Tag: ವಾಟರ್ ಬಿಲ್

  • ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆ ಬಳಿಕ ಮತ್ತೊಂದು ಶಾಕ್‌ -‌ ಏಕಾಏಕಿ ವಾಟರ್‌ ಬಿಲ್‌ ಡಬಲ್

    ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆ ಬಳಿಕ ಮತ್ತೊಂದು ಶಾಕ್‌ -‌ ಏಕಾಏಕಿ ವಾಟರ್‌ ಬಿಲ್‌ ಡಬಲ್

    ಬೆಂಗಳೂರು: ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಸರ್ಕಾರ ಎಂದು ಜನಸಾಮಾನ್ಯರಲ್ಲಿ ಪ್ರಶ್ನೆ ಮೂಡುತ್ತಿದೆ. ಸರ್ಕಾರದ ಉಚಿತ ಭಾಗ್ಯಗಳ (Government Free Schemes)  ನಡುವೆ ರಾಜ್ಯದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

    ಹೌದು. ಜೂನ್‌ ತಿಂಗಳಲ್ಲಿ ಬಂದಿರುವ ವಾಟರ್ ಬಿಲ್ (Water Bill) ಏಕಾಏಕಿ ಡಬಲ್‌ ಆಗಿದೆ. ಕೆಲ ಮನೆಗಳಿಗೆ ಬಂದಿರುವ ನೀರಿನ ಬಿಲ್‌ ಮೂರ‍್ನಾಲ್ಕು ಪಟ್ಟು ಹೆಚ್ಚಾಗಿದೆ. ಇದು ಬೇಕಂತಲೇ ಮಾಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: Cyclone Biparjoy: ಇಂದು ಸಂಜೆ ಅಪ್ಪಳಿಸಲಿದೆ ಸೈಕ್ಲೋನ್‌ – 74 ಸಾವಿರ ಮಂದಿ ಸ್ಥಳಾಂತರ

    ಬೆಂಗಳೂರಿನ (Bengaluru) ಕೆಲವು ಮನೆಗಳಲ್ಲಿ ಏಕಾಏಕಿ ಮನೆಯ ನೀರಿನ ಬಳಕೆಯ ಬಿಲ್ ಡಬಲ್, ತ್ರಿಬಲ್ ಆಗಿದೆ. ಹೀಗೆ ಹಲವು ರೀತಿಯಲ್ಲಿ ಬೆಲೆ ಏರಿಕೆ ಬಾಣ ಜನರಿಗೆ ಚುಚ್ಚುತ್ತಿದೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಅನ್ನೋ ಆರೋಪ ಕೂಡಾ ಸಾರ್ವಜನಿಕರಿಂದ ಕೇಳಿ ಬರ್ತಿದೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸರಿಯಾಗಿ ವೇತನ ಸಿಗ್ತಿದೆ: ವದಂತಿಗೆ ಹಿಮಾಚಲಪ್ರದೇಶ ಸಿಎಂ ಸ್ಪಷ್ಟನೆ

    ಏಕಾಏಕಿ ನೀರಿನ ಶುಲ್ಕ ಹೆಚ್ಚಳ ಆಗಿದೆ. ಇದರಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಕಳೆದ ತಿಂಗಳು 930 ರೂ. ಬಂದಿತ್ತು, ಈ ತಿಂಗಳು ಏಕಾಏಕಿ 3,000 ದಾಟಿದೆ. ವಯಾಲಿಕಾವಲ್ ಬಳಿ ಒಂದೇ ರಸ್ತೆಯ ಹತ್ತಾರು ಮನೆಗಳಲ್ಲಿ ನೀರಿನ ಬಿಲ್ ಡಬಲ್ ಆಗಿರೋದು ನೋಡಿ ಜನ ಶಾಕ್ ಆಗಿದ್ದಾರೆ. ಉಚಿತ ಭಾಗ್ಯ ಅಂತ ಈ ರೀತಿ ಮಾಡಿದ್ದಾರೆ ಎಂದು ಜಲಮಂಡಳಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎಲ್ಲಾ ಫ್ರೀ ಭಾಗ್ಯ ಒಕೆ ಅದ್ರೇ ಈ ರೀತಿ ಬೇರೆ ರೀತಿಯಲ್ಲಿ ಸರ್ಕಾರ ನಮಗೆ ಬರೆ ಹಾಕ್ತಿದೆ ಅಂತ ಜನ ಆಕ್ರೋಶಗೊಂಡಿದ್ದಾರೆ. ಇನ್ನೂ ಜಲಮಂಡಳಿ ಅಧಿಕಾರಿಗಳನ್ನ ಕೇಳಿದ್ರೇ ಹೀಗೆ ಆಗಲು ಸಾಧ್ಯವಿಲ್ಲ. ಹೆಚ್ಚಿಗೆ ಬಿಲ್‌ಗೆ ಲೀಕೇಜ್ ಕಾರಣ ಇರಬಹುದು. ಒಂದೇ ರಸ್ತೆಯಲ್ಲಿ ಹತ್ತಾರು ಮನೆಗಳಿಗೆ ಈ ರೀತಿ ಆಗಿದೆ ಅಂದ್ರೆ ಪರಿಶೀಲನೆ ಮಾಡ್ತೀವಿ ಅಂತಾ ಹೇಳಿದ್ದಾರೆ.

  • ಬಿಎಸ್‍ವೈ ಕ್ಯಾಬಿನೆಟ್‍ನಲ್ಲಿ ಬಡ ಮಿನಿಸ್ಟ್ರು – ನೀರಿನ ಬಿಲ್ ಕಟ್ಟೋಕೆ ಮಂತ್ರಿಗಳ ಕೈಯಲ್ಲಿ ಕಾಸಿಲ್ಲ

    ಬಿಎಸ್‍ವೈ ಕ್ಯಾಬಿನೆಟ್‍ನಲ್ಲಿ ಬಡ ಮಿನಿಸ್ಟ್ರು – ನೀರಿನ ಬಿಲ್ ಕಟ್ಟೋಕೆ ಮಂತ್ರಿಗಳ ಕೈಯಲ್ಲಿ ಕಾಸಿಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿ ಜನ ಒಂದು ತಿಂಗಳು ವಾಟರ್ ಬಿಲ್ ಪಾವತಿಸಿಲ್ಲ ಜಲಮಂಡಳಿ ಅವರು ಮಾತಾನಾಡಿಸಲು ಅವಕಾಶ ಕೊಡದೇ ನೀರಿನ ಸಂಪರ್ಕ ಕಟ್ ಮಾಡುತ್ತಾರೆ. ಆದರೆ ಮಂತ್ರಿ ಮಹೋದಯರ ಕೈಯಲ್ಲಿ ಪಾಪ ಕಾಸಿಲ್ಲ ನೋಡಿ ಅವರಿಗೆ ಮಾತ್ರ ಭರ್ಜರಿ ರಿಯಾಯಿತಿ.

    ಸಿಎಂ ಯಡಿಯೂರಪ್ಪ ಕ್ಯಾಬಿನೆಟ್‍ನಲ್ಲಿ ಬಡ ಮಿನಿಸ್ಟ್ರುಗಳು ನೀರಿನ ಬಿಲ್ ಕಟ್ಟೋಕೆ ಆಗದೇ ಲಕ್ಷ ಲಕ್ಷ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಸಚಿವ ಜಗದೀಶ್ ಶೆಟ್ಟರ್ ಹಾಗೂ ಶ್ರೀರಾಮುಲು ಸರ್ಕಾರಿ ಬಂಗಲೆಯ ನೀರಿನ ಬಿಲ್ ಕಟ್ಟದ ಬಗ್ಗೆ ಹೈಕೋರ್ಟ್ ವಕೀಲ ಶಶಿಕುಮಾರ್ ಆರ್ ಟಿಐ ನಲ್ಲಿ ಮಾಹಿತಿ ಹೊರಹಾಕಿದ್ದಾರೆ.

    ಸಚಿವರಾದ ಜಗದೀಶ್ ಶೆಟ್ಟರ್-10,66,672 ರೂ. ಬಾಕಿ ಉಳಿಸಿಕೊಂಡಿದ್ದರೆ, ಬಿ. ಶ್ರೀರಾಮುಲು- 9,28,298 ರೂ ಬಾಕಿ ಉಳಿಸಿದ್ದಾರೆ. ಜನಸಾಮಾನ್ಯರಿಗೊಂದು ರೂಲ್ಸ್ ದೊಡ್ಡವರಿಗೊಂದು ರೂಲ್ಸ್ ಜಲಮಂಡಳಿ ಇವರ ಮನೆಯ ನೀರಿನ ಸಂಪರ್ಕವನ್ನು ಕಟ್ ಮಾಡಲಿ ಅಂತಾ ವಕೀಲ ಶಶಿಕುಮಾರ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಸರ್ಕಾರಕ್ಕೆ ಬಿಲ್- ರಾಜ್ಯದ ಶಾಸಕರ ಕೊರೊನಾ ‘ಬಿಲ್’ವಿದ್ಯೆ

  • ದೆಹಲಿಯ ಜನರಿಗೆ ಮತ್ತೊಂದು ಕೊಡುಗೆ ನೀಡಿದ ಅರವಿಂದ್ ಕೇಜ್ರಿವಾಲ್

    ದೆಹಲಿಯ ಜನರಿಗೆ ಮತ್ತೊಂದು ಕೊಡುಗೆ ನೀಡಿದ ಅರವಿಂದ್ ಕೇಜ್ರಿವಾಲ್

    -ಬಾಕಿ ವಾಟರ್ ಬಿಲ್ ಮನ್ನಾ

    ನವದೆಹಲಿ: ಚುನಾವಣೆ ಸಮೀಪಿಸುತ್ತಿದ್ದಂತೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರಪೂರ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಇಂದು ದೆಹಲಿಯ ಜನರು ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್ ಮನ್ನಾ ಮಾಡಿ ಆದೇಶ ಹೊರಡಿಸಿದ್ದಾರೆ. ಮನೆಯಲ್ಲಿ ವಾಟರ್ ಮೀಟರ್ ಅಳವಡಿಸಿಕೊಂಡಿರುವ ಬಹುತೇಕ ಎಲ್ಲರೂ ಈ ಯೋಜನೆಯ ಲಾಭ ಪಡೆಯಲಿದ್ದಾರೆ.

    ವಾಟರ್ ಬಿಲ್ ದೆಹಲಿಯ ಜನರಿಗೆ ದೊಡ್ಡ ಸಮಸ್ಯೆಯಾಗಿತ್ತು. ಕೆಲವರಿಗೆ ತಿಂಗಳವರೆಗೆ ವಾಟರ್ ಬಿಲ್ ಸಿಗುತ್ತಿರಲಿಲ್ಲ. ಮೀಟರ್ ರೀಡಿಂಗ್ ಮಾಡದೇ ಬಿಲ್ ಬರುತ್ತಿತ್ತಿದ್ದರಿಂದ ದೊಡ್ಡ ಗೊಂದಲವಾಗಿತ್ತು. ಹೀಗಾಗಿ ಆಪ್ ಸರ್ಕಾರ ವಾಟರ್ ಬಿಲ್ ಗಾಗಿ ಹೊಸ ವ್ಯವಸ್ಥೆಯನ್ನು ಜಾರಿ ತಂದಿತ್ತು. ನೇರವಾಗಿ ನಳದಿಂದ ಮೀಟರ್ ರೀಡಿಂಗ್ ರ ತೆಗೆದುಕೊಳ್ಳುತ್ತಿತ್ತು. ಈ ಹೊಸ ವ್ಯವಸ್ಥೆ ಅಳವಡಿಕೆಯಿಂದಾಗಿ ಹಳೆಯ ಬಿಲ್ ಗಳು ಬೆಳಕಿಗೆ ಬಂದವು. ಹಾಗಾಗಿ ಹಳೆಯ ಬಿಲ್ ಗಳನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

    ನವೆಂಬರ್ 30ರೊಳಗೆ ಮನೆಯಲ್ಲಿ ಫಂಕ್ಷನಲ್ ಮೀಟರ್ ಅಳವಡಿಸಿಕೊಂಡ ಜನರಿಗೆ ಈ ಯೋಜನೆಯ ಲಾಭ ಸಿಗಲಿದೆ. ಆದಾಯಕ್ಕ ಅನುಗುಣವಾಗಿ ಸ್ಥಳೀಯ ನಿವಾಸಿಗಳನ್ನು 13 (ಎ ಟು ಎಚ್) ವಿಭಾಗಗಳಾಗಿ ವಿಂಗಡಿಸಲಾಗಿದೆ. ಎ ಮತ್ತು ಬಿ ಕೆಟಗರಿ ಜನರಿಗೆ ಶೇ.25, ಸಿ ಕೆಟಗರಿಗೆ ಶೇ.50ರಷ್ಟು ಬಿಲ್ ಮನ್ನಾ ಆಗಲಿದೆ. ಡಿ ಕೆಟಗರಿಯವರಿಗೆ ಶೇ.75 ಮತ್ತು ಇ, ಎಫ್, ಜಿ, ಎಚ್ ಕೆಟಗರಿವರಿಗೆ ಶೇ.100 ರಷ್ಟು ವಾಟರ್ ಬಿಲ್ ಮನ್ನಾ ಆಗಲಿದೆ. ಈ ಯೋಜನೆಗಾಗಿ ಸರ್ಕಾರ 600 ಕೋಟಿ ರೂ. ವ್ಯಯ ಮಾಡಲಿದೆ.

    ರಕ್ಷಾ ಬಂಧನ ಹಬ್ಬದಂದು ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮೆಟ್ರೋ, ದೆಹಲಿ ನಗರ ಸಾರಿಗೆ ಹಾಗೂ ಸ್ಥಳೀಯ ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಯೋಜನೆಯನ್ನು ಘೋಷಿಸಿದ್ದರು. ಆಗಸ್ಟ್ 1ರಂದು ದೆಹಲಿಯ ನಿವಾಸಿಗಳಿಗೆ 200 ಯುನಿಟ್ ಗಳ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಿಸಿದ್ದರು.

  • ಬೆಂಗಳೂರಿಗರಿಗೆ ಜಲಮಂಡಳಿಯಿಂದ ಬಿಗ್ ಶಾಕ್-ಸಾರ್ವಜನಿಕರ ಮೇಲೆ ಬೀಳಲಿದೆ ಇನ್ನಷ್ಟು ವಾಟರ್ ಬಿಲ್!

    ಬೆಂಗಳೂರಿಗರಿಗೆ ಜಲಮಂಡಳಿಯಿಂದ ಬಿಗ್ ಶಾಕ್-ಸಾರ್ವಜನಿಕರ ಮೇಲೆ ಬೀಳಲಿದೆ ಇನ್ನಷ್ಟು ವಾಟರ್ ಬಿಲ್!

    ಬೆಂಗಳೂರು: ಬೇಸಿಗೆಯಲ್ಲಿ ಉತ್ತರ ಕರ್ನಾಟಕ ಮಾತ್ರವಲ್ಲದೇ ಬೆಂಗಳೂರಿನಲ್ಲಿ ನೀರಿನ ಬರ ಇರುತ್ತದೆ. ಈಗ ಬೆಂಗಳೂರಿಗರಿಗೆ ಜಲಮಂಡಳಿ ಮತ್ತೊಂದು ಬಿಗ್ ಶಾಕ್ ಕೊಟ್ಟಿದೆ. ಕಾವೇರಿ ನೀರಿನ ದರ ಶೇ. 15 ರಷ್ಟು ಏರಿಕೆ ಮಾಡಲು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಪ್ರತ್ಯೇಕ ಕಮಿಟಿ ಕೂಡ ಮಾಡಿಕೊಂಡಿದೆ. ಶೇಕಡಾ 15 ರಷ್ಟು ಅಂದ್ರೆ 100 ರೂಪಾಯಿಗೆ 15 ರೂಪಾಯಿನಷ್ಟು ದರ ಹೆಚ್ಚಾಗಲಿದೆ.

    ನೀರು ಪೂರೈಕೆ ಪ್ರಸ್ತುತ ದರದ ವಿವರ
    * ಗೃಹ ಸಂಪರ್ಕ- ಪ್ರತಿ ಸಾವಿರ ಲೀಟರ್ 7 ರೂ.
    * ನೀರು ಬಳಸುವ ಕಟ್ಟಡಗಳಿಗೆ- 8,001-25 ಸಾವಿರ ಲೀಟರ್ ವರೆಗೆ- ಪ್ರತಿ ಸಾವಿರ ಲೀಟರ್ ಗೆ 11 ರೂ.
    * 25,001 ರಿಂದ 50 ಸಾವಿರ ಲೀಟರ್ ವರಗೆ- 26 ರೂ.
    * 50 ಸಾವಿರ ಲೀ. ಮೇಲ್ಪಟ್ಟು ನೀರು ಬಳಸುವ ಕಟ್ಟಡ- ಪ್ರತಿ ಸಾವಿರ ಲೀಟರ್ ಗೆ 45 ರೂ.
    * ಬೋರ್‍ವೆಲ್‍ಗಳಿಗೆ: 100 ರೂ.
    * ಕೈಗಾರಿಕೆ, ಈಜುಕೊಳ, ಬಿಡದಿ ಕೈಗಾರಿಕಾ ಪ್ರದೇಶಗಳಿಗೆ- 90 ರೂ.
    * ಸಗಟು ಬಳಕೆದಾರರಿಗೆ: ಪ್ರತಿ ಸಾವಿರ ಲೀಟರ್ ಗೆ- 10 ರೂ.

    2014ರ ನಂತರ ಜಲಮಂಡಳಿ ನೀರಿನ ದರ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ನಿರ್ವಹಣೆ ದುಬಾರಿ ಆಗ್ತಿರೋ ಹಿನ್ನೆಲೆ, ನೀರಿನ ದರವನ್ನ ಹೆಚ್ಚು ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗ್ತಿದೆ. ಜಲಮಂಡಳಿಯಲ್ಲಿ ಸಿಬ್ಬಂದಿ ಕೊರತೆಯೂ ಕೂಡ ಉಂಟಾಗಿದ್ದು 3 ಸಾವಿರದ 500 ಹುದ್ದೆಗಳ ಪೈಕಿ, 1945 ಹುದ್ದೆಗಳ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಒಂದಡೆ ಬೆಂಗಳೂರಲ್ಲಿ ನೀರಿಗಾಗಿ ಜನ ಪರದಾಡ್ತಿದ್ರೆ, ಮತ್ತೊಂದಡೆ ಜಲಮಂಡಳಿಯಲ್ಲಿ ಅಧಿಕಾರಿಗಳ ಕೊರತೆ ಕಾಣುತ್ತಿದೆ. ಹೀಗಿರುವಾಗ ಜನರಿಗೆ ಜಲಮಂಡಳಿ ಸಮರ್ಪಕವಾಗಿ ನೀರು ಹೇಗೆ ಒದಗಿಸುತ್ತೆ ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.