Tag: ವಾಣಿಜ್ಯ ತೆರಿಗೆ ಅಧಿಕಾರಿಗಳು

  • ಜಿಎಸ್‍ಟಿ ವಂಚಿಸಿ ಚೀನಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಅಕ್ರಮ ಸಂಗ್ರಹ- 8 ಕೋಟಿ ಮೌಲ್ಯದ ವಸ್ತುಗಳು ಜಪ್ತಿ

    ಜಿಎಸ್‍ಟಿ ವಂಚಿಸಿ ಚೀನಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಅಕ್ರಮ ಸಂಗ್ರಹ- 8 ಕೋಟಿ ಮೌಲ್ಯದ ವಸ್ತುಗಳು ಜಪ್ತಿ

    – ಚೀನಾ ಮೂಲದ ವ್ಯಕ್ತಿ ಗುತ್ತಿಗೆ ಪಡೆದಿದ್ದ ಕಟ್ಟಡ
    – ಚೀನಾದ ವುಹಾನ್‍ನಿಂದಲೇ ವ್ಯವಹರಿಸುತ್ತಿದ್ದ ಕಟ್ಟಡ ಮಾಲೀಕ

    ಬೆಂಗಳೂರು: ಚೀನಾದ ವುಹಾನ್ ನಿಂದಲೇ ಮಧ್ಯವರ್ತಿಗಳ ಮೂಲಕ ವ್ಯವಹರಿಸಿ, ಜಿಎಸ್‍ಟಿ ವಂಚಿಸಿ, ಅಪಾರ ಪ್ರಮಾಣದ ಚೀನಾ ನಿರ್ಮಿತ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.

    ಜಿಎಸ್‍ಟಿ ವಂಚಿಸಿ ಚೀನಾ ನಿರ್ಮಿತ ಎಲೆಕ್ಟ್ರಾನಿಕ್ಸ್ ಉಪಕರಣಗಳ ಅಕ್ರಮ ಸಂಗ್ರಹಣೆ ಮಾಡಲಾಗಿದ್ದು, ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ ಎಲೆಕ್ಟ್ರಾನಿಕ್ಸ್ ಉಪಕರಣಗಳ ಗೋಡೌನ್ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟ ಸುಮಾರು 4 ಕೋಟಿ ರೂ. ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ದಕ್ಷಿಣ ವಲಯದ ಜಂಟಿ ಆಯುಕ್ತ ನಿತೀಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ಚೀನಾ ಮೂಲದ ವ್ಯಕ್ತಿ ಖಾಸಗಿ ಕಟ್ಟಡವನ್ನು ಗುತ್ತಿಗೆಗೆ ಪಡೆದಿದ್ದು, ಚೀನಾದ ವುಹಾನ್‍ನಿಂದಲೇ ಮಧ್ಯವರ್ತಿಗಳ ಮೂಲಕ ವ್ಯವಹರಿಸುತ್ತಿದ್ದ ಎಂದು ತಿಳಿಸಿದೆ. ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಬೆಂಗ್ಳೂರಿನಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ- 60 ಕೆಜಿ ಚಿನ್ನ ಪತ್ತೆ

    ಬೆಂಗ್ಳೂರಿನಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ- 60 ಕೆಜಿ ಚಿನ್ನ ಪತ್ತೆ

    – 16 ಕೋಟಿ ರೂ. ಜಿಎಸ್‍ಟಿ ವಂಚನೆ ಆರೋಪ

    ಬೆಂಗಳೂರು: ನಗರದ ಚಿಕ್ಕಪೇಟೆ, ರಂಗನಾಥ್ ಮ್ಯಾನಕ್ಷನ್ ಸೇರಿದಂತೆ ಹಲವೆಡೆ 23 ಸಗಟು ಚಿನ್ನಾಭರಣ ವರ್ತಕರ ಶಾಪ್ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಜಿಎಸ್‍ಟಿ ವಂಚನೆ ಹಿನ್ನೆಲೆಯಲ್ಲಿ ಫೆಬ್ರವರಿ 19ರಂದು ಟರ್ಫ್ ಕ್ಲಬ್ ಬುಕ್ಕಿಗಳ ಮೇಲೆ 50 ಮಂದಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲಿಸಿದ್ದರು. ಈ ಬೆನ್ನಲ್ಲೇ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು 23 ಸಗಟು ಚಿನ್ನಾಭರಣ ವರ್ತಕರ ಶಾಪ್ ಮೇಲೆ ದಾಳಿ ಮಾಡಿದ್ದಾರೆ.

    ದಾಳಿಯ ವೇಳೆ ವರ್ತಕರು 60 ಕೆಜಿ ಚಿನ್ನಾಭರಣ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಈ ಮೂಲಕ 16 ಕೋಟಿ ರೂ. ಜಿಎಸ್‍ಟಿ ವಂಚಿಸಿರುವು ಬೆಳಕಿಗೆ ಬಂದಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಫೆಬ್ರವರಿ 19ರಂದು ನಗರದ 20 ಕಡೆ ಏಕಕಾಲದಲ್ಲಿ ಬೆಳಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ನಿತೀಶ್ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಟರ್ಫ್ ಕ್ಲಬ್ ಬುಕ್ಕಿಗಳು ಸರ್ಕಾರಕ್ಕೆ ತೆರಿಗೆ ಕಟ್ಟದೆ ವಂಚಿಸಿದ್ದಾರೆಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈ ವೇಳೆ ಬುಕ್ಕಿಗಳಿಂದ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು.