Tag: ವಾಟಾಳ್ ನಾಗರಾಜು

  • ಚಪ್ಪಲಿ ಹಿಡಿದು, ಉರುಳು ಸೇವೆ ಮಾಡಿ ವಾಟಾಳ್ ಮತಯಾಚನೆ

    ಚಪ್ಪಲಿ ಹಿಡಿದು, ಉರುಳು ಸೇವೆ ಮಾಡಿ ವಾಟಾಳ್ ಮತಯಾಚನೆ

    ಬೆಂಗಳೂರು: ಲೋಕಸಭಾ ಚುನಾಚಣೆಗೆ ಎಲ್ಲ ಕ್ಷೇತ್ರದಲ್ಲೂ ಭರ್ಜರಿಯಾಗಿ ಅಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದಾರೆ. ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ವಾಟಾಳ್ ನಾಗರಾಜ್ ಅವರು ಚಪ್ಪಲಿ ಹಿಡಿದು ವಿಶಿಷ್ಟವಾಗಿ ಪ್ರಚಾರ ಮಾಡಿ ಸುದ್ದಿಯಾಗಿದ್ದಾರೆ.

    ಮತಯಾಚನೆ ಮಾಡುವ ವೇಳೆ ಕೈಯಲ್ಲಿ ಒಂದು ಜೊತೆ ಚಪ್ಪಲಿ ಹಿಡಿದು ಉರುಳು ಸೇವೆ ಮಾಡುವ ಮೂಲಕ ವಿಭಿನ್ನವಾಗಿ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದ್ದಾರೆ.

    ಇಂದು ವಾಟಾಳ್ ನಾಗರಾಜ್ ಕೆ.ಆರ್.ಮಾರ್ಕೆಟ್ ಮುಂಭಾಗದಲ್ಲಿ ಮತಯಾಚನೆ ಮಾಡಲು ಹೋಗಿದ್ದಾರೆ. ಈ ವೇಳೆ ತಮ್ಮ ಗುರುತಾದ ಚಪ್ಪಲಿ ಹಿಡಿದುಕೊಂಡು ಉರುಳು ಸೇವೆ ಮಾಡಿದ್ದಾರೆ. ಬಳಿಕ ಮಾತನಾಡಿದ ವಾಟಾಳ್, ಈಗಿರುವ ಸದಸ್ಯರು ಕರ್ನಾಟಕದ ಪರವಾಗಿ ಧ್ವನಿಯೆತ್ತಿ ಮಾತನಾಡಲಿಲ್ಲ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಆ ದೃಷ್ಟಿಯಿಂದ ನಾನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿಂತಿದ್ದೇನೆ. ಇಲ್ಲಿನ ಜನರು ನನಗೆ ಮತಹಾಕಿ ಗೆಲ್ಲಿಸುತ್ತಾರೆ, ನನ್ನ ಗೆಲವು ಖಚಿತವಾಗಿದೆ ಎಂದರು.

    28 ಸದ್ಯಸರು ಒಂದೇ, ಈ ವಾಟಾಳ್ ನಾಗರಾಜ್ ಒಂದೇ. ನಾನು ಗೆದ್ದರೆ ಲೋಕಸಭೆಯಲ್ಲಿ ಕನ್ನಡ ಪರವಾಗಿ, ಕನ್ನಡಿಗರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.

  • ಮಂಡ್ಯದ ವ್ಯಕ್ತಿಯಿಂದ ವಾಟಾಳ್ ನಾಗರಾಜ್‍ಗೆ ಸವಾಲ್

    ಮಂಡ್ಯದ ವ್ಯಕ್ತಿಯಿಂದ ವಾಟಾಳ್ ನಾಗರಾಜ್‍ಗೆ ಸವಾಲ್

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಮಂಗಳವಾರ ಕರ್ನಾಟಕ ಬಂದ್ ಗೆ ಘೋಷಣೆ ನೀಡಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಯೂಟರ್ನ್ ಹೊಡೆದಿದ್ದರು. ಇದರಿಂದ ಆಕ್ರೋಶಗೊಂಡ ಮಂಡ್ಯದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ವಾಟಾಳ್ ನಾಗರಾಜ್‍ಗೆ ಸವಾಲು ಹಾಕಿದ್ದಾರೆ.

    ಮಂಡ್ಯದ ಪೇಟೆ ಬೀದಿ ನಿವಾಸಿ ಅಂಗಪ್ಪ ಎಂಬವವರು ಸಾಮಾಜಿಕ ಜಾಲತಾಣಗಲ್ಲಿ ವಿಡಿಯೋವನ್ನು ಹರಿಬಿಟ್ಟು, ನಿನಗೆ ತಾಕತ್ತಿದ್ದರೆ ಜಮ್ಮು-ಕಾಶ್ಮೀರಕ್ಕೆ ಹೋಗೋಣ ಬಾ. ಅದು ಬಿಟ್ಟು ಕರ್ನಾಟಕ ಬಂದ್ ಏನಕ್ಕೆ ಮಾಡುತ್ತೀಯಾ ಎಂದು ಪ್ರಶ್ನೆ ಮಾಡಿ ವಾಟಾಳ್ ನಾಗರಾಜ್‍ಗೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಮಂಗಳವಾರ ಕರ್ನಾಟಕ ಬಂದ್ ಇಲ್ಲ -ಯೂ ಟರ್ನ್ ಹೊಡೆದ ವಾಟಾಳ್ ನಾಗರಾಜ್

    ವಿಡಿಯೋದಲ್ಲಿ ಏನಿದೆ?
    ವಾಟಾಳ್ ಬಂದ್ ಮಾಡುತ್ತೇನೆ ಎಂದು ಹೋಗುತ್ತಾರೆ. ಬಂದ್ ಮಾಡುವ ಅವಶ್ಯಕತೆ ಇಲ್ಲ. ಏನಕ್ಕೆ ಬಂದ್ ಮಾಡುತ್ತೀರ? ನಾನೇ ನಿಮ್ಮ ಜೊತೆ ಬರುತ್ತೇನೆ ಜಮ್ಮು-ಕಾಶ್ಮೀರಕ್ಕೆ ಹೋಗೋಣ ಬನ್ನಿ. ನಿಮಗೆ ತಾಕತ್ತಿದ್ದರೆ ನಮ್ಮನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಿ. ನಾವು ಭಾರತದ ಹಿಂದೂಗಳಾಗಿದ್ದು, ಪ್ರಾಣ ಕೊಡುವುದಕ್ಕೆ ಸಿದ್ಧರಿದ್ದೇವೆ. ಆದರೆ ನೀವು ಕರ್ನಾಟಕ ಬಂದ್ ಯಾಕೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಾಟಾಳ್ ನಾಗರಾಜ್ ಅವರೇ, ಅಂದು ನೀವು ಟೋಪಿ ಹಾಕಿಕೊಂಡು ಕಾರಲ್ಲಿ ಬಂದು ಅಂತಿಮ ದರ್ಶನ ಪಡೆದು ಹೊರಟು ಹೋದ್ರಿ. ನಾವು ಪಾರ್ಥಿವ ಶರೀರದ ಜೊತೆ ನಡೆದುಕೊಂಡು ಹೋಗಿ ಅಂತಿಮ ದರ್ಶನ ಪಡೆದವರು. ಟೋಪಿ ಹಾಕಿಕೊಂಡು ರಾಜಕೀಯ ಮಾಡುತ್ತೀರಿ. ಬಂದ್ ಬೇಡ, ಬೇಕಾದರೆ ಕಾಶ್ಮೀರದವರೆಗೂ ನಡೆದುಕೊಂಡು ಹೋಗೋಣ ಬನ್ನಿ. ನಿಮ್ಮ ಸಂಘಟನೆಯ ಹೋರಾಟಗಾರರನ್ನು ಕರೆತನ್ನಿ ಎಲ್ಲರೂ ಪಾಕಿಸ್ತಾನಕ್ಕೆ ಹೋಗೋಣ. ಅಲ್ಲಿ ಉಗ್ರರ ವಿರುದ್ಧ ಹೋರಾಡೋಣ ಎಂದು ವಾಟಾಳ್ ನಾಗರಾಜ್ ವಿರುದ್ಧ ಸವಾಲು ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv