Tag: ವಾಣಿಜ್ಯ ಇಲಾಖೆ

  • ವಾಣಿಜ್ಯ ಕ್ಷೇತ್ರದ ಉದ್ಯೋಗಿಗಳಿಗೆ ಗುಡ್‌ನ್ಯೂಸ್: ವರ್ಕ್ ಫ್ರಂ ಹೋಮ್ – ಹೊಸ ನಿಯಮ ಹೇಳೋದೇನು ಗಮನಿಸಿ

    ವಾಣಿಜ್ಯ ಕ್ಷೇತ್ರದ ಉದ್ಯೋಗಿಗಳಿಗೆ ಗುಡ್‌ನ್ಯೂಸ್: ವರ್ಕ್ ಫ್ರಂ ಹೋಮ್ – ಹೊಸ ನಿಯಮ ಹೇಳೋದೇನು ಗಮನಿಸಿ

    ನವದೆಹಲಿ: ವಿಶೇಷ ಆರ್ಥಿಕ ವಲಯ ಘಟಕಗಳಲ್ಲಿ ಗರಿಷ್ಠ ಒಂದು ವರ್ಷದ ಅವಧಿಗೆ ಮನೆಯಿಂದ ಕೆಲಸ ಮಾಡುವ (WFH) ಅವಕಾಶವಿದ್ದು, ಒಟ್ಟು ಉದ್ಯೋಗಿಗಳ ಪೈಕಿ ಶೇ.50 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನಿಯಮವನ್ನು ವಿಸ್ತರಿಸಬಹುದು ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

    ಅದಕ್ಕಾಗಿ ವಾಣಿಜ್ಯ ಇಲಾಖೆಯು ವಿಶೇಷ ಆರ್ಥಿಕ ವಲಯಗಳ ನಿಯಮ -2006 ರಲ್ಲಿ ವರ್ಕ್ ಫ್ರಮ್ ಹೋಂಗಾಗಿ ಹೊಸ ನಿಯಮ 43ಎ ಅನ್ನು ಅನುಷ್ಠಾನಗೊಳಿಸಲು ಸೂಚಿಸಿದೆ. ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ (SEZ) ದೇಶಾದ್ಯಂತ ಏಕರೂಪದ ವರ್ಕ್ ಫ್ರಂ ಹೋಂ ನೀತಿ – ನಿಬಂಧನೆ ಮಾಡಲು ಉದ್ಯಮದ ಬೇಡಿಕೆಯ ಮೇರೆಗೆ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ- ವಜಾಗೊಂಡಿದ್ದ ಕಾರ್ಮಿಕ ಮರು ನೇಮಕ

    ಹೊಸ ನಿಯಮವು ವಿಶೇಷ ಆರ್ಥಿಕ ವಲಯ ಘಟಕದ ನಿರ್ದಿಷ್ಟ ವರ್ಗದ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನೀಡುತ್ತದೆ. ಇವರಲ್ಲಿ ಐಟಿ ಅಥವಾ ಐಟಿಇಎಸ್ ಎಸ್‌ಇಜೆಡ್ ಘಟಕಗಳ ಉದ್ಯೋಗಿಗಳು, ತಾತ್ಕಾಲಿಕವಾಗಿ ಅಸಮರ್ಥರಾಗಿರುವ ನೌಕರರು, ಆಫ್‌ಸೈಟ್‌ನಲ್ಲಿ ಕೆಲಸ ಮಾಡುತ್ತಿರುವ ನೌಕರರು ಈ ನಿಯಮಕ್ಕೆ ಒಳಪಡಲಿದ್ದಾರೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ಬೈಕ್, ಕಾರು ನಡುವೆ ಭೀಕರ ಅಪಘಾತ- ಬಾಲಕ ಸೇರಿ ಒಂದೇ ಕುಟುಂಬದ ಇಬ್ಬರ ಸಾವು

    ಮನೆಯಿಂದ ಕೆಲಸ ಮಾಡುವುದನ್ನು ಈಗ ಗರಿಷ್ಠ ಒಂದು ವರ್ಷದ ಅವಧಿಗೆ ಅನುಮತಿಸಲಾಗಿದೆ. ಆದಾಗ್ಯೂ, ಘಟಕಗಳ ಕೋರಿಕೆಯ ಮೇರೆಗೆ ಇನ್ನೊಂದು ವರ್ಷಕ್ಕೆ ಜಿಲ್ಲಾಧಿಕಾರಿ ಒಂದು ಬಾರಿಗೆ ಮಾತ್ರ ಮಾತ್ರ ವಿಸ್ತರಿಸಬಹುದಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • 10ನೇ ತರಗತಿಯಲ್ಲೇ ದೃಷ್ಟಿ ಕಳೆದುಕೊಂಡ ಯುವತಿ ಈಗ UPSC ಟಾಪರ್

    10ನೇ ತರಗತಿಯಲ್ಲೇ ದೃಷ್ಟಿ ಕಳೆದುಕೊಂಡ ಯುವತಿ ಈಗ UPSC ಟಾಪರ್

    ಮೈಸೂರು: ಸಾಧನೆ ಮಾಡುವ ಛಲವೊಂದಿದ್ದರೆ ಸಾಕು ಯಾವುದೇ ಸಮಸ್ಯೆ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಮೈಸೂರು ಜಿಲ್ಲೆಯ ಯುವತಿಯೊಬ್ಬರು ಸಾಕ್ಷಿಯಾಗಿದ್ದಾರೆ.

    10ನೇ ತರಗತಿಯಲ್ಲೇ ಶೇ.70 ರಷ್ಟು ದೃಷ್ಟಿ ಕಳೆದುಕೊಂಡರೂ ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ. ಯುಪಿಎಸ್‌ಸಿನಲ್ಲಿ ಟಾಪ್ ರ‍್ಯಾಂಕ್ ಪಡೆಯುವ ಮೂಲಕ ಸಾಂಸ್ಕೃತಿಕ ನಗರಿಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೆಂಟಲ್ ಗಿರಾಕಿಯ ರೀತಿ ಆಡಬಾರದು, ಪ್ರಬುದ್ಧವಾಗಿ ಮಾತನಾಡಬೇಕು: ಸಿ.ಟಿ.ರವಿ ವ್ಯಂಗ್ಯ

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಗ್ರಾಮದ ಯುವತಿ ಕೆ.ಟಿ.ಮೇಘನಾ ಯುಪಿಎಸ್‌ಯಲ್ಲಿ 425ನೇ ರ‍್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

    ಕುಡುಕೂರಿನ ತಾಂಡವಮೂರ್ತಿ ಹಾಗೂ ನವನೀತ ದಂಪತಿಯ ಪುತ್ರಿ ಮೇಘನಾ ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸಿಸುತ್ತಿದ್ದಾರೆ. 10ನೇ ತರಗತಿಯಲ್ಲಿದ್ದಾಗ ರೆಟಿನಾ ಸಮಸ್ಯೆಯಿಂದಾಗಿ ಶೇ.70 ರಷ್ಟು ದೃಷ್ಟಿಯನ್ನು ಕಳೆದುಕೊಳ್ಳಬೇಕಾಯಿತು. ಆದರೂ ಅದನ್ನು ವೈಫಲ್ಯವೆಂದು ಭಾವಿಸದೇ ತನ್ನ ಗುರಿಯತ್ತ ಮುಂದುವರಿದ ಮೇಘನಾ ಇದೀಗ ಯುಪಿಎಸ್‌ಸಿಯಲ್ಲಿ ಟಾಪ್ ರ‍್ಯಾಂಕರ್ ಗರಿ ಪಡೆದಿದ್ದಾರೆ.

    ಮೇಘನಾ 2020ರಲ್ಲೂ ಯುಪಿಎಸ್‌ಸಿಯಲ್ಲಿ 465ನೇ ರ‍್ಯಾಂಕ್ ಪಡೆದಿದ್ದರು. 2015 ರಲ್ಲಿ ಕೆಎಎಸ್ ನಲ್ಲಿ 11ನೇ ರ‍್ಯಾಂಕ್ ಪಡೆದು ವಾಣಿಜ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಖಜಾನೆ ಇಲಾಖೆಯಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಹೇಳಿದ್ದಾರೆ.