Tag: ವಾಟ್ಸಾಪ್

  • ಯುವತಿಯರು ಮಾರಾಟಕ್ಕಿದ್ದಾರೆ- ಮೊಬೈಲ್ ನಂಬರ್, ಅಡ್ರೆಸ್ ಸಮೇತ ಫೋಟೋ ವೈರಲ್

    ಯುವತಿಯರು ಮಾರಾಟಕ್ಕಿದ್ದಾರೆ- ಮೊಬೈಲ್ ನಂಬರ್, ಅಡ್ರೆಸ್ ಸಮೇತ ಫೋಟೋ ವೈರಲ್

    ಬೆಳಗಾವಿ: ಜಿಲ್ಲೆಯಲ್ಲಿ ಒಂದು ಕಡೆ ಅಧಿವೇಶನ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಪಡ್ಡೆ ಹುಡುಗರ ಕೈಯಲ್ಲಿರುವ ಮೊಬೈಲ್‍ಗಳಲ್ಲಿ ಯುವತಿಯರ ಫೋಟೋಗಳು ಸದ್ದು ಮಾಡುತ್ತಿವೆ.

    ರಂಭೆ, ಊರ್ವಶಿ ಹಾಗೂ ಮೇನಕೆಯರನ್ನು ನಾಚಿಸುವಂತಹ ಬೆಡಗಿಯರು ಬೆಳಗಾವಿಗೆ ಬಂದಿಳಿದಿದ್ದಾರೆ ಎಂದು ವಾಟ್ಸಾಪ್ ಮೆಸೇಜ್ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿಂದತೆ ಕೆಲ ಯುವತಿಯರ ಮೊಬೈಲ್ ನಂಬರ್, ಅಡ್ರೆಸ್ ಸಮೇತ ಫೋಟೋಗಳು ಫುಲ್ ವೈರಲ್ ಮಾಡಿದ್ದಾರೆ. ಇದು ಕುಂದಾನಗರ ಜನರ ಗಂಡಸರು ಹಾಗೂ ಅಧಿವೇಶನದ ಭದ್ರತೆಯಲ್ಲಿರುವ ಪೊಲೀಸರಿಗೆ ತಲೆಕಡೆಸಿದೆ.

    ಈ ಯುವತಿಯರ ಮಾರಾಟಕ್ಕಿದ್ದಾರೆಂದು ಅವರ ದರ ಪಟ್ಟಿಯನ್ನ ವಾಟ್ಸಾಪ್‍ನಲ್ಲಿ ಹರಿಬಿಟ್ಟಿದ್ದಾರೆ
    * ಒಂದರಿಂದ ಒಂದೂವರೆ ಗಂಟೆಗೆ – 10ಸಾವಿರ ರೂ
    * ಮೂರರಿಂದ ಮೂರೂವರೆ ಗಂಟೆಗೆ – 20 ಸಾವಿರ ರೂ
    * 6 ರಿಂದ 7 ಗಂಟೆಗಳ ಕಾಲ – 30 ಸಾವಿರ ರೂ
    * 7 ರಿಂದ 8 ಗಂಟೆಗಳ ಕಾಲ – 40 ಸಾವಿರ ರೂ
    * ಯುವತಿ 24 ಗಂಟೆಗಳ ಕಾಲ ನಿಮ್ಮ ಜೊತೆಯಲ್ಲೇ ಇರಬೇಕಂದರೆ 60 ಸಾವಿರ ರೂಪಾಯಿ ಕೊಡಬೇಕಂತೆ ಅಂತ ಹರಿದಾಡುತ್ತಿದೆ.

    ಇದರಲ್ಲಿರುವ ಫೋನ್ ನಂಬರ್ ಗೆ ಕಾಲ್ ಮಾಡಿದರೆ ಅವರು ರಿಸೀವ್ ಮಾಡುತ್ತಿಲ್ಲ. ಇದರಲ್ಲಿರುವ ಯುವತಿಯರ ಫೋಟೋ ಅಸಲಿಯೋ, ನಕಲಿಯೋ ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದು, ಒಳ್ಳೆ ಕುಟುಂಬದ ಯುವತಿಯರು ಯಾವುದಾದರೂ ಇದ್ದು, ಬೇಕಂತಲೇ ಕೆಲವರು ಇವುಗಳನ್ನು ಹರಿಬಿಟ್ಟಿದ್ದಾರೇನೋ ಎಂಬ ಅನುಮಾನ ಮೂಡುತ್ತದೆ. ಆದರೆ ಈ ರೀತಿ ನೂರಾರು ಫೋಟೋಗಳು ಹರಿಬಿಟ್ಟಿರುವುದು ಪೊಲೀಸರ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ತಾಯಿ ಜೊತೆ ಸೆಕ್ಸ್ ಆಗಿದೆ, ಈಗ ನಿನ್ನ ಸರದಿ, ನಿನ್ನನ್ನು ನಾನು ಟ್ರೈ ಮಾಡ್ಬೇಕು’

    `ತಾಯಿ ಜೊತೆ ಸೆಕ್ಸ್ ಆಗಿದೆ, ಈಗ ನಿನ್ನ ಸರದಿ, ನಿನ್ನನ್ನು ನಾನು ಟ್ರೈ ಮಾಡ್ಬೇಕು’

    – ಕಾಮುಕನ ವಿರುದ್ಧ ದೂರು ದಾಖಲಿಸಿಕೊಳ್ಳದ ಪೊಲೀಸರು
    – ಪೊಲೀಸರಿಂದ ನಂಬರ್ ಬದಲಾಯಿಸು ಎಂದು ಬಿಟ್ಟಿ ಸಲಹೆ

    ಬೆಂಗಳೂರು: ವಾಟ್ಸಪ್ ಮೂಲಕ ಯುವತಿಗೆ ನಿನ್ನ ತಾಯಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದೇನೆ, ಈಗ ನಿನ್ನ ಸರದಿ. ನಿನ್ನನ್ನು ನಾನು ಟ್ರೈ ಮಾಡಬೇಕು ಎಂದು ಅಶ್ಲೀಲವಾಗಿ ಮೆಸೇಜ್ ರವಾನಿಸುತ್ತಿದ್ದ ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಮೊಬೈಲ್ ನಂಬರ್ ಬದಲಾಯಿಸುವಂತೆ ಸಲಹೆ ನೀಡಿದ್ದಾರೆ.

    ಲೈಂಗಿಕ ದೌರ್ಜನ್ಯ ದೂರು ಕೊಡಲು ಹೋದರೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸದೇ ಮೆಸೇಜ್ ಬಂದರೆ ನಿರ್ಲಕ್ಷ್ಯ ಮಾಡಿ ಅಥವಾ ನಂಬರ್ ಬದಲಾಯಿಸುವಂತೆ ಸಲಹೆ ನೀಡಿದ್ದಾರೆ. ಇದು ಬೆಂಗಳೂರು ಪೊಲೀಸರು ನೀಡುವ ನ್ಯಾಯದ ಪರಿಯೆಂದು ದೌರ್ಜನ್ಯಕ್ಕೆ ಒಳಗಾದ ಯುವತಿಯ ಪರವಾಗಿ ಸ್ನೇಹಿತೆಯೊಬ್ಬರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯುವತಿ ನಂಬರಿಗೆ ವೇಶ್ಯೆಯೆಂದು ಹಾಕಿ ಅಶ್ಲೀಲ ಸಂದೇಶ ಹಾಗೂ ಚಿತ್ರಗಳನ್ನು ಯುವಕರು ಹಾಕುತ್ತಿದ್ದರು. ಈ ಬಗ್ಗೆ ದೂರು ನೀಡಲು ಹೋದ ಯುವತಿಗೆ ಪೊಲೀಸರು ಇಂತಹ ಬಿಟ್ಟಿ ಸಲಹೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

    https://twitter.com/ChaudhuriPooja/status/1051747241528975360

    ಸ್ನೇಹಿತೆ ಹೇಳಿದ್ದು ಏನು?
    ನನಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ. ಅಲ್ಲದೇ ನಿನ್ನ ತಾಯಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದೇನೆ, ಈಗ ನಿನ್ನ ಸರದಿ. ನಿನ್ನನ್ನು ನಾನು ಟ್ರೈ ಮಾಡಬೇಕು ಎಂದು ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದಾರೆ ಅಂತಾ ಪೊಲೀಸರಿಗೆ ದೂರು ನೀಡಲು ಸ್ನೇಹಿತೆ ಹೋಗಿದ್ದಾಳೆ. ಈ ವೇಳೆ ಪೊಲೀಸರು ಆಕೆಯನ್ನು ಬೈದು ಫೋನ್ ನಂಬರ್ ಚೇಂಚ್ ಮಾಡು ಇಲ್ಲದಿದ್ದರೆ ಆ ಮೆಸೇಜ್ ನಿರ್ಲಕ್ಷ್ಯಿಸು ಎಂದು ಸಲಹೆ ನೀಡಿದ್ದಾರೆ.

    ಆ ವ್ಯಕ್ತಿ ನನ್ನ ಸ್ನೇಹಿತೆಯ ಸಹದ್ಯೋಗಿಗಳಿಗೂ ಇಂತಹ ಅಶ್ಲೀಲ ಮೆಸೇಜ್‍ಗಳನ್ನು ಮಾಡುತ್ತಾನೆ. ನಾನು ನನ್ನ ಸ್ನೇಹಿತೆಗೆ ಬಂದ ಮೆಸೇಜ್ ಸ್ಕ್ರೀನ್ ಶಾಟ್ ಹಾಕಿದ್ದೇನೆ. ಆಕೆಯ ಸುರಕ್ಷಿತೆಗಾಗಿ ನಾನು ಆಕೆಯ ಮುಖ ಹಾಗೂ ನಂಬರ್ ಅನ್ನು ಬ್ಲರ್ ಮಾಡಿದ್ದೇನೆ. ನನ್ನ ಸ್ನೇಹಿತೆ ಇದುವರೆಗೂ 60 ಫೋನ್ ನಂಬರ್ ಬ್ಲಾಕ್ ಮಾಡಿದ್ದಾಳೆ. ಕೆಲವರು ಫೇಕ್ ಐಡಿ ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕೆಗೆ ಬೆದರಿಕೆ ಹಾಕುತ್ತಾರೆ. ಈ ಪ್ರಕರಣವನ್ನು ನಿಲ್ಲಿಸುವುದ್ದಕ್ಕೆ ಆತ 40 ಸಾವಿರ ರೂ. ಬೇಡಿಕೆಯಿಟ್ಟಿದ್ದಾನೆ. ಸದ್ಯ ನನ್ನ ಸ್ನೇಹಿತೆ ಬ್ಲಾಕ್ ಮಾಡಿದ ಆ 60 ಫೋನ್ ನಂಬರ್ ಅನ್ನು ಪೊಲೀಸರಿಗೆ ನೀಡಿದ್ದಾಳೆ.

    ಸದ್ಯ ಬೆಂಗಳೂರು ಸಿಟಿ ಪೊಲೀಸರು ಸ್ನೇಹಿತೆಯ ಟ್ವೀಟ್ ಗೆ ರೀ-ಟ್ವೀಟ್ ಮಾಡಿ ಆ ಪೊಲೀಸ್ ಠಾಣೆಯ ಮಾಹಿತಿ ಕೇಳಿದ್ದಾರೆ. ಆಗ ಯುವತಿ ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯೆಂದು ಟ್ವೀಟ್ ಮಾಡಿ ಉತ್ತರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳ ಮದುವೆ

    ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳ ಮದುವೆ

    ಚಿತ್ರದುರ್ಗ: ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳು ಮದುವೆಯಾಗಿರೋ ವಿಡಿಯೋವನ್ನು ವಾಟ್ಸಪ್‍ಗಳಲ್ಲಿ ಹರಿಬಿಟ್ಟಿರೋ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಖಂಡೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನವೀನ್ ಮತ್ತು ವಿದ್ಯಾ(ಹೆಸರು ಬದಲಾಯಿಸಲಾಗಿದೆ) ಪ್ರೇಮಿಗಳಿಬ್ಬರು ವಯಸ್ಕರಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಆ ಪ್ರೇಮಿಗಳು ಮನೆ ಬಿಟ್ಟು ಹೋಗಿ ಮದುವೆಯಾದರು.

    ನಮ್ಮನ್ನು ಹುಡುಕಬೇಡಿ, ನನ್ನ ಹುಡುಗ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅಂತ ಯುವತಿ ವಿಡಿಯೋ ಮಾಡಿ ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಅಲ್ಲದೇ ಈ ಪ್ರೇಮಿಗಳಿಬ್ಬರು ಒಂದೇ ಗ್ರಾಮದವರಾಗಿದ್ದು, ನವೀನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಶುರುವಾದ ಪ್ರೀತಿಗೆ ಯುವತಿ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಮನೆ ಬಿಟ್ಟು ಹೋಗಿ ವಿವಾಹವಾಗಿದ್ದೇವೆಂದು ಹೇಳಿಕೊಂಡಿರೋ ವಿಡಿಯೋ ಗ್ರಾಮಸ್ಥರ ವಾಟ್ಸಪ್ ಗ್ರೂಪ್ ಗಳಿಗೆ ಹರಿದಾಡುತ್ತಿದೆ.

    ಸದ್ಯ ಈ ಸಂಬಂಧ ಯುವತಿಯ ಪೋಷಕರು ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ.

  • ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್

    ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್

    ಉಡುಪಿ: ಶಿರೂರು ಸ್ವಾಮೀಜಿ ಅವರು ತುಳುವಿನಲ್ಲಿ ಮಾತನಾಡಿರುವ ವಾಟ್ಸಪ್ ವಾಯ್ಸ್ ನೋಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಜ್ಜರಿಗೆ ಒಂದು ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್ ಆಗುತ್ತೆ. 50 ಲಕ್ಷ ಪಲಿಮಾರು ಸ್ವಾಮೀಜಿಗೆ. 50 ಲಕ್ಷ ಅವರಿಗೆ ಕೊಡಬೇಕಂತೆ ಎಂದು ಮಾತನಾಡಿದ್ದಾರೆ. ಸೋದೆ ಸ್ವಾಮೀಜಿ ವಿಶ್ವವಲ್ಲಭ ತೀರ್ಥಶ್ರಿಗಳ ಹೆಸರು ಪ್ರಸ್ತಾಪ ಮಾಡಿದ್ದಾರೆ.

    ಅವರ ಎಂಟು ಸಾವಿರ ಭಕ್ತರಿಂದ ಪ್ರತಿ ಮನೆಯಿಂದ ಒಂದು ಪವನ್ ಚಿನ್ನ ಒಟ್ಟುಗೂಡಿಸ್ತಾರಂತೆ. ಆದ್ರೆ ಆಡಿಯೋದಲ್ಲಿ ಯಾವುದೂ ಸ್ಪಷ್ಟ ಮಾಹಿತಿ ಇಲ್ಲ. ಯಾವ ಸಂದರ್ಭದಲ್ಲಿ ಯಾರಿಗೆ ಈ ಆಡಿಯೋ ಕಳುಹಿಸಿದ್ದಾರೋ ಎಂಬ ಬಗ್ಗೆ ಮಾಹಿತಿಯಿಲ್ಲ.

    ಪಟ್ಟದ ದೇವರನ್ನು ಮರಳಿ ನೀಡುವ ವಿಚಾರದಲ್ಲಿ ವ್ಯವಹಾರ ಮಾತುಕತೆ ನಡೆದಿತ್ತಾ? ಅಥವಾ ಯಾವುದೊ ಮಹತ್ವದ ಯೋಜನೆಗೆ ಹಣ ಸಂಗ್ರಹಿಸುವ ಬಗ್ಗೆ ನಡೆದ ಮಾತುಕತೆಯೋ ಸ್ಪಷ್ಟವಾಗಿಲ್ಲ. ಆಡಿಯೊದ ಮೂಲ ತನಿಖೆ ಮಾಡಿದ್ರೆ ಸಾಕಷ್ಟು ವಿಚಾರ ಬೆಳಕಿಗೆ ಬರುವ ಸಾಧ್ಯತೆ ಇದೆ.

    ಶಿರೂರು ಶ್ರೀ ವಾಟ್ಸಾಪ್ ವಾಯ್ಸ್ ನೋಟ್:

    ಆಗ ನೋಡಿದೆ ನಿನ್ನ ವಾಟ್ಸಪ್…
    ಭಾರಿ ಖುಷಿ ಆಯ್ತು.
    ಅಜ್ಜರದ್ದು ಒಂದು ಡಿಮ್ಯಾಂಡ್ ಉಂಟು ಮಾರಾಯಾ.
    ಅವರಿಗೆ ಒಂದು ಕೋಟಿ ಕೊಡಬೇಕಂತೆ.
    ಐವತ್ತು ಲಕ್ಷ ಪಲಿಮಾರು ಸ್ವಾಮೀಜಿಗೆ ಕೊಡಬೇಕಂತೆ.
    ಐವತ್ತು ಲಕ್ಷ ಅವರಿಗೆ (ಪೇಜಾವರ?) ಬೇಕಂತೆ.
    ಆಮೇಲೆ ಈ ಮ್ಯಾಟರ್ ಫಿನೀಷ್ ಅಂತೆ.

    ಆಮೇಲೆ ಏನೂಂತ ಅಂದ್ರೆ… ಕರ್ನಾಟಕದಲ್ಲಿ ಸೋದೆ ಮಠದ ಶಿಷ್ಯಂದಿರ ಒಟ್ಟು ಎಂಟು ಸಾವಿರ ಮನೆ ಉಂಟಂತೆ. ಎಂಟು ಸಾವಿರ ಮನೆಗೆ ಒಂದೊಂದು ಮನೆಯಿಂದ ಒಂದೊಂದು ಪವನ್ ಚಿನ್ನ ವ್ಯವಸ್ಥೆ ಮಾಡಿ ಕೊಡುತ್ತೇನೆ ಅಂತ ಹೇಳಿದ್ದಾನೆ. ವಿಶ್ವವಲ್ಲಭ (ಸೋದೆ ಮಠಾಧೀಶರು) ಹೇಳಿದ್ದಾನೆ. ಅದನ್ನು ಇವರು ಬೇಡುತ್ತಿದ್ದಾರೆ.

    ವಿಷಯ ಇವತ್ತು ಬೆಳಗ್ಗೆ ಗೊತ್ತಾಯ್ತು. ಇಷ್ಟೇ ವಿಷಯ, ಎಲ್ಲರಿಗೂ ತಿಳಿಸು ಆಯ್ತಾ ಅಂತ ಹೇಳಿದ್ದಾರೆ.

  • ವಾಟ್ಸಾಪ್‍ಗೆ ಫೋಟೋ ಕಳಿಸುವಂತೆ ವಿದ್ಯಾರ್ಥಿನಿಗೆ ಕಾಲೇಜಿನ ಕಾರ್ಯದರ್ಶಿಯಿಂದ ಕಿರುಕುಳ!

    ವಾಟ್ಸಾಪ್‍ಗೆ ಫೋಟೋ ಕಳಿಸುವಂತೆ ವಿದ್ಯಾರ್ಥಿನಿಗೆ ಕಾಲೇಜಿನ ಕಾರ್ಯದರ್ಶಿಯಿಂದ ಕಿರುಕುಳ!

    ಹಾಸನ: ವಾಟ್ಸಾಪ್ ಗೆ ತನ್ನ ಫೋಟೋ ಕಳಿಸುವಂತೆ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಕಾಲೇಜಿನ ಕಾರ್ಯದರ್ಶಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಲ್ಲದೆ ಶಾಲೆಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಬೇಲೂರು ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ವಿಶ್ವ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಯಶಸ್ವಿ ಅದೇ ಕಾಲೇಜಿನಲ್ಲಿ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಗೆ ಪ್ರತಿ ನಿತ್ಯ ಫೋಟೋ ಕಳಿಸುವಂತೆ ಕಿರುಕುಳ ನೀಡುತ್ತಿದ್ದಾನೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಕಾಲೇಜಿಗೆ ಆಗಮಿಸಿದ ಪೋಷಕರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.

    ಎಲ್ಲರ ಎದುರು ಯಶಸ್ವಿ ತನ್ನ ತಪ್ಪನ್ನು ಒಪ್ಪಿಕೊಂಡು ವಿದ್ಯಾರ್ಥಿನಿ ಬಳಿ ಕ್ಷಮೆಯಾಚಿಸಿದ್ದಾನೆ. ಆದರೆ ಮರು ದಿನ ವಿದ್ಯಾರ್ಥಿನಿ ಶಾಲೆಗೆ ಬರುತ್ತಿದ್ದ ವೇಳೆ ರಸ್ತೆ ಮಧ್ಯೆ ಅಡ್ಡಗಟ್ಟಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದು, ಹೆದರಿದ ಬಾಲಕಿ ಮತ್ತೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ.

    ಕಾಲೇಜಿಗೆ ಆಗಮಿಸಿದ ಪೋಷಕರು ಕಾಲೇಜಿನ ಪ್ರಾಂಶುಪಾಲ ಹಾಗೂ ಆಡಳಿತ ಮಂಡಳಿ ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಯಶಸ್ವಿಯನ್ನು ಬಂಧಿಸಿ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

    ಸದ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಯಶಸ್ವಿ ಕಾಲೇಜಿನ ಮಾಲೀಕ ಹಾಗೂ ವೈಡಿಡಿ ಕಾಲೇಜಿನ ಪ್ರಾಂಶುಪಾಲ ಜಯಣ್ಣಗೌಡ ಪುತ್ರ. ಸದ್ಯ ಬೇಲೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ.

  • ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಬಿತ್ತು ಧರ್ಮದೇಟು

    ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಬಿತ್ತು ಧರ್ಮದೇಟು

    ದಾವಣಗೆರೆ: ವಾಟ್ಸಾಪ್ ಹಾಗೂ ಫೇಸ್ ಬುಕ್ ಗಳಲ್ಲಿ ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಧರ್ಮದೇಟು ಬಿದ್ದಿರುವ ಘಟನೆ ದಾವಣಗೆರೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ನವ್ಯಜ್ಞಾನ ಜ್ಯೋತಿ ಸಂಸ್ಥೆಯ ಯುವತಿಗೆ ಹಲವು ದಿನಗಳಿಂದ ಯುವಕನೊಬ್ಬ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದನು. ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮದ ಯುವಕ ಪ್ರತಿನಿತ್ಯ ಫೇಸ್‍ಬುಕ್, ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸುತ್ತಿದ್ದ ಎಂದು ಗುರುತಿಸಲಾಗಿದೆ. ಯುವಕ ಪಟ್ಟಣದ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

    ಯುವತಿಯರಿಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಕಲ್ಪಿಸಿ ಸಂದೇಶ ರವಾನಿಸುತ್ತಿದ್ದನು. ಇದರಿಂದ ಮನನೊಂದು ಯುವತಿಯರು ಆ ಯುವಕನನ್ನು ಬುದ್ಧಿವಂತಿಕೆಯಿಂದ ಜಗಳೂರಿಗೆ ಕರೆಸಿ ಸರಿಯಾಗಿ ಕಜ್ಜಾಯ ಕೊಟ್ಟಿದ್ದಾರೆ. ಯುವಕನಿಗೆ ಥಳಿಸುತ್ತಿರುವ ಯುವತಿಯರ ವಿಡಿಯೋ ಇದೀಗ ವೈರಲ್ ಆಗಿದೆ.

    ಸದ್ಯ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.

  • ಚಾಟಿಂಗ್ ಮಾಡ್ಬೇಡ ಅಂದಿದ್ದಕ್ಕೆ ಮನೆ ಬಿಟ್ಟು ಹೋದ ಎಂಜಿನಿಯರಿಂಗ್ ವಿದ್ಯಾರ್ಥಿ!

    ಚಾಟಿಂಗ್ ಮಾಡ್ಬೇಡ ಅಂದಿದ್ದಕ್ಕೆ ಮನೆ ಬಿಟ್ಟು ಹೋದ ಎಂಜಿನಿಯರಿಂಗ್ ವಿದ್ಯಾರ್ಥಿ!

    ಬೆಂಗಳೂರು: ವಾಟ್ಸಾಪ್ ಚಾಟಿಂಗ್ ಬಿಟ್ಟು ಓದಿಕೋ ಎಂದು ಹೇಳಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿದ್ದಾನೆ.

    ಪ್ರಶಾಂತ್ ಗೌಡ ಮನೆ ಬಿಟ್ಟು ಹೋದ ಯುವಕ. ನಗರದ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ದ್ವಿತೀಯ ವರ್ಷ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಶಾಂತ್, ಬೆಂಗಳೂರಿನ ವಿಜಯನಗರ ತಮ್ಮ ಮಾವನ ಮನೆಯಲ್ಲಿ ವಾಸವಿದ್ದನು.

    ಇಂಟರ್ನಲ್ ಎಕ್ಸಾಂ ಇದೆ ವಾಟ್ಸಾಪ್ ಚಾಟಿಂಗ್ ಬಿಟ್ಟು ಓದಿಕೋ ಎಂದು ಮಾವ ಸ್ವಾಮಿ ಬುದ್ಧಿಹೇಳಿದ್ದಕ್ಕೆ ಪ್ರಶಾಂತ್ ಮರುದಿನವೇ ಹಿರಿಯೂರಿಗೆ ಬರುವುದಾಗಿ ತಂದೆ ತಾಯಿಗೆ ಫೋನ್ ಮಾಡಿ ತಿಳಿಸಿದ್ದಾನೆ. ಬಳಿಕ ತನ್ನ ಫೇಸ್ ಬುಕ್ ಅಕೌಂಟ್, ಗೂಗಲ್ ಅಕೌಂಟ್, ವಾಟ್ಸಾಪ್, ಗ್ಯಾಲರಿಯಲ್ಲಿದ್ದ ಫೊಟೋಗಳನ್ನ ಡಿಲೀಟ್ ಮಾಡಿ ಮನೆ ಬಿಟ್ಟು ಹೋಗಿದ್ದಾನೆ.

    ನಾಗರಾಜ್, ಹಾಗೂ ಚಿಂತಾಮಣಿ ದಂಪತಿಯ ಒಬ್ಬನೇ ಮಗನಾಗಿದ್ದ ಪ್ರಶಾಂತ್ ಹತ್ತು ದಿನದಿಂದ ಕಣ್ಮರೆಯಾಗಿದ್ದು. ಪ್ರಶಾಂತ್ ತಂದೆ-ತಾಯಿ ಆತನಿಗೆ ಕಣ್ಣೀರಿಟ್ಟು ಪರಿತಪಿಸುತ್ತಿದ್ದಾರೆ.

    ಪ್ರಶಾಂತ್ ತಂದೆ ತಾಯಿ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಗನಿಗಾಗಿ ಹುಡುಕಾಡುತ್ತಿದ್ದಾರೆ. ಮಗ ಬಾರದಿದ್ದರೆ ನಾನು ಬದುಕುವುದಿಲ್ಲ ಎಂದು ಪ್ರಶಾಂತ್ ತಾಯಿ ಚಿಂತಾಮಣಿ ಕಣ್ಣೀರು ಹಾಕುತ್ತಿದ್ದಾರೆ.

    ಚೆನ್ನಾಗಿ ಓದುತ್ತಿದ್ದ ಪ್ರಶಾಂತ ಹೀಗೆ ಕಣ್ಮರೆಯಾಗಿರುವುದು ಹಲವು ಅನುಮಾನಕ್ಕೆ ಕಾರಣ ವಾಗಿದೆ. ಕಾಲೇಜಿನಲ್ಲಿ ವಿಚಾರಿಸಿದರೆ ಒಳ್ಳೇ ಹುಡುಗ ಎಂದು ಹೇಳುತ್ತಾರೆ. ಸ್ನೇಹಿತರ ಬಳಗದಲ್ಲೂ ಒಳ್ಳೆಯ ಹುಡುಗ ಎನಿಸಿಕೊಂಡಿದ್ದ ಎಂದು ಪ್ರಶಾಂತ್ ತಾಯಿ ತಿಳಿಸಿದ್ದಾರೆ. ಈ ಬಗ್ಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

  • ಫೇಸ್‍ಬುಕ್, ವಾಟ್ಸಾಪ್ ನಲ್ಲಿ ವಾರ್- ನಾಯಕರನ್ನು ಪರಸ್ಪರ ಹೀಯಾಳಿಸಿದ್ದಕ್ಕೆ ಜೆಡಿಎಸ್ ಸದಸ್ಯರ ಮೇಲೆ `ಕೈ’ ಹಲ್ಲೆ

    ಫೇಸ್‍ಬುಕ್, ವಾಟ್ಸಾಪ್ ನಲ್ಲಿ ವಾರ್- ನಾಯಕರನ್ನು ಪರಸ್ಪರ ಹೀಯಾಳಿಸಿದ್ದಕ್ಕೆ ಜೆಡಿಎಸ್ ಸದಸ್ಯರ ಮೇಲೆ `ಕೈ’ ಹಲ್ಲೆ

    ರಾಮನಗರ: ಫೇಸ್‍ಬುಕ್ ಹಾಗೂ ವಾಟ್ಸಾಪ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಮಾಗಡಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪುರಸಭೆ ಸದಸ್ಯರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

    ಕಳೆದ ಮೂರು ತಿಂಗಳಿನಿಂದ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ಹಾಗೂ ಜೆಡಿಎಸ್ ನ ಎ. ಮಂಜುನಾಥ್ ಅವರು ಪಕ್ಷಾಂತರ ಹಾಗೂ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಾರ್ ಶುರುವಾಗಿದೆ. ತಮ್ಮ ನಾಯಕರುಗಳ ಪರವಾಗಿ ಪೋಸ್ಟ್ ಮಾಡಿ ವಿರೋಧಿಗಳನ್ನ ಜರಿದಿದ್ದಾರೆ.

    ಈ ವಿಚಾರವಾಗಿ ಮಂಗಳವಾರ ರಾತ್ರಿ ಮಾಗಡಿ ಪುರಸಭೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮಾತಿನ ಚಕಮಕಿ ನಡೆಸಿ ಕೈಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ಬೆಂಬಲಿಗರಾದ ಪುರಸಭೆಯ ಮಾಜಿ ಅದ್ಯಕ್ಷ ಪುರುಷೋತ್ತಮ ಹಾಗೂ ಅವರ ಸಹವರ್ತಿಗಳು ಜೆಡಿಎಸ್ ನ ಬಾಲರಘು, ಜವರೇಗೌಡ, ಮುನಿರಾಜು ನಡುವೆ ಮಾತಿನ ಚಕಮಕಿ ನಡೆಸಿ ಹಲ್ಲೆ ಮಾಡಿದ್ದಾರೆ.

    ಘಟನೆ ಸಂಬಂಧ ಎರಡು ಬಣದವರು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ‘ನಮ್ಮುಡುಗ್ರು’ ವಾಟ್ಸಪ್ ಗ್ರೂಪಿನಿಂದ ಮೂಡಿಗೆರೆಯ ದೇವರಮನೆ ಗುಡ್ಡ ಕ್ಲೀನ್ ಆಯ್ತು!

    ‘ನಮ್ಮುಡುಗ್ರು’ ವಾಟ್ಸಪ್ ಗ್ರೂಪಿನಿಂದ ಮೂಡಿಗೆರೆಯ ದೇವರಮನೆ ಗುಡ್ಡ ಕ್ಲೀನ್ ಆಯ್ತು!

    ಚಿಕ್ಕಮಗಳೂರು: ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಇಂದು ಯುವ ಜನತೆ ಹಾಳಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ನಡುವೆ ಈ ಮಾಧ್ಯಮಗಳನ್ನು ಬಳಸಿ ಚಿಕ್ಕಮಗಳೂರಿನ ಯುವಕರು ಸಮಾಜ ಮೆಚ್ಚುವ ಕೆಲಸ ಮಾಡಿದ್ದಾರೆ.

    ಹೌದು. 4 ವರ್ಷದ ಹಿಂದೆ ನಿವಾಸಿ ದಿವಿನ್ ಎಂಬವರು ಮಾಡಿದ ನಮ್ಮುಡುಗ್ರು ಗ್ರೂಪ್ ಇಂದು ಒಂದು ಗುಡ್ಡವನ್ನೇ ಕ್ಲೀನ್ ಮಾಡಿದೆ.

    ಪ್ರವಾಸಿಗರಿಂದ ಹಾಳಾದ ಮೂಡಿಗೆರೆಯ ದೇವರಮನೆ ಗುಡ್ಡದ ಫೋಟೋವನ್ನ ಸದಸ್ಯರೊಬ್ಬರು ಗ್ರೂಪ್‍ನಲ್ಲಿ ಹಾಕಿದ್ದರು. ಈ ಫೋಟೋವನ್ನು ನೋಡಿ ಕೂಡಲೇ ಕಾರ್ಯಪ್ರವೃತರಾದ ಸದಸ್ಯರು ನಾವೇ ಕ್ಲೀನ್ ಮಾಡೋಣ ಎಂದು ನಿರ್ಧರಿಸಿ ಜನವರಿ 14ರ ಮಕರ ಸಂಕ್ರಾಂತಿ ಹಬ್ಬದ ದಿನದಂದು ಎಲ್ಲರೂ ಒಂದುಗೂಡಿ ದೇವರಮನೆ ಗುಡ್ಡವನ್ನ ಕ್ಲೀನ್ ಮಾಡಿದ್ದಾರೆ.

    ಗುಡ್ಡವನ್ನು ಕ್ಲೀನ್ ಮಾಡಿದ ಸದಸ್ಯರೇ ನಾಮಫಲಕವನ್ನು ಹಾಕಿದ್ದಾರೆ. ಇದು ನಿಮ್ಮ ಪ್ರಕೃತಿ, ಒಮ್ಮೆ ಹಾಳಾದರೆ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ಇದನ್ನ ಉಳಿಸಿ-ಬೆಳೆಸುವ ಮನಸ್ಥಿತಿಯವರು ಮಾತ್ರ ಬನ್ನಿ ಎಂದು ಗ್ರೂಪ್ ಅಡ್ಮಿನ್ ದಿವಿನ್ ನಾಮಫಲಕ ಹಾಕಿದ್ದಾರೆ.

    ಮತ್ತೊಂದು ವಿಷಯ ಏನೆಂದರೆ ಈ ಗ್ರೂಪಿನ ಬಹುತೇಕರು ಒಬ್ಬರಿಗೊಬ್ಬರು ಪರಿಚಯವಿಲ್ಲ. ಮುಖವನ್ನೂ ನೋಡಿಲ್ಲ. ಆದರು ಗ್ರೂಪ್‍ನಲ್ಲಿ ಬಂದ ಒಂದು ಮೇಸೆಜ್ ಹಾಗೂ ಫೋಟೋಗೆ ಎಲ್ಲರೂ ಸ್ಪಂದಿಸಿದ್ದಾರೆ. ಹಬ್ಬ ಎನ್ನುವುದನ್ನು ಮರೆತು 250ಕ್ಕೂ ಅಧಿಕ ಗ್ರೂಪಿನ ಸದಸ್ಯರು ಎಲ್ಲರೂ ಒಂದೆಡೆ ಸೇರಿ ದೇವರಮನೆ ಗುಡ್ಡವನ್ನ ಸ್ವಚ್ಛ ಮಾಡಿದ್ದಾರೆ. ಸ್ವಚ್ಛತಾ ಕಾರ್ಯದ ವೇಳೆ ಎರಡೂ ಟ್ರ್ಯಾಕ್ಟರ್ ಬಿಯರ್ ಬಾಟಲಿ, ಎರಡು ಟ್ರ್ಯಾಕ್ಟರ್ ಪ್ಲಾಸ್ಟಿಕ್ ಸಿಕ್ಕಿದೆ.

    ಎಲ್ಲ ರಾಜಕೀಯ ಪಕ್ಷದ ಸದಸ್ಯರು ಈ ಗ್ರೂಪಿನಲ್ಲಿದ್ದು ಎಲ್ಲರೂ ರಾಜಕೀಯವನ್ನು ಬಿಟ್ಟು ಈ ಒಳ್ಳೆ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ವಿಶೇಷ. ವಾಟ್ಸಪ್ ಹಾಗೂ ಫೇಸ್‍ಬುಕ್‍ಗಳು ಬರೀ ಮನೋರಂಜನೆಗಷ್ಟೆ ಇಲ್ಲ. ಇದರಿಂದಲೂ ಒಳ್ಳೆ ಕೆಲಸ ಆಗುತ್ತೆ ಅನ್ನೋದಕ್ಕೆ ಮಲೆನಾಡಿನ ಈ ಗ್ರೂಪ್ ಸಾಕ್ಷಿಯಾಗಿದೆ. ವಾಟ್ಸಪ್‍ನಿಂದ ಆರಂಭವಾದ ಒಂದು ಗ್ರೂಪ್ ಈ ಪ್ರಮಾಣದ ಕೆಲಸ-ಕಾರ್ಯ ಮಾಡಿರೋದಕ್ಕೆ ಮಲೆನಾಡಿಗರು ಶಹಬ್ಬಾಸ್ ಎಂದಿದ್ದಾರೆ.

  • ಎಂಜಿನಿಯರ್ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡು ಬೇರೊಬ್ಬನ ಮದುವೆಯಾದ್ಳು!

    ಎಂಜಿನಿಯರ್ ಜೊತೆ ಎಂಗೇಜ್ಮೆಂಟ್ ಮಾಡ್ಕೊಂಡು ಬೇರೊಬ್ಬನ ಮದುವೆಯಾದ್ಳು!

    ಹಾಸನ: ಎಂಜಿನಿಯರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೊಬ್ಬಳು ಮತ್ತೊಬ್ಬನ ಜೊತೆ ಮದುವೆಯಾಗಿರೋ ಘಟನೆ ಹಾಸನದಲ್ಲಿ ನಡೆದಿದೆ.

    ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯಲ್ಲಿ ಈ ಘಟನೆ ನಡೆದಿದ್ದು, ಯುವತಿ ಮದರಂಗಿ ಶಾಸ್ತ್ರ ಮುಗಿಸಿಕೊಂಡು ಬಳಿಕ ಶನಿವಾರ ಮುಂಜಾನೆ ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್ ಆಗಿದ್ದಳು.

    ಯುವತಿಗೆ ಬೆಂಗಳೂರು ಮೂಲದ ಎಂಜಿನಿಯರ್ ಜತೆ ಎರಡು ತಿಂಗಳ ಹಿಂದೆ ಆಕೆಗೆ ನಿಶ್ಚಿತಾರ್ಥವಾಗಿತ್ತು. ಆದ್ರೆ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ವರಿಸುವ ಮುನ್ನವೇ ಯುವತಿ ಮಧ್ಯಪ್ರದೇಶದ ಇಂದೋರ್ ಯುವಕನ ಜೊತೆ ನವೆಂಬರ್ 11 ಮದುವೆಯಾಗಿದ್ದಾಳೆ. ಆದರೆ ಈ ವಿಷಯವನ್ನು ಯುವತಿ ಬೇರೆ ಯಾರಿಗೂ ತಿಳಿಸಿರಲಿಲ್ಲ ಎಂದು ತಿಳಿದುಬಂದಿದೆ.

    ಘಟನೆಯ ಹಿನ್ನೆಲೆಯಲ್ಲಿ ಇಂದು ಶನಿವಾರ ಸಂತೆಯಲ್ಲಿ ನಡೆಯಬೇಕಿದ್ದ ಮದುವೆ ರದ್ದಾಗಿದೆ. ವರನಿಗೆ ವಾಟ್ಸಪ್ ನಲ್ಲಿ ಮದುವೆ ಫೋಟೋ ಹಾಗೂ ಮದುವೆ ಪ್ರಮಾಣ ಪತ್ರವನ್ನು ಯುವತಿ ಕಳುಹಿಸಿದ್ದಾಳೆ ಎನ್ನಲಾಗಿದೆ.