Tag: ವಾರ್

  • ಬಹುದಿನಗಳ ಬಳಿಕ ಸಿನ್ಮಾ ಒಪ್ಪಿಕೊಂಡ ಕೊಹ್ಲಿ ಮಡದಿ

    ಬಹುದಿನಗಳ ಬಳಿಕ ಸಿನ್ಮಾ ಒಪ್ಪಿಕೊಂಡ ಕೊಹ್ಲಿ ಮಡದಿ

    ಮುಂಬೈ: ಝೀರೋ ಸಿನಿಮಾ ಬಳಿಕ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ರೋಹಿತ್ ಶರ್ಮಾ ಮತ್ತು ಫರ್ಹಾ ಖಾನ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದ್ದು, ಹೃತಿಕ್ ರೋಷನ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

    ಮದುವೆ ಬಳಿಕ ಅನುಷ್ಕಾ ಶರ್ಮಾ ನಟನೆಯ ಸಿನಿಮಾಗಳು ಒಂದರ ನಂತರ ಒಂದರಂತೆ ಬಿಡುಗಡೆಗೊಂಡವು. 2018 ಡಿಸೆಂಬರ್ ನಲ್ಲಿ ತೆರೆಕಂಡ ಝೀರೋ ಚಿತ್ರದ ಬಳಿಕ ಅನುಷ್ಕಾ ಶರ್ಮಾ ಚಿತ್ರರಂಗದಿಂದ ದೂರ ಉಳಿದುಕೊಂಡು ಖಾಸಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಾಂಸರಿಕ ಜೀವನದಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಶರ್ಮಾ ಬಣ್ಣದ ಲೋಕದಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಬಲವಾಗಿ ಕೇಳಿ ಬಂದಿದ್ದವು.

    ಸಿನ್ಮಾದಿಂದ ದೂರ ಉಳಿಯುವ ಸುದ್ದಿಗೆ ಸಾಕ್ಷಿ ಎಂಬಂತೆ ಅನುಷ್ಕಾ ಹೇಳಿಕೆಯೊಂದು ಅಭಿಮಾನಿಗಳಿಗೆ ಅಚ್ಚರಿಯನ್ನು ನೀಡಿತ್ತು. ಖಾಸಗಿ ಸಂದರ್ಶನದಲ್ಲಿ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ, ನನ್ನದೇ ಆದ ಹೆಜ್ಜೆ ಗುರುತು ಮೂಡಿಸಿದ್ದೇನೆ. ಡಿಜಿಟಲ್ ವೇದಿಕೆಯಲ್ಲಿ ಏನಾದ್ರೂ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಅನುಷ್ಕಾ ಶರ್ಮಾ ಹೇಳಿದ್ದರು. ಅನುಷ್ಕಾ ಹೇಳಿಕೆ ಬೆನ್ನಲ್ಲೇ ಸಿನಿಮಾದಿಂದ ದೂರವಾಗುತ್ತಿದ್ದಾರೆ ಎಂಬ ಅಭಿಮಾನಿಗಳ ಊಹೆ ಬಲವಾಗಿತ್ತು. ಇದೀಗ ರೋಹಿತ್ ಶರ್ಮಾ ಮತ್ತು ಫರ್ಹಾ ಖಾನ್ ಜಂಟಿ ನಿರ್ಮಾಣದ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

    ಹೃತಿಕ್ ರೋಷನ್ ನಟನೆ ಸಿನಿಮಾ ‘ವಾರ್’ ಸತತವಾಗಿ ಬಾಕ್ಸ್ ಆಫೀಸ್ ದೋಚುತ್ತಿದೆ. ಸಿನಿಮಾದಲ್ಲಿ ಹೃತಿಕ್ ಗೆ ಶಿಷ್ಯನಾಗಿ ಟೈಗರ್ ಶ್ರಾಫ್ ನಟಿಸಿದ್ದಾರೆ. ಸಿನಿಮಾದಲ್ಲಿ ಗುರು-ಶಿಷ್ಯನ ನಡುವೆ ಸಾಹಸಮಯ ದೃಶ್ಯಗಳು ನೋಡುಗರನ್ನು ಕುರ್ಚಿಯ ತುತ್ತ ತುದಿಗೆ ತಂದು ಕೂರಿಸುತ್ತದೆ. ಇಷ್ಟು ಮಾತ್ರವಲ್ಲದೇ ಹೃತಿಕ್ ಮತ್ತು ಟೈಗರ್ ಸಿಕ್ಸ್ ಪ್ಯಾಕ್ ಹುಡುಗಿಯರು ಫಿದಾ ಆಗಿ ತಮ್ಮ ನೆಚ್ಚಿನ ನಟನಿಗೆ ಸಾಲು ಸಾಲು ಬೇಡಿಕೆಗಳನ್ನು ಇಡುತ್ತಿದ್ದಾರೆ.

    ಅನುಷ್ಕಾ ಮತ್ತು ಹೃತಿಕ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಚಿತ್ರೀಕರಣ 2020ರಿಂದ ಆರಂಭಗೊಳ್ಳಲಿದ್ದು, 2021ಕ್ಕೆ ತೆರೆಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಮೊದಲು ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗಿತ್ತು.

  • ರಾಜೀನಾಮೆ ಸರಿಯೇ? ತಪ್ಪೇ? – ವ್ಯಾಕರಣ ಮೇಸ್ಟ್ರು Vs ಕಾನೂನು ಮೇಸ್ಟ್ರು

    ರಾಜೀನಾಮೆ ಸರಿಯೇ? ತಪ್ಪೇ? – ವ್ಯಾಕರಣ ಮೇಸ್ಟ್ರು Vs ಕಾನೂನು ಮೇಸ್ಟ್ರು

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಮಾಜಿ ಸಚಿವ ಸುರೇಶ್ ಕುಮಾರ್ ಅವರ ನಡುವೆ ಟ್ವಿಟ್ಟರಿನಲ್ಲಿ ವಾರ್ ಆರಂಭಗೊಂಡಿದೆ.

    ಶಾಸಕರು ರಾಜೀನಾಮೆ ನೀಡಿದ್ದಕ್ಕೆ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಕಾರಣ ಎಂದು ಆರೋಪಿಸಿದ್ದರು. ಸಿದ್ದರಾಮಯ್ಯ ಅವರು ಪುನಃ ಮೋದಿ ಅವರ ಹೆಸರು ಹೇಳಿದ್ದಕ್ಕೆ ಸುರೇಶ್ ಕುಮಾರ್ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

    ಸುರೇಶ್ ಕುಮಾರ್ ಅವರು ಸೋಮವಾರ ತಮ್ಮ ಟ್ವಿಟ್ಟರಿನಲ್ಲಿ, “ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ತಿಂದದ್ದು ಜೀರ್ಣವಾಯಿತು. ಏಕೆಂದರೆ ಮತ್ತೆ ಮೋದಿಯವರ ಮೇಲೆ ಟೀಕೆ ಮಾಡಿ ಆಯಿತು” ಎಂದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಸಿದ್ದರಾಮಯ್ಯ ಇಂದು ರೀ-ಟ್ವೀಟ್ ಮಾಡುವ ಮೂಲಕ ಸುರೇಶ್ ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ. “ಸುರೇಶ್ ಅವರು ರಾತ್ರಿ ತಿಂದದ್ದು ಇಂದು ಬೆಳಿಗ್ಗೆ ನಿತ್ಯಕರ್ಮದಲ್ಲಿ ನಿರ್ಗಮನವಾಯಿತು. ಏಕೆಂದರೆ ಬೆಳಿಗ್ಗೆ ಅರ್ಧಗಂಟೆ ಅವರು ಮೋದಿ ಭಜನೆ ಮಾಡಿ ಆಯಿತು” ಎಂದು ಬರೆದು ಟಾಂಗ್ ಕೊಟ್ಟಿದ್ದಾರೆ.

    ಇದಕ್ಕೆ ಸುರೇಶ್ ಕುಮಾರ್, “ವ್ಯಾಕರಣ ಮೇಸ್ಟ್ರೇ. ಆ ಕೆಲವು ಶಾಸಕರು ರಾಜಿನಾಮೆ ನೀಡಿರುವುದು ತಮ್ಮ ಶಾಸಕ ಸ್ಥಾನಕ್ಕೆ, ತಮ್ಮ ಪಕ್ಷಕ್ಕಲ್ಲ(ಕಾಂಗ್ರೆಸಿಗಲ್ಲ). ಇದು ಹೇಗೆ ಪಕ್ಷಾಂತರ ವಿರೋಧಿ ಕಾಯ್ದೆ ಉಲ್ಲಂಘನೆ ಆಗುತ್ತದೆ? ಅವರ ವಿರುದ್ಧ ಯಾವುದೇ ಕ್ರಮ ಸಾಧ್ಯವೇ?” ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

    ಈ ಟ್ವೀಟ್‍ಗೆ ಸಿದ್ದರಾಮಯ್ಯ, “ಕಾನೂನಿನ ಮೇಷ್ಟ್ರೇ, ಸುರೇಶ್ ಶಾಸಕರು ತಮ್ಮ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿದರೆ ಇಲ್ಲವೇ ಇನ್ನೊಂದು ಪಕ್ಷ ಸೇರಿದರೆ, ಅದನ್ನು ರಾಜೀನಾಮೆ ಎಂದು ತೀರ್ಮಾನಿಸಿ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮಕೈಗೊಳ್ಳಬಹುದು ಎಂದು ನ್ಯಾಯಾಲಯದ ತೀರ್ಪುಗಳು ಹೇಳಿವೆ. ಸ್ವಲ್ಪ ಓದಿಕೊಳ್ಳಿ” ಎಂದು ಫೋಟೋ ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ.

  • ಸಿದ್ದರಾಮಯ್ಯ, ಶೋಭಾ ಮಧ್ಯೆ `ಕೋ-ಜಾ’ ಸಮರ

    ಸಿದ್ದರಾಮಯ್ಯ, ಶೋಭಾ ಮಧ್ಯೆ `ಕೋ-ಜಾ’ ಸಮರ

    ಬೆಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಟ್ವಿಟರ್ ನಲ್ಲಿ `ಕೋ-ಜಾ’ ಸಮರ ನಡೆದಿದೆ.

    ಬಿಜೆಪಿಯ ಅಹೋರಾತ್ರಿ ಪ್ರತಿಭಟನೆಯ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಬಳಿಕ ಟ್ವೀಟ್ ಮಾಡಿದ್ದ ಶೋಭಾ ಕರಂದ್ಲಾಜೆ `ಕೋ-ಜಾ’ ಸರ್ಕಾರ ಜಿಂದಾಲ್‍ಗೆ ಪುಡಿಗಾಸಿಗೆ ಬೆಲೆ ಬಾಳುವ ಭೂಮಿ ಮಾರಾಟ ಮಾಡುತ್ತಿದೆ. ಈ ಕುರಿತು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮೌನ ವಹಿಸಿದ್ದಾರೆ. ನಿಮ್ಮ ಮೌನ ಯಾಕೆ ಅಂತ ರಾಜ್ಯ ಕೇಳುತ್ತಿದೆ ಎಂದು ಅಣಕವಾಡಿದ್ದರು.

    https://twitter.com/ShobhaBJP/status/1139474536032718848

    ಇದಕ್ಕೆ ಕಿಡಿಕಾರಿರುವ ಸಿದ್ದರಾಮಯ್ಯ, “ಶೋಭಾ ಅವರೇ, ನಿಮ್ಮ ಯೋಜನೆ ರೂಪಿಸುವ ಕೌಶಲ್ಯ ನಿಮ್ಮ ಪದ ಬಳಕೆಯಷ್ಟೇ ಚೆನ್ನಾಗಿರುತ್ತಿದ್ರೆ, ನೀವು ಸಹ `ಮೈತ್ರಿ’ ಯೋಜನೆ ಜಾರಿ ಮಾಡುತ್ತಿದ್ದೀರಿ. ಅಸಾಂವಿಧಾನಿಕ ಪದಗಳ ಬಳಕೆಯನ್ನಾದ್ರೂ ಕಡಿಮೆ ಮಾಡಲು ಪ್ರಯತ್ನಿಸಿ. ನೀವು ಬಳಸುವ ಪದಗಳು ಒಂದು ವರ್ಗಕ್ಕೆ ನೋವುಂಟು ಮಾಡಿವೆ” ಎಂದಿದ್ದರು.

    ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರೋ ಶೋಭಾ ಕರಂದ್ಲಾಜೆ, ಜಿಂದಾಲ್ ಜೊತೆಗಿನ ಕೋ-ಜಾ ಸರ್ಕಾರದ ನಂಟಿನ ವಿರುದ್ಧ ಬಿಜೆಪಿ ನಾಯಕರು ಎರಡು ದಿನದ ಅಹೋರಾತ್ರಿ ಧರಣಿ ಆರಂಭಿಸಿದ್ದೇವೆ. ಜಿಂದಾಲ್‍ಗೆ ಭೂಮಿ ನೀಡುವ ಆದೇಶ ವಾಪಸ್ ಹಾಗೂ ಐಎಂಎ ಹಗರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಹಿರಿಯ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ನಮ್ಮ ನಾಯಕರು ರಸ್ತೆಯಲ್ಲಿ ಮಲಗಿದ್ದಾರೆ ಎಂದಿದ್ದಾರೆ.

    https://twitter.com/ShobhaBJP/status/1139591111893061633

  • ನಾನು ತಿನ್ನುತ್ತೇನೆ, ನೀವು ತಿನ್ನಿ – ಬಿಜೆಪಿ, ಸಿಎಂ ನಡ್ವೆ ಟ್ವಿಟ್ಟರ್ ವಾರ್

    ನಾನು ತಿನ್ನುತ್ತೇನೆ, ನೀವು ತಿನ್ನಿ – ಬಿಜೆಪಿ, ಸಿಎಂ ನಡ್ವೆ ಟ್ವಿಟ್ಟರ್ ವಾರ್

    ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಪರಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಸಿಎಂ ನಡುವೆ ಟ್ವಿಟ್ಟರ್ ವಾರ್ ಆರಂಭಗೊಂಡಿದೆ.

    ಬಿಜೆಪಿ ಐಎಂಎ ಮಾಲೀಕ ಮನ್ಸೂರ್ ನೊಂದಿಗೆ ಸಿಎಂ ಊಟ ಮಾಡುತ್ತಿರುವ ಫೋಟೋ ಹಾಕಿ ವ್ಯಂಗ್ಯ ಮಾಡಿದೆ. “ನಾನು ತಿನ್ನುತ್ತೇನೆ. ನೀವು ತಿನ್ನಿ ಎನ್ನುವುದು ಜೆಡಿಎಸ್ ಧ್ಯೇಯ. ಇದರಿಂದಾಗಿಯೇ ಮನ್ಸೂರ್ ನಂತಹ ವಂಚಕ ಲೂಟಿ ಮಾಡಿಕೊಂಡು ಹೋಗಿದ್ದಾರೆ” ಎಂದು ಬಿಜೆಪಿ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.

    ಈ ಟ್ವೀಟ್‍ಗೆ ಸಿಎಂ, ಬಿಜೆಪಿ ಹಳೆಯ ಫೋಟೋ ಇಟ್ಟುಕೊಂಡು ಜನರ ದಾರಿ ತಪ್ಪಿಸುತ್ತಿರುವುದು ಬೇಸರ ತಂದಿದೆ. ಐಎಂಎ ಗಂಭೀರವಾದ ಪ್ರಕರಣ ಆಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

    ಐಎಂಎ ವಂಚನೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹೂಡಿಕೆದಾರರ ಆತಂಕವನ್ನು ಸರ್ಕಾರ ಅರ್ಥ ಮಾಡಿಕೊಂಡಿದ್ದು ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ಗೃಹ ಸಚಿವರಾದ ಎಂಬಿ ಪಾಟೀಲ್ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದು ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಲು ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.

    https://twitter.com/CMofKarnataka/status/1138360564340576257

    ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದ್ದು, ಈ ವಂಚಕ ನಿಮಗೆ ಮೊದಲಿನಿಂದಲೂ ಪರಿಚಯ. ಈ ವಂಚಕನನ್ನು ಸೆರೆ ಹಿಡಿಯುವುದು ನಿಮ್ಮ ಕೆಲಸ ಅದನ್ನು ಬಿಟ್ಟು ಟ್ವಿಟ್ಟರ್ ನಲ್ಲಿ ಅಳಬೇಡಿ ಎಂದು ಮತ್ತೊಂದು ಟ್ವೀಟ್ ಮಾಡಿ ಸಿಎಂಗೆ ಟಾಂಗ್ ನೀಡಿದೆ.

  • ಸಂಸದ ಜೋಶಿ ವಿರುದ್ಧ ಬಿಜೆಪಿ ಮಾಜಿ ಶಾಸಕನ ಮಗಳ ಫೇಸ್‍ಬುಕ್ ವಾರ್!

    ಸಂಸದ ಜೋಶಿ ವಿರುದ್ಧ ಬಿಜೆಪಿ ಮಾಜಿ ಶಾಸಕನ ಮಗಳ ಫೇಸ್‍ಬುಕ್ ವಾರ್!

    ಹುಬ್ಬಳ್ಳಿ: ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಕುಂದಗೋಳ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಎಸ್.ಐ ಚಿಕ್ಕನಗೌಡರ ಪುತ್ರಿ ಫೇಸ್‍ಬುಕ್ ನಲ್ಲಿ ವಾರ್ ಆರಂಭಿಸಿದ್ದಾರೆ.

    ನನ್ನ ತಂದೆಯ ಸೋಲಿಗೆ ಕಾರಣರಾದ ಮಹೇಶ್ ಗೌಡ ಜೊತೆಗೆ ನೀವು ಹೊಂದಾಣಿಕೆ ಮಾಡಿದ್ದು ಎಷ್ಟು ಸರಿ? ಆ ದ್ರೋಹಿಗಳನ್ನು ಪಕ್ಷದಿಂದ ಕಿತ್ತೊಗೆಯೋವರೆಗೂ ನಮಗೆ ಸಮಾಧಾನ ಇಲ್ಲ ಎಂದು ಫೇಸ್‍ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಮಾನ್ಯ ಸಂಸದರೇ ಏನಿದು? ನಿಮ್ಮ ಪಕ್ಷವಾದ ಬಿಜೆಪಿಗೆ ಮೋಸ ಮಾಡಿ ಪಕ್ಷಕ್ಕೆ ದ್ರೋಹ ಮಾಡಿದವರನ್ನು ಮುಂದೆ ನಿಲ್ಲಿಸಿಕೊಂಡು ಕಾರ್ಯಕ್ರಮ ಮಾಡ್ತೀರಿ. ನಾವು ಪ್ರೂಫ್ ಸಮೇತ ಕೆಲವು ಮುಖಂಡರು ಕಾಂಗ್ರೆಸ್‍ಗೆ ಬೆಂಬಲಿಸುವಂತೆ ಪ್ರಚಾರ ಮಾಡಿದ್ದನ್ನು ಸಿಡಿಯಲ್ಲಿ ಹಾಗೂ ಲಿಖಿತದ ಮೂಲಕ ಅವರೆಲ್ಲರನ್ನು ಪಕ್ಷದಿಂದ ವಜಾ ಮಾಡುವಂತೆ ಕೇಳಿಕೊಂಡಿದ್ದೇವು. ಆದರೆ ಅದನ್ನು ಮಾಡುವುದು ಬಿಟ್ಟು ನೀವು ಅದೇ ಮೋಸಗಾರರ ಗ್ಯಾಂಗ್ ಕಟ್ಟಿಕೊಂಡು ಕಾರ್ಯಕ್ರಮಗಳನ್ನ ಮಾಡಿದ್ದೀರಿ.

     

    ಇಂತಹ ಜನರ ವಿರುದ್ಧ ನೀವು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ನನ್ನ ಪ್ರಶ್ನೆಗೆ ಉತ್ತರಿಸಿ. ಹಾಗೆಯೇ ಬಿಜೆಪಿಯ ನಿಜವಾದ ಕಾರ್ಯಕರ್ತರು ಹಾಗೂ ಮತದಾರರಿಗೆ ಬೆಲೆ ಇಲ್ಲವೇ? ನಿಮ್ಮ ಮೇಲೆ ನನಗೆ ತುಂಬಾ ಗೌರವವಿದೆ. ಚಿಕ್ಕ ವಯಸ್ಸಿನಿಂದ ನಿಮ್ಮನ್ನು ನೋಡುತ್ತಿದ್ದೇನೆ. ಆದರೆ ಯಾವುದೋ ಗುಂಪಿನ ಹಿತಾಸಕ್ತಿಗೆ ಕುಂದಗೋಳದಲ್ಲಿ ಬಿಜೆಪಿ ಸೋಲುವ ಹಾಗೆ ಮಾಡಿದ್ದು ವಿಪರ್ಯಾಸ. ಅದೇನೆ ಆಗಲಿ, ಪಕ್ಷ ಎಂದ ಮೇಲೆ ನಾವೆಲ್ಲ ಒಂದೇ ಎನ್ನಬೇಕಲ್ಲವೇ? ಅಧಿಕಾರ ಶಾಶ್ವತವಲ್ಲ. ಆದರೆ ನಿಮಗೂ ಅದೇ ರೀತಿ ಆದರೆ ಹೇಗೆ ಇರುತ್ತಾ ಯೋಚನೆ ಮಾಡಿ. ಆ ದ್ರೋಹಿಗಳನ್ನು ಪಕ್ಷದಿಂದ ಕಿತ್ತೊಗೆಯೋವರೆಗೂ ನಮಗೆ ಸಮಾಧಾನ ಇಲ್ಲ. ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇನೆ.

    ನಂದಾ ಅವರ ಪೋಸ್ಟ್‍ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಂದಾ ಅವರು, ನಾನು ಯಾರಿಗೂ ವಾರ್ನಿಂಗ್ ಕೊಟ್ಟಿಲ್ಲ. ಕೊಡುವಷ್ಟು ದೊಡ್ಡವಳು ಅಲ್ಲ. ಅನ್ಯಾಯವನ್ನು ಪ್ರಶ್ನಿಸಿದ್ದೇನೆ ಅಷ್ಟೇ. ಜೈ ಬಿಜೆಪಿ, ಜೈ ಮೋದಿಜಿ ಎಂದು ಹೇಳಿಕೊಂಡಿದ್ದಾರೆ

    https://www.facebook.com/nanda.chikkanagoudar/posts/2324053347605526

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಫೇಸ್‍ಬುಕ್, ವಾಟ್ಸಾಪ್ ನಲ್ಲಿ ವಾರ್- ನಾಯಕರನ್ನು ಪರಸ್ಪರ ಹೀಯಾಳಿಸಿದ್ದಕ್ಕೆ ಜೆಡಿಎಸ್ ಸದಸ್ಯರ ಮೇಲೆ `ಕೈ’ ಹಲ್ಲೆ

    ಫೇಸ್‍ಬುಕ್, ವಾಟ್ಸಾಪ್ ನಲ್ಲಿ ವಾರ್- ನಾಯಕರನ್ನು ಪರಸ್ಪರ ಹೀಯಾಳಿಸಿದ್ದಕ್ಕೆ ಜೆಡಿಎಸ್ ಸದಸ್ಯರ ಮೇಲೆ `ಕೈ’ ಹಲ್ಲೆ

    ರಾಮನಗರ: ಫೇಸ್‍ಬುಕ್ ಹಾಗೂ ವಾಟ್ಸಾಪ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಮಾಗಡಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪುರಸಭೆ ಸದಸ್ಯರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

    ಕಳೆದ ಮೂರು ತಿಂಗಳಿನಿಂದ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ಹಾಗೂ ಜೆಡಿಎಸ್ ನ ಎ. ಮಂಜುನಾಥ್ ಅವರು ಪಕ್ಷಾಂತರ ಹಾಗೂ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಾರ್ ಶುರುವಾಗಿದೆ. ತಮ್ಮ ನಾಯಕರುಗಳ ಪರವಾಗಿ ಪೋಸ್ಟ್ ಮಾಡಿ ವಿರೋಧಿಗಳನ್ನ ಜರಿದಿದ್ದಾರೆ.

    ಈ ವಿಚಾರವಾಗಿ ಮಂಗಳವಾರ ರಾತ್ರಿ ಮಾಗಡಿ ಪುರಸಭೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮಾತಿನ ಚಕಮಕಿ ನಡೆಸಿ ಕೈಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ಬೆಂಬಲಿಗರಾದ ಪುರಸಭೆಯ ಮಾಜಿ ಅದ್ಯಕ್ಷ ಪುರುಷೋತ್ತಮ ಹಾಗೂ ಅವರ ಸಹವರ್ತಿಗಳು ಜೆಡಿಎಸ್ ನ ಬಾಲರಘು, ಜವರೇಗೌಡ, ಮುನಿರಾಜು ನಡುವೆ ಮಾತಿನ ಚಕಮಕಿ ನಡೆಸಿ ಹಲ್ಲೆ ಮಾಡಿದ್ದಾರೆ.

    ಘಟನೆ ಸಂಬಂಧ ಎರಡು ಬಣದವರು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.