Tag: ವಾಚ್ ಮನ್

  • ಕಟೀಲಿಗೆ ಬನ್ನಿ, ಪ್ರಮಾಣ ಮಾಡೋಣ: ಬಿಜೆಪಿಗೆ ಮಂಗ್ಳೂರು ಮೇಯರ್ ಸವಾಲ್

    ಕಟೀಲಿಗೆ ಬನ್ನಿ, ಪ್ರಮಾಣ ಮಾಡೋಣ: ಬಿಜೆಪಿಗೆ ಮಂಗ್ಳೂರು ಮೇಯರ್ ಸವಾಲ್

    ಮಂಗಳೂರು: ಶೀಘ್ರವೇ ಮಂಗಳೂರು ಮೇಯರ್ ಕವಿತಾ ಸನಿಲ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ ಘಟನೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿದೆ.

    ಸಾಮಾನ್ಯ ಸಭೆ ಸೇರುತ್ತಿದ್ದಾಗಲೇ ಧಿಕ್ಕಾರ ಘೋಷಣೆ ಕೂಗುತ್ತ ಒಳನುಗ್ಗಿದ ಬಿಜೆಪಿ ಸದಸ್ಯರು, ಸಭೆಯಲ್ಲಿ ರಂಪಾಟ ನಡೆಸಿದ್ರು. ಇದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ತಳ್ಳಾಟ ನಡೆಯಿತು.

    ಕೆಲವರು ಕೈ-ಕೈ ಮಿಲಾಯಿಸಲು ಮುಂದಾದರು. ಆದರೆ ಬಿಜೆಪಿ ಸದಸ್ಯರು ಮೇಯರ್ ಮುಂದೆ ಧಿಕ್ಕಾರ ಕೂಗುತ್ತ ರಾಜಿನಾಮೆಗೆ ಒತ್ತಾಯಿಸಿದರು. ಮೇಯರ್ ಕವಿತಾ ಸನಿಲ್ ತನ್ನ ಬಿಜೈನಲ್ಲಿರುವ ಫ್ಲಾಟ್ ನಲ್ಲಿ ವಾಚ್ ಮ್ಯಾನ್ ಪತ್ನಿಗೆ ಹಲ್ಲೆ ನಡೆಸಿದ್ದಾರೆಂಬ ವಿಚಾರ ಭಾರೀ ಸುದ್ದಿಯಾಗಿತ್ತು. ಬಳಿಕ ಮೇಯರ್ ತನ್ನ ಪ್ರಭಾವ ಬಳಸಿ ಬಡಪಾಯಿ ವಾಚ್ ಮ್ಯಾನ್ ಪತ್ನಿಯ ವಿರುದ್ಧ ಕೊಲೆಯತ್ನ ದೂರು ದಾಖಲಿಸಿದ್ದರು.

    ಇದನ್ನೂ ಓದಿ: ಮಂಗಳೂರು ಮೇಯರ್ ಗುಂಡಾಗಿರಿ- ಅಪಾರ್ಟ್‌ಮೆಂಟ್‌ ಕಾವಲುಗಾರ ದಂಪತಿ ಮೇಲೆ ಹಲ್ಲೆ

    ಈ ವಿಚಾರ ವಿವಾದಕ್ಕೆ ತಿರುಗಿದ್ದು ಬಿಜೆಪಿ ಸದಸ್ಯರು ಸಭೆಯಲ್ಲಿ ರಂಪ ನಡೆಸಿದ್ದಾರೆ. ಕೊನೆಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನಿಲ್ ಕಣ್ಣೀರು ಹಾಕಿದ್ರು. ತಾನು ಬಡ ಮಹಿಳೆಗೆ ಹಲ್ಲೆ ನಡೆಸಿಲ್ಲ. ಬೇಕಾದ್ರೆ ಕಟೀಲು ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡ್ತೀನಿ. ಬಿಜೆಪಿಯವರೂ ಬರಲಿ ಅಂತಾ ಸವಾಲು ಹಾಕಿದರು.

    https://www.youtube.com/watch?v=5stm9HG3J8s