Tag: ವಾಟ್ಸಪ್ ಬೀಟಾ

  • ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್

    ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್

    ವಾಷಿಂಗ್ಟನ್: ಹಲವು ದಿನಗಳಿಂದ ಟ್ವಿಟ್ಟರ್ ಬಳಕೆದಾರರು ಎಡಿಟ್ ಬಟನ್ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಟ್ವಿಟ್ಟರ್ ಈ ಎಡಿಟ್ ಬಟನ್ ಅನ್ನು ತರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ವಾಟ್ಸಪ್ ಟ್ವಿಟ್ಟರ್‌ಗೂ ಮೊದಲೇ ಬಳಕೆದಾರರಿಗೆ ಎಡಿಟ್ ಆಪ್ಶನ್ ನೀಡುವ ಸಾಧ್ಯತೆ ಇದೆ.

    ಹೌದು, ವಾಟ್ಸಪ್ ತನ್ನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನ್ ಅನ್ನು ಪರೀಕ್ಷಿಸುತ್ತಿದೆ. ಇದರ ಪ್ರಕಾರ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ.

    whatsapp

    ಈ ಹಿಂದೆ ಬಳಕೆದಾರರು ತಪ್ಪಾಗಿ ಸಂದೇಶವನ್ನು ಯಾರಿಗಾದರೂ ಕಳುಹಿಸಿದಾಗ, ಅದನ್ನು ಎಡಿಟ್ ಮಾಡಲು ಅವಕಾಶ ಇರಲಿಲ್ಲ. ಬದಲಿಗೆ ಆ ಸಂದೇಶವನ್ನು ಡಿಲೀಟ್ ಫಾರ್ ಎವ್ರಿವನ್ ಮೂಲಕ ಅಳಿಸಿ, ಹೊಸದಾಗಿ ಸಂದೇಶ ಕಳುಹಿಸಲಾಗುತ್ತಿತ್ತು. ಆದರೆ ಇದೀಗ ಹೊಸ ಫೀಚರ್ ಮೂಲಕ ತಪ್ಪಾಗಿ ಕಳುಹಿಸಿದ ಸಂದೇಶವನ್ನು ಅಳಿಸದೇ ಅಲ್ಲಿಂದಲ್ಲಿಗೇ ಸರಿಪಡಿಸಲು ಸಾಧ್ಯವಾಗಲಿದೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1

    ವಾಟ್ಸಪ್ ಈ ಎಡಿಟ್ ಬಟನ್ ತರುವ ಬಗ್ಗೆ 5 ವರ್ಷಗಳ ಹಿಂದೆಯೇ ಯೋಜಿಸಿತ್ತು ಎಂದು ವರದಿಯಾಗಿದೆ. ಇತ್ತೀಚೆಗೆ ಟ್ವಿಟ್ಟರ್ ಎಡಿಟ್ ಬಟನ್ ತರುವ ಬಗ್ಗೆ ಪ್ರಸ್ತಾಪಿಸಿದ ಬಳಿಕ ವಾಟ್ಸಪ್ ಕೂಡಾ ಮತ್ತೆ ಈ ಎಡಿಟ್ ಬಟನ್ ಮೇಲೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.

    ಸದ್ಯ ವಾಟ್ಸಪ್ ಅಭಿವೃದ್ಧಿಪಡಿಸುತ್ತಿರುವ ಫೀಚರ್‌ನ ಸ್ಕ್ರೀನ್‌ಶಾಟ್ ಅನ್ನು ವೆಬಿಟೈನ್‌ಫೋ ಹಂಚಿಕೊಂಡಿದೆ. ಬಳಕೆದಾರರು ಕಳುಹಿಸಿದ ಸಂದೇಶವನ್ನು ಲಾಂಗ್ ಪ್ರೆಸ್ ಮೂಲಕ ಆಯ್ಕೆ ಮಾಡಿದಾಗ, ಸಂದೇಶವನ್ನು ನಕಲಿಸು(ಕಾಪಿ), ಫಾರ್ವರ್ಡ್ ಆಯ್ಕೆಯೊಂದಿಗೆ ಎಡಿಟ್ ಆಯ್ಕೆಯೂ ಗೋಚರಿಸಲಿದೆ. ಎಡಿಟ್ ಬಟನ್ ಆಯ್ಕೆ ಮಾಡಿದ ಬಳಿಕ ಕಳುಹಿಸಲಾದ ಸಂದೇಶದಲ್ಲಿ ಅಕ್ಷರ ದೋಷವಿದ್ದರೆ, ಅದನ್ನು ಸರಿಪಡಿಸಬಹುದು.

    ಆದರೆ ಸಂದೇಶವನ್ನು ಎಡಿಟ್ ಮಾಡಿದ ಬಳಿಕ ಹಿಂದೆ ಕಳುಹಿಸಿದ ಸಂದೇಶದ ಬಗ್ಗೆ ಯಾವುದೇ ಎಡಿಟ್ ಹಿಸ್ಟರಿ ಇತಿಹಾಸವನ್ನು ತೋರಿಸುವುದಿಲ್ಲ. ಇದು ಅಭಿವೃದ್ಧಿ ಹಂತದಲ್ಲಿರುವುದರಿಂದ ವಾಟ್ಸಪ್ ಈ ಬಗ್ಗೆ ಬಿಡುಗಡೆಗೂ ಮೊದಲು ಫೀಚರ್‌ನಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಘಟಕ ತೆರೆಯುತ್ತೇನೆ, ಆದ್ರೆ ನನ್ನ ಷರತ್ತು ಮೊದಲು ಪೂರ್ಣಗೊಳ್ಳಬೇಕು: ಮಸ್ಕ್

    ಈ ಫೀಚರ್ ಸದ್ಯ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ವಾಟ್ಸಪ್ ಐಒಎಸ್ ಬೀಟಾ ಬಳಕೆದಾರರಿಗೂ ಫೀಚರ್ ಅನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗುತ್ತಿದೆ. ಕೊನೆಯದಾಗಿ ಈ ಫೀಚರ್ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಾಗ ಏನೆಲ್ಲಾ ಬದಲಾವಣೆಯಾಗಬಹುದು ಎಂಬುದು ಕಾದು ನೋಡಬೇಕಿದೆ.

  • ಒಂದೇ ವಾಟ್ಸಪ್‌ ನಂಬರ್‌ನ್ನು 4 ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಿ

    ಒಂದೇ ವಾಟ್ಸಪ್‌ ನಂಬರ್‌ನ್ನು 4 ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಿ

    – ಬೀಟಾ ಅವೃತ್ತಿಯ ಬಳಕೆದಾರರಿಗೆ ಲಭ್ಯ
    – ಶೀಘ್ರವೇ ಸಿಗಲಿದೆ ಎಲ್ಲ ಬಳಕೆದಾರರಿಗೆ ಫೀಚರ್‌

    ಕ್ಯಾಲಿಫೋರ್ನಿಯಾ: ಇನ್ನು ಮುಂದೆ ನೀವು ಒಂದೇ ವಾಟ್ಸಪ್‌ ನಂಬರ್‌ ಅನ್ನು 4 ಡಿವೈಸ್‌ಗಳಲ್ಲಿ ಬಳಸಬಹುದು.

    ಇಲ್ಲಿಯವರೆಗೆ ವಾಟ್ಸಪ್‌ ನಂಬರ್‌ ಒಂದು ಫೋನಿಗೆ ಮಾತ್ರ ಬಳಕೆಯಾಗುತ್ತಿತ್ತು. ಆದರೆ ಇನ್ನು ಮುಂದೆ ಆ ಖಾತೆಯನ್ನು 4 ಸಾಧನಗಳಲ್ಲಿ ಬಳಸುವಂತೆ ಅಪ್‌ಡೇಟ್‌ ಮಾಡಲು ಫೇಸ್‌ಬುಕ್‌ ಮಾಲೀಕತ್ವದ ವಾಟ್ಸಪ್‌ ಮುಂದಾಗುತ್ತಿದೆ.

    4 ಡಿವೈಸ್‌ಗಳಿಗೆ ಸಪೋರ್ಟ್‌ ಮಾಡುವ ಸಂಬಂಧ ವಾಟ್ಸಪ್‌ ಹಲವು ದಿನಗಳಿಂದ ಟೆಸ್ಟ್‌ ಮಾಡುತ್ತಿದ್ದು ಈಗ ಲಭ್ಯವಾಗಿದೆ. ಈ ವಿಶೇಷತೆ ಅಧಿಕೃತವಾಗಿ ಪ್ರಕಟವಾಗಿಲ್ಲ. ಈಗ ವಾಟ್ಸಪ್‌ ಬೀಟಾ ಆವೃತ್ತಿ ಅಪ್ಲಿಕೇಶನ್‌ ಬಳಸುವ ಮಂದಿಗೆ ಈ ವಿಶೇಷತೆ ಲಭ್ಯವಾಗಿದೆ.

    ಬೀಟಾ ಅವೃತ್ತಿಯನ್ನು ಬಳಸುವ ಎಲ್ಲರಿಗೆ ಇದು ಲಭ್ಯವಾಗಿಲ್ಲ. ಆಯ್ದ ಕೆಲ ಬಳಕೆದಾರರಿಗೆ ಈ ವಿಶೇಷತೆ ಲಭ್ಯವಾಗಿದೆ ಎಂದು wabetainfo ವರದಿ ಮಾಡಿದೆ.

    ಹೇಗೆ ಕಾರ್ಯನಿರ್ವಹಿಸುತ್ತದೆ?
    ವಾಟ್ಸಪ್‌ ಮುಖಪುಟದ ಬಲ ತುದಿಯಲ್ಲಿರುವ ಮೂರು ಚುಕ್ಕೆಗಳನ್ನು(ಮೆನು ಬಟನ್) ಒತ್ತಿದಾಗ ‘Linked Device’ ಕಾಣುತ್ತದೆ. ಇಲ್ಲಿ ಆಯ್ಕೆ ಮಾಡಿಕೊಂಡು ಈ ವಿಶೇಷತೆಯನ್ನು ಬಳಕೆದಾರರು ಬಳಸಬಹುದಾಗಿದೆ. ಬಳಕೆದಾರು ಡೆಸ್ಕ್‌ಟಾಪ್‌ ಆವೃತ್ತಿಯ ವಾಟ್ಸಪ್‌ ವೆಬ್‌ ಮೂಲಕ 4 ಸಾಧನಗಳನ್ನು ಬಳಸಬಹುದಾಗಿದೆ.

    ಈಗಾಗಲೇ ಕೆಲ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಡೆಸ್ಟ್‌ಟಾಪ್‌/ಲ್ಯಾಪ್‌ಟಾಪ್‌ ಮೂಲಕ 4ಕ್ಕಿಂತ ಹೆಚ್ಚು ಸಾಧನಗಳನ್ನು ಕನೆಕ್ಟ್‌ ಮಾಡಲು ಸಾಧ್ಯವಿದೆ. ಡೆಸ್ಟ್‌ಟಾಪ್‌ ಅವೃತ್ತಿ ಓಪನ್‌ ಮಾಡಿ ಫೋನ್‌ ನಂಬರ್‌ ಒತ್ತಿದಾಗ ಒಂದು ಒಟಿಪಿ(ಒನ್‌ ಟೈಂ ಪಾಸ್‌ವರ್ಡ್‌) ಬರುತ್ತದೆ. ಈ ಒಟಿಪಿಯನ್ನು ನಮೂದಿಸಿದಾಗ ಡೆಸ್ಟ್‌ಟಾಪ್‌ನಲ್ಲೂ ಆ ಅಪ್ಲಿಕೇಶನ್‌ ಬಳಸಬಹುದು.

    ಈಗ ವಾಟ್ಸಪ್‌ ವೆಬ್‌ ಮೂಲಕ ಡೆಸ್ಟ್‌ ಟಾಪ್‌ನಲ್ಲಿ ವಾಟ್ಸಪ್‌ ಓಪನ್‌ ಮಾಡಬಹುದಾಗಿದೆ. ಹೀಗಾಗಿ ಈಗ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾನ್‌ ಮಾಡಿದಂತೆ ಓಪನ್‌ ಮಾಡಬೇಕಾಗುತ್ತದೋ ಅಥವಾ ಒಟಿಪಿ ಮೂಲಕ ನಾಲ್ಕು ಸಾಧನಗಳು ಕನೆಕ್ಟ್‌ ಆಗುತ್ತದೋ ಎನ್ನುವುದು ತಿಳಿದು ಬಂದಿಲ್ಲ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾದಾಗ ಈ ಎಲ್ಲ ವಿಚಾರಗಳು ಸ್ಪಷ್ಟವಾಗಲಿದೆ.

  • ವಾಟ್ಸಪ್ ನಲ್ಲಿ ಗ್ರೂಪ್ ಕಾಲ್: ಆದ್ರೆ ಎಲ್ಲರಿಗೂ ಸಿಗಲ್ಲ!

    ವಾಟ್ಸಪ್ ನಲ್ಲಿ ಗ್ರೂಪ್ ಕಾಲ್: ಆದ್ರೆ ಎಲ್ಲರಿಗೂ ಸಿಗಲ್ಲ!

    ಕ್ಯಾಲಿಫೋರ್ನಿಯಾ: ವಾಟ್ಸಪ್ ನಲ್ಲಿ ಇನ್ನು ಮುಂದೆ ಗ್ರೂಪ್ ಕಾಲ್ ಮಾಡಬಹುದು. ಆದರೆ ಎಲ್ಲ ವಾಟ್ಸಪ್ ಬಳಕೆದಾರರಿಗೆ ಈ ವಿಶೇಷತೆ ಲಭ್ಯವಾಗುವುದಿಲ್ಲ.

    ಈ ವಿಶೇಷತೆ ಈಗ ಕೆಲ ಐಫೋನ್ ಬಳಕೆದಾರರಿಗೆ ಲಭ್ಯವಾಗಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಇನ್ನೂ ಸಿಕ್ಕಿಲ್ಲ. ಈಗ ಹೇಗೆ ಕರೆ ಮಾಡಲು ವಿಶೇಷತೆ ಇದೆಯೋ ಅದೇ ರೀತಿಯಾಗಿ ಗ್ರೂಪ್ ಸದಸ್ಯರಿಗೆ ಕರೆ ಮಾಡಬಹುದಾಗಿದೆ. ಇದರಲ್ಲಿ ಎನೆಬಲ್ ಸ್ಪೀಕರ್, ವಿಡಿಯೋ ಕಾಲ್ ಜೊತೆಗೆ ಮ್ಯೂಟ್ ಆಯ್ಕೆ ಗಳು ಸದಸ್ಯರ ಪ್ರೊಫೈಲ್ ನಲ್ಲಿ ಇರಲಿದೆ. ಒಂದೇ ಬಾರಿಗೆ ಎಷ್ಟು ಜನರಿಗೆ ಕರೆ ಮಾಡಬಹುದು ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.

    ವಾಟ್ಸಪ್ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸದಾಗಿ ಸೆಲೆಕ್ಟ್ ಆಲ್ ವಿಶೇಷತೆ ಸಿಕ್ಕಿದೆ. ಈ ಆಯ್ಕೆಯನ್ನು ಬಳಕೆ ಮಾಡಿಕೊಂಡು ಬೇಕಾದ ಗ್ರೂಪ್ ಗಳನ್ನು ಮ್ಯೂಟ್ ಮಾಡಬಹುದಾಗಿದೆ. ಇದರ ಜೊತೆಗೆ ಫ್ರೆಂಡ್ಸ್, ಗ್ರೂಪ್ ಗಳನ್ನು ಪಿನ್ ಮಾಡಬಹುದು, ನೋಟಿಫಿಕೇಶನ್ ಗಳನ್ನು ಸುಲಭವಾಗಿ ಮ್ಯೂಟ್ ಮಾಡಬಹುದಾಗಿದೆ.

    ಗೂಗಲ್ ಪ್ಲೇ ಸ್ಟೋರಿನಿಂದ ಆಂಡ್ರಾಯ್ಡ್ ಬೀಟಾ ಆವೃತ್ತಿಯ ಅಪ್ಲಿಕೇಶನ್ ಬಳಸುತ್ತಿರುವ ಬಳಕೆದಾರರಿಗೆ ಮಾತ್ರ ಈ ವಿಶೇಷತೆ ಸಿಗಲಿದೆ.