Tag: ವಾಡಿ

  • ಗೆಳತಿಯೊಂದಿಗೆ ಲಿವ್‌ ಇನ್‌ನಲ್ಲಿರಲು ಮನೆಯವರ ವಿರೋಧ – ರೈಲ್ವೆ ಹಳಿಗೆ ಹಾರಿ ಯುವಕ ಆತ್ಮಹತ್ಯೆ

    ಗೆಳತಿಯೊಂದಿಗೆ ಲಿವ್‌ ಇನ್‌ನಲ್ಲಿರಲು ಮನೆಯವರ ವಿರೋಧ – ರೈಲ್ವೆ ಹಳಿಗೆ ಹಾರಿ ಯುವಕ ಆತ್ಮಹತ್ಯೆ

    ಕಲಬುರಗಿ: ಲಿವಿಂಗ್ ಟುಗೆದರ್‌ನಲ್ಲಿರಲು ಮನೆಯವರು ವಿರೋಧಿಸಿದ್ದಕ್ಕೆ ಯುವಕ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ (Kalaburagi) ನಗರದ ನಾಗನಹಳ್ಳಿಯಲ್ಲಿ ನಡೆದಿದೆ.

    ಮೃತ ಯುವಕನನ್ನು ಕುಮಸಿ ಗ್ರಾಮದ ಶಿವಕುಮಾರ್ (28) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:Exclusive | ರಿಕ್ಕಿ ರೈಗಿದ್ದ ಭದ್ರತೆ ನೋಡಿದ್ರೆ ಎದುರಾಳಿಗಳು ಹತ್ತಿರ ಸುಳಿಯೋಕು ನಡುಗುತ್ತಾರೆ!

    ತಾನು ಲಿವಿಂಗ್ ಟುಗೆದರ್‌ನಲ್ಲಿರುವುದಾಗಿ ಮನೆಯವರಿಗೆ ತಿಳಿಸಿದ್ದ. ಆದರೆ ಮನೆಯವರು ಇದಕ್ಕೆ ವಿರೋಧಿಸಿದ್ದಾರೆ. ಇದರಿಂದ ಬೇಸತ್ತ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿ, ತಾನು ಲಿವಿಂಗ್ ಟುಗೆದರ್‌ನಲ್ಲಿದ್ದ ಮಹಿಳೆಗೆ ಕರೆಮಾಡಿದ್ದಾನೆ. ಬಳಿಕ ಕಲಬುರಗಿ ನಗರದ ನಾಗನಹಳ್ಳಿ ರೈಲ್ವೆ ಹಳಿಯ ಬಳಿ ತೆರಳಿ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದು ಆತನ ರಕ್ಷಣೆಗೆ ಮುಂದಾಗಿದ್ದ ಯುವತಿ ಕೂಡ ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಾಡಿ (Wadi) ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹತ್ಯೆಗೆ ಯತ್ನ – ಶೂಟೌಟ್‌ ಹಿಂದೆ ಭೂಗತ ಲೋಕದ ಕೈವಾಡ..?

  • ಕಲಬುರಗಿ ನಾಲವಾರ ಜಾತ್ರೆ – ಆಡಳಿತ ಮಂಡಳಿ ಸದಸ್ಯರ ವಿರುದ್ಧ FIR

    ಕಲಬುರಗಿ ನಾಲವಾರ ಜಾತ್ರೆ – ಆಡಳಿತ ಮಂಡಳಿ ಸದಸ್ಯರ ವಿರುದ್ಧ FIR

    ಕಲಬುರಗಿ: ಕೊರೊನಾ ನಿಯಮಗಳನ್ನ ಉಲ್ಲಂಘಿಸಿ ನಾಲವಾರದ ಕೋರಿಸಿದ್ದೇಶ್ವರ ಜಾತ್ರೆ ರಥೋತ್ಸವ ನಡೆಸಿದ ಆಡಳಿತ ಮಂಡಳಿ ಸೇರಿದಂತೆ ಹತ್ತಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ಕೊರೊನಾ ನಿಯಮಗಳನ್ನ ಉಲ್ಲಂಘಿಸಿ ನಾಲವಾರದ ಕೋರಿಸಿದ್ದೇಶ್ವರ ಜಾತ್ರೆ ರಥೋತ್ಸವ ನಡೆಸಲಾಗಿತ್ತು. ಈ ಪರಿಣಾಮ ಆಡಳಿತ ಮಂಡಳಿ ಸೇರಿದಂತೆ ಹತ್ತಕ್ಕೂ ಅಧಿಕ ಜನರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ ಎಂದು ವಾಡಿ ಠಾಣೆ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷದ ನಾಯಕರು ಬೇರೆ ಪಕ್ಷದ ಸದಸ್ಯರ ಆಂತರಿಕ ವಿಚಾರದಲ್ಲಿ ಹೇಳಿಕೆ ಕೊಡಬಾರದು: ಡಿಕೆಶಿ

    ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಜಾತ್ರೆ, ರಥೋತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು. ಆದರೂ ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ ಕೋರಿಸಿದ್ದೇಶ್ವರ ದೇಗುಲ ಆಡಳಿತ ಮಂಡಳಿ ಜಾತ್ರೆ ಮತ್ತು ರಥೋತ್ಸವ ನಡೆಸಲಾಗಿತ್ತು.

    ಜಾತ್ರೆಯಲ್ಲಿ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಅಲ್ಲದೆ ರಥೋತ್ಸವ ವೇಳೆಯಲ್ಲಿ ಭಾರೀ ನೂಕುನುಗ್ಗಲು ಸಂಭವಿಸಿ ಹಲವು ಜನರು ಗಾಯಗೊಂಡಿದ್ದರು. ಹೀಗಾಗಿ ಆಡಳಿತ ಮಂಡಳಿ ಮುಖ್ಯಸ್ಥರು, ಸದಸ್ಯರು ಸೇರಿದಂತೆ ಹತ್ತಕ್ಕೂ ಅಧಿಕ ಜನರ ವಿರುದ್ಧ ವಾಡಿ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!

  • 10 ವರ್ಷಗಳಿಂದ ಸ್ಥಗಿತಗೊಂಡಿದ್ದ ವಾಡಿಗೆ ಬಸ್ ಸಂಚಾರ – ಗ್ರಾಮಸ್ಥರ ಹರ್ಷ

    10 ವರ್ಷಗಳಿಂದ ಸ್ಥಗಿತಗೊಂಡಿದ್ದ ವಾಡಿಗೆ ಬಸ್ ಸಂಚಾರ – ಗ್ರಾಮಸ್ಥರ ಹರ್ಷ

    ಬೆಂಗಳೂರು: 10 ವರ್ಷಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದ ವಾಡಿಗೆ ಇದೀಗ ಬಸ್ ಸಂಚಾರ ಆರಂಭವಾಗಿದೆ. ಇದನ್ನೂ ಓದಿ: 80 ಕಡೆ ದುರ್ಗಾಮೂರ್ತಿ ಪ್ರತಿಷ್ಠಾಪನೆಗೆ ಮನವಿ – ದಸರಾ ಮಾರ್ಗಸೂಚಿಗಾಗಿ ಎದುರುನೋಡ್ತಿರುವ ಬಿಬಿಎಂಪಿ

    ಹುಮನಾಬಾದ ಮತಕ್ಷೇತ್ರದ ನಮದಾಪೂರು ವಾಡಿ ಗ್ರಾಮಕ್ಕೆ ಸುಮಾರು 10 ವರ್ಷಗಳಿಂದ ಯಾವುದೇ ಬಸ್ ಸಂಚಾರ ಇಲ್ಲದೇ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಕೂಡಲೇ ಈ ಗ್ರಾಮಕ್ಕೆ ಬಸ್ ಸಂಚಾರವಾಗುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಮನೆ ಖರೀದಿಸಿದ ರಶ್ಮಿಕಾ – ಹೊಟ್ಟೆ ಕಿಚ್ಚಾಯ್ತಾ ಅಂತ ಪ್ರಶ್ನಿಸಿದ್ಯಾರಿಗೆ?

    ಈ ಗ್ರಾಮಕ್ಕೆ ಬಸ್ ಸಂಚಾರ ಇಲ್ಲದೇ ಸಾರ್ವಜನಿಕರಿಗೆ, ಅದರಲ್ಲೂ ವಿದ್ಯಾರ್ಥಿಗಳಿಗೆ, ಆರೋಗ್ಯ ತಪಾಸಣೆಗೆ ಹೋಗುವವರಿಗೆ, ಮಹಿಳೆಯರಿಗೆ ತುಂಬ ತೊಂದರೆಯಾಗುತ್ತಿದೆ ಎನ್ನುವ ವಿಷಯವನ್ನು ಕಾರ್ಯಕರ್ತರೊರ್ವರಿಂದ ತಿಳಿದು ಮನ ಕಲಕಿತು. ಕೂಡಲೇ ಈ ಗ್ರಾಮಕ್ಕೆ ಬಸ್ ಸಂಚರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾವು ಸೂಚಿಸಿದ ಹಿನ್ನೆಲೆಯಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮಸ್ಥರು ಬಸ್ ಅನ್ನು ಶೃಂಗರಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

  • ಕಲಬುರಗಿ ಅಪಘಾತದಲ್ಲಿ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್

    ಕಲಬುರಗಿ ಅಪಘಾತದಲ್ಲಿ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್

    ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದ ಬಳಿ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಮೂರು ಜನ ಸಾವನ್ನಪ್ಪಿರುವ ಪ್ರಕರಣ ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.

    ಸೋಮವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ರಾವೂರ ಗ್ರಾಮದ ಭಿಮಾಶಂಕರ್ ಪ್ಯಾಟಿ, ಅಕ್ಬರ್ ಪಟೇಲ್, ಭಾಗ್ಯಶ್ರೀ ಎಂಬವರು ಸ್ಥಳದಲ್ಲೆ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಸಾವನ್ನಪ್ಪಿದ ಯುವತಿ ಹಾಗೂ ಇಬ್ಬರು ಯುವಕರ ಮನೆಯಲ್ಲಿ ಇವರು ಎಲ್ಲಿಗೆ ಮತ್ತು ಯಾಕೆ ಹೋಗುತ್ತಿದ್ದರು ಎಂಬುದೆ ಗೊತ್ತಿಲ್ಲ.

    ಸದ್ಯ ಪೊಲೀಸರು ಕಲೆ ಹಾಕಿರುವ ಮಾಹಿತಿ ಪ್ರಕಾರ ಈ ಮೂರು ಜನ ರಾವೂರ್ ನಿಂದ ವಾಡಿ ಕಡೆ ತೆರಳೊಕೆ ಮುಂದಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಆದರೆ ಈ ಮೂವರು ಅದು ನಸುಕಿನ ಜಾವ ಮನೆಯವರಿಗೆ ತಿಳಿಸದೇ ಬೈಕ್ ನಲ್ಲಿ ಎಲ್ಲಿಗೆ ಮತ್ತು ಏಕೆ ತೆರಳ್ತಿದ್ದರು ಅನ್ನೋದು ಮಾತ್ರ ನಿಗೂಢವಾಗಿದೆ. ಇನ್ನೂ ಘಟನೆಯ ಬಳಿಕ ಲಾರಿ ಚಾಲಕ ಎಸ್ಕೇಪ್ ಆಗಿದ್ದಾನೆ. ಅಪಘಾತ ಪ್ರಕರಣ ಸಂಬಂಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರೈಲಿನ ಎಂಜಿನ್ ತಾಗಿ ಪ್ಲಾಟ್‍ಫಾರ್ಮ್ ಪುಡಿಪುಡಿ

    ರೈಲಿನ ಎಂಜಿನ್ ತಾಗಿ ಪ್ಲಾಟ್‍ಫಾರ್ಮ್ ಪುಡಿಪುಡಿ

    ಕಲಬುರಗಿ: ರೈಲ್ವೇ ಎಂಜಿನ್ ಪ್ಲಾಟ್‍ಫಾರ್ಮ್ ಗೋಡೆಗೆ ತಗುಲಿ ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಇಂದು ಮುಂಜಾನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಸೊಲ್ಲಾಪುರದಿಂದ ವಾಡಿ ಮಾರ್ಗವಾಗಿ ಗುಂತಕಲ್ ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಎಂಜಿನ್ ಪ್ಲಾಟ್‍ಫಾರ್ಮ ಗೋಡೆಗೆ ತಗುಲಿದೆ. ಹೀಗಾಗಿ ಗೋಡೆ ಕಲ್ಲುಗಳು ಹಳಿ ಮೇಲೆ ಬಂದು ಬಿದ್ದಿವೆ. ಜೊತೆಗೆ ದೊಡ್ಡ ಸದ್ದು ಕೂಡಾ ಬಂದಿದೆ. ಹೀಗಾಗಿ ಕೆಲ ಪ್ರಯಾಣಿಕರು ಆತಂಕಗೊಂಡು ಬೋಗಿಯಿಂದ ಜಿಗದಿದ್ದಾರೆ.

    ಪ್ಲಾಟ್‍ಫಾರ್ಮ್ ಗೋಡೆಯ ಹೊರಚಾಚಿಕೊಂಡ ಕಲ್ಲು ಎಂಜಿನ್ ಗೆ ತಗುಲಿದೆ. ವಾಡಿ ಪ್ಲಾಟ್‍ಫಾರ್ಮ್ ಹಳೆಯದಾಗಿದ್ದು, ಹೊಸ ಮಾದರಿಯ ರೈಲು ಎಂಜಿನ್ ಇಂದು ಬಂದಿದ್ದರಿಂದ ಈ ಘಟನೆ ನಡೆದಿದೆ ಅಂತ ಹೇಳಲಾಗಿದೆ. ಘಟನೆ ನಂತರ ಪ್ಲಾಟ್‍ಫಾರ್ಮ್ ಸರಿಗೊಳಿಸಿ ರೈಲು ಹೋಗಲು ಗ್ಯಾಂಗ್ ಮನ್ ಗಳು ಅವಕಾಶ ಮಾಡಿಕೊಟ್ಟಿದ್ದಾರೆ.

  • ಯಾದಗಿರಿ: ಅಹಮದಾಬಾದ್-ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಚಾಕು ತೋರಿಸಿ ಹಣ ದೋಚಿದ ಕಳ್ಳರು!

    ಯಾದಗಿರಿ: ಅಹಮದಾಬಾದ್-ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಚಾಕು ತೋರಿಸಿ ಹಣ ದೋಚಿದ ಕಳ್ಳರು!

    ಯಾದಗಿರಿ/ರಾಯಚೂರು: ಅಹಮದಾಬಾದ್- ಚೆನೈ ಎಕ್ಸ್ ಪ್ರೆಸ್ ರೈಲಿನಲ್ಲಿ ಖದೀಮ ಕಳ್ಳರು ಇಂದು ನಸುಕಿನ ಜಾವ ಸರಣಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ರೈಲು ವಾಡಿಯಿಂದ ರಾಯಚೂರಿಗೆ ತೆರಳುತ್ತಿದ್ದಾಗ ವಾಡಿ-ಯಾದಗಿರಿ ಮಧ್ಯೆ ಗಾಡಿ ಹತ್ತಿದ ಕಳ್ಳರು ಚಾಕು ತೋರಿಸಿ ನಾಲ್ವರು ಪ್ರಯಾಣಿಕರನ್ನು ದೋಚಿದ್ದಾರೆ.

     

    ಜೇಬುಗಳಿಗೆ ಕತ್ತರಿಹಾಕಿದ್ದು 50 ಸಾವಿರ ರೂಪಾಯಿ ಕಳ್ಳತನ ಮಾಡಿದ್ದಾರೆ. ಎಸ್-5 ಬೋಗಿಯಲ್ಲಿ ಮಹಿಳೆಯೊಬ್ಬರ ಸರ ಕದಿಯಲು ಮುಂದಾದಾಗ ಮಹಿಳೆ ಕೂಗಿಕೊಂಡಿದ್ದಾರೆ. ರಾಮಚಂದ್ರ ಎಂಬುವವರಿಗೆ ಚಾಕು ತೋರಿಸಿ ಬೆದರಿಸಿ 10 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ.

    ಕಳ್ಳರನ್ನ ಹಿಡಿಯಲು ಮುಂದಾದ ಪ್ರಯಾಣಿರೊಬ್ಬರಿಗೆ ಥಳಿಸಿ ಕಳ್ಳರು ಪರಾರಿಯಾಗಿದ್ದಾರೆ. ಮೂರು ಜನ ಕಳ್ಳರ ಗುಂಪು ಈ ಕೃತ್ಯವೆಸಗಿದೆ. ಕಳ್ಳತನ ಹಿನ್ನೆಲೆ ಯಾದಗಿರಿ ನಿಲ್ದಾಣಕ್ಕೆ 5:20 ಆಗಮಿಸಿದ ರೈಲ್ವೆ ಗಾಡಿ 50 ನಿಮಿಷ ನಿಲ್ದಾಣದಲ್ಲಿಯೇ ನಿಂತು ತಡವಾಗಿ ತೆರಳಿದೆ.

    ರಾಯಚೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.