Tag: ವಾಲ್ಮೀಕಿ ಜಾತ್ರೆ

  • ಸುದೀಪ್ ಕಂಡರೆ ಭಯ: ವಾಲ್ಮೀಕಿ ಜಾತ್ರೆಗಿಲ್ಲ ಆಹ್ವಾನ

    ಸುದೀಪ್ ಕಂಡರೆ ಭಯ: ವಾಲ್ಮೀಕಿ ಜಾತ್ರೆಗಿಲ್ಲ ಆಹ್ವಾನ

    ಪ್ರತಿ ವರ್ಷವೂ ಕಿಚ್ಚ ಸುದೀಪ್ (Sudeep), ವಾಲ್ಮೀಕಿ ಗುರುಪೀಠದ ಜಾತ್ರೆಗೆ (Valmiki Jatre)ತಪ್ಪದೇ ಹಾಜರಾಗುತ್ತಿದ್ದರು. ಆದರೆ, ಈ ಬಾರಿ ಸುದೀಪ್ ಅವರಿಗೆ ಆಹ್ವಾನ ನೀಡದೇ ಇರಲು ವಾಲ್ಮೀಕಿ ಶ್ರೀಗಳು ನಿರ್ಧರಿಸಿದ್ದಾರೆ. ಅದಕ್ಕೆ ಅವರದ್ದೇ ಆದ ಕಾರಣವನ್ನೂ ಅವರು ನೀಡಿದ್ದಾರೆ. ಪ್ರತಿ ಬಾರಿಯೂ ಸುದೀಪ್ ಜಾತ್ರೆಗೆ ಬರುತ್ತಾರೆ ಎಂದು ಲಕ್ಷಾಂತರ ಅಭಿಮಾನಿಗಳು ಕಾಯುತ್ತಾರೆ. ಆದರೆ, ಬಂದ ಮೇಲೆ ಅಲ್ಲಿ ಆಗುವ ಆವಾಂತರವೇ ಬೇರೆ ಅಂತಾರೆ ಶ್ರೀಗಳು.

    ಕಳೆದ ಬಾರಿ ಕಿಚ್ಚನಿಗಾಗಿ ಕಾಯುತ್ತಿದ್ದ ಕೂತಿದ್ದ ಅಭಿಮಾನಿಗಳು ಸುದೀಪ್ ಬರಲ್ಲ ಎಂದಾಗ ಧಾಂದಲೆ ಮಾಡಿದರು. ಕುರ್ಚಿಗಳನ್ನು ಮುರಿದು ಹಾಕಿದರು. ಅದರ ಹಿಂದಿನ ವರ್ಷ ಸುದೀಪ್ ನೋಡಲು ಬಂದಿದ್ದ ಅಭಿಮಾನಿಗಳು ಗದ್ದಲು ಉಂಟು ಮಾಡಿದರು. ಅವರು ಬಂದರೂ, ಒಂದು ಆವಾಂತರ, ಬಾರದೇ ಇದ್ದರೂ ಸಮಸ್ಯೆ. ಹಾಗಾಗಿ ಈ ಬಾರಿ ಖುದ್ದು ಶ್ರೀಗಳೇ ಸುದೀಪ್ ಅವರಿಗೆ ಆಹ್ವಾನ ನೀಡಿಲ್ಲ.

     

    ಸುದೀಪ್ ಅವರು ಬರುವುದರಿಂದ ನಮಗೂ ಸಂತೋಷವೇ ಆಗುತ್ತದೆ. ಆದರೆ, ಸುದೀಪ್ ಅವರನ್ನು ನೋಡಲು ಬಂದವರು ಶಾಂತ ರೀತಿಯಿಂದ ವರ್ತಿಸಿಲ್ಲ. ಹಾಗಾಗಿ ಬೇರೆಯವರಿಗೆ ಸಮಸ್ಯೆ ಆಗಬಾರದು ಎನ್ನುವ ಕಾಳಜಿ ಅಷ್ಟೇ ಎಂದು ಶ್ರೀಗಳು ತಿಳಿಸಿದ್ದಾರೆ. ಈ ಕಾರಣದಿಂದಾಗಿಯೇ ಈ ಬಾರಿಯೂ ಸುದೀಪ್ ವಾಲ್ಮೀಕಿ ಜಾತ್ರೆಗೆ ಹೋಗುತ್ತಿಲ್ಲ.

  • ವಾಲ್ಮೀಕಿ ಜಾತ್ರೆ: ಸುದೀಪ್ ಅಭಿಮಾನಿಗಳಿಂದ ಕುರ್ಚಿಗಳು ಪೀಸ್ ಪೀಸ್

    ವಾಲ್ಮೀಕಿ ಜಾತ್ರೆ: ಸುದೀಪ್ ಅಭಿಮಾನಿಗಳಿಂದ ಕುರ್ಚಿಗಳು ಪೀಸ್ ಪೀಸ್

    ಮ್ಮ ನೆಚ್ಚಿನ ನಟ ಸುದೀಪ್ ವಾಲ್ಮೀಕಿ ಜಾತ್ರೆಗೆ ಆಗಮಿಸಲಿಲ್ಲ ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರುತ್ತಾರೆ ಎಂದು ಸುತ್ತಲಿನ ಅಭಿಮಾನಿಗಳು ಆಗಮಿಸಿದ್ದರು. ಬೆಳಗ್ಗೆಯಿಂದಲೇ ಸುದೀಪ್ ಫೋಟೋ ಹಿಡಿದುಕೊಂಡು ಜಯಘೋಷ ಮಾಡುತ್ತಿದ್ದರು.

    ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸುದೀಪ್ ಬರಲಿದ್ದಾರೆ ಎಂದು ಸುದ್ದಿ ಆಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆಗಲೂ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತಿದ್ದರು. ವಾಲ್ಮೀಕಿ ಶ್ರೀಗಳು ಅಭಿಮಾನಿಗಳನ್ನು ಎಷ್ಟೇ ಸಮಾಧಾನಿಸಿದರು. ಪ್ರಯೋಜನಕ್ಕೆ ಬರಲಿಲ್ಲ. ಕೊನೆಯಲ್ಲಿ ಶ್ರೀಗಳು ತಾಳ್ಮೆ ಕಳೆದುಕೊಂಡು ಅಭಿಮಾನಿಗಳ ಮೇಲೆ ಕೋಪಿಸಿಕೊಂಡರು. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಅಭಿಮಾನಿಗಳ ಕೂಗು ಹೆಚ್ಚಾದ ಕಾರಣದಿಂದಾಗಿ ಸಂಜೆ ಸುದೀಪ್ ಬರಲಿದ್ದಾರೆ ಎಂದು ಘೋಷಿಸಲಾಯಿತು. ಸಂಜೆಯಾದರೂ ಸುದೀಪ್ ಬಾರದೇ ಇರುವ ಕಾರಣಕ್ಕಾಗಿ ಆಕ್ರೋಶಗೊಂಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿ ಆಕ್ರೋಶ ಹೊರಹಾಕಿದರು. ಅಭಿಮಾನಿಗಳನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್, ‘ನನಗೆ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನವಿರಲಿಲ್ಲ ಮತ್ತು ಕಾರ್ಯಕ್ರಮದ ಬಗ್ಗೆ ಗೊತ್ತೂ ಇರಲಿಲ್ಲ. ಹಾಗಾಗಿ ಬರುವದಕ್ಕೆ ಆಗಲಿಲ್ಲ. ಅಭಿಮಾನಿಗಳ ಈ ನಡೆ ಬೇಸರ ತರಿಸಿದೆ. ಒಪ್ಪಿಕೊಂಡ ಕಾರ್ಯಕ್ರಮವನ್ನು ನಾನು ಯಾವತ್ತೂ ತಪ್ಪಿಸಲಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k