Tag: ವಾಣಿಜ್ಯ

  • ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

    ಇನ್ನು ಮುಂದೆ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಓದಿದವರೂ ಪೈಲಟ್‌ ಆಗಬಹುದು!

    ನವದೆಹಲಿ: ಇನ್ನು ಮುಂದೆ ಪಿಯುಸಿಯಲ್ಲಿ ಕಲೆ (Arts) ಮತ್ತು ವಾಣಿಜ್ಯ (Commerce) ವಿಷಯವನ್ನು ಓದಿದವರೂ ವಾಣಿಜ್ಯ ಪೈಲಟ್‌ (Pilots) ಆಗಬಹುದು.

    ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ವಾಣಿಜ್ಯ ಪೈಲಟ್ ಪರವಾನಗಿ (CPL) ತರಬೇತಿಗಾಗಿ ವಿದ್ಯಾರ್ಥಿ 12ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯವನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕೆಂಬ ಷರತ್ತನ್ನು ತೆಗೆಯಲು ಮುಂದಾಗಿದೆ ಎಂದು ವರದಿಯಾಗಿದೆ.

    1990ರ ದಶಕದ ಮಧ್ಯದಿಂದ ಭಾರತದಲ್ಲಿ ಪೈಲಟ್‌ ಆಗಲು ವಿಜ್ಞಾನ ಮತ್ತು ಗಣಿತ ಓದಿರಬೇಕೆಂಬ ನಿಯಮ ತರಲಾಗಿತ್ತು. ಇದಕ್ಕೂ ಮೊದಲು 10ನೇ ತರಗತಿ ಉತ್ತೀರ್ಣ (ಮೆಟ್ರಿಕ್) ಮಾತ್ರ ಶೈಕ್ಷಣಿಕ ಅವಶ್ಯಕತೆಯಾಗಿತ್ತು. ಇದನ್ನೂ ಓದಿ: ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

    ಈಗ ವೈದ್ಯಕೀಯ ಫಿಟ್‌ನೆಸ್ ಮಾನದಂಡದ ಜೊತೆ ಯಾವುದೇ ಮಾಧ್ಯಮದಲ್ಲಿ 12ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪೈಲಟ್‌ ತರಬೇತಿ ಪಡೆಯಲು ಅವಕಾಶ ನೀಡಲು ಡಿಜಿಸಿಎ ಮುಂದಾಗುತ್ತಿದೆ.

    ಒಮ್ಮೆ ಅಂತಿಮಗೊಳಿಸಿದ ನಂತರ ಈ ಶಿಫಾರಸನ್ನು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಸಚಿವಾಲಯ ಅನುಮೋದಿಸಿದಾಗ CPL ತರಬೇತಿಯು ಎಲ್ಲಾ ಸ್ಟ್ರೀಮ್‌ಗಳಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಮುಕ್ತವಾಗಿರುತ್ತದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜಿಪಿಎಸ್ ಆಧಾರಿತ ಟೋಲ್ ಬಗ್ಗೆ ನಿರ್ಧಾರ ಕೈಗೊಂಡಿಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ

    ಅಲೈಯನ್ಸ್ ಏರ್‌ ಮತ್ತು ಇಂಡಿಗೋದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಪೈಲಟ್ ಕ್ಯಾಪ್ಟನ್‌ ಶಕ್ತಿ ಲುಂಬಾ ಪ್ರತಿಕ್ರಿಯಿಸಿ, ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಸಿಪಿಎಲ್ ತರಬೇತಿಗೆ ಅರ್ಹತಾ ಮಾನದಂಡವಾಗಿ 12ನೇ ತರಗತಿ ಮಟ್ಟದಲ್ಲಿ ಭೌತಶಾಸ್ತ್ರ ಮತ್ತು ಗಣಿತದ ಅವಶ್ಯಕತೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

    ಹಲವರು ಮಂದಿ ಈ ನಿಯಮವನ್ನು ಪ್ರಶ್ನಿಸಿದ್ದಾರೆ. ನೀವು ಶ್ರೀಮಂತರಾಗಿದ್ದರೆ ಮತ್ತು ನಿಮ್ಮದೇ ಸ್ವಂತ ವಿಮಾನವನ್ನು ಹಾರಿಸಲು ಬಯಸಿದರೆ ಈ ನಿಯಮಗಳು ಅನ್ವಯವಾಗುವುದಿಲ್ಲ. ಹೀಗಾಗಿ ಗಣಿತ ಮತ್ತು ಭೌತಶಾಸ್ತ್ರ ಕಡ್ಡಾಯ ಮಾಡಿದ್ದು ಯಾಕೆ ಎಂದು ಕೇಳಿದ್ದಾರೆ. ಇದನ್ನೂ ಓದಿ: ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

    ವಾಣಿಜ್ಯ ಪೈಲಟ್‌ ಪ್ರಮಾಣಪತ್ರ ಪಡೆಯಲು ಭಾರತದಿಂದ ಹಲವು ಮಂದಿ ವಿದೇಶಕ್ಕೆ ತರಬೇತಿ ಪಡೆಯಲು ಹೋಗುತ್ತಿರುವ ಬೆನ್ನಲ್ಲೇ DGCA ನಿಯಮ ಬದಲಾವಣೆಗೆ ಮುಂದಾಗಿದೆ.

  • ವಾಣಿಜ್ಯ ಬಳಕೆ LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ

    ವಾಣಿಜ್ಯ ಬಳಕೆ LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ

    ನವದೆಹಲಿ: ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ (Commercial LPG Cylinder Price) ಪರಿಷ್ಕರಣೆ ಮಾಡಲಾಗಿದ್ದು, ದರದಲ್ಲಿ 19 ರೂ. ಇಳಿಕೆ ಮಾಡಲಾಗಿದೆ.

    ಮೆಟ್ರೋ ನಗರಗಳಾದ ನವದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ದೇಶದಾದ್ಯಂತ 19 ಕಿ.ಗ್ರಾಂಗಳಷ್ಟು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಬುಧವಾರ ಕಡಿತಗೊಳಿಸಿವೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ.

    ನವದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ 1,745.50 ರೂ. ಆಗಿದೆ. ಮುಂಬೈನಲ್ಲಿ 1,74917.50 ರೂ. ನಿಂದ 1,698.50 ಕ್ಕೆ ಇಳಿಕೆಯಾಗಿದೆ. ಚೆನ್ನೈನಲ್ಲೂ 19 ರೂ. ಇಳಿಕೆಯಾಗಿದೆ. ಈಗಿನ ಬೆಲೆ 1,930 ರೂ. ಗಳಾಗಿದ್ದು, 1,911 ರೂಪಾಯಿಗೆ ಇಳಿಕೆಯಾಗಿದೆ. ಈ ನಡುವೆ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,860 ರೂ.ನಿಂದ ಕುಸಿತ ಕಂಡಿದೆ. ಇದನ್ನೂ ಓದಿ: ಫ್ರೀ ಫ್ರೀ ಫ್ರೀ; ಟಿಡಿಪಿ ಗೆದ್ದರೇ ಫ್ರೀ ಸೈಟ್‌, ಮಹಿಳೆಯರಿಗೆ ಫ್ರೀ ಬಸ್‌, 3 ಎಲ್‌ಪಿಜಿ ಸಿಲಿಂಡರ್‌ ಫ್ರೀ – NDA ಗ್ಯಾರಂಟಿ

  • ದ್ವಿತೀಯ ಪಿಯು ಫಲಿತಾಂಶ ಪ್ರಕಟ – ಟಾಪರ್ಸ್ ಯಾರ‍್ಯಾರು ಗೊತ್ತಾ?

    ದ್ವಿತೀಯ ಪಿಯು ಫಲಿತಾಂಶ ಪ್ರಕಟ – ಟಾಪರ್ಸ್ ಯಾರ‍್ಯಾರು ಗೊತ್ತಾ?

    ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಮ್ರಾನ್ ಶೇಷರಾವ್ 600 ಅಂಕಗಳಿಗೆ 598 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ಸಿಮ್ರಾನ್ ಶೇಷರಾವ್ ಬೆಂಗಳೂರಿನ ಎನ್‍ಎಂಕೆಆರ್‌ವಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಇವರು ವಿಜ್ಞಾನ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕರೆ ಮಾಡಿ ಶುಭ ಕೋರಿದ್ದಾರೆ. ಈ ವೇಳೆ ಎಂಜಿನಿಯರಿಂಗ್ ಓದುವ ಆಸೆ ಇದೆ ಎಂದು ತನ್ನ ಕನಸನ್ನು ವಿದ್ಯಾರ್ಥಿನಿ ಸಚಿವರಿಗೆ ತಿಳಿಸಿದರು.

    ಇನ್ನುಳಿದಂತೆ ವಾಣಿಜ್ಯ ವಿಭಾಗದಲ್ಲಿ 4 ವಿದ್ಯಾರ್ಥಿಗಳು 600 ಅಂಕಗಳಿಗೆ 596 ಅಂಕ ಗಳಿಸಿ ಟಾಪರ್ಸ್ ಆಗಿದ್ದು, ಬೆಂಗಳೂರಿನ ಜೈನ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮಾನವ ವಿನಯ್ ಕೇಜ್ರಿವಾಲ್, ಬೆಂಗಳೂರಿನ ಬಿಜಿಎಸ್ ಕಾಲೇಜಿನ ನೀಲು ಸಿಂಗ್, ಬೆಂಗಳೂರಿನ ಸೆಂಟ್ ಕ್ಲಾರಟ್ ಪಿಯು ಕಾಲೇಜಿನ ಆಕಾಶ್ ದಾಸ್ ಹಾಗೂ ಚಿಕ್ಕಬಳ್ಳಾಪುರ ಕಾಲೇಜಿನ ನೇಹಾ ಈ ಸಾಧನೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯಲ್ಲ: ಬಿಸಿ ನಾಗೇಶ್

    ಕಲಾ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಟಾಪರ್ಸ್ ಆಗಿದ್ದಾರೆ. ಬಳ್ಳಾರಿ ಕಾಲೇಜಿನ ಶ್ವೇತಾ ಭೀಮಾ ಶಂಕರ್ ಭೈರಗೊಂಡ ಹಾಗೂ ಮಡಿವಾಳರಾ ಸಹನಾ 600 ಅಂಕಗಳಿಗೆ 594 ಅಂಕಗಳನ್ನು ಪಡೆದು ಕಲಾ ವಿಭಾಗದಲ್ಲೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 2nd PUC ಫಲಿತಾಂಶ ‌ಪ್ರಕಟ- 61.88% ಮಕ್ಕಳು ಪಾಸ್‌, ವಿದ್ಯಾರ್ಥಿನಿಯರೇ ಮೇಲುಗೈ

    Live Tv

  • ವಾಣಿಜ್ಯ ಬಳಕೆಯ ಸಿಲಿಂಡರ್‌ ದರ 266 ರೂ. ಏರಿಕೆ

    ವಾಣಿಜ್ಯ ಬಳಕೆಯ ಸಿಲಿಂಡರ್‌ ದರ 266 ರೂ. ಏರಿಕೆ

    ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಧಾರಣೆ ಏರಿಕೆ ಆಗುತ್ತಿದ್ದಂತೆ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಭಾರೀ ಏರಿಕೆಯಾಗಿದೆ. 19 ಕೆಜಿ ತೂಕದ ಪ್ರತಿ ಸಿಲಿಂಡರ್ ಬೆಲೆ 266 ರೂ. ಏರಿಕೆಯಾಗಿದೆ.

    ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ 2 ಸಾವಿರ ರೂ. ಗಡಿದಾಟಿದೆ. ಆದರೆ ಗೃಹ ಬಳಕೆಯ ಸಿಲಿಂಡರ್‌ ದರದಲ್ಲಿ ಯಾವುದೇ ಏರಿಕೆ ಕಂಡಿಲ್ಲ.

    ಈ ಮೊದಲು 19 ಕೆಜಿ ಸಿಲಿಂಡರ್‌ ಬೆಲೆ 1,733 ರೂ. ಇದ್ದರೆ ಈಗ ಇದು 2,000.50 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ 1,683 ರೂ. ಇದ್ದರೆ ಈಗ ಇದು 1,950 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ಈಗ 2,073.50 ರೂ. ಮತ್ತು ಚೆನ್ನೈನಲ್ಲಿ ಈ ಉತ್ಪನ್ನದ ಬೆಲೆ 2,133 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ಅಪ್ಪು ಅಂತ್ಯಕ್ರಿಯೆ ರಹಸ್ಯ ಪ್ಲ್ಯಾನ್‌ – ಸುರ್ಯೋದಯಕ್ಕೂ ಮುನ್ನ ಅಂತಿಮಯಾನ

    ಪೆಟ್ರೋಲ್‌ ಡೀಸೆಲ್‌ ಬೆಲೆ 35 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 113.11 ರೂ. ಇದ್ದರೆ, ಡೀಸೆಲ್‌ ಬೆಲೆ 104.05 ರೂ. ಇದೆ. ದೆಹಲಿಯಲ್ಲಿ 1 ಲೀಟರ್‌ ಪೆಟ್ರೋಲ್‌ಗೆ 109.69 ರೂ. ಇದ್ದರೆ ಡೀಸೆಲ್‌ 98.42 ರೂ.ಗೆ ತಲುಪಿದೆ.  ಇದನ್ನೂ ಓದಿ: ಕಚ್ಚಾ ತೈಲ ದರ ಏರಿಕೆ – 150 ರೂ. ಗಡಿ ದಾಟುತ್ತಾ ಪೆಟ್ರೋಲ್ ಬೆಲೆ?

    ಪೆಟ್ರೋಲ್‌, ಡೀಸೆಲ್‌ ದರ ಮುಂಬೈನಲ್ಲಿ ಕ್ರಮವಾಗಿ 115.50 ರೂ. ಮತ್ತು 106.62 ರೂ. ಇದ್ದರೆ, ಕೋಲ್ಕತ್ತಾದಲ್ಲಿ 110.15 ರೂ. ಮತ್ತು 101.56 ರೂ. ಇದೆ. ಇದನ್ನೂ ಓದಿ: ಅಮೇಜಾನ್‌ಗೆ ಸೇರಿದ ಕಂಟೇನರ್‌ನಿಂದ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ರಾಬರಿ

  • ಮುಂದೆ ಸಿಎ ಮಾಡ್ತೀನಿ, ಜಾಸ್ತಿ ತಲೆಕೆಡಿಸಿಕೊಂಡಿಲ್ಲ: ವಾಣಿಜ್ಯ ಟಾಪರ್ ವರ್ಷಿಣಿ

    ಮುಂದೆ ಸಿಎ ಮಾಡ್ತೀನಿ, ಜಾಸ್ತಿ ತಲೆಕೆಡಿಸಿಕೊಂಡಿಲ್ಲ: ವಾಣಿಜ್ಯ ಟಾಪರ್ ವರ್ಷಿಣಿ

    ಬೆಂಗಳೂರು: ಪಿಯು ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ಟಾಪರ್ ಆಗಿದ್ದಾರೆ. ಮಲ್ಲೇಶ್ವರಂ ವಿದ್ಯಾಮಂದಿರ ಕಾಲೇಜಿನ ವರ್ಷಿಣಿ. ಎಂ ಭಟ್ ಮತ್ತು ರಾಜಾಜಿನಗರ ಎಎಸ್‍ಸಿ ಪಿಯು ಕಾಲೇಜಿನ ಅಮೃತಾ ಎಸ್‍ಆರ್ 595 ಅಂಕಗಳನ್ನು ಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

    ವಾಣಿಜ್ಯ ವಿಭಾಗದ ಟಾಪರ್ ವರ್ಷಿಣಿ ಪಬ್ಲಿಕ್ ಟಿವಿಯಂದಿಗೆ ಮಾತನಾಡಿ, ನನಗೆ ತುಂಬಾ ಖುಷಿಯಾಗುತ್ತಿದೆ. ಪ್ರತಿ ವರ್ಷ ಪರೀಕ್ಷೆ ಫಲಿತಾಂಶ ಬಂದಾಗ ನಾನು ಸುದ್ದಿ ವಾಹಿನಿಗಳಲ್ಲಿ ಯಾರೂ ಟಾಪ್ ಬರುತ್ತಾರೆಂದು ನೋಡುತ್ತಿದೆ. ಆದರೆ ಈಗ ನಾನು ಆ ಸ್ಥಾನದಲ್ಲಿರುವುದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.

    ದ್ವಿತೀಯ ಪಿಯುಸಿ ಶುರುವಾದ ಬಳಿಕ ದಿನ 4ರಿಂದ 5 ಗಂಟೆಗಳವರೆಗೂ ಓದುತ್ತಿದೆ. ನಾನು ತುಂಬಾ ತಲೆ ಕೆಡಿಸಿಕೊಳ್ಳಲಿಲ್ಲ. ನನ್ನ ಪರಿಶ್ರಮ, ಶಿಕ್ಷಕರ, ಪ್ರಿನ್ಸಿಪಲ್ ಹಾಗೂ ನನ್ನ ಪೋಷಕರ ಸಪೋರ್ಟ್ ಮಾಡಿದ್ದಾರೆ.

    ನಾನು ಈಗ ಸಿಎ ಮಾಡಬೇಕೆಂದುಕೊಂಡಿದ್ದೇನೆ. ಈಗಾಗಲೇ ಸಿಎ ಕೋಚಿಂಗ್ ಕ್ಲಾಸ್‍ಗೆ ಸೇರಿಕೊಂಡಿದ್ದೀನಿ. ನನ್ನ ಫಲಿತಾಂಶ ಬಂದಾಗ ನನ್ನ ತಾಯಿ ನಂಬಲೇ ಇಲ್ಲ, ಅವರಿಗೆ ತುಂಬಾ ಖುಷಿಯಾಗಿದೆ. ನನ್ನ ತಂದೆ ಊರಿನಿಂದ ಹೊರ ಹೋಗಿದ್ದು, ಕರೆ ಮಾಡಿ ತಿಳಿಸಬೇಕೆಂದು ವಾಣಿಜ್ಯ ವಿಭಾಗದ ಟಾಪರ್ ವರ್ಷಿಣಿ ತಿಳಿಸಿದ್ದಾರೆ.

    ವರ್ಷಿಣಿ ಒಟ್ಟು 595 ಅಂಕಗಳನ್ನು ಪಡೆದಿದ್ದು, ಸಂಸ್ಕೃತ, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಇನ್ನೂ ಅಕೌಂಟ್ಸ್‍ನಲ್ಲಿ 99, ಆಂಗ್ಲ ಭಾಷೆಯಲ್ಲಿ 100ಕ್ಕೆ 96 ಅಂಕಗಳನ್ನು ಪಡೆದು ವಾಣಿಜ್ಯ ಭಾಗದ ಟಾಪರ್ ಆಗಿದ್ದಾರೆ.

  • ಪಿಯು ಫಲಿತಾಂಶ: ಮೂರು ವಿಭಾಗದ ಟಾಪ್ 10 ಟಾಪರ್ ಲಿಸ್ಟ್ ಇಲ್ಲಿದೆ

    ಪಿಯು ಫಲಿತಾಂಶ: ಮೂರು ವಿಭಾಗದ ಟಾಪ್ 10 ಟಾಪರ್ ಲಿಸ್ಟ್ ಇಲ್ಲಿದೆ

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ ಕಳೆದ ವರ್ಷಕ್ಕಿಂತ ಈ ಬಾರಿ ಶೇ.4.82 ಫಲಿತಾಂಶ ಇಳಿಕೆಯಾಗಿದ್ದು, ಈ ವರ್ಷ 52.38 ಫಲಿತಾಂಶ ದಾಖಲಾಗಿದೆ. 6,84,490 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 3,55,697 ಮಂದಿ ಉತ್ತೀರ್ಣರಾಗಿದ್ದಾರೆ.

    ಕಲಾ ವಿಭಾಗದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಬಳ್ಳಾರಿಯ ಕೊಟ್ಟೂರು ಹಿಂದೂ ಕಾಲೇಜು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಚೈತ್ರಾ ಬಿ. 589 ಅಂಕಗಳಿಸಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

    ಕಾಮರ್ಸ್ ವಿಭಾಗದಲ್ಲಿ ಇಬ್ಬರು ಟಾಪರ್ ಆಗಿದ್ದು, ಬೆಂಗಳೂರಿನ ವಿಜಯನಗರದ ಆರ್‍ಎನ್‍ಎಸ್ ಕಾಲೇಜಿನ ಶ್ರೀನಿಧಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯ ಸತ್ಯಸಾಯಿ ಕಾಲೇಜಿನ ಸಾಯಿ ಸಮರ್ಥ್ 595 ಅಂಕಗಳಿಸಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ  ಇಬ್ಬರು ಟಾಪರ್ ಆಗಿದ್ದು, ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಸೃಜನಾ ಎನ್ ಮತ್ತು ಕುಂದಾಪುರದ ಎಸ್‍ವಿ ಕಾಲೇಜಿನ ರಾಧಿಕಾ ಪೈ 596 ಅಂಕಗಳಿಸಿದ್ದಾರೆ.

    ಹೀಗಾಗಿ ಇಲ್ಲಿ ಮೂರು ವಿಭಾಗದಲ್ಲಿನ ಟಾಪ್ 10 ಟಾಪರ್‍  ಪಟ್ಟಿಯನ್ನು ನೀಡಲಾಗಿದೆ.

    ಕಲಾ ವಿಭಾಗ

    ವಾಣಿಜ್ಯ ವಿಭಾಗ

    ವಿಜ್ಞಾನ ವಿಭಾಗ

    ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?