Tag: ವಾರಣಾಸಿ ಕೋರ್ಟ್‌

  • ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲ್ಲ- ಮುಸ್ಲಿಂ ಸಮಿತಿ ಮನವಿ ತಿರಸ್ಕರಿಸಿದ ಹೈಕೋರ್ಟ್‌

    ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲ್ಲ- ಮುಸ್ಲಿಂ ಸಮಿತಿ ಮನವಿ ತಿರಸ್ಕರಿಸಿದ ಹೈಕೋರ್ಟ್‌

    ಲಕ್ನೋ: ಜ್ಞಾನವಾಪಿ ಮಸೀದಿಯ (Gyanvapi mosque) ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಿರುವ ವಾರಣಾಸಿ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿದೆ. ಇದರಿಂದ ಜ್ಞಾನವಾಪಿ ಮಸೀದಿ ಸಮಿತಿಗೆ ಹಿನ್ನಡೆಯಾಗಿದೆ.

    ವಾರಣಾಸಿ (Varanasi) ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆ ಕೋರಿ ಜ್ಞಾನವಾಪಿ ಮಸೀದಿ ಸಮಿತಿ ಅಲಹಾಬಾದ್‌ ಹೈಕೋರ್ಟ್‌ ಗೆ ಮನವಿ ಸಲ್ಲಿಸಿತ್ತು. ಜಿಲ್ಲಾ ಕೋರ್ಟ್‌ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಫೆ.6 ರೊಳಗೆ ತನ್ನ ಮನವಿಗೆ ತಿದ್ದುಪಡಿಗಳನ್ನು ಮಾಡಲು ಮಸೀದಿ ಸಮಿತಿಗೆ  ಹೈಕೋರ್ಟ್‌ ಸೂಚನೆ ನೀಡಿದೆ.

    ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ಅಂಜುಮನ್ ಇಂತೆಝಾಮಿಯಾ ಮಸಾಜಿದ್ ಸಮಿತಿ (ಎಐಎಂಸಿ)ಗೆ ಅಲಹಾಬಾದ್ ಹೈಕೋರ್ಟ್ ಫೆಬ್ರುವರಿ 6 ರವರೆಗೆ ಕಾಲಾವಕಾಶ ನೀಡಿತು. ಇದನ್ನೂ ಓದಿ: ಪೂಜೆಗೆ ಅವಕಾಶ ನೀಡಬೇಡಿ : ಸುಪ್ರೀಂ ಮೊರೆ ಹೋಗಿದ್ದ ಜ್ಞಾನವಾಪಿ ಮಸೀದಿ ಸಮಿತಿ – ತಡ ರಾತ್ರಿ ನಡೆದಿದ್ದು ಏನು?

    ಮಸೀದಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಸಮಿತಿಯು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರವಾಲ್ ಈ ಆದೇಶವನ್ನು ನೀಡಿದ್ದಾರೆ. ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಮುಸ್ಲಿಂ ಸಮಿತಿ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಸಮಿತಿಯು ಹೈಕೋರ್ಟ್‌ಗೆ ಮನವಿ ಸಲ್ಲಿಸಿತು. ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವಿಗ್ರಹಗಳ ಮುಂದೆ ಅರ್ಚಕರು ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಣಾಸಿ ನ್ಯಾಯಾಲಯ ಬುಧವಾರ ತೀರ್ಪು ನೀಡಿತ್ತು.

    ನ್ಯಾಯಾಲಯದ ಆದೇಶದ ಮೇರೆಗೆ ವಾರಣಾಸಿಯಲ್ಲಿ ಬಂದ್
    ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳ ಅಂಗಡಿಗಳು ಮತ್ತು ಕೆಲವು ಭಾಗಗಳನ್ನು ಮುಚ್ಚಲಾಗಿದೆ. ಜಿಲ್ಲಾ ನ್ಯಾಯಾಲಯದ ಆದೇಶದ ನಂತರ ಶುಕ್ರವಾರ ನಮಾಜ್‌ಗೆ ಮುಂಚಿತವಾಗಿ ಇಡೀ ವಾರಣಾಸಿ ಜಿಲ್ಲೆಯಲ್ಲಿ ಪೊಲೀಸರು ಅಲರ್ಟ್ ಘೋಷಿಸಿದ್ದಾರೆ.

    ಜ್ಞಾನವಾಪಿ ಮಸೀದಿಯ ವ್ಯವಹಾರ ನೋಡಿಕೊಳ್ಳುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಶುಕ್ರವಾರ ಪಟ್ಟಣದಲ್ಲಿ ಬಂದ್‌ಗೆ ಕರೆ ನೀಡಿತ್ತು. ಪಟ್ಟಣದ ದಾಲ್ಮಂಡಿ, ನೈ ಸಡಕ್, ನಾಡೆಸರ್ ಮತ್ತು ಅರ್ದಲ್ ಬಜಾರ್ ಪ್ರದೇಶಗಳಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಮಾರುಕಟ್ಟೆ ಪ್ರದೇಶಗಳಲ್ಲಿ ಬಂದ್‌ನ ಪರಿಣಾಮ ಗೋಚರಿಸಿದೆ.

  • ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆಗೆ ನೀಡಿದ್ದ ಗಡುವು ಅಂತ್ಯ – ಕೋರ್ಟ್‌ಗೆ ವರದಿ?

    ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆಗೆ ನೀಡಿದ್ದ ಗಡುವು ಅಂತ್ಯ – ಕೋರ್ಟ್‌ಗೆ ವರದಿ?

    ಲಕ್ನೋ: ಜ್ಞಾನವಾಪಿ ಮಸೀದಿ (Gyanvapi Mosque) ಆವರಣದ ವೈಜ್ಞಾನಿಕ ಸಮೀಕ್ಷೆ ವರದಿಯ ಗಡುವು ಮಂಗಳವಾರ ಕೊನೆಗೊಳ್ಳಲಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ (Varanasi Court) ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. 100 ದಿನಗಳ ಕಾಲ ಸಮೀಕ್ಷೆ ನಡೆಸಲಾಗಿದೆ.

    ಸಮೀಕ್ಷೆಯು ಸುಮಾರು ಒಂದು ತಿಂಗಳ ಹಿಂದೆ ಮುಕ್ತಾಯಗೊಂಡಿತು. ಎಎಸ್ಐ ತನ್ನ ವರದಿಯನ್ನು ಸಲ್ಲಿಸಲು ಹೆಚ್ಚುವರಿ ಸಮಯವನ್ನು ಕೋರಿತ್ತು. ಕೊನೆಯದಾಗಿ ನವೆಂಬರ್ 18 ರಂದು ಎಎಸ್ಐ ಇನ್ನೂ 15 ದಿನಗಳ ಕಾಲಾವಕಾಶವನ್ನು ಕೇಳಿದಾಗ ವಿಸ್ತರಣೆಯಾಗಿತ್ತು. ನ್ಯಾಯಾಲಯ 10 ದಿನಗಳ ಕಾಲಾವಕಾಶ ನೀಡಿತ್ತು. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌ – ಏನಿದು ರ‍್ಯಾಟ್‌ರೋಲ್‌ ಮೈನಿಂಗ್‌?

    ಮಸೀದಿ ಆವರಣದಲ್ಲಿ ಆಗಸ್ಟ್ 4 ರಿಂದ ಎಎಸ್‌ಐ ಸರ್ವೆ ನಡೆಸಿತ್ತು. ಇದು ವುಜುಖಾನಾ ಪ್ರದೇಶವನ್ನು ಬಿಟ್ಟಿದೆ. ಇದನ್ನು ಸುಪ್ರೀಂ ಕೋರ್ಟ್‌ನ ಆದೇಶಗಳಿಂದ ಮುಚ್ಚಲಾಗಿದೆ. ನವೆಂಬರ್ 2 ರಂದು ಎಎಸ್ಐ, ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಆದರೆ ಸಮೀಕ್ಷೆಯಲ್ಲಿ ಬಳಸಲಾದ ಸಲಕರಣೆಗಳ ವಿವರಗಳೊಂದಿಗೆ ವರದಿಯನ್ನು ಸಂಗ್ರಹಿಸಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ದಾಖಲೆ ಸಲ್ಲಿಸಲು ನ್ಯಾಯಾಲಯ ನವೆಂಬರ್ 17 ರ ವರೆಗೆ ಹೆಚ್ಚುವರಿ ಕಾಲಾವಕಾಶ ನೀಡಿತ್ತು.

    ದೇವಾಲಯದ ಪಶ್ಚಿಮ ಗೋಡೆಯ ಹಿಂಭಾಗದಲ್ಲಿರುವ ಶೃಂಗಾರ್ ಗೌರಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ನಾಲ್ವರು ಮಹಿಳೆಯರು ಸಲ್ಲಿಸಿದ ಅರ್ಜಿಯ ನಂತರ ಜುಲೈ 21 ರಂದು ವಾರಣಾಸಿ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ ನ್ಯಾಯಾಲಯವು ಆ ಅರ್ಜಿಯನ್ನು ಆಧರಿಸಿ ಸಂಕೀರ್ಣದ ವಿಡಿಯೋ ಸಮೀಕ್ಷೆಗೆ ಆದೇಶಿಸಿತು. ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆಯು ವುಝುಖಾನಾದಲ್ಲಿನ ರಚನೆಯನ್ನು ಬಹಿರಂಗಪಡಿಸಿತು. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ

    ಬಲಪಂಥೀಯ ಕಾರ್ಯಕರ್ತರು ಈ ಸ್ಥಳದಲ್ಲಿ ಹಿಂದೆ ದೇವಾಲಯವಿತ್ತು. ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 17 ನೇ ಶತಮಾನದಲ್ಲಿ ಕೆಡವಲಾಯಿತು ಎಂದು ಹೇಳಿಕೊಳ್ಳುತ್ತಾರೆ. ಈ ಮಸೀದಿಯು ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿದೆ.

  • ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಆರಾಧನೆಗೆ ಅನುಮತಿ ಕೋರಿ ಅರ್ಜಿ – ನ.14ಕ್ಕೆ ವಿಚಾರಣೆ ಮುಂದೂಡಿಕೆ

    ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಆರಾಧನೆಗೆ ಅನುಮತಿ ಕೋರಿ ಅರ್ಜಿ – ನ.14ಕ್ಕೆ ವಿಚಾರಣೆ ಮುಂದೂಡಿಕೆ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಜ್ಞಾನವಾಪಿ ಮಸೀದಿಯ (Gyanvapi mosque) ಆವರಣದೊಳಗೆ ಶಿವಲಿಂಗ ಪತ್ತೆಯಾದ ಹಿನ್ನೆಲೆಯಲ್ಲಿ ಆರಾಧನೆಗೆ ಅವಕಾಶ ನೀಡಬೇಕೆಂದು ಹಿಂದೂ ಸಂಘಟನೆಗಳು (Hindus) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ವಾರಣಾಸಿ ನ್ಯಾಯಾಲಯ (Varanasi Court) ನವೆಂಬರ್ 14ಕ್ಕೆ ಮುಂದೂಡಿದೆ.

    ಸಂಬಂಧಪಟ್ಟ ನ್ಯಾಯಾಧೀಶರು ಇಂದು ಕೋರ್ಟ್‌ನಲ್ಲಿ (Court) ಹಾಜರಾಗದ ಕಾರಣ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಲಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ರೂಪದ ಆಕೃತಿ ಪತ್ತೆ – ವೈಜ್ಞಾನಿಕ ಪರೀಕ್ಷೆ ಸಾಧ್ಯವಿಲ್ಲ ಎಂದು ಕೋರ್ಟ್‌

    ಬೇಡಿಕೆಗಳೇನಿತ್ತು?
    ಸ್ವಯಂಭು ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರರ ಆರಾಧನೆಗೆ ಕೂಡಲೇ ಅನುಮತಿ ನೀಡಬೇಕು, ಇಡೀ ಜ್ಞಾನವಾಪಿ ಸಂಕೀರ್ಣವನ್ನು (Gyanvapi Mosque Premises) ಹಿಂದೂಗಳಿಗೆ (Hindus) ಬಿಟ್ಟುಕೊಡಬೇಕು ಹಾಗೂ ಮುಸ್ಲಿಮರ (Muslims) ಪ್ರವೇಶ ನಿಷೇಧಿಸಬೇಕು ಎಂಬ ಬೇಡಿಕೆಗಳ ಕುರಿತು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

    ಪ್ರಸ್ತುತ ಮುಸ್ಲಿಮರಿಗೆ ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಕಳೆದ ತಿಂಗಳು ಅಕ್ಟೋಬರ್ ನಲ್ಲಿ ನಡೆಸಿದ ವಿಚಾರಣೆ ವೇಳೆ ಶಿವಲಿಂಗವನ್ನು ವೈಜ್ಞಾನಿಕ ತಪಾಸಣೆ ನಡೆಸಲು ವಾರಣಾಸಿ ಕೋರ್ಟ್ ಅವಕಾಶ ನೀಡಲು ನಿರಾಕರಿಸಿತು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ; ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಆಕ್ಷೇಪ – ತೀರ್ಪಿನ ದಿನಾಂಕ ಮುಂದೂಡಿದ ವಾರಣಾಸಿ ಕೋರ್ಟ್‌

    GYANVAPI MOSQUE

    ಮಸೀದಿಯೊಳಗಿನ ಕಟ್ಟಡ ರಚನೆಗಳ ಮೇಲೆ ಕಾರ್ಬನ್ ಡೇಟಿಂಗ್ (Carbon Dating) ನಡೆಸಲು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಆದರೆ ಅಲ್ಲಿ ಶಿವಲಿಂಗವಿಲ್ಲ ಎನ್ನುವುದು ಮುಸ್ಲಿಮರ ವಾದವಾಗಿದೆ. ಹೀಗಾಗಿ ಮಸೀದಿಯನ್ನು ಕೆಡವಿ ದೇವಾಲಯಕ್ಕೆ, ಪೂಜೆ-ಪುನಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಹಿಂದೂ ಸಂಘಟನೆಗಳು ಸೆಪ್ಟೆಂಬರ್ 22ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದವು. ಜೊತೆಗೆ ಶಿವಲಿಂಗವಿದೆ ಎಂದು ಹೇಳುವ ಜಾಗದಲ್ಲಿ ಕಾರ್ಬನ್ ಡೇಟಿಂಗ್ ಮಾಡಬೇಕೆಂಬುದು ಸಂಘಟನೆಗಳು ಒತ್ತಾಯಿಸಿದ್ದವು. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್‌ ಹೇಳಿದ್ದೇನು?

    ಏನಿದು ಕಾರ್ಬನ್ ಡೇಟಿಂಗ್?
    ಕಾರ್ಬನ್ ಡೇಟಿಂಗ್ (Carbon Dating) ಎಂಬುದು ವೈಜ್ಞಾನಿಕ ಪ್ರಕ್ರಿಯೆ. ಪುರಾತತ್ವ ವಸ್ತುಗಳು ಅಥವಾ ಪುರಾತತ್ವ ರಚನೆಗಳು, ಪಳೆಯುಳಿಕೆಗಳು ಪತ್ತೆಯಾದರೆ ಅವುಗಳು ಎಷ್ಟು ವರ್ಷ ಹಳೆಯದು ಎಂದು ಪತ್ತೆಹಚ್ಚಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ರೂಪದ ಆಕೃತಿ ಪತ್ತೆ – ವೈಜ್ಞಾನಿಕ ಪರೀಕ್ಷೆ ಸಾಧ್ಯವಿಲ್ಲ ಎಂದು ಕೋರ್ಟ್‌

    ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ರೂಪದ ಆಕೃತಿ ಪತ್ತೆ – ವೈಜ್ಞಾನಿಕ ಪರೀಕ್ಷೆ ಸಾಧ್ಯವಿಲ್ಲ ಎಂದು ಕೋರ್ಟ್‌

    ನವದೆಹಲಿ: ಜ್ಞಾನವಾಪಿ ಮಸೀದಿಯ (Gyanvapi Mosque) ಆವರಣದಲ್ಲಿ ಪತ್ತೆಯಾಗಿದ್ದ ಶಿವಲಿಂಗ (Shivling) ರೂಪದ ಆಕೃತಿಯ ವೈಜ್ಞಾನಿಕ ಪರೀಕ್ಷೆ ಕೋರಿ ಹಿಂದೂಪರ ನಾಲ್ವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ (Varanasi Court) ವಜಾ ಮಾಡಿದೆ. ಸುಪ್ರೀಂ ಕೋರ್ಟ್ (Supreme Court) ಆದೇಶ ಹಿನ್ನಲೆ ಕಾರ್ಬನ್ ಡೇಟಿಂಗ್ ಪರೀಕ್ಷೆ ಸಾಧ್ಯವಿಲ್ಲ ಎಂದು ಹೇಳಿದೆ.

    ಪ್ರಕರಣ ವಿಚಾರಣೆ ನಡೆಸಿದ್ದ ನ್ಯಾ. ಅಜಯ್ ಕೃಷ್ಣ ವಿಶ್ವೇಶಾ ಎರಡು ಬಾರಿ ಆದೇಶವನ್ನು ಮುಂದೂಡಿಸಿದ್ದರು. ಇಂದು ಆದೇಶ ಪ್ರಕಟಿಸಿದ ಅವರು ಮೇ 16 ರಂದು ಸುಪ್ರೀಂ ಕೋರ್ಟ್ ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಲಿಂಗ್ ಮಾಡಲು ಆದೇಶಿಸಿದ್ದರಿಂದ ವೈಜ್ಞಾನಿಕ ತನಿಖೆಯ ಮನವಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಅದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ; ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಆಕ್ಷೇಪ – ತೀರ್ಪಿನ ದಿನಾಂಕ ಮುಂದೂಡಿದ ವಾರಣಾಸಿ ಕೋರ್ಟ್‌

    ಜ್ಞಾನವಾಪಿ ಮಸೀದಿಯ ಸರ್ವೇ ವೇಳೆ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗಿತ್ತು. ಈ ಶಿವಲಿಂಗ ರೂಪದ ಆಕೃತಿಯನ್ನು ವೈಜ್ಞಾನಿಕ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಲಾಗಿತ್ತು. ಈ ಅರ್ಜಿಯನ್ನು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ವಿರೋಧಿಸಿತ್ತು.

    ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶಿವಲಿಂಗವು ಸೂಟ್ ಆಸ್ತಿಯ ಭಾಗವಾಗಿದೆಯೇ ಅಥವಾ ಇಲ್ಲವೇ? ಆಪಾದಿತ ರಚನೆಯ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆಯೇ? ಎನ್ನುವ ಎರಡು ಪ್ರಶ್ನೆಗಳನ್ನು ಮುಂದಿಟ್ಟು ಮೊದಲು ಈ ಬಗ್ಗೆ ವಿಚಾರಣೆ ನಡೆಯಬೇಕು ಎಂದು ಮಸೀದಿ ಪರ ವಕೀಲರು ವಾದಿಸಿದ್ದರು‌. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್‌ ಹೇಳಿದ್ದೇನು?

    court order law

    ಇದಕ್ಕೆ ಪ್ರತಿವಾದ ಮಂಡಿಸಿದ್ದ ಹಿಂದೂ ಆರಾಧಕರ ಪರ ವಕೀಲ ವಿಷ್ಣು ಶಂಕರ್ ಜೈನ್, ಶಿವಲಿಂಗವು ಸೂಟ್ ಆಸ್ತಿಯ ಒಂದು ಭಾಗವಾಗಿದೆ. ಸಿವಿಲ್ ಪ್ರೊಸೀಜರ್ ಕೋಡ್ 1908 ರ ಆದೇಶ 26 ನಿಯಮ 10A ರ ಪ್ರಕಾರ, ಸಮೀಕ್ಷೆಯ ಸಮಯದಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಕಂಡುಬಂದಿರುವ ಶಿವಲಿಂಗದ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಹೇಳಿದ್ದರು.

    ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ ಸುಪ್ರೀಂ ಕೋರ್ಟ್‌ ಹಳೆಯ ತೀರ್ಪಿನ ಅಂಶವನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಆರಾಧಕ ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನು ಪ್ರಶ್ನಿಸಿ ಮಹಿಳೆಯರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ – ಹಿಂದೂ ಮಹಿಳೆಯರಿಗೆ ಗೆಲುವು, ಅರ್ಜಿ ವಿಚಾರಣೆಗೆ ಯೋಗ್ಯ

    Live Tv
    [brid partner=56869869 player=32851 video=960834 autoplay=true]

  • ಜ್ಞಾನವಾಪಿ ಮಸೀದಿ ವಿವಾದ; ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಆಕ್ಷೇಪ – ತೀರ್ಪಿನ ದಿನಾಂಕ ಮುಂದೂಡಿದ ವಾರಣಾಸಿ ಕೋರ್ಟ್‌

    ಜ್ಞಾನವಾಪಿ ಮಸೀದಿ ವಿವಾದ; ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಆಕ್ಷೇಪ – ತೀರ್ಪಿನ ದಿನಾಂಕ ಮುಂದೂಡಿದ ವಾರಣಾಸಿ ಕೋರ್ಟ್‌

    ಲಕ್ನೋ: ಜ್ಞಾನವಾಪಿ ಮಸೀದಿ (Gyanvapi Mosque) ಆವರಣದಲ್ಲಿ ನಡೆಸಿದ ಸರ್ವೆ ವೇಳೆ ಪತ್ತೆಯಾದ ವಸ್ತು ಶಿವಲಿಂಗವೇ ಅಥವಾ ನೀರಿನ ಕಾರಂಜಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿ ಹಿಂದೂ ಪರ ಅರ್ಜಿದಾರರು ಸಲ್ಲಿಸಿದ್ದ ಮನವಿಯ ತೀರ್ಪನ್ನು ವಾರಣಾಸಿ ನ್ಯಾಯಾಲಯ (Varanasi Court) ಶುಕ್ರವಾರ ಮುಂದೂಡಿದೆ.

    ಪ್ರಕರಣ ತೀರ್ಪನ್ನು ಅಕ್ಟೋಬರ್ 11 ರಂದು ನೀಡಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶ ಡಾ. ಎ.ಕೆ.ವಿಶ್ವೇಶ ಅವರು ಹೇಳಿದರು‌. ಮಸೀದಿ ಸಮಿತಿ ಪರ ವಕೀಲರು ಇಂದು ಆಕ್ಷೇಪ ವ್ಯಕ್ತಪಡಿಸಿದರು. ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶಿವಲಿಂಗವು (Shivlinga) ಮೂಲ ಪ್ರಕರಣ ಆಸ್ತಿಯ ಭಾಗವಾಗಿದೆಯೇ ಅಥವಾ ಇಲ್ಲವೇ? ಶಿವಲಿಂಗ ರೂಪದ ಈ ಪಳಿಯುಳಿಯ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಕೋರಿಕೊಂಡರು. ಇದನ್ನೂ ಓದಿ: ರಾವಣನ ಪ್ರತಿಕೃತಿಯ ತಲೆಗಳು ಸುಟ್ಟುಹೋಗದಕ್ಕೆ ನೌಕರ ಅಮಾನತು

    Gyanvapi mosque, 

    ಇದಕ್ಕೆ ಒಪ್ಪಿಕೊಂಡ ನ್ಯಾಯಾಧೀಶರು ತೀರ್ಪಿನ ದಿನಾಂಕವನ್ನು ಮುಂದೂಡಿದರು. ಮಸೀದಿ ಸಮಿತಿಯ ವಕೀಲರ ವಾದ ಆಲಿಸಿದ ಬಳಿಕ ಕೋರ್ಟ್ ಆದೇಶವನ್ನು ಪ್ರಕಟಿಸುವ ಸಾಧ್ಯತೆಯಿದೆ. ಅಕ್ಟೋಬರ್ 11 ರೊಳಗೆ ಈ ಬಗ್ಗೆ ಮಸೀದಿಯ ಸಮಿತಿಯ ವಕೀಲರು ಕೋರ್ಟ್ ಮುಂದೆ ತಮ್ಮ ವಾದವನ್ನು ಮಂಡಿಸಲಿದ್ದಾರೆ.

    ಇದೇ ವೇಳೆ ಕೋರ್ಟ್‌ನಲ್ಲಿದ್ದ ಹಿಂದೂ ಆರಾಧಕರ ಪರ ವಕೀಲ ವಿಷ್ಣು ಶಂಕರ್ ಜೈನ್, ಶಿವಲಿಂಗವು ಮೂಲ ಪ್ರಕರಣದ ಆಸ್ತಿಯ ಒಂದು ಭಾಗವಾಗಿದೆ. ಸಿವಿಲ್ ಪ್ರೊಸೀಜರ್ ಕೋಡ್ 1908ರ ಆದೇಶ 26 ನಿಯಮ 10Aರ ಪ್ರಕಾರ, ಸಮೀಕ್ಷೆಯ ಸಮಯದಲ್ಲಿ ಜ್ಞಾನವಾಪಿ ಮಸೀದಿ (Gyanvapi Case) ಆವರಣದಲ್ಲಿ ಕಂಡುಬಂದಿರುವ ಶಿವಲಿಂಗದ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಹೇಳಿದರು. ಇದನ್ನೂ ಓದಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಜಖಂ – ಎಮ್ಮೆಗಳ ಮಾಲೀಕನ ವಿರುದ್ಧ FIR

    Live Tv
    [brid partner=56869869 player=32851 video=960834 autoplay=true]

  • ಜ್ಞಾನವಾಪಿ ಕೇಸ್‌ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್‌ ಹೇಳಿದ್ದೇನು?

    ಜ್ಞಾನವಾಪಿ ಕೇಸ್‌ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್‌ ಹೇಳಿದ್ದೇನು?

    ಲಕ್ನೋ: ಜ್ಞಾನವ್ಯಾಪಿ ಮಸೀದಿ ವಿವಾದಕ್ಕೆ(Gyanvapi Mosque Suit) ಮಹತ್ವದ ತಿರುವು ಸಿಕ್ಕಿದೆ. ಹಿಂದೂಗಳಿಗೆ ಮೊದಲ ಹಂತದ ಜಯ ಲಭಿಸಿದೆ. ಮಸೀದಿಯ ಆವರಣದಲ್ಲಿ ಪತ್ತೆಯಾಗಿದ್ದ ಶಿವಲಿಂಗ ಮತ್ತು ಶೃಂಗಾರಗೌರಿ ಪೂಜೆಗೆ ಅನುಮತಿ ಕೋರಿ ಐದು ಮಂದಿ ಮಹಿಳೆಯರು ಸಲ್ಲಿಸಿದ್ದ ಅರ್ಜಿಗಳು ವಿಚಾರಣೆಗೆ ಯೋಗ್ಯವಾಗಿವೆ ಎಂದು ವಾರಣಾಸಿ ಜಿಲ್ಲಾ ಕೋರ್ಟ್ (Varanasi Court) ಮಹತ್ವದ ಆದೇಶ ಪ್ರಕಟಿಸಿದೆ.

    1991ರ ಪೂಜಾ ಸ್ಥಳಗಳ ಕಾಯ್ದೆಯ(Places of Worship Act) ಪ್ರಕಾರ ಈ ಜಾಗದಲ್ಲಿ ಪೂಜೆ ಮಾಡಲು ಸಾಧ್ಯವಿಲ್ಲ ಎಂದು ಮಸೀದಿ ಪರ ಅರ್ಜಿದಾರರು ವಾದ ಮಾಡಿದ್ದರು. ಆದರೆ ನ್ಯಾ. ಎಕೆ ವೈಷ್ಣವ್‌ ಈ ವಾದವನ್ನು ಪರಿಗಣಿಸದೇ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವುಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿ ಮಸೀದಿ ಪರ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.

    ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಯೋಗ್ಯ ಎಂಬ ಆದೇಶ ಪ್ರಕಟವಾದ ಹಿನ್ನೆಲೆಯಲ್ಲಿ ಕೋರ್ಟ್ ಮಸೀದಿ ಒಳಗಡೆ ಪೂಜೆಗೆ ಅವಕಾಶ ನೀಡಬೇಕಾ? ಬೇಡವೋ ಎಂಬ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಮುಂದಿನ ಅರ್ಜಿಯ ವಿಚಾರಣೆ ಸೆ.22 ರಂದು ನಡೆಯಲಿದೆ.

    ಮಸೀದಿ ಪರ ವಕೀಲರ ವಾದ ಏನಿತ್ತು?
    1991ರ ಪೂಜಾ ಸ್ಥಳಗಳ ಕಾಯ್ದೆಯ ಪ್ರಕಾರ ದೇಶದಲ್ಲಿರುವ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆಯ ಸ್ಥಳಗಳು 1947ರ ಆಗಸ್ಟ್ 15ರಂದು ಹೇಗಿತ್ತೋ ಅದೇ ಸ್ಥಿತಿಯಲ್ಲಿ ಮುಂದುವರಿಯಬೇಕು ಮತ್ತು ಅದರ ಸ್ವರೂಪವನ್ನು ಬದಲಾಯಿಸುವುದಕ್ಕಾಗಿ ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡುವುದಕ್ಕೆ ಅವಕಾಶ ಇಲ್ಲ ಎಂದು ಅಂಜುಮಾನ್‌ ಮಸೀದಿಯ ಪರ ವಕೀಲರು ವಾದಿಸಿದ್ದರು. ಇದನ್ನೂ ಓದಿ: ಷರತ್ತು ವಿಧಿಸಿ ಭಾರತಕ್ಕೆ ಇನ್ನಷ್ಟು ಡಿಸ್ಕೌಂಟ್ ದರದಲ್ಲಿ ತೈಲ ನೀಡಲು ಮುಂದಾದ ರಷ್ಯಾ

    ಕೋರ್ಟ್‌ ಹೇಳಿದ್ದು ಏನು?
    ಮಸೀದಿ ಒಳಗಡೆ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗದ ದರ್ಶನ ಮತ್ತು ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ನೀಡುವುಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ 1993ರ ವರೆಗೆ ಪೂಜೆ ಮಾಡಲು ಅವಕಾಶವಿತ್ತು. ಆದರೆ 1993ರ ನಂತರ ಉತ್ತರ ಪ್ರದೇಶ ಸರ್ಕಾರ ನಿಯಂತ್ರಣದ ಅಡಿ ವರ್ಷಕ್ಕೆ ಒಂದು ಬಾರಿ ಪೂಜೆ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ. ಹೀಗಾಗಿ ವಿವಾದಿತ ಜಾಗದಲ್ಲಿ 1947ರ ಆಗಸ್ಟ್‌ 15 ರ ನಂತರವೂ ಪೂಜೆ ಸಲ್ಲಿಕೆಗೆ ಅನುಮತಿ ಇದ್ದ ಕಾರಣ 1991ರ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಯ ಒಳಗಡೆ ಬರುವುದಿಲ್ಲ. ನ್ಯಾಯಾಲಯದಲ್ಲಿ ದಾವೆ ಹೂಡದಂತೆ ನಿರ್ಬಂಧಿಸಲು ಸಾಧ್ಯವಿಲ್ಲ.

    ಅರ್ಜಿದಾರರು ಇಲ್ಲಿ ಪೂಜೆ ಮಾಡಲು ಮಾತ್ರ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ ಹೊರತು ಈ ವಿವಾದಿತ ಜಾಗದ ಸಂಪೂರ್ಣ ಹಕ್ಕು ದೇವಸ್ಥಾನಕ್ಕೆ ಸೇರಬೇಕೆಂದು ಕೇಳಿಲ್ಲ. ಹೀಗಾಗಿ ಇದು ಪೂಜಾ ಸ್ಥಳಗಳ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ. ಪೂಜೆಗೆ ಮಾತ್ರ ಸೀಮಿತವಾಗಿ ಅರ್ಜಿ ಸಲ್ಲಿಸಿದರಿಂದ ಇದು ಮೂಲಭೂತ ಹಕ್ಕು ಜೊತೆಗೆ ಇದು ಸಾಂಪ್ರದಾಯಿಕ ಧಾರ್ಮಿಕ ಹಕ್ಕು ಆಗಿದೆ.

    ಪ್ರಶ್ನೆ ಮಾಡುತ್ತೇವೆ:
    ಜಿಲ್ಲಾ ಕೋರ್ಟ್‌ ನೀಡಿದ ಆದೇಶವನ್ನು ಪ್ರಶ್ನಿಸಿ ನಾವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಅಂಜುಮಾನ್‌ ಇಂತಜಾಮೀಯಾ ಮಸೀದಿ ಸಮಿತಿ ಹೇಳಿದೆ.

    ಏನಿದು ಪ್ರಕರಣ?
    ಈ ಹಿಂದೆ ಕೆಳ ಹಂತದ ಕೋರ್ಟ್ ಮಸೀದಿಯಲ್ಲಿ ಉತ್ಖನನಕ್ಕೆ ಅನುಮತಿ ನೀಡಿತ್ತು. ಉತ್ಖನನ ವೇಳೆ ಮಸೀದಿಯಲ್ಲಿ ಶೃಂಗಾರ ಗೌರಿ ಮೂರ್ತಿ ಮತ್ತು ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಬಳಿಕ ಹಿಂದೂ ಧಾರ್ಮಿಕ ಕುರುಹುಗಳಿಗೆ ನಿತ್ಯ ಪೂಜೆ ಸಲ್ಲಿಸಲು ಅನುಮತಿ ಕೋರಿ ಸೀತಾ ಸಾಹು ಸೇರಿ, ಐವರು ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಪ್ರತಿಯಾಗಿ ಮಸೀದಿಯ ಆಡಳಿತ ಮಂಡಳಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಐವರ ಅರ್ಜಿಗಳು ವಿಚಾರಣೆಗೆ ಯೋಗ್ಯವೇ ಎಂಬುದನ್ನು ಮೊದಲು ನಿರ್ಧರಿಸಿ ಎಂದು ವಾರಣಾಸಿ ಕೋರ್ಟ್‍ಗೆ ನಿರ್ದೇಶನ ನೀಡಿತ್ತು.

    1991ರ ಕಾಯ್ದೆ ಪ್ರಶ್ನಿಸಿ ಸುಪ್ರೀಂನಲ್ಲಿದೆ ಅರ್ಜಿ
    ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಮತ್ತು ಇತರರು 1991ರ ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯಲ್ಲಿರುವ ವಿವಿಧ ಅವಕಾಶಗಳ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಯಬೇಕಿದೆ.

    ಹಲವು ಕಾರಣಗಳಿಂದಾಗಿ ಕಾಯ್ದೆಯ ಅಸಾಂವಿಧಾನಿಕವಾಗಿದೆ. ಹಿಂದೂ, ಜೈನ, ಬೌದ್ಧ ಮತ್ತು ಸಿಖ್ಖರ ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆ ಸ್ಥಳಗಳನ್ನು ನಿರ್ವಹಿಸುವ ಹಕ್ಕನ್ನು ಈ ಕಾಯ್ದೆಯಿಂದ ನಿರ್ಬಂಧಿಸಲಾಗಿದೆ. ಮಥುರಾದಲ್ಲಿರುವ ಕೃಷ್ಣ ಜನ್ಮಸ್ಥಾನದ ಜಾಗಕ್ಕಾಗಿ ಹಿಂದೂಗಳು ನೂರಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಶಾಂತಿಯುತವಾದ ಚಳವಳಿ ನಡೆಸುತ್ತಿದ್ದಾರೆ. ಆದರೆ ಈ ಕಾಯ್ದೆ ರೂಪಿಸುವಾಗ ಕೇಂದ್ರ ಸರ್ಕಾರ ಆಯೋಧ್ಯೆಯ ರಾಮ ಜನ್ಮಭೂಮಿ ಪ್ರಕರಣವನ್ನು ಮಾತ್ರ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಿದೆ. ಕೃಷ್ಣ ಜನ್ಮಸ್ಥಾನವಾದ ಮಥುರಾವನ್ನು ಹೊರಗೆ ಇರಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜ್ಞಾನವಾಪಿ ಮಸೀದಿ ವಿವಾದ – ಇಂದು ಮುಸ್ಲಿಂ ಮಂಡಳಿ ಅರ್ಜಿ ವಿಚಾರಣೆ

    ಜ್ಞಾನವಾಪಿ ಮಸೀದಿ ವಿವಾದ – ಇಂದು ಮುಸ್ಲಿಂ ಮಂಡಳಿ ಅರ್ಜಿ ವಿಚಾರಣೆ

    ನವದೆಹಲಿ: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಕೈಬಿಡುವಂತೆ ಹಾಗೂ ಸಿವಿಲ್ ನ್ಯಾಯಾಲಯ ನಿರ್ದೇಶನ ಮೇರೆಗೆ ನಡೆಸಲಾಗಿರುವ ವಿಡಿಯೋಗ್ರಫಿ ಸರ್ವೆಯನ್ನು ಅನೂರ್ಜಿತಗೊಳಿಸುವಂತೆ ಮಸೀದಿ ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಯನ್ನು ಇಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸಲಿದೆ.

    ನ್ಯಾ. ಅಜಯ್ ಕೃಷ್ಣ ವಿಶ್ವೇಶ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಎರಡು ದಿನಗಳ ಹಿಂದೆ ಮಧ್ಯಂತರ ಆದೇಶ ನೀಡಿದ್ದ ಕೋರ್ಟ್, ಮಸೀದಿ ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಯನ್ನು ಮೊದಲು ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಇದನ್ನೂ ಓದಿ: ಯಾಸಿನ್ ಮಲಿಕ್ ಕರಾಳ ಇತಿಹಾಸ ಏನು? ಏನೇನು ಅಪರಾಧ ಎಸಗಿದ್ದ?

    ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಐದು ಮಂದಿ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಸೀದಿ ಆಡಳಿತ ಮಂಡಳಿ 1991 ರ ಪೂಜಾ ಸ್ಥಳಗಳ ನಿರ್ಬಂಧ ಕಾಯಿದೆ ಮತ್ತು ಆದೇಶ 7 ನಿಯಮ 11 ರ ಉಲ್ಲಂಘನೆಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದರು. ನಿಯಮಗಳ ಪ್ರಕಾರ ಸ್ವಾತಂತ್ರ್ಯದ ನಂತರ ಧಾರ್ಮಿಕ ಪ್ರದೇಶಗಳ ರಚನೆ ಧಕ್ಕೆ ತರಬಾರದು ಮತ್ತು ಅದು ಇರುವ ಸ್ಥಿತಿಯಲ್ಲಿ ಮುಂದುವರಿಸಬೇಕು. ಆದರೆ ನಿಯಮ ಬಾಹಿರವಾಗಿ ಸಿವಿಲ್ ಕೋರ್ಟ್ ವಿಡಿಯೋ ಸರ್ವೆಗೆ ಅನುಮತಿ ನೀಡಿದೆ. ಹೀಗಾಗಿ ವೀಡಿಯೋ ಸರ್ವೆಯನ್ನು ಪರಿಗಣಿಸಬಾರದು ಮತ್ತು ಪೂಜೆಗೆ ಅವಕಾಶ ಕಲ್ಪಿಸಬಾರದು ಎಂದು ವಾದ ಮಂಡಿಸಿದ್ದರು.

    ಅಲ್ಲದೇ ಪ್ರಕರಣದಲ್ಲಿ 1991 ರ ಕಾಯಿದೆ ಅನ್ವಯ ಆಗುವ ಬಗ್ಗೆ‌ ಮೊದಲು ತೀರ್ಮಾನ ಆಗಬೇಕು ಎಂದು ಒತ್ತಾಯಿಸಿದ್ದರು‌. ಇದಕ್ಕೆ ಒಪ್ಪಿರುವ ಕೋರ್ಟ್ ಇಂದಿನಿಂದ ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸಲಿದೆ. ಈ ನಡುವೆ ಇಡೀ ಮಸೀದಿಯನ್ನು ಕೆಡವಿ ಆ ಪ್ರದೇಶವನ್ನು ದೇವಸ್ಥಾನದ ಸಪರ್ದಿಗೆ ನೀಡಬೇಕು ಹಾಗೂ ವಿವಾದಿತ ಪ್ರದೇಶದಲ್ಲಿ ಮುಸ್ಲಿಮರಿಗೆ ಪ್ರವೇಶ ನೀಡದಂತೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಕೆಯಾಗಿದೆ. ಮುಸ್ಲಿಮರ ಪ್ರವೇಶ ನಿಷೇಧ ಕೋರಿ ತುರ್ತು ವಿಚಾರಣೆಗೆ ತ್ವರಿತ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ವಂದೇ ಮಾತರಂಗೆ ರಾಷ್ಟ್ರಗೀತೆಯಷ್ಟೇ ಸ್ಥಾನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ಅಶ್ವಿನಿ ಉಪಾಧ್ಯಾಯ ವಿರುದ್ಧ ‘ಹೈ’ ಗರಂ

  • ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ

    ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ

    ನವದೆಹಲಿ: ಕಾಶಿ ವಿಶ್ವನಾಥ್‌ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಾರಣಾಸಿ ಸಿವಿಲ್‌ ಕೋರ್ಟ್‌ ನಡೆಸುತ್ತಿದ್ದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

    ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿಯ ಆವರಣದಲ್ಲಿ ವೀಡಿಯೋಗ್ರಫಿ ಸರ್ವೆಗೆ ಆದೇಶ ನೀಡಿದ ವಾರಣಾಸಿ ಸಿವಿಲ್ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗೆ ಇಂದು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ. ಅಂಜುಮನ್ ಇಂತೇಜಾಮೀಯ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಡಿ.ವೈ ಚಂದ್ರಚೂಡ್ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆಗೆ ಒಪ್ಪಿಗೆ ಸೂಚಿಸಿತು. ಇದನ್ನೂ ಓದಿ: ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ

    SUPREME COURT

    ವಿಚಾರಣೆ ವೇಳೆ ವಾದ ಮಂಡಿಸಿದ ಹಿಂದೂಪರ ಸಂಘಟನೆಗಳ ವಕೀಲರು, ವಾರಣಾಸಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರ ಪರ ವಕೀಲರು ಅನಾರೋಗ್ಯಕ್ಕೀಡಾಗಿದ್ದು ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಾಳೆ ಅವರು ಕೋರ್ಟ್‌ಗೆ ಹಾಜರಾಗಲಿದ್ದು, ನಾಳೆ ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸಿ ಎಂದು ಮನವಿ ಮಾಡಿದರು.

    ಈ ವೇಳೆ ಮಧ್ಯಪ್ರದೇಶ ಮಾಡಿದ ಮಸೀದಿ ಪರ ವಕೀಲರು, ವಾರಣಾಸಿ ಸಿವಿಲ್ ಕೋರ್ಟ್‌ನಲ್ಲಿ ಮಸೀದಿಯ ಗೋಡೆ ಕೆಡವಿ ಉತ್ಕನನ ನಡೆಸಲು ಮತ್ತು ವಝುಖಾನ ಕೆಳಭಾಗದಲ್ಲಿ ಪರಿಶೀಲನೆ ನಡೆಸಲು ಸೂಚನೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಇಂದು ಈ ಅರ್ಜಿಗಳು ವಿಚಾರಣೆಗೆ ಬರಲಿದೆ. ಇಂದು ಟ್ರಯಲ್ ಕೋರ್ಟ್ ಈ ಬಗ್ಗೆ ಆದೇಶ ನೀಡುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ – 1,000 ರೂ. ದಾಟಿದ LPG ಸಿಲಿಂಡರ್ ದರ

    ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ನಾಳೆ ಈ ಬಗ್ಗೆ ವಿಚಾರಣೆ ನಡೆಸಲಾವುದು ಅಲ್ಲಿಯವರೆಗೂ ವಾರಣಾಸಿ ಸಿವಿಲ್ ಕೋರ್ಟ್‌ಗೆ ಅರ್ಜಿದಾರರು ಹೋಗದಂತೆ ಹಾಗೂ ಆದೇಶಕ್ಕಾಗಿ ಕೋರ್ಟ್‌ಗೆ ಒತ್ತಾಯಿಸಿದಂತೆ ತಿಳಿಸಲು ಸೂಚನೆ ನೀಡಿತು. ಅಲ್ಲದೇ ಈ ಸಂಬಂಧ ಯಾವುದೇ ಆದೇಶಗಳನ್ನು ನೀಡದಂತೆ ಸಿವಿಲ್ ಕೋರ್ಟ್‌ಗೂ ಸೂಚನೆ ನೀಡಿತು.

    ಈ ಹಿಂದೆ ಪ್ರಕರಣ ವಿಚಾರಣೆ ನಡೆಸಿದ್ದ ಕೋರ್ಟ್, ಪತ್ತೆಯಾಗಿರುವ ಶಿವಲಿಂಗವನ್ನು ಸಂರಕ್ಷಣೆ ಮಾಡಬೇಕು. ಈ ಭಾಗದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು ಎಂದು ಸೂಚಿಸಿ ಮಸೀದಿಯ ಭಾಗದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿತ್ತು. ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – 9 ಮಂದಿ ಸಾವು, ಸಂಕಷ್ಟದಲ್ಲಿ ಲಕ್ಷಾಂತರ ಜನ