Tag: ವಾಟ್ಸಾಪ್

  • ಕ್ರಿಮಿನಲ್‍ಗಳ ಮಾಹಿತಿ ನೀಡಲು ನಿರಾಕರಣೆ – ವಾಟ್ಸಾಪ್ ನಿರ್ದೇಶಕರ ವಿರುದ್ಧ ಎಫ್‍ಐಆರ್

    ಕ್ರಿಮಿನಲ್‍ಗಳ ಮಾಹಿತಿ ನೀಡಲು ನಿರಾಕರಣೆ – ವಾಟ್ಸಾಪ್ ನಿರ್ದೇಶಕರ ವಿರುದ್ಧ ಎಫ್‍ಐಆರ್

    ಚಂಡೀಗಢ: ಪ್ರಕರಣ ಒಂದರ ತನಿಖೆಗೆ ಸಂಬಂಧಿಸಿದ ಮಾಹಿತಿ ನೀಡಲು ನಿರಾಕರಿಸಿದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‍ನ (WhatsApp) ನಿರ್ದೇಶಕ ಮತ್ತು ನೋಡಲ್ ಅಧಿಕಾರಿಗಳ ವಿರುದ್ಧ ಗುರುಗ್ರಾಮ್ (Gurugram) ಪೊಲೀಸರು (Police) ಎಫ್‍ಐಆರ್ ದಾಖಲಿಸಿದ್ದಾರೆ.

    ಮಾಹಿತಿ ನೀಡಲು ನಿರಾಕರಿಸಿದ ವಾಟ್ಸಾಪ್‍ನ ನಿರ್ದೇಶಕರು ಮತ್ತು ಅಧಿಕಾರಿಗಳ ವಿರುದ್ಧ ಸರ್ಕಾರಿ ಆದೇಶಕ್ಕೆ ಅವಿಧೇಯತೆ ತೋರುವುದು, ಅಪರಾಧಿಯನ್ನು ಕಾನೂನಿನ ಶಿಕ್ಷೆಯಿಂದ ರಕ್ಷಿಸಲು ಯತ್ನ ಮತ್ತು ಸಾಕ್ಷ್ಯವಾಗಿ ಸಲ್ಲಿಸಬೇಕಾದ ಯಾವುದೇ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ನಾಶಪಡಿಸುವ ಹುನ್ನಾರದ ಆರೋಪ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಚುನಾವಣಾ ಬಾಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ತಿದ್ರು: ಸಿ.ಟಿ.ರವಿ

    ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಅಡಿಯಲ್ಲಿ ದೂರೊಂದು ದಾಖಲಾಗಿತ್ತು. ಅದರ ತನಿಖೆಯ ಭಾಗವಾಗಿ, ಗುರುಗ್ರಾಮ್ ಪೊಲೀಸರು, ಆರೋಪಿಗಳು ಬಳಸುತ್ತಿದ್ದ ನಾಲ್ಕು ಸಂಖ್ಯೆಗಳ ಬಗ್ಗೆ ಮಾಹಿತಿಗಾಗಿ ವಾಟ್ಸಾಪ್ ನಿರ್ದೇಶಕರ ಬಳಿ ಮಾಹಿತಿ ಕೇಳಿದ್ದರು. ಈ ಸಂಬಂಧ ಇಮೇಲ್ ಮೂಲಕ ನೋಟಿಸ್ ಸಹ ಕಳುಹಿಸಲಾಗಿತ್ತು.

    ಪೊಲೀಸರು ಕೇಳಿದ್ದ ಮಾಹಿತಿಯನ್ನು ನೀಡಲು ವಾಟ್ಸಾಪ್ ತಿರಸ್ಕರಿಸಿದೆ. ಈ ನಿರಾಕರಣೆಯು ಕಾನೂನನ್ನು ನಿರ್ಲಕ್ಷಿಸುವ ಉದ್ದೇಶವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅದರಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಇಂದು ಪ್ರಮಾಣವಚನ

  • ನಿನಗೆ 3 ದಿನವಷ್ಟೇ ಸಮಯ- ಫೋಟೋ ವಾಟ್ಸಪ್ ಮಾಡಿ ಸಮಾಜವಾದಿ ಪಕ್ಷದ ನಾಯಕನಿಗೆ ಕೊಲೆ ಬೆದರಿಕೆ

    ನಿನಗೆ 3 ದಿನವಷ್ಟೇ ಸಮಯ- ಫೋಟೋ ವಾಟ್ಸಪ್ ಮಾಡಿ ಸಮಾಜವಾದಿ ಪಕ್ಷದ ನಾಯಕನಿಗೆ ಕೊಲೆ ಬೆದರಿಕೆ

    ಮುಂಬೈ: ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಅಬು ಅಸಿಮ್ ಅಜ್ಮಿ (Abu Asim Azmi) ಗೆ ಫೊನ್ ಮೂಲಕ ಕೊಲೆ ಬೆದರಿಕೆಯೊಂದು ಬಂದಿದೆ.

    ಮುಂಬೈನ ಮಂಖುರ್ದ್ ಶಿವಾಜಿ ನಗರ ಕ್ಷೇತ್ರದ ಶಾಸಕನಿಗೆ ವಾಟ್ಸಪ್‍ (Whatsapp) ನಲ್ಲಿ ಬೆದರಿಕೆ ಬಂದಿದೆ. ವಾಟ್ಸಪ್ ಬಂದಿರುವ ಅಬು ಫೋಟೋ ಮೇಲೆ ಬಂದೂಕು ಹಾಗೂ ರಕ್ತದ ಕಲೆಯುಳ್ಳ ಚಾಕುವನ್ನು ತೋರಿಸಲಾಗಿದೆ. ಅಲ್ಲದೆ ಮೂರು ದಿನಗಳವರೆಗೆ ಸಮಯವಿದೆ ಎಂದು ಎಚ್ಚರಿಕೆಯ ಮೆಸೇಜ್ ಕೂಡ ರವಾನಿಲಾಗಿದೆ.

    ಈ ಬಗ್ಗೆ ಅನು ತಮಗೆ ಬಂದಿರುವ ವಾಟ್ಸಪ್ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವ್ಯಕ್ತಿಯೊಬ್ಬ ನನ್ನ ಪರ್ಸನಲ್ ನಂಬರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಮೂರು ದಿನಗಳಲ್ಲಿ ನಿನ್ನ ಕೊಲೆಯಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಕೊಲಾಬಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

    ಅಲ್ಲದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್, ಮುಂಬೈ ಪೊಲೀಸರೇ ದಯವಿಟ್ಟು ಈ ಸಂಬಂಧ ಕ್ರಮ ಕೈಗೊಳ್ಳಿ ಎಂದು ಅಬು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನೂರರ ಗಡಿ ದಾಟಿದ ಟೊಮೆಟೋ ಬೆಲೆ- ಗೃಹಿಣಿಯರ ಆಕ್ರೋಶ

    ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ಬೆಂಬಲಿಸಿ ನೀಡಿದ ಹೇಳಿಕೆಗಳಿಗಾಗಿ ಈ ವರ್ಷ ಜನವರಿಯಲ್ಲಿಯೂ ನಾಯಕನಿಗೆ ಕೊಲೆ ಬೆದರಿಕೆಗಳು ಬಂದವು. ಅಂದು ಕೂಡ ಅವರ ಆಪ್ತ ಸಹಾಯಕನಿಗೆ ಕರೆ ಮಾಡಲಾಗಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕಿಡ್ನಾಪ್ ಕಥೆ ಕಟ್ಟಿ ಸ್ನೆಹಿತನೊಂದಿಗೆ ಅಪ್ರಾಪ್ತೆ ಪರಾರಿ

    ಕಿಡ್ನಾಪ್ ಕಥೆ ಕಟ್ಟಿ ಸ್ನೆಹಿತನೊಂದಿಗೆ ಅಪ್ರಾಪ್ತೆ ಪರಾರಿ

    ಮುಂಬೈ: ಆಪ್ರಾಪ್ತೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಮನೆಬಿಟ್ಟು ಹೋಗಿ ಕಿಡ್ನಾಪ್ (Kidnap) ಕಥೆ ಕಟ್ಟಿದ ಪ್ರಕರಣ ಮಹಾರಾಷ್ಟ್ರದ (Maharashtra) ಪಾಲ್ಘರ್‌ನಲ್ಲಿ ನಡೆದಿದೆ.

    17 ವರ್ಷದ ಬಾಲಕಿ ತನ್ನ ಪ್ರೇಮಿಯೊಂದಿಗೆ ಮನೆಬಿಟ್ಟು ಕೋಲ್ಕತ್ತಾಗೆ ತೆರಳಿದ್ದಾಳೆ. ಬಳಿಕ ತನ್ನ ಸಹೋದರನಿಗೆ ವಾಟ್ಸಾಪ್ ಮೂಲಕ ವಾಯ್ಸ್ ಕಳಿಸಿದ್ದು, ತನ್ನನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದಾಳೆ. ಈ ಬಗ್ಗೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ನಕಲಿ ಕಿಡ್ನಾಪ್ ಕಥೆಯನ್ನು ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: ಭಾರೀ ಮಳೆಯಿಂದ ಭೂಕುಸಿತ – ಸಿಕ್ಕಿಂನಲ್ಲಿ ಸಿಲುಕಿದ್ದ 300 ಪ್ರವಾಸಿಗರನ್ನು ರಕ್ಷಿಸಿದ ಸೇನೆ

    ಕಂಪನಿಯೊಂದರಲ್ಲಿ ಹೌಸ್‍ಕೀಪಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಶುಕ್ರವಾರ ಕೆಲಸಕ್ಕೆಂದು ತೆರಳಿದ್ದಳು. ಆದರೆ ಆ ದಿನ ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ನಂತರ ಆಕೆಯ ಕುಟುಂಬಸ್ಥರು ಆಕೆಗಾಗಿ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಅಪಹರಣದ ಸಂದೇಶ ಬಂದಿತ್ತು. ಬಳಿಕ ಈ ಬಗ್ಗೆ ಐಪಿಸಿ ಸೆಕ್ಷನ್ 363ರ ಅಡಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು.

    ತನಿಖೆ ನಡೆಸಿದ್ದ ಪೊಲೀಸರು ಬಾಲಕಿ ತನ್ನ ಗೆಳೆಯನೊಂದಿಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ವಿಮಾನದಲ್ಲಿ ತೆರಳಿರುವುದು ಪತ್ತೆಯಾಗಿತ್ತು. ಇಬ್ಬರ ಪತ್ತೆಗೆ ಪೊಲೀಸರ ತಂಡ ಕೋಲ್ಕತ್ತಾಗೆ (Kolkata) ತೆರಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಾವಿನ ಹಣ್ಣಿಗಾಗಿ ನಡೆದ ಗಲಾಟೆ- ಸಹೋದರರನ್ನು ಬಡಿದು ಕೊಂದ ದುಷ್ಕರ್ಮಿಗಳು

  • ವಿಶ್ವಾದ್ಯಂತ ವಾಟ್ಸಪ್‌ಗೂ ಗ್ರಹಣ – ಸಂದೇಶ ಕಳುಹಿಸಲಾಗದೇ ಜನರ ಒದ್ದಾಟ

    ವಿಶ್ವಾದ್ಯಂತ ವಾಟ್ಸಪ್‌ಗೂ ಗ್ರಹಣ – ಸಂದೇಶ ಕಳುಹಿಸಲಾಗದೇ ಜನರ ಒದ್ದಾಟ

    ನವದೆಹಲಿ: ಜನಪ್ರಿಯ ಸೋಶಿಯಲ್ ಮೀಡಿಯಾ ಆ್ಯಪ್ ವಾಟ್ಸಪ್ ಸರ್ವರ್‌ ಡೌನ್ ಆಗಿದೆ. ಕಳೆದ 30 ನಿಮಿಷಗಳಿಂದ ವಾಟ್ಸಪ್ ಬಳಸಲು ಸಾಧ್ಯವಾಗದೇ ಜನರ ಪರದಾಡುತ್ತಿದ್ದಾರೆ.

    ಸುಮಾರು 30 ನಿಮಿಷದಿಂದ ವಿಶ್ವದಾದ್ಯಂತ ವಾಟ್ಸಪ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಆದರೆ ಈ ಬಗ್ಗೆ ವಾಟ್ಸಪ್‍ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಬಳಕೆದಾರರಿಗೆ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು, ವೀಡಿಯೋ ಕಾಲ್‌ ಹಾಗೂ ಆಡಿಯೋ ಕಾಲ್‌ ಮಾಡಲು ಆಗುತ್ತಿಲ್ಲ. ಇದನ್ನೂ ಓದಿ: ವಿಶ್ವಾದ್ಯಂತ ವಾಟ್ಸಪ್‌ಗೂ ಗ್ರಹಣ – ಸಂದೇಶ ಕಳುಹಿಸಲಾಗದೇ ಜನರ ಒದ್ದಾಟ

    ಈ ಕುರಿತಂತೆ ಪ್ರತಿಕ್ರಿಯಿಸಿರುವ ಮೆಟಾ ಕಂಪನಿ ವಕ್ತಾರರು, ಕೆಲವು ಮಂದಿ ವಾಟ್ಸಪ್‌ನಲ್ಲಿ ಸಂದೇಶ ಕಳುಹಿಸಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿರುವ ವಿಚಾರ ತಿಳಿದುಬಂದಿದೆ. ಸಾಧ್ಯವಾದಷ್ಟು ಬೇಗ ವಾಟ್ಸಾಪ್‌ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಟ್ವೀಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

    ಮಧ್ಯಾಹ್ನ 12:30 ರಿಂದ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಅನೇಕ ಮಂದಿ ಟ್ವಿಟ್ಟರ್‌ ಹಾಗೂ ಇನ್‌ಇಸ್ಟಾಗ್ರಾಮ್‌ನಲ್ಲಿ ಸರ್ವರ್‌ ಡೌನ್‌ ಬಗ್ಗೆ ಚಿತ್ರ ವಿಚಿತ್ರ ಮೀಮ್‌ಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಟ್ರೋಲ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಯಚೂರಿನ ಸೂಗುರೇಶ್ವರ ದೇವಾಲಯಕ್ಕಿಲ್ಲ ಗ್ರಹಣ ಎಫೆಕ್ಟ್- ಮಂತ್ರಾಲಯ ಮಠದಲ್ಲಿ ಶಾಂತಿ ಹೋಮ

    Live Tv
    [brid partner=56869869 player=32851 video=960834 autoplay=true]

  • ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ತೆಹ್ರಾನ್: ಹಿಜಬ್ (Hijab) ಧರಿಸದ್ದಕ್ಕೆ ನೈತಿಕ ಪೊಲೀಸ್‌ಗಿರಿಗೆ (Police) ಯುವತಿ ಬಲಿಯಾದ ಪ್ರಕರಣ ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆ (Iran Protest) ಭುಗಿಲೆದ್ದಿದ್ದು, ಇಂಟರ್‌ನೆಟ್ (Internet) ಬಳಕೆಯೊಂದಿಗೆ ವಾಟ್ಸಪ್‌ (WhatsApp), ಇನ್‌ಸ್ಟಾಗ್ರಾಮ್ (Instagram) ಬಳಕೆಯನ್ನೂ ನಿಷೇಧಿಸಲಾಗಿದೆ.

    ಇರಾನ್ ಮಹಿಳೆಯರ (Women) ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಅದನ್ನು ಹತ್ತಿಕ್ಕಲು ಪೊಲೀಸರು (Police) ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

    ಇತ್ತೀಚೆಗೆ ಇರಾನ್‌ನಲ್ಲಿ ಫೇಸ್‌ಬುಕ್ (FaceBook), ಟ್ವಿಟರ್ (Twitter), ಟೆಲಿಗ್ರಾಮ್, ಯೂಟ್ಯೂಬ್ (Youtube) ಮತ್ತು ಟಿಕ್‌ಟಾಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದ (Social Media) ವೇದಿಕೆಗಳ ಮೇಲೆ ನಿರ್ಬಂಧ ವಿಧಿಸಿದ ನಂತರ ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಮ್ ವ್ಯಾಪಕವಾಗಿ ಬಳಕೆಯಾಗಿವೆ. ಹಾಗಾಗಿ ತುರ್ತು ಪರಿಸ್ಥಿತಿಯಲ್ಲಿ ಇಂಟರ್‌ನೆಟ್ (Internet) ಬಳಕೆಯನ್ನು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲೂ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.

    ಸತತ 7ನೇ ದಿನ ಇರಾನ್‌ನ ಬಹುತೇಕ ನಗರ, ಪಟ್ಟಣಗಳಲ್ಲಿ ಮಹಿಳೆಯರ ಪ್ರತಿಭಟನೆಗಳು ಮುಂದುವರಿದಿವೆ. ಸಾವಿರ ಸಾವಿರ ಮಂದಿ ಮಹಿಳೆಯರು ಹಗಲು ರಾತ್ರಿ ಎನ್ನದೇ ಕೆರ್ಮಾನ್‌ನ ಆಜಾದಿ ವೃತ್ತದಲ್ಲಿ, ಸರ್ವಾಧಿಕಾರ ನಶಿಸಲಿ. ಹಿಜಬ್ ಕಟ್ಟುಪಾಡು ನಶಿಸಲಿ ಎಂದು ಘೋಷಣೆ ಕೂಗುತ್ತಿದ್ದಾರೆ. ಕತ್ತರಿ ಹಿಡಿದು ಕೂದಲು ಕತ್ತರಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸಿದ್ದಾರೆ. ಹಿಜಬ್ ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ನಾವು ಯುದ್ಧ ಭೂಮಿಯಲ್ಲಿ ಹುಟ್ಟಿದವರು. ಬನ್ನಿ ನಮ್ಮನ್ನು ಎದುರಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತಿದ್ದಾರೆ.

    ಪ್ರತಿಭಟನೆ ದಮನಿಸಲು ರೈಸಿ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಈವರೆಗೂ ಪೊಲೀಸರ ಗುಂಡಿಗೆ ದೇಶದ ವಿವಿಧೆಡೆ 8 ಮಂದಿ ಬಲಿಯಾಗಿದ್ದಾರೆ. ಪ್ರತಿಭಟನಾಕಾರರು ಮಾತ್ರ ಹಿಂದೆ ಸರಿಯಲು ಸಿದ್ಧರಿಲ್ಲ. ಇದು ಇರಾನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ

    ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ

    ಹಾಸನ: ಹಿಂದೂ ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್-ಜಟ್ಕಾ ಕಟ್ ವಿವಾದ ಬಳಿಕ, ಇದೀಗ ಮಾವಿನಹಣ್ಣು ಹೋಲ್‍ಸೇಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕೆಂದು ಹಿಂದೂ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ.

    ಕೆಲ ದಿನಗಳ ಹಿಂದೆ ಹಿಂದೂ ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿತ್ತು. ನಂತರ ಯುಗಾದಿ ಹಬ್ಬದ ಹೊಸತೊಡುಕು ವೇಳೆ ಹಿಂದೂಗಳು ಮುಸಲ್ಮಾನರು ಮಾರುವ ಹಲಾಲ್ ಕಟ್ ಮಾಂಸವನ್ನು ಖರೀದಿಸಬಾರದು. ಬದಲಾಗಿ ಹಿಂದೂಗಳು ಮಾರುವ ಜಟ್ಕಾಕಟ್ ಮಾಂಸವನ್ನು ಕೊಳ್ಳಬೇಕು ಎಂದು ಹಿಂದೂ ಪರ ಸಂಘಟನೆಗಳು ಅಭಿಯಾನ ಆರಂಭಿಸಿದ್ದವು. ಅದರಂತೆ ಜಟ್ಕಾಕಟ್ ಅಭಿಯಾನ ಯಶಸ್ವಿಯಾಗಿತ್ತು. ಇದನ್ನೂ ಓದಿ: ಸತತ 15ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಸೋಮವಾರ ಮಸೀದಿಯಲ್ಲಿ ಸೌಂಡ್ ಬ್ಯಾನ್ ಅಭಿಯಾನ ಆರಂಭಿಸಿರುವ ಹಿಂದೂಪರ ಸಂಘಟನೆಗಳು ಇದೀಗ ಹಾಸದಲ್ಲಿ ಮಾವಿನಹಣ್ಣು ಹೋಲ್‍ಸೇಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕು ಎಂಬ ಪೋಸ್ಟರ್‍ಗಳನ್ನು ವಾಟ್ಸಪ್‍ನಲ್ಲಿ ಶೇರ್ ಮಾಡುವ ಮೂಲಕ ಹಿಂದೂ ಯುವಕರೇ ಮುಂದೆ ಬನ್ನಿ ಎಂಬ ಕರೆ ನೀಡಿ ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ಸದ್ಯ ಈ ಪೋಸ್ಟರ್‍ಗಳು ವೈರಲ್ ಆಗುತ್ತಿದೆ. ಇದನ್ನೂ ಓದಿ: ಮೈಸೂರಿನಿಂದ ಬಂದ ರಾಯಲ್ ಎನ್‍ಫೀಲ್ಡ್ ಆಂಧ್ರದಲ್ಲಿ ಸ್ಫೋಟ 

  • ಹಸ್ತಮೈಥುನದ ವೀಡಿಯೋ ಕಳುಹಿಸಿ ಯುವತಿಯನ್ನು ಮಂಚಕ್ಕೆ ಕರೆದ ಎಂಬಿಎ ವಿದ್ಯಾರ್ಥಿ ಅರೆಸ್ಟ್

    ಹಸ್ತಮೈಥುನದ ವೀಡಿಯೋ ಕಳುಹಿಸಿ ಯುವತಿಯನ್ನು ಮಂಚಕ್ಕೆ ಕರೆದ ಎಂಬಿಎ ವಿದ್ಯಾರ್ಥಿ ಅರೆಸ್ಟ್

    ಲಕ್ನೋ: ಆರೋಪಿಯೊಬ್ಬ ಹಸ್ತಮೈಥುನದ ವೀಡಿಯೋವೊಂದನ್ನು ಯುವತಿಗೆ ವಾಟ್ಸಪ್‍ನಲ್ಲಿ ಕಳುಹಿಸಿ ಆಕೆಯನ್ನು ಲೈಂಗಿಕ ಸಂಬಂಧಕ್ಕೆ ಕರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ನೋಯ್ದಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಮಾಧ್ಯಮಗಳ ವರದಿ ಪ್ರಕಾರ ಆರೋಪಿ ಮತ್ತು ಯುವತಿ ಸುಮಾರು ಎರಡು ವರ್ಷಗಳಿಂದ ಪರಿಚಿತರು. ಆರೋಪಿಯ ವರ್ತನೆ ಇಷ್ಟವಾಗದ ಕಾರಣ ಆಕೆ ಇತ್ತೀಚೆಗೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದಾದ ನಂತರ, ಮಾರ್ಚ್ 19 ರಂದು, ಆರೋಪಿಯು ಜಿಮ್‍ನಲ್ಲಿ ಆಕೆಗೆ ನನ್ನ ಜೊತೆ ಲೈಂಗಿಕ ಸಂಬಂಧ ಬೆಳೆಸಲು ಒಂದು ಅವಕಾಶ ನೀಡು ಎಂದು ಪೀಡಿಸುತ್ತಿದ್ದನು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

    ಹಂತ-3 ಪೊಲೀಸ್ ಠಾಣೆಯ ಉಸ್ತುವಾರಿ ವಿವೇಕ್ ತ್ರಿವೇದಿ ಅವರ ಪ್ರಕಾರ, ಯುವತಿಯು ಆರೋಪಿಯ ವಿರುದ್ಧ ಭಾನುವಾರ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಇಬ್ಬರ ನಡುವೆ ಮತ್ತೆ ಮಾತುಕತೆ ಆರಂಭವಾದಾಗ ಯುವಕ ತನ್ನೊಂದಿಗೆ ದೈಹಿಕ ಸಂಬಂಧ ಹೊಂದುವ ಆಸೆ ವ್ಯಕ್ತಪಡಿಸಿದ್ದಾಗಿ ಸಂತ್ರಸ್ತೆ ಅದರಲ್ಲಿ ಹೇಳಿದ್ದರು. ಆದರೆ ಯುವತಿ ನಿರಾಕರಿಸಿದ್ದಾಳೆ. ಇದರ ನಂತರ, ಮಾರ್ಚ್ 21 ರಂದು, ಮಧ್ಯಾಹ್ನ 2:40ರ ಸುಮಾರಿಗೆ ಆರೋಪಿಯು ವಾಟ್ಸಾಪ್‍ನಲ್ಲಿ ಅಶ್ಲೀಲ ವೀಡಿಯೊವನ್ನು ಆಕೆಗೆ ಕಳುಹಿಸಿದ್ದಾನೆ. ಸಂತ್ರಸ್ತೆ ತನ್ನ ದೂರಿನಲ್ಲಿ, ನಾನು ಸಂದೇಶವನ್ನು ತೆರೆದಾಗ, ಅದು ಅವನ ಹಸ್ತಮೈಥುನದ ವೀಡಿಯೊವಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ

    ದೂರಿನ ಮೇರೆಗೆ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಮೇಲೆ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ) ಮತ್ತು 509 (ಮಹಿಳೆಯ ವಿನಯವನ್ನು ಅವಮಾನಿಸುವ ಉದ್ದೇಶ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಎಸ್‍ಎಚ್‍ಒ, ಆರೋಪಿಯನ್ನು ಹಿಡಿಯಲು ತಂಡವನ್ನು ರಚಿಸಿದ್ದರು. ಸೋಮವಾರ ಬೆಳಗ್ಗೆ ಸೆಕ್ಟರ್ 61 ರ ರಿಂಗ್ ಕ್ರಾಸ್‍ರೋಡ್‍ನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ತನಿಖೆಯ ವೇಳೆ ಆರೋಪಿ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದ ವಿಚಾರ ತಿಳಿದು ಬಂದಿದೆ.

  • ಕಾಲೇಜು ವಾಟ್ಸಾಪ್ ಗ್ರೂಪ್‍ನಲ್ಲಿ ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ ವಿದ್ಯಾರ್ಥಿನಿ

    ಕಾಲೇಜು ವಾಟ್ಸಾಪ್ ಗ್ರೂಪ್‍ನಲ್ಲಿ ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ ವಿದ್ಯಾರ್ಥಿನಿ

    ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ್ದನ್ನು ಖಂಡಿಸಿ ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

    ಕಳೆದ ತಿಂಗಳು ಹಿಜಬ್ ವಿಚಾರವಾಗಿ ಗಲಾಟೆ ನಡೆಯುತ್ತಿದ್ದ ವೇಳೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪಿನಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ್ದಳು. ಇದೀಗ ಈ ವಿಷಯ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನನ್ನ ದಾರಿ ತಪ್ಪಿಸಲು ಈಶ್ವರಪ್ಪ ಜಗಳ ಮಾಡುಬೇಕು ಅಂತಾ ಬರ್ತಾರೆ: ಸಿದ್ದರಾಮಯ್ಯ ಹಾಸ್ಯ ಚಟಾಕಿ

    ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ ವಿದ್ಯಾರ್ಥಿನಿ ವಿರುದ್ಧ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಬೇಕು. ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತುಪಡಿಸುವಂತೆ ಆಗ್ರಹಿಸಿ ಕಾಲೇಜಿನ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

    ಪಾಕಿಸ್ತಾನ ಧ್ವಜದ ಸ್ಟಿಕರ್ ಹಾಕಿದ್ದ ವಿದ್ಯಾರ್ಥಿನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಈ ಹಿಂದೆಯೇ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದೆವು. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

    ದೇಶದ್ರೋಹದ ಕೃತ್ಯ ಎಸಗಿರುವ ವಿದ್ಯಾರ್ಥಿನಿ ವಿರುದ್ಧ ಇನ್ನು ಎರಡು ದಿನದೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುವುವರೆಗೂ ಕಾಲೇಜಿನಲ್ಲಿ ಯಾವುದೇ ತರಗತಿಗಳು ನಡೆಯಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸ್ಟೇಟಸ್‍ಗೆ ಯುವತಿಯ ನಗ್ನ ಫೋಟೋ ಹಾಕಿದ ಪ್ರೇಮಿ ವಿರುದ್ಧ ದೂರು ದಾಖಲು

    ಸ್ಟೇಟಸ್‍ಗೆ ಯುವತಿಯ ನಗ್ನ ಫೋಟೋ ಹಾಕಿದ ಪ್ರೇಮಿ ವಿರುದ್ಧ ದೂರು ದಾಖಲು

    ಹುಬ್ಬಳ್ಳಿ: ಪ್ರೇಮಿಯೊಬ್ಬ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ ನಗ್ನ ವೀಡಿಯೋ ಕಾಲ್ ಮಾಡಿದ್ದ. ನಗ್ನ ಫೋಟೋ ಎಡಿಟ್ ಮಾಡಿ ವಾಟ್ಸಪ್ ಸ್ಟೇಟಸ್‍ಗೆ ಇಡುವ ಮೂಲಕ ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಮಹಾರಾಷ್ಟ್ರದ ಶಿರಡಿ ಮೂಲದ ಪ್ರೇಮಿ ವಿಕೃತಿ ಮೆರೆದಿದ್ದಾನೆ. ವಾಟ್ಸಪ್ ಸ್ಟೇಟಸ್‍ಗೆ ಯುವತಿಯ ನಗ್ನ ಫೋಟೋ ಹಾಕಿರುವ ಈತನ ವಿರುದ್ಧ ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:   ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿ ಆತ್ಮಹತ್ಯೆ – ಶಿಕ್ಷಕ ಅರೆಸ್ಟ್

    ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಪ್ರೇಮಿ ಅದೇ ಕಾಲೇಜಿನ ಕಿರಿಯ ವಿದ್ಯಾರ್ಥಿನಿಯ ಸ್ನೇಹ ಸಂಪಾದಿಸಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ  ವಾಟ್ಸಪ್‌ ನಂಬರ್ ಪಡೆದಿದ್ದಾನೆ. ಚಾಟಿಂಗ್ ಮೂಲಕ ಸಲುಗೆ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ಯುವತಿಯ ನಗ್ನ ವೀಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ. ನವೆಂಬರ್11 ರಂದು ಆಕೆಯ ನಗ್ನ ಫೋಟೋ ಎಡಿಟ್ ಮಾಡಿ ಸ್ಟೇಟಸ್‍ಗೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ. ಇದನ್ನೂ ಓದಿ: ಯುವರತ್ನನಿಗೆ ಪದ್ಮಶ್ರೀ ನೀಡಲು ಶಿಫಾರಸ್ಸಿಗೆ ತೀರ್ಮಾನ

  • 1 ಲಕ್ಷ ಮೌಲ್ಯದ ನಾಲ್ಕು ನಾಯಿಗಳ ಕಳ್ಳತನ – ವಾಟ್ಸಪ್‍ನಿಂದ ಶ್ವಾನ ಕಳ್ಳರು ಅರೆಸ್ಟ್

    1 ಲಕ್ಷ ಮೌಲ್ಯದ ನಾಲ್ಕು ನಾಯಿಗಳ ಕಳ್ಳತನ – ವಾಟ್ಸಪ್‍ನಿಂದ ಶ್ವಾನ ಕಳ್ಳರು ಅರೆಸ್ಟ್

    ಹಾಸನ: ಹಾಸನ ಹೊರವಲಯದ ಹೊನ್ನೇನಹಳ್ಳಿ ರಸ್ತೆಯಲ್ಲಿರುವ GRR ಕೆನಲ್ಸ್ ನಾಯಿ ಫಾರಂನಿಂದ ದುಬಾರಿ ಬೆಲೆಯ ನಾಯಿಗಳನ್ನು ಕಳ್ಳತನ ಮಾಡಿದ್ದ ಕಳ್ಳರು ಅಂದರ್ ಆಗಿದ್ದಾರೆ. ಕಳ್ಳನ ಪತ್ತೆಗೆ ಸಹಕಾರಿಯಾಗಿದ್ದು ವಾಟ್ಸಾಪ್ ಗ್ರೂಪ್.

    ಹಾಸನ ನಗರದ ಹೊರವಲಯದ ಗೆಂಡೆಕಟ್ಟೆ ಫಾರೆಸ್ಟ್ ಬಳಿ ದಿವಾಕರ್ ಎಂಬವರಿಗೆ ಸೇರಿದ GRR ಕೆನಲ್ಸ್ ನಾಯಿ ಫಾರಂನಲ್ಲಿ ಜೂ.18ರ ರಾತ್ರಿ ಒಂದೂವರೆ ಲಕ್ಷ ರೂ. ಮೌಲ್ಯದ ನಾಲ್ಕು ನಾಯಿಗಳನ್ನು ನಾಲ್ವರು ಸೇರಿ ಕದ್ದೊಯ್ದಿದ್ದರು. ರಾಟ್ ವೀಲರ್, ಲ್ಯಾಬ್ರಡಾರ್, ಡ್ಯಾಶೌಂಡ್ ಮತ್ತು ಗೋಲ್ಡನ್ ರಿಟ್ರೀವರ್ ಜೊತೆಗೆ ಏರ್ ಫ್ರೆಶರ್, ಕಟ್ಟಿಂಗ್ ಮಿಷನ್‍ಗಳನ್ನೂ ಹೊತ್ತೊಯ್ದಿದ್ದರು. ಮಾರನೇ ದಿನ ಇದನ್ನು ತಿಳಿದ ಫಾರಂ ಮಾಲೀಕರು ಬಡಾವಣೆ ಠಾಣೆಗೆ ದೂರು ನೀಡಿದ್ದರು.

    ನಾಯಿ ಕಳ್ಳತನ ಪ್ರಕರಣ ದಾಖಲಿಸಿಕೊಂಡ ಹಾಸನ ಬಡಾವಣೆ ಠಾಣೆ ಪೊಲೀಸರು ತನಿಖೆ ಆರಂಭಿಸಿದರು. ಈ ನಡುವೆ ದಿವಾಕರ್, ವ್ಯಾಟ್ಸಪ್ ಮೂಲಕ ಸ್ನೇಹಿತರು ಮತ್ತು ಮಾರಾಟಗಾರರ ಸಂಘದ ಸದಸ್ಯರು ಹಾಗೂ ಗ್ರಾಹಕರ ಗ್ರೂಪ್‍ಗಳಿಗೆ, ತಾವು ಸಾಕಿದ್ದ ನಾಯಿ ಕಳುವಾಗಿರುವುದನ್ನು ಫೋಟೋ ಸಮೇತ ಶೇರ್ ಮಾಡಿದ್ದರು. ಇತ್ತ ಲಕ್ಷಾಂತರ ರೂ. ಬೆಲೆ ಬಾಳುವ ನಾಯಿ ಕದ್ದಿದ್ದ ಚೋರರು, ಅವುಗಳನ್ನು ಮಾರಾಟ ಮಾಡಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದರು. ಅವರು ಸಹ ನಾಯಿ ಮಾರಾಟಕ್ಕಿವೆ. ಬೇಕಾದವರು ತಮ್ಮನ್ನು ಸಂಪರ್ಕಿಸಬಹುದು ಎಂದು ವಾಟ್ಸಾಪ್ ಗ್ರೂಪ್‍ಗೇ ಫೋಟೋ ಸಮೇತ ಶೇರ್ ಮಾಡಿದ್ದರು.

    ನಾಯಿಕೊಳ್ಳಲು ಆಸಕ್ತಿವುಳ್ಳವರು ತಮ್ಮನ್ನು ಸಂಪರ್ಕಿಸಿ ಎಂದು ಕದ್ದ ನಾಯಿಗಳ ಫೋಟೋ ಕಳಿಸಿದ್ದರು. ಇದಾದ ಮೇಲೆ ಒಂದು ನಾಯಿ ಮಾರಾಟ ಸಹ ಆಗಿತ್ತು. ಇದನ್ನು ಗಮನಿಸಿದ ಸ್ನೇಹಿತರೊಬ್ಬರು, ಕೂಡಲೇ ದಿವಾಕರ್‍ಗೆ ಮಾಹಿತಿ ನೀಡಿದ್ದಾರೆ. ದಿವಾಕರ್ ಅದನ್ನು ಪೊಲೀಸರಿಗೆ ತಿಳಿಸಿದ್ದು, ಈ ಮಾಹಿತಿ ಆಧರಿಸಿ ದಿಢೀರ್ ಕಾರ್ಯಪ್ರವೃತ್ತರಾದ ಬಡಾವಣೆ ಪೊಲೀಸರು, ಪ್ರಮುಖ ಆರೋಪಿ ಹೊಳೆನರಸೀಪುರ ಮೂಲದ ರೋಹನ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ನಿಜಾಂಶ ಬಾಯಿ ಬಿಟ್ಟಿದ್ದಾನೆ. ಈತನೊಂದಿಗೆ ಕೈ ಜೋಡಿಸಿದ್ದ ಮೂರು ಮಂದಿಯನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಹಣದ ದುರಾಸೆಯಿಂದ ಕಳ್ಳತನಕ್ಕಿಳಿದ ಖದೀಮರು ಕಂಬಿ ಎಣಿಸುವಂತಾಗಿದೆ.

    ಪ್ರಕರಣದ ಪ್ರಮುಖ ಆರೋಪಿ ರೋಹನ್ ಕಾಲೇಜು ವಿದ್ಯಾರ್ಥಿ ಎನ್ನಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಕಾಲೇಜಿಗೆ ರಜೆ ಇತ್ತು. ಈ ನಡುವೆ ಖರ್ಚಿಗೆ ಹಣವಿಲ್ಲ ಎಂದು ಆಟೋ ಓಡಿಸಲು ಆರಂಭಿಸಿದ್ದ. ಆಟೋ ಜೊತೆಯಲ್ಲೇ ಕಳ್ಳತನವನ್ನು ಮಾಡುತ್ತಿದ್ದ. ಆಟೋ ಓಡಿಸುವಾಗಲೆ ಬ್ರೀಡ್ ನಾಯಿಗಳನ್ನು ಸಾಕಿದ್ದ ನರ್ಸರಿ ಈತನ ಕಣ್ಣಿಗೆ ಬಿದ್ದಿತ್ತು. ಲಾಕ್‍ಡೌನ್ ಕಾರಣದಿಂದ ಬೆಂಗಳೂರಿಂದ ಬಂದಿದ್ದ ತನ್ನ ಸ್ನೇಹಿತರ ಜೊತೆಗೂಡಿ ನಾಯಿಗಳನ್ನು ಕಳುವು ಮಾಡಿದ್ದ. ಇದನ್ನೂ ಓದಿ: ನಿಂಬೇಹಣ್ಣಿನ ಜ್ಯೂಸ್ ಮಾರುತ್ತಿದ್ದ ಮಹಿಳೆ ಇಂದು ಪೊಲೀಸ್