಗಿ ಮಾಡ್ತೀವಿ ಅಂತ ಸಿದ್ದರಾಮಯ್ಯ ಹೇಳ್ತಾರೆ. ಮೈಕಲ್ ಡಿ ಕುನ್ಹಾ ಮಧ್ಯಂತರ ವರದಿಯಲ್ಲಿ ಯಡಿಯೂರಪ್ಪ (B S Yediyurappa) ಹಾಗೂ ಶ್ರೀರಾಮುಲು ಮೇಲೆ ತಮಗೆ ಬೇಕಾದ ರೀತಿಯಲ್ಲಿ ರಾಜಕೀಯ ಪ್ರೇರಿತರಾಗಿ ವರದಿ ತಯಾರಿ ಮಾಡಿದ್ದೀರಾ, ಕೋವಿಡ್‌ನಲ್ಲಿ ಮೋದಿಯವರು ದೇಶದ ರಕ್ಷಣೆ ಮಾಡಿದ್ರು. ನಿಮ್ಮ ಸರ್ಕಾರ ಇರಲ್ಲ ಪತನವಾಗಲಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ವಕ್ಫ್ ಹೋರಾಟದ ವಿಚಾರದಲ್ಲಿ ರಾಜ್ಯಾಧ್ಯಕ್ಷರ ನಿರ್ಧಾರವೇ ಅಂತಿಮ: ಯತ್ನಾಳ್ ಟೀಂಗೆ ರೇಣುಕಾಚಾರ್ಯ ತಿರುಗೇಟು

  • 50 ಶಾಸಕರಿಗೆ 2,500 ಕೋಟಿ ಬೇಕು, ಯಾರ ಬಳಿ ಇದೆ ಅಷ್ಟೊಂದು ಹಣ? – ಬೊಮ್ಮಾಯಿ

    50 ಶಾಸಕರಿಗೆ 2,500 ಕೋಟಿ ಬೇಕು, ಯಾರ ಬಳಿ ಇದೆ ಅಷ್ಟೊಂದು ಹಣ? – ಬೊಮ್ಮಾಯಿ

    – ಸಿಎಂ ಆರೋಪ ಆಧಾರ ರಹಿತ ಎಂದ ಸಂಸದ

    ಹಾವೇರಿ: ಮುಖ್ಯಮಂತ್ರಿಗಳು 50 ಜನ ಕಾಂಗ್ರೆಸ್‌ನ (Congress) ಶಾಸಕರನ್ನು ಖರೀದಿ ಮಾಡುತ್ತೇವೆ ಅಂತ ಆರೋಪ ಮಾಡಿದ್ದಾರೆ. 50 ಶಾಸಕರ ಖರೀದಿಗೆ 2,500 ಕೋಟಿ ರೂ. ಬೇಕಾಗುತ್ತದೆ. ಯಾರ ಬಳಿ ಇದೆ ಅಷ್ಟೊಂದು ಹಣ? ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.

    ಈ ಬಗ್ಗೆ ಹಾವೇರಿಯಲ್ಲಿ (Haveri) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಬ್ಬ ರಾಜಕಾರಣಿ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆಪಾದನೆಯ ದಿಕ್ಕನ್ನ ಬೇರೆ ಕಡೆ ತಿರುಗಿಸಲು ಹೀಗೆ ಹೇಳುತ್ತಿದ್ದಾರೆ. ಅವರು ಬಹಳ ಗೊಂದಲದಿಂದ ಹತಾಶೆರಾಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ದೆಹಲಿಗೆ ಬರುತ್ತಿದ್ದಂತೆ ಗ್ಯಾಸ್ ಚೇಂಬರ್‌ಗೆ ಪ್ರವೇಶಿಸಿದಂತಾಯ್ತು: ಪ್ರಿಯಾಂಕಾ ಗಾಂಧಿ

    ಸಿದ್ದರಾಮಯ್ಯ (Siddaramaih) ಮೂರುವರೆ ವರ್ಷ ನಾನೇ ಸಿ.ಎಂ ಅಂತಾರೆ. ಮತ್ತೊಂದು ಕಡೆ ನನಗೆ ಶಕ್ತಿ ಕೊಡಿ ಐದು ವರ್ಷ ಅಧಿಕಾರ ಪೂರ್ಣ ಮಾಡಬೇಕು ಅಂತಾರೆ. ಮಳೆ ಹಾನಿಗೆ ಸಾಕಷ್ಟು ಬೆಳೆಗಳು ಹಾನಿಯಾಗಿದೆ. ಒಂದೇ ಒಂದು ಪರಿಹಾರ ಬರುತ್ತಿಲ್ಲ, ಸರ್ಕಾರ ಗೊಂದಲದಲ್ಲಿದೆ. ಮುಸ್ಲಿಂ ಗುತ್ತಿಗೆದಾರರಿಗೆ ನಾಲ್ಕು ರಿಯಾಯಿತಿ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣದಲ್ಲಿ ಕೂಡ ಸೈಟ್ ತೆಗೆದುಕೊಂಡಿಲ್ಲ ಎಂದು ಹೇಳಿ ವಾಪಸ್ ಕೊಡುತ್ತೇವೆ ಎನ್ನುತ್ತಾರೆ ಇದು ಯೂಟರ್ನ್ ಸರ್ಕಾರ ಎಂದು ಗುಡುಗಿದರು. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ – ಪ್ರಾಥಮಿಕ ಶಾಲೆಗಳಲ್ಲಿ ಆನ್‌ಲೈನ್ ಕ್ಲಾಸ್

    ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಅಧಿಕಾರಿ ಮೇಲೆ ದೊಡ್ಡ ಪ್ರಮಾಣದ ರಾಜಕೀಯ ಒತ್ತಡ ಹಾಕುತ್ತಾರೆ. ಪ್ರತಿಯೊಂದು ಇಲಾಖೆಯಲ್ಲಿ ಕಲೆಕ್ಷನ್ ಸೆಂಟರ್‌ಗಳು ಆಗಿದೆ. ಮುಖ್ಯಮಂತ್ರಿಗಳು ಇವತ್ತು ನನ್ನ ಮುಟ್ಟಿದರೆ ಜನರು ಸುಮ್ಮನೆ ಇರಲ್ಲ ಅಂದಿದ್ದಾರೆ. ಮುಖ್ಯಮಂತ್ರಿ ಹೇಳಿದಾಗ ಜನರು ಸುಮ್ಮನೆ ಇರುವುದಿಲ್ಲ ನಿಜ. ಜನರು ಪರವಾನಗಿ ಕೆಲಸ ಮಾಡಿದಾಗ ಮಾತ್ರ ಸುಮ್ಮನೆ ಇರಲ್ಲ. ಸರ್ಕಾರದ ದುರಾಡಳಿತ ವಿರುದ್ಧವು ಸಹ ಜನರು ಸುಮ್ಮನೆ ಇರಲ್ಲ ಎಂದು ಹೇಳಿದರು. ಇದನ್ನೂ ಓದಿ: ‘108’ ಸಿಬ್ಬಂದಿಗೆ ಸರ್ಕಾರದಿಂದ ವೇತನ ಬಾಕಿ ಉಳಿಸಿಕೊಂಡಿಲ್ಲ: ದಿನೇಶ್ ಗುಂಡೂರಾವ್

    ಸರ್ಕಾರ ಖಬರಸ್ಥಾನಕ್ಕೆ ನೂರಾರು ಎಕರೆ ಜಮೀನು ನೀಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅದರಲ್ಲಿ ಆಶ್ಚರ್ಯ ಏನೂ ಇಲ್ಲ. ಇಂತಹ ಹಲವಾರು ನಿರ್ಣಯ ಮಾಡಿದ್ದಾರೆ. ಇವರು ತುಷ್ಠೀಕರಣ ರಾಜಕಾರಣ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ನೈತಿಕತೆ ಕುಸಿದು ಹೋಗಿದೆ. ಪೊಲೀಸ್ ಠಾಣೆಯ ಮೇಲೆ ದಾಳಿ ಆದರೂ ಕೇಸ್ ಮಾಡಲು ಪೋಲೀಸರು ಮುಂದೆ ಬಂದರು ಸಹ, ಅದನ್ನ ತೆಗೆದು ಹಾಕಲು ಸರ್ಕಾರ ಅನುಮೊದನೆ ನೀಡುತ್ತದೆ. ಅಲ್ಲದೆ ವಕ್ಫ್ ಬೋರ್ಡ್ ಎಂದು ಎಲ್ಲಾ ಕಡೆ ನೋಟಿಸ್ ಕೊಟ್ಟಿದ್ದಾರೆ. ನಾವು ಕೂಡಾ ಸಂಪೂರ್ಣವಾಗಿ ಕಾನೂನು ಹೋರಾಟ ಮಾಡುತ್ತೇವೆ. ಹಾವೇರಿ ಜಿಲ್ಲೆಯ ಜಮೀನು, ಮಠ, ಶಾಲೆ ,ಕೆರೆ ಅವುಗಳ ದಾಖಲೆಗಳನ್ನ ಕೊಟ್ಟರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮೋದಿ ತಮ್ಮ ಜೀವನದಲ್ಲಿ ಒಮ್ಮೆಯೂ ಸಂವಿಧಾನ ಓದಿಲ್ಲ: ರಾಹುಲ್‌ ಗಾಂಧಿ

  • ನಾನೇನು ತಪ್ಪು ಮಾಡಿಲ್ಲ- ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ನಾಗೇಂದ್ರ ಕಣ್ಣೀರು

    ನಾನೇನು ತಪ್ಪು ಮಾಡಿಲ್ಲ- ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ನಾಗೇಂದ್ರ ಕಣ್ಣೀರು

    – ಪರಪ್ಪನ ಅಗ್ರಹಾರ ಗೋಡೆ ಮೇಲೆ ಬಿಜೆಪಿ ನಾಯಕರ ಹೆಸರು ಬರೆದು ಬಂದಿರುವೆ

    ಬಳ್ಳಾರಿ: ನಾನು ತಪ್ಪೇ ಮಾಡಿಲ್ಲ, ಇದೆಲ್ಲ ಸುಳ್ಳು ಆರೋಪ. ಸಣ್ಣ ದೋಷ ಇಲ್ಲದೇ ಹೊರ ಬರುವೆ ಎಂದು ಬಳ್ಳಾರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ (Valmiki Jayanti) ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಕಣ್ಣೀರು ( B Nagendra) ಹಾಕಿದ್ದಾರೆ.

    ಬಳ್ಳಾರಿಯಲ್ಲಿ (Ballari) ನಡೆದ ವಾಲ್ಮೀಕಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಯಾವುದೇ ತಪ್ಪು ಮಾಡಿಲ್ಲ, ಇದೆಲ್ಲ ಸುಳ್ಳು ಆರೋಪವಾಗಿದೆ. ಸಣ್ಣ ದೋಷ ಇಲ್ಲದೇ ಇದರಿಂದ ಹೊರ ಬರುತ್ತೇನೆ. ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬಿಜೆಪಿ ನಾಯಕರ ಹೆಸರು ಬರೆದು ಬಂದಿರುವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಬೇಡ ಅಂತ ನಿಖಿಲ್ ನನ್ನ ಬಳಿ ಹೇಳಿಕೊಂಡಿದ್ದಾರೆ: ಸಾರಾ ಮಹೇಶ್

    ನನ್ನ ವಿರುದ್ಧ ಷಡ್ಯಂತ್ರ ಆಗಿದೆ, ನಾನು ಅಕ್ರಮ ಮಾಡಿದ್ದೇನೆ ಎಂದು ನಂಬಿದ್ದಾರೆ. ನಾನು ಯಾರನ್ನೂ ನಂಬಿಸಬೇಕಿಲ್ಲ, ಈ ಸುಳ್ಳಿನ ಪ್ರಪಂಚದಲ್ಲಿ ಕೆಟ್ಟ ಕೆಲಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ. ನಾನು ಹಲವಾರು ಬಾರಿ ಜೈಲು ನೋಡಿದ್ದೇನೆ. ಇಂತಹ ಜೈಲಿಗೆ ಯಾವುದಕ್ಕೂ ನಾನು ಹೆದರಲಿಲ್ಲ. ಆದ್ರೆ ಒಂದು ಸುಳ್ಳು ಇಟ್ಟುಕೊಂಡು ಬಂದು ಇವರು ನನ್ನ ಮೇಲೆ ಗೂಬೆ ಕೂರಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀವೆಲ್ಲಾ ನೋಡುತ್ತಿರಿ, ಹಗರಣ ಎಂದು ಬಿಜೆಪಿಯಲ್ಲಿ (BJP) ಯಾರೆಲ್ಲಾ ಮಾತಾಡುತ್ತಿದ್ದಾರೆ ಅವರೆಲ್ಲರ ಹೆಸರನ್ನು ಜೈಲಿನ ಗೋಡೆಮೇಲೆ ಬರೆದು ಬಂದಿದ್ದೇನೆ. ಅವರೆಲ್ಲ ಜೈಲುಪಾಲಾಗುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡ| ಮಳೆ ಅವಾಂತರ- ಕೊಚ್ಚಿ ಹೋಯ್ತು ನಿರ್ಮಾಣ ಹಂತದಲ್ಲಿದ್ದ ರಸ್ತೆ

    ವಾಲ್ಮೀಕಿ ಸಮುದಾಯದ ಹುಡುಗನಾಗಿ ವಾಲ್ಮೀಕಿ ಜಯಂತಿ ದಿನ ವಾಲ್ಮೀಕಿ ಹಗರಣ ಎನ್ನುವ ಶಬ್ದ ಬಳಸಿ ಮಾತನಾಡುವುದಕ್ಕೆ ಬೇಸರ ಆಗುತ್ತಿದೆ. ನಾವು ಯಾವುದೇ ಹಗರಣ ಮಾಡಿಲ್ಲ. ಇದೆಲ್ಲ ಬಿಜೆಪಿಯ ಕುತಂತ್ರವಾಗಿದೆ. ಸಿಬಿಐ, ಇಡಿ ಬಳಸಿ ಸರ್ಕಾರ ಅಸ್ಥಿರ ಮಾಡುವ ಪ್ರಯತ್ನದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಈ ಪ್ರಕರಣದಿಂದ ಸಂಪೂರ್ಣ ಮುಕ್ತನಾಗುತ್ತೇನೆ ಎಂದರು. ಇದನ್ನೂ ಓದಿ: Lokmanya Tilak Express | ಇಂಜಿನ್‌ ಸೇರಿ ಹಳಿತಪ್ಪಿದ 8 ಬೋಗಿಗಳು

    ಜನಾರ್ದನ ರೆಡ್ಡಿ ಬಿಜೆಪಿಗೆ ಭಯ ಬಿದ್ದು ಕೋಮುವಾದಿ ಪಕ್ಷಕ್ಕೆ ಹೋಗಿದ್ದಾರೆ. ಇಡಿ, ಸಿಬಿಐ ಭಯಕ್ಕೆ ರೆಡ್ಡಿ ಬಿಜೆಪಿ ಪಕ್ಷ ಸೇರಿದ್ದಾರೆ. ಅವರು ಕೆಆರ್‌ಪಿಪಿ ಪಕ್ಷ ಕಟ್ಟಿದಾಗ ಬಿಜೆಪಿ ವಿರುದ್ಧ ಎಷ್ಟು ಆರೋಪ ಮಾಡಿದ್ರು? ನಾನು ಕಳೆದ ಮೂರು ತಿಂಗಳಲ್ಲಿ ಆದ ಇಡಿ ಕಿರುಕುಳವನ್ನ ಹೇಳಿಕೊಳ್ಳುವ ಸ್ವಾತಂತ್ರ‍್ಯ ಇದೆ, ಮಾತಾಡಿದ್ದೇನೆ. ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಮನೆ ಅಲ್ಲ ಅರಮನೆ ಮಾಡಿದ್ರು ಕಾಂಗ್ರೆಸ್ ಗೆಲುವು ಫಿಕ್ಸ್. ಜನಾರ್ದನ ರೆಡ್ಡಿ (Janardhan Reddy) ಬಳ್ಳಾರಿಗೆ ಬಂದಿರೋದು ನಮ್ಮ ಪಕ್ಷದ ಮೇಲೆ ಯಾವ ಪರಿಣಾಮ ಬೀರಲ್ಲ ಎಂದು ನುಡಿದರು. ಇದನ್ನೂ ಓದಿ: ಎರಡನೇ ಬಾರಿಗೆ ಹರಿಯಾಣ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕಾರ

    ಯುಪಿಎ ಸರ್ಕಾರ ಇದ್ದಾಗ ನಾಗೇಂದ್ರ ಜೈಲಿಗೆ ಹೋಗಿದ್ದರು ಎನ್ನುವ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಆಗ ನಾವು ಅವರ ಜೊತೆ ಇದ್ದಾಗ ನಾನು ಒಳ್ಳೆಯವನಿದ್ದೆ, ಈಗ ಪಕ್ಷ ಬದಲಾದಕೂಡಲೇ ನಾಗೇಂದ್ರ ಕೆಟ್ಟವನು ಆಗ್ತಾನಾ? ಜನಾರ್ದನ ರೆಡ್ಡಿ ಅವರಿಗೆ ಸ್ವಲ್ಪ ಆತ್ಮ ಸಾಕ್ಷಿ ಇದ್ರೆ ನೋಡಿಕೊಳ್ಳಲಿ. ಹೈ ವೋಲ್ಟೇಜ್ ಅಲ್ಲ, ಲಕ್ಷ ವೋಲ್ಟೆಜ್ ಇದ್ರೂ ನಾವೇ ಸಂಡೂರು ಗೆಲ್ಲೋದು. ಯಾರಿಗೆ ಎಷ್ಟು ವೋಲ್ಟೇಜ್ ಇದೆ ಎಂದು ಚುನಾವಣೆ ಬಳಿಕ ಗೊತ್ತಾಗಲಿದೆ. ಚುನಾವಣೆಯಲ್ಲಿ ತಂತ್ರ, ಪ್ರತಿ ತಂತ್ರ ಅಲ್ಲ ನಾವು ರಣ ತಂತ್ರ ಮಾಡುತ್ತೇವೆ. ಜನಾರ್ದನ ರೆಡ್ಡಿ ಅಲ್ಲ ಯಾರೇ ಬಂದರೂ ಸಂಡೂರಲ್ಲಿ ಕಾಂಗ್ರೆಸ್ ಗೆಲುವು ಫಿಕ್ಸ್ ಎಂದು ಹರಿಹಾಯ್ದರು. ಇದನ್ನೂ ಓದಿ: ಗಮನಿಸಿ, ರೈಲ್ವೇ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಅವಧಿ 120 ದಿನದಿಂದ 60 ದಿನಕ್ಕೆ ಕಡಿತ

  • ಮಾಜಿ ಸಚಿವ ನಾಗೇಂದ್ರ ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್‌

    ಮಾಜಿ ಸಚಿವ ನಾಗೇಂದ್ರ ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್‌

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ನಾಗೇಂದ್ರ (Nagendra) ಅವರು ಪರಪ್ಪನ ಅಗ್ರಹಾರ ಜೈಲಿಂದ ಬುಧವಾರ ಬಿಡುಗಡೆಯಾದರು.

    ನೆಚ್ಚಿನ ನಾಯಕ ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಬಲಿಗರು ಸಂಭ್ರಮಿಸಿದರು. ನಾಯಕನನ್ನು ಮೇಲೆತ್ತಿ ಕುಣಿದರು. ಹೂವಿನ ಹಾರ ಹಾಕಿ, ಬೂದಗುಂಬಳ ಹೊಡೆದು ಸಂಭ್ರಮಾಚರಿಸಿದರು.

    ವಾಲ್ಮೀಕಿ ನಿಗಮ ಕೇಸ್‌ನಲ್ಲಿ ಇ.ಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ

    ನಾಗೇಂದ್ರ ಅವರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.