Tag: ವಾಣಿಜ್ಯ ತೆರಿಗೆ ಇಲಾಖೆ

  • ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ – ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್‌ ನೋಟಿಸ್‌ ವಿಚಾರಕ್ಕೆ ಸಿಎಂ ರಿಯಾಕ್ಷನ್‌

    ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ – ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್‌ ನೋಟಿಸ್‌ ವಿಚಾರಕ್ಕೆ ಸಿಎಂ ರಿಯಾಕ್ಷನ್‌

    ಮೈಸೂರು: ಜಿಎಸ್‌ಟಿ (GST) ಮಾಡಿರೋದು ಕೇಂದ್ರ ಸರ್ಕಾರ, ಜಿಎಸ್‌ಟಿ ಕೌನ್ಸಿಲ್‌ ಕೇಂದ್ರ ಸರ್ಕಾರದ ಅಧೀನದಲ್ಲೇ ಇರೋದು. ತೆರಿಗೆ ಹಾಕುವುದೂ ಅವರೇ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಇದನ್ನೂ ಓದಿ: ಜಿಎಸ್‌ಟಿ ಸಂಗ್ರಹಣೆಯಲ್ಲಿ ಪ್ರಥಮ ಸ್ಥಾನ ಗಳಿಸಿ – ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸಿಎಂ ಕರೆ

    ಹೌದು. ಪ್ರಧಾನಿ ಮೋದಿ (Narendra Modi( ಕನಸಿನ ಯೋಜನೆ ಡಿಜಿಟಲ್ ಇಂಡಿಯಾದ ಯುಪಿಐ (UPI) ಪೇಮೆಂಟ್‌ಗೆ ಇತ್ತೀಚೆಗೆ ವಿಘ್ನ ಎದುರಾಗಿದೆ. ಬೇಕರಿ, ಟೀ-ಕ್ಯಾಂಡಿಮೆಂಟ್ಸ್, ತರಕಾರಿ, ಬೀಡ, ಹೂವಿನ ಅಂಗಡಿ, ಹಾಲು ಮಾರೋವ್ರು, ಡಾಬಾದವರು. ಹೀಗೆ.. ಎಲ್ಲರಿಗೂ ಯುಪಿಐ ವಹಿವಾಟು ಆಧರಿಸಿ ಲಕ್ಷಲಕ್ಷ ಟ್ಯಾಕ್ಸ್ (Tax) ಕಟ್ಟುವಂತೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಈ ಬೆನ್ನಲ್ಲೇ ಬಿಹಾರದ ಚುನಾವಣೆಗೆ ರಾಜ್ಯದಲ್ಲಿ ಜಿಎಸ್‌ಟಿ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಬಿಜೆಪಿ ಮಾಡಿದೆ. ಇದಕ್ಕೆ ಸಿಎಂ ತಿರುಗೇಟು ನೀಡಿದ್ದು, ಕೇಂದ್ರ ಸರ್ಕಾರದ ಮೇಲೆಯೇ ಗೂಬೆ ಕೂರಿಸಿದ್ದಾರೆ.

    ಸಣ್ಣ ವ್ಯಾಪಾರಸ್ಥರಿಗೂ ಲಕ್ಷ ಲಕ್ಷ ನೋಟಿಸ್‌ ನೀಡಿದ್ದಾರೆ ಅನ್ನೋ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ. ಜಿಎಸ್‌ಟಿ ಮಂಡಳಿ ಕೇಂದ್ರದ ಅಧೀನದಲ್ಲಿದೆ. ಜಿಎಸ್‌ಟಿ ಹಾಕುವುದೂ ಕೇಂದ್ರ ಸರ್ಕಾರವೇ (Central Government). ಈ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಮಾತನಾಡ್ತೀವಿ. ನಮ್ಮ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೂ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ನಾನು ಅವಮಾನ ಮಾಡಿಲ್ಲ, ನಮ್ಮ ಸಂಬಂಧ ಕೆಡಿಸಲು ಬಿಜೆಪಿ ಕುತಂತ್ರ: ಸಿದ್ದರಾಮಯ್ಯ

    ಬಹಿರಂಗ ಚರ್ಚೆಗೆ ʻಸಿದ್ಧʼ
    ಇನ್ನೂ ಗ್ಯಾರಂಟಿ ಕುರಿತ ಬಿಜೆಪಿ ಟೀಕೆಗೆ ಉತ್ತರ ಕೊಟ್ಟ ಸಿದ್ದರಾಮಯ್ಯ, ಬಿಜೆಪಿ ಹೇಳೋದು ಬರೀ ಸುಳ್ಳು. ಗ್ಯಾರಂಟಿ ಯೋಜನೆಯನ್ನು ಯಾಕೆ ಬಿಜೆಪಿ ಕಾಪಿ ಮಾಡಿದೆ. ಅನೇಕ ಬಾರಿ ಬಿಜೆಪಿ ಅವರನ್ನ ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಕರೆದಿದ್ದೇನೆ, ಅವರು ಬಂದಿಲ್ಲ. ಸುಳ್ಳು ಹೇಳುವವರು ಯಾವತ್ತೂ ಚರ್ಚೆಗೆ ಬರಲ್ಲ. ಅವರು ಬಂದ್ರೆ ನಾನು ಚರ್ಚೆಗೆ ರೆಡಿ ಎಂದು ಸವಾಲು ಎಸೆದರು.

    ಇದೇ ವೇಳೆ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ರನ್ನ ಪಕ್ಕದಲ್ಲೇ ನಿಲ್ಲಿಸಿಕೊಂಡು ನಿನ್ನೆಯ ಘಟನೆಗೆ ಸ್ಪಷ್ಟೀಕರಣ ಕೊಟ್ಟರು. ನಾನು ಡಿಕೆ ಶಿವಕುಮಾರ್‌ಗೆ ಅವಮಾನ ಮಾಡಿಲ್ಲ. ಅವರು ಸಭೆಯಲ್ಲಿ ಇಲ್ಲದ ಕಾರಣ ಅವರ ಹೆಸರು ಹೇಳಲಿಲ್ಲ ಅಷ್ಟೆ. ಇದರಲ್ಲಿ ಅವಮಾನದ ಪ್ರಶ್ನೆ ಎಲ್ಲಿಂದ ಬಂತು? ಬಿಜೆಪಿ ನನ್ನ ಮತ್ತು ಡಿಸಿಎಂ ಸಂಬಂಧ ಕೆಡಿಸಿ ಅದರ ರಾಜಕೀಯ ಲಾಭ ಪಡೆಯುವ ಭ್ರಮೆಯಲ್ಲಿ ಇದ್ದಾರೆ ಅಂತ ಕಿಡಿ ಕಾರಿದರು. ಇದನ್ನೂ ಓದಿ: ಡಿಜಿಟಲ್ ಪೇಮೆಂಟ್ ಕೋಲಾಹಲ – ಲಕ್ಷ, ಲಕ್ಷ ಟ್ಯಾಕ್ಸ್ ನೋಟಿಸ್‌ ಕಂಡು ಹೌಹಾರಿದ ಜನ; ಕ್ಯಾಶ್‌ ವಹಿವಾಟಿಗೆ ದುಂಬಾಲು

  • ತೆರಿಗೆ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ರೆ ಕೂಡಲೇ ಕರೆ ಮಾಡಿ – ಸಹಾಯವಾಣಿ ಬಿಡುಗಡೆ

    ತೆರಿಗೆ ಸಂಬಂಧ ಲಂಚಕ್ಕೆ ಬೇಡಿಕೆಯಿಟ್ರೆ ಕೂಡಲೇ ಕರೆ ಮಾಡಿ – ಸಹಾಯವಾಣಿ ಬಿಡುಗಡೆ

    ಬೆಂಗಳೂರು: ವಾಣಿಜ್ಯ ತೆರಿಗೆ (Commercial Tax) ಅಧಿಕಾರಿ-ಸಿಬ್ಬಂದಿ/ಬ್ರೋಕರ್‌ಗಳು ಯುಪಿಐಗೆ ಸಂಬಂಧಿಸಿದ ವಿಚಾರದಲ್ಲಿ ಲಂಚಕ್ಕಾಗಿ (Bribe) ಬೇಡಿಕೆ ಇಟ್ಟಲ್ಲಿ ತಕ್ಷಣ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಸಹಾಯವಾಣಿ ಬಿಡುಗಡೆ ಮಾಡಿದೆ.

    ಈ ಕುರಿತು ಪತ್ರಿಕಾ ಪ್ರಕಟಣೆ ಮಾಡಿದ ವಾಣಿಜ್ಯ ತೆರಿಗೆ ಇಲಾಖೆ, ಕೆಲವು ಮಧ್ಯವರ್ತಿಗಳು ವರ್ತಕರಿಗೆ ಸಹಾಯ ಮಾಡುವ ನೆಪದಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಇಲಾಖೆಯು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳವುದಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಬದ್ಧವಾಗಿರುತ್ತದೆ ಎಂದಿದೆ. ಇದನ್ನೂ ಓದಿ: ಐಸಿಸ್‌ ಮಾದರಿಯಲ್ಲಿ ಧಾರ್ಮಿಕ ಮತಾಂತರ ದಂಧೆ – 6 ರಾಜ್ಯಗಳಲ್ಲಿ 10 ಮಂದಿ ಅರೆಸ್ಟ್‌, ಬೃಹತ್‌ ಜಾಲ ಭೇದಿಸಿದ UP ಪೊಲೀಸ್‌

    ವ್ಯಾಪಾರಸ್ಥರು ಇಂತಹ ಪ್ರಕರಣಗಳನ್ನು ತಕ್ಷಣ ವಾಣಿಜ್ಯ ತೆರಿಗೆ ಇಲಾಖೆಯ ಗಮನಕ್ಕೆ ತರಲು ಸಹಾಯವಾಣಿ ಸಂಖ್ಯೆ- 1800 425 6300 (ಸಮಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ರಜಾದಿನಗಳನ್ನು ಹೊರತುಪಡಿಸಿ) ಸಂಪರ್ಕಿಸುವಂತೆ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಕೇಂದ್ರ ಕಚೇರಿ-1ರ ಅಪರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯುಜಿನೀಟ್: ಆಪ್ಷನ್ ಎಂಟ್ರಿ ಆರಂಭ, ಜು.22 ಕೊನೆ ದಿನ – ಕೆಇಎ

  • ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ಗುನ್ನಾ – ವಾರ್ಷಿಕ 40 ಲಕ್ಷ ವಹಿವಾಟು ಮೀರಿದ್ರೆ GST ಫಿಕ್ಸ್

    ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ಗುನ್ನಾ – ವಾರ್ಷಿಕ 40 ಲಕ್ಷ ವಹಿವಾಟು ಮೀರಿದ್ರೆ GST ಫಿಕ್ಸ್

    – ಹಣ್ಣು, ತರಕಾರಿ ವ್ಯಾಪಾರಿಗೆ 1 ಕೋಟಿ ರೂ. ಟ್ಯಾಕ್ಸ್‌, ನೋಟಿಸ್‌ ಕಂಡು ಹೌಹಾರಿದ ವ್ಯಕ್ತಿ

    ಬೆಂಗಳೂರು: ಬಡವರು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳೋಣ ಅಂತ ಕನಸು ಹೊಂದಿರುತ್ತಾರೆ. ಅದಕ್ಕಂತಲೇ ಬೇಕರಿ, ಕಾಂಡಿಮೆಂಟ್ಸ್, ಟೀ-ಕಾಫಿ, ತರಕಾರಿ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ವಾಣಿಜ್ಯ ತೆರಿಗೆ ಇಲಾಖೆ (Commercial Tax Department) ಜಿಎಸ್‌ಟಿ (GST) ಗುನ್ನಾ ಕೊಟ್ಟಿದೆ.

    ಸಣ್ಣ-ಪುಟ್ಟ ಅಂಗಡಿಗಳು ಅಂದಮೇಲೆ ಅಲ್ಲಿ ಫೋನ್ ಪೇ, ಗೂಗಲ್ ಪೇ.. ಆನ್‌ಲೈನ್ ಪೇಮೆಂಟ್ ಮೋಡ್ ಇದ್ದೇ ಇರುತ್ತೆ, ವ್ಯಾಪಾರಿಗಳಿಗೂ ಆನ್‌ಲೈನ್ ಪೇಮೆಂಟ್ ಸ್ವೀಕರಿಸೋದು ಕಾಮನ್ ಆಗೋಗಿದೆ. ಆದ್ರೆ, ಅವ್ರು ಇದೆಂದೂ ಕಂಡಿರದ, ಕೇಳಿರದ ಶಾಕ್‌ಗೆ ಅಂಗಡಿ ಮಾಲೀಕರು (Traders) ಒಳಗಾಗಿದ್ದಾರೆ. ಆನ್ ಲೈನ್ ಪೇಮೆಂಟ್ ನೋಡಿ ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 40 ರಿಂದ 60 ಲಕ್ಷ ರೂ. 1 ಕೋಟಿವರೆಗೂ ದಂಡ ವಿಧಿಸಿದ್ದು, ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ಗೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

    ವ್ಯಾಪಾರಸ್ಥರು ಗರಂ
    ಇನ್ನೂ ವಾಣಿಜ್ಯ ತೆರಿಗೆ ಇಲಾಖೆ ಕಳಿಸಿರೋ ನೋಟಿಸ್‌ಗೆ ವ್ಯಾಪಾರಿಗಳು ಶಾಕ್‌ಗೆ ಒಳಗಾಗಿದ್ದಾರೆ. `ನಮ್ ಕಿಡ್ನಿ ಮಾರಿ.. ಅಂಗಡಿ ಅಡವಿಟ್ರು ಈ ದಂಡ ಕಟ್ಟೋಕೆ ಆಗಲ್ಲ’.. ಸಣ್ಣ-ಪುಟ್ಟ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ʻಪಬ್ಲಿಕ್ ಟಿವಿʼ ಬಳಿ ಅಳಲು ತೋಡಿಕೊಂಡಿದ್ದಾರೆ. ಅದರಂತೆ ರಾಜೇಂದ್ರ ಶೆಟ್ಟಿ, ಇವ್ರು ದೂರದ ಕುಂದಾಪುರದಿಂದ ಜೀವನ ಸಾಗಿಸಲು ಬೆಂಗಳೂರು ಸೇರಿ ಅನೇಕ ವರ್ಷಗಳೇ ಕಳೆದಿದೆ, ಕೆಂಗೇರಿಯಲ್ಲಿ ಕಾಂಡಿಮೆಂಟ್ಸ್ ಮಾಡಿಕೊಂಡು ಸಂಸಾರದ ಬಂಡಿದೂಡ್ತಿದ್ದಾರೆ. ಇವ್ರಿಗೆ 2021 ರಿಂದ ಇಲ್ಲಿವರೆಗೆ ಒಟ್ಟು 67 ಲಕ್ಷ ಟ್ಯಾಕ್ಸ್ ಬಾಕಿ ಇದೆ ಅಂತಾ ನೋಟಿಸ್ ನೀಡಿದ್ದಾರೆ. ಟ್ಯಾಕ್ಸ್ ಕಟ್ಟೋದಕ್ಕೆ ಹೇಗೆ ಆಗುತ್ತೆ ಬೇಕಾದ್ರೇ ನಮ್ಮನ್ನ ಸಾಯಿಸಿ ಅಂತ ಕಣ್ಣೀರಿಟ್ಟಿದ್ದಾರೆ.

    ಬನ್ನೇರುಘಟದಲ್ಲಿ ತರಕಾರಿ-ಹಣ್ಣಿನ ವ್ಯಾಪಾರಿ ವೀರಮಾದ ಮಾತನಾಡಿ, ಆನ್‌ಲೈನ್ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದಕ್ಕೆ ವಾಣಿಜ್ಯ ತೆರಿಗೆ ಇಲಾಖೆಯವ್ರು ನೋಟಿಸ್ ನೀಡಿದ್ದು, ಬರೋಬ್ಬರಿ 1 ಕೋಟಿ 30 ಲಕ್ಷ ಹಣ ಕಟ್ಟುವಂತೆ ತಿಳಿಸಿದ್ದಾರೆ. ಇದರಿಂದ ಅಂಗಡಿ ಮಾಲೀಕ ಹೌಹಾರಿರಿದ್ದಾರೆ.

    ಬೇಕರಿ ವ್ಯಾಪಾರಿ ರಾಜೇಂದ್ರ ಪೂಜಾರಿ ಅನ್ನೋರು ಮಾತನಾಡಿ, ನಮಗೂ 33 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ. ನಾವು ಕಾಫಿ, ಟೀ-ಸಿಗರೇಟ್ ಮಾರಿಕೊಂಡಿರೋರು, ನಮ್ಮ ಅಂಗಡಿಯ ವ್ಯಾಲ್ಯೂನೇ 3 ಲಕ್ಷ ಆಗೋದಿಲ್ಲ. 33 ಲಕ್ಷ ಎಲ್ಲಿಂದ ತಂದು ಕೊಟ್ಟದಕ್ಕೆ ಆಗುತ್ತೆ? ನಾವು ಟ್ಯಾಕ್ಸ್ ಪೇ ಮಾಡೋದಕ್ಕೆ ಆಗೋಲ್ಲ, ದಯಾಮರಣ ಮಾಡಿಕೊಳ್ಳಬೇಕು ಅಷ್ಟೇ ಅಂತ ಗೋಳಾಡಿದ್ದಾರೆ.

    ಮಾರಾಟ ಮಾಡಿದ ಸರಕುಗಳಿಗೆ ಟ್ಯಾಕ್ಸ್ ಕಡ್ಡಾಯ
    ಇದೇ ವಿಚಾರವಾಗಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರಿಂದ ಸ್ಪಷ್ಟೀಕರಣ ನೀಡಲಾಗಿದೆ. ಮಾರಾಟ ಮಾಡಿದ ಸರಕುಗಳಿಗೆ ಟ್ಯಾಕ್ಸ್ ಕಡ್ಡಾಯ, ವಾರ್ಷಿಕ 40 ಲಕ್ಷ ವಹಿವಾಟು ಮೀರಿದರೆ ಜಿಎಸ್‌ಟಿ ಫಿಕ್ಸ್ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೇಕರಿಗಳಲ್ಲಿ ಬ್ರೆಡ್ ಮೇಲೆ ಜಿಎಸ್‌ಟಿ ಇಲ್ಲ, ಬ್ರೆಡ್ ಹೊರತುಪಡಿಸಿ ಕುರುಕಲು ತಿಂಡಿಗಳಿಗೆ 5% ಜಿಎಸ್‌ಟಿ, ಯುಪಿಐ ಮೂಲಕ 40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿರುವ ವರ್ತಕರಿಗೆ ನೋಟಿಸ್ ನೀಡಿರೋ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.

  • ಬೇಕರಿ, ಕಾಫಿ, ಟೀ ಶಾಪ್‌ಗಳಿಗೂ ಟ್ಯಾಕ್ಸ್ ಬ್ರಹ್ಮಾಸ್ತ್ರ – ಅಂಗಡಿ ಮಾಲೀಕರಿಗೆ ಬಿಗ್ ಶಾಕ್!

    ಬೇಕರಿ, ಕಾಫಿ, ಟೀ ಶಾಪ್‌ಗಳಿಗೂ ಟ್ಯಾಕ್ಸ್ ಬ್ರಹ್ಮಾಸ್ತ್ರ – ಅಂಗಡಿ ಮಾಲೀಕರಿಗೆ ಬಿಗ್ ಶಾಕ್!

    ಬೆಂಗಳೂರು: ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಟೀ ವ್ಯಾಪಾರ ಮಾಡ್ತಿರೋ ಅಂಗಡಿಗಳ ಕಳೆದ 4 ವರ್ಷದ ವಹಿವಾಟನ್ನ ಗಮಿನಿಸಿರೋ ವಾಣಿಜ್ಯ ತೆರಿಗೆ ಇಲಾಖೆಯು, ಜಿಎಸ್‌ಟಿ ಟ್ಯಾಕ್ಸ್ (GST Tax) ಕಟ್ಟಬೇಕು ಎಂದು ಸಾವಿರಾರು ಮಾಲೀಕರಿಗೆ ನೋಟಿಸ್ ನೀಡುವ ಮೂಲಕ ಬಿಗ್ ಶಾಕ್ ನೀಡಿದೆ.

    ದೂರದೂರುಗಳಿಂದ ಅಪ್ಪ ಅಮ್ಮನನ್ನ ಬಿಟ್ಟು ನಗರಗಳಿಗೆ ಹೋಗಿ ಹೇಗಾದ್ರೂ ಒಂದು ಬಿಸಿನೆಸ್ ಮಾಡಿ ಕುಟುಂಬದವರನ್ನ ನೋಡಿಕೊಳ್ಳೋಣ ಅನ್ನೋ ಸಣ್ಣ ಆಸೆಯಿಂದ ಸಾವಿರಾರು ಜನ ಇಂದು ಬೇಕರಿ (Bakery), ಟೀ ಶಾಪ್, ಪಾನ್ ಶಾಪ್, ಕಾಂಡಿಮೆಂಟ್ ಅಂತಾ ಮಾಡಿಕೊಂಡು ಜೀವನ ಮಾಡ್ತಿದ್ದಾರೆ. ಇತಂಹ ಶಾಪ್‌ಗಳಲ್ಲಿ ಇವತ್ತಿನ ಡಿಜಿಟಲ್ ದುನಿಯಾದಲ್ಲಿ ಅತಿಹೆಚ್ಚು ವ್ಯವಹಾರ ಆಗ್ತಿರೋದು ಆನ್‌ಲೈನ್ ಪೇಮೆಂಟ್ ಅಂದರೆ ಗೂಗಲ್‌ಪೇ, ಪೆಟಿಎಂ, ಪೋನ್ ಪೇ ಮೂಲಕವೇ ಟೀ, ಸಿಗರೇಟ್, ಕಾಫಿ, ತಿಂಡಿ, ಬೀಡಾ ಅಂತಾ ಗ್ರಾಹಕರು ಸಣ್ಣ ಪುಟ್ಟ ಖರೀದಿಗೂ ಡಿಜಿಟಲ್ ಪೇಮೆಂಟ್ ಮಾಡ್ತಿದ್ದಾರೆ. ಇದನ್ನೂ ಓದಿ: ಯಶ್ ತಾಯಿ ನಿರ್ಮಾಣದ ʻಕೊತ್ತಲವಾಡಿʼ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್

    ಹೀಗೆ ವ್ಯಾಪಾರ ಮಾಡ್ತಿರೋ ಅಂಗಡಿಗಳ ಕಳೆದ ನಾಲ್ಕು ವರ್ಷದ ವಹಿವಾಟನ್ನು ಗಮಿನಿಸಿರೋ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ನಿಮ್ಮ ವ್ಯಾಪಾರ ವಹಿವಾಟು ಲಕ್ಷದಿಂದ ಕೋಟಿವರೆಗೆ ಆಗಿದೆ. ಅದಕ್ಕೆ ಜಿಎಸ್‌ಟಿ ಟ್ಯಾಕ್ಸ್ ಕಟ್ಟಬೇಕು ಅಂತಾ ಸಾವಿರಾರು ಮಾಲೀಕರಿಗೆ ನೋಟಿಸ್ ನೀಡಿದೆ. ಹೀಗೆ ನೋಟಿಸ್ ಪಡೆದವರು ಅಯ್ಯೋ ನಾವು ವರ್ಷ ಪೂರ್ತಿ ದುಡಿದರೂ 2-3 ಲಕ್ಷ ರೂ. ಉಳಿತಾಯ ಆಗೋಲ್ಲ. ಈಗ ಇಷ್ಟೊಂದು ಟ್ಯಾಕ್ಸ್ ಎಲ್ಲಿಂದ ಕಟ್ಟೋದು ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಗೃಹಮಂಡಳಿಯಿಂದ ಲಾಟರಿ – ಅಗ್ಗದ ದರದಲ್ಲಿ ಡ್ಯುಪ್ಲೆಕ್ಸ್ ಮನೆ: ಬೆಲೆ ಎಷ್ಟು ಗೊತ್ತಾ?

    ಈ ನೋಟಿಸ್ ಪಡೆದವರೆಲ್ಲ, ಕಾರ್ಮಿಕ ಪರಿಷತ್ತಿ ಸಂಘದ ಅಧ್ಯಕ್ಷ ರವಿ ಶೆಟ್ಟಿ ಅವರ ಬಳಿ ಹೋಗಿ ತಮಗೆ ನೋಟಿಸ್ ಬಂದಿರೋ ಬಗ್ಗೆ ಹೇಳಿಕೊಂಡಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆ ನೀಡಿ, ಈಗ ಈ ರೀತಿ ವಸೂಲಿಗೆ ನಿಂತಿದೆ. ಇದು ಸರಿಯಾದ ಕ್ರಮವಲ್ಲ. ಇಡೀ ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಸಣ್ಣ ಬೇಕರಿ, ಕಾಂಡಿಮೆಂಟ್ಸ್ ಇದೆ. ಅವರೆಲ್ಲ ನಮ್ಮನ್ನ ಸಂಪರ್ಕ ಮಾಡ್ತಿದ್ದಾರೆ. ಸರ್ಕಾರ ಈ ಟ್ಯಾಕ್ಸ್ ಹಿಂಪಡೆಯಬೇಕು ಎಂದು ನಾವು ಸಿಎಂಗೆ ಮನವಿ ಮಾಡುತ್ತೇವೆ. ಇಲ್ಲವಾದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಸೇರಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ| ಮುಂದಿನ ವಾರ ಶೋರೂಂ ಓಪನ್‌ – EV ಕಾರಿನ ಬೆಲೆ ಎಷ್ಟು?

    ಒಟ್ಟಿನಲ್ಲಿ, ವಾಣಿಜ್ಯ ತೆರಿಗೆ ನೋಟಿಸ್ ಸಾವಿರಾರು ಜನರ ನಿದ್ದೆಗೆಡಿಸಿದೆ. ನಾವು ಇಡೀ ಜೀವಮಾನದಲ್ಲಿ ಸಂಪಾದನೆ ಮಾಡದಷ್ಟು ಹಣವನ್ನ ಟ್ಯಾಕ್ಸ್ ಮೂಲಕ ಕಟ್ಟಿ ಅಂತಿದ್ದಾರೆ. ಅದು ಹೇಗೆ ಸಾಧ್ಯ, ನಮ್ಮ ಜೀವನ ಬೀದಿಗೆ ತರೋದಕ್ಕೆ ಸರ್ಕಾರ ಮುಂದಾಗಿದೆ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಸರ್ಕಾರ ಈಗ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.

  • ಶಿಗ್ಗಾಂವಿ ಉಪಚುನಾವಣೆ: ತೆರಿಗೆ ಇಲಾಖೆಯಿಂದ ನಗದು ಸೇರಿ 5 ಲಕ್ಷ ಮೌಲ್ಯದ ವಸ್ತುಗಳು ವಶ

    ಶಿಗ್ಗಾಂವಿ ಉಪಚುನಾವಣೆ: ತೆರಿಗೆ ಇಲಾಖೆಯಿಂದ ನಗದು ಸೇರಿ 5 ಲಕ್ಷ ಮೌಲ್ಯದ ವಸ್ತುಗಳು ವಶ

    ಹಾವೇರಿ: ಜಿಲ್ಲೆಯಾದ್ಯಂತ ಜಾರಿಯಾಗಿದ್ದ ಮಾದರಿ ನೀತಿ ಸಂಹಿತೆ ಹಿನ್ನೆಲೆ ವಿವಿಧ ಕಡೆಗಳಲ್ಲಿ ತೆರಿಗೆ ಇಲಾಖೆಯಿಂದ ಭರ್ಜರಿ ದಾಳಿ ನಡೆದಿದ್ದು, ನಗದು ಸೇರಿ 5 ಲಕ್ಷ ರೂ. ಮೌಲ್ಯದ ವಸ್ತುಗಳು ವಶಪಡಿಸಿಕೊಂಡಿದ್ದಾರೆ.ಇದನ್ನೂ ಓದಿ: ಬೆಂಗಳೂರು ಪೊಲೀಸರು ಬಲೆ ಬೀಸಿದ್ದ ರಾಬರಿ ಗ್ಯಾಂಗ್‌ನ ಫಹೀಮ್ ಯುಪಿಯಲ್ಲಿ ಬಂಧನ

    ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆ ಹಾವೇರಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಈ ವೇಳೆ ವಾಣಿಜ್ಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಿದ್ದು, 2,68,270 ರೂ. ನಗದು, 1 ಲಕ್ಷ 60 ಸಾವಿರ ರೂ. ಮೌಲ್ಯದ 8 ಕೆ.ಜಿ 240 ಗ್ರಾಂ ಗಾಂಜಾ, 55,13,926 ಲಕ್ಷ ರೂ. ಮೌಲ್ಯದ 4,686 ಲೀಟರ್‌ನಷ್ಟು ಮದ್ಯ ವಶಪಡಿಸಿಕೊಳ್ಳಲಾಗಿದೆ. ಇನ್ನೂ 3 ಲಕ್ಷ ರೂ. ಮೌಲ್ಯದ 5 ವಾಹನ ಜಪ್ತಿ ಮಾಡಲಾಗಿದ್ದು, ಒಟ್ಟು ವಾಣಿಜ್ಯ ತೆರಿಗೆ ಇಲಾಖೆಯಿಂದ 5,34,850 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಅಬಕಾರಿ ಇಲಾಖೆಯಿಂದ ಒಟ್ಟು 232 ಪ್ರಕರಣ ದಾಖಲಾಗಿದ್ದು, ಮಾದರಿ ನೀತಿ ಸಂಹಿತಿ ಉಲ್ಲಂಘನೆ ಸಂಬಂಧ 3 ಕೇಸ್ ದಾಖಲಿಸಲಾಗಿದೆ.ಇದನ್ನೂ ಓದಿ: ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನ – ದೋಹಾದಿಂದ ಮುಂಬೈಗೆ ಮೊದಲ ವಿಮಾನ ಹಾರಾಟ

  • ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

    ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ತೆರಿಗೆ ವಂಚನೆ (Tax Evasion), ತೆರಿಗೆ ಸೋರಿಕೆ, ತೆರಿಗೆ ಕಳ್ಳತನ ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ (Commercial Tax Department) ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಸುಲಭವಾಗಿ ಸಿಕ್ಕ 50 ಲಕ್ಷಕ್ಕೆ ಚೈತ್ರಾ ಫಿದಾ – 3.5 ಕೋಟಿಗೆ ಶುರುವಾದ ಪ್ಲಾನ್ 5 ಕೋಟಿಗೆ ಏರಿದ್ದೇ ರೋಚಕ

    ವಾಣಿಜ್ಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಬೆಳವಣಿಗೆ ದರ 19.2% ರಷ್ಟಿದ್ದು, ದೇಶದಲ್ಲಿಯೇ ಅತಿ ಹೆಚ್ಚಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳದೇ ತೆರಿಗೆ ವಂಚಿಕೆ ಪ್ರಕರಣಗಳನ್ನ ಹೆಚ್ಚೆಚ್ಚು ಪತ್ತೆ ಹಚ್ಚಿ ತೆರಿಗೆ ಸಂಗ್ರಹ ಗುರಿಯನ್ನ ದಾಟಿ ಸಾಧನೆ ಮಾಡುವ ಅವಕಾಶಗಳಿವೆ. ಇದನ್ನು ಸಾಧಿಸಿ ತೋರಿಸಿ ಎಂದು ಸಲಹೆ ನೀಡಿದರು.

    ಇಲಾಖೆಯು Enforcement ಅನ್ನು ಇನ್ನಷ್ಟು ತೀವ್ರವಾಗಿ ನಡೆಸುವ ಮೂಲಕ ತೆರಿಗೆ ವಂಚನೆ ತಡೆಗಟ್ಟುವ ಕಡೆಗೆ ಹೆಚ್ಚು ಆಸಕ್ತಿ ಕೊಡಬೇಕು. ಬೆಳವಣಿಗೆ ದರವು 19.2% ರಷ್ಟಿದ್ದು, ದೇಶದಲ್ಲಿಯೇ ಅತಿ ಹೆಚ್ಚು. ದೇಶದ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ದರ 15% ರಷ್ಟು ಮಾತ್ರ ಇದೆ. ದೇಶದ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ರಾಜ್ಯದ ಪಾಲು 9.4% ರಷ್ಟಿದೆ. ಕಳೆದ ಬಾರಿಗಿಂತ ಈ ಬಾರಿ ರಾಜ್ಯದ ಪಾಲು ಹೆಚ್ಚಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.

    24% ಬೆಳವಣಿಗೆ ಗುರಿಯನ್ನು ನೀಡಲಾಗಿರುವುದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಈ ಗುರಿ ದಾಟಿ ಸಾಧಿಸಬೇಕು. ತೆರಿಗೆ ವಂಚನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.ಗುರಿಗಿಂತ ಹೆಚ್ಚಿನ ಸಾಧನೆಯಾಗಬೇಕು. ಜಾಗೃತ ದಳದವರೂ ಇದಕ್ಕೆ ಸಹಕರಿಸಬೇಕು. ಎರಡು ತಿಂಗಳ ನಂತರ ಮತ್ತೆ ಪ್ರಗತಿ ಪರಿಶೀಲಿಸಲಾಗುವುದು. ಆ ವೇಳೆಗೆ ಇನ್ನಷ್ಟು ಪ್ರಗತಿಯ ವರದಿ ನೀಡಿ. ಮುಂದಿನ ಸಭೆ ವೇಳೆಗೆ ಒಟ್ಟಾರೆ ಪರಿಸ್ಥಿತಿ ಈಗಿರುವುದಕ್ಕಿಂತ ಹೆಚ್ವು ಆಶಾದಾಯವಾಗಿರುವಂತೆ ಕ್ರಮ ವಹಿಸಿ ಎಂದು ಹೇಳಿದರು. ಇದನ್ನೂ ಓದಿ: ಐಸಿಸ್ ಉಗ್ರನೊಂದಿಗೆ ನಿರಂತರ ಸಂಪರ್ಕ – ಎನ್‍ಐಎಯಿಂದ ಯಾದಗಿರಿ ವ್ಯಕ್ತಿ ವಿಚಾರಣೆ

    ತೆರಿಗೆ ಕಳ್ಳತನ ತಡೆಯುವುದಕ್ಕಾಗಿ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ನಿಮ್ಮ ಪ್ರಯತ್ನದಿಂದ ರಾಜ್ಯಕ್ಕೆ ಹೆಚ್ಚು ತೆರಿಗೆ ಬರಲು ಸಾಧ್ಯ. ಅನೇಕ ಭಾಗಗಳಲ್ಲಿ ಅನೇಕ ಉತ್ಪನ್ನಗಳಲ್ಲಿ ತೆರಿಗೆ ವಂಚನೆ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ ತೆರಿಗೆ ಸಂಗ್ರಹಿಸಬೇಕು. ಹೆಚ್ಚು ತೆರಿಗೆ ಸಂಗ್ರಹ ಮಾಡಿದರೆ ಅಭಿವೃದ್ಧಿ ಕೆಲಸ ಮಾಡಲು ಹೆಚ್ಚು ಅನುಕೂಲವಾಗುತ್ತದೆ. ಸಾಮೂಹಿಕ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದು ತಿಳಿಸಿದರು.

    ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್‌, ಹಣಕಾಸು ಇಲಾಖೆಯ ಕಾರ್ಯದರ್ಶಿ ಡಾ.ಪಿ.ಸಿ ಜಾಫರ್‌ ಹಾಗೂ ಡಾ.ಎಂ.ಟಿ ರೇಜು, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಶಿಖಾ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಮತ್ತು ನಸೀರ್‌ ಅಹ್ಮದ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ – ಎಫ್‌ಐಆರ್ ದಾಖಲು

    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ – ಎಫ್‌ಐಆರ್ ದಾಖಲು

    – ಅಕ್ರಮವಾಗಿ ಸಂಗ್ರಹಿಸಿಟ್ಟ ಸೀರೆ, ಬಳೆ ಜಪ್ತಿ

    ಬೀದರ್: ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಅಕ್ರಮವಾಗಿ ಸೀರೆ, ಬಳೆ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಅರೋಪ ಮೇಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನ್ನಾನ್ ಸೇಠ್ (Mannan Sait) ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು (Commercial Tax Officers) ಹಾಗೂ ಬೀದರ್ (Bidar) ಎಸಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

    ಶನಿವಾರ ತಡರಾತ್ರಿ ಅಧಿಕಾರಿಗಳು ದಾಳಿ ಮಾಡಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸೀರೆ, ಬಳೆ ಮತ್ತು ಇತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನ್ನಾನ್ ಸೇಠ್ ವಿರುದ್ಧ ಬೀದರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿದೆ. ಇದನ್ನೂ ಓದಿ: ಸಿದ್ದು ಪರ ಬ್ಯಾಟ್‌ ಬೀಸಿದ ಬಿಜೆಪಿ ಶಾಸಕ ರಾಜುಗೌಡ

    ಬೀದರ್ ಉತ್ತರ ಕ್ಷೇತ್ರದ ಮತದಾರರಿಗೆ ಹಂಚಲು ಸೀರೆ, ಅರಿಶಿನ-ಕುಂಕುಮ ಕಿಟ್, ಆಟೋ ಡ್ರೈವರ್‌ಗಳ ಸಮವಸ್ತ್ರಗಳನ್ನು ಸಂಗ್ರಹಿಸಲಾಗಿದ್ದು, ಅವುಗಳ ಮೇಲೆ ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಹಾಕಲಾಗಿದೆ. ಮತದಾರರಿಗೆ ಹಂಚಲು ಮನೆಯಲ್ಲಿ ಈ ಎಲ್ಲಾ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ. ಬೀದರ್ ಸಹಾಯಕ ಆಯುಕ್ತ ಹಾಗೂ ವಿಧಾನಸಭಾ ಚುನಾವಣಾ ಆರ್‌ಒ ಲವೀಶ್ ಒರಡಿಯಾ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಇದನ್ನೂ ಓದಿ: ಕೋಲಾರದಿಂದ ಸಿದ್ದು ಸ್ಪರ್ಧೆಗೆ ರೆಡ್ ಸಿಗ್ನಲ್ – ವರುಣಾದಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿದ್ದು ಯಾಕೆ?

  • ರಾಜಕೀಯವಾಗಿ ಬೆಳೆಯಬಾರದೆಂದು ನನ್ನ ಮೇಲೆ ದಾಳಿ: ಎಂಎಲ್‌ಸಿ ಆರ್.ಶಂಕರ್

    ರಾಜಕೀಯವಾಗಿ ಬೆಳೆಯಬಾರದೆಂದು ನನ್ನ ಮೇಲೆ ದಾಳಿ: ಎಂಎಲ್‌ಸಿ ಆರ್.ಶಂಕರ್

    ಹಾವೇರಿ: ಚುನಾವಣೆಯಲ್ಲಿ (Election) ಟಿಕೆಟ್ ಕೊಡದಿದ್ದರೆ ನೂರಕ್ಕೆ ಲಕ್ಷ ಪರ್ಸೆಂಟ್ ಪಕ್ಷೇತರನಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ (MLC) ಆರ್.ಶಂಕರ್ (R.Shankar)) ಹೇಳಿದರು.

    ವಾಣಿಜ್ಯ ತೆರಿಗೆ ಇಲಾಖೆಯ (Commercial Tax Department) ದಾಳಿ ಪ್ರಕರಣದ ಕುರಿತು ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರಿನಲ್ಲಿರುವ (Ranebennur) ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ತೆರಿಗೆ ಇಲಾಖೆಯವರು ಕಾನೂನಿನ ರೀತಿಯಲ್ಲಿ ಪರೀಕ್ಷೆ ಮಾಡಲಿ. ಅದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಇವರು ಏಕಾಏಕಿ ದಾಳಿ ಮಾಡಿದ್ದಾರೆ. ರಾಣೆಬೆನ್ನೂರಿಗೆ ಕಾಲು ಇಟ್ಟಾಗಿನಿಂದ ದಾನ ಧರ್ಮವನ್ನು ಮಾಡಿದ್ದೇನೆ. ನಾನು ದುಡಿದ ಆದಾಯದಲ್ಲಿ ಒಂದು ಭಾಗವನ್ನು ದಾನ ಧರ್ಮಕ್ಕಾಗಿ ಮೀಸಲಿಟ್ಟಿದ್ದೇನೆ. ಇದು ಹಿಂದಿನಿಂದಲೂ ಮಾಡುತ್ತಿದ್ದೇನೆ. ಅದು ಬಿಟ್ಟು ಚುನಾವಣೆ ಇದೆ ಎಂದು ಜನರಿಗೆ ಕೊಡುತ್ತಿಲ್ಲ. ಇಲ್ಲಿ ಹಗಲು ದರೋಡೆ ನಡೆದಿದೆ. ಅದರ ಬಗ್ಗೆ ಯಾರಿಗೂ ಕಣ್ಣು ಕಾಣುತ್ತಿಲ್ಲ. ರಾಜಕೀಯದಲ್ಲಿ (Politics) ಆರ್.ಶಂಕರ್ ಬೆಳೆಯಲೇಬಾರದು ಎಂಬ ಉದ್ದೇಶದಿಂದ ಈ ರೀತಿಯಾಗಿ ಮುಗಿಸಲು ಮುಂದಾಗಿದ್ದಾರೆ. ವಾಣಿಜ್ಯ ಇಲಾಖೆಯವರು ದಾಖಲೆಗಳನ್ನು ಕೇಳಿದ್ದಾರೆ. ಅದನ್ನು ನೀಡಿದ್ದೇನೆ. ಇದರ ಹಿಂದೆ ರಾಜಕೀಯ ವಿರೋಧಿಗಳ ಪಿತೂರಿಯಿದೆ ಎಂದರು. ಇದನ್ನೂ ಓದಿ: ಶಾಸಕ ಅಭಯ್ ಪಾಟೀಲ್‍ರಿಂದ ಶಾಲಾ ಮಕ್ಕಳಿಗೆ ಐಸ್‍ಕ್ರೀಂ ವಿತರಣೆ  

    ನಾನು ನನ್ನ ಹಣದಲ್ಲಿ ದಾನ ಮಾಡುತ್ತಿದ್ದೇನೆ. ಈ ಕುರಿತು ಯಾವ ದೇವರ ಮೇಲಾದರೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಕೆಲವರಿಗೆ ರಾಜಕೀಯವೆಂದರೆ ಮೃಷ್ಠಾನ್ನವಾಗಿದೆ. ಆದರೆ ನನಗೆ ರಾಜಕೀಯ ಎಂಬುದು ಸೇವೆ. ಬಿಜೆಪಿ (BJP) ಪಕ್ಷಕ್ಕೆ ಬಂದವರಿಗೆ ಅತಿಥಿ ಸತ್ಕಾರ ಮಾಡಿದರು. ನಮಗೆ ಉಪವಾಸ ಕೆಡವಿದರು. ಇದಕ್ಕೆ ನಾನು ಕಣ್ಣೀರು ಹಾಕಿದ್ದೇನೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಷ್ಕರಕ್ಕೂ ಮೊದಲೇ ಜಯ – KPTCL, ESCOM ನೌಕರರ ವೇತನ ಹೆಚ್ಚಳ

    ಇನ್ನೂ ಕಾಲ ಮಿಂಚಿಲ್ಲ. ನಮ್ಮನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಿ. ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪ್ರಚಾರ ಮಾಡಿದರು. ಮನುಷ್ಯನಿಗೆ ಎಷ್ಟು ಅನ್ಯಾಯ ಮಾಡುವುದು? ಹಂತ ಹಂತದಲ್ಲಿ ಚುಚ್ಚಿ ನನ್ನನ್ನು ಮಾನಸಿಕವಾಗಿ ಕೊಲೆ ಮಾಡಿದ್ದಾರೆ. ಇವರ ಜೊತೆ ಹೋಗಿದ್ದಕ್ಕೆ ಅನರ್ಹ ಎಂದು ಪಟ್ಟ ಕಟ್ಟಿದರು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಆಣೆ-ಪ್ರಮಾಣದ ಪಾಲಿಟಿಕ್ಸ್ ; ಕರ್ಪೂರ ಹಚ್ಚಿ ಪ್ರಮಾಣ ಮಾಡಿದ ಮಾಗಡಿ ಶಾಸಕರ ಪತ್ನಿ  

    ನನ್ನ ತಾಲೂಕಿನ ಜನತೆ ನನ್ನ ಬಲ. ನನಗೆ ಯಾವುದೇ ವೀಕ್ನೆಸ್ ಇಲ್ಲ. ನಾನು ಬಹಳ ಮುಕ್ತತೆ ಹಾಗೂ ತಾಳ್ಮೆಯಿಂದ ಇದ್ದೇನೆ. ನಮ್ಮಿಂದ ಸರ್ಕಾರ ಬಂದಿದೆ ಎನ್ನುವ ಮಾನವೀಯತೆ ಇದ್ದರೆ ಒಂದು ತಿಂಗಳು ಕಾಯುತ್ತೇನೆ. ನಾನು ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದೇನೆ ಎಂದವರು ಬರಲಿ. ನನಗೆ ಹಣ ಕೊಟ್ಟವರೂ ಬರಲಿ. ಬಂದು ಧರ್ಮಸ್ಥಳ (Dharmasthala) ಮಂಜುನಾಥನ ಮೇಲೆ ಆಣೆ ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: 10 ಕ್ಷೇತ್ರಗಳಿಂದ ನನಗೆ ಆಹ್ವಾನ, ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ: ಡಿ.ಕೆ.ಸುರೇಶ್

    ನನಗೆ ಯಾರು ಟಿಕೆಟ್ ಕೊಟ್ಟರೂ ಪರವಾಗಿಲ್ಲ. ಕೆಂಪೇಗೌಡರು ಕೆರೆ ಕಟ್ಟಿಸಿ ಸೊಸೆಯನ್ನು ಬಲಿ ಕೊಟ್ಟಹಾಗೆ ನನ್ನನ್ನು ಬಲಿ ಕೊಟ್ಟಿದ್ದಾರೆ. ಇದರಲ್ಲಿ ಸ್ಥಳೀಯ ಶಾಸಕರು ಸೇರಿದಂತೆ ಎಲ್ಲಾ ರಾಜಕೀಯ ವಿರೋಧಿಗಳ ಪಿತೂರಿ ಇದೆ. ಟಿಕೆಟ್ ಕೊಟ್ಟರೆ ಪಕ್ಷದಿಂದ, ಇಲ್ಲವಾದರೆ ನನ್ನ ಕ್ಷೇತ್ರದ ಜನರಂತೆ ಪಕ್ಷೇತರನಾಗಿ ಸರ್ಧೆ ಮಾಡುವುದು ಖಚಿತ ಎಂದರು. ಇದನ್ನೂ ಓದಿ: ವಕೀಲ, ಮಹಿಳೆ ಮಧ್ಯೆ ಬೀದಿ ಕಾಳಗ

  • ರೊಲ್ಸ್ ರಾಯಲ್ಸ್‌ಗಾಗಿ ಮತ್ತೊಂದು ವಿವಾದಕ್ಕೆ ಸಿಲುಕಿದ ವಿಜಯ್ ದಳಪತಿ

    ರೊಲ್ಸ್ ರಾಯಲ್ಸ್‌ಗಾಗಿ ಮತ್ತೊಂದು ವಿವಾದಕ್ಕೆ ಸಿಲುಕಿದ ವಿಜಯ್ ದಳಪತಿ

    ಚೆನ್ನೈ: ತಮಿಳು ಸೂಪರ್‌ ಸ್ಟಾರ್ ವಿಜಯ್ ಅವರ ದುಬಾರಿ ಕಾರು ರೋಲ್ಸ್ ರಾಯಲ್ಸ್ ಅವರನ್ನು ಸಂಕಷ್ಟಕ್ಕೆ ದೂಡಿದೆ. ಆಮದು ಮಾಡಿಕೊಂಡಿರುವ ಈ ಕಾರಿನಿಂದಾಗಿ ಅವರು ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.

    ವಿಜಯ್ ಅವರಿಗೆ ಈ ಹಿಂದೆ ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ಪ್ರವೇಶ ತೆರಿಗೆ ರೂ 1 ಲಕ್ಷ ಪಾವತಿಸಲು ತಮಿಳುನಾಡಿನ ವಾಣಿಜ್ಯ ತೆರಿಗೆ ಇಲಾಖೆಯು ಆದೇಶಿಸಿತ್ತು. ಆದರೆ ಅವರು ಅದನ್ನು ಪಾವತಿಸದಿದ್ದಕ್ಕಾಗಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಹಾಗಾಗಿ ವಿಜಯ್ ಪರ ವಕೀಲರು ಶೇ.400 ಬದಲಿಗೆ ತಿಂಗಳಿಗೆ ಶೇ.2ರಷ್ಟು ದಂಡ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

    ವಾಣಿಜ್ಯ ತೆರಿಗೆ ಇಲಾಖೆಯು ನಟ ವಿಜಯ್ ಅವರಿಗೆ 2005ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಿಂದ ಆಮದು ಮಾಡಿಕೊಂಡ ತಮ್ಮ ರೋಲ್ಸ್ ರಾಯಲ್ಸ್‌ಗೆ ಪ್ರವೇಶ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿತ್ತು. ಆದರೆ ತೆರಿಗೆಯನ್ನು ವಜಾಗೊಳಿಸುವಂತೆ ವಿಜಯ್ ಪರವಾಗಿ ಮದ್ರಾಸ್ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

    ರಾಜ್ಯಗಳು ಪ್ರವೇಶ ತೆರಿಗೆಯನ್ನು ಸಂಗ್ರಹಿಸುವ ಅಧಿಕಾರವನ್ನು ಹೊಂದಿವೆ ಎಂದು ತಿಳಿದ ವಿಜಯ್ ಅವರು ಸೆಪ್ಟೆಂಬರ್ 2021 ರಲ್ಲಿ ರೂ 7,98,075 ಪ್ರವೇಶ ತೆರಿಗೆ ಪಾವತಿಸಿದ್ದಾರೆ. ಆದರೆ ವಾಣಿಜ್ಯ ತೆರಿಗೆ ಇಲಾಖೆಯು ಡಿಸೆಂಬರ್ 2005 ಮತ್ತು ಸೆಪ್ಟೆಂಬರ್ 2021ರ ನಡುವೆ ತೆರಿಗೆ ಪಾವತಿಸದಿದ್ದಕ್ಕಾಗಿ ರೂ 30,23,609 ದಂಡವನ್ನು ವಿಧಿಸಿದೆ.

    BRIBE

    ಮಾರ್ಚ್ 14, 2022 ರಂದು ನಡೆದ ವಿಚಾರಣೆಯಲ್ಲಿ, ವಿಜಯ್ ಪರ ವಕೀಲರು ‘ಕಾರನ್ನು ಆಮದು ಮಾಡಿಕೊಂಡ ಸಮಯದಿಂದ ತಿಂಗಳಿಗೆ ಶೇ.2 ರಷ್ಟು ದಂಡವನ್ನು ವಿಧಿಸುತ್ತಾ ಬಂದಿದೆ. ಆ ದಂಡದ ಮೊತ್ತ ಶೇ.400ರಷ್ಟು ಆಗಿದೆ. ಅಲ್ಲದೇ, ತೆರಿಗೆ ಪಾವತಿಯ ವಿಳಂಬಕ್ಕಾಗಿ ಮತ್ತೆ ಮತ್ತೆ ದಂಡ ಹಾಕುತ್ತಿದೆ. ಹಾಗಾಗಿ ಈ ಪ್ರಕರಣವನ್ನು ವಜಾಗೊಳಿಸಬೇಕೆಂದು ವಕೀಲರ ಮನವಿ ಮಾಡಿದ್ದರು. ಇದನ್ನೂ ಓದಿ: ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು..!

    ಭಾರತದಲ್ಲಿನ ಆಮದು ತೆರಿಗೆಗಳು ವಿಶ್ವದಲ್ಲೇ ಅತಿ ದುಬಾರಿ. ಹಾಗಾಗಿ ಜನರು ಯಾವುದೇ ವಿಧಾನದಿಂದ ತೆರಿಗೆ ಕಟ್ಟುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ರೋಲ್ಸ್ ರಾಯಲ್ಸ್ ಹೊರ ದೇಶಗಳಲ್ಲಿ ಕೈಗೆಟುಕುವ ದರದ ಕಾರ್ ಆಗಿದ್ದರೂ ಸಹ, ಭಾರತದಲ್ಲಿ ಸುಮಾರು 5 ಕೋಟಿ ರೂಪಾಯಿಗಳಷ್ಟು ಪಾವತಿಸಬೇಕಾಗುತ್ತದೆ. ಆದ್ದರಿಂದ ಅಂತಹ ವಾಹನಕ್ಕೆ ಲಕ್ಷ ಲಕ್ಷ ಆಮದು ತೆರಿಗೆ ಭರಿಸಬೇಕಾಗುತ್ತದೆ.

  • ವಾಣಿಜ್ಯ ತೆರಿಗೆ ಇಲಾಖೆಯ ಟಾಟಾ ಸುಮೋ, ಓಮ್ನಿ ಕಾರು ನಡುವೆ ಅಪಘಾತ

    ವಾಣಿಜ್ಯ ತೆರಿಗೆ ಇಲಾಖೆಯ ಟಾಟಾ ಸುಮೋ, ಓಮ್ನಿ ಕಾರು ನಡುವೆ ಅಪಘಾತ

    – ಓರ್ವ ಸ್ಥಳದಲ್ಲೇ ಸಾವು, ನಾಲ್ಕು ಮಂದಿಗೆ ಗಾಯ

    ಶಿವಮೊಗ್ಗ: ವಾಣಿಜ್ಯ ತೆರಿಗೆ ಇಲಾಖೆಗೆ ಸೇರಿದ ಟಾಟಾ ಸುಮೋ ಹಾಗೂ ಓಮ್ನಿ ಕಾರು ನಡುವೆ ಅಪಘಾತ ಸಂಭವಿಸಿ, ಓಮ್ನಿ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾರಂದೂರು ಬಳಿ ನಡೆದಿದೆ.

    ಮೃತಪಟ್ಟ ಓಮ್ನಿ ಕಾರು ಚಾಲಕನನ್ನು ಭದ್ರಾವತಿ ನಗರದ ಮೀನುಗಾರ ಕಾಲೋನಿಯ ಮಂಜುನಾಥ್ (35) ಎಂದು ಗುರುತಿಸಲಾಗಿದೆ. ಟಾಟಾ ಸುಮೋದಲ್ಲಿದ್ದ ವಾಣಿಜ್ಯ ತೆರಿಗೆ ಅಧಿಕಾರಿ ನಾಗಲಕ್ಷ್ಮಿ, ವಾಣಿಜ್ಯ ತೆರಿಗೆ ಇಲಾಖೆಯ ಇನ್‍ಸ್ಪೆಕ್ಟರ್ ಮಹೇಶ್ ಹಾಗೂ ಟಾಟಾ ಸುಮೋ ಚಾಲಕ ಸುಬ್ರಹ್ಮಣ್ಯ ಹಾಗೂ ಓಮ್ನಿ ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆ ಹಾಗೂ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

    ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ರಾತ್ರಿ ಪಾಳಿಯ ಕರ್ತವ್ಯ ಮುಗಿಸಿಕೊಂಡು ಮುಂಜಾನೆ 6 ಗಂಟೆ ಸಮಯಕ್ಕೆ ಶಿವಮೊಗ್ಗ ಕಡೆ ವಾಪಸ್ ಬರುತ್ತಿದ್ದರು. ಓಮ್ನಿ ಕಾರು ಭದ್ರಾವತಿಯಿಂದ ತರೀಕೆರೆ ಕಡೆ ತೆರಳುತಿತ್ತು. ಈ ವೇಳೆ ಎರಡು ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಅವಘಡ ಉಂಟಾಗಿದೆ. ಘಟನೆ ಕುರಿತು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ