Tag: ವಾಪಸ್ಸು

  • ಮೂರು ವರ್ಷಗಳ ಬಳಿಕೆ ತಾಯ್ನಾಡಿಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ

    ಮೂರು ವರ್ಷಗಳ ಬಳಿಕೆ ತಾಯ್ನಾಡಿಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮದುವೆಯಾದ ಬಳಿಕ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ (America) ನೆಲೆಸಿದ್ದರು. ಅಲ್ಲಿಂದಲೇ ಅವರು ಅನೇಕ ಕಾರ್ಯಕ್ರಮಗಳಿಗೂ ಭಾಗಿಯಾದರು. ಮಗುವಾದ ನಂತರ ಬಹುತೇಕ ಅಮೆರಿಕಾದಲ್ಲೇ ಉಳಿದರು. ಇದೀಗ ಬರೋಬ್ಬರಿ ಮೂರು ವರ್ಷಗಳ ಬಳಿಕ ತವರಿಗೆ ಬಂದಿಳಿದಿದ್ದಾರೆ ನಟಿ. ಮುಂಬೈಗೆ (Mumbai) ಬಂದಿಳಿದ ಬೋರ್ಡಿಂಗ್ ಪಾಸ್ ಸಮೇತ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮಗಳ ಜೊತೆ ಭಾರತಕ್ಕೆ ಬಂದಿಳಿದಿರುವ ಪ್ರಿಯಾಂಕಾ, ಅಂತಿಮವಾಗಿ ಮನೆಗೆ ಹೋಗುತ್ತಿದ್ದೇನೆ ಎಂದು ಮಗಳೊಂದಿಗೆ ಇರುವ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ. ಮೊಮ್ಮಗಳನ್ನು ನೋಡಲು ಅಮೆರಿಕಾಗೆ ಹೋಗಿದ್ದ ಪ್ರಿಯಾಂಕಾ ತಾಯಿ, ಇದೀಗ ಮೊಮ್ಮಗಳನ್ನು ಮನೆ ತುಂಬಿಸಿಕೊಂಡು ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್

    ಗಾಯಕ ನಿಕ್ ಜೋನಸ್ (Nick Jonas) ಜೊತೆ ಪ್ರಿಯಾಂಕಾ ಮದುವೆಯಾದ ನಂತರ ಬಾಲಿವುಡ್ ಸಿನಿಮಾ ರಂಗದಿಂದಲೇ ದೂರ ಉಳಿದಿದ್ದರು. ಹಾಲಿವುಡ್ ನಲ್ಲಿ ಸಿನಿಮಾ, ವೆಬ್ ಸೀರಿಸ್ ಹಾಗೂ ಶೋ ಗಳನ್ನು ನಡೆಸಿಕೊಡುತ್ತಿದ್ದರು. ಮೂರು ವರ್ಷಗಳ ಬಳಿಕ ಮುಂಬೈಗೆ ವಾಪಸ್ಸಾಗಿದ್ದರಿಂದ ಬಾಲಿವುಡ್ ಸಿನಿಮಾದಲ್ಲಿ ಅವರು ಮುಂದೆ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಆ ಕುರಿತು ಅವರು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಪಾತ್ರವನ್ನು ಮತ್ತೆ ಅನಿರುದ್ಧ ಮಾಡ್ತಾರಾ? ಕುತೂಹಲ ಮೂಡಿಸಿದೆ ‘ಜೊತೆ ಜೊತೆಯಲಿ’ ಟೀಮ್ ನಡೆ

    ಆರ್ಯವರ್ಧನ್ ಪಾತ್ರವನ್ನು ಮತ್ತೆ ಅನಿರುದ್ಧ ಮಾಡ್ತಾರಾ? ಕುತೂಹಲ ಮೂಡಿಸಿದೆ ‘ಜೊತೆ ಜೊತೆಯಲಿ’ ಟೀಮ್ ನಡೆ

    ಜೊತೆ ಜೊತೆಯಲಿ ಟೀಮ್ ನಿಂದ ಹೊಸ ಹೊಸ ಸುದ್ದಿಗಳು ಬರುತ್ತಿವೆ. ಅನಿರುದ್ಧ ಅವರನ್ನು ಧಾರಾವಾಹಿಯಿಂದ ಕೈ ಬಿಟ್ಟಿದ್ದರಿಂದ, ಇವರು ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಬೇರೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಯಿತು. ನಿರ್ದೇಶಕ ಅನೂಪ್ ಭಂಡಾರಿ, ನಟರಾದ ಸುನೀಲ್ ಪುರಾಣಿಕ್ ಮತ್ತು ಹರೀಶ್ ರಾಜ್ ಅವರನ್ನು ಪಾತ್ರ ನಿರ್ವಹಿಸಲು ಕೇಳಲಾಯಿತು. ಕೊನೆಗೆ ಹರೀಶ್ ರಾಜ್ ಪಕ್ಕಾ ಆಯ್ಕೆ ಎನ್ನುವ ಸುದ್ದಿಯೂ ಬಂತು. ಆದರೆ, ಇವೆಲ್ಲವೂ ಮತ್ತೆ ಉಲ್ಟಾ ಹೊಡೆಯುತ್ತಿವೆ.

    ಧಾರಾವಾಹಿ ಲೋಕದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಸದ್ಯಕ್ಕೆ ಆರ್ಯವರ್ಧನ್ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಿಕೊಳ್ಳುವದಿಲ್ಲವಂತೆ. ಹರೀಶ್ ರಾಜ್ ಅವರು ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಟಿಸುತ್ತಿದ್ದರೂ, ಅವರ ಪಾತ್ರ ಬೇರೆಯದ್ದೇ ಆಗಿರಲಿದೆಯಂತೆ. ಆರ್ಯವರ್ಧನ್ ಪಾತ್ರ ಮನೆಬಿಟ್ಟು ಹೋಗಲಿದೆ ಎಂದು ಹೇಳಲಾಗುತ್ತಿದೆ. ಆರ್ಯವರ್ಧನ್ ಪಾತ್ರಕ್ಕೆ ಯಾರನ್ನೂ ಆಯ್ಕೆ ಮಾಡಿಕೊಂಡಿಲ್ಲ ಅಂತಾರೆ, ಮನೆ ಬಿಟ್ಟು ಹೋದ ಆರ್ಯವರ್ಧನ್ ಮುಂದಿನ ದಿನಗಳಲ್ಲಿ ಮತ್ತೆ ವಾಪಸ್ಸು ಮನೆಗೆ ಬಂದರೆ, ಆ ಪಾತ್ರವನ್ನು ಅನಿರುದ್ಧ ಅವರೇ ಮಾಡಲಿದ್ದಾರೆ ಎನ್ನುವ ಅನುಮಾನ ಎಲ್ಲರದ್ದು.

    ಆದರೆ, ಇಷ್ಟೊಂದು ರಾದ್ಧಾಂತ ಮಾಡಿಕೊಂಡು, ಒಬ್ಬರಿಗೊಬ್ಬರ ಮೇಲೆ ಕೆಸರಾಟವಾಡಿ ಮತ್ತೆ  ಅನಿರುದ್ಧ ಮತ್ತು ನಿರ್ಮಾಪಕ ಆರೂರು ಜಗದೀಶ್ ಒಟ್ಟಿಗೆ ಕೆಲಸ ಮಾಡುತ್ತಾರಾ ಎನ್ನುವ ಪ್ರಶ್ನೆ ಎಲ್ಲರದ್ದು. ಮಾಧ್ಯಮಗಳ ಮುಂದೆ ಆರೋಪ ಪ್ರತ್ಯಾರೋಪ ಮಾಡಿದ ನಂತರ, ವಾಹಿನಿಯ ಪ್ರತಿನಿಧಿಯೇ ಅನಿರುದ್ಧ ಅವರು ಧಾರಾವಾಹಿಯಲ್ಲಿ ಇರುವುದಿಲ್ಲ ಎಂದು ಘೋಷಿದ ಮೇಲೆ ಮತ್ತೆ ಒಂದಾಗಿ ಕೆಲಸ ಮಾಡುವುದು ಅನುಮಾನ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದನ್ನೂ ಓದಿ:ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

    ಏನೇ  ಇರಲಿ, ಮತ್ತೆ ಅನಿರುದ್ಧ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ. ಹಾಗಾಗಿ ವಾಹಿನಿಯ ಮುಖ್ಯಸ್ಥರನ್ನೂ ಸೇರಿಸಿ, ಧಾರಾವಾಹಿಯ ತಂಡಕ್ಕೆ ಒತ್ತಡ ಹಾಕುವಂತಹ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಇಬ್ಬರೂ ರಾಜಿಯಾಗಿ ಮತ್ತೆ ಅನಿರುದ್ಧ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿ ಎನ್ನುವುದು ಹಲವು ಜನರ ಆಸೆ. ಮುಂದಿನ ದಿನಗಳಲ್ಲಿ ಏನಾಗತ್ತೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]