Tag: ವಾಯುಸೀಮೆ

  • ಏರ್‌ ಇಂಡಿಯಾ 4,000 ಕೋಟಿ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ – ಸಿಇಒ ಸ್ಪೋಟಕ ಮಾಹಿತಿ

    ಏರ್‌ ಇಂಡಿಯಾ 4,000 ಕೋಟಿ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ – ಸಿಇಒ ಸ್ಪೋಟಕ ಮಾಹಿತಿ

    ನವದೆಹಲಿ: ಏರ್‌ ಇಂಡಿಯಾ (Air India) ಸಂಸ್ಥೆ 4,000 ಕೋಟಿಗೂ ಅಧಿಕ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ (Campbell Wilson) ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಹಲ್ಗಾಮ್‌ ಭಯೋತ್ಪಾದಕ ದಾಳಿ (Pahalgam Attack) ಬಳಿಕ ಎರಡೂ ರಾಷ್ಟ್ರಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದರಿಂದ ಭಾರತ ಮತ್ತು ಪಾಕಿಸ್ತಾನ ಪರಸ್ಪರ ತಮ್ಮ ವಾಯುಪ್ರದೇಶವನ್ನು ಮುಚ್ಚಿದವು. ಇದು ಭಾರತೀಯ ವಿಮಾನಯಾನ ಸಂಸ್ಥೆಗಳ ಮೇಲೆ ಗಮನಾರ್ಹ ಪರಿಣಾಮ ಬೀರಿತು. ಏರ್‌ ಇಂಡಿಯಾ ಒಂದೇ ಸಂಸ್ಥೆ ಸುಮಾರು 4,000 ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸಿತು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಮೋದಿ ಮತಕ್ಕಾಗಿ ಡ್ಯಾನ್ಸ್ & ಡ್ರಾಮಾ, ಬೇಕಿದ್ರೆ ಭರತನಾಟ್ಯನೂ ಮಾಡ್ತಾರೆ – ರಾಹುಲ್‌ ಗಾಂಧಿ ಲೇವಡಿ

    ಸಂಘರ್ಷದ ಬಳಿಕ ಪಾಕಿಸ್ತಾನ ತನ್ನ ವಾಯುಸೀಮೆಯನ್ನು (Pakistans Airspace) ನಿರಂತರವಾಗಿ ಮುಚ್ಚಿತು. ಇದರಿಂದ ಏರ್‌ ಇಂಡಿಯಾ ಸಂಸ್ಥೆ ನಿರಂತರ ನಷ್ಟ ಅನುಭವಿಸಿತು. ಏಕೆಂದ್ರೆ ಪಹಲ್ಗಾಮ್‌ ದಾಳಿ ಬಳಿಕ ಏರ್‌ ಇಂಡಿಯಾ ಹಲವಾರು ಅಂತಾರಾಷ್ಟ್ರೀಯ ವಿಮಾನಗಳ ಮಾರ್ಗಗಳನ್ನ ಬದಲಾಯಿಸಬೇಕಾಯಿತು. ಇದರಿಂದ ಕಾರ್ಯಾಚರಣೆಯ ವೆಚ್ಚ ಹೆಚ್ಚಾಯಿತು. ಇದೆಲ್ಲ ಕಾರಣಗಳಿಂದ ವಿಮಾನಯಾನ ಸಂಸ್ಥೆ ನಷ್ಟ ಅನುಭವಿಸಬೇಕಾಯ್ತು ಎಂದ ತಿಳಿಸಿದ್ರು. ಇದನ್ನೂ ಓದಿ: 10 ಮುಸ್ಲಿಂ ಯುವತಿಯರನ್ನು ಕರೆತಂದು ಹಿಂದೂ ಯುವಕರು ಮದುವೆಯಾಗಿ: ಬಿಜೆಪಿ ಮಾಜಿ ಶಾಸಕ ವಿವಾದಾತ್ಮಕ ಹೇಳಿಕೆ

    ಈ ಅವಧಿಯಲ್ಲಿ ಯುರೋಪ್‌ ಮತ್ತು ಯುನೈಟೆಡ್‌ ಸ್ಟೇಸ್ಟ್‌ಗೆ ಹೋಗುವ ಮಾರ್ಗಗಳು ಹೆಚ್ಚು ಪರಿಣಾಮ ಬೀರಿತು. ಈ ಮಾರ್ಗಗಳಲ್ಲಿ ಬದಲಾವಣೆ ಮಾಡಿದ್ದರಿಂದ 60 ರಿಂದ 90 ನಿಮಿಷಗಳ ಪ್ರಯಾಣ ಸಮಯ ಹೆಚ್ಚಾಯಿತು. ಜೊತೆಗೆ ಸಿಬ್ಬಂದಿ ಖರ್ಚು ಹೆಚ್ಚಾಯ್ತು ಎಂದು ವಿವರಿಸಿದ್ರು. ಇದನ್ನೂ ಓದಿ:  ಅಯೋಧ್ಯೆ ರಾಮಮಂದಿರಕ್ಕೆ 3 ಸಾವಿರ ಕೋಟಿ ದೇಣಿಗೆ; 1500 ಕೋಟಿ ರೂ. ಖರ್ಚು

    ಪಹಲ್ಗಾಮ್‌ನಲ್ಲಿ ಹರಿಯಿತು ನೆತ್ತರು
    ಏಪ್ರಿಲ್ 22ರಂದು ಶ್ರೀನಗರದ ಪಹಲ್ಗಾಮ್‌ನಲ್ಲಿರುವ ಬೈಸರನ್ ಕಣಿವೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹಾಜರಿದ್ದರು. ಹಠಾತ್ ಭಯೋತ್ಪಾದಕ ದಾಳಿಯ ಸಮಯದಲ್ಲಿ, 26 ಜನರು ಸಾವನ್ನಪ್ಪಿದರು ಮತ್ತು ಗುಂಡಿನ ದಾಳಿಯಲ್ಲಿ 17 ಜನರು ಗಾಯಗೊಂಡರು. 370ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿತ್ತು. ಟಿಆರ್‌ಎಫ್‌ ಸಂಘಟನೆ ಇದರ ಹೊಣೆ ಹೊತ್ತುಕೊಂಡಿತ್ತು.

  • ಭಾರತದ ವಾಯುಸೀಮೆಯನ್ನು ಅಮೆರಿಕ ಬಳಸಿ ಇರಾನ್‌ ಮೇಲೆ ದಾಳಿ ಮಾಡಿತ್ತಾ? – ಉತ್ತರ ನೀಡಿದ ಪಿಐಬಿ

    ಭಾರತದ ವಾಯುಸೀಮೆಯನ್ನು ಅಮೆರಿಕ ಬಳಸಿ ಇರಾನ್‌ ಮೇಲೆ ದಾಳಿ ಮಾಡಿತ್ತಾ? – ಉತ್ತರ ನೀಡಿದ ಪಿಐಬಿ

    ನವದೆಹಲಿ: ಇರಾನ್‌ನಲ್ಲಿ (Iran) ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಗೆ ಅಮೆರಿಕ (USA) ಭಾರತದ ವಾಯುಸೀಮೆಯನ್ನು ಬಳಸಿಲ್ಲ ಎಂದು ಪಿಐಬಿ ಹೇಳಿದೆ.


    ಸಾಮಾಜಿಕ ಜಾಲತಾಣದಲ್ಲಿ ಭಾರತದ ವಾಯುಸೀಮೆಯನ್ನು ಬಳಸಿ ಇರಾನ್‌ ದಾಳಿ ನಡೆಸಿದೆ ಎಂದು ಸುದ್ದಿಗಳು ಹರಿದಾಡುತ್ತಿದ್ದಂತೆ ಪಿಐಬಿ ಸ್ಟಷ್ಟನೆ ನೀಡಿದೆ. ಇದನ್ನೂ ಓದಿ: ಕಿಲ್ಲರ್‌ ಲೇಡಿಯಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

    ಬಿ2 ಯುದ್ಧ ವಿಮಾನ ಅಟ್ಲಾಂಟಿಕ್‌ ಸಮುದ್ರ ನಂತರ ಮೆಡಿಟೆರಿಯನ್‌ ಸಮುದ್ರ ಬಳಸಿ ಇರಾನಿನ ಮೂರು ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕ ಸೇನೆ ಸುದ್ದಿಗೋಷ್ಠಿ ನಡೆಸಿದ ಲಿಂಕ್‌ ಹಾಕಿ ಈ ಸುದ್ದಿ ಸುಳ್ಳು ಎಂದು ತಿಳಿಸಿದೆ.

    ಅಮೆರಿಕ ಬಹಳ ಎಚ್ಚರಿಕೆಯಿಂದ ಈ ದಾಳಿಯನ್ನು ನಡೆಸಿತ್ತು. ಜೂನ್‌ 21 ರಂದು ಎರಡು ಬಿ2 ಯುದ್ಧ ವಿಮಾನಗಳು ಮೊನೊ, ವೈಟ್‌ಮನ್ ಏರ್ ಫೋರ್ಸ್ ಬೇಸ್‌ನಿಂದ ಪಶ್ಚಿಮಕ್ಕೆ ಟೇಕಾಫ್‌ ಆಗಿ ಗುವಾಮ್‌ಗೆ ಬಂದಿತ್ತು. ಈ ವಿಮಾನಗಳು ಹಾರಿದ್ದರಿಂದ ಗುವಾಮ್‌ನಿಂದ ಅಮರಿಕ ಇರಾನ್‌ ಮೇಲೆ ದಾಳಿ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಉದ್ದೇಶಪೂರ್ವಕವಾಗಿ ತಮ್ಮ ಕಾರ್ಯಾಚರಣಾ ತಂತ್ರ ಸೋರಿಕೆ ಆಗದೇ ಇರಲು ಮಾಧ್ಯಮಗಳು ಮತ್ತು ಜನರ ದಿಕ್ಕು ತಪ್ಪಿಸಲು ಎರಡು ಯುದ್ಧವಿಮಾನಗಳನ್ನು ಗುವಾಮ್‌ಗೆ ಅಮೆರಿಕ ಕಳುಹಿಸಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.  ಇದನ್ನೂ ಓದಿ: ಬಾಂಬ್‌ ಹಾಕಿದ ಬೆನ್ನಲ್ಲೇ ಇರಾನ್‌ಗೆ MIGA ಘೋಷಿಸಿದ ಟ್ರಂಪ್‌

  • ಭಾರತದ ವಾಯುಸೀಮೆ ಬಂದ್‌ – ಪಾಕ್‌ಗೆ ಮತ್ತೊಂದು ಶಾಕ್‌

    ಭಾರತದ ವಾಯುಸೀಮೆ ಬಂದ್‌ – ಪಾಕ್‌ಗೆ ಮತ್ತೊಂದು ಶಾಕ್‌

    ನವದೆಹಲಿ: ಪಾಕಿಸ್ತಾನ (Pakistan) ವಿಮಾನಗಳಿಗೆ ಭಾರತ ತನ್ನ ವಾಯುಸೀಮೆ (Airspace) ಬಂದ್‌ ಮಾಡಿದೆ. ಭಾರತದ ವಿಮಾನಗಳಿಗೆ ತನ್ನ ವಾಯುಸೀಮೆಯನ್ನು ಬಳಸದಂತೆ ಪಾಕ್‌ ನಿರ್ಬಂಧ ಹೇರಿದ 6 ದಿನಗಳ ನಂತರ ಭಾರತ ಈ ಕ್ರಮವನ್ನು ಕೈಗೊಂಡಿದೆ.

    ಭಾರತ ಮತ್ತು ಪಾಕಿಸ್ತಾನ ಎರಡೂ ಮೇ 23ರ ರಾತ್ರಿ 11:59 ರವರೆಗೆ ಪರಸ್ಪರ ತನ್ನ ವಾಯುಸೀಮೆಯನ್ನು ಬಳಕೆ ಮಾಡುವುದನ್ನು ನಿರ್ಬಂಧಿಸಿದೆ. ಎರಡು ದೇಶಗಳ ನಡುವಿನ ಪರಿಸ್ಥಿತಿ ಸುಧಾರಣೆಯಾಗದೇ ಇದ್ದರೆ ನಿರ್ಬಂಧ ಮತ್ತೆ ಮುಂದುವರಿಯಲಿದೆ.

     

    ಈ ನಿರ್ಧಾರದಿಂದ ಪಾಕಿಸ್ತಾನ ನೋಂದಾಯಿತ ವಿಮಾನಗಳು ಮತ್ತು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಅಥವಾ ಗುತ್ತಿಗೆ ಪಡೆದ ವಿಮಾನಗಳು, ಮಿಲಿಟರಿ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಬಳಸುವಂತಿಲ್ಲ.

    ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನಕ್ಕೆ ಇದು ದೊಡ್ಡ ಪೆಟ್ಟು ಬೀಳಲಿದೆ. ಪಾಕ್‌ ವಿಮಾನಗಳು ಇನ್ನು ಮುಂದೆ ಮಲೇಷ್ಯಾದ ಕೌಲಾಲಂಪುರಕ್ಕೆ ಹೋಗಬೇಕಾದರೆ ಚೀನಾ ವಾಯುಸೀಮೆಯನ್ನು ಬಳಸಿ ಥಾಯ್ಲೆಂಡ್‌ ಮೂಲಕ ಸಂಚರಿಸಬೇಕಾಗುತ್ತದೆ.

  • ಇನ್ನು ಮುಂದೆ ವಿಮಾನದಲ್ಲೂ ವೈಫೈ ಬಳಸಬಹುದು

    ಇನ್ನು ಮುಂದೆ ವಿಮಾನದಲ್ಲೂ ವೈಫೈ ಬಳಸಬಹುದು

    – ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ವೈಫೈ
    – ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ

    ನವದೆಹಲಿ: ಇನ್ನು ಮುಂದೆ ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ಪ್ರಯಾಣಿಕರು ವಿಮಾನದಲ್ಲಿ ವೈಫೈ ಬಳಸಿಕೊಳ್ಳಬಹುದು.

    ಇಲ್ಲಿಯವರೆಗೆ ಭಾರತದ ವಾಯುಸೀಮೆ ವ್ಯಾಪ್ತಿಯ ಸಂಚಾರದಲ್ಲಿ ವೈಫೈ ಬಳಕೆಗೆ ಅನುಮತಿ ಸಿಕ್ಕಿರಲಿಲ್ಲ. ಹಲವು ವರ್ಷಗಳಿಂದ ಈ ಸೇವೆ ಆರಂಭಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದ್ದರೂ ಭದ್ರತಾ ಕಾರಣಗಳಿಂದ ಸರ್ಕಾರ ಮೊಬೈಲ್ ಫೋನ್ ಮತ್ತು ಇಂಟರ್ ನೆಟ್ ಬಳಕೆಗೆ ಅನುಮತಿ ನೀಡಿರಲಿಲ್ಲ. ಆದರೆ ಈಗ ನಾಗರಿಕ ವಿಮಾನಯಾನ ಸಚಿವಾಲಯ ವೈಫೈ ಬಳಕೆಗೆ ಅನುಮತಿ ನೀಡಿದೆ.

    ಫೆ.21 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಸಚಿವಾಲಯ, ಪೈಲಟ್ ಅನುಮತಿ ನೀಡಿದರೆ ಪ್ರಯಾಣಿಕರು ಫ್ಲೈಟ್ ಮೊಡ್ ಅಥವಾ ಏರ್ ಪ್ಲೇನ್ ಮೊಡ್ ಹಾಕಿಕೊಂಡು ವಿಮಾನದಲ್ಲಿನ ವೈಫೈ ಸೇವೆ ಬಳಸಿಕೊಂಡು ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್, ಇ- ರೀಡರ್ ಗಳನ್ನು ಬಳಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.

    2018ರಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿರುವ ವಿಮಾನದೊಳಗೆ ವೈಫೈ ಬಳಸಲು ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿತ್ತು.

    ವಿಮಾನವೊಂದು 3 ಸಾವಿರ ಮೀಟರ್ ಗಿಂತ ಮೇಲಕ್ಕೆ ಹಾರಲು ಆರಂಭಿಸಿದ ನಂತರ ಇಂಟರ್ ನೆಟ್ ಸಂಪರ್ಕ ಒದಗಿಸಬಹುದು. ಸ್ಯಾಟಲೈಟ್ ಮತ್ತು ಟೆರೆಸ್ಟ್ರಿಯಲ್ (ಭೂಮಿ) ನೆಟ್ ವರ್ಕ್ ಮೂಲಕ ಇಂಟರ್ ನೆಟ್ ಬಳಕೆಗೆ ಅವಕಾಶ ನೀಡಬಹುದು ಎಂದು ಟ್ರಾಯ್ ತನ್ನ ಶಿಫಾರಸ್ಸಿನಲ್ಲಿ ತಿಳಿಸಿತ್ತು.

    ಸಾಮಾನ್ಯವಾಗಿ ಯಾವುದೇ ವಿಮಾನಗಳು ಟೇಕಾಫ್ ಆಗಿ ನಾಲ್ಕೈದು ನಿಮಿಷಗಳಲ್ಲೇ 3 ಸಾವಿರ ಮೀಟರ್ ಗಿಂತ ಹೆಚ್ಚಿನ ಎತ್ತರ ತಲುಪುತ್ತದೆ. ಹೀಗಾಗಿ ವೈಫೈ ನೀಡಲು ಯಾವುದೇ ಸಮಸ್ಯೆ ಇರುವುದಿಲ್ಲ. ವಿಮಾನದಲ್ಲಿ ಎರಡು ರೀತಿಯ ಮೂಲಕ ವೈಫೈ ಸೌಲಭ್ಯ ಪಡೆಯಬಹುದು. ಒಂದನೆಯದ್ದು ಭೂಮಿಯಿಂದ ಆಕಾಶಕ್ಕೆ ಇನ್ನೊಂದು ಉಪಗ್ರಹದ ಮೂಲಕ.

    ಭೂಮಿಯಿಂದ ನೆಟ್:
    ಮೊಬೈಲ್ ಬ್ರಾಡ್ ಬ್ಯಾಂಡ್ ಟವರ್ ಗಳ ಮೂಲಕ ವಿಮಾನದ ಒಳಗಡೆ ಇರುವ ಆಂಟೇನಾಗಳಿಗೆ ಸಿಗ್ನಲ್ ಕಳುಹಿಸುತ್ತದೆ. ಎಲ್ಲ ಕಡೆ ಸಿಗ್ನಲ್ ಸಿಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ವಿಮಾನಗಳು ಸಾಗರದಲ್ಲಿ ಸಂಚರಿಸುವಾಗ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

    ಉಪಗ್ರಹ ನೆಟ್:
    ಈಗ ಹೇಗೆ ಒಂದು ಟಿವಿ ವಾಹಿನಿ ನೆಲದಲ್ಲಿರುವ ಕಚೇರಿಯಿಂದ ಸಿಗ್ನಲ್ ಗಳನ್ನು ಉಪಗ್ರಹಕ್ಕೆ ಕಳುಹಿಸಿ ಡಿಟಿಎಚ್ ಮೂಲಕ ವೀಕ್ಷಕರನ್ನು ತಲಪುತ್ತದೋ ಅದೇ ರೀತಿಯಾಗಿ ನೆಲದಿಂದ ವಿಮಾನಕ್ಕೆ ಎಲ್ಲ ಸಿಗ್ನಲ್ ಗಳನ್ನು ಉಪಗ್ರಹದ ಮೂಲಕವೇ ರವಾನಿಸಲಾಗುತ್ತದೆ. ವಿಮಾನ ತನ್ನ ಆಂಟೆನಾದ ಮೂಲಕ ಉಪಗ್ರಹದಿಂದ ಸಿಗ್ನಲ್ ಪಡೆದು ಬಳಿಕ ರೂಟರ್ ಮೂಲಕ ವೈಫೈ ಸೇವೆ ನೀಡಲಾಗುತ್ತದೆ. ಈ ವ್ಯವಸ್ಥೆಗಾಗಿ ರಿಸೀವರ್ ಮತ್ತು ಟ್ರಾನ್ಸ್ ಮೀಟರ್ ಗಳ ಬಳಕೆ ಮಾಡಲಾಗುತ್ತದೆ.

    ಏರ್ ಏಷ್ಯಾ, ಏರ್ ಚೀನಾ, ಏರ್ ಫ್ರಾನ್ಸ್, ಕತಾರ್ ಏರ್‍ವೇಸ್, ಬ್ರಿಟಿಷ್ ಏರ್‍ವೇಸ್, ಎಮಿರೇಟ್ಸ್, ವರ್ಜಿನ್ ಅಮೆರಿಕ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಈಗಾಗಲೇ ಪ್ರಯಾಣಿಕರಿಗೆ ವೈಫೈ ಸೇವೆ ನೀಡುತ್ತಿವೆ.