Tag: ವಾಲ್ಮೀಕಿ ಸ್ವಾಮೀಜಿ

  • ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ- ಸಚಿವರ ಪರ ವಾಲ್ಮೀಕಿ ಶ್ರೀ ಬ್ಯಾಟಿಂಗ್

    ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ- ಸಚಿವರ ಪರ ವಾಲ್ಮೀಕಿ ಶ್ರೀ ಬ್ಯಾಟಿಂಗ್

    ಬಾಗಲಕೋಟೆ: ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿವಾದ ಕಾಂಗ್ರೆಸ್ ನಲ್ಲಿ (Congress) ತಾರಕಕ್ಕೇರಿದೆ. ಸಿಎಂ ಬದಲಾವಣೆ ಅಂತ ಕೆಲವರು ಹೇಳಿದ್ರೆ, ಕೆಲವರು ದಲಿತ ಸಿಎಂ ಅಂತಿದ್ದಾರೆ. ಈ ಮಧ್ಯೆ ದಲಿತ ಸಿಎಂ ಬಗ್ಗೆ ಪ್ರಸ್ತಾಪಿಸುತ್ತಾ ಸತೀಶ್ ಜಾರಕಿಹೊಳಿ (Sathish Jarakiholi) ಪರ ವಾಲ್ಮೀಕಿ ಸ್ವಾಮೀಜಿ ಭರ್ಜರಿ ಬ್ಯಾಟಿಂಗ್ ಬೀಸಿದ್ದಾರೆ. ದಲಿತರು ಸಿಎಂ ಆಗಬಾರದಾ? ಕೇವಲ ವೋಟ್ ಬ್ಯಾಂಕ್ ಆಗಬೇಕಾ ಎಂದು ವಾಲ್ಮೀಕಿ ಸ್ವಾಮೀಜಿ ಗುಡುಗು ಹಾಕುವ ಮೂಲಕ ರಾಜ್ಯ ರಾಜಕೀಯದಲ್ಲಿ ಕಿಚ್ಚೆಬ್ಬಿಸಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಅಸಮಾಧಾನಗಳು ಮೇಲಿಂದ ಮೇಲೆ ಸ್ಫೋಟಿಸುತ್ತಲೇ ಇವೆ. ಸಚಿವ ಸ್ಥಾನ ಆಗಿರಬಹುದು ಡಿಸಿಎಂ ಆಗಿರಬಹುದು ಕೈ ನಾಯರು ಒಂದಿಲ್ಲೊಂದು ಹೇಳಿಕೆ ಕೊಡುತ್ತಲೇ ಇದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸಿಎಂ ಬದಲಾವಣೆ ಚರ್ಚೆ ಜೋರಾಗಿದೆ. ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡುತ್ತಿದೆ. ಈ ಮಧ್ಯೆ ವಾಲ್ಮೀಕಿ ಸ್ವಾಮೀಜಿ ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಆ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಬಾಗಲಕೋಟೆಯಲ್ಲಿ (Bagalkote) ವಾಲ್ಮೀಕಿ ಜನಜಾಗೃತಿ ಸಮಾವೇಶದಲ್ಲಿ ಮಾತಾಡಿದ ವಾಲ್ಮೀಕಿ ಪ್ರಸನ್ನಾನಂದ ಶ್ರೀ, ದಲಿತ ಸಿಎಂ ಕೂಗೆಬ್ಬಿಸಿದ್ದಾರೆ. ಸತೀಶ್ ಜಾರಕಿಹೊಳಿಗೆ ನಾಡಿನ ಸಿಎಂ ಆಗಲು ಎಲ್ಲ ಅರ್ಹತೆಗಳಿವೆ. ಅವರ ಬೆನ್ನಿಗೆ ನಾವೆಲ್ಲಾ ನಿಲ್ಲಬೇಕಿದೆ. ರಾಜ್ಯದಲ್ಲಿ ದಲಿತ ಸಿಎಂ ಯಾಕೆ ಆಗಬಾರದು ಎಂದು ಪ್ರಶ್ನಿಸಿದ್ದಾರೆ.

    ವಾಲ್ಮೀಕಿ ಸಮುದಾಯದ ಸಚಿವ ಕೆ.ಎನ್ ರಾಜಣ್ಣ ಇತ್ತೀಚಿಗೆ ದಲಿತ ಸಿಎಂ ಹೆಸರಲ್ಲಿ ಪರಮೇಶ್ವರ್ ಹೆಸರು ಹೇಳಿದ್ದರು. ವಾಲ್ಮೀಕಿ ಸ್ವಾಮೀಜಿ ಸತೀಶ್ ಪರ ಬ್ಯಾಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಜಾಣ ಉತ್ತರ ನೀಡಿ ಸತೀಶ್ ಜಾರಕಿಹೊಳಿ ಜಾರಿಕೊಂಡರು. ಜೊತೆಗೆ ಪರೋಕ್ಷವಾಗಿ ಮನದಲ್ಲಿನ ಸಿಎಂ ಆಗುವ ಬಯಕೆ ಇರುವ ಬಗ್ಗೆಯೂ ಸೂಕ್ಷ್ಮವಾಗಿ ಹೇಳಿದರು. ನಮ್ಮ ಆಶಯ ಇರಬಹುದು ಸಮುದಾಯದ ಆಶಯ ಇರಬಹುದು ಅದು ಬೇರೆ. ಪಕ್ಷ ದೊಡ್ಡದು. ಪಕ್ಷದ ತೀರ್ಮಾನ ಅಂತಿಮ, ಸಮಯ ಯಾವಾಗ ಕೂಡಿ ಬರುತ್ತೆ ಅಂತ ಹೇಳೋಕಾಗಲ್ಲ ಎಂದರು. ಇದನ್ನೂ ಓದಿ; ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

    ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರು ಸಚಿವರ ಬಾಯಿಗೆ ಕಾಂಗ್ರೆಸ್ ಹೈಕಮಾಂಡ್ ಬೀಗ ಹಾಕುತ್ತಿದೆ. ಇದೆ ವೇಳೆ ವಾಲ್ಮೀಕಿ ಸ್ವಾಮೀಜಿ ದಲಿತ ಸಿಎಂ ಅಸ್ತ್ರದ ಮೂಲಕ ಜಾರಕಿಹೊಳಿ ಪರ ಬ್ಯಾಟ್ ಮಾಡಿದ್ದು, ಸಿಎಂ ಬದಲಾವಣೆ ಚರ್ಚೆ ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.

  • ಮನೆ ಆಸ್ತಿ ಕೇಳ್ತಿಲ್ಲ, ಮೀಸಲಾತಿ ನಮ್ಮ ಸಂವಿಧಾನಬದ್ಧ ಹಕ್ಕು: ವಾಲ್ಮೀಕಿ ಸ್ವಾಮೀಜಿ

    ಮನೆ ಆಸ್ತಿ ಕೇಳ್ತಿಲ್ಲ, ಮೀಸಲಾತಿ ನಮ್ಮ ಸಂವಿಧಾನಬದ್ಧ ಹಕ್ಕು: ವಾಲ್ಮೀಕಿ ಸ್ವಾಮೀಜಿ

    ಹಾವೇರಿ: ಮೀಸಲಾತಿ ನಿಮ್ಮಪ್ಪನ ಮನೆ ಆಸ್ತಿಯಲ್ಲ. ನಾವು ನಿಮ್ಮಪ್ಪನ ಮನೆ ಆಸ್ತಿ ಕೇಳ್ತಿಲ್ಲ. ಮೀಸಲಾತಿ ನಮ್ಮ ಸಂವಿಧಾನಬದ್ಧ ಹಕ್ಕು. ಮೀಸಲಾತಿ ವಿಚಾರದಲ್ಲಿ ನಮ್ಮ ಕಿವಿಗೆ ಹೂವು ಇಡ್ತಿದ್ದಾರೆ. ಇನ್ಮುಂದೆ ಕಿವಿಗೆ ಹೂವು ಇಡಲು ಬಂದ್ರೆ ನಾವು ನಿಮ್ಮ ಕೆಳಗೆ ಹೂವು ಇಡ್ತೀವಿ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಳ ಮಾಡ್ತೀನಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು. ಚುನಾವಣೆ ಬಂದಾಗ ಮೀಸಲಾತಿ ಹೆಚ್ಚಳದ ಮಾತು ಬರುತ್ತೆ. ನಾವು ಹೋರಾಟ ಕೈಗೆತ್ತಿಕೊಂಡ್ರೆ ನಿಮ್ಮ ಅಸ್ತಿತ್ವಕ್ಕೆ ಧಕ್ಕೆ ಬರೋದು ಗ್ಯಾರಂಟಿ. ವಾಲ್ಮೀಕಿ ಸಮಾಜವನ್ನ ಎಬ್ಬಿಸೋದು ಕಷ್ಟ, ಸಮಾಜ ಎದ್ದರೆ ಹಿಡಿಯಲು ನಿಮಗೆ ಆಗೋದಿಲ್ಲ. ನಮ್ಮೆಲ್ಲರ ಶಾಪದಿಂದ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು. ಬೇಡರ ಶಾಪ ತಟ್ಟಿ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿತು ಎಂದರು.

    ಕೂಡಲೇ ಸಿಎಂ ಯಡಿಯೂರಪ್ಪ ಕ್ಯಾಬಿನೆಟ್ ಸಭೆ ಕರೆದು ಮೀಸಲಾತಿ ಕುರಿತ ವರದಿ ಅನುಷ್ಠಾನ ತರುವಂತೆ ಒತ್ತಾಯಿಸಿದರು. ಅಕ್ಟೋಬರ್ 21ರಿಂದ ಪರಿಶಿಷ್ಟ ಪಂಗಡಕ್ಕೆ 7.5 ಮೀಸಲಾತಿ ಜಾರಿಗಾಗಿ ಬೆಂಗಳೂರಿನಲ್ಲಿ ಅಕ್ಟೋಬರ್ 31ರವರೆಗೆ ಒಬ್ಬನೇ ಧರಣಿ ಕೂರುತ್ತೇವೆ ಎಂದರು.