Tag: ವಾರ್ಡನ್

  • ಹಾಸ್ಟೆಲ್ ವಾರ್ಡನ್ ವಿರುದ್ಧ ಬೀದಿಗಿಳಿದ 500 ವಿದ್ಯಾರ್ಥಿನಿಯರು!

    ಹಾಸ್ಟೆಲ್ ವಾರ್ಡನ್ ವಿರುದ್ಧ ಬೀದಿಗಿಳಿದ 500 ವಿದ್ಯಾರ್ಥಿನಿಯರು!

    ಚಂಡೀಗಢ: ಪಂಜಾಬ್‍ನ ಬಾಥಿಂಡಾ ಖಾಸಗಿ ವಿಶ್ವವಿದ್ಯಾಲಯದ ಹಾಸ್ಟೆಲ್ ವಾರ್ಡನ್ ವಿರುದ್ಧ ಸುಮಾರು 500 ವಿದ್ಯಾರ್ಥಿನಿಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    ಬಳಕೆ ಮಾಡಿದ ಸ್ಯಾನಿಟರಿ ಪ್ಯಾಡನ್ನು ಶೌಚಾಲಯದಲ್ಲಿ ಹಾಕಿದ್ದಾರೆಂದು ಆರೋಪಿಸಿ ಚೆಕ್ ಮಾಡಲು ಎಲ್ಲರ ಮುಂದೆಯೇ ಬಟ್ಟೆ ಬಿಚ್ಚುವಂತೆ ಹೇಳಿದ್ದಾರೆ ಎಂದು ಪ್ರತಿಭಟನೆಯ ವೇಳೆ ವಿದ್ಯಾರ್ಥಿನಿಯರು ವಾರ್ಡನ್ ವಿರುದ್ಧ ಕಿಡಿಕಾರಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಇದೊಂದು ಸಣ್ಣ ಘಟನೆ ಆಗಿದೆ. ಆದರೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವ ಮೂಲಕ ದೊಡ್ಡದಾಗಿ ಬಿಂಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಆದರೆ ಈ ಬಗ್ಗೆ ಆಡಳಿತ ಮಂಡಳಿ ನಾಲ್ವರು ಸಿಬ್ಬಂದಿ ವಿರುದ್ಧ ಕಾನೂನಾತ್ಮಕವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಮೂಲಕ ಇಬ್ಬರು ಮಹಿಳಾ ವಾರ್ಡನ್ ಹಾಗೂ ಇಬ್ಬರು ಮಹಿಳಾ ಸೆಕ್ಯೂರಿಟಿ ಗಾರ್ಡ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ಇದೀಗ ಯುನಿವರ್ಸಿಟಿಯ ಅಧಿಕಾರಿಗಳು ಈ ನಾಲ್ವರು ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ. ಅಲ್ಲದೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಮಾತನಾಡಿಕೊಳ್ಳಲು ಕೂಡ ಅವಕಾಶ ಕೊಡುವುದಿಲ್ಲ ಎಂದು ಪ್ರತಿಭಟನೆಯ ವೇಳೆ ವಿದ್ಯಾರ್ಥಿನಿಯರು ದೂರಿದ್ದಾರೆ.

    ಘಟನೆಯಿಂದ ನೊಂದು ಇದೀಗ ಕಾಲೇಜಿನ ಅಧಿಕಾರಿಗಳು ಹಾಗೂ ವಾರ್ಡನ್ ವಿರುದ್ಧ ಧೈರ್ಯವಾಗಿ ಪ್ರತಿಭಟನೆಗೆ ಇಳಿದಿದ್ದೇವೆ. ಹೀಗಾಗಿ ವಾರ್ಡನ್ ಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ವಿದ್ಯಾರ್ಥಿನಿಯರು ಎಚ್ಚರಿಕೆ ನೀಡಿದ್ದಾರೆ.

    2018ರ ನವೆಂಬರ್ ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿತ್ತು. ಎರಡು ದಿನಗಳ ಹಿಂದೆ ವಾರ್ಡನ್ ಬಳಸಿದ ಸ್ಯಾನಿಟರಿ ಪ್ಯಾಡನ್ನು ಶೌಚಾಲಯದೊಳಗೆ ಹಾಕಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಶಾಲೆಯ ಶಿಕ್ಷಕರು ಸುಮಾರು 15 ಮಂದಿ ವಿದ್ಯಾರ್ಥಿನಿಯರಲ್ಲಿ ಯೂನಿಫಾರಂ ಬಿಚ್ಚುವಂತೆ ಹೇಳಿದ್ದರು.

  • 700 ರೂ.ಗೆ ಕೆಲ್ಸಕ್ಕೆ ಸೇರ್ಕೊಂಡ – ಈಗ 250 ಕೋಟಿ ರೂ. ಆಸ್ತಿ : ವರದಿ ಬಳಿಕ ಸಸ್ಪೆಂಡ್

    700 ರೂ.ಗೆ ಕೆಲ್ಸಕ್ಕೆ ಸೇರ್ಕೊಂಡ – ಈಗ 250 ಕೋಟಿ ರೂ. ಆಸ್ತಿ : ವರದಿ ಬಳಿಕ ಸಸ್ಪೆಂಡ್

    ರಾಮನಗರ: ಜೂನಿಯರ್ ವಾರ್ಡನ್ ಆಗಿ 250 ಕೋಟಿ ರೂ. ಮೀರಿದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದ ಜೂನಿಯರ್ ವಾರ್ಡನ್ ಈಗ ಅಮಾನತು ಗೊಂಡಿದ್ದಾನೆ.

    ಕನಕಪುರ ತಾಲೂಕಿನ ಹುಣಸನಹಳ್ಳಿ ಸರ್ಕಾರಿ ಹಾಸ್ಟೆಲ್ ವಾರ್ಡನ್ ಬಿ.ನಟರಾಜ್‍ನನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಆಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ನಟರಾಜ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಈ ಸುದ್ದಿ ಬಳಿಕ ಎಚ್ಚೆತ್ತ ಇಲಾಖೆ ಈಗ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಕೆಲಸ ಜ್ಯೂ. ವಾರ್ಡನ್ ಆದ್ರೆ 250 ಕೋಟಿ ರೂ. ಆಸ್ತಿ!

    1995 ರಲ್ಲಿ ನಟರಾಜ್ ಚನ್ನಪಟ್ಟಣ ತಾಲೂಕಿನ ವಿದ್ಯಾರ್ಥಿ ನಿಲಯದಲ್ಲಿ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡಿದ್ದಾಗ ಈತನಿಗೆ ಮಾಸಿಕ ವೇತನ 700 ರೂ. ಇತ್ತು. ಪಿತ್ರಾರ್ಜಿತವಾಗಿ ಕನಕಪುರ ತಾಲೂಕಿನ ಏರಂಗೆರೆ ಗ್ರಾಮದಲ್ಲಿ ಸರ್ವೇ ನಂಬರ್ 80 ರಲ್ಲಿ 4 ಎಕರೆ ಜಮೀನಿತ್ತು. ಇದೀಗ 250 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದಾನೆ.

    ಈ ಬಗ್ಗೆ ಕನಕಪುರ ಸಿವಿಲ್ ನ್ಯಾಯಾಲಯ ರಾಮನಗರ ಎಸಿಬಿಗೆ ತನಿಖೆ ನಡೆಸುವಂತೆ ಸೂಚಿಸಿದೆ. ರಾಮನಗರ ಎಸಿಬಿ ಯಿಂದ ನಟರಾಜ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಇದೀಗ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ವಿಕಾಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಎಸಿಬಿಯಿಂದ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

    ಬಿ.ನಟರಾಜ್ ಆಸ್ತಿಯ ವಿವರ:
    * ಕನಕಪುರ ತಾಲೂಕಿನ ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಎಡಮಡು ಗ್ರಾಮದ ವಿವಿದ ಸರ್ವೇ ನಂಬರ್‍ನಲ್ಲಿ 18 ಎಕರೆ
    * ಕನಕಪುರ ತಾಲೂಕಿನ ಏರಂಗೆರೆಯ ವಿವಿಧ ಸರ್ವೆ ನಂಬರ್‍ಗಳಲ್ಲಿ 28 ಎಕರೆ
    * ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಹನೂರು ಬಳಿಯ ಮಣಹಳ್ಳಿ 15.5 ಎಕರೆ
    * ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಏಡುಮಡುನಲ್ಲಿ ಇಟ್ಟಿಗೆ ಫ್ಯಾಕ್ಟರಿ, ಜ್ಯೂಸ್ ಫ್ಯಾಕ್ಟರಿ
    * ಜೆ.ಪಿ ನಗರ 17ನೇ ಅಡ್ಡರಸ್ತೆಯಲ್ಲಿನ ಬಿಲ್ಡಿಂಗ್
    * ಬೆಂಗಳೂರಿನ ಜೆಪಿ ನಗರದ 6ನೇ ಹಂತದಲ್ಲಿ ಮೂರು ಹಂತಸ್ಥಿನ ಮನೆ
    * ಕನಕಪುರ ನಗರದ ಬೃಂದಾವನ ನಗರದಲ್ಲಿ ಮಹಡಿ ಮನೆ
    * ಸ್ಕಾರ್ಪಿಯೋ, ಟಾಟಾ ಸುಮೋ ಕಾರು, ಎರಡು ಬೈಕ್

    https://www.youtube.com/watch?v=dVtkCf-DdvM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಲಸ ಜ್ಯೂ. ವಾರ್ಡನ್ ಆದ್ರೆ 250 ಕೋಟಿ ರೂ. ಆಸ್ತಿ!

    ಕೆಲಸ ಜ್ಯೂ. ವಾರ್ಡನ್ ಆದ್ರೆ 250 ಕೋಟಿ ರೂ. ಆಸ್ತಿ!

    ರಾಮನಗರ: 250 ಕೋಟಿಗೂ ಅಧಿಕ ಆಸ್ತಿಯನ್ನ ಅಕ್ರಮವಾಗಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಎಸಿಬಿ ಪೊಲೀಸರು ನ್ಯಾಯಾಲಯದ ಆದೇಶದ ಮೇರೆಗೆ ಜೂನಿಯರ್ ವಾರ್ಡನ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ.

    ಕನಕಪುರ ತಾಲೂಕು ಹುಣಸನಹಳ್ಳಿಯ ಹಾಸ್ಟೆಲ್ ನ ಜೂನಿಯರ್ ವಾರ್ಡನ್ ಬಿ.ನಟರಾಜ್ ವಿರುದ್ಧ ಎಸಿಬಿ ಎಫ್‍ಐಆರ್ ದಾಖಲಿಸಿಕೊಂಡಿದೆ. ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಜೂನಿಯರ್ ವಾರ್ಡನ್ ಆಗಿರುವ ನಟರಾಜ್ ಅಕ್ರಮವಾಗಿ 250 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವುದಾಗಿ ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಆರೋಪಿಸಿ ದಾಖಲೆಗಳ ಸಹಿತವಾಗಿ ಕನಕಪುರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿದ್ದರು.

    ದೂರಿನ ಅನ್ವಯ ಪಿಸಿ ಕಾಯ್ದೆ 1988ರ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆಗೆ ನ್ಯಾಯಾಲಯದ ಆದೇಶ ಮಾಡಿದ್ದು ಎಸಿಬಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಕನಕಪುರ, ಬೆಂಗಳೂರು, ಹಾರೋಹಳ್ಳಿ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ರಮ ಎಸಗಿ ಸಂಪಾದಿಸಿದ್ದು ತನಿಖೆ ನಡೆಸುವಂತೆ ಆರ್ ಟಿ ಐ ಕಾರ್ಯಕರ್ತ ರವಿಕುಮಾರ್ ದೂರು ನೀಡಿದ್ದರು.

    ಯಾರು ಈ ನಟರಾಜ್?
    ನಟರಾಜ್ ಕನಕಪುರದ ನಿವಾಸಿಯಾಗಿದ್ದು, ಗುತ್ತಿಗೆ ಆಧಾರದ ಮೇರೆಗೆ ವಾರ್ಡನ್ ಆಗಿ ಸೇರಿಕೊಂಡಿದ್ದನು. ಮೊದಲಿಗೆ ಈತನಿಗೆ 7,200 ರೂ. ಸಂಬಳ ಬರುತ್ತಿತ್ತು. ಈಗ ಸದ್ಯಕ್ಕೆ 24 ಸಾವಿರ ಸಂಬಳ ಬರುತ್ತಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವಾರು ಟೆಂಡರ್‍ಗಳನ್ನು ಅಕ್ರಮವಾಗಿ ಪಡೆದು ಕಾಮಗಾರಿ ಕೆಲಸವನ್ನು ಮಾಡುತ್ತಿದ್ದಾನೆ. ಜೊತೆಗೆ ಅಕ್ರಮವಾಗಿ ಆಸ್ತಿಯನ್ನು ಸಂಪಾದನೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

    ಸಾಕ್ಷಿ ಸಮೇತ ವಾರ್ಡನ್ ಬಿ.ನಟರಾಜ್ ಅಕ್ರಮ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಎಫ್‍ಐಆರ್ ದಾಖಲಾಗಿ 3-4 ದಿನಗಳಾಗಿದ್ದರೂ ಇದುವರೆಗೂ ಸೂಕ್ತ ಕ್ರಮವನ್ನು ಜರುಗಿಸಿಲ್ಲ. ಹೀಗಾಗಿ ಅವರಿಗೆ ರಾಜಕೀಯ ನಾಯಕರು ಬೆಂಬಲವಿದೆ ಎಂಬುವುದು ತಿಳಿಯುತ್ತದೆ. ನಟರಾಜ್ ಗೆ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಸುರೇಶ್ ಬೆಂಬಲವಿದೆ. ಅವರ ಬೆಂಬಲ ಇಲ್ಲದೇ ಇಷ್ಟೊಂದು ಅಕ್ರಮ ಆಸ್ತಿ ಸಂಪಾದನೆ ಮಾಡಲು ಸಾಧ್ಯವಿಲ್ಲ. ಈಗಲೂ ರಾಜಕೀಯ ಶಕ್ತಿಯಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿಲ್ಲ ಎಂದು ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಆರೋಪಿಸಿದ್ದಾರೆ.

    https://www.youtube.com/watch?v=3YO0lbkgxeY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿರಿಕ್ ಪಾರ್ಟಿ ಸ್ಟೈಲ್‍ನಲ್ಲಿ ಕುಂದಾಪುರದಲ್ಲಿ ಪಿ.ಯು ವಿದ್ಯಾರ್ಥಿಗಳಿಂದ ಕಿರಿಕ್

    ಕಿರಿಕ್ ಪಾರ್ಟಿ ಸ್ಟೈಲ್‍ನಲ್ಲಿ ಕುಂದಾಪುರದಲ್ಲಿ ಪಿ.ಯು ವಿದ್ಯಾರ್ಥಿಗಳಿಂದ ಕಿರಿಕ್

    ಉಡುಪಿ: ಸ್ಯಾಂಡಲ್ ವುಡ್ ಸಕ್ಸಸ್ ಫುಲ್ ಮೂವಿ ಕಿರಿಕ್ ಪಾರ್ಟಿ ಎಲ್ಲರೂ ನೋಡಿದ್ದಾರೆ. ಎಂಜಿನಿಯರ್ ಸ್ಟೂಡೆಂಟ್‍ಗಳು ಮಾಡೋ ಒಂದೊಂದು ಅವಾಂತರ ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತದೆ. ಈಗ ಕುಂದಾಪುರ ತಾಲೂಕಿನ ಹಾಸ್ಟೆಲ್ ವಿದ್ಯಾರ್ಥಿಗಳು ಶಿಫ್ಟ್ ಮಾಡುವ ವಿಚಾರದಲ್ಲಿ ಕಿರಿಕ್ ಮಾಡಿ ಸುದ್ದಿಯಾಗಿದ್ದಾರೆ.

    ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಹಾಸ್ಟೆಲ್‍ನಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‍ನನ್ನು ಬೇರೆಡೆ ಶಿಫ್ಟ್ ಮಾಡುವ ಆದೇಶ ಬಂದಿತ್ತು. ಬೇರೆಡೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದರು. ಇದಕ್ಕೆ ವಿದ್ಯಾರ್ಥಿಗಳು ರೊಚ್ಚಿಗೆದ್ದು ಕೊಠಡಿಯ ಎಲ್ಲಾ ಫ್ಯಾನುಗಳಲ್ಲಿ ನೇತಾಡಿದ್ದು, ಫ್ಯಾನ್‍ಗಳೆಲ್ಲಾ ಬೆಂಡಾಗಿದೆ. ಗೋಡೆಗಳಲ್ಲಿ  ‘ಕಿರಿಕ್ ಬಾಯ್ಸ್’ ಎಂದು ಬರೆದಿದ್ದು ಮಾತ್ರವಲ್ಲದೇ  ಕಿರಿಕ್ ಪಾರ್ಟಿಯ ಕಾರಿನ ಚಿತ್ರವನ್ನು ರಚಿಸಿದ್ದಾರೆ.

    ಕೊಠಡಿಯ ಟ್ಯೂಬ್‍ಲೈಟ್, ಕುರ್ಚಿಗಳನ್ನು ಧ್ವಂಸಮಾಡಿದ್ದು ಕಬೋರ್ಡ್‍ನಲ್ಲಿದ್ದ ಪುಸ್ತಕ, ಪೇಪರ್‍ಗಳನ್ನೆಲ್ಲಾ ಕೆಡವಿ ಚಲ್ಲಾಪಿಲ್ಲಿ ಮಾಡಿದ್ದಾರೆ. ಮಕ್ಕಳು ಶಿಫ್ಟ್ ಆಗಿ ಬೇರೆ ಕೊಠಡಿಗೆ ಹೋಗುವ ಮುನ್ನ ಇಷ್ಟೆಲ್ಲಾ ಕಿರಿಕ್‍ಗಳನ್ನು ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ವಾರ್ಡನ್ ದೂರು ನೀಡಿದ್ದಾರೆ. ಇದನ್ನು ಹಾಸ್ಟೆಲ್ ಮೇಲಿನ ಪ್ರೀತಿ ಅನ್ನಬೇಕೋ ಅಥವಾ ವಿದ್ಯಾರ್ಥಿಗಳ ಹುಚ್ಚಾಟ ಅನ್ನಬೇಕೋ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.

  • ಋತುಚಕ್ರವಾಗಿರೋದು ಯಾರಿಗೆಂದು ತಿಳಿಯಲು 70 ಹುಡುಗಿಯರ ಬಟ್ಟೆ ಕಳಚಿಸಿದ ವಾರ್ಡನ್!

    ಋತುಚಕ್ರವಾಗಿರೋದು ಯಾರಿಗೆಂದು ತಿಳಿಯಲು 70 ಹುಡುಗಿಯರ ಬಟ್ಟೆ ಕಳಚಿಸಿದ ವಾರ್ಡನ್!

    ಮುಜಾಫರ್‍ನಗರ್: ಉತ್ತರಪ್ರದೇಶದ ವಸತಿ ಶಾಲೆಯೊಂದರ ವಾರ್ಡನ್ ಹಾಗು ಶಾಲೆಯ ಮುಖ್ಯಸ್ಥೆಯಾದ ಮಹಿಳೆಯೊಬ್ಬಳು ಸುಮಾರು 70 ಹುಡುಗಿಯರನ್ನು ಬಟ್ಟೆ ಕಳಚುವಂತೆ ಮಾಡಿದ್ದಾಳೆ ಎಂದು ಆರೋಪ ಕೇಳಿಬಂದಿದೆ.

    ಬಾತ್‍ರೂಮಿನಲ್ಲಿ ರಕ್ತದ ಕಲೆ ಕಾಣಿಸಿದ ಹಿನ್ನೆಲೆಯಲ್ಲಿ ಋತಚಕ್ರವಾಗಿರೊದು ಯಾರಿಗೆ ಎಂದು ತಿಳಿಯಲು ವಾರ್ಡನ್, ವಿದ್ಯಾರ್ಥಿನಿಯರನ್ನು ಬಟ್ಟೆ ತೆಗೆಯುವಂತೆ ಮಾಡಿದ್ದಾಳೆ. ಅಲ್ಲದೆ ವಿದ್ಯಾರ್ಥಿನಿಯರನ್ನ ತರಗತಿಯಲ್ಲೇ ಬೆತ್ತಲೆಯಾಗಿ ಕೂರುವಂತೆ ಮಾಡಿದ್ದಾಳೆಂದು ಆರೋಪಿಸಲಾಗಿದೆ.

    ಇಲ್ಲಿನ ದಿಗ್ರಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಗುರುವಾರದಂದು ಈ ಘಟನೆ ನಡೆದಿದೆ ಎಂದು ವಿದ್ಯಾರ್ಥಿನಿಯರ ಪೋಷಕರು ದೂರು ದಾಖಲಿಸಿದ್ದಾರೆ. ಶಾಲೆಯ ಪ್ರಾಂಶುಪಾಲೆ ಹಾಗೂ ವಾರ್ಡನ್ ಆಗಿರುವ ಸುರೇಖಾ ತೋಮರ್, ತನ್ನ ಆದೇಶವನ್ನು ಪಾಲಿಸದಿದ್ದರೆ ಅದರ ಪರಿಣಾಮವನ್ನ ಎದುರಿಸಬೇಕಾಗುತ್ತದೆ ಎಂದು ಹೇಳಿ ವಿದ್ಯಾರ್ಥಿನಿಯರನ್ನ ಬೆದರಿಸಿದ್ದಾಳೆಂದು ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ ಚಂದರ್ ಕೇಶ್ ಯಾದವ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಅಲ್ಲಿ ಯಾವ ಶಿಕ್ಷಕರೂ ಇರಲಿಲ್ಲ. ನಮ್ಮನ್ನು ಕಳಮಹಡಿಗೆ ಬರುವಂತೆ ಹೇಳಿದ್ರು. ಮೇಡಮ್ ನಮ್ಮ ಬಟ್ಟೆ ಕಳಚುವಂತೆ ಮಾಡಿದ್ರು. ಅವರು ಹೇಳಿದಂತೆ ಮಾಡದಿದ್ರೆ ಹೊಡೆಯುತ್ತೇನೆ ಅಂತ ಹೇಳಿದ್ರು. ನಾವು ಮಕ್ಕಳು, ನಾವೇನು ಮಾಡಲು ಸಾಧ್ಯ? ಅವರು ಹೇಳಿದಂತೆ ಮಾಡದೇ ಹೋಗಿದ್ದರೆ ನಮ್ಮನ್ನು ಹೊಡೆಯುತ್ತಿದ್ದರು ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿಕೆ ನೀಡಿದ್ದಾರೆ.

    ವಾರ್ಡನ್ ಅನೇಕ ವೇಳೆ ವಿದ್ಯಾರ್ಥಿನಿಯರಿಗೆ ಹೊಡೆದು ಬೆದರಿಸಿದ್ದು, ಆಕೆಗೆ ಶಿಕ್ಷೆಯಾಗಬೇಕೆಂದು ಪೋಷಕರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಹಿರಿಯ ಮಹಿಳಾ ಅಧಿಕಾರಿಯೊಬ್ಬರಿಂದ ತನಿಖೆ ನಡೆಸುವಂತೆ ಈಗಾಗಲೇ ರಾಜ್ಯ ಸರ್ಕಾರ ಆದೇಶಿಸಿದೆ. ಜಿಲ್ಲಾಡಳಿತ ಸುರೇಖಾಳನ್ನು ಕೆಲಸದಿಂದ ವಜಾ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಆದರೆ ಈ ಎಲ್ಲಾ ಆರೋಪಗಳನ್ನು ಸುರೇಖಾ ತೋಮರ್ ತಳ್ಳಿಹಾಕಿದ್ದು, ಅವರಿಗೆ ಬಟ್ಟೆ ಕಳಚುವಂತೆ ಯಾರೂ ಹೇಳಿಲ್ಲ. ನಾನು ಇಲ್ಲಿ ಇರಬಾರದು ಅಂತ ಇಲ್ಲಿನ ಸಿಬ್ಬಂದಿ ನಡೆಸಿರುವ ಪಿತೂರಿ ಇದು. ಇಲ್ಲಿನ ಸಿಬ್ಬಂದಿ ತಮ್ಮ ಕೆಲಸವನ್ನ ಸರಿಯಾಗಿ ಮಾಡುತ್ತಿದ್ದಾರೋ ಇಲ್ಲವೋ ಎಂದು ಪರಿಶೀಲಿಸುವಂತೆ ನನಗೆ ಹೇಳಲಾಗಿತ್ತು. ನಾನು ತುಂಬಾ ಸ್ಟ್ರಿಕ್ಟ್, ಅದಕ್ಕೆ ನನ್ನನ್ನು ಅವರು ದ್ವೇಷಿಸುತ್ತಾರೆ ಎಂದು ಹೇಳಿದ್ದಾಳೆ.

    ಈ ಘಟನೆಯಿಂದಾಗಿ ಸುಮಾರು 35 ವಿದ್ಯಾರ್ಥಿಗಳು ಶಾಲೆಯನ್ನ ತೊರೆದಿದ್ದಾರೆ ಎಂದು ವರದಿಯಾಗಿದೆ.