Tag: ವಾಯು ಮಾಲಿನ್ಯ

  • ಹಳೆಯ ವಾಹನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್!

    ಹಳೆಯ ವಾಹನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್!

    ಬೆಂಗಳೂರು: ಹಳೆಯ ವಾಹನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್, ರಾಜ್ಯದಲ್ಲಿ ವಾಯುಮಾಲಿನ್ಯ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಾಯು ನಿಯಂತ್ರಣ ಮಂಡಳಿ ಇದಕ್ಕೆ ಕಡಿವಾಣ ಹಾಕಲು ಸಿದ್ಧತೆ ನಡೆಸುತ್ತಿದೆ.

    ದೆಹಲಿ ಬಳಿಕ ವಾಯುಮಾಲಿನ್ಯದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿ ಇರುವುದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಕಟ್ಟುನಿಟ್ಟು ಕ್ರಮಗಳ ಜಾರಿಗೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದೆ. ಸಿಟಿಯಲ್ಲಿ 16 ಲಕ್ಷ ಹಳೆಯ ವಾಹನಗಳಿರುವುದು ಗುರುತಿಸಲಾಗಿದೆ.

    ಹಳೆಯ ವಾಹನಗಳು ಹೊರಸೂಸುವ ವಿಷಕಾರಿ ಅನಿಲದಿಂದ ನಗರದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ ಹದಿನೈದು ವರ್ಷಕ್ಕಿಂತ ಹಳೆಯ ಪೆಟ್ರೋಲ್ ಡೀಸೆಲ್ ವಾಹನಗಳ ಸಂಚಾರ ಬ್ಯಾನ್ ಮಾಡುವಂತೆ ವರದಿ ನೀಡಿದೆ. ಈ ವರದಿಯನ್ನ ಕೆಎಸ್ ಪಿಸಿಬಿ 2016 ರಲ್ಲೇ ಸರ್ಕಾರಕ್ಕೆ ನೀಡಿದರೂ ಇದನ್ನು ಜಾರಿಗೆ ತರಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಈಗ ಕೆಎಸ್‍ಪಿಸಿಬಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಹಳೆಯ ವಾಹನಗಳನ್ನ ಬ್ಯಾನ್ ಮಾಡುವಂತೆ ಪತ್ರ ಬರೆಯಲಾಗಿದೆ ಎಂದು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಲಕ್ಷ್ಮಣ ಹೇಳಿದ್ದಾರೆ.

    ನಗರದಲ್ಲಿ 70 ಲಕ್ಷ ವಾಹನಗಳಿದ್ದು, 32,000 ವಾಹನಗಳ ಹೊಗೆ ತಪಾಸಣೆಯನ್ನ ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿಸಿದೆ. ಇದರಲ್ಲಿ 14% ಪೆಟ್ರೋಲ್ ವಾಹನಗಳು ಹಾಗೂ 25% ಡೀಸೆಲ್ ವಾಹನಗಳಿಂದ ವಿಷಕಾರಿ ಅನಿಲ ಬರುತ್ತಿರುವುದು ಗಮನಿಸಲಾಗಿದೆ. ಇವುಗಳಿಂದ ಹೊರಸೂಸುವ ಗಾಳಿಯ ಮಟ್ಟ ರಾಷ್ಟ್ರೀಯ ಮಾನದಂಡಕ್ಕಿಂತ ಕಡಿಮೆ ಇರುವುದು ಗೊತ್ತಾಗಿದೆ. ಪ್ರಮುಖ 48 ಅಂಶಗಳನ್ನು ಕಾರ್ಯೋನ್ಮುಖ ಮಾಡಲು ಚರ್ಚೆ ನಡೆಯುತ್ತಿದ್ದು, ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹೆಚ್ಚಿಸಲು ಹಾಗೇ ಪಾರ್ಕಿಂಗ್ ಶುಲ್ಕ ಹೆಚ್ಚಿಸುವಂತೆಯೂ ಮಂಡಳಿ ವರದಿ ನೀಡಿದೆ. ಅಲ್ಲದೆ ನಗರದಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರಕ್ಕೆ ರಿಂಗ್ ರಸ್ತೆಗಳಲ್ಲಿ ಡೈವರ್ಟ್ ಮಾಡಬೇಕು. ಕಾನೂನು ಮೀರಿದವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಬೇಕು ಎಂದು ವರದಿ ಕೂಡಾ ನೀಡಿದೆ. ಪರಿಸರವಾದಿಗಳು ಪಿಸಿಬಿ ವರದಿಯನ್ನು ಸ್ವಾಗತಿಸಿವೆ ಎಂದು ಪರಿಸರವಾದಿ ಸುರೇಶ್ ಹೆಬ್ಬಳೀಕರ್ ತಿಳಿಸಿದ್ದಾರೆ.

    15 ವರ್ಷಕ್ಕಿಂತ ಹಳೆಯ ವಾಹನಗಳನ್ನ ಉಪಯೋಗ ಮಾಡುವವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕಿಂಗ್ ನ್ಯೂಸ್ ನೀಡಿದ್ದು, ಸರ್ಕಾರ ನೂತನ ನಿಯಮ ತಂದಿದ್ದೇ ಆದಲ್ಲಿ ನಗರದಲ್ಲಿ ಹದಿನೈದು ಅಥವಾ 20 ವರ್ಷ ಹಳೇಯ ವಾಹನಗಳು ಗುಜುರಿ ಸೇರಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೆಹಲಿ ವಾಯುಮಾಲಿನ್ಯ ನಿಯಂತ್ರಿಸಲು ಸಲಹೆ ಕೊಟ್ಟ ಕೊಹ್ಲಿ

    ದೆಹಲಿ ವಾಯುಮಾಲಿನ್ಯ ನಿಯಂತ್ರಿಸಲು ಸಲಹೆ ಕೊಟ್ಟ ಕೊಹ್ಲಿ

    ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಸ್ಮಾಗ್(ಹೊಗೆ ಮಂಜು) ಮತ್ತು ವಾಯು ಮಾಲಿನ್ಯದಿಂದಾಗಿ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡೂ ವಾಯು ಮಾಲಿನ್ಯ ನಿಯಂತ್ರಿಸಲು ಹರಸಾಹಸ ಪಡುತ್ತಿವೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ದೆಹಲಿ ನಿವಾಸಿಗಳಿಗೆ ವಾಯು ಮಾಲಿನ್ಯ ನಿಯಂತ್ರಿಸಲು ಸಲಹೆ ನೀಡಿದ್ದಾರೆ. ಈ ಕುರಿತು ತಮ್ಮ ಟ್ವಟರ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.

    ನಿಮಗೆಲ್ಲರಿಗೂ ದೆಹಲಿಯ ಮಾಲಿನ್ಯದ ಬಗ್ಗೆ ಗೊತ್ತಿದೆ. ದೇಶದ ಎಲ್ಲ ಜನರೂ ವಾಯು ಮಾಲಿನ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಆದರೆ ಈ ಚರ್ಚೆಗಳಿಂದ ವಾಯು ಮಾಲಿನ್ಯದ ನಿಯಂತ್ರಣ ಆಗಲಾರದು. ಹಾಗಾಗಿ ಮಾಲಿನ್ಯ ನಿಯಂತ್ರಣದ ಬಗ್ಗೆ ಎಲ್ಲರೂ ತಮ್ಮ ಜೀವನಶೈಲಿಯನ್ನು ಬದಲಿಸಕೊಳ್ಳಬೇಕಿದೆ ಎಂದು ತಮ್ಮ ವಿಡಿಯೋ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ನಾವು ಮಾಲಿನ್ಯದ ವಿರುದ್ಧ ಮ್ಯಾಚ್ ಗೆಲ್ಲಬೇಕಾದರೆ, ನಾವೆಲ್ಲರೂ ಒಟ್ಟಾಗಿ ಸೇರಿ ಆಡಿದರೆ ಮಾತ್ರ ಮ್ಯಾಚ್ ಗೆಲ್ಲಲು ಸಾಧ್ಯವಾಗುತ್ತದೆ. ಏಕೆಂದರೆ ಮಾಲಿನ್ಯ ಕಡಿಮೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ವಿಶೇಷವಾಗಿ ದೆಹಲಿ ನಿವಾಸಿಗಳ ಆದ್ಯ ಕರ್ತವ್ಯವಾಗಿದೆ. ಖಾಸಗಿ ವಾಗಹನಗಳನ್ನ ಬಳಸುವುದು ಬಿಟ್ಟು ಸಾರಿಗೆ ಬಸ್, ಮೆಟ್ರೋ, ಸೋಲಾರ್ ಕ್ಯಾಬ್ ಗಳಲ್ಲಿ ಸಂಚರಿಸಿ. ಒಂದು ವೇಳೆ ವಾರದಲ್ಲಿ ಒಂದು ದಿನ ನೀವು ಹೀಗೆ ಮಾಡಿದರೆ ತುಂಬಾ ಬದಲಾವಣೆ ಆಗುತ್ತದೆ. ಕ್ರಿಯೆ ಚಿಕ್ಕದೋ ಅಥವಾ ದೊಡ್ಡದೋ ಇರಲಿ. ಅದರಿಂದ ಸ್ವಲ್ಪವಾದರೂ ಮಲಿನತೆ ಕಡಿಮೆಯಾಗುತ್ತದೆ ಎಂದು ವಿಡಿಯೋದಲ್ಲಿ ಕೊಹ್ಲಿ ಹೇಳಿದ್ದಾರೆ.

    ದೆಹಲಿ ಜನತೆಯೊಂದಿಗೆ ನಾನು ಮಾತನಾಡೇಕು.  ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

    https://twitter.com/imVkohli/status/930856114186477568

  • ದೆಹಲಿ ವಾಯುಮಾಲಿನ್ಯ: ಪಾರ್ಕಿಂಗ್ ಶುಲ್ಕ 4 ಪಟ್ಟು ಹೆಚ್ಚಳ, ಮೆಟ್ರೋ ದರ ಇಳಿಕೆಗೆ EPCA ಆದೇಶ

    ದೆಹಲಿ ವಾಯುಮಾಲಿನ್ಯ: ಪಾರ್ಕಿಂಗ್ ಶುಲ್ಕ 4 ಪಟ್ಟು ಹೆಚ್ಚಳ, ಮೆಟ್ರೋ ದರ ಇಳಿಕೆಗೆ EPCA ಆದೇಶ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ನೇಮಿಸಿರುವ ಪರಿಸರ ಮಾಲಿನ್ಯ ಹಾಗೂ ನಿಯಂತ್ರಣ ಮಂಡಳಿ(EPCA) ಪಾರ್ಕಿಂಗ್ ಶುಲ್ಕವನ್ನು 4 ಪಟ್ಟು ಹೆಚ್ಚಿಸಬೇಕೆಂದು ಮಂಗಳವಾರದಂದು ಆದೇಶ ಹೊರಡಿಸಿದೆ. ಇದರ ಜೊತೆಗೆ ಮೆಟ್ರೋ ಪ್ರಯಾಣ ದರದಲ್ಲಿ ಇಳಿಕೆ ಮಾಡಬೇಕೆಂದು ಹೇಳಿದೆ.

    ಮಾಲಿನ್ಯ ಪ್ರಮಾಣ ತುರ್ತು ಮಿತಿ ತಲುಪಿದರೆ ಸಮ-ಬೆಸ (ಆಡ್- ಈವನ್) ಯೋಜನೆಗೆ ತಯಾರಾಗಿರುವಂತೆ ದೆಹಲಿ ಹಾಗೂ ಅಕ್ಕಪಕ್ಕದ ರಾಜ್ಯಗಳ ಸರ್ಕಾರಕ್ಕೆ ಮಂಡಳಿ ಹೇಳಿದೆ. ಪಾರ್ಕಿಂಗ್ ಶುಲ್ಕ ಹೆಚ್ಚಳ ಎನ್‍ಸಿಆರ್(ನ್ಯಾಷನಲ್ ಕ್ಯಾಪಿಟಲ್ ರೀಜಿಯನ್)ನ ಎಲ್ಲಾ ನಗರಗಳಲ್ಲಿ ಅನ್ವಯಿಸಲಿದೆ.

    ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿರುವ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಯೋಜನೆಯಡಿ ವಾಯು ಮಾಲಿನ್ಯವನ್ನ ನಿಭಾಯಿಸಲು ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಈ) 500ಕ್ಕಿಂತ ಹೆಚ್ಚಾದಾಗ ತುರ್ತು ಸಂದರ್ಭವನ್ನ ಘೋಷಿಸಲಾಗುತ್ತದೆ. ಮಂಗಳವಾರ ಸಂಜೆ 4.30ರ ವೇಳೆಗೆ ಎಕ್ಯೂಈ 436 ಇತ್ತು ಎಂದು ವರದಿಯಾಗಿದೆ.

    ದೆಹಲಿ ಹಾಗೂ ಎನ್‍ಸಿಆರ್ ನ ಎಲ್ಲಾ ರಾಜ್ಯ ಸರ್ಕಾರಗಳು ಕೂಡಲೇ ಸಾರ್ವಜನಿಕ ಸಾರಿಗೆ ಸೇವೆಯನ್ನು ಹೆಚ್ಚಿಸಬೇಕು. ರಸ್ತೆಗಳಲ್ಲಿ ಹೆಚ್ಚಿನ ಬಸ್‍ಗಳು ಓಡಾಡುವಂತೆ ನೋಡಿಕೊಳ್ಳಬೇಕು. ಮೆಟ್ರೋ ಸಂಚಾರವನ್ನೂ ಕೂಡ ಹೆಚ್ಚು ಮಾಡಬೇಕು. ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಆಫ್ ಪೀಕ್ ಹವರ್‍ಗಳಲ್ಲಿ ಪ್ರಯಾಣ ದರವನ್ನು ಕಡಿಮೆ ಮಾಡಬೇಕು ಎಂದು EPCA ಹೇಳಿದೆ.

    ಈ ಎಲ್ಲಾ ಕ್ರಮಗಳನ್ನು ಘೋಷಣೆ ಮಾಡಿದ EPCA, ರಾಜಧಾನಿ ಸಂಕಷ್ಟ ಸ್ಥಿತಿಯಲ್ಲಿದ್ದು ಮುಂದಿನ ಕೆಲವು ದಿನಗಳ ಕಾಲ ಇದು ಮುಂದುವರೆಯಲಿದೆ ಎಂದು ಹೇಳಿದೆ.