Tag: ವಾಟ್ಸಾಪ್

  • ಮಹಿಳೆಯರಿಗೆ ನಗ್ನ ವಿಡಿಯೋ ಕಾಲ್- ಬರೋಬ್ಬರಿ 500 ಮಂದಿಗೆ ಕರೆ

    ಮಹಿಳೆಯರಿಗೆ ನಗ್ನ ವಿಡಿಯೋ ಕಾಲ್- ಬರೋಬ್ಬರಿ 500 ಮಂದಿಗೆ ಕರೆ

    – ಕೇವಲ 5 ತರಗತಿವರೆಗೆ ಓದಿದ್ದ ಆರೋಪಿ
    – ಪ್ರತ್ಯೇಕ ಸಾಫ್ಟ್‌ವೇರ್ ಬಳಸಿ ವಿಡಿಯೋ ಕಾಲ್

    ನವದೆಹಲಿ: ಆಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಮಹಿಳೆಯರಿಗೆ ಹಿಂಸೆ ನೀಡುತ್ತಿದ್ದ ಆರೋಪದಲ್ಲಿ ದೆಹಲಿಯ ಎನ್‍ಸಿಆರ್ ನಿವಾಸಿಯಾಗಿರುವ 22 ವರ್ಷದ ಯುವಕನನ್ನು ಪೊಲೀಶರು ಬಂಧಿಸಿದ್ದಾರೆ.

    ದೀಪಕ್ ಬಂಧಿತ ಆರೋಪಿಯಾಗಿದ್ದು, ವಿಡಿಯೋ ಕಾಲ್ ಮಾಡಲು ಪ್ರತ್ಯೇಕ ಸಾಫ್ಟ್‌ವೇರ್ ಬಳಿಕೆ ಮಾಡಿ ಮಹಿಳೆಯರು, ಯುವತಿಯರೊಂದಿಗೆ ನಗ್ನವಾಗಿ ನಿಂತು ಅಸಭ್ಯವಾಗಿ ಮಾತನಾಡುತ್ತಿದ್ದ. ಅಲ್ಲದೇ ಆತನ ಮೊಬೈಲ್‍ನಲ್ಲಿ ಬರೋಬ್ಬರು 500 ಮಂದಿ ಮಹಿಳೆಯರ ಫೋನ್ ನಂಬರ್ ಪತ್ತೆಯಾಗಿದ್ದು, ಆತ ಕೇವಲ 5ನೇ ತರಗತಿವರೆಗೆ ಮಾತ್ರ ಓದಿದ್ದಾನೆ ಎಂದು ಘಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ.

    ದೇಶದ ವಿವಿಧ ರಾಜ್ಯಗಳಿಗೆ ಸೇರಿದ ಮಹಿಳೆಯರು, ಯುವತಿಯರಿಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದ. ಮಹಿಳಾ ವಕೀಲರೊಬ್ಬರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿರುವ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂದಿದ್ದಾರೆ. ಆರೋಪಿ ತನಗೆ ತೋಚಿದ್ದ ನಂಬರ್ ಟೈಪ್ ಮಾಡಿ ಮೊದಲು ಫೋನ್ ಮಾಡುತ್ತಿದ್ದ. ಫೋನ್ ಮಹಿಳೆಯರು ರಿಸೀವ್ ಮಾಡಿದರೆ ಅಂತಹ ನಂಬರ್ ಗಳನ್ನು ಸೇವ್ ಮಾಡಿಕೊಳ್ಳುತ್ತಿದ್ದ. ಆ ಬಳಿಕ ಅವರ ವಾಟ್ಸಾಪ್‍ಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ. ಒಂದೊಮ್ಮೆ ಅವರು ಆರೋಪಿ ನಂಬರ್ ಬ್ಲಾಕ್ ಮಾಡಿದರೆ ಪ್ರತ್ಯೇಕ ಸಾಫ್ಟ್‌ವೇರ್ ಬಳಸಿ ವಿಡಿಯೋ ಕಾಲ್ ಮಾಡುತ್ತಿದ್ದ.

    ಪ್ರತ್ಯೇಕ ಸಾಫ್ಟ್‌ವೇರ್ ಬಳಕೆ ಮಾಡುತ್ತಿದ್ದ ಕಾರಣ ಪೊಲೀಸರಿಗೆ ಆತನ ಐಪಿ ವಿಳಾಸ ಪತ್ತೆ ಮಾಡುವುದು ಕಷ್ಟಸಾಧ್ಯವಾಗುತ್ತಿತ್ತು. ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶಕ್ಕೆ ಸೇರಿದ ಹಲವು ಮಹಿಳೆರಿಗೆ ಈತ ಇದೇ ಕಿರುಕುಳ ನೀಡಿದ್ದ.

    ಯುವತಿ ದೂರು ನೀಡಿದ ಬಳಿಕ ಆರೋಪಿಯ ನಂಬರ್ ಮೇಲೆ ನಿಗಾ ವಹಿಸಿದ್ದ ಪೊಲೀಸರು, ವಾಟ್ಸಾಪ್ ಕಾಲ್ ಆಧರಿಸಿ ಇಂಟರ್ ನೆಟ್ ಸರ್ವಿಸ್ ಪ್ರೋವೈಡರ್ ಐಪಿ ಅರ್ಡಸ್‍ಅನ್ನು ಪತ್ತೆ ಮಾಡಿದ್ದರು. ಸೈಬರ್ ಕ್ರೈಂ ಆಯೋಪದ ಅಡಿ ದೂರು ದಾಖಲಿಸಿ ಯುವಕನನ್ನು ಬಂಧಿಸಿದ್ದರು. ಸದ್ಯ ಘಟನೆಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

    ಪ್ರಕರಣದ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ಸೈಬರ್ ಸೆಲ್ ಪೊಲೀಸ್ ಅಧಿಕಾರಿ ಅಭಯ್, ಯುವತಿಯೊಬ್ಬಳಿಗೆ ವಾಟ್ಸಾಪ್ ಕಾಲ್ ಮಾಡಿದ್ದ ಆಧಾರದ ಮೇಲೆ ಆತನನ್ನು ಬಂಧಿಸಲು ಸಾಧ್ಯವಾಗಿತ್ತು. ಎಷ್ಟೇ ಫೇಕ್ ವಾಟ್ಸಾಪ್ ಖಾತೆಗಳನ್ನು ಆರೋಪಿ ತೆರೆದಿದ್ದ ಆರೋಪಿ ಮಹಿಳೆರಿಗೆ ಕಿರುಕುಳ ನೀಡುತ್ತಿದ್ದ. ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ವಾಟ್ಸಾಪ್ ಸಂಸ್ಥೆಗೂ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

  • ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‍ಗೆ ಕೊಲೆ ಬೆದರಿಕೆ

    ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‍ಗೆ ಕೊಲೆ ಬೆದರಿಕೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ.

    ಜಾನುವಾರುಗಳನ್ನು ಸಾಗಾಟ ಮಾಡುವ ವಾಹನ ಹಾಗೂ ಜನರ ಮೇಲೆ ಹಲ್ಲೆ ನಡೆಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯೊಂದರಲ್ಲಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

    ರಾಮ್ ಸೇನಾ ಅಭಿಮಾನಿ ಬಳಗ ಅನ್ನೋ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಕಿಡಿಗೇಡಿಯೋರ್ವ “ಮೊದಲು ಇವಳನ್ನು ಕಡಿದು ಕೊಲ್ಲಬೇಕು”(ಫಸ್ಟ್ ಮೊಲೆನ್ ಕರ್ತ್ ಕೆರೋಡು)ಎಂದು ತುಳುಭಾಷೆಯಲ್ಲಿ ಮೆಸೇಜ್ ಹಾಕಿದ್ದಾನೆ. ಈ ಮೆಸೇಜ್ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಜಿಲ್ಲಾಧಿಕಾರಿಗಳಿಗೇ ಹಿಂದೂ ಸಂಘಟನೆಯ ಕಾರ್ಯಕರ್ತರು ಕೊಲೆ ಬೆದರಿಕೆಯೊಡ್ಡುವ ಹಂತಕ್ಕೆ ತಲುಪಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು. ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

  • ಬಾಲಿವುಡ್ ನಟಿಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ ರಿಷಬ್ ಪಂತ್

    ಬಾಲಿವುಡ್ ನಟಿಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ ರಿಷಬ್ ಪಂತ್

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ನಟಿಯರು ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇದೇ ವೇಳೆ ಹಲವು ಆಟಗಾರರ ಹೆಸರು ಕೂಡ ನಟಿಯರೊಂದಿಗೆ ಕೇಳಿ ಬರುತ್ತದೆ. ಸದ್ಯ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಗೆಳತಿ, ನಟಿ ಊರ್ವಶಿ ರೌಟೇಲಾ ಅವರ ಮೊಬೈಲ್ ನಂಬರನ್ನು ತಮ್ಮ ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇತ್ತೀಚೆಗಷ್ಟೇ ರಿಷಬ್ ಪಂತ್ ಹೊಸ ವರ್ಷದ ಸಂಭ್ರಮದಲ್ಲಿ ತಮ್ಮ ಪ್ರೇಯಸಿ ಇಶಾ ನೇಗಿ ಅವರೊಂದಿಗೆ ಇರುವ ಫೋಟೋವನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಾವಿಬ್ಬರೂ ಕಳೆದ 5 ವರ್ಷಗಳಿಂದ ಪ್ರೀತಿಯಲ್ಲಿರುವುದಾಗಿ ತಿಳಿಸಿದ್ದರು. ಆದರೆ ಇದಾದ ಬಳಿಕ ರಿಷಬ್ ಪಂತ್ ಅವರ ಮಾಜಿ ಗೆಳತಿ, ನಟಿ ಊರ್ವಶಿ ರೌಟೇಲಾ ಮತ್ತೆ ರಿಷಬ್‍ರನ್ನು ಸಂಪರ್ಕ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

    ಊರ್ವಶಿ ರೌಟೇಲಾರೊಂದಿಗೆ ಮಾತನಾಡಲು ಇಷ್ಟಪಡದ ರಿಷಬ್, ತಮ್ಮ ಮೊಬೈಲ್‍ನಲ್ಲಿ ನಟಿಯ ಮೊಬೈಲ್ ಸಂಖ್ಯೆಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಇಬ್ಬರು ಪರಸ್ಪರ ಚರ್ಚೆ ನಡೆಸಿಕೊಂಡ ಬಳಿಕವೇ ತಮ್ಮ ಮೊಬೈಲ್ ನಂಬರ್ ಗಳನ್ನು ಬ್ಲಾಕ್ ಮಾಡಿಕೊಂಡಿದ್ದಾರೆ ಎಂದು ಊರ್ವಶಿ ರೌಟೇಲಾ ಸ್ನೇಹಿತರು ಪ್ರತಿಕ್ರಿಯೆ ನೀಡಿದ್ದಾರೆ.

     

    View this post on Instagram

     

    I like me better when I’m with you ????????????‍♂

    A post shared by Rishabh Pant (@rishabpant) on

  • ವಾಟ್ಸಪ್ ಗೆಳೆಯರಿಂದ ನೆರೆ ಪೀಡಿತ ಪ್ರದೇಶದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

    ವಾಟ್ಸಪ್ ಗೆಳೆಯರಿಂದ ನೆರೆ ಪೀಡಿತ ಪ್ರದೇಶದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

    ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ಒಂದಾದ ಗೆಳೆಯರ ತಂಡವೊAದು ಸಮಾಜಕ್ಕೆ ಹೇಗೆ ಸ್ಪಂದಿಸಬಹುದು ಎಂದು ನಿರೂಪಿಸಿದೆ. ಹೊಳೆನರಸೀಪುರ ಪಟ್ಟಣದ ಪ್ರೈಂ ಕ್ಲಬ್ ಮತ್ತು ಗೆಳೆಯರ ಬಳಗ ಈ ಶ್ಲಾಘನೀಯ ಕೆಲಸವನ್ನು ಮಾಡಿದೆ.

    ತಮ್ಮ ತಮ್ಮ ವಾಟ್ಸಪ್ ಗ್ರೂಪ್‌ನ ಸ್ನೇಹಿತರೆಲ್ಲ ಒಂದಾಗಿ ನೆರೆಪೀಡಿತ ಪ್ರದೇಶಗಳಾದ ಹಾವೇರಿಯ ಕೂಡಲ ಗ್ರಾಮ ಮತ್ತು ಬೆಳಗಾವಿಯ ರಾಮದುರ್ಗ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಿದ್ದಾರೆ. ಎರಡು ಜಿಲ್ಲೆಗಳ ಒಟ್ಟು ಮೂರು ಸರ್ಕಾರಿ ಶಾಲೆಗಳ 350ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿದ್ದಾರೆ.

    ಸ್ನೇಹಿತರೆಲ್ಲ ತಮ್ಮ ಶಕ್ತಿಯಾನುಸಾರ ಹಣ ಸಂಗ್ರಹಿಸಿ ನಂತರ ಹೋಲ್ ಸೇಲ್ ದರದಲ್ಲಿ ವಿತರಣಾ ವಸ್ತುಗಳನ್ನು ಖರೀದಿಸಿದ್ದಾರೆ. ನಂತರ ಒಂದು ತಂಡ ನೆರೆಪೀಡಿತ ಜಿಲ್ಲೆಗೆ ತಲುಪಿದ್ದಾರೆ. ಮೊದಲಿಗೆ ಹಾವೇರಿಯ ಕೂಡಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದ್ದು, ಸೋಮುವಾರ ಬೆಳಗಾವಿ ಜಿಲ್ಲೆಯಲ್ಲಿ ವಿತರಣೆ ಮಾಡುತ್ತೇವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಒಂದು ವಿದ್ಯಾರ್ಥಿಗೆ ಒಂದು ಬ್ಯಾಗ್, ನೀರಿನ ಬಾಟೆಲ್ ಮತ್ತು ಜಾಮೆಟ್ರಿ ಬಾಕ್ಸ್ ಸೇರಿ ತಲಾ ಎಂಟುನೂರು ರೂಪಾಯಿಯಂತೆ ಒಟ್ಟು ಮುನ್ನೂರು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ.

    ಪ್ರೈಂ ಕ್ಲಬ್ ಮತ್ತು ಗೆಳೆಯರ ಸಂಯುಕ್ತ ಆಶ್ರಯದಲ್ಲಿ ಮಾಡುತ್ತಿರುವ ಕೆಲಸಕ್ಕೆ ಶಾಲಾ ಮುಖ್ಯಶಿಕ್ಷಕ ಶಿವಪ್ಪ ಕೂಡ ಸಂತಸ ವ್ಯಕ್ತಪಡಿಸಿದ್ದು, ಯುವಕರ ತಂಡದ ಸಮಾಜಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು ಸರ್ಕಾರಿ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶಿವಪ್ಪ, ಪ್ರೈಂ ಕ್ಲಬ್ ಸದಸ್ಯರಾದ ಅಶೋಕ್ ಗೌಡ, ಜಾಯ್ ಬ್ರಿಗಾಂಝ, ಮೋಹನ್ ಮತ್ತು ಮಹಮದ್ ಶಫಿ ಸೇರಿದಂತೆ ಇತರರು ಹಾಜರಿದ್ದರು.

  • ವಾಟ್ಸಾಪ್‍ನಲ್ಲಿ ಫೋಟೋ ಕಳುಹಿಸಿ ಚಿಕ್ಕಪ್ಪನಿಗೆ ಕೊಲೆ ಬೆದರಿಕೆ

    ವಾಟ್ಸಾಪ್‍ನಲ್ಲಿ ಫೋಟೋ ಕಳುಹಿಸಿ ಚಿಕ್ಕಪ್ಪನಿಗೆ ಕೊಲೆ ಬೆದರಿಕೆ

    ತುಮಕೂರು: ಅಣ್ಣನ ಮಗನೊಬ್ಬ ಕೈಯಲ್ಲಿ ಮಚ್ಚು, ಕೊಡಲಿ, ಬಂದೂಕು ಹಿಡಿದಿರುವ ಫೋಟೋಗಳನ್ನು ಚಿಕ್ಕಪ್ಪನ ವಾಟ್ಸಾಪ್‍ನಲ್ಲಿ ಕಳುಹಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

    ರವಿಕಿರಣ್ ವಾಟ್ಸಾಪ್‍ನಲ್ಲಿ ಫೋಟೋ ಕಳುಹಿಸಿ ಬೆದರಿಕೆ ಹಾಕಿದ ಕಿಡಿಗೇಡಿ. ಜಮೀನು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದ್ದಂತೆ ಚಿಕ್ಕಪ್ಪ ಗಿರಿರಾಜನಿಗೆ ರವಿಕಿರಣ್ ಬೆದರಿಕೆ ಹಾಕಿದ್ದಾನೆ. ಮಾರನಹಳ್ಳಿ ಗ್ರಾಮದ ವಾಸಿಗಳಾದ ರವಿಕಿರಣ್ ಹಾಗೂ ಗಿರಿರಾಜ ಕುಟುಂಬದ ನಡುವೆ ಜಮೀನು ವಿವಾದ ಇತ್ತು. ಇಬ್ಬರ ನಡುವೆ ಎರಡು ತಿಂಗಳ ಹಿಂದೆ ಗಲಾಟೆ ನಡೆದಿದೆ.

    ಈ ವೇಳೆ ರವಿಕಿರಣ್ ಕುಟುಂಬದವರು ಸೇರಿ ಗಿರಿರಾಜನಿಗೆ ಮಚ್ಚು ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಗಿರಿರಾಜನ ತಲೆಗೆ ಗಂಭೀರ ಗಾಯವಾಗಿತ್ತು. ತಲೆಗೆ ಬರೋಬ್ಬರಿ 72 ಹೊಲಿಗೆ ಹಾಕಿಸಿಕೊಂಡು ಗಿರಿರಾಜ ಜೀವನ್ಮರಣದ ಹೋರಾಟ ನಡೆಸಿ ಬದುಕುಳಿದು ಬಂದಿದ್ದಾನೆ.

    ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಪ್ರಕರಣ ಕೂಡ ನ್ಯಾಯಾಲಯದ ಮೆಟ್ಟಿಲೇರಿದೆ. ಇದೀಗ ಹೊಸ ವರಸೆ ಪ್ರಾರಂಭಿಸಿರುವ ರವಿಕಿರಣ್, ಕೋರ್ಟ್‌ನಲ್ಲಿರುವ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಕೇಸ್ ವಾಪಸ್ ತೆಗೆದುಕೊಳ್ಳದಿದ್ದರೆ ಕೊಲೆ ಮಾಡುವುದಾಗಿ ಗಿರಿರಾಜನಿಗೆ ಬೆದರಿಕೆ ಹಾಕುತ್ತಿದ್ದಾರೆ. ಅದಕ್ಕಾಗಿಯೇ ವಾಟ್ಸಾಪ್ ಗ್ರೂಪ್ ಗೆ ಮಚ್ಚು, ಕೊಡಲಿ, ಬಂದೂಕು ಹಿಡಿದಿರುವ ಫೋಟೋ ಕಳುಹಿಸುತ್ತಿದ್ದಾರೆ.

  • ಇಂಥ ಅಪ್ಪ ಇನ್ಯಾರಿಗೂ ಸಿಗದಿರಲಿ – ತಾಯಿ ಜೊತೆಗೆ ಇಬ್ಬರು ಮಕ್ಕಳು ಆತ್ಮಹತ್ಯೆ

    ಇಂಥ ಅಪ್ಪ ಇನ್ಯಾರಿಗೂ ಸಿಗದಿರಲಿ – ತಾಯಿ ಜೊತೆಗೆ ಇಬ್ಬರು ಮಕ್ಕಳು ಆತ್ಮಹತ್ಯೆ

    ಬೆಂಗಳೂರು: ಅಪ್ಪನ ವರ್ತನೆ ಸರಿ ಇಲ್ಲ ಎಂದು ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿ ತಾಯಿ ಹಾಗೂ ಇಬ್ಬರು ಮಕ್ಕಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ.

    ರಾಜೇಶ್ವರಿ, ಮಾನಸ ಹಾಗೂ ಭೂಮಿಕ ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಕ್ಕಳು. ಮೂಲತಃ ಮಂಡ್ಯದವರಾದ ರಾಜೇಶ್ವರಿ 18 ವರ್ಷಗಳ ಹಿಂದೆ ಸಿದ್ದಯ್ಯ ಎಂಬವನನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಸಿದ್ದಯ್ಯನಿಗೆ ಅನುಕಂಪದ ಅಧಾರದಲ್ಲಿ ಕೆಇಬಿಯಲ್ಲಿ ಕೆಲಸ ಸಿಕ್ಕಿತ್ತು. ಆಗ ಸಿದ್ದಯ್ಯನ ಸಂಸಾರದಲ್ಲಿ ಬಿರುಕು ಶುರುವಾಗಿದೆ. ಸಿದ್ದಯ್ಯ ಈ ವಯಸ್ಸಿನಲ್ಲೂ, ಹೆಣ್ಣಿನ ಶೋಕಿಗೆ ಬಿದ್ದಿದ್ದನು. ಇದೇ ವಿಚಾರವಾಗಿ ಸಂಸಾರದಲ್ಲಿ ಪದೇ ಪದೇ ಜಗಳವಾಗುತ್ತಿತ್ತು.

    ಅಲ್ಲದೆ ಎದೆಯೆತ್ತರಕ್ಕೆ ಬೆಳೆದಿರುವ ಇಬ್ಬರು ಹೆಣ್ಣು ಮಕ್ಕಳ ಮುಂದೆಯೇ ಪತಿ-ಪತ್ನಿ ಜಗಳವಾಡುತ್ತಿದ್ದರು. ವರಮಹಾಲಕ್ಷ್ನೀ ಹಬ್ಬಕ್ಕೆ ಮನೆಗೆ ಬಾರದ ಪತಿ, ಬೇರೊಂದು ಹೆಣ್ಣಿನ ಜೊತೆ ಟ್ರಿಪ್ ಹೋಗಿದ್ದನು. ಇದರಿಂದ ತೀವ್ರವಾಗಿ ಬೇಸತ್ತ ಮೂವರು ಆತ್ಮಹತ್ಯೆಗೆ ನಿರ್ಧರಿಸಿದ್ದರು. ಮಗಳು ಭೂಮಿಕ, “ಎಲ್ಲರಿಗೂ ಒಳ್ಳೆಯ ತಂದೆ ಸಿಗಬೇಕು. ನಮ್ಮ ಜೀವನನ ಹಾಳು ಮಾಡಿಬಿಟ್ಟ. ನಮ್ಮ ಸಾವಿಗೆ ಸಿದ್ದನೇ ಕಾರಣ” ಎಂದು ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿಕೊಂಡಳು. ಬಳಿಕ ರಾತ್ರಿ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಆರೋಪಿ ಸಿದ್ದಯ್ಯ ತಮಿಳುನಾಡಿನ ಕಡೆಗೆ ಟ್ರಿಪ್ ಹೋಗಿದ್ದು, ಹನುಮಂತನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

     

  • ವಾಟ್ಸಾಪ್ ಗ್ರೂಪ್‍ನಲ್ಲಿ ಅಶೋಕ್ ಇಮೇಜ್‍ಗೆ ಧಕ್ಕೆ – ಇಬ್ಬರ ವಿರುದ್ಧ ಎಫ್‍ಐಆರ್

    ವಾಟ್ಸಾಪ್ ಗ್ರೂಪ್‍ನಲ್ಲಿ ಅಶೋಕ್ ಇಮೇಜ್‍ಗೆ ಧಕ್ಕೆ – ಇಬ್ಬರ ವಿರುದ್ಧ ಎಫ್‍ಐಆರ್

    ಬೆಂಗಳೂರು: ಬಿಜೆಪಿ ಮುಖಂಡ ಆರ್.ಅಶೋಕ್ ಅವರ ಇಮೇಜ್ ಧಕ್ಕೆ ಬರುವಂತೆ ಒಕ್ಕಲಿಗರ ಕಮ್ಯುನಿಟಿ ವಾಟ್ಸಪ್ ಗ್ರೂಪ್‍ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ಇಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಒಕ್ಕಲಿಗರ ಕಮ್ಯುನಿಟಿ ವಾಟ್ಸಪ್ ಗ್ರೂಪಿನಲ್ಲಿ ಆರ್ ಅಶೋಕ್ ಅವರ ಹೆಸರನಲ್ಲಿ ಕೆಟ್ಟ ರೀತಿಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೋದಂಡರಾಮ್ ಎಸ್.ಎಂ ಗೌಡ ಹಾಗೂ ತಿಮ್ಮಪ್ಪ ಯುಎಸ್‍ಎ ವಿರುದ್ಧ ದೂರು ನೀಡಿದ್ದರು.

    ವಾಟ್ಸಪ್ ಗ್ರೂಪಿನಲ್ಲಿ ಅಮೆರಿಕದಲ್ಲಿ ಕಾಲಭೈರವನ ದೇವಸ್ಥಾನ ಮಾಡುವ ಔಚಿತ್ಯವೇನಿತ್ತು. ಇತ್ತೀಚೆಗೆ ಮಠಗಳು ದುಡ್ಡು ಮಾಡಲು ನಿಂತಿವೆ. ಎಂದು ರಾಜ್ಯದ ದೊಡ್ಡ ಮಠವಾದ ಆದಿ ಚುಂಚನಗಿರಿಯ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಆರ್ ಅಶೋಕ್ ಅವರ ಹೆಸರನಲ್ಲಿ ಪೋಸ್ಟ್ ಹಾಕಲಾಗಿತ್ತು.

    ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಎಫ್‍ಐಆರ್ ದಾಖಲು ಮಾಡಿದ್ದಾರೆ.

  • ವಾಟ್ಸಾಪ್, ಫೇಸ್‍ಬುಕ್ ನೋಡಿ ಜನ ವೋಟ್ ಹಾಕಲ್ಲ: ಸುಮಲತಾಗೆ ಸಚಿವ ಪುಟ್ಟರಾಜು ಟಾಂಗ್

    ವಾಟ್ಸಾಪ್, ಫೇಸ್‍ಬುಕ್ ನೋಡಿ ಜನ ವೋಟ್ ಹಾಕಲ್ಲ: ಸುಮಲತಾಗೆ ಸಚಿವ ಪುಟ್ಟರಾಜು ಟಾಂಗ್

    ಮಂಡ್ಯ: ವಾಟ್ಸಾಪ್ ಹಾಗೂ ಫೇಸ್‍ಬುಕ್ ನೋಡಿ ಜನ ವೋಟ್ ಹಾಕಲ್ಲ ಎಂದು ಸಚಿವ ಪುಟ್ಟರಾಜು ಸುಮಲತಾ ಅವರಿಗೆ ಟಾಂಗ್ ನೀಡಿದ್ದಾರೆ.

    ಮಂಡ್ಯದಲ್ಲಿ ಇಂದು ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜನರು ವಾಟ್ಸಾಪ್ ಹಾಗೂ ಫೇಸ್‍ಬುಕ್ ನೋಡಿ ವೋಟ್ ಹಾಕುವುದಿಲ್ಲ. ಹಾಗಿದ್ದರೆ ಮೋದಿ ಏಕೆ ಬೀದಿ ಬೀದಿ ಸುತ್ತಬೇಕಿತ್ತು ಎಂದು ಹೇಳುವ ಮೂಲಕ ಸುಮಲತಾ ಅವರಿಗೆ ಟಾಂಗ್ ನೀಡಿದ್ದಾರೆ.

    ಮಂಡ್ಯದಲ್ಲಿ ನಾವು- ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ನಾವೇ ಈಗ ಒಂದಾಗಿದ್ದೇವೆ. ಆದರೆ ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ. ಅವರು ಮಂಡ್ಯದಲ್ಲಿ ಅಭ್ಯರ್ಥಿ ಹಾಕೋದಿಲ್ಲ. ಸ್ವಾಭಿಮಾನವಿರುವ ಮಂಡ್ಯ ಜನ ಬೇರೆಯವರ ಕೈಯಲ್ಲಿ ಹೇಳಿಸಿಕೊಳ್ಳಲ್ಲ ಎಂದರು.

    ಸುಮಲತಾ ಸ್ಪರ್ಧೆ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬುದು ಶುದ್ಧ ಸುಳ್ಳು. ಏಕೆಂದರೆ ಅಭಿವೃದ್ಧಿಯೇ ನಮ್ಮ ಅಜೆಂಡಾ. ನಾಮಪತ್ರ ಸಲ್ಲಿಕೆಯಾದ ಮೇಲೆ ತಂತ್ರಗಾರಿಕೆ ಗೊತ್ತಾಗುತ್ತದೆ. ಮಂಡ್ಯ ಜಿಲ್ಲೆಯ ಜನರಿಗೆ ಸ್ವಾಭಿಮಾನದ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ನಾನು ಮಲಗಿಕೊಳ್ಳೋದು ಚಿನಕುರಳಿಯಲ್ಲಿ, ಬೆಳಗ್ಗೆ ಎದ್ದು ಗದ್ದೆಗೆ ನೀರು ಕಟ್ಟಿ ಅಲ್ಲಿಯೇ ವಾಕ್ ಮಾಡಿ ಬರುತ್ತೇನೆ. ಇದು ಸ್ವಾಭಿಮಾನ ಅಲ್ಲವೆ ಎಂದು ಪುಟ್ಟರಾಜು ಹೇಳಿದ್ದಾರೆ.

    ಈ ಮೂಲಕ ಸುಮಲತಾ ಅವರು ಬೆಂಗಳೂರಿನಲ್ಲಿ ಇದ್ದುಕೊಂಡು ಸ್ವಾಭಿಮಾನದ ಬಗ್ಗೆ ಮಾತನಾಡುವುದಕ್ಕೆ ಪರೋಕ್ಷವಾಗಿ ಕೆದಕಿದ್ದಾರೆ.

  • ಫೇಸ್‍ಬುಕ್ ದಾಂಪತ್ಯವನ್ನು ಮುರಿದ ವಾಟ್ಸಾಪ್ ಚಾಟಿಂಗ್

    ಫೇಸ್‍ಬುಕ್ ದಾಂಪತ್ಯವನ್ನು ಮುರಿದ ವಾಟ್ಸಾಪ್ ಚಾಟಿಂಗ್

    ಬೆಂಗಳೂರು: ಫೇಸ್‍ಬುಕ್‍ನಿಂದ ಪರಿಚಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಈಗ ವಾಟ್ಸಾಪ್ ಚಾಟಿಂಗ್ ಮೂಲಕ ದೂರವಾಗಿದ್ದಾರೆ. ಪತಿಯ ವಾಟ್ಸಾಪ್ ಸಂದೇಶಕ್ಕೆ ಬೇಸತ್ತ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಛತ್ತೀಸ್‍ಗಢದ ರಾಯಪುರ ಮೂಲದ ಯುವತಿಗೆ ಬೆಂಗಳೂರು ಮೂಲದ ಯುವಕನೊಂದಿಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿತ್ತು. ಫೇಸ್‍ಬುಕ್ ಮೂಲಕ ಪರಿಚಯವಾದ ಜೋಡಿ ಪ್ರೀತಿಸಿ 2016ರ ಜನವರಿ 22 ರಂದು ಪುಣೆಯ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದರೂ, ಅದನ್ನು ಲೆಕ್ಕಿಸದೇ ಮದುವೆ ಆಗಿದ್ದರು. ಮದುವೆ ನಂತರ ಯುವಕ ಪೊಷಕರನ್ನು ಒಪ್ಪಿಸಿ ಕರೆದುಕೊಂಡು ಹೋಗುತ್ತೇನೆಂದು ತಿಳಿಸಿ ಯುವತಿಯನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದ.

    ಹೀಗೆ ಒಂದೂವರೆ ವರ್ಷ ಯುವಕ ರಾಯಪುರದ ಪತ್ನಿಯ ಮನೆಗೆ ಹೋಗಿ ಬರುವುದನ್ನು ಮಾಡುತ್ತಿದ್ದನು. ನಂತರ ಕಳೆದ ನವೆಂಬರ್ ನಲ್ಲಿ ನಾರಾಯಣಪುರದಲ್ಲಿ ಮನೆ ಮಾಡಿ ಪತ್ನಿಯನ್ನು ಕರೆಸಿಕೊಂಡಿದ್ದ. ಈ ವೇಳೆ ಯುವತಿಯ ಕಡೆಯವರು ಬೆಂಗಳೂರಲ್ಲಿ ಹೇಗಿದ್ದೀಯಾ? ಗಂಡ ಚೆನ್ನಾಗಿ ನೋಡಿಕೊಳ್ತಿದ್ದಾನಾ ಎಂದು ಯುವತಿ ಮನೆಯವರು ಸಂದೇಶ ಕಳುಹಿಸಿದ್ದಾರೆ. ಬಳಿಕ ಯುವಕ ಇದಕ್ಕೆ ಪತ್ನಿಯ ಶೀಲವನ್ನೇ ಶಂಕಿಸಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ನೀನು ನಡತೆಗೆಟ್ವಳು ನಿನಗೆ ಬೇರೊಂದು ಅಕ್ರಮ ಸಂಬಂಧವಿದೆ. ವಿಚ್ಚೇಧನ ಕೊಡು ಎಂದು ಪೀಡಿಸಲಾರಂಭಿಸಿದ್ದಾನೆ.

    ಯುವಕ ಪ್ರೀತಿಸಿ ಮದುವೆಯಾದ ಪತ್ನಿಯ ಮೇಲೆ ಹಲ್ಲೆ ಮಾಡಿ ಹಿಂಸೆ ಮಾಡಲು ಶುರುಮಾಡಿದ. ಗಂಡನ ಹಿಂಸೆ ತಾಳಲಾರದೇ ಯುವತಿ ತನ್ನ ಹುಟ್ಟೂರಿಗೆ ವಾಪಸ್ ಹೋಗಿ ರಾಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಪ್ರಕರಣ ಈಗ ಛತ್ತಿಸ್‍ಗಢದಿಂದ ಬೆಂಗಳೂರಿಗೆ ವರ್ಗಾವಣೆ ಆಗಿದ್ದು, ವರದಕ್ಷಿಣೆ ಕಿರುಕುಳ ಹಾಗೂ ಜೀವ ಬೆದರಿಕೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯಿಂದ ಮತ್ತಷ್ಟು ಮಾಹಿತಿ ಪಡೆದಿದ್ದು, ಆರೋಪಿಗಾಗಿ ಮಹದೇವಪುರ ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಟ್ಸಪ್‍ನಲ್ಲಿ ಬೆತ್ತಲೇ ಫೋಟೋ ಕಳಿಸ್ತಾನೆ – ಹೇಂಗಿದೆ ನೋಡಿ ಹೇಳು ಅಂತಾನೆ ಗಣಿತ ಮೇಷ್ಟ್ರು

    ವಾಟ್ಸಪ್‍ನಲ್ಲಿ ಬೆತ್ತಲೇ ಫೋಟೋ ಕಳಿಸ್ತಾನೆ – ಹೇಂಗಿದೆ ನೋಡಿ ಹೇಳು ಅಂತಾನೆ ಗಣಿತ ಮೇಷ್ಟ್ರು

    ಬೆಂಗಳೂರು: ಗಣಿತ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಬೆತ್ತಲೇ ಫೋಟೋ ಕಳುಹಿಸಿ ವಿಕೃತ ಮೆರೆದ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಚನ್ನೇಗೌಡ ಬೆತ್ತಲೆ ಫೋಟೋ ಕಳುಹಿಸಿದ ಶಿಕ್ಷಕ. ಚನ್ನೇಗೌಡ ಮೂಲತಃ ಮಂಡ್ಯದವನಾಗಿದ್ದು, ತನ್ನ ವಿದ್ಯಾರ್ಥಿಯ ಫೋನ್ ನಂಬರ್ ಪಡೆದು ಬೆತ್ತಲೆ ಫೋಟೋವನ್ನು ಕಳುಹಿಸಿದ್ದಾನೆ. ತನ್ನ ಶಿಕ್ಷಕನ ಹೊಸ ಅವತಾರ ಕಂಡು ಹಳೆ ವಿದ್ಯಾರ್ಥಿನಿ ಕಂಗಾಲಾಗಿದ್ದಾಳೆ.

    ವಿದ್ಯಾರ್ಥಿನಿ ತುಮಕೂರಲ್ಲಿ 9ನೇ ಕ್ಲಾಸ್‍ನಲ್ಲಿ ಓದುವ ವೇಳೆ ಚನ್ನೇಗೌಡ ಗಣಿತ ವಿಷಯ ಹೇಳಿಕೊಡುತ್ತಿದ್ದನು. ನಂತರ ಯುವತಿ ಮದುವೆ ಆಗಿ ಬೆಂಗಳೂರಿನ ಗಂಡನ ಮನೆಗೆ ಶಿಫ್ಟ್ ಆಗಿದ್ದಳು. ಇತ್ತೀಚೆಗೆ ಚನ್ನೇಗೌಡ ಅದು ಹೇಗೋ ಯುವತಿ ಫೋನ್ ನಂಬರ್ ಪಡೆದಿದ್ದಾನೆ.

    ಯುವತಿಯ ಫೋನ್ ನಂಬರ್ ಪಡೆದ ಚನ್ನೇಗೌಡ ಚಾಟ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ವಾಟ್ಸಾಪ್‍ನಲ್ಲಿ ಬೆತ್ತಲೆ ಫೋಟೋ ಕಳುಹಿಸಿ ಹೇಗಿದೆ ನೋಡಿ ಹೇಳು ಎಂದು ಮೆಸೇಜ್ ಮಾಡಿದ್ದಾನೆ. ಈ ಮೆಸೇಜ್ ನೋಡಿದ ಯುವತಿ ತನ್ನ ಪತಿಯ ಮೂಲಕ ಚನ್ನೇಗೌಡನ ವಿರುದ್ಧ ದೂರು ನೀಡಿದ್ದಾಳೆ.

    ಗಣಿತ ಶಿಕ್ಷಕ ಚನ್ನೇಗೌಡ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv