Tag: ವಾಣಿ ವಿಲಾಸ ಆಸ್ಪತ್ರೆ

  • ವಾಣಿವಿಲಾಸ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ – ಸಿಎಂ ಅವ್ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ!

    ವಾಣಿವಿಲಾಸ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ – ಸಿಎಂ ಅವ್ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ!

    – ಅನಿವಾರ್ಯವಾಗಿ ಖಾಸಗಿ ಮೆಡಿಕಲ್‌ಗಳಲ್ಲಿ ಮೆಡಿಸಿನ್‌ ಖರೀದಿ ಮಾಡ್ತಿರೋ ರೋಗಿಗಳು

    ಬೆಂಗಳೂರು: ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ (Vanivilas Government Hospital) ಮೆಡಿಸಿನ್ ಸಿಗದೇ ರೋಗಿಗಳು ಪರದಾಡ್ತಿದ್ದಾರೆ. ಯಾಕೆ ಶಾರ್ಟೆಜ್ ಅಂತ ಪ್ರಶ್ನಿಸಿದ್ರೆ ರೋಗಿಗಳಿಗೆ ಸಿಬ್ಬಂದಿ ಗದರಿಸ್ತಿದ್ದಾರೆ, ಸಿಎಂ ಅವರನ್ನೇ ಕೇಳಿ ಅಂತ ಉಡಾಫೆ ಉತ್ತರ ಕೊಡ್ತಿದ್ದಾರೆ. ಈ ಕರ್ಮಕಾಂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹೌದು. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಮೆಡಿಸಿನ್ ಶಾರ್ಟೆಜ್ (Medicines Shortage) ಇದೆ. ಅಗತ್ಯ ಔಷಧಿಗಳು ಸಿಗದೇ ರೋಗಿಗಳು ಪರದಾಡ್ತಿದ್ದಾರೆ. ಅನಿವಾರ್ಯವಾಗಿ ಖಾಸಗಿ ಮೆಡಿಕಲ್‌ಗಳಲ್ಲಿ (Private Medical) ಕಾಸು ಕೊಟ್ಟು ಔಷಧ ಖರೀದಿ ಮಾಡ್ತಿದ್ದಾರೆ. ಆದ್ರೆ ಔಷಧ ಕೊಡಿ ಅಂತ ರೋಗಿಗಳು ಕೇಳಿದ್ರೆ ಖಾಲಿಯಾಗಿದೆ, ಸಿಎಂ ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರೆ. ದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಪುಂಡರ ಅಟ್ಟಹಾಸ – ಸಿಕ್ಕಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್‌ ತೋರಿಸಿ ಹಣ ವಸೂಲಿ

    ಸಮಸ್ಯೆ ಆಗಿದ್ರೆ ಸರಿಪಡಿಸುವ ಕೆಲಸ ಮಾಡ್ತೇವೆ
    ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಔಷಧಿಗಳ ಪೂರೈಕೆಯಲ್ಲಿ ವ್ಯತ್ಯಯ ಆಗ್ತಿದೆ. ಇದರಿಂದ ವಾಣಿವಿಲಾಸ ಆಸ್ಪತ್ರೆಗೆ ಅಗತ್ಯ ಔಷಧಿಗಳು ಪೂರೈಕೆ ಆಗ್ತಿಲ್ಲ. ಕೆಲ ಮಾತ್ರೆಗಳು ಮಾತ್ರ ಸ್ಟಾಕ್ ಇದೆ ಎನ್ನಲಾಗ್ತಿದೆ. ಇನ್ನೂ ಈ ವಿಚಾರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಮಾತನಾಡಿ, ಸಮಸ್ಯೆ ಆಗಿದ್ರೆ ಮಾಹಿತಿ ಪಡೆದು ಸರಿಪಡಿಸುವ ಕೆಲಸ ಮಾಡಲಾಗುತ್ತೆ ಎಂದು ತಿಳಿಸಿದರು. ದನ್ನೂ ಓದಿ: ಮಲ್ಲೇಶ್ವರಂ | ಫರ್ನಿಚರ್ ಶಾಪ್‍ನಲ್ಲಿ ಭಾರೀ ಅಗ್ನಿ ಅವಘಡ – 5 ಕೋಟಿ ಮೌಲ್ಯದ ವಸ್ತುಗಳು ಭಸ್ಮ

    ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಉಚಿತವಾಗಿ ಸಿಗುತ್ತೆ ಅಂತ ಆಸ್ಪತ್ರೆ ಆವರಣದಲ್ಲಿದ್ದ ಜನೌಷಧಿ ಕೇಂದ್ರಗಳನ್ನ ಮುಚ್ಚಿಸಿದ್ರು. ಈಗ ಆಸ್ಪತ್ರೆಯಲ್ಲಿ ಔಷಧಿಗಳೇ ಸಿಗ್ತಿಲ್ಲ. ಔಷಧಿ ಖರೀದಿಗೆ ಕರೆಯಲಾಗಿರುವ ಟೆಂಡರ್‌ ಕೂಡ ಅಂತಿಮ ಆಗಿಲ್ಲ. ಹೀಗಾಗಿ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಎದುರಿಸುವಂತಾಗಿದೆ. ದನ್ನೂ ಓದಿ: ದರ್ಶನ್ ಪತ್ನಿ ಮನೆಯಲ್ಲಿ 3 ಲಕ್ಷ ನಗದು ಕಳವು ಕೇಸ್‌ – ಹಣದ  ಮೂಲದ ಬಗ್ಗೆ ಮಾಹಿತಿ ಕೇಳಿದ ಪೊಲೀಸರು

  • ಶಿಶು ಕಿಡ್ನ್ಯಾಪ್‌ ಕೇಸ್ – ಅಪರಾಧಿಗೆ 10 ವರ್ಷ ಸಜೆ, 1 ಲಕ್ಷ ರೂ. ದಂಡ

    ಶಿಶು ಕಿಡ್ನ್ಯಾಪ್‌ ಕೇಸ್ – ಅಪರಾಧಿಗೆ 10 ವರ್ಷ ಸಜೆ, 1 ಲಕ್ಷ ರೂ. ದಂಡ

    ಬೆಂಗಳೂರು: ನವಜಾತ ಶಿಶು ಕಿಡ್ನ್ಯಾಪ್‌ ಪ್ರಕರಣದ ಅಪರಾಧಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.

    ಅಪರಾಧಿ ರಶ್ಮಿ, 5 ವರ್ಷಗಳ ಹಿಂದೆ ವಾಣಿ ವಿಲಾಸ ಆಸ್ಪತ್ರೆಯಿಂದ (Vani Vilas Hospital) ಆಗ ತಾನೆ ಹುಟ್ಟಿದ್ದ ನವಾಜಾತ ಶಿಶುವನ್ನ ಕಿಡ್ನ್ಯಾಪ್‌ ಮಾಡಿದ್ದಳು. ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಸಿಸಿಹೆಚ್ 51ರ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಸಂಸದನಿಗೆ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ – ಪಂಜಾಬ್‌ನಿಂದ ಸಂಸತ್‌ಗೆ ಕೇಜ್ರಿವಾಲ್?

    ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಬಸವನಗುಡಿ ಮಹಿಳಾ ಠಾಣೆಗೆ ವರ್ಗಾವಣೆಯಾಗಿತ್ತು. ತಲೆಮರೆಸಿಕೊಂಡಿದ್ದ ರಶ್ಮಿಯನ್ನು 1 ವರ್ಷದ ಬಳಿಕ ಮಹಿಳಾ ಠಾಣೆ ಇನ್ಸ್‌ಪೆಕ್ಟರ್‌ ಮೀನಾಕ್ಷಿ ಮತ್ತು ಅವರ ತಂಡ ಬಂಧಿಸಿ, ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಇದೀಗ ಕೋರ್ಟ್‌ನಲ್ಲಿ ವಿಚಾರಣೆ ಮುಗಿದಿದ್ದು, ಅಪರಾಧಿಗೆ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ನ್ಯಾಚುರಲ್ ನಾನಿಯ ಮಾಸ್ ಟೀಸರ್ ಹಿಟ್ 3

    ಸರ್ಕಾರದ ಪರವಾಗಿ ಪಿ.ಪಿ.ಬಿ.ಹೆಚ್.ಭಾಸ್ಕರ್ ವಾದ ಮಂಡಿಸಿದ್ದರು.

  • ಬೆಂಗಳೂರಿನಲ್ಲಿ ಕೊರೊನಾ ಗೆದ್ದ 200 ಮಂದಿ ಗರ್ಭಿಣಿಯರು

    ಬೆಂಗಳೂರಿನಲ್ಲಿ ಕೊರೊನಾ ಗೆದ್ದ 200 ಮಂದಿ ಗರ್ಭಿಣಿಯರು

    – ಹೆರಿಗೆ ಮಾಡಿಸಿ ಸಾಧನೆಗೈದ ವಾಣಿವಿಲಾಸ ಆಸ್ಪತ್ರೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅತೀ ವೇಗವಾಗಿ ಹರಡುತ್ತಿದ್ದು, ತುಂಬು ಗರ್ಭಿಣಿಯರಲ್ಲಿ ಕೂಡ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೆ ಇದೀಗ ಸುಮಾರು 200 ಮಂದಿ ಗರ್ಭಿಣಿಯರು ಮಹಾಮಾರಿಯನ್ನು ಗೆದ್ದಿದ್ದಾರೆ.

    ಹೌದು. ಬೆಂಗಳೂರಿನಲ್ಲಿ ಸಮುದಾಯಕ್ಕೆ ಹಬ್ಬಿದ ಆತಂಕದ ಬೆನ್ನಲ್ಲೇ ಗರ್ಭಿಣಿಯಲ್ಲಿ ಕೊರೊನಾಂತಕ ಉಂಟಾಗಿದೆ. ಆದರೆ ವಾಣಿವಿಲಾಸ ಆಸ್ಪತ್ರೆ ಇದೂವರೆಗೂ ಸುಮಾರು 200 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದೆ.

    ಸರ್ಕಾರಿ ವಾಣಿವಿಲಾಸ ಆಸ್ಪತ್ರೆಯೊಂದರಲ್ಲಿಯೇ 200 ಗರ್ಭಿಣಿಯರಿಗೆ ಡೆಲಿವರಿ ಮಾಡಿಸಲಾಗಿದೆ. ಇಷ್ಟು ಮಂದಿಗೆ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿಸಿದ ವೈದ್ಯರು, 200ನೇ ಡೆಲಿವರಿ ಸಕ್ಸಸ್ ಆದ ವೇಳೆ ಸಿಬ್ಬಂದಿಯೊಂದಿಗೆ ಆಸ್ಪತ್ರೆಯ ಅವರಣದಲ್ಲಿ ಕಂದಮ್ಮನನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ.

    ಆಸ್ಪತ್ರೆಯ ವೈದ್ಯರು ನರ್ಸ್ ಸೇರಿದಂತೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿಯೇ ಇದೂವರೆಗೆ 200 ಸೋಂಕಿತ ಗರ್ಭಿಣಿಯರಿಗೆ ಡೆಲಿವರಿ ಮಾಡಿಸಿ ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ 200ನೇ ಮುದ್ದು ಕಂದಮ್ಮನನ್ನು ಎತ್ತಿಕೊಂಡು ಖುಷಿಪಟ್ಟಿದ್ದಾರೆ.

    ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ವಾಣಿವಿಲಾಸ ಆಸ್ಪತ್ರೆ ಸಾಧನೆ ಮಾಡಿದೆ. ಗರ್ಭಿಣಿಯರು ಅತ್ಯಂತ ಜಾಗರೂಕತೆಯಿಂದ ಇರಬೇಕು ಅಂತ ಆಸ್ಪತ್ರೆ ಯ ಅಧೀಕ್ಷಕಿ ಡಾ ಗೀತಾ ಶಿವಮೂರ್ತಿ ಇದೇ ವೇಳೆ ಸಂದೇಶ ನೀಡಿದ್ದಾರೆ.

  • ಕೊರೊನಾ ರಿಪೋರ್ಟ್‍ಗಾಗಿ ಗರ್ಭಿಣಿ ನಿತ್ಯ 60 ಕಿಮೀ ಅಲೆದಾಟ

    ಕೊರೊನಾ ರಿಪೋರ್ಟ್‍ಗಾಗಿ ಗರ್ಭಿಣಿ ನಿತ್ಯ 60 ಕಿಮೀ ಅಲೆದಾಟ

    ಬೆಂಗಳೂರು: ಕೊರೊನಾ ಟೆಸ್ಟ್ ವರದಿಗಾಗಿ ಗರ್ಭಿಣಿ ನಿತ್ಯವೂ 60 ಕಿಮೀ ದೂರ ಅಲೆದಾಡುತ್ತಿದ್ದಾರೆ.

    ಹೊಸಕೋಟೆ ನಿವಾಸಿಯಾಗಿರುವ ತುಂಬು ಗರ್ಭಿಣಿ ಬುಧವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನೀಡಿದ್ದರು. ನಗರದ ವಾಣಿವಿಲಾಸ ಆಸ್ಪತ್ರೆಯ ವೈದ್ಯರು ಇಂದು ಗರ್ಭಿಣಿ ಹೆರಿಗೆಗೆ ಸಮಯದ ನೀಡಿದ್ದಾರೆ. ಆದರೆ ಕೋವಿಡ್ ವರದಿ ಇಲ್ಲದೇ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲುವುದಿಲ್ಲ ಎಂದಿದ್ದಾರೆ. ಪರಿಣಾಮ ಕಳೆದ 2 ದಿನಗಳಿಂದ ಗರ್ಭಿಣಿ ಪತಿಯೊಂದಿಗೆ ನಿತ್ಯ 60 ಕಿಮೀ ದೂರ ಪ್ರಯಾಣಿಸುತ್ತಿದ್ದಾರೆ.

    ಗರ್ಭಿಣಿ ಮಹಿಳೆಯರಿಗೆ ಹೆರಿಗೆಗೂ ಮುನ್ನ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಅಲ್ಲದೇ ಇಂತಹವರ ವರದಿಯನ್ನು ಆಸ್ಪತ್ರೆಗಳು ಶೀಘ್ರವೇ ನೀಡಬೇಕು ಎಂದು ನಿಯಮಗಳಲ್ಲಿ ಸೂಚಿಸಲಾಗಿದೆ. ಆದರೆ ಆಸ್ಪತ್ರೆಯವರು ಮಾತ್ರ ಕೋವಿಡ್ ರಿಪೋರ್ಟ್ ನೀಡಲು ಅಲೆದಾಟ ನಡೆಸುತ್ತಿದ್ದಾರೆ. ಕಳೆದ ವಾರವೂ ಗರ್ಭಿಣಿ ಮಹಿಳೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು. ಆ ವರದಿಯನ್ನು 1 ವಾರದ ಬಳಿಕ ಆಸ್ಪತ್ರೆ ನೀಡಿತ್ತು. ಆದರೆ ಕೋವಿಡ್ ಟೆಸ್ಟ್ ಪರೀಕ್ಷೆ ಮಾಡಿದ 2 ದಿನದಲ್ಲಿ ನೀಡಿದರೆ ಮಾತ್ರ ಹೆರಿಗೆ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವುದಾಗಿ ವೈದ್ಯರು ಹೇಳಿದ್ದಾರೆ. ಪರಿಣಾಮ ಮಹಿಳೆ ಬುಧವಾರ ಮತ್ತೆ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಟೆಸ್ಟ್ ಮಾಡಿಸಿದ್ದರು.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಹಿಳೆ, ಹೊಸಕೋಟೆಯಿಂದ ಬಂದಿದ್ದೇವೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ಇಂದು ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಸಮಯ ನೀಡಿದ್ದಾರೆ. ಆದರೆ ನಾವು 4ನೇ ಬಾರಿ ಆಸ್ಪತ್ರೆ ಬಳಿ ಆಗಮಿಸಿದ್ದೇವೆ. ಆದರೆ ರಿಪೋರ್ಟ್ ನೀಡಿ ಎಂದರೇ ಯಾರು ಪ್ರತಿಕ್ರಿಯೆ ನೀಡುತ್ತಿಲ್ಲ. ಲ್ಯಾಬ್ ಬಳಿ ಹೋಗಿ ಕೇಳಿದರು ಯಾರು ಉತ್ತರಿಸುತ್ತಿಲ್ಲ. ಇಂದು ವರದಿ ತಂದು ಆಸ್ಪತ್ರೆ ಬಂದರೇ ಮಾತ್ರ ನಾವು ದಾಖಲಿಸಿಕೊಂಡು, ಶಸ್ತ್ರ ಚಿಕಿತ್ಸೆ ಮಾಡುತ್ತೇವೆ ಎಂದು ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.