Tag: ವಾಘಾ ಗಡಿ

  • ಗೆಳೆಯನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ತವರಿಗೆ ವಾಪಸ್

    ಗೆಳೆಯನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ತವರಿಗೆ ವಾಪಸ್

    ನವದೆಹಲಿ: ಈ ವರ್ಷ ಜುಲೈನಲ್ಲಿ ತನ್ನ ಫೇಸ್‌ಬುಕ್ ಗೆಳೆಯ ನಸ್ರುಲ್ಲಾನನ್ನು (Nasrullah) ಮದುವೆಯಾಗಲು ಪಾಕಿಸ್ತಾನಕ್ಕೆ (Pakistan) ಹೋಗಿದ್ದ ಮಹಿಳೆ ಅಂಜು (Anju) ಇತ್ತೀಚೆಗೆ ವಾಘಾ ಗಡಿ ಮೂಲಕ ಭಾರತಕ್ಕೆ (India) ಮರಳಿದ್ದಾಳೆ.

    ಫಾತಿಮಾ (Fatima) ಎಂದು ಹೆಸರನ್ನು ಬದಲಿಸಿಕೊಂಡಿರುವ ಅಂಜು (34) ಜುಲೈನಲ್ಲಿ ಪಾಕಿಸ್ತಾನಕ್ಕೆ ತೆರಳಿ ಖೈಬರ್ ಪಖ್ತುಂಕ್ವಾದಲ್ಲಿ ವಾಸವಾಗಿದ್ದಳು. ಆಕೆ ಪಾಕಿಸ್ತಾನದಲ್ಲಿ ತನ್ನ ಫೇಸ್‌ಬುಕ್ ಗೆಳೆಯ ನಸ್ರುಲ್ಲಾನನ್ನು ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರವಾಗಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

    ಪಾಕಿಸ್ತಾನಕ್ಕೆ ತೆರಳಿದ್ದಾಗ ಅಂಜು ಆರಂಭದಲ್ಲಿ ತನ್ನ ಗೆಳೆಯನನ್ನು ಭೇಟಿಯಾಗಲು ಹಾಗೂ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಹೋಗುವುದಾಗಿ ತಿಳಿಸಿದ್ದಳು. ಈ ವೇಳೆ ನಸ್ರುಲ್ಲಾನನ್ನು ಮದುವೆಯಾಗುವ ಯಾವುದೇ ಯೋಜನೆ ಇಲ್ಲ, ತನ್ನ ವೀಸಾ ಅವಧಿ ಮುಗಿದ ಬಳಿಕ ಆಗಸ್ಟ್ 20ಕ್ಕೆ ಭಾರತಕ್ಕೆ ಮರಳುವುದಾಗಿ ಹೇಳಿದ್ದಳು.

    ಈ ಹೇಳಿಕೆ ನೀಡಿದ ಒಂದು ದಿನದ ಬಳಿಕ ಅಂಜು ನಸ್ರುಲ್ಲಾನನ್ನು ವಿವಾಹವಾದಳು ಹಾಗೂ ತನ್ನ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಳು. ಆಗಸ್ಟ್‌ನಲ್ಲಿ ಪಾಕಿಸ್ತಾನ ಆಕೆಯ ವೀಸಾವನ್ನು 1 ವರ್ಷಕ್ಕೆ ವಿಸ್ತರಿಸಿತು. ನಂತರ ಸೆಪ್ಟೆಂಬರ್‌ನಲ್ಲಿ ನಸ್ರುಲ್ಲಾ ತನ್ನ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ, ತನ್ನ ಮಕ್ಕಳನ್ನು ನೋಡಲು ಬಯಸಿದ್ದಾಳೆ ಎಂದು ಹೇಳಿಕೊಂಡಿದ್ದರು. ಇದೀಗ ಅಂಜು ಭಾರತಕ್ಕೆ ಮರಳಿದ್ದಾಳೆ. ಇದನ್ನೂ ಓದಿ: ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಬ್ಲಾಸ್ಟ್ – ಯುವಕ ಗಂಭೀರ

    ಅಂಜು ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆಯಾಗಿದ್ದು, ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಯನ್ನು ಭೇಟಿಯಾಗಲು ಖೈಬರ್ ಪಖ್ತುಂಕ್ವಾಗೆ ತೆರಳಿದ್ದಳು. ಕೆಲ ದಿನ ಜೈಪುರಕ್ಕೆ ಹೋಗುವುದಾಗಿ ಆಕೆ ತನ್ನ ಮೊದಲ ಪತಿ ಅರವಿಂದ್‌ಗೆ ಹೇಳಿದ್ದಳು. ಆದರೆ ಅಂಜು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿರುವುದು ಆಕೆಯ ಪತಿಗೆ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅರವಿಂದ್, ನನ್ನ ಪತ್ನಿ ವಾಟ್ಸಪ್‌ನಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿದ್ದಾಳೆ. ಆಕೆ ಲಾಹೋರ್‌ಗೆ ತೆರಳಿದ ದಿನ ಸಂಜೆ 4 ಗಂಟೆ ಸುಮಾರಿಗೆ ಕರೆ ಮಾಡಿದ್ದು, ತಾನು ಲಾಹೋರ್‌ನಲ್ಲಿದ್ದೇನೆ ಮತ್ತು 2-3 ದಿನಗಳಲ್ಲಿ ಮರಳುತ್ತೇನೆಂದು ಹೇಳಿದ್ದಾಗಿ ತಿಳಿಸಿದ್ದರು.

    ಪಾಕಿಸ್ತಾನದಲ್ಲಿ ಅಂಜು ತನ್ನ ಗೆಳೆಯನನ್ನು ಭೇಟಿಯಾಗಲು ಹೋಗಿರುವ ಬಗ್ಗೆ ಕೇಳಿದಾಗ, ಅವರಿಬ್ಬರ ಸಂಬಂಧದ ಬಗ್ಗೆ ನನಗೆ ಮೊದಲೇ ತಿಳಿದಿತ್ತು. ಆಕೆ ಮುಂದೊಂದು ದಿನ ನನ್ನ ಬಳಿಗೆ ಬರುತ್ತಾಳೆ ಎಂಬ ಭರವಸೆ ವ್ಯಕ್ತಪಡಿಸಿದ್ದರು.

    ಅಂಜು ಈ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಅರವಿಂದ್ ಅವರನ್ನು ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಇದನ್ನೂ ಓದಿ: ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಅರ್ಧ ಗಂಟೆ ಚಿಕಿತ್ಸೆಗೆ ವಿಳಂಬ – ನಿಮಾನ್ಸ್‌ನಲ್ಲಿ ಕಂದಮ್ಮ ಸಾವು

  • ದೇಶಪ್ರೇಮಿಗಳ ಹರ್ಷೋದ್ಗಾರದ ಮಧ್ಯೆ ತಾಯ್ನಾಡಿಗೆ ಕಾಲಿಟ್ಟ ಅಭಿನಂದನ್!

    ದೇಶಪ್ರೇಮಿಗಳ ಹರ್ಷೋದ್ಗಾರದ ಮಧ್ಯೆ ತಾಯ್ನಾಡಿಗೆ ಕಾಲಿಟ್ಟ ಅಭಿನಂದನ್!

    ವಾಘಾ: ಅಭಿನಂದನ್‍ಗೆ ಜೈ, ಭಾರತ್ ಮಾತಾಕೀ ಜೈ.. ಒಂದೇ ಮಾತರಂ ಜಯಘೋಷ.. ವೆಲ್‍ಕಂ ಟೈಗರ್.. ಜೈ ಹಿಂದ್ ಅಭಿಮಾನಿಗಳ ಹರ್ಷೋದ್ಗಾರದ ಮಧ್ಯೆ ವಾಯುಸೇನೆಯ ವೀರಯೋಧ ಅಭಿನಂದನ್ ಅವರು ಮರಳಿ ಭಾರತಕ್ಕೆ ಬಂದಿದ್ದಾರೆ.

    ಪಾಕಿಸ್ತಾನದ ವಾಯುದಾಳಿಯನ್ನು ಹಿಮ್ಮೆಟ್ಟುವ ವೇಳೆ ಗಡಿ ದಾಟಿ ಪಾಕ್ ಸೈನ್ಯದ ವಶದಲ್ಲಿದ್ದ ಅಭಿನಂದನ್ ಶುಕ್ರವಾರ ಸಂಜೆ ವೇಳೆಗೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿ ಮತ್ತೆ ತನ್ನ ಕುತಂತ್ರವನ್ನು ಪ್ರದರ್ಶಿಸಿದರು. ವಾಘಾ ಗಡಿಯಲ್ಲಿ ಕಾದು ಕುಳಿತ್ತಿದ್ದ ಭಾರತೀಯ ಅಭಿಮಾನಿಗಳ ಛಲ ರಾತ್ರಿಯಾದ್ರು ಕಡಿಮೆ ಆಗಲಿಲ್ಲ. ಸಂಜೆ ವೇಳೆಗೆ ಮಳೆ ಬಂದಿದ್ದರೂ ಕೂಡ ಲೆಕ್ಕಿಸದ ಭಾರತೀಯರು ಅಲ್ಲೇ ನಿಂತಿದ್ದರು. ಇದೆಲ್ಲಾದರ ನಡುವೆಯೇ ರಾತ್ರಿ 9.15 ಗಂಟೆ ವೇಳೆಗೆ ಭಾರತದ ನೆಲವನ್ನು ಪ್ರವೇಶಿಸಿದ್ದಾರೆ.

    ವಾಘಾ ಗಡಿಯಿಂದ ನೆರ ಅವರನ್ನು ಅಮೃತಸರಕ್ಕೆ ಕರೆದ್ಯೊಯಲಾಗುತ್ತದೆ. ಆ ಬಳಿಕ ಅಲ್ಲಿಂದ ಸೇನಾಧಿಕಾರಿಗಳೊಂದಿಗೆ ದೆಹಲಿಗೆ ವಿಮಾನದಲ್ಲಿ ಕರೆತರಲಾಗುತ್ತದೆ. ಅಭಿನಂದನ್ ಅವರನ್ನು ಸ್ವಾಗತ ಮಾಡಲು ವಾಯುಸೇನಾ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಹಾಗೂ ಭಾರತ ಸರ್ಕಾರದ ಅಧಿಕಾರಿಗಳು ವಾಘಾ ಗಡಿಗೆ ಆಗಮಿಸಿದ್ದರು. ಅಲ್ಲದೇ ಅಭಿನಂದನ್ ಪೋಷಕರು ಕೂಡ ಸ್ಥಳದಲ್ಲಿ ಹಾಜರಿದ್ದರು.

    ಅಭಿನಂದನ್‍ರನ್ನು ಭಾರತಕ್ಕೆ ಹಸ್ತಾಂತರಕ್ಕೆ ಮಾಡುವ ಸರ್ಕಾರ ನೀತಿಯನ್ನು ವಿರೋಧಿಸಿ ಪಾಕಿಸ್ತಾನ ಕೆಲ ಹೋರಾಟಗಾರರು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿ ಬಿಡುಗಡೆಗೆ ತಡೆ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಈ ಪಿಐಎಲ್ ಅನ್ನು ನ್ಯಾಯಾಲಯ ವಜಾಗೊಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿನಂದನ್ ಸ್ವಾಗತಿಸಲು ವಾಘಾ ಗಡಿಗೆ ಬನ್ನಿ – ಮೋದಿಗೆ ಪಂಜಾಬ್ ಸಿಎಂ ಮನವಿ

    ಅಭಿನಂದನ್ ಸ್ವಾಗತಿಸಲು ವಾಘಾ ಗಡಿಗೆ ಬನ್ನಿ – ಮೋದಿಗೆ ಪಂಜಾಬ್ ಸಿಎಂ ಮನವಿ

    ನವದೆಹಲಿ: ಪಾಕ್ ವಶದಿಂದ ಮಾತೃ ಭೂಮಿಗೆ ಮರಳುತ್ತಿರುವ ಪೈಲಟ್ ಅಭಿನಂದನ್ ಅವರನ್ನು ಸ್ವಾಗತಿಸಲು ವಾಘಾ ಗಡಿಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.

    ಟ್ವೀಟ್ ಮೂಲಕ ಮನವಿ ಸಲ್ಲಿಸಿದ ಅಮರೀಂದರ್ ಸಿಂಗ್ ಅವರು, ಸದ್ಯ ನಾನು ಅಮೃತ್‍ಸರದಲ್ಲಿದ್ದೇನೆ. ಈಗ ಪಂಜಾಬಿನ ಗಡಿ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಿರುವೆ. ಪೈಲಟ್ ಅಭಿನಂದನ್ ಅವರನ್ನು ವಾಘಾ ಗಡಿಯಿಂದ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿದೆ. ನಮ್ಮ ರಾಜ್ಯದ ಗಡಿ ಪ್ರದೇಶದಿಂದ ವೀರ ಪೈಲಟ್ ಅಭಿನಂದನ್ ಅವರನ್ನು ಸ್ವಾಗತಿಸಲು ನನಗೆ ಹೆಮ್ಮೆಯಾಗುತ್ತಿದೆ. ನಾನು ಹಾಗೂ ಅಭಿನಂದನ್ ತಂದೆ ಇಬ್ಬರೂ ರಾಷ್ಟ್ರೀಯ ಭದ್ರತಾ ಅಕಾಡೆಮಿಯ (ಎನ್‍ಡಿಎ) ನಿವೃತ್ತ ಉದ್ಯೋಗಿಗಳು ಎಂದು ತಿಳಿಸಿದ್ದಾರೆ.

    ಪೈಲಟ್ ಅಭಿನಂದನ್ ಅವರು ಫೆಬ್ರವರಿ 27ರಂದು ಪಾಕಿಸ್ತಾನ ಸೇನೆಯ ಬಂಧನಕ್ಕೆ ಒಳಗಾಗಿದ್ದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಗುರುವಾರ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾತನಾಡಿ ಅಭಿನಂದನ್ ಅವರನ್ನು ಶುಕ್ರವಾರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಹೀಗಾಗಿ ಮಾತೃ ಭೂಮಿಗೆ ಮರಳುತ್ತಿರುವ ಅಭಿನಂದನ್ ಅವರನ್ನು ಸ್ವಾಗತಿಸಲು ಪಂಚಾಬ್‍ನ ವಾಘಾ ಗಡಿಯಲ್ಲಿ ಸಾವಿರಾರು ಜನರು ಸೇರಿದ್ದಾರೆ. ವೀರ ಯೋಧನ ಸ್ವಾಗತಕ್ಕೆ ದೇಶದ ಜನತೆ ಕಾತರದಲ್ಲಿದ್ದಾರೆ.

    ನಮ್ಮ ಬಂಧನದಲ್ಲಿ ಭಾರತೀಯ ಪೈಲಟ್ ಇದ್ದಾರೆ. ಉಭಯ ದೇಶಗಳ ಮಧ್ಯೆ ಶಾಂತಿ ಕಾಪಾಡುವ ಉದ್ದೇಶದಿಂದ ಶುಕ್ರವಾರ ಅವರನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದ ಪಾಕ್ ಸರ್ಕಾರ ಗುರುವಾರ ಸಂಜೆ ಅಧಿಕೃತವಾಗಿ ಮಾಹಿತಿ ನೀಡಿತ್ತು.

    ಪೈಲಟ್ ಅಭಿನಂದನ್ ಅವರ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ದಮಾನ್ ಸೇರಿದಂತೆ ಸಂಬಂಧಿಕರು ವಾಘಾ ಗಡಿಯಲ್ಲಿ ಅಭಿನಂದನ್ ಅವರ ಆಗಮನಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಅಭಿನಂದನ್ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಾಘಾ ಗಡಿ ಪ್ರದೇಶಕ್ಕೆ ಬರಬೇಕು ಎಂದು ಪಂಚಾಬ್ ಸಿಎಂ ಅಮರೀಂದರ್ ಸಿಂಗ್ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    https://www.youtube.com/watch?v=V3v7nPlplzo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರ್ಗಿಲ್ ಯುದ್ಧದ ವೇಳೆಯೂ ಯೋಧ ಸೆರೆ: ಬಿಡುಗಡೆಗಡೆಯಾಗಿದ್ದು ಹೇಗೆ?

    ಕಾರ್ಗಿಲ್ ಯುದ್ಧದ ವೇಳೆಯೂ ಯೋಧ ಸೆರೆ: ಬಿಡುಗಡೆಗಡೆಯಾಗಿದ್ದು ಹೇಗೆ?

    ನವದೆಹಲಿ: 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತ ಪೈಲಟ್ ಗ್ರೂಪ್ ಕ್ಯಾಪ್ಟನ್ ಕಬಂಪತಿ ನಚಿಕೇತ ಭಾರತದ ಮೊದಲ ಹಾಗೂ ಏಕೈಕ ಯುದ್ಧ ಕೈದಿ ಆಗಿದ್ರು. ಯುದ್ಧದ ಸಂದರ್ಭದಲ್ಲಿ ನಚಿಕೇತ ಅವರಿಗೆ ಕೇವಲ 26 ವರ್ಷ ವಯಸ್ಸು, ಭಾರತೀಯ ವಾಯುದಳದ ನಂ.9 ಸ್ಕ್ವಾರ್ಡನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ತಂಡ ಯುದ್ಧ ಪೀಡಿತ ಬಟಾಲಿಕ್ ವಲಯವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿತ್ತು. ಈ ವೇಳೆ ಮಿಗ್ 27 ಫೈಟರ್ ಏರ್ ಕ್ರಾಫ್ಟ್ ಮೇಲೆ ಎದುರಾಳಿಗಳು ಕ್ಷಿಪಣಿ ದಾಳಿ ನಡೆಸಿದ ಸಂದರ್ಭದಲ್ಲಿ ನಚಿಕೇತ ನಡೆಸುತ್ತಿದ್ದ ಮಿಗ್ ವಿಮಾನದ ಇಂಜಿನ್ 17 ಸಾವಿರ ಎತ್ತರದಲ್ಲಿ ಕೈಕೊಟ್ಟಿತ್ತು. ಬೇರೆ ದಾರಿ ಇಲ್ಲದ ಕಾರಣ ನಚಿಕೇತ ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಕೆಳಕ್ಕೆ ಹಾರಿದ್ದರು.

    ಈ ವೇಳೆ ಇವರ ಸಹಾಯಕ್ಕೆ ಆಗಮಿಸಿದ್ದ ಮಿಗ್ 21 ಜೆಟ್‍ನ ಲೀಡರ್ ಅಜಯ್ ಅಹುಜಾರ ಮೇಲೂ ಕೂಡ ಪಾಕ್ ಕ್ಷಿಪಣಿ ದಾಳಿ ನಡೆಸಿತ್ತು. ಕೆಳಕ್ಕೆ ಬಿದ್ದಿದ್ದ ನಚಿಕೇತ ಅವರನ್ನು ಪಾಕ್ ಸೈನಿಕರು ವಶಕ್ಕೆ ಪಡೆಯಲು ಯತ್ನಿಸಿದ್ದರು. ಪಾಕ್ ಸೈನ್ಯಕ್ಕೆ ಸುಲಭವಾಗಿ ಸಿಗಲು ಇಚ್ಛಿಸದ ನಚಿಕೇತ ತಮ್ಮ ಸರ್ವೀಸ್ ಗನ್ ನಿಂದ ಪಾಕ್ ಸೈನಿಕರತ್ತ ಗುಂಡು ಹಾರಿಸಿದ್ದರು. ಆದರೆ ನಚಿಕೇತ ಗನ್ ಬುಲೆಟ್ ಖಾಲಿಯಾದ ಪರಿಣಾಮ ಪಾಕ್ ಸೈನಿಕರು ಅವರನ್ನು ವಶಕ್ಕೆ ಪಡೆದಿದ್ರು. ಆ ಬಳಿಕ ಅವರನ್ನು ಪಾಕಿಸ್ತಾನದ ರಾವಲ್ಪಿಂಡಿ ಜೈಲಿನಲ್ಲಿ ಇಟ್ಟು ಹಿರಿಯ ಕಮಾಂಡರ್ ಆಗಮಿಸುವ ವೇಳೆಗೆ ಚಿತ್ರಹಿಂಸೆ ನೀಡಲಾಗಿತ್ತು.

    2016 ರಲ್ಲಿ ಈ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಚಿಕೇತ ಅವರು, ಹಿರಿಯ ಕಮಾಂಡರ್ ಆಗಮಿಸುವವರೆಗೂ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು. ಅಲ್ಲದೇ ನಾನು ಅವರ ವಿರುದ್ಧ ಆಗಸದಿಂದ ದಾಳಿ ನಡೆಸಿದ್ದ ಪರಿಣಾಮ ಕೊಲೆ ಮಾಡಲು ಕೂಡ ಉದ್ದೇಶಿಸಿದ್ದರು. ಆದರೆ ಹಿರಿಯ ಕಮಾಂಡರ್ ಬಂದ ವೇಳೆ ನಾನು ಸೆರೆ ಆಗಿರುವುದು ಅರಿವಾಗಿ ನನ್ನನ್ನು ಈ ರೀತಿ ನಡೆಸಿಕೊಳ್ಳದಂತೆ ತಿಳಿಸಿದ್ದರು. ಆ ಬಳಿಕ ಅವರು ಇತರೇ ಸೈನಿಕರನ್ನು ನಿಯಂತ್ರಿಸಿದ್ದರು. ಇದು ಅವರು ಮಾಡಿದ ದೊಡ್ಡ ಕಾರ್ಯವಾಗಿತ್ತು ಎಂದು ತಿಳಿಸಿದ್ದರು.

    ಪಾಕಿಸ್ತಾನ ಸೈನಿಕರಿಗೆ ಸೆರೆ ಸಿಕ್ಕ ಅವರು ನಾನು ಎಂದು ಭಾರತಕ್ಕೆ ಹಿಂದಿರುಗಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಆ ಸಂದರ್ಭವನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದಿದ್ದರು. ಆ ಸಂದರ್ಭದಲ್ಲಿ ಇಲ್ಲಿಗೆ ನನ್ನ ಜೀವನ ಕೊನೆ ಆಯ್ತು ಎಂದು ಭಾವಿಸಿದ್ದೆ. 3 ರಿಂದ 4 ದಿನಗಳಿಂದ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರು. ಆದರೆ ನಾನು ಆ ದೇವರಿಗೆ ಋಣಿಯಾಗಿರುತ್ತೇನೆ. ಆ ಘಟನೆಯಿಂದ ನಾನು ಬದುಕಿ ಬಂದಿದ್ದೇನೆ ಎಂದು ತಿಳಿಸಿದ್ದರು.

    ತನ್ನ ದೇಶದ ಸೈನಿಕ ಪಾಕಿಸ್ತಾನ ಕೈಯಲ್ಲಿ ಸೆರೆಯಾಗಿದ್ದಾರೆ ಎಂದು ತಿಳಿದ ಕೂಡಲೇ ಭಾರತ ವಿದೇಶಗಳಿಂದ ಪಾಕಿಸ್ತಾನದ ಮೇಲೆ ಒತ್ತಡ ತಂದಿತ್ತು. ಅಲ್ಲದೇ ವಿಶ್ವಸಂಸ್ಥೆ ಕೂಡ ಪಾಕಿಸ್ತಾನ ಮೇಲೆ ಒತ್ತಡ ಹಾಕಿದ್ದ ಪರಿಣಾಮ ಬೇರೆ ದಾರಿ ಇಲ್ಲದೇ ನಚಿಕೇತರನ್ನು 8 ದಿನಗಳ ಬಳಿಕ, ಅಂದರೆ ಜೂನ್ 1999ರಂದು ಬಿಡುಗಡೆ ಮಾಡಿತ್ತು.

    ವಾಘಾ ಗಡಿಯಲ್ಲಿ ಪಾಕಿಸ್ತಾನ ನಚಿಕೇತರನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ತವರಿಗೆ ಬಂದ ವೇಳೆ ಅವರ ಆರೋಗ್ಯ ಸ್ಥಿತಿ ಕೂಡ ಹದಗೆಟ್ಟಿತ್ತು. ಏಕೆಂದರೆ ಸುಮಾರು 18 ಸಾವಿರ ಅಡಿ ಎತ್ತರದಿಂದ ನೆಲಕ್ಕೆ ಜಿಗಿದ ಪರಿಣಾಮ ಗಾಯಗೊಂಡಿದ್ದರು. ಮನೆಗೆ ಹಿಂದಿರುಗಿದ ಬಳಿಕ ಸತತ ಮೂರು ವರ್ಷಗಳ ಕಾಲ ಅವರು ಚಿಕಿತ್ಸೆ ಪಡೆದಿದ್ದರು. ಈ ವೇಳೆ ಅವರಿಗೆ ಗ್ರೌಂಡ್ ಕೆಲಸ ನೀಡಲಾಗಿತ್ತು. 2003 ರಲ್ಲಿ ಮತ್ತೆ ಅವರು ಪೈಲಟ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

    ಇವರ ಧೈರ್ಯ ಸಾಹಸ ಮೆಚ್ಚಿದ ಸರ್ಕಾರ 2000 ಇಸವಿಯಲ್ಲಿ ವಾಯು ಸೇನಾ ಪದಕವನ್ನು ನೀಡಿ ಗೌರವಿಸಿತ್ತು. ಕಾರ್ಗಿಲ್ ಯುದ್ಧದ ಸಂದರ್ಭ ನನಗೆ ಜೀವನ ಪಾಠ ಕಲಿಸಿಕೊಟ್ಟಿತ್ತು ಎಂದು ನಚಿಕೇತ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಘಾ ಗಡಿ ಧ್ವಜ ವಂದನೆ ವೇಳೆ ಪಾಕ್ ಕ್ರಿಕೆಟಿಗನ ಹುಚ್ಚಾಟ! – ವಿಡಿಯೋ ನೋಡಿ

    ವಾಘಾ ಗಡಿ ಧ್ವಜ ವಂದನೆ ವೇಳೆ ಪಾಕ್ ಕ್ರಿಕೆಟಿಗನ ಹುಚ್ಚಾಟ! – ವಿಡಿಯೋ ನೋಡಿ

    ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವಿನ ವಾಘಾ ಗಡಿಯಲ್ಲಿ ಯೋಧರು ಸಾಂಪ್ರದಾಯಿಕವಾಗಿ ನಡೆಸುವ ಧ್ವಜ ವಂದನೆ ಕಾರ್ಯಕ್ರಮದ ವೇಳೆ ಪಾಕ್ ಕ್ರಿಕೆಟ್ ತಂಡದ ಆಟಗಾರ ಹಸನ್ ಅಲಿ ಅಗೌರವದಿಂದ ನಡೆದುಕೊಂಡಿದ್ದಾನೆ.

    ಪಾಕ್ ಕ್ರಿಕೆಟ್ ತಂಡದ ಆಟಗಾರರು ವಾಘಾ ಗಡಿ ಪ್ರದೇಶದಲ್ಲಿ ನಡೆಯವ ಧ್ವಜ ವಂದನೆ ಕಾರ್ಯಕ್ರಮ ನೋಡಲು ಹಾಜರಾಗಿದ್ದ ವೇಳೆ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಎಂದಿನಂತೆ ಭಾರತೀಯ ಗಡಿ ಭದ್ರತಾ ಪಡೆ ನಡೆಸುವ ಧ್ವಜ ವಂದನೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಹಸನ್ ಅಲಿ ಭಾರತೀಯ ಯೋಧರ ಕಡೆ ಮುಖ ಮಾಡಿ ತೊಡೆ ತಟ್ಟಿ ಹುಚ್ಚಾಟ ನಡೆಸಿದ್ದಾನೆ. ಈ ವೇಳೆ ಪಾಕ್ ಯೋಧರು ಆತನನ್ನು ತಡೆಯಲು ಸಹ ಯತ್ನಿಸದೇ ನಿಂತಿರುವುದು ಕಂಡು ಬಂದಿದೆ. ಪಾಕ್ ಆಟಗಾರನ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ತಮ್ಮದೇ ಆದ ಅಭಿಪ್ರಾಯ ತಿಳಿಸಿ ಟ್ವೀಟ್ ಮಾಡುತ್ತಿದ್ದಾರೆ.

    ಪಾಕ್ ಕ್ರಿಕೆಟ್ ಆಟಗಾರರು ಭಾರತೀಯರ ಅಭಿಮಾನವನ್ನು ಕೆಣಕುಕುವುದು ಇದೇ ಮೊದಲೆನಲ್ಲ. ಕಳೆದ ಕೆಲ ದಿನಗಳ ಹಿಂದೆ ಪಾಕ್ ಮಾಜಿ ಆಟಗಾರ ಶಹೀದ್ ಅಫ್ರಿದಿ ಸಹ ಜಮ್ಮು ಕಾಶ್ಮೀರ ವಿಷಯನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದರು.

    ಪಾಕ್ ಆಟಗಾರು ಸದ್ಯ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಪಾಕ್ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಈ ಸರಣಿಯಲ್ಲಿ ಭಾಗವಹಿಸುವ ಮುನ್ನ ವಾಘಾ ಗಡಿಗೆ ಭೇಟಿ ನೀಡಲು ಅನುಮತಿ ನೀಡಬೇಕು ಎಂದು ಪಾಕ್ ಕ್ರಿಕೆಟ್ ಬೋರ್ಡ್ ಗೆ ಮನವಿ ಮಾಡಿದ್ದರು. ಮನವಿಯ ಹಿನ್ನೆಲೆಯಲ್ಲಿ ಪಾಕ್ ಆಟಗಾರರು ವಾಘಾ ಗಡಿ ಧ್ವಜ ವಂದನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    https://twitter.com/cricketer85/status/987702916197724160