Tag: ವಾರ್ನಿಂಗ್

  • ನಿಮ್ಮೆಲ್ಲಾ ಆಟ ನಿಲ್ಲಿಸ್ಬೇಕು ಇಲ್ಲಾಂದ್ರೆ ಪ್ರೊ ಕಬಡ್ಡಿಯಂತೆ ಪೊಲೀಸ್ ಕಬಡ್ಡಿ ಆಡ್ಬೇಕಾಗುತ್ತೆ- ರೌಡಿಗಳ ಚಳಿ ಬಿಡಿಸಿದ ಎಸ್‍ಪಿ

    ನಿಮ್ಮೆಲ್ಲಾ ಆಟ ನಿಲ್ಲಿಸ್ಬೇಕು ಇಲ್ಲಾಂದ್ರೆ ಪ್ರೊ ಕಬಡ್ಡಿಯಂತೆ ಪೊಲೀಸ್ ಕಬಡ್ಡಿ ಆಡ್ಬೇಕಾಗುತ್ತೆ- ರೌಡಿಗಳ ಚಳಿ ಬಿಡಿಸಿದ ಎಸ್‍ಪಿ

    ತುಮಕೂರು: ನಗರದಲ್ಲಿ ಮತ್ತೆ ರೌಡಿಗಳ ಚಟುವಟಿಕೆ ತಲೆ ಎತ್ತಿದ್ದ ಹಿನ್ನೆಲೆಯಲ್ಲಿ ಎಸ್‍ಪಿ ಕೋನವಂಶೀ ಕೃಷ್ಣ ಅವರು ರೌಡಿಗಳ ಚಳಿ ಬಿಡಿಸಿದ್ದಾರೆ.

    ತುಮಕೂರಿನ ಚಿಲುಮೆ ಪೊಲೀಸ್ ಸಮುದಾಯ ಭವನದ ಮೈದಾನದಲ್ಲಿ ಇಂದು ರೌಡಿಗಳ ಪರೇಡ್ ಮಾಡಲಾಗಿದೆ. ಪೊಲೀಸ್ ಸಮುದಾಯ ಭವನದ ಮೈದಾನಕ್ಕೆ ತುಮಕೂರು ನಗರ ಹಾಗೂ ಉಪವಿಭಾಗದ 125 ರೌಡಿಗಳು ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಎಸ್‍ಪಿ, ಚುನಾವಣೆ ಬರುತ್ತಿದೆ. ನಿಮ್ಮ ಎಲ್ಲಾ ಆಟ ನಿಲ್ಲಿಸಬೇಕು. ಇಲ್ಲಾ ಅಂದರೆ ಪ್ರೊ ಕಬಡ್ಡಿಯಂತೆ ಪೊಲೀಸ್ ಕಬಡ್ಡಿ ಆಡಬೇಕಾಗುತ್ತದೆ. ಜನರು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಕೋನವಂಶೀ ಕೃಷ್ಣ ಅವರು ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮನ್ನು ಹೋಗು ಅನ್ನೋಕೆ ನೀನ್ಯಾರು..?- ಪುಂಡನಿಗೆ ನಡುರಸ್ತೆಯಲ್ಲೇ ಪಿಎಸ್‍ಐ ಡಿಚ್ಚಿ

    ನಾನು ಮತ್ತೆ ಮತ್ತೆ ಕರೆದು ವಾರ್ನಿಂಗ್ ಮಾಡುವುದಿಲ್ಲ. ಇದೇ ಫಸ್ಟ್ ಆ್ಯಂಡ್ ಲಾಸ್ಟ್. ಯಾರಿಗೂ ನಾನು ಸೆಕೆಂಡ್ ಚಾನ್ಸ್ ಕೊಡುವುದಿಲ್ಲ. ಎಲ್ಲಾ ಆಟವನ್ನು ಬಿಟ್ಟು ನಿಮ್ಮ ನಿಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಬೇಕು. ಇದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾವ ಸಮಯದಲ್ಲೂ ಕರೆದರೂ ಬರಬೇಕು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರೌಡಿಶೀಟರ್ ಕೈನಲ್ಲಿದ್ದ ಟ್ಯಾಟೂ ನೋಡಿ ಎಸ್‍ಪಿ ರಂ

    ಬೆಂಗಳೂರು ಸೇರಿದಂತೆ ಹೊರಗಿನ ಕ್ರಿಮಿನಲ್‍ಗಳಿಗೆ ಆಶ್ರಯ ಕೊಡಬೇಡಿ. ಜೈಲಿನಲ್ಲಿರುವ ಕ್ರಿಮಿನಲ್ ಗಳ ಜೊತೆ ಮೊಬೈಲ್ ಸಂಪರ್ಕ ಇಟ್ಟುಕೊಳ್ಳಬಾರದು. ಒಂದು ವೇಳೆ ಅವರ ಅಣತಿಯಂತೆ ನಡೆದುಕೊಳ್ಳುವುದು ಗೊತ್ತಾದ್ರೆ, ನಿಮ್ ಗಳ ಬಾಲ ಕಟ್ ಮಾಡ್ತೀನಿ ಎಂದು ಎಸ್‍ಪಿ ಖಡಕ್ಕಾಗಿಯೇ ನುಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನನ್ನು ಮಿಲ್ಕಿ ಬ್ಯೂಟಿಯೆಂದು ಕರೀಬೇಡಿ- ತಮನ್ನಾ ಖಡಕ್ ವಾರ್ನಿಂಗ್

    ನನ್ನನ್ನು ಮಿಲ್ಕಿ ಬ್ಯೂಟಿಯೆಂದು ಕರೀಬೇಡಿ- ತಮನ್ನಾ ಖಡಕ್ ವಾರ್ನಿಂಗ್

    ಹೈದರಾಬಾದ್: ಮಿಲ್ಕಿ ಬ್ಯೂಟಿ ಎಂದೇ ಖ್ಯಾತರಾಗಿರುವ ತಮನ್ನಾ ಭಾಟಿಯಾ ಈಗ ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆಯಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

    ತಮನ್ನಾ ಅವರು ಬೆಳ್ಳಗಿದ್ದಾರೆ. ಅಲ್ಲದೇ ಅವರ ಚರ್ಮ ಹಾಲಿನ ಬಣ್ಣ ಹೊಂದಿದ್ದು, ಎಲ್ಲರು ಅವರನ್ನು ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ತಮನ್ನಾ ಬಹುಭಾಷಾ ನಟಿಯಾಗಿದ್ದು, ಎಲ್ಲ ಚಿತ್ರರಂಗದಲ್ಲೂ ಅವರನ್ನು ಮಿಲ್ಕಿ ಬ್ಯೂಟಿ ಎಂದೇ ಕರೆಯುತ್ತಾರೆ.

    ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮನ್ನಾ “ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆಯಬೇಡಿ. ಆ ರೀತಿ ಕರೆದರೆ ನನಗೆ ಕೋಪ ಬರುತ್ತದೆ. ನನ್ನ ಸ್ಕಿನ್ ಕಲರ್ ಆಧಾರದ ಮೇಲೆ ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ಈ ರೀತಿ ಬಣ್ಣದ ಆಧಾರದ ಮೇಲೆ ಯಾರನ್ನು ಅಳೆಯಬಾರದು. ಚಿತ್ರರಂಗದಲ್ಲಿ ಈಗ ಇದು ಜಾಸ್ತಿಯಾಗಿದೆ. ಈ ರೀತಿ ಮಾಡುವುದು ಸರಿಯಲ್ಲ” ಎಂದರು.

    ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಕೆಜಿಎಫ್’ ಸಿನಿಮಾದಲ್ಲಿ ತಮನ್ನಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. `ಪರೋಪಕಾರಿ’ ಕನ್ನಡ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು’ ಐಟಂ ಸಾಂಗನ್ನು ರಿಮಿಕ್ಸ್ ಮಾಡಲಾಗಿರುವ ಹಾಡು ಇದಾಗಿದ್ದು, ಇದೀಗ `ಕೆಜಿಎಫ್’ ಚಿತ್ರಕ್ಕಾಗಿ ರವಿ ಬಸ್ರೂರ್ ರೀ-ಕ್ರಿಯೇಟ್ ಮಾಡಿದ್ದಾರೆ.

    ಹಿಂದಿನ ಹಾಡಿಗೆ ಎಲ್.ಆರ್ ಈಶ್ವರಿ ಧ್ವನಿಯಾಗಿದ್ದರು. ಇದೀಗ ಐರಾ ಉಡುಪಿ ಹಿನ್ನಲೆ ಗಾಯನದಲ್ಲಿ ಹೊಸ ಜೋಕೆ ರಿಮಿಕ್ಸ್ ಹಾಡು ಮೂಡಿ ಬಂದಿದೆ. ಪ್ರತಿಷ್ಠಿತ ಲಹರಿ ಸಂಸ್ಥೆ ಈ ಹಾಡನ್ನು ರಿಲೀಸ್ ಮಾಡಿದೆ. ಕೆಜಿಎಫ್ ಚಿತ್ರ ಒಟ್ಟು 5 ಭಾಷೆಯಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 25ಕ್ಕೂ ಹೆಚ್ಚು ರೌಡಿಗಳ ಪರೇಡ್ – ಪೊಲೀಸರಿಂದ ವಾರ್ನಿಂಗ್

    25ಕ್ಕೂ ಹೆಚ್ಚು ರೌಡಿಗಳ ಪರೇಡ್ – ಪೊಲೀಸರಿಂದ ವಾರ್ನಿಂಗ್

    ಬೆಂಗಳೂರು: ನೆಲಮಂಗಲದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಪಟ್ಟಣ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

    ಇಂದು ಬೆಳಗ್ಗೆ ನೆಲಮಂಗಲ ಪಟ್ಟಣ ಠಾಣೆಯ ವ್ಯಾಪ್ತಿಯಲ್ಲಿನ 25ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಕರೆಸಿ, ಸಿಪಿಐ ಶಿವಣ್ಣ ಹಾಗೂ ಪಿಎಸ್‍ಐ ಮಂಜುನಾಥ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ದಿನೇ ದಿನೇ ನೆಲಮಂಗಲ ಪಟ್ಟಣ ಬೆಳೆಯುತ್ತಿದ್ದು, ಅಪರಾಧಗಳು ಹೆಚ್ಚಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚರಿಕೆ  ನೀಡಿದ್ದಾರೆ.

    ಅಷ್ಟೇ ಅಲ್ಲದೇ ಹಿಂದಿನ ಪೊಲೀಸ್ ಪರೇಡ್‍ಗೆ ಆಗಮಿಸದವರಿಗೆ ವಾರ್ನಿಂಗ್ ನೀಡಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

  • ರಾಕಿಂಗ್ ಸ್ಟಾರ್ ಗೆ ಖಡಕ್ ವಾರ್ನಿಂಗ್ ಕೊಟ್ಟ ರೆಬಲ್ ಸ್ಟಾರ್!

    ರಾಕಿಂಗ್ ಸ್ಟಾರ್ ಗೆ ಖಡಕ್ ವಾರ್ನಿಂಗ್ ಕೊಟ್ಟ ರೆಬಲ್ ಸ್ಟಾರ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮೇಲೆ ರೆಬಲ್ ಸ್ಟಾರ್ ಅಂಬರೀಷ್ ಏಕಾಏಕಿ ಗರಂ ಆಗಿದ್ದಾರೆ. ಕೆಜಿಎಫ್ ಚಿತ್ರಕ್ಕಾಗಿ ಯಶ್ ಗಡ್ಡ ಬಿಟ್ಟಿದ್ದು, ಅದ್ದನ್ನು ತೆಗೆಯುವಂತೆ ಅಂಬರೀಶ್ ಯಶ್ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಯಶ್ ಸದಾ ಕ್ಲೀನ್ ಶೇವ್ ಲುಕ್‍ನಲ್ಲಿ ಇರುತ್ತಿದ್ದರು. ಈಗ ಕೆಜಿಎಫ್ ಸಿನಿಮಾಗಾಗಿ ಸ್ಟೈಲಿಶ್ ಆಗಿ ಗಡ್ಡ ಮೀಸೆ ಬಿಟ್ಟು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ಯಶ್ ಅವರನ್ನು ಗಡ್ಡದಲ್ಲಿ ನೋಡಿ ಅಂಬರೀಷ್‍ಗೆ ಬೇಜಾರಾಗಿದ್ದು, ಹೀಗಾಗಿ ಹೋದಲ್ಲಿ ಬಂದಲ್ಲಿ ರಾಜಾಹುಲಿಗೆ ಗಡ್ಡ ತೆಗೆಯುವಂತೆ ವಾರ್ನ್ ಮಾಡುತ್ತಿದ್ದಾರೆ.

    ಯಶ್ ಅವರಿಗೂ ಕೂಡ ಗಡ್ಡಮೀಸೆ ಬಿಟ್ಟುಕೊಂಡು ಓಡಾಡೋಕೆ ಇಷ್ಟವಿಲ್ಲ. ಆದರೆ ಕೆಜಿಎಫ್ ಸಿನಿಮಾ ಶೂಟಿಂಗ್ ಮುಗಿಯದ ಕಾರಣ ಯಶ್ ಗಡ್ಡ ತೆಗೆಯುವಂತಿಲ್ಲ. ಮತ್ತೊಂದು ವಿಶೇಷವೆನೆಂದರೆ ಇನ್ನೂ ಒಂದು ತಿಂಗಳು ನಾನು ಗಡ್ಡಕ್ಕೆ ಕತ್ತರಿ ಹಾಕುವ ಹಾಗಿಲ್ಲ ಎಂದು ಸ್ವತಃ ಯಶ್ ಈ ಹಿಂದೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.

    ಇನ್ನೂ ಒಂದು ತಿಂಗಳು ರಾಕಿಂಗ್ ಸ್ಟಾರ್ ಯಶ್ ಅವರನ್ನು ಗಡ್ಡದಲ್ಲಿ ನೋಡಬಹುದು. ಆಮೇಲೆ ಕ್ಲೀನ್ ಶೇವ್ ಲುಕ್‍ನಲ್ಲಿ ಯಶ್ ಎಲ್ಲರ ಮುಂದೆ ಹಾಜರಾಗಲಿದ್ದಾರೆ. ಆದಷ್ಟು ಬೇಗ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾ ಶೂಟಿಂಗ್ ಮುಗಿಸಿ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.