Tag: ವಾಣಿವಿಲಾಸ ಸಾಗರ ಜಲಾಶಯ

  • ವಾಣಿವಿಲಾಸ ಸಾಗರ ಜಲಾಶಯದ ನೀರಿನಲ್ಲಿ ಕೊಚ್ಚಿಹೋದ ಯುವಕ – ಅದೃಷ್ಟವಶಾತ್ ಪಾರು

    ವಾಣಿವಿಲಾಸ ಸಾಗರ ಜಲಾಶಯದ ನೀರಿನಲ್ಲಿ ಕೊಚ್ಚಿಹೋದ ಯುವಕ – ಅದೃಷ್ಟವಶಾತ್ ಪಾರು

    ಚಿತ್ರದುರ್ಗ: ಜಲಾಶಯದ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕನೋರ್ವ ಅದೃಷ್ಟವಶಾತ್ ಪಾರಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರಿನ (Hiriyur) ವಾಣಿವಿಲಾಸ ಜಲಾಶಯದ (Vani Vilas Dam) ಬಳಿ ನಡೆದಿದೆ.

    ಒಂದೇ ವರ್ಷದಲ್ಲಿ ಸತತ ಎರಡನೇ ಬಾರಿಗೆ ಕೋಡಿ ಬಿದ್ದಿರುವ ಬರದನಾಡಿನ ಜೀವನಾಡಿ ವಿವಿಸಾಗರ ಜಲಾಶಯದ ಕೋಡಿನೀರು ವೀಕ್ಷಿಸಲು ನಿತ್ಯ ಸಾವಿರಾರು ಜನ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ. ಈ ವೇಳೆ ಯುವಕನೋರ್ವ ಹುಚ್ಚು ಸಾಹಸಕ್ಕೆ ಮುಂದಾಗಿದ್ದು, ಆಯತಪ್ಪಿ ಹರಿಯುವ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ. ಆದರೆ ಅಲ್ಲಿನ ಸಾರ್ವಜನಿಕರು ಹಾಗು ಪೊಲೀಸರ ಸಮಯಪ್ರಜ್ಞೆಯಿಂದ ಹಗ್ಗದ ಸಹಾಯದೊಂದಿಗೆ ಪ್ರಾಣಾಪಾಯದಿಂದ ಯುವಕ ಸೇಫಾಗಿ ದಡ ಸೇರಿದ್ದಾನೆ. ಇದನ್ನೂ ಓದಿ: ಶಿವಮೊಗ್ಗ | ಕಾರ್ಮಿಕ ಇಲಾಖೆಯ ಕಟ್ಟಡ ಕುಸಿದು ಓರ್ವ ಸಾವು – ಮತ್ತೋರ್ವನಿಗೆ ಗಂಭೀರ ಗಾಯ

    ಅಲ್ಲದೇ ವಿವಿಸಾಗರದ ಹಿನ್ನೀರಿನಲ್ಲಿ ಈಜಾಡದಂತೆ ಹಾಗೂ ನೀರಿಗೆ ಇಳಿಯದಂತೆ ಪೊಲೀಸರು ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಹ ಯುವಕರು ಈ ರೀತಿ ಹುಚ್ಚು ಸಾಹಸಕ್ಕೆ ಕೈ ಹಾಕಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಲು ಮುಂದಾಗಿರೋದು ಮಾತ್ರ ವಿಪರ್ಯಾಸ. ಇದನ್ನೂ ಓದಿ: Cyclone Montha| ಎರಡು ದಿನ ಬೆಂಗಳೂರು ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

  • ಚಿತ್ರದುರ್ಗ | ಕೋಡಿಬಿದ್ದ ವಾಣಿವಿಲಾಸ ಸಾಗರ ಜಲಾಶಯ – ಜ.18ಕ್ಕೆ ಸಿಎಂ ಬಾಗಿನ

    ಚಿತ್ರದುರ್ಗ | ಕೋಡಿಬಿದ್ದ ವಾಣಿವಿಲಾಸ ಸಾಗರ ಜಲಾಶಯ – ಜ.18ಕ್ಕೆ ಸಿಎಂ ಬಾಗಿನ

    ಚಿತ್ರದುರ್ಗ: ಕಳೆದ ಒಂದು ಶತಮಾನದಲ್ಲಿ 70 ವರ್ಷ ಬರ ಅನುಭವಿಸಿದ್ದ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ (Vani Vilasapura Dam) ಭರ್ತಿಯಾಗಿ ಕೋಡಿಬಿದ್ದಿದೆ.

    ಕೋಟೆ ನಾಡಿನ ಏಕೈಕ ಜಲಾಶಯ ನಿರ್ಮಾಣವಾದ ಬಳಿಕ 3ನೇ ಬಾರಿಗೆ ಕೋಡಿಬಿದ್ದ ಜಲಾಶಯ ಬರದ ನಾಡಿಗೆ ಜೀವಕಳೆ ತಂದಿದೆ. ಕೊನೆಯಬಾರಿಗೆ 2022ರಲ್ಲಿ ಜಲಾಶಯ ಕೋಡಿ ಬಿದ್ದಿತ್ತು. ಆದ್ರೆ ಇತ್ತೀಚೆಗೆ ಭದ್ರಾ ಜಲಾಶಯದ ನೀರು ಹರಿದ ಪರಿಣಾಮ ವಿವಿ ಸಾಗರ ಜಲಾಶಯ 3ನೇ ಬಾರಿಗೆ ಕೋಡಿಬಿದ್ದಿದೆ. ಇದನ್ನೂ ಓದಿ: ಪ್ರೀತಿಸುವಂತೆ ಮುಸ್ಲಿಂ ಯುವಕನಿಂದ ಕಿರುಕುಳ – ಅಪ್ರಾಪ್ತೆ ಆತ್ಮಹತ್ಯೆ, ಆರೋಪಿ ಬಂಧನ

    ಜಲಾಶಯ ಭರ್ತಿಯಿಂದ ನೂರಾರು ಕಿಮೀ ವರೆಗೆ ಅಂತರ್ಜಲದ ಮಟ್ಟ ಹೆಚ್ಚಾಗಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲ್ಲೂಕಿನ ರೈತರು ಸಂಭ್ರಮಿಸಿದ್ದಾರೆ. ಜಲಾಶಯ ಭರ್ತಿಯಾದ ಹಿನ್ನೆಲೆ ರೈತಮುಖಂಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜ.18 ರಂದು ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿದ್ದಾರೆ.

    1907 ರಲ್ಲಿ ಮೈಸೂರು ಒಡೆಯರಾದ ಕೃಷ್ಣರಾಜ ಒಡೆಯರ್ ಈ ಜಲಾಶಯ ನಿರ್ಮಿಸಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳ ವೈಭವ – ಇಂಚಿಂಚಿಗೂ ಹದ್ದಿನ ಕಣ್ಣು, 2,700 ಎಐ ಕ್ಯಾಮೆರಾ ಕಣ್ಗಾವಲು

  • ಐದಾರು ವರ್ಷಗಳಿಂದ ಒಣಗಿದ್ದ ಚಾನಲ್‍ಗೆ ವಿವಿ ಸಾಗರ ಜಲಾಶಯದಿಂದ ನೀರು

    ಐದಾರು ವರ್ಷಗಳಿಂದ ಒಣಗಿದ್ದ ಚಾನಲ್‍ಗೆ ವಿವಿ ಸಾಗರ ಜಲಾಶಯದಿಂದ ನೀರು

    – ರೈತರ ಮೊಗದಲ್ಲಿ ಮಂದಹಾಸ

    ಚಿತ್ರದುರ್ಗ: ಕಳೆದ ಐದಾರು ವರ್ಷಗಳಿಂದ ಮಳೆಯಾಗಿಲ್ಲ ಅಂತ ನಿಲ್ಲಿಸಲಾಗಿದ್ದ ವಾಣಿವಿಲಾಸ ಸಾಗರ ಜಲಾಶಯದ ನೀರನ್ನು ಇಂದು ಚಾನಲ್ ಮೂಲಕ ಹೊರಬಿಡಲಾಯಿತು. ಹೀಗಾಗಿ ನೀರಿಲ್ಲದೇ ವಿನಾಶದ ಅಂಚಿನಲ್ಲಿದ್ದ ಬರದನಾಡಿನ ಜಮೀನುಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಹಾಗೂ ಜಿಲ್ಲೆಯ ಮುರಘಾ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಇದಕ್ಕೂ ಮುನ್ನ ಜಲಾಶಯದ ಆವರಣದಲ್ಲಿರುವ ಕಣಿವೆ ಮಾರಮ್ಮ ದೇಗುಲದ ಬಳಿ ಹೋಮಹವನ, ವಿಶೇಷ ಪೂಜಾಕಾರ್ಯ ಹಾಗೂ ಗಂಗಾ ಪೂಜೆ ಸಲ್ಲಿಸಿದ್ದಾರೆ. ನಂತರ ಎಲ್ಲರೂ ಸೇರಿ ಚಾನಲ್ ಮೂಲಕ ನೀರು ಹರಿಸಲು ಜಾಕ್‍ವಾಲ್ ಎತ್ತಿದರು.

    ಹೀಗಾಗಿ ಸುಮಾರು ಐದಾರು ವರ್ಷಗಳಿಂದ ಖಾಲಿಯಾಗಿ ಒಣಗಿ ಹೋಗಿದ್ದ ಚಾನಲ್‍ಗಳಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ಕಳೆದ ಐದಾರು ವರ್ಷಗಳಿಂದ ಮಳೆ ಇಲ್ಲದೇ ಈ ಭಾಗದ ಕೊಳವೆ ಬಾವಿಗಳೆಲ್ಲ ಬತ್ತಿ ಬರಿದಾಗಿದ್ದವು. ವಿವಿಸಾಗರ ಜಲಾಶಯದಲ್ಲಿನ ನೀರು ಸಹ ಡೆಡ್ ಸ್ಟೋರೇಜ್ ಮಟ್ಟಕ್ಕೆ ತಲುಪಿತ್ತು. ಹೀಗಾಗಿ ಎಚ್ಚೆತ್ತ ಜಿಲ್ಲಾಡಳಿತ ಕಳೆದ ನಾಲ್ಕು ವರ್ಷದ ಹಿಂದೆಯೇ ಚಾನಲ್ ಮೂಲಕ ನೀರು ಹರಿಯದಂತೆ ನಿಲ್ಲಿಸಲಾಗಿತ್ತು.

    ಪರಿಣಾಮ ಹಿರಿಯೂರು ತಾಲೂಕಿನ ರೈತರ ತೋಟಗಳಲ್ಲಿದ್ದ ಅಡಿಕೆ, ತೆಂಗು, ದಾಳಿಂಬೆ ಬೆಳೆಗಳು ಒಣಗಿ ರೈತರು ಕಂಗಾಲಾಗಿದ್ದರು. ಹೀಗಾಗಿ ರೈತರು ನೀರು ಬಿಟ್ಟು ರೈತರನ್ನು ಉಳಿಸಿ ಅಂತ ಹೋರಾಟ ಕೂಡ ನಡೆಸಿದ್ದರು. ರೈತರ ಕಷ್ಟ ನೋಡಲಾರದ ವರುಣ ಕೃಪೆತೋರಿ ಉತ್ತಮಮಳೆಯಾದ ಹಿನ್ನೆಲೆಯಲ್ಲಿ 101.65 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ಇಂದು ಜಿಲ್ಲೆಯ ಮಠಾಧೀಶರ ನೇತೃತ್ವದಲ್ಲಿ ಹೋಮಹವನ ನಡೆಸಿ ಚಾನಲ್ ಮೂಲಕ ರೈತರ ಬಳಕೆಗಾಗಿ ನೀರು ಹರಿಸಲಾಯಿತು.

    ರೈತರ ತೋಟಗಳಿಗೆ ಚಾನಲ್ ಮೂಲಕ ವಿವಿ ಸಾಗರ ಜಲಾಶಯದ 1.21 ಟಿ.ಎಂಸಿ ನೀರನ್ನು ಇಂದು ಹರಿಸಲಾಗಿದೆ. ಅಲ್ಲದೇ ಎಡನಾಲೆ ಹಾಗೂ ಬಲನಾಲೆ ಎರಡರಲ್ಲೂ ನೀರು ಹರಿಯುತ್ತಿದ್ದು, ಒಂದು ಹೊಸ ಫಾಲ್ಸ್ ಧುಮುಕುವಂತೆ ಹರಿಯುತ್ತಿರುವ ಚಾನಲ್ ನೋಡಲು ಜನಸಾಗರವೇ ವಿವಿಸಾಗರದತ್ತ ಹರಿದು ಬರುತ್ತಿದೆ.

    ಈ ನೀರು ಹಿರಿಯೂರು ತಾಲೂಕಿನ ಜಾನುವಾರುಗಳಿಗೆ ಕುಡಿಯುವ ನೀರು, ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾಗೂ 38 ಗ್ರಾಮಗಳ ಜನತೆಗೆ ತುಂಬಾ ಅನುಕೂಲವಾಗಲಿದೆ ಎಂದು ಶಾಸಕಿ ಪೂರ್ಣಿಮಾ ಪ್ರತಿಕ್ರಿಯಿಸಿದರು.

  • 9 ವರ್ಷದ ನಂತರ ಮೈಸೂರು ಅರಸರ ಕಾಲದ ಜಲಾಶಯಕ್ಕೆ‌ ಹರಿದು ಬಂತು 101 ಅಡಿ ನೀರು

    9 ವರ್ಷದ ನಂತರ ಮೈಸೂರು ಅರಸರ ಕಾಲದ ಜಲಾಶಯಕ್ಕೆ‌ ಹರಿದು ಬಂತು 101 ಅಡಿ ನೀರು

    – ಬರದನಾಡಿನ ಜೀವನಾಡಿ ವಾಣಿವಿಲಾಸ ಸಾಗರ ಭರ್ತಿ

    ಚಿತ್ರದುರ್ಗ: ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರೋ ಜಿಲ್ಲೆಯ, ರೈತರ ಏಕೈಕ ಜೀವನಾಡಿ ಅನಿಸಿರುವ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ ಕಳೆದ ಆರು ವರ್ಷಗಳಿಂದ ಮಳೆಯಿಲ್ಲದೇ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿತ್ತು. ಆದರೆ ಸತತ ಒಂಬತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ 101 ಅಡಿಗೂ ಹೆಚ್ಚು ನೀರಿನ ಮಟ್ಟವನ್ನು ತಲುಪಿದೆ.

    ಸುಮಾರು 112 ವರ್ಷಗಳ ಇತಿಹಾಸ ಇರುವ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ 57ನೇ ಬಾರಿ 100 ಅಡಿ ದಾಟಿದೆ. ಆ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ರೈತರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾಗಿರೋ ಈ ಜಲಾಶಯಕ್ಕೆ 2010ರಲ್ಲಿ 112.75 ಅಡಿ, 2011ರಲ್ಲಿ 106.05 ಅಡಿ ನೀರು ಬಂದಿತ್ತು. ಅದು ಬಿಟ್ಟರೆ ಯಾವುದೇ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬಂದಿರಲಿಲ್ಲ. ಆದರೆ ಈ ವರ್ಷ 101.4 ಅಡಿ ನೀರು ಹರಿದು ಬಂದಿದೆ.

    ಕಳೆದ ಮೂರು ತಿಂಗಳ ಹಿಂದೆ ವಿವಿ ಸಾಗರದ ಜಲಾಶಯದ ನೀರಿನ ಮಟ್ಟ 61 ಅಡಿಗೆ ಕುಸಿದಿತ್ತು. ಚಿತ್ರದುರ್ಗ ಜಿಲ್ಲೆಯಾದ್ಯಂತ ನೀರಿನ ಬವಣೆ ಶುರುವಾಗಿತ್ತು. ಆದರೆ ಚಿಕ್ಕಮಗಳೂರು ಭಾಗದಲ್ಲಿ ಕಳೆದ ತಿಂಗಳು ಸುರಿದ ಮಹಾ ಮಳೆಯಿಂದಾಗಿ ಸುಮಾರು 9 ಟಿಎಂಸಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಯ 2 ಟಿಎಂಸಿ ನೀರಿನೊಂದಿಗೆ 101.4 ಅಡಿಯಾಗಿದ್ದು, ಸುಮಾರು 11 ಟಿಎಂಸಿ ಜಲಾಶಯದಲ್ಲಿ ಸಂಗ್ರಹವಾಗಿದೆ.

    1911ರಲ್ಲಿ ಮೊದಲ ಬಾರಿಗೆ 109.66 ಅಡಿ ನೀರು ಸಂಗ್ರಹವಾಗಿತ್ತು. ತದನಂತರ 1933 ರಲ್ಲಿ 135.25 ಅಡಿ ನೀರು ಸಂಗ್ರಹವಾಗಿತ್ತು. ಭದ್ರಾದಿಂದ ಪ್ರತಿದಿನ 450 ರಿಂದ 550 ಕ್ಯೂಸೆಕ್ಸ್ ನೀರು ಸಂಗ್ರಹವಾಗುತ್ತದೆ. ಈ ನೀರು ಮಾರ್ಚ್ ಅಂತ್ಯದವರಿಗೂ ಭದ್ರಾ ನೀರು ವಿವಿ ಸಾಗರಕ್ಕೆ ಹರಿದು ಬರುತ್ತಿದೆ.

    ನಾಲ್ವಡಿ ಕೃಷ್ಣರಾಜ ಒಡೆಯರ ಅವಧಿಯಲ್ಲಿ ನಿರ್ಮಾಣ:
    ವಾಣಿ ವಿಲಾಸ ಜಲಾಶಯವನ್ನು ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ 1898 ರಿಂದ 1907 ರಲ್ಲಿ ನಿರ್ಮಾಣ ಮಾಡಲಾಗಿದೆ. ಅಣೆಕಟ್ಟು ಈಗ ಶತಮಾನ ದಾಟಿದೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿದ ಈ ಜಲಾಶಯವು ಹಿರಿಯೂರು ತಾಲೂಕಿನ ವಾಣಿವಿಲಾಪುರ ಹತ್ತಿರ ಮಾರಿಕಣಿವೆ ಎಂಬ ಪ್ರದೇಶದಲ್ಲಿದ್ದು, ಈ ಜಲಾಶಯವನ್ನು ವೇದಾವತಿ ನದಿಗೆ ಅಡ್ಡಲಾಗಿ ಅರಸರ ತಾಯಿ ಕೆಂಪನಂಜಮ್ಮಣ್ಣಿ ನೆನಪಿಗೆ ನಿರ್ಮಿಸಿದ್ದಾರೆ.

    1897 ರಲ್ಲಿ ಪ್ರಾರಂಭವಾದ ಕಾಮಗಾರಿ 10 ವರ್ಷದಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ಕಾಮಗಾರಿ ಮುಗಿಸಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಜಲಾಶಯ ಚಿತ್ರದುರ್ಗ ಭಾಗದ ಜನರಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ಹೆಚ್ಚು ಸಹಕಾರಿಯಾಗಿದೆ. ಈ ಜಲಾಶಯದ ಒಟ್ಟು ಎತ್ತರ 43.28 ಮೀಟರ್ (142 ಅಡಿ), ಉದ್ದ 405.50. ಮೀಟರ್, ಜಲಾವೃತ ಪ್ರದೇಶ 5374. ಚದರ ಕಿ.ಮೀ, ಡ್ಯಾಂನಲ್ಲಿ 850.30 (30 ಟಿಎಂಸಿ) ನೀರು ಸಂಗ್ರಹವಾಗುತ್ತದೆ.

    ಹಿರಿಯೂರಿನ ಜೀವನಾಡಿ ವಿವಿ ಸಾಗರ ಡ್ಯಾಂ:
    ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಹೊಂದಾದ ಹಿರಿಯೂರಿನ ವಿವಿ ಸಾಗರ ಬರಪೀತ ಪ್ರದೇಶಗಳಿಗೆ ನೀರು ಉಣಿಸುವ ಜಲಾಶಯವಾಗಿದೆ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಡಿಆರ್‌ಡಿಓಗೆ ಕುಡಿಯವ ನೀರು ಪೂರೈಸಲಾಗುತ್ತಿದೆ. ಈ ಹಿಂದೆ ಕೃಷಿ ಚಟುವಟಿಕೆಗಳಿಗೆ ವಿವಿ ಸಾಗರದ ನೀರಿನಿಂದ ಕಬ್ಬು, ಭತ್ತ, ರಾಗಿ, ಹತ್ತಿ, ತೆಂಗು, ಅಡಿಕೆ, ಬಾಳೆ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದರಿಂದ ಹಿರಿಯೂರು ಮಲೆನಾಡಿನಂತೆ ಕಂಗೊಳಿಸುತಿತ್ತು. ಈಗ ಹಿರಿಯೂರು ಬರದನಾಡಗಿದ್ದು, ವಾಣಿವಿಲಾಸ ಸಾಗರಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರ್ತಿರೋದು ರೈತರಲ್ಲಿ ಉಳುಮೆ ಮಾಡುವ ಉತ್ಸಾಹ ಹೆಚ್ಚಿಸಿದೆ.