Tag: ವಾಯು ನೆಲೆ

  • ಭಾರತದ ವಾಯುನೆಲೆಯಲ್ಲಿ ಫ್ರಾನ್ಸ್ ರಫೇಲ್‌ ಲ್ಯಾಂಡಿಂಗ್‌

    ಭಾರತದ ವಾಯುನೆಲೆಯಲ್ಲಿ ಫ್ರಾನ್ಸ್ ರಫೇಲ್‌ ಲ್ಯಾಂಡಿಂಗ್‌

    ನವದೆಹಲಿ: ಫ್ರಾನ್ಸಿನ ಮೂರು ರಫೇಲ್‌ ಯುದ್ಧ ವಿಮಾನಗಳು ತಮಿಳುನಾಡಿನ ಸೂಲೂರ್‌ನಲ್ಲಿರುವ ವಾಯುನೆಯಲ್ಲಿ ನಿಲುಗಡೆಯಾಗಿತ್ತು.

    ಮೂರು ರಫೇಲ್ ಜೆಟ್‌ ಒಳಗೊಂಡಂತೆ ಫ್ರೆಂಚ್ ವಾಯು ಪಡೆ ತಂಡವು ಪೆಸಿಫಿಕ್ ಸಾಗರದಲ್ಲಿ ನಡೆಸುತ್ತಿರುವ ಮೆಗಾ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ಸೂಲೂರಿನಲ್ಲಿ ಲ್ಯಾಂಡ್‌ ಆಗಿತ್ತು.

    ಮಿಲಿಟರಿ ಸಹಕಾರವನ್ನು ಹೆಚ್ಚಿಸಲು ಫ್ರಾನ್ಸ್ ಮತ್ತು ಭಾರತವು 2018 ರಲ್ಲಿ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ನೀಡಲು ಸಹಿ ಹಾಕಿತ್ತು. ಈ ಒಪ್ಪಂದಂತೆ ಫ್ರಾನ್ಸ್‌ ವಿಮಾನಗಳು ಭಾರತದಲ್ಲಿ ಲ್ಯಾಂಡ್‌ ಆಗಿವೆ.

    ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆ ಇಂಡೋ-ಪೆಸಿಫಿಕ್‌ನಲ್ಲಿ ʼಪೆಗೇಸ್ 22ʼ ಹೆಸರಿನಲ್ಲಿ ಆಗಸ್ಟ್ 10 ರಿಂದ ಸೆಪ್ಟೆಂಬರ್ 18 ರವರೆಗೆ ಕಾರ್ಯಾಚರಣೆಯನ್ನು ನಡೆಸುತ್ತಿದೆ.

    72 ಗಂಟೆಯ ಒಳಗಡೆ( ಆಗಸ್ಟ್‌10 -12ರ ಒಳಗಡೆ) ಫ್ರಾನ್ಸ್‌ ಸೇನೆಯನ್ನು ಮೆಟ್ರೋಪಾಲಿಟನ್‌ ಫ್ರಾನ್ಸ್‌ನಿಂದ ನ್ಯೂ ಕ್ಯಾಲೆಡೋನಿಯಾಗೆ ನಿಯೋಜಿಸುವುದು ಈ ಕಾರ್ಯಾಚರಣೆಯ ಮೊದಲ ಹಂತವಾಗಿತ್ತು. ಫ್ರಾನ್ಸ್‌ ವಸಾಹತು ಆಗಿರುವ ನ್ಯೂ ಕ್ಯಾಲೆಡೋನಿಯಾ ಆಸ್ಟ್ರೇಲಿಯಾದ ಸಿಡ್ನಿಯಿಂದ 2 ಸಾವಿರ ಕಿ.ಮೀ ದೂರದಲ್ಲಿದೆ. ಇದನ್ನೂ ಓದಿ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 286, ಕರ್ನಾಟಕದಲ್ಲಿ ಬಿಜೆಪಿಗೆ 13 ಸ್ಥಾನ

    16,600 ಕಿಮೀ. ದೂರವನ್ನು ಕ್ರಮಿಸಲು ಫ್ರಾನ್ಸ್‌ ವಾಯುಪಡೆಯ ತಾಂತ್ರಿಕ ನಿಲುಗಡೆ ಮಾಡಿತ್ತು. ಆಗಸ್ಟ್ 10 ರ ಸಂಜೆ ಸೂಲೂರಿನಲ್ಲಿ ಲ್ಯಾಂಡಿಂಗ್ ಆದ ವಿಮಾನಗಳು ಆಗಸ್ಟ್ 11 ರ ಮುಂಜಾನೆ ಇಂಧನ ತುಂಬಿದ ಬಳಿಕ ಕ್ಯಾಲೆಡೋನಿಯಾಕ್ಕೆ ತೆರಳಿದೆ.

    ಫ್ರೆಂಚ್ ವಾಯುಪಡೆ ʼಪೆಗೇಸ್ 22ʼ ಬಳಿಕ ಆಗಸ್ಟ್ 17 ರಿಂದ ಸೆಪ್ಟೆಂಬರ್ 10 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ʼಪಿಚ್ ಬ್ಲ್ಯಾಕ್ʼ ಸಮರಾಭ್ಯಾಸದಲ್ಲಿ ಭಾಗಿಯಾಗಲಿದೆ. ಭಾರತ ಸೇರಿದಂತೆ ಆಸ್ಟ್ರೇಲಿಯಾ, ಜಪಾನ್, ಅಮೆರಿಕ, ಜರ್ಮನಿ, ಇಂಡೋನೇಷ್ಯಾ, ಸಿಂಗಾಪುರ, ಇಂಗ್ಲೆಂಡ್‌, ದಕ್ಷಿಣ ಕೊರಿಯಾ ದೇಶಗಳು ಈ ಡ್ರಿಲ್‌ನಲ್ಲಿ ಭಾಗವಹಿಸಲಿವೆ.

    Live Tv
    [brid partner=56869869 player=32851 video=960834 autoplay=true]

  • ಯಲಹಂಕ ವಾಯುನೆಲೆ ಸುತ್ತಮುತ್ತಲಿರುವ ಕಟ್ಟಡಗಳಿಗೆ BBMP ನೋಟಿಸ್

    ಯಲಹಂಕ ವಾಯುನೆಲೆ ಸುತ್ತಮುತ್ತಲಿರುವ ಕಟ್ಟಡಗಳಿಗೆ BBMP ನೋಟಿಸ್

    ಬೆಂಗಳೂರು: ಯಲಹಂಕ ವಾಯುನೆಲೆ ಸುತ್ತಮುತ್ತ ಇರುವ ಕಟ್ಟಡಗಳಿಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ.

    ಜಕ್ಕೂರಿನಲ್ಲಿ ಮತ್ತೆ ತರಬೇತಿ ಆರಂಭಿಸಲಾಗುತ್ತಿದ್ದು, ನಿರ್ದಿಷ್ಟ ಎತ್ತರವನ್ನು ಮೀರಿ ನಿರ್ಮಿಸಲಾಗಿರುವ ಸುಮಾರು 11 ಕಟ್ಟಡವನ್ನು ತೆರವುಗೊಳಿಸುವಂತೆ ಅಲ್ಲಿನ ಸುತ್ತಮುತ್ತಲಿನ ಜನರಿಗೆ ಬಿಬಿಎಂಪಿ ತಿಳಿಸಿದೆ. ಇದನ್ನೂ ಓದಿ:  ಉಪಚುನಾವಣೆ: ಉತ್ತರಾಖಂಡ್ ಸಿಎಂಗೆ ಧಾಮಿಗೆ ಭರ್ಜರಿ ಗೆಲುವು

    ವಿಮಾನ ಸುರಕ್ಷತಾ ದೃಷ್ಟಿಯಿಂದ ಕಟ್ಟಡಗಳ ತೆರವಿಗೆ ಬಿಬಿಎಂಪಿ ಆದೇಶ ಹೊರಡಿಸಿದ್ದು, ಯಲಹಂಕ ಏರೋಡ್ರೋಮ್ ಸುತ್ತ ಸುಮಾರು 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಮಾನ ಹಾರಾಟ ನಡೆಸುವಂತಿಲ್ಲ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಇದನ್ನೂ ಓದಿ:  ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿಗೂ ಕೊರೊನಾ

  • ವಾಯು ನೆಲೆಯ ಸನಿಹ ಆತಂಕ ಹುಟ್ಟಿಸಿದ ಡ್ರೋನ್ ಹಾರಾಟ

    ವಾಯು ನೆಲೆಯ ಸನಿಹ ಆತಂಕ ಹುಟ್ಟಿಸಿದ ಡ್ರೋನ್ ಹಾರಾಟ

    ಬೆಂಗಳೂರು: ಜಾಲಹಳ್ಳಿಯ ವಾಯು ನೆಲೆಯ ಸನಿಹ ಡ್ರೋನ್ ಗಳ ಹಾರಾಟ ಮಾಡಿರೋ ಶಂಕೆ ವ್ಯಕ್ತವಾಗಿದ್ದು ಆತಂಕ ಸೃಷ್ಟಿಸಿದೆ.

    ಅಕ್ರಮವಾಗಿ ಎರಡು ಡ್ರೋನ್ ಗಳು ಹಾರಾಟ ಮಾಡಿರೋ ಬಗ್ಗೆ ಸೇನಾ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಕ್ರಮವಾಗಿ ಎರಡು ಡ್ರೋನ್ ಹಾರಾಟ ಮಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗಂಗಮ್ಮನ ಗುಡಿ ಪೊಲೀಸರಿಗೆ ಸೇನಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅವರ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮದುವೆ ಮನೆಗೆ ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡ 100ಕ್ಕೂ ಹೆಚ್ಚು ಜನರು

    Drone
    ಸಾಂದರ್ಭಿಕ ಚಿತ್ರ

    ಸುಮಾರು 40 ದಿನಗಳ ಹಿಂದೆ ಈ ಕುರಿತು ದೂರು ಬಂದಿತ್ತು. ಜಾಲಹಳ್ಳಿ ವಾಯುನೆಲೆಯ ಕಾಂಪೌಂಡ್ ಬಳಿ ಅನುಮಾನಾಸ್ಪದ ಲೈಟ್ ಬ್ಲಿಂಕಿಂಗ್ ಕಂಡುಬಂದಿತ್ತು. ಇದು ರಾತ್ರಿ ಕರ್ತವ್ಯದಲ್ಲಿದ್ದ ಸೆಕ್ಯುರಿಟಿ ಗಮನಕ್ಕೆ ಬಂದಿತ್ತು. ರಾತ್ರಿಯಾದ ಕಾರಣ ಅದು ಏನೆಂದು ಸೆಕ್ಯುರಿಟಿಗೆ ಗೊತ್ತಾಗಿರಲಿಲ್ಲ. ಮೇಲ್ನೋಟಕ್ಕೆ ಚಿಕ್ಕ ಡ್ರೋನ್ ಎಂಬ ಸಂಶಯ ವ್ಯಕ್ತವಾಗಿತ್ತು. ಹೀಗಾಗಿ ಸ್ಥಳೀಯ ಠಾಣೆಗೆ ದೂರನ್ನು ನೀಡಿದ್ದ ವಾಯುನೆಲೆ ಅಧಿಕಾರಿಗಳು, ಗಂಗಮ್ಮನ ಗುಡಿ ಹಾಗೂ ಜಾಲಹಳ್ಳಿ ಪೊಲೀಸ್ ಸಿಬ್ಬಂದಿಯನ್ನು ಕರೆಸಿ ಪರಿಶೀಲನೆ ಮಾಡಲಾಗಿತ್ತು.

    ಸುಮಾರು 15 ದಿನಗಳ ನಿರಂತರವಾಗಿ ಪರಿಶೀಲನೆ ನಡೆಸಿದ ಬಳಿಕ ಪೊಲೀಸರಿಗೆ ಡ್ರೋನ್ ಹಾರಾಟದ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ವಾಯುನೆಲೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಮಾಡಿ ಮಾಹಿತಿ ನೀಡಲಾಗಿದ್ದು, ಈ ಕುರಿತು ಪರಿಶೀಲನೆ ಮುಂದುವರೆಸಿದ್ದೇವೆ ಎಂದು ಉತ್ತರ ವಿಭಾಗದ ಡಿಸಿಪಿ ಧಮೇರ್ಂದ್ರ ಕುಮಾರ್ ಮೀನಾ ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ರಾಜಕೀಯ ವಿರೋಧಿಗಳ ಸಂಗಮ

  • ರಫೇಲ್‌ ಲ್ಯಾಂಡ್‌ ಆಗಿದ್ದ ವಾಯುನೆಲೆಯ ಸಮೀಪವೇ ಬಿತ್ತು ಇರಾನ್‌ ಕ್ಷಿಪಣಿ

    – ವಾಯುನೆಲೆಯಲ್ಲಿ ಹೈ ಅಲರ್ಟ್‌ ಘೋಷಣೆ
    – ಸೈನಿಕರಿಗೆ ಬಂಕರ್‌ಗೆ ಹೋಗುವಂತೆ ಸೂಚನೆ

    ಅಬುಧಾಬಿ: ಅತ್ಯಾಧುನಿಕ ಯುದ್ಧ ವಿಮಾನ ರಫೇಲ್‌ ಇಂದು ಮಧ್ಯಾಹ್ನ ಹರ್ಯಾಣದಲ್ಲಿರುವ ಅಂಬಾಲ ವಾಯುನೆಲೆಯಲ್ಲಿ ಲ್ಯಾಂಡ್‌ ಆಗಲಿದೆ. ಈ ಮಧ್ಯೆ ಮಂಗಳವಾರ ರಾತ್ರಿ ರಫೇಲ್‌ ತಂಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಲ್ ದಫ್ರಾ ವಾಯುನೆಲೆಯ ಸಮೀಪ ಇರಾಕ್‌ನ  ಕ್ಷಿಪಣಿಗಳು ಲ್ಯಾಂಡ್‌ ಆದ ವಿಚಾರ ಬೆಳಕಿಗೆ ಬಂದಿದೆ.

    ಭಾರತದ ಮೂರು ಸಿಂಗಲ್‌ ಸೀಟರ್‌ ಮತ್ತು ಎರಡು ಡಬಲ್‌ ಸೀಟರ್‌ ರಫೇಲ್‌ ವಿಮಾನಗಳು ಸೋಮವಾರ ಫ್ರಾನ್ಸ್‌ನ ಮೆರಿಗ್ನಾಕ್‌ನಿಂದ ಟೇಕಾಫ್‌ ಆಗಿ ಅಮೆರಿಕ ಮತ್ತು ಫ್ರಾನ್ಸ್‌ ವಾಯುನೆಲೆಯಾಗಿರುವ ಅಲ್ ದಫ್ರಾದಲ್ಲಿ ಲ್ಯಾಂಡ್‌ ಆಗಿತ್ತು. ಈ ನಡುವೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಮೂರು ಕ್ಷಿಪಣಿಗಳನ್ನು ಹಾರಿಸಿತ್ತು. ಕ್ಷಿಪಣಿ ಹಾರಿಸಿದ್ದ ವಿಚಾರ ತಿಳಿಯುತ್ತಿದ್ದಂತೆ ಅಲ್‌ ದಫ್ರಾ ಮತ್ತು ಕತಾರ್‌ನಲ್ಲಿರುವ ಅಮೆರಿಕದ ವಾಯು ನೆಲೆ ಅಲ್‌ ಉದಿದ್‌ನಲ್ಲಿ ಹೈ ಅಲರ್ಟ್‌ ಅಲರ್ಟ್‌ ಘೋಷಿಸಲಾಗಿತ್ತು.

    ಇರಾನ್‌ ಕ್ಷಿಪಣಿಗಳು ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಎರಡು ವಾಯು ನೆಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿತ್ತು. ಆದರೆ ಈ ಕ್ಷಿಪಣಿಗಳು ಯಾವುದು ವಾಯುನೆಲೆಯ ಮೇಲೆ ಅಪ್ಪಳಿಸಲಿಲ್ಲ. ವಾಯು ನೆಲೆಯ ಸಮೀಪ ಇರುವ ಪರ್ಷಿಯನ್‌ ಕೊಲ್ಲಿಯಲ್ಲಿ ಬಿತ್ತು ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ.

    ಮಿಲಿಟರಿ ತಾಲೀಮಿನ ಭಾಗವಾಗಿ ಇರಾನ್‌ ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು. ಅಮೆರಿಕದ ವಿಮಾನ ವಾಹಕ ಯುದ್ಧ ನೌಕೆಯ ಮಾದರಿಯನ್ನು ನಿಲ್ಲಿಸಿ ಅದರ ಮೇಲೆ ದಾಳಿ ನಡೆಸುವ ಭಾಗವಾಗಿ ಕ್ಷಿಪಣಿ ಹಾರಿಸಿತ್ತು. ಈ ಕ್ಷಿಪಣಿಗಳು ಎರಡು ವಾಯುನೆಲೆಯ ಸಮೀಪವೇ ಬಿದ್ದ ಕಾರಣ ಕೆಲ ಹೊತ್ತು ಆತಂಕಕ್ಕೆ ಕಾರಣವಾಗಿತ್ತು ಇರಾನ್‌ ಕ್ಷಿಪಣಿ ಬರುತ್ತಿರುವ ಸಿಗ್ನಲ್‌ ತಿಳಿಯುತ್ತಿದ್ದಂತೆ ಆಲ್‌ ದಫ್ರಾ ವಾಯುನೆಲೆಯಲ್ಲಿರುವ ಸೈನಿಕರಿಗೆ ಬಂಕರ್‌ ಒಳಗಡೆ ಹೋಗುವಂತೆ ಅಮೆರಿಕ ಸೂಚಿಸಿತ್ತು.

     

    ಕ್ಷಿಪಣಿ ಹಾರಿಸಿದ್ದು ಯಾಕೆ?
    ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ ಅವರನ್ನು ಅಮೆರಿಕ ಸೇನೆ ಈ ವರ್ಷದ ಜನವರಿ 3 ರಂದು ಹತ್ಯೆ ಮಾಡಿತ್ತು. ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೇಮಾನಿಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು.

    ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ವಿಮಾನ ನಿಲ್ದಾಣಕ್ಕೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೇಮಾನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು.

    ಈ ಘಟನೆಯ ಬಳಿಕ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನೆ ಬೀಡು ಬಿಟ್ಟಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಇರಾನ್ ಎರಡು ರಾಕೆಟ್ ದಾಳಿ ನಡೆಸಿತ್ತು. ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಲು ಇರಾನ್‌ ಮುಂದಾಗುತ್ತಿದ್ದು ಈಗ ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ಸಮರಾಭ್ಯಾಸ ನಡೆಸುತ್ತಿದೆ.  ಇದನ್ನೂ ಓದಿ: ಅಮೆರಿಕ, ಇರಾನ್ ಯುದ್ಧದ ಕಾರ್ಮೋಡ- ಭಾರೀ ಸಂಕಷ್ಟಕ್ಕೆ ಸಿಲುಕಿದ ಬಳ್ಳಾರಿ ರೈತರು