Tag: ವಾಟರ್ ಟ್ಯಾಕ್ಸಿ

  • ಮುಂಬೈ-ನವಿ ಮುಂಬೈಗೆ ವಾಟರ್ ಟ್ಯಾಕ್ಸಿ ಸರ್ವಿಸ್

    ಮುಂಬೈ-ನವಿ ಮುಂಬೈಗೆ ವಾಟರ್ ಟ್ಯಾಕ್ಸಿ ಸರ್ವಿಸ್

    ಮುಂಬೈ: ಅವಳಿ ನಗರಗಳಾದ ಮುಂಬೈ ಹಾಗೂ ನವಿ ಮುಂಬೈಗೆ ಸಂಪರ್ಕ ಕಲ್ಪಿಸಲು ಇದೇ ಮೊದಲ ಬಾರಿಗೆ ವಾಟರ್ ಟ್ಯಾಕ್ಸಿ ಸೇವೆ ಪ್ರಾರಭವಾಗಿದೆ.

    ಹೊಸದಾಗಿ ನಿರ್ಮಿಸಲಾಗಿರುವ ವಾಟರ್ ಟ್ಯಾಕ್ಸಿಯಲ್ಲಿ ಮುಂಬೈನ ಜನರು ನವಿ ಮುಂಬೈಗೆ ಪ್ರಯಾಣಿಸಬಹುದು. ಕೇಂದ್ರ ಬಂದರು ಹಾಗೂ ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಇತ್ತೀಚೆಗೆ ಬೇಲಾಪುರ ಜೆಟ್ಟಿಯಿಂದ ಈ ಹೊಸ ವಾಟರ್ ಟ್ಯಾಕ್ಸಿಗೆ ಚಾಲನೆ ನೀಡಿದ್ದಾರೆ.

    ಬೇಲಾಪುರ ಜೆಟ್ಟಿ ಯೋಜನೆ 2019ರ ಜನವರಿಯಲ್ಲಿ ಪ್ರಾರಂಭವಾಗಿತ್ತು. 2021ರ ಸಪ್ಟೆಂಬರ್‌ನಲ್ಲಿ ಪೂರ್ಣಗೊಂಡಿತ್ತು. ಇದು ಅವಳಿ ನಗರಗಳಾದ ಮುಂಬೈ ಹಾಗೂ ನವಿ ಮುಂಬೈಯನ್ನು ಸಂಪರ್ಕಿಸುತ್ತದೆ. ಇದು ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್(ಡಿಸಿಟಿ)ನಿಂದ ಪ್ರಾರಂಭವಾಗಿ ನೆರೂಲ್, ಬೇಲಾಪುರ್, ಎಲಿಫೆಂಟಾ ದ್ವೀಪ ಹಾಗೂ ಜೆಎನ್‌ಪಿಟಿಯ ಹತ್ತಿರದ ಸ್ಥಳಗಳನ್ನು ಸಂಪರ್ಕಿಸುತ್ತದೆ. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ

    ಈ ಯೋಜನೆಗೆ ಒಟ್ಟು 8.37 ಕೋಟಿ ರೂ. ವೆಚ್ಚ ತಗುಲಿದೆ. ವಾಟರ್ ಟ್ಯಾಕ್ಸಿ ಸ್ಪೀಡ್ ಬೋಟ್ ಸೇವೆಯ ದರ ಏಕಮುಖ ಪ್ರಯಾಣಕ್ಕೆ ಸುಮಾರು 800 ರಿಂದ 1,200 ರೂ. ಯಾಗಲಿದೆ ಎಂದು ಅಧಿಕೃತ ವರದಿ ತಿಳಿಸಿದೆ. ಇದರ ಪ್ರಯಾಣ ಪೂರ್ಣಗೊಳಿಸಲು 30 ರಿಂದ 40 ನಿಮಿಷ ತೆಗೆದುಕೊಳ್ಳುತ್ತದೆ.

    ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್(ಡಿಸಿಟಿ)ನಿಂದ ಬೇಲಾಪುರಕ್ಕೆ ಪ್ರಯಾಣ ದರ 1,210 ರೂ. ಹಾಗೂ ಡಿಸಿಟಿಯಿಂದ ಧರ್ಮತಾರ್‌ಗೆ 2,000 ರೂ. ದರ ಇದ್ದು, ಪ್ರಯಾಣವನ್ನು ಪೂರ್ಣಗೊಳಿಸಲು 55 ನಿಮಿಷ ತೆಗೆದುಕೊಳ್ಳುತ್ತದೆ. ಡಿಸಿಟಿಯಿಂದ ಜೆಎನ್‌ಪಿಟಿಗೆ 200 ರೂ. ಇದ್ದು ಪ್ರಯಾಣದ ಅವಧಿ 20 ನಿಮಿಷ ಆಗಲಿದೆ. ಇದನ್ನೂ ಓದಿ: ಕೂದಲಿನಿಂದ 126 ಕೋಟಿ, ಲಡ್ಡು ಪ್ರಸಾದದಿಂದ 365 ಕೋಟಿ – ಟಿಟಿಡಿ ನಿರೀಕ್ಷಿತ ಆದಾಯ

    ಡಿಸಿಟಿಯಿಂದ ಕಾರಂಜಾಗೆ 1,200 ರೂ. ಹಾಗೂ 45 ನಿಮಿಷ ಪ್ರಯಾಣದ ಅವಧಿ ಇದೆ. ಡಿಸಿಟಿಯಿಂದ ಕನೋಜಿ ಆಂಗ್ರೆಗೆ ಪ್ರಯಾಣಿಸಲು 1,500 ರೂ. ಹಾಗೂ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ), ಬೇಲಾಪುರದಿಂದ ನೆರೂಲ್‌ಗೆ 1,100 ರೂ. ದರ ಆಗಿರುತ್ತದೆ. ಹಾಗೂ ಇದರ ಅವಧಿಯು 30 ನಿಮಿಷ ಇರಲಿದೆ.‌