Tag: ವಾಯ್ಸ್ ರೆಕಾರ್ಡ್

  • ಅಮ್ಮನ ಧ್ವನಿ ಕೇಳಿ ಗಳಗಳನೇ ಅತ್ತ ನಿಧಿ

    ಅಮ್ಮನ ಧ್ವನಿ ಕೇಳಿ ಗಳಗಳನೇ ಅತ್ತ ನಿಧಿ

    ಬಿಗ್‍ಬಾಸ್ ರಿಯಾಲಿಟಿ ಶೋ ಅಂತ್ಯದ ಹೊತ್ತಿಗೆ ಸ್ಪರ್ಧಿಗಳ ಆಸೆಯನ್ನು ಬಿಗ್‍ಬಾಸ್ ಈಡೇರಿಸುತ್ತಿದ್ದಾರೆ. ದೊಡ್ಮನೆಯ ಬಹುತೇಕ ಮಂದಿ ತಮ್ಮ ಮನೆಯವರ ಧ್ವನಿಯನ್ನು ಕೇಳಿದ್ದಾರೆ. ಮನೆಯಿಂದ ದೂರವಿದ್ದ ನಿಧಿ ಸುಬ್ಬಯ್ಯಗೆ ಮನೆಯಿಂದ ಮಾತ್ರ ಇಷ್ಟು ದಿನ ಯಾವುದೇ ಸಂದೇಶ ಬಂದಿರಲಿಲ್ಲ. ಆದರೆ ಇಂದು ನಿಧಿಗೆ ಅವರ ತಾಯಿ ವಾಯ್ಸ್ ರೆಕಾರ್ಡ್ ಕಳುಹಿಸಿದ್ದಾರೆ.

    ಹಾಯ್ ಕಂದ, ಹೇಗಿದ್ಯಾಮ್ಮ ಎಂದು ಮೊದಲಿಗೆ ಕೊಂಕಣಿಯಲ್ಲಿ ಮಾತನಾಡಲು ಆರಂಭಿಸಿದ ನಿಧಿ ತಾಯಿ ನಂತರ ಮಿಸ್ ಯೂ ಸೋ ಮಚ್.. ನಾನು ಮಾಜಿ ಬಾಬ್ಲೂ ಎಲ್ಲಾ ಚೆನ್ನಾಗಿದ್ದೇವಿ. ನೀನು ಮೊನ್ನೆ ಮಡಿಕೇರಿ ಸಿಪಾಯಿ ಸಾಂಗ್ ಹಾಡುತ್ತಿದ್ದಾಗ ಟಿವಿ ಬಳಿ ಬಂದು ತಲೆನಾ ಲೆಫ್ಟ್ ಟೂ, ರೈಟ್ ಲೆಫ್ಟ್ ಟೂ ರೈಲ್ ಅಲ್ಲಡಿಸುತ್ತಿದ್ದ. ಆಮೇಲೆ ಒಂದು ವಾಕ್ ಕರೆದುಕೊಂಡು ಹೋದ ನಂತರ ಸರಿಹೋದ. ನಮ್ಮ ಬಗ್ಗೆ ವರಿ ಮಾಡಬೇಡ. ನೀನು ಎಲ್ಲರ ಜೊತೆ ಚೆನ್ನಾಗಿ ಮಿಂಗಲ್ ಆಗಿ. ಚೆನ್ನಾಗಿ ಖುಷಿಯಾಗಿದ್ದೀಯಾ. ತುಂಬಾ ನಗುತ್ತಿರುತ್ತೀಯಾ, ಚೆನ್ನಾಗಿಯೂ ಆಡುತ್ತಿದ್ದಿಯಾ, ಹಾಗೆ ಇರು ಕಂದ. ಎಲ್ಲ ಸ್ಪರ್ಧಿಗಳಿಗೂ ನನ್ನ ಬೆಸ್ಟ್ ವಿಶಸ್ ತಿಳಿಸು. ಯು ಟೆಕ್ ಕೇರ್ ಕಂದ ಲವ್ ಯೂ ಸೋ ಮಚ್ ಬಾಯ್ ಎಂದು ವಿಶ್ ಮಾಡಿದ್ದಾರೆ.

    ಎಷ್ಟೋ ದಿನದ ನಂತರ ಅಮ್ಮನ ಧನಿ ಕೇಳಿ ನಿಧಿ ಸುಬ್ಬಯ್ಯ ಆನಂದ ಬಾಷ್ಪ ಸುರಿಸಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲಾ ಚಪ್ಪಾಳೆ ತಟ್ಟುತ್ತಾ, ನಿಧಿ ಸುಬ್ಬಯ್ಯ ಬಳಿ ಬಂದು ಅಳಬೇಡ ಎಂದು ಸಮಾಧಾನ ಮಾಡುತ್ತಾ ಮತ್ತೆ ಮೇಕಪ್ ಹಾಕಿಕೊಳ್ಳಬೇಕಲ್ಲಪ್ಪಾ ಎಂದು ರೇಗಿಸುತ್ತಾರೆ. ನಂತರ ನಿಧಿ ಸುಬ್ಬಯ್ಯ ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸಿದ್ದಾರೆ.

  • ಪ್ರಶಾಂತ್‍ಗೆ ಬಂತು ಪುತ್ರನಿಂದ ಕರೆ!

    ಪ್ರಶಾಂತ್‍ಗೆ ಬಂತು ಪುತ್ರನಿಂದ ಕರೆ!

    ನೆಯಿಂದ ದೂರ ಇರುವ ದೊಡ್ಮನೆ ಸ್ಪರ್ಧಿಗಳು ತಮ್ಮ ಮನೆಯವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಬಾರಿ ಮನೆಯವರೊಂದಿಗೆ ಮಾತನಾಡಬೇಕು ಅಂತಾ ಅಂದುಕೊಂಡರೂ ಕೂಡ ಆಗದೇ ಬಿಗ್‍ಬಾಸ್ ಮನೆಯಲ್ಲಿ ಅತ್ತಿರುವುದನ್ನು ನಾವು ನೋಡಿರಬಹುದು. ಕನಿಷ್ಠ ಪಕ್ಷ ಮನೆಯವರ ಧ್ವನಿ ಕೇಳಿದರೆ ಸಾಕಪ್ಪಾ ಎಂದು ಪರದಾಡುತ್ತಿರುತ್ತಾರೆ.

    ಈ ಮಧ್ಯೆ ಬೇರೆ ಸ್ಫರ್ಧಿಗಳಿಗೆ ಹೋಲಿಸಿದರೆ, ಪ್ರಶಾಂತ್ ಸಂಬರಗಿಗೆ ಎರಡೆರಡು ಬಾರಿ ಮನೆಯವರ ಧ್ವನಿ ಕೇಳುವ ಭಾಗ್ಯ ಬಿಗ್‍ಬಾಸ್ ಮನೆಯಲ್ಲಿ ಒಲಿದು ಬಂದಿದೆ. ಹೌದು, ಬಿಗ್‍ಬಾಸ್ ನೀಡಿದ್ದ ಕ್ಯಾಪ್ಟನ್ಸಿ  ಟಾಸ್ಕ್‌ನಲ್ಲಿ ಗೆದ್ದ ಪ್ರಶಾಂತ್ ಸಂಬರ್ಗಿ ಇದೀಗ 2ನೇ ಬಾರಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದ ಹಿನ್ನೆಲೆ ನಿನ್ನೆ ಪ್ರಶಾಂತ್ ಸಂಬರಗಿಗೆ ಪುತ್ರ ವಾಯ್ಸ್ ರೆಕಾರ್ಡ್ ಕಳುಹಿಸುವ ಮೂಲಕ ವಿಶ್ ಮಾಡಿದ್ದಾರೆ.

    ಹಾಯ್, ಪಪ್ಪಾ ಆದಿ ಮಾತನಾಡುತ್ತಿದ್ದೇನೆ. 2ನೇ ಬಾರಿ ಕ್ಯಾಪ್ಟನ್ ಆಗಿದ್ದಕ್ಕೆ ಬಹಳ ಖುಷಿಯಾಗಿದೆ. ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಆಟ ಎಲ್ಲಾ ಚೆನ್ನಾಗಿ ಆಡಿಕೊಂಡು ಬಾ.. ಬಿಗ್‍ಬಾಸ್‍ಗೆ ಹೋಗಲು ಒಂದು ಬಾರಿ ನಿನಗೆ ಅವಕಾಶ ಸಿಕ್ಕಿದೆ. ನೀನು ಅದನ್ನು ಉಪಯೋಗಿಸಿಕೋ, ನಿನ್ನ ಕೈಲಾದಷ್ಟು ಸಾಮಾಥ್ರ್ಯ ಬಳಸಿ ಆಟ ಆಡು. ನೀನು ಬೇರೆಯವರು ಏನು ಹೇಳುತ್ತಾರೋ ಎಂಬ ಬಗ್ಗೆ ಯೋಚಿಸಲು ಹೋಗಬೇಡ. ನೀನು ನಿನಗೇನು ಅನಿಸುತ್ತದೆಯೋ ಆ ನಿರ್ಧಾರಗಳನ್ನು ತೆಗೆದುಕೋ. ನನಗೆ ಗೊತ್ತಿದೆ ನಿನ್ನ ನಿರ್ಧಾರಗಳು ಯಾವಾಗಲೂ ಸರಿಯಾಗಿಯೇ ಇರುತ್ತದೆ ಅಂತಾ ಎಂದಿದ್ದಾರೆ.

    ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನಿಕ್ಕು ನನ್ನ ಪ್ರತಿ ದಿನ ಪಪ್ಪಾ ಯಾವಾಗ ಬರುತ್ತಾರೆ ಎಂದು ಕೇಳುತ್ತಿರುತ್ತಾನೆ. ನಾನು ಪಪ್ಪಾ ಬಿಗ್‍ಬಾಸ್ ಗೆದ್ದೆ ಬರುತ್ತಾರೆ ಎಂದು ಹೇಳುತ್ತಿರುತ್ತೇನೆ. ಅವನು ಪ್ರತಿ ದಿನ ಟಿವಿಯಲ್ಲಿ ನಿನ್ನ ನೋಡಿ ಪಪ್ಪಾ, ಪಪ್ಪಾ ಎನ್ನುತ್ತಿರುತ್ತಾನೆ. ವಿ ಮಿಸ್ ಯೂ, ವಿ ವೇರಿ ಪ್ರೌಡ್ ಆಫ್ ಯೂ, ಎನರ್ಜಿಯಿಂದ ಆಟವಾಡು, ಲವ್ ಯೂ, ಆಲ್ ದಿ ಬೆಸ್ಟ್ ಎಂದು ಪ್ರಶಾಂತ್‍ಗೆ ಅವರ ಮಗ ಆದಿತ್ಯ ವಿಶ್ ಮಾಡಿದ್ದಾರೆ.