Tag: ವಾಯು

  • ಕೊನೆಗೂ ಮಗನ ಮುಖ ರಿವೀಲ್ ಮಾಡಿದ್ರು ಸೋನಂ ಕಪೂರ್

    ಕೊನೆಗೂ ಮಗನ ಮುಖ ರಿವೀಲ್ ಮಾಡಿದ್ರು ಸೋನಂ ಕಪೂರ್

    ಬಾಲಿವುಡ್(Bollywood) ನಟಿ ಸೋನಂ ಕಪೂರ್ (Sonam Kapoor) ಅಭಿಮಾನಿಗಳಿಗೆ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮನೆಗೆ ಮಗನ ಎಂಟ್ರಿಯಾಗಿ ಸಾಕಷ್ಟು ಸಮಯವಾಗಿದ್ದರು ಕೂಡ ಮಗನ ಮುಖ ರಿವೀಲ್ ಆಗಿರಲಿಲ್ಲ. ಇದೀಗ ನಟಿ ಮಗನ ಮುಖ ರಿವೀಲ್ ಮಾಡಿದ್ದಾರೆ.

     

    View this post on Instagram

     

    A post shared by Sonam Kapoor Ahuja (@sonamkapoor)

    ಬಿಟೌನ್‌ನ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ ನಟಿ ಸೋನಂ(Sonam) ಇದೀಗ ತಾಯ್ತನದ ಖುಷಿಯಲ್ಲಿದ್ದಾರೆ. ಆಗಸ್ಟ್ 20ಕ್ಕೆ ಸೋನಂ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇತ್ತೀಚೆಗೆ ಸೋನಂ, ಆನಂದ್(Anand Ahuja) ದಂಪತಿ ಅದ್ದೂರಿಯಾಗಿ ವಾಯು (Vayu) ಎಂದು ಮುದ್ದಾದ ಹೆಸರನಿಟ್ಟು ನಾಮಕರಣ ಮಾಡಿದ್ದರು. ಆದರೆ ಇಲ್ಲಿಯವೆರೆಗೂ ಮಗನ ಮುಖ ಎಲ್ಲೂ ರಿವೀಲ್ ಮಾಡಿರಲಿಲ್ಲ. ಈ ತಮ್ಮ ಹೊಸ ವೀಡಿಯೋ ಮೂಲಕ ನಟಿ ರೀವೀಲ್ ಮಾಡಿದ್ದಾರೆ. ಇದನ್ನೂ ಓದಿ:ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Sonam Kapoor Ahuja (@sonamkapoor)

    ಮಗನ ಮುಖ ಸದ್ಯಕ್ಕೆ ಎಲ್ಲೂ ತೋರಿಬಾರದು ಎಂದು ಸೋನಂ ನಿಗಾ ವಹಿಸಿದ್ದರು. ಆದರೆ ತಮ್ಮ ಹೊಸ ಪೋಸ್ಟ್ ಮೂಲಕ ರಿವೀಲ್ ಮಾಡಿದ್ದಾರೆ. ಸೋನಂ ಮತ್ತು ಪತಿ ಆನಂದ್ ಮುದ್ದು ಮಗನಿಗೆ ಮುತ್ತು ಕೊಡತ್ತಿರುವ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಸೇನೆಗೆ ಕಾಡುತ್ತಿದೆ ಅಧಿಕಾರಿ, ಸೈನಿಕರ ಕೊರತೆ

    ಭಾರತೀಯ ಸೇನೆಗೆ ಕಾಡುತ್ತಿದೆ ಅಧಿಕಾರಿ, ಸೈನಿಕರ ಕೊರತೆ

    ನವದೆಹಲಿ: ಭಾರತದ ಮೂರು ಸೇನಾ ಪಡೆಗಳಲ್ಲಿ ಅಧಿಕಾರಿಗಳು ಹಾಗೂ ಸೈನಿಕರ ಕೊರತೆ ಕಾಡುತ್ತಿದ್ದು, ಪ್ರಸ್ತುತ 9,427 ಅಧಿಕಾರಿಗಳು ಹಾಗೂ 68,864 ಯೋಧರ ಕೊರತೆಯಿದೆ ಎಂದು ಮೂಲಗಳು ತಿಳಿಸಿವೆ.

    2019ರ ಜನವರಿವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ, ಭೂಸೇನಾ ಪಡೆಯಲ್ಲಿ 50,312 ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಅವಕಾಶವಿದೆ. ಆದರೆ ಪ್ರಸ್ತುತ 42,913 ಅಧಿಕಾರಿಗಳು ಮಾತ್ರ ಇದ್ದು, ಸುಮಾರು 7,399 ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ.

    ಹಾಗೆಯೇ ನೌಕಾ ಪಡೆಯಲ್ಲಿ 11,557 ಅಧಿಕಾರಿಗಳನ್ನು ಹೊಂದುವ ಅವಕಾಶವಿದೆ. ಆದರೆ ಸದ್ಯ 10,012 ಮಂದಿ ಅಧಿಕಾರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ 1,545 ಅಧಿಕಾರಿಗಳ ಕೊರತೆಯಿದೆ ಎಂದು ಜೂನ್ 2019ರವೆರೆಗೆ ಲಭ್ಯವಿರುವ ಮಾಹಿತಿ ತಿಳಿಸಿದೆ.

    ವಾಯುಪಡೆಯಲ್ಲಿ 12,625 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದು, ಆದರೆ ಪ್ರಸ್ತುತ 12,142 ಮಂದಿ ಅಧಿಕಾರಿಗಳಿದ್ದು, 483 ಅಧಿಕಾರಿಗಳು ಬೇಕಾಗಿದ್ದಾರೆ ಎಂದು ತಿಳಿದುಬಂದಿದೆ.

    ಆಫೀಸರ್ ಅಥವಾ ಏರ್‍ಮೆನ್ ಅಥವಾ ನಾವಿಕ ಶ್ರೇಣಿಗಿಂತಲೂ ಕಡಿಮೆ ಶ್ರೇಣಿಯ ಹುದ್ದೆಗಳನ್ನು ಗಮನಿಸಿದಲ್ಲಿ ಭೂಸೇನಾಪಡೆಗೆ ಒಟ್ಟು 12.23 ಲಕ್ಷ ಯೋಧರನ್ನು ಹೊಂದಲು ಅವಕಾಶವಿದೆ. ಆದರೆ ಪ್ರಸ್ತುತ 11.85 ಲಕ್ಷ ಯೋಧರು ಮಾತ್ರ ಇದ್ದಾರೆ. ಹಾಗಾಗಿ 38,235 ಯೋಧರ ಕೊರತೆಯಿದೆ. ನೌಕಾಪಡೆಯಲ್ಲಿ 16,806 ಹಾಗೂ ವಾಯುಪಡೆಯಲ್ಲಿ 13,823 ಯೋಧರ ಹುದ್ದೆಗಳು ಖಾಲಿ ಉಳಿದಿವೆ.

    ಪ್ರಾದೇಶಿಕ ಸೈನ್ಯ (ಟಿಎ) ಸ್ವಯಂಸೇವಕ ನಾಗರಿಕರಿಗೆ ಸೈನ್ಯದ ಸಮವಸ್ತ್ರವನ್ನು ಧರಿಸಲು ಹಾಗೂ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಲಾಭದಾಯಕ ಉದ್ಯೋಗವನ್ನು ಒದಗಿಸುತ್ತಿದೆ. ಸೈನ್ಯದಲ್ಲಿ ಸ್ಥಿರವಾದ ಕರ್ತವ್ಯಗಳು, ಸಮುದಾಯದ ಜೀವನಕ್ಕೆ ಧಕ್ಕೆ ಉಂಟಾಗುವ ಅಥವಾ ದೇಶದ ಭದ್ರತೆಗೆ ಧಕ್ಕೆ ಉಂಟಾಗುವ ಪರಿಸ್ಥಿತಿಯಲ್ಲಿ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವುದು, ಅಗತ್ಯ ಸೇವೆಗಳ ನಿರ್ವಹಣೆಯಲ್ಲಿ ನಾಗರಿಕ ಪ್ರಾಧಿಕಾರಕ್ಕೆ ಸಹಾಯ ಮಾಡುವುದು ಪ್ರಾದೇಶಿಕ ಸೈನ್ಯ ಪಾತ್ರವಾಗಿದೆ. ಅಲ್ಲದೆ ಅಗತ್ಯಬಿದ್ದಾಗ ಭಾರತೀಯ ಸೇನೆಯ ಸಹಾಕ್ಕಾಗಿ ಕೂಡ ಟಿಎ ಪಡೆ ಕಾರ್ಯ ನಿರ್ವಹಿಸುತ್ತದೆ.

  • ಗುಜರಾತ್‍ಗೆ ಮತ್ತೆ ವಾಯು ಭೀತಿ – ಶೀಘ್ರವೇ ಕಚ್‍ಗೆ ಅಪ್ಪಳಿಸುವ ಸಾಧ್ಯತೆ

    ಗುಜರಾತ್‍ಗೆ ಮತ್ತೆ ವಾಯು ಭೀತಿ – ಶೀಘ್ರವೇ ಕಚ್‍ಗೆ ಅಪ್ಪಳಿಸುವ ಸಾಧ್ಯತೆ

    ಗುಜರಾತ್: ವಾಯು ಪಥ ಬದಲಾವಣೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟ ಬೆನ್ನಲ್ಲೇ ಗುಜರಾತ್‍ಗೆ ಕೇಂದ್ರ ಭೂವಿಜ್ಞಾನ ಇಲಾಖೆ ವಾಯು ಚಂಡಮಾರುತ ರೀ ಎಂಟ್ರಿಯಾಗುವ ಮಾಹಿತಿ ನೀಡಿದೆ.

    ವಾಯು ಚಂಡಮಾರುತವು ಮರುಕಳಿಸಲಿದ್ದು, ನಾಳೆ ನಾಡಿದ್ದು ಗುಜರಾತ್‍ನ ಕಚ್‍ಗೆ ಅಪ್ಪಳಿಸುವ ಸಾಧ್ಯತೆಗಳಿವೆ. ವಾಯು ತನ್ನ ಪಥ ಬದಲಿಸಿದ್ದರು ಗುರುವಾರದಿಂದಲೂ ಅದರ ಪರಿಣಾಮವಾಗಿ ಗುಜರಾತ್‍ನ ಕೆಲವೆಡೆ ಗಾಳಿ ಸಹಿತ ಮಳೆಯಾಗುತ್ತಿದೆ.

    ಕರಾವಳಿ ಪ್ರದೇಶ, ಗಿರ್, ಸೋಮ್‍ನಾಥ್, ಡಿಯು, ಜುನಾಗಢ, ಪೋರ್ ಬಂದರ್ ಗಳಲ್ಲಿ ಭಾರೀ ಮಳೆಯಾಗುತ್ತಿದೆ. ಆದರೆ ಗುರುವಾರ ಚಂಡಮಾರುತವು ಅದರ ಪಥ ಬದಲಿಸಿದ ಕಾರಣ ಇನ್ನೂ ಹೆಚ್ಚಿನ ಪರಿಣಾಮಗಳೇನೂ ಉಂಟಾಗದು ಎಂದು ಹವಾಮಾನ ಇಲಾಖೆಯೂ ತಿಳಿಸಿತ್ತು.

    ಚಂಡಮಾರುತದ ತೀವ್ರತೆ ಕಡಿಮೆಯಾಗುವ ಸಾಧ್ಯತೆಗಳಿವೆಯಾದರೂ, ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ.