Tag: ವಾಟ್ಸಾಪ್

  • ಯುವತಿಯ ಫೋಟೋದ ಮೇಲೆ ಅವಹೇಳನಕಾರಿ ಬರಹ: ಬೇಲೂರು ಪ್ರಿನ್ಸಿಪಾಲ್ ಅರೆಸ್ಟ್

    ಯುವತಿಯ ಫೋಟೋದ ಮೇಲೆ ಅವಹೇಳನಕಾರಿ ಬರಹ: ಬೇಲೂರು ಪ್ರಿನ್ಸಿಪಾಲ್ ಅರೆಸ್ಟ್

    ಹಾಸನ: ಯುವತಿಯೊಬ್ಬಳ ಫೋಟೋದ ಮೇಲೆ ಅವಹೇಳನಕಾರಿ ಬರಹ ಹಾಕಿ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಬೇಲೂರು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದಾರೆ.

    ಕಾಲೇಜಿನ ಅಧೀಕ್ಷರಾಗಿರುವ ಕೇಶವ್ ಕಿರಣ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಕಾಲೇಜು ಪ್ರಾಂಶುಪಾಲರಾಗಿರುವ ಜಯಣ್ಣ ಗೌಡ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ತಮ್ಮ ಪುತ್ರಿಯ ಭಾವಚಿತ್ರವಿರುವ ಫೋಟೋದಲ್ಲಿ ಅವಹೇಳನ ಬರಹ ಬರೆದು ವಾಟ್ಸಾಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ಮೇಲೆ ವೈಯುಕ್ತಿಕ ದ್ವೇಷಕ್ಕೆ ನನ್ನ ಕುಟುಂಬದ ಸದಸ್ಯರ ತೇಜೋವಧೆ ಮಾಡಿದ್ದಾರೆ ಎಂದು ಕೇಶವ್ ಆರೋಪಿಸಿ ದೂರು ನೀಡಿದ್ದರು.

    ಸದ್ಯ ಆರೋಪಿ ಜಯಣ್ಣ ಗೌಡನನ್ನು ಬೇಲೂರು ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಬಿಎಸ್‍ವೈ, ಶೋಭಾ ಕರಂದ್ಲಾಜೆ ಬಗ್ಗೆ ಬಿಜೆಪಿಯವರಿಂದ್ಲೇ ವಾಟ್ಸಪ್‍ನಲ್ಲಿ ಅವಹೇಳನ- ಕೇಸ್ ದಾಖಲು

    ಬಿಎಸ್‍ವೈ, ಶೋಭಾ ಕರಂದ್ಲಾಜೆ ಬಗ್ಗೆ ಬಿಜೆಪಿಯವರಿಂದ್ಲೇ ವಾಟ್ಸಪ್‍ನಲ್ಲಿ ಅವಹೇಳನ- ಕೇಸ್ ದಾಖಲು

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಬಿಜೆಪಿಯಿಂದಲೇ ಅವಮಾನ ಮಾಡಲಾಗಿದೆ.

    ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಬರಹ ಹಾಗೂ ಇಬ್ಬರೂ ಜೊತೆಯಲ್ಲಿರುವ ಅಶ್ಲೀಲ ಫೋಟೋವೊಂದು ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಕಾವೇರಿ-ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ ಕಿಶೋರ್ ಕುಮಾರ್ ವಿರುದ್ಧ ಬಿಜೆಪಿಯ ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ದೂರು ದಾಖಲಿಸಿದ್ದಾರೆ.

    ಪರಿವರ್ತನಾ ಸಮಾವೇಶದ ಸಂದರ್ಭದಲ್ಲಿ ಬಿಜೆಪಿಯೊಳಗೆ ಜಟಾಪಟಿ ನಡೆದಿತ್ತು. ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಅವರು ಬಿಜೆಪಿ ಸೇರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ದೂರು ದಾಖಲಾಗಿರೋ ಕಿಶೋರ್, ರಾಜೇಶ್ ಹಾಲಾಡಿ ವಿರುದ್ಧ ಗುಂಪಿನ ನಾಯಕರಾಗಿದ್ದಾರೆ ಎನ್ನಲಾಗಿದೆ.

     

  • ವಾಟ್ಸಪ್ ಅಡ್ಮಿನ್‍ಗಳೇ ಹುಷಾರ್! ನೀವು ಅಡ್ಮಿನ್‍ಗಳಾಗಿರುವ ಗ್ರೂಪ್‍ನಲ್ಲಿ ಗಲಾಟೆ ಆಗ್ತಿದ್ರೆ ಈ ಸ್ಟೋರಿ ಓದಿ

    ವಾಟ್ಸಪ್ ಅಡ್ಮಿನ್‍ಗಳೇ ಹುಷಾರ್! ನೀವು ಅಡ್ಮಿನ್‍ಗಳಾಗಿರುವ ಗ್ರೂಪ್‍ನಲ್ಲಿ ಗಲಾಟೆ ಆಗ್ತಿದ್ರೆ ಈ ಸ್ಟೋರಿ ಓದಿ

    ಉಡುಪಿ: ವಾಟ್ಸಪ್ ಅಡ್ಮಿನ್‍ಗಳೇ ನಿಮ್ಮ ಗ್ರೂಪ್‍ನಲ್ಲಿ ಗಲಾಟೆ ಆಗ್ತಿದೆಯಾ, ನೀವು ಸ್ವಲ್ಪ ಜಾಗ್ರತೆ ವಹಿಸೋದು ಒಳ್ಳೆಯದು. ಸ್ವಲ್ಪ ಯಾಮಾರಿದ್ರೂ ನಿಮಗೆ ಏಟು ಬೀಳುತ್ತೆ ಹುಷಾರು.

    ಹೌದು. ಉಡುಪಿ ಜಿಲ್ಲೆ ಕಾರ್ಕಳದಲ್ಲಿ ವಾಟ್ಸಪ್ ಕಲಹ ಬೀದಿ ರಂಪಾಟದಲ್ಲಿ ಅಂತ್ಯವಾಗಿದೆ. ಸಮಾನ ಮನಸ್ಕರು ಸೇರಿಕೊಂಡು `ಹೆಲ್ಪಿಂಗ್ ಫ್ರೆಂಡ್ಸ್’ ಅನ್ನೋ ವಾಟ್ಸಪ್ ಗ್ರೂಪ್ ಮಾಡಿದ್ರು. ನಂತರ ಕ್ರಮೇಣ ಎಲ್ಲಾ ಮನೋಧರ್ಮದವರೂ ಅದರಲ್ಲಿ ಸೇರಿಕೊಂಡಿದ್ದಾರೆ. ಈ ನಡುವೆ ಗ್ರೂಪ್‍ನಲ್ಲಿ ಪ್ರಸ್ತುತ ರಾಜಕೀಯ ವಿಷಯಗಳ ಬಗ್ಗೆ ಭಾರೀ ಚರ್ಚೆ ನಡೆದಿದೆ. ಕಾಲ ಕಳೆದಂತೆ ಈ ಗ್ರೂಪ್‍ನಲ್ಲಿ ಕಾಂಗ್ರೆಸ್-ಬಿಜೆಪಿ ಅಂತ ಗಲಾಟೆ ಶುರುವಾಗಿದೆ. ಗಲಾಟೆಯಲ್ಲಿ ಗ್ರೂಪ್ ಹೆಸರನ್ನು `ಹೆಲ್ಪಿಂಗ್ ಫ್ರೆಂಡ್ಸ್’ ನಿಂದ `ಪೋಲಿಟಿಕಲ್ ಫೈಟರ್ಸ್’ ಅಂತ ಬದಲಾವಣೆ ಮಾಡಲಾಗಿದೆ.

    ಗ್ರೂಪ್ ನಲ್ಲಿ ಇತ್ತೀಚಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧಾಂತಗಳ ಕುರಿತು ಹಲವು ಬಾರಿ ಬಿರುಸಿನ ಚರ್ಚೆ ನಡೆದಿದೆ. ಗ್ರೂಪ್‍ನ ಸದಸ್ಯರಾಗಿರುವ ವಿಖ್ಯಾತ್ ಶೆಟ್ಟಿ ಅವರ ತಂದೆ ಬಗ್ಗೆ ಈ ಗ್ರೂಪ್‍ನಲ್ಲಿ ಕಾಂಗ್ರೆಸ್ ಒಲವಿನ ಕೆಲವು ಸದಸ್ಯರು ಟೀಕೆ ಮಾಡಿದ್ದಾರೆ. ಇದರಿಂದ ವೈಯ್ಯಕ್ತಿಕ ಚರ್ಚೆ ಆರಂಭವಾಗಿದೆ. ಮಾತಿನ ಚಕಮಕಿ ಜೋರಾಗಿ ವಿಖ್ಯಾತ್ ಶೆಟ್ಟಿ ಮತ್ತು ಕೃಷ್ಣ ಶೆಟ್ಟಿ ಎಂಬವರ ನಡುವೆ ಬಿಸಿಬಿಸಿ ಚ್ಯಾಟಿಂಗ್ ನಡೆದಿದ್ದು, ಕೊನೆಗೆ ಗಲಾಟೆ ಜೋರಾಗಿ ಹಲ್ಲೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದೆ.

    ವ್ಯಾಟ್ಸಪ್ ನಲ್ಲಿ ಆರಂಭವಾದ ಚರ್ಚೆಯಿಂದ ಕಾರ್ಕಳದ ಗುಮ್ಮಟ ಬೆಟ್ಟದ ಬಳಿ ಎರಡೂ ತಂಡ ಸೇರಿ ಹೊಡೆದಾಟ ಆರಂಭಿಸಿದೆ. ವಿಷಯ ತಿಳಿದು ಗಲಾಟೆ ತಪ್ಪಿಸಲು ಹೋದ ಗ್ರೂಪ್ ಅಡ್ಮಿನ್ ಅಮೃತೇಶ್ ಶೆಟ್ಟಿಗೆ, ವಿಖ್ಯಾತ್ ಮತ್ತು ತಂಡದವರು ಹಲ್ಲೆ ಮಾಡಿದ್ದಾರೆ. ಪ್ರಸ್ತುತ ಈ ಎರಡೂ ತಂಡಗಳು ಕಾರ್ಕಳ ಠಾಣೆಯಲ್ಲಿ ಪರಸ್ಪರ ದೂರು ನೀಡಿವೆ.

  • ತಾಯಿಯನ್ನು ನಿಂದಿಸಿದ್ದಕ್ಕೆ ಅರೆಬೆತ್ತಲೆಗೊಳಿಸಿ ನಡುರೋಡಲ್ಲೇ  ಹಲ್ಲೆ

    ತಾಯಿಯನ್ನು ನಿಂದಿಸಿದ್ದಕ್ಕೆ ಅರೆಬೆತ್ತಲೆಗೊಳಿಸಿ ನಡುರೋಡಲ್ಲೇ ಹಲ್ಲೆ

    – ಕಾನೂನು ಕೈಗೆತ್ತಿಕೊಂಡ ಯುವಕರು

    ಗದಗ: ತಾಯಿಯನ್ನು ನಿಂದಿಸಿದ್ದಕ್ಕೆ ಸಿಟ್ಟಿಗೆದ್ದ ಮಕ್ಕಳು ಮತ್ತು ಕುಟುಂಬಸ್ಥರು ಆರೋಪಿಗಳನ್ನು ಅರೆಬೆತ್ತಲೆಗೊಳಿಸಿ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ಗದಗದ ನರಗುಂದಪಟ್ಟದಲ್ಲಿ ನಡೆದಿದೆ.

    ನರಗುಂದ ಪಟ್ಟಣದ ಮಲ್ಲಿಕ್ ಜಾನ್ ನಲಬಂದ್, ಖಾದಿರ್ ಸಾಬ್ ಮಲ್ಲಸಮುದ್ರ, ಗೌಸುಸಾಬ್ ರಾಹುತ್ ಮೇಲೆ ಮಾರಣಾಂತಿಕ ಹಲ್ಲೆಗೊಳಗಾದವರು. ಬಸುರಾಜ್ ಗಡೇಕರ್, ಸಂಜೀವ್ ನಲವಡಿ, ತವನಪ್ಪ ಸಂಬಳ ಹಲ್ಲೆ ಮಾಡಿದವರು ಅಂತ ಗೊತ್ತಾಗಿದೆ.

    ನಡೆದಿದ್ದೇನು: ತಾಯಿಯನ್ನು ಹಿಯಾಳಿಸಿ ಮಾತನಾಡಿದ್ದ ವೀಡಿಯೋವೊಂದನ್ನು ಆರೋಪಿಗಳು ವಾಟ್ಸಾಪ್‍ನಲ್ಲಿ ಹಾಕಿದ್ರು. ಇದರಿಂದ ಸಿಟ್ಟುಗೊಂಡ ಮಕ್ಕಳು ಹಾಗೂ ಕುಟುಂಬಸ್ಥರು ರಸ್ತೆ ತುಂಬೆಲ್ಲಾ ಮೂವರನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿ ಬಳಿಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪಟ್ಟಣದ ಮಾರುಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಪೊಲೀಸ್ ಠಾಣೆಯವರೆಗೂ ಬೆಲ್ಟ್ ನಿಂದ ಹಿಗ್ಗಾಮುಗ್ಗಾ ಥಳಿಸಿ ಆರೋಪಿಗಳನ್ನು ಪೊಲೀಸರು ಕೈಗೆ ನೀಡಿದ್ದಾರೆ.

    ಸದ್ಯಕ್ಕೆ ಹಲ್ಲೆಗೊಳಗಾದ ಯುವಕರಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಮಾಡಿದ ಮೂವರನ್ನ ಗದಗ ಜಿಲ್ಲೆ ನರಗುಂದ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=hM4ppiA4l3Y&feature=youtu.be