ಟಾಲಿವುಡ್‌ನ ಎಂಗ್ ಟೈಗರ್ ಎಂತಲೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಜೂ.ಎನ್‌ಟಿಆರ್ ಆರ್‌ಆರ್‌ಆರ್ ಸಿನಿಮಾದ ನಂತರ ದೇವರ ಸಿನಿಮಾದಲ್ಲಿ ನಟಿಸಿದ್ದರು. ದೇವರ ಸಿನಿಮಾ ಅಂದುಕೊಟ್ಟ ಮಟ್ಟಿಗೆ ಹಿಟ್ ಆಗಲಿಲ್ಲ. ಜೂ.ಎನ್‌ಟಿಆರ್ ಅಭಿಮಾನಿಗಳಿಗೆ ಇದರಿಂದ ನಿರಾಸೆ ಉಂಟಾಗಿತ್ತು. ಇದೀಗ ಮತ್ತೊಮ್ಮೆ ತಾರಕ್‌ಗೆ ಹಿನ್ನಡೆಯಾಗಿದೆ. ಜೂ.ಎನ್‌ಟಿಆರ್ ದೇವರ ಸಿನಿಮಾ ಬಳಿಕ ಬಾಲಿವುಡ್‌ನ ವಾರ್-2 ಸಿನಿಮಾದಲ್ಲಿ ನಟಿಸಿದ್ದರು. ವಾರ್-2 ಸಿನಿಮಾ ಕೂಡಾ ಬಂಡವಾಳ ಹೂಡಿದ ನಿರ್ಮಾಪಕನಿಗೆ ಸಂಕಷ್ಟ ತಂದೊಡ್ಡಿದೆ.
ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ನಟಿಸಿದ ವಾರ್-2 ಸಿನಿಮಾ ಇದೇ ಆ.14ಕ್ಕೆ ತೆರೆಕಂಡಿತ್ತು. ತೆರೆಕಂಡು ಒಂದು ವಾರವಾದರೂ ಸಿನಿಮಾ 200 ಕೋಟಿ ಗಳಿಕೆ ಕಂಡಿಲ್ಲ. 150 ಕೋಟಿ ಕಲೆಹಾಕುವಲ್ಲಿ ಸಿನಿಮಾ ತೆವಳುತ್ತ ಸಾಗುತ್ತಿದೆ. ಯಶ್‌ರಾಜ್ ಫಿಲಂಸ್ ಸಂಸ್ಥೆ ನಿರ್ಮಾಣ ಮಾಡಿದ್ದ ವಾರ್-2 ಕಲೆಕ್ಷನ್ ಸಿಂಗಲ್ ನಂಬರ್‌ಗೆ ಬಂದು ನಿಂತಿದೆ. ಇದನ್ನೂ ಓದಿ: ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ `45’ ರಿಲೀಸ್ ಡೇಟ್ ಫಿಕ್ಸ್
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತೆರೆಗೆ ಬಂದಿದ್ದ ದೇವರ ಸಿನಿಮಾ ಕೂಡಾ ಸೋತು ಸುಣ್ಣವಾಗಿತ್ತು. ಈ ವರ್ಷ ತೆರೆಕಂಡ ವಾರ್-2 ಕೂಡ ತಾರಕ್‌ಗೆ ಸಕ್ಸಸ್ ತಂದುಕೊಟ್ಟಿಲ್ಲ. ಒಂದು ಕಡೆ ವಾರ್-2 ಸಿನಿಮಾ ರಿಲೀಸ್ ಆದ ದಿನವೇ ರಜನಿಕಾಂತ್ ನಟನೆಯ ಕೂಲಿ ಸಿನಿಮಾ ಕೂಡ ತೆರೆಗೆ ಬಂದಿತ್ತು. ಇದು ಸಿನಿಮಾದ ಕಲೆಕ್ಷನ್‌ಗೆ ಮುಳುವಾಯ್ತು ಎಂದು ಕೆಲವರ ಅಭಿಪ್ರಾಯವಾದ್ರೆ, ಇನ್ನು ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದು ನೇರವಾಗಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ತಾರಕ್‌ಗೆ ಸೋಲಿನ ಪಟ್ಟ ಸಿಕ್ಕಿದೆ.



‘ವಾರ್ 2’ ಟೀಸರ್‌ನಲ್ಲಿ ಹೃತಿಕ್ ಮುಂದೆ ಜ್ಯೂ.ಎನ್‌ಟಿಆರ್ ಅಬ್ಬರಿಸಿದ್ದಾರೆ. ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ನನ್ನ ಕಣ್ಣುಗಳ ಯಾವತ್ತಿನಿಂದಲೋ ನಿನ್ನನ್ನು ಹುಡುಕಾಡುತ್ತಿದೆ ಎನ್ನುತ್ತಾ ತಾರಕ್ ಡೈಲಾಗ್ ಶುರುವಾಗಿದೆ. ನಿನಗೆ ನನ್ನ ಬಗ್ಗೆ ಗೊತ್ತಿಲ್ಲ. ಈಗ ಗೊತ್ತಾಗುತ್ತದೆ, ಗೆಟ್ ರೆಡಿ ಫಾರ್ ವಾರ್ ಎಂದು ತಾರಕ್ ಡೈಲಾಗ್ ಹೊಡೆದಿದ್ದಾರೆ. ಹೃತಿಕ್ ಮತ್ತು ತಾರಕ್ ಜುಗಲ್‌ಬಂದಿ ಮಸ್ತ್ ಆಗಿದೆ. ಇಬ್ಬರೂ ಪೈಪೋಟಿಯಲ್ಲಿ ಫೈಟಿಂಗ್ ಮಾಡಿದಂತಿದೆ. ಅಷ್ಟರ ಮಟ್ಟಿಗೆ ಆ್ಯಕ್ಷನ್ ಸೀಕ್ವೆನ್ಸ್ ಟೀಸರ್‌ನಲ್ಲಿ ತೋರಿಸಲಾಗಿದೆ. ಈ ಚಿತ್ರದ ಟೀಸರ್ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:
ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‌ಟಿಆರ್ (JR NTR) ಕಾಂಬಿನೇಷನ್ ಸಿನಿಮಾಗೆ ‘ಪುಷ್ಪ 2’ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಈ ಚಿತ್ರದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು, ಮೇ 20ರಂದು ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬ. ಆ ದಿನ ‘ವಾರ್ 2’ (War 2) ಚಿತ್ರದಿಂದ ಅಪ್‌ಡೇಟ್ ಸಿಗಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಚಿತ್ರದ ಗ್ಲಿಂಪ್ಸ್ ಬಿಡುಗಡೆ ಮಾಡೋದನ್ನು ಮುಂದಕ್ಕೆ ಹಾಕಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:
‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ತಾರಕ್ ತೆರೆಹಂಚಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ, ಜಾನ್ ಅಬ್ರಹಾಂ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಬ್ರಹ್ಮಾಸ್ತ್ರ’ ಚಿತ್ರದ ನಿರ್ದೇಶಕ ಅಯಾನ್ ಮುಖರ್ಜಿ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.









‘ವಾರ್ 2’ಗಾಗಿ ಹೃತಿಕ್ ರೋಷನ್ (Hrithik Roshan) ಜೊತೆ ಕೈಜೋಡಿಸಿರುವ ಜ್ಯೂ.ಎನ್‌ಟಿಆರ್ ಮೇ 20ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ದಿನ ‘ವಾರ್ 2’ ಚಿತ್ರದ ಜ್ಯೂ.ಎನ್‌ಟಿಆರ್ ಪಾತ್ರದ ಲುಕ್ ಕೂಡ ರಿವೀಲ್ ಆಗಲಿದೆ. ಚಿತ್ರದ ಮೊದಲ ಪೋಸ್ಟರ್ ಹೊರಬೀಳಲಿದೆ.

