Tag: ವಾಗ್ದಾಳಿ

  • ಇಂದಿರಾ ಕ್ಯಾಂಟೀನಲ್ಲೂ ಅವ್ಯವಹಾರವಂತೆ! – ಸದನದಲ್ಲಿ ಡಿಕೆಶಿ-ರಾಮದಾಸ್ ವಾಕ್ಸಮರ

    ಇಂದಿರಾ ಕ್ಯಾಂಟೀನಲ್ಲೂ ಅವ್ಯವಹಾರವಂತೆ! – ಸದನದಲ್ಲಿ ಡಿಕೆಶಿ-ರಾಮದಾಸ್ ವಾಕ್ಸಮರ

    ಬೆಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 150 ಕೋಟಿ ರೂ. ಅವ್ಯವಹಾರ ನಡೆದಿದೆ, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಆರೋಪಿಸಿದ್ದಾರೆ.

    ವಿಧಾನಸಭೆಯಲ್ಲಿ ರಾಮದಾಸ್ ಅವರ ಹೇಳಿಕೆಗೆ ಕಾಂಗ್ರೆಸ್ಸಿನವರು ಭಾರೀ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರಂತೂ, ಯಾವುದೇ ದಾಖಲೆಗಳಿಲ್ಲದೇ ಕಾಂಗ್ರೆಸ್ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಮದಾಸ್ ಅವರು, ಇಂದಿರಾ ಕ್ಯಾಂಟೀನ್ ಹಗರಣದಿಂದ ಬಂದ 50 ಕೋಟಿ ರೂ. ಅನ್ನು ಎಐಸಿಸಿಗೆ ನೀಡಲಾಗಿದೆ. ಇಂದಿರಾ ಗಾಂಧಿ ಅವರು ಮಾಜಿ ಪ್ರಧಾನಿ, ಅವರ ಭಾವಚಿತ್ರವನ್ನು ಕ್ಯಾಂಟೀನ್‍ಗೆ ಬಳಕೆ ಮಾಡಿಕೊಂಡಿರುವ ಹಿಂದೆಯೂ ಹಗರಣ ನಡೆದಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆ ಟೆಂಡರನ್ನು ದೆಹಲಿಯ ರಿವಾಸ್ ಎಂಬ ಎನ್‍ಜಿಓಗೆ ಕೊಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ರಿವಾಜ್ ಎನ್‍ಜಿಓವನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೂ ಅದೇ ಎನ್‍ಜಿಓ ಟೆಂಡರ್ ಕೊಟ್ಟಿರುವಿರಿ ಎಂದು ಆರೋಪಿಸಿದರು.

    ರಾಮದಾಸ್ ಇಂದಿರಾ ಕ್ಯಾಂಟೀನ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಾತನಾಡಿದ ಸಚಿವ ಡಿಕೆಶಿ, ಬಿಜೆಪಿಯವರಿಗೆ ಹೇಗೆ ಕೇಶವಕೃಪಾನೋ, ಹಾಗೆಯೇ ನಮಗೆ ಎಐಸಿಸಿ ದೇವಸ್ಥಾನ. ಸುಖಾಸುಮ್ಮನೆ ಎಐಸಿಸಿಗೆ ಲಂಚ ಕೊಟ್ಟಿದ್ದಾರೆ ಎಂದು ಹೇಳಿದ್ರೆ ಕೇಳಿಕೊಂಡು ಕೂರಲು ನಾವು ತಯಾರಿಲ್ಲ. ಆರೋಪ ಮಾಡೋದೇ ಆದರೆ ನೋಟಿಸ್ ಕೊಟ್ಟು ದಾಖಲೆ ಕೊಟ್ಟು ಆರೋಪ ಮಾಡಲಿ. ಯಾರೋ ಒಬ್ಬ ಲಂಚ ಹೊಡೆದು ಬಿಜೆಪಿ ಕೇಂದ್ರ ಕಚೇರಿಗೆ ಹೋಯ್ತು ಎಂದು ಆರೋಪಿಸಿದ್ರೆ ಒಪ್ಪುತ್ತೀರಾ ಎಂದು ಪ್ರಶ್ನಿಸಿದರು.

    ಇದೇ ವೇಳೆ ಮಧ್ಯಪ್ರವೇಶಿಸಿದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ, ನಿಯಮಾವಳಿ ಪ್ರಕಾರ ಯಾವುದೇ ಸಂಸ್ಥೆ ಹಾಗೂ ವ್ಯಕ್ತಿ ಮೇಲೆ ದಾಖಲೆ ಇಲ್ಲದೆ ಆರೋಪ ಮಾಡುವಂತಿಲ್ಲ. ಹಾಗಾಗಿ ಆರೋಪವನ್ನು ಕಡತದಿಂದ ತೆಗೆಸಿ ಹಾಕಲು ಮುಂದಾದರು. ಇದಕ್ಕೆ ರಾಮದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯಾರಿಂದ ಲಂಚ ಪಡೆದ್ರು? ಎಐಸಿಸಿಗೆ 50 ಕೋಟಿ ರೂ. ಕಿಕ್ ಬ್ಯಾಕ್ ಹೇಗೆ ಹೋಯ್ತು ಎಂಬುದರ ಬಗ್ಗೆ ಸಂಪೂರ್ಣ ದಾಖಲೆಗಳಿವೆ. ದಾಖಲೆ ಕೊಡಲು ಸಿದ್ಧವಿರೋದಾಗಿ ಹೇಳಿದರು.

    ಇದಕ್ಕೆ ಸಚಿವ ಕೃಷ್ಣಬೈರೇಗೌಡ, ಎಐಸಿಸಿ ಎಂದರೆ ಒಂದು ಸಂಸ್ಥೆ. ಅಧ್ಯಕ್ಷರು ಪದಾಧಿಕಾರಿಗಳು ಇದ್ದಾರೆ. ಹಾಗಾಗಿ ಎಐಸಿಸಿ ಮೇಲೆ ಆರೋಪ ಮಾಡಿದ್ರೆ ಅಧ್ಯಕ್ಷರ ಮೇಲೆ ಆರೋಪ ಮಾಡಿದಂತೆ. ನಿಯಮಾವಳಿ ಪ್ರಕಾರ ಅದಕ್ಕೆ ಅವಕಾಶವಿಲ್ಲ. ರಾಮದಾಸ್ ಅವರು ಸಭಾಧ್ಯಕ್ಷರ ಆದೇಶ ಉಲ್ಲಂಘನೆ ಮಾಡಿದ್ದಾರೆ. ಪೀಠಕ್ಕೆ ನೇರ ಸವಾಲು ಹಾಕಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು. ಆಗ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆಕ್ಷೇಪಣೆ ವ್ಯಕ್ತಪಡಿಸಿ, ರಾಮದಾಸ್ ಅವರು ಯಾವುದೇ ವ್ಯಕ್ತಿಯ ವಿರುದ್ಧ ಆರೋಪಿಸಿಲ್ಲ. ಎಐಸಿಸಿ ಸಂಸ್ಥೆಯೇ ಹೊರತು ವ್ಯಕ್ತಿಯಲ್ಲ ಎಂದು ತಿರುಗೇಟು ನೀಡಿದರು.

    ಇದಕ್ಕೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ, ನಿಮ್ಮಲ್ಲಿರುವ ದಾಖಲೆಗಳನ್ನು ಕಾರ್ಯದರ್ಶಿ ಯವರಿಗೆ ಒಪ್ಪಿಸಿ, ನೊಟೀಸ್ ಕೊಟ್ಟು ಬಳಿಕ ಚರ್ಚೆಗೆ ಬನ್ನಿ ಎಂದು ಸೂಚಿಸಿದರು. ಆದರೆ ರಾಮದಾಸ್ ಇದಕ್ಕೆ ಒಪ್ಪದೆ, ಮೊದಲು ಚರ್ಚೆ ಆಗಲಿ, ನ್ಯಾಯಾಂಗ ತನಿಖೆಗೆ ಆದೇಶಿಸಿ. ಬಳಿಕ ನನ್ನ ಬಳಿ ಇರುವ ದಾಖಲೆಯನ್ನು ಸದನಕ್ಕೆ ಒಪ್ಪಿಸುತ್ತೇನೆ ಎಂದು ಪಟ್ಟು ಹಿಡಿದರು. ರಾಮದಾಸ್ ಗೆ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಸಾಥ್ ನೀಡಿದರು. ಈ ವೇಳೆ ಸದನದಲ್ಲಿ ಗದ್ದಲ, ಜಟಾಪಟಿ ತೀವ್ರಗೊಂಡ ಹಿನ್ನೆಲೆಯಲ್ಲಿ ಸದನವನ್ನ ನಾಳೆಗೆ ಮುಂದೂಡಿದರು.

    ಸದನ ಮುಗಿದ ಬಳಿಕವೂ ರಾಮದಾಸ್, ಡಿಕೆಶಿ ನಡುವೆ ಮಾತಿನ ಚಕಮಕಿ ನಡೆಯಿತು. ದಾಖಲೆ ಕೊಡ್ರೀ ರಾಮದಾಸ್ ಎಂದು ಡಿಕೆಶಿ ಕೇಳಿದ್ದಕ್ಕೆ, ನನ್ ಹತ್ರ ಇದೆ, ಕೊಡಬೇಕಾದ ಸಮಯ ಬಂದಾಗ ಕೊಡ್ತೀನಿ ಎಂದರು.

  • ಪಿಎಸ್‍ಐ ಶ್ರೀನಿವಾಸ್ ವಿಕೃತ ಕಾಮಿ: ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿಕೆ ವಿಡಿಯೋ ವೈರಲ್

    ಪಿಎಸ್‍ಐ ಶ್ರೀನಿವಾಸ್ ವಿಕೃತ ಕಾಮಿ: ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿಕೆ ವಿಡಿಯೋ ವೈರಲ್

    ಚಿಕ್ಕಬಳ್ಳಾಪುರ: ದೇವನಹಳ್ಳಿಯ ವಿಶ್ವನಾಥಪುರ ಠಾಣೆಯ ಪಿಎಸ್‍ಐ ಶ್ರೀನಿವಾಸ್ ಅವರು ವಿಕೃತ ಕಾಮಿ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಸದ್ಯ ಅವರ ಹೇಳಿಕೆ ವಿಡಿಯೋ ಭಾರೀ ವೈರಲ್ ಆಗಿದೆ.

    ವಿಜಯಪುರದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಪಿಎಸ್‍ಐ ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈಗ ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗುತ್ತಿವೆ.

    ಶ್ರೀನಿವಾಸ್ ಅವರ ವಿರುದ್ಧ ಹೋರಾಟಕ್ಕೆ ಇಳಿದರೆ ನಾನು ಅವರಂತೆ ಆಗಬೇಕಾಗುತ್ತದೆ. ಅವರು ಲೇ ಅಂದರೆ ನಾನು ಲೇ ಎನ್ನಬೇಕಾಗುತ್ತದೆ. ಅಧಿಕಾರಕ್ಕೆ ಬಂದ ತಕ್ಷಣವೇ ಅವರನ್ನು ವರ್ಗಾವಣೆ ಮಾಡಲು ನಾನು ಮುಂದಾಗಿದ್ದೆ. ಆದರೆ ಪ್ರಕರಣಕ್ಕೆ ಸಿಲುಕಿ ಈಗ ಅವರು ಅಮಾನತ್ತು ಆಗಿದ್ದಾರೆ ಎಂದು ಹೇಳಿದರು.

    ಪಿಎಸ್‍ಐ ಶ್ರೀನಿವಾಸ್ ಅವರು ಅಮಾಯಕರ ಬಳಿ 20 ಲಕ್ಷ ವಸೂಲಿ ಮಾಡಿದ್ದರು. ಇದನ್ನು ಮರೆ ಮಾಚಲು ಕೆಲವು ಬಡವರಿಗೆ ಐದು, ಹತ್ತು ಸಾವಿರ ರೂ. ದಾನ ಮಾಡಿದ್ದಾರೆ. ಇದರಿಂದಾಗಿ ಅವರ ಪರವಾಗಿ ಅನೇಕರು ಧ್ವನಿ ಎತ್ತುವಂತಾಯಿತು. ಅಲ್ಲದೇ ಇತ್ತೀಚೆಗೆ ಅಕ್ರಮ ಕಲ್ಲು ಸಾಗಾಣಿಕೆ ವಿಚಾರದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಗೆ ಬೆದರಿಕೆ ಹಾಕಿದ್ದರು. ಈ ಪ್ರಕರಣದಿಂದಾಗಿ ಶ್ರೀನಿವಾಸ್ ಅವರು ಅಮಾನತು ಕೂಡ ಆಗಿದ್ದರು. ಶ್ರೀನಿವಾಸ್ ಅವರ ಹಗರಣಗಳು ಸದ್ಯದಲ್ಲಿಯೇ ಹೊರ ಬೀಳಲಿವೆ ಎಂದು ಹೇಳಿದರು.

    ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಯಾವುದೇ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿ, ಶುಭಕೋರಲಿಲ್ಲ. ಆದರೆ ನಂತರದ ದಿನಗಳಲ್ಲಿ ಅವರೇ ಭೇಟಿ ಮಾಡಲು ಬಂದರು. ಈ ವೇಳೆ ಯಾರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲವೋ ಅವರು ಕೆಲಸ ಬಿಟ್ಟು ಮನೆಗೆ ಹೋಗಬಹುದು. ಇಲ್ಲವೇ ಬೇರೆ ಕಡೆಗೆ ವರ್ಗ ಮಾಡಿಸಿಕೊಂಡು ಹೋಗಬಹುದು ಎಂದು ತಾಖೀತು ಮಾಡಿರುವೆ ಎಂದು ಶಾಸಕರು ಹೇಳಿದ್ದರು.

  • ತಮ್ಮ ತಲೆ ಮೇಲೆ ಮಣ್ಣು ಹಾಕ್ಕೊಂಡು ಈಗ ಸಮಾಜದ ಮೇಲೆ ಹಾಕ್ತಿದ್ದಾರೆ: ವಿಶ್ವನಾಥ್ ವಿರುದ್ಧ ಕಾಗಿನೆಲೆ ಶ್ರೀ ಗರಂ

    ತಮ್ಮ ತಲೆ ಮೇಲೆ ಮಣ್ಣು ಹಾಕ್ಕೊಂಡು ಈಗ ಸಮಾಜದ ಮೇಲೆ ಹಾಕ್ತಿದ್ದಾರೆ: ವಿಶ್ವನಾಥ್ ವಿರುದ್ಧ ಕಾಗಿನೆಲೆ ಶ್ರೀ ಗರಂ

    ದಾವಣಗೆರೆ: ಶಾಸಕ ವಿಶ್ವನಾಥ್ ತಮ್ಮ ತಲೆ ಮೇಲೆ ಮಣ್ಣು ಹಾಕಿಕೊಂಡು ಸಮಾಜದ ಹಾಗೂ ಮಠದ ಮೇಲೆ ಹಾಕುತ್ತಿರುವುದು ಸೂಕ್ತವಲ್ಲ ಎಂದು ಹರಿಹರ ತಾಲೂಕಿನ ಬೆಳ್ಳೋಡಿಯ ಕಾಗಿನೆಲೆ ಸ್ವಾಮೀಜಿ ಕಿಡಿಕಾರಿದ್ದಾರೆ.

    ಶಾಸಕ ವಿಶ್ವನಾಥ್ ಹೇಳಿಕೆ ಖಂಡಿಸಿ, ಮಾಧ್ಯಮಗಳ ಜೊತೆಗೆ ಮಾತನಾಡಿದ ಶ್ರೀಗಳು, ನಮ್ಮ ಸಮಾಜದ ನಾಯಕರಾಗಿರುವ ವಿಶ್ವನಾಥ್ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಈ ರೀತಿ ಹೇಳಿಕೆ ಮಾಡಿದ್ದಾರೆ. ಆದರೆ ನಾನು ಕುರುಬ ಸಮಾಜದ ಪರ ಇದ್ದೇನೆ. ಯಾರೇ ಬಂದರೂ ನಮಗಾಗುವ ಶೋಷಣೆ ವಿರುದ್ಧ ಧ್ವನಿ ಎತ್ತುವುದನ್ನು ನಿಲ್ಲಿಸುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಇದನ್ನು ಓದಿ:  ನನಗೆ ಅನ್ಯಾಯವಾದಾಗ ಎಲ್ಲಿ ಹೋಗಿದ್ರಿ – ಕಾಗಿನೆಲೆ ಶ್ರೀಗಳ ವಿರುದ್ಧ ವಿಶ್ವನಾಥ್ ಗರಂ

    ರಾಜಕೀಯದಲ್ಲಿ ನಾನು ಮೂಗು ತೂರಿಸಿಲ್ಲ. ಆದರೆ ವಿಶ್ವನಾಥ್ ಅವರು ಈ ಹಿಂದೆ ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಘಟ ಸರ್ಪ ಹಾಗೂ ಸಿದ್ದರಾಮಯ್ಯ ಅವನ್ನು ಕಪ್ಪೆ ಎಂದು ವ್ಯಂಗ್ಯವಾಡಿದ್ದರು. ಈಗ ಅವರಿಂದ ಅಧಿಕಾರ ಪಡೆಯಲು ಮುಂದಾಗುತ್ತಿದ್ದಾರೆ ಎಂದು ಕಾಲೆಳೆದರು.

    ರಾಜಕೀಯ ವಲಯದಲ್ಲಿ ವಿಶ್ವನಾಥ್ ಅವರ ಕೆಲವು ನಡವಳಿಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೇಸರ ತಂದಿದೆ. ಆದರೂ ನಾವು ಸಿದ್ದರಾಮಯ್ಯ ಅವರನ್ನು ಒಪ್ಪಿಸಲು ಮುಂದಾಗಿದ್ದೇವು, ಪ್ರಯತ್ನ ವಿಫಲವಾಯಿತು. ಅನೇಕ ಬಾರಿ ವಿಶ್ವನಾಥ್ ಅವರು ನನ್ನ ಬಳಿ ತಮ್ಮ ನೋವು ಹಂಚಿಕೊಂಡಿದ್ದಾರೆ. ಈಗ ಅದನ್ನು ಮರೆತು ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕುರುಬ ಸಮುದಾಯ ಹಾಗೂ ನನ್ನ ವಿರುದ್ಧ ಮಾತನಾಡಿದರೆ ಅವರಿಗೆ ಒಳ್ಳೆಯದು ಆಗುತ್ತದೆ ಎನ್ನುವುದಾದರೆ ನನ್ನ ಅಡ್ಡಿ ಇಲ್ಲ ಎಂದು ಟಾಂಗ್ ನೀಡಿದರು.

  • ಮಾಧ್ಯಮಗಳ ವಿರುದ್ಧವೇ ಸಿದ್ದರಾಮಯ್ಯ ಗರಂ

    ಮಾಧ್ಯಮಗಳ ವಿರುದ್ಧವೇ ಸಿದ್ದರಾಮಯ್ಯ ಗರಂ

    ಬೆಂಗಳೂರು: ಯಾರ ಹತ್ತಿರವೂ ನಾವು ಮಾತಾಡಬಾರದು. ನೀವು ಅದನ್ನು ದೊಡ್ಡದು ಮಾಡುತ್ತಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳುವ ಮೂಲಕ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.

    ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬಜೆಟ್ ಹೇಳಿಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಸಹಜವಾಗಿ ಮಾತನಾಡುತ್ತಿದ್ದಾಗ ವಿಡಿಯೋ ಮಾಡಿಕೊಳ್ಳಲಾಗಿದ್ದು, ಆ ವಿಡಿಯೋದಲ್ಲಿ ಹಿಂದಿನ ಹಾಗೂ ಮುಂದಿನ ದೃಶ್ಯ ಕತ್ತರಿಸಿ ಜನರಲ್ಲಿ ದ್ವಂದ್ವತೆ ಉಂಟು ಮಾಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ದೂರಿದರು. ಇದನ್ನು ಓದಿ: ಸಾಲಮನ್ನಾ, ಬಜೆಟ್ ವಿಚಾರದಲ್ಲಿ ಸಿದ್ದರಾಮಯ್ಯ ಮುನಿಸು: ಆಪ್ತರ ಜೊತೆ ಮಾತನಾಡಿದ್ದು ಏನು? ಆಡಿಯೋ ಕೇಳಿ

    ಬಿಜೆಪಿ ಒಂದು ಕೋಮುವಾದಿ ಸರ್ಕಾರ. ಹೀಗಾಗಿ ಅದನ್ನು ಅಧಿಕಾರಕ್ಕೆ ಬರಬಾರದು ಎನ್ನುವುದಕ್ಕೆ ಜೆಡಿಎಸ್ ಜೊತೆ ಕೈ ಜೋಡಿಸಿದ್ದೇವೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲಿದೆ. ಇದರಲ್ಲಿ ಸಂದೇಹವೇ ಬೇಡ ಎಂದು ಹೇಳಿದರು.

    ಇಂದು ಸಮ್ಮಿಶ್ರ ಸರ್ಕಾರದ ಕಾರ್ಯಕ್ರಮಗಳ ಸಮಿತಿ ಸಭೆ ಸಂಜೆ ಇದೆ. ಹೀಗಾಗಿ ಅದಕ್ಕೂ ಮೊದಲು ಕೆಪಿಸಿಸಿ ಕಚೇರಿಯಲ್ಲಿ ಸಂಸದ ವೀರಪ್ಪ ಮೋಯ್ಲಿ, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಆರ್.ವಿ.ದೇಶಪಾಂಡೆ ಅವರೊಂದಿಗೆ ಸಭೆ ನಡೆಸಲಾಗಿದೆ. ನಾಡಿದ್ದು ಸಮನ್ವಯ ಸಮಿತಿ ಸಭೆಯಿದ್ದು, ಅಲ್ಲಿಯೂ ಸಹ ಚರ್ಚೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

  • ಸಿದ್ದರಾಮಯ್ಯ ಮೇಲೆ ಕುಮಾರಸ್ವಾಮಿ ಸಿಟ್ಟಾಗಲು ದೇವೇಗೌಡರು ಕಾರಣ?

    ಸಿದ್ದರಾಮಯ್ಯ ಮೇಲೆ ಕುಮಾರಸ್ವಾಮಿ ಸಿಟ್ಟಾಗಲು ದೇವೇಗೌಡರು ಕಾರಣ?

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಲು ಜೆಡಿಎಸ್ ವರಿಷ್ಠ ದೇವೇಗೌಡ ಕಾರಣವಂತೆ.

    ಹೌದು. ಇಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ವಿಧಾನಸೌಧದಲ್ಲಿ ರೈತರ ಸಾಲಮನ್ನಾ ಸಂಬಂಧ ಸಹಕಾರಿ ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ಮಾತನಾಡಿದ ಸಿಎಂ, ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಚರ್ಚೆ ನಡಿಯುತ್ತಿದೆ. ಲೋಕಸಭಾ ಚುನಾವಣೆ ನಂತರ ಹೊಸ ಬಜೆಟ್ ಮಂಡಿಸಿ ಅಂತಾ ಹೇಳುತ್ತಿದ್ದಾರೆ. ಅಲ್ಲದೆ ನಾನು ಯಾರ ಹಂಗಲ್ಲೂ ಇಲ್ಲ, ಯಾರೂ ಭಿಕ್ಷೆ ಕೊಟ್ಟಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.  ಇದನ್ನು ಓದಿ: ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಅಸಮಾಧಾನ

    ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಜನರ ಬಳಿ ಹೇಳಿಕೊಳ್ಳವ ಪರಿಸ್ಥಿತಿಯಲ್ಲಿಲ್ಲ. ಬೇರೆಯವರ ಹಾಗೆ ದುರಹಂಕಾರದಿಂದ ಕೆಲಸ ಮಾಡಿಸಿಕೊಳ್ಳುವ ಸ್ವಭಾವ ನನ್ನದಲ್ಲ ಎಂದು ಎಚ್‍ಡಿಕೆ ಹೇಳಿದ್ದರು. ಎಚ್‍ಡಿಕೆ ಈ ರೀತಿ ಹೇಳಲು ಮುಖ್ಯಮಂತ್ರಿಗಳ ತಂದೆ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರೇ ಕಾರಣ ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಸಿದ್ದರಾಮಯ್ಯ ಅವರನ್ನು ಮೈತ್ರಿಕೂಟದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮಾಡಿದ್ದೇ ತಪ್ಪಾಯಿತು ಎಂದು ದೇವೇಗೌಡರು ಭಾವಿಸುತ್ತಿದ್ದಾರಂತೆ. ಅಲ್ಲದೇ ಎಲ್ಲದ್ದಕ್ಕೂ ಅವರ ಅಪ್ಪಣೆ ಪಡಿಯಲೇ ಬೇಕಾ? ಬೇಷರತ್ ಬೆಂಬಲ ಅಂದ್ರೆ ಇದೇನಾ ಅಂತಾ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ದೇವೇಗೌಡರು ಒತ್ತಾಯಿಸಿದ್ದರಂತೆ. ಇದರಿಂದಾಗಿ ಇವತ್ತು ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ವಿರುದ್ಧ ಹಾಲಿ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

    https://youtu.be/7RwqI9XYbGE

  • ಹಜ್ ಭವನಕ್ಕೆ ಟಿಪ್ಪು ಹೆಸರನ್ನು ಇಟ್ಟರೆ ಹಿಂದೂಗಳು ದಂಗೆ ಏಳ್ತಾರೆ: ಸೊಗಡು ಶಿವಣ್ಣ

    ಹಜ್ ಭವನಕ್ಕೆ ಟಿಪ್ಪು ಹೆಸರನ್ನು ಇಟ್ಟರೆ ಹಿಂದೂಗಳು ದಂಗೆ ಏಳ್ತಾರೆ: ಸೊಗಡು ಶಿವಣ್ಣ

    ತುಮಕೂರು: ಮೊಘಲರ ದೌಲತ್ತನ್ನು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಈಗ ಮತ್ತೆ ತೋರಿಸುವುದಕ್ಕೆ ಮುಂದಾಗುತ್ತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿ ಕಾರಿದ್ದಾರೆ.

    ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಏಕವಚನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜಮೀರ್‍ನನ್ನು ಹೀಗೆಬಿಟ್ಟರೆ ಮುಂದೊಂದು ದಿನ ಹಜ್ ಭನಕ್ಕೆ ಅಷ್ಟೇ ಅಲ್ಲ, ವಿಧಾನಸೌಧಕ್ಕೂ ಟಿಪ್ಪು ಹೆಸರು ಇಡುತ್ತಾನೆ. ಹಜ್ ಭವನಕ್ಕೆ ಟಿಪ್ಪು ಹೆಸರನ್ನು ಇಟ್ಟಿದ್ದೇ ಆದರೆ ಹಿಂದೂಗಳು ದಂಗೆ ಏಳುವುದು ಖಚಿತ ಎಂದು ಹೇಳಿದರು.

    ನಾವು ಮೊಘಲರ ದಾಳಿ ಸಹಿಸಿಕೊಂಡಿದ್ದೇವೆ. ಬ್ರಿಟಿಷ್ ಹಿಂಸೆ ಸಹಿಸಿಕೊಂಡಿದ್ದೇವೆ. ಇನ್ನು ಮುಂದೆ ನಮ್ಮ ಮೇಲಾಗುವ ಹಿಂಸೆಯನ್ನು ಸಹಿಸಿಕೊಳ್ಳಲ್ಲ. ಕಂಪ್ಯೂಟರ್ ಯುಗದಲ್ಲಿ ಮೊಘಲ್ ಆಳ್ವಿಕೆಯನ್ನು ತೋರಿಸಲು ಜಮೀರ್ ಮುಂದಾಗುತ್ತಿದ್ದಾರೆ. ಇದನ್ನು ಹಿಂದೂಗಳು ಸಹಿಸುವುದಿಲ್ಲ. ಇದು ಕಾಶ್ಮೀರವಲ್ಲ ಜಮೀರ್ ಅವರೇ ಕರ್ನಾಟಕ ಎಂದು ಹೇಳಿ ವಾಗ್ದಾಳಿ ನಡೆಸಿದರು.

    ಅದೃಷ್ಟವಶಾತ್ ಜಮೀರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಸರ್ಕಾರ ಜಮ್ಮೀರ್ ಅಹ್ಮದ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಇಂತಹ ಹೇಳಿಕೆ ಮೂಲಕ ಜಮೀರ್ ಅವರು ಕೋಮು ಗಲಭೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಜಮೀರ್ ಅವರು ತಮ್ಮ ಉದ್ಧಟತನವನ್ನು ಹೀಗೆ ಮುಂದುವರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

  • ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ

    ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ

    ನವದೆಹಲಿ: 48ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ನಲ್ಲಿ ಕಳೆದ ಬಾರಿಯಂತೆ ಶುಭಕೋರಿದ್ದಾರೆ.

    ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೀರ್ಘ ಆಯಸ್ಸು ಹಾಗೂ ಆರೋಗ್ಯ ಸಿಗಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

    2017 ರಲ್ಲಿಯೂ ನರೇಂದ್ರ ಮೋದಿ ಅವರು, ಇದೇ ಸಂದೇಶವನ್ನು ಬರೆದು ಟ್ವೀಟ್ ಮಾಡಿದ್ದರು. ಎಐಸಿಸಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಹುಲ್ ಗಾಂಧಿ ಅವರು ಮೊದಲ ಬಾರಿಯ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಮುಖಂಡರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಮನೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡ ರಾಹುಲ್ ಗಾಂಧಿ, ಪ್ರಧಾನ ಮಂತ್ರಿಗಳು ಜನರನ್ನು ಅನಾಗರೀಕತೆ ಕಡೆಗೆ ಕರೆದೊಯ್ಯುತ್ತಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ನರೇಂದ್ರ ಮೋದಿ ಅವರ ನಾಟಕೀಯ ಬೆಳವಣಿಗೆಯಿಂದ ದೆಹಲಿಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬರೆದು ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದರು.

    ಈ ಬೆಳವಣಿಗೆಯ ನಂತರದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಶುಭಕೋರಿದ್ದಾರೆ. ಕಳೆದ ವರ್ಷ ರಾಹುಲ್ ಗಾಂಧಿ ಅವರು ತಮ್ಮ ಜನ್ಮದಿನವನ್ನು ಇಟಲಿಯಲ್ಲಿರುವ ತಮ್ಮ 93 ವರ್ಷದ ಅಜ್ಜಿಯೊಂದಿಗೆ ಆಚರಿಸಿಕೊಂಡಿದ್ದರು.

  • ಬುದ್ಧಿಯನ್ನು ಮಾರಾಟಕ್ಕೆ ಇಟ್ಟವರು ವಿಚಾರವಾದಿಗಳು – ಬಣ್ಣ ಕಳಚಿದ್ರೆ ಅವ್ರ ಮುಖ ನೋಡಲು ಸಾಧ್ಯವಿಲ್ಲ: ಸಚಿವ ಹೆಗಡೆ

    ಬುದ್ಧಿಯನ್ನು ಮಾರಾಟಕ್ಕೆ ಇಟ್ಟವರು ವಿಚಾರವಾದಿಗಳು – ಬಣ್ಣ ಕಳಚಿದ್ರೆ ಅವ್ರ ಮುಖ ನೋಡಲು ಸಾಧ್ಯವಿಲ್ಲ: ಸಚಿವ ಹೆಗಡೆ

    ಬೆಂಗಳೂರು: ಎಲ್ಲೊ ಓದಿ, ಕಾಪಿ ಪೇಸ್ಟ್ ಮಾಡಿ ಪಿಎಚ್ ಡಿ ಪಡೆದ ವ್ಯಕ್ತಿಗಳ ರೀತಿ ಸಾರ್ವಕರ್ ಅಲ್ಲ. ತಮ್ಮ ಭಾವನೆ, ಅನಿಸಿಕೆಗಳನ್ನು ಸಾರ್ವಕರ್ ಬರೆದಿದ್ದಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

    ನಗರದ ಸುಚಿತ್ರಾ ಕಲಾ ಕೇಂದ್ರದಲ್ಲಿ ಆಯೋಜಿಸಿದ್ದ ಬಿ.ಬಿ.ಹರೀಶ್ ಅನುವಾದ `ಹಿಂದುತ್ವ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ವಿಚಾರವಾದಿಗಳು ತಾವು ಹೇಳಿದ್ದೇ ಸರಿ ಎಂದು ವಾದಿಸುತ್ತಾರೆ. ಅವರು ಬುದ್ಧಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಅಂತಹ ಮೊಂಡು ಸ್ವಭಾವದಲ್ಲಿ ನಾನು ಬೆಳೆದಿಲ್ಲ, ಒಳ್ಳೆಯದನ್ನು ಸ್ವೀಕರಿಸುವುದು ನನಗೆ ಗೊತ್ತು ಎಂದು ಹೇಳಿದರು.

    ವಿಚಾರವಾದಿಗಳು ನಾಟಕೀಯ ಜೀವನ ಮಾಡುತ್ತಿದ್ದಾರೆ. ಅವರು ಜಾತ್ಯತೀತ ಬಣ್ಣ ಹಚ್ಚಿಕೊಂಡು ಬಣ್ಣ ಕಳಚಿದ ಮೇಲೆ ಅವರ ಮುಖ ನೋಡಲು ಸಾಧ್ಯವಾಗುವುದಿಲ್ಲ. ಕೆಲವು ದಿನ ವಿದೇಶದಲ್ಲಿದ್ದು, ಮತ್ತೇ ಭಾರತಕ್ಕೆ ಬಂದು ದೇಶದ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ವಿದೇಶದಲ್ಲಿ ಕಲಿತ ನಾಲ್ಕು ಪದಗಳ ಬಳಕೆಯಲ್ಲಿಯೇ ದೇಶವನ್ನು ತೆಗಳಿ ಮೆಚ್ಚುಗೆ ಪಡೆಯಲು ಕೆಲವರು ತುಡಿಯುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದರು.

    ಹಿಂದೂಗಳು ಎಲ್ಲಿಂದಲೋ ವಲಸೆ ಬಂದವರಲ್ಲ. ಸಂಸ್ಕೃತಿ, ಇತಿಹಾಸ ಗೊತ್ತಿಲ್ಲದ ವಿಚಾರವಾದಿಗಳು ಅವರಿಗೆ ಬೇಕಾದ ಹಾಗೇ ಮಾತನಾಡುತ್ತಾರೆ. ಹಿಂದುತ್ವ ನಾಲ್ಕು ಜನ ಕವಿಗಳು ಬರೆದ ಸಾಹಿತ್ಯವಲ್ಲ. ಹಿಂದುತ್ವಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ, ಹಿಂದುತ್ವ ರಾಜಕಾರಣದ ಫುಟ್ಬಾಲ್ ಅಲ್ಲ ಎಂದರು.

    ಹಿಂದುತ್ವ ರಾತ್ರಿ ಬಿದ್ದ ಕನಸು ಅಲ್ಲ, ಅದು ಬದುಕಿನ ಸಿದ್ಧಾಂತವಾಗಿದೆ. ಸೊನ್ನೆ ಇಲ್ಲದೆ ಜಗತ್ತು ಬದಲಾವಣೆ ಆಗುತ್ತಿರಲಿಲ್ಲ ಎಂದು ಐನ್‍ಸ್ಟೀನ್ ಹೇಳುತ್ತಾರೆ. ಹಾಗೇ ನಾವು ಹಿಂದುತ್ವದ ಬಗ್ಗೆ ಮಾತನಾಡಿದರೆ ಅದು ಸಂವಿಧಾನಕ್ಕೆ ಮಾಡಿದ ಅಪರಾಧ ಎನ್ನುತ್ತಾರೆ. ಅಲ್ಲದೇ ನಮ್ಮನ್ನು ಜಾತ್ಯಾತೀತ ವಿರೋಧಿ ಎಂದು ಕರೆಯುತ್ತಾರೆ. ಬೆಕ್ಕಿನ ಹಾಗೇ ಮೀಯಾವ್ ಅಂದ್ರೆ ಮಾತ್ರ ನೀನು ಜಾತ್ಯಾತೀತ ಎನ್ನುತ್ತಾರೆ. ಕ್ರೈಸ್ತರು, ಮುಸ್ಲಿಮರು ತಮ್ಮ ಧರ್ಮದ ಬಗ್ಗೆ ಎದೆತಟ್ಟಿ ಹೇಳಿಕೊಳ್ಳುತ್ತಾರೆ. ಆದರೆ ಹಿಂದೂಗಳು ಹೇಳಿಕೊಳ್ಳುವುದಿಲ್ಲ. ಏಕಂದರೆ ನಮಗೆ ನಮ್ಮ ರಕ್ತದ ಪರಿಚಯವಿಲ್ಲ ಎಂದು ಅವರು ಹೇಳಿದರು.

    ಹಿಂದುತ್ವವನ್ನು ಚಿಕ್ಕದಾಗಿ ಮಾಡುವ ಪ್ರಯತ್ನಕ್ಕೆ ಕೈ ಹಾಕಬಾರದು. ವಿದೇಶಿ ಬಂಡವಾಳಕ್ಕೆ ಬುದ್ಧಿ ಜೀವಿಗಳು ತಮ್ಮನ್ನ ಮಾರಿಕೊಂಡಿದ್ದು, ಹಿಂದುತ್ವವನ್ನು ಕೀಳಾಗಿ ಕಾಣುತ್ತಿದ್ದಾರೆ. ರಾಮ, ಕೃಷ್ಣ, ಗಣೇಶ, ಸುಬ್ರಮಣ್ಯರು ಬ್ರಾಹ್ಮಣರಲ್ಲ. ಜಾತಿಯಿಂದ ನಾವು ಗೌರವ ನೀಡಿಲ್ಲ, ಬದಲಾಗಿ ಶ್ರೇಷ್ಠ ವಿಚಾರಗಳನ್ನು ಒಪ್ಪಿಕೊಂಡಿದ್ದೇವೆ. ಸತ್ಯ ಒಪ್ಪಿಕೊಳ್ಳುವು, ಜಗತ್ತಿನ ಒಳ್ಳೆಯ ಸ್ವಭಾವವೇ ಹಿಂದುತ್ವವಾಗಿದೆ. ಇಂತಹ ವಿಚಾರಗಳು ಮುರ್ಖ ವಿಚಾರವಾದಿಗಳಿಗೆ ಅರ್ಥವಾಗುವುದಿಲ್ಲ. ಯಾರದ್ದೋ ನಾಲಿಗೆ ಹೊರಳಿದ್ದಕ್ಕೆ ನಾವು ಹಿಂದೂಗಳು ಆಗಿಲ್ಲ ಎಂದು ಹೇಳುವ ಮೂಲಕ ವಿಚಾರವಾದಿಗಳನ್ನು ಕುಟುಕಿದರು.

    ಮಾಧ್ಯಮಗಳ ವಿರುದ್ಧ ಕಿಡಿ: ನಾನು ಏನು ತಪ್ಪು ಮಾಡುತ್ತೇನೋ ಅದನ್ನೇ ಮಾಧ್ಯಮದವರು ಹೈಲೆಟ್ ಮಾಡುತ್ತಾರೆ. ಏಕೆಂದರೆ ಮಾಧ್ಯಮಗಳ ಸಾಮಥ್ರ್ಯ ಅಷ್ಟೇ. ಅವರು ಏನು ಹೇಳಿದರೂ ಅಂತಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ರಕ್ತದ ಪರಿಚಯ ನನಗಿದೆ. ಯಾರೋ ಏನೋ ಹೇಳಿದರು ಅಂತಾ ನನ್ನ ತನವನ್ನು ನಾನು ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

  • ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್

    ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್

    ಬೆಂಗಳೂರು: ಜಯಮಾಲಾ ಅವರಿಗೆ ಸಚಿವ ಸ್ಥಾನ ಸಿಗುತ್ತಿದ್ದಂತೆ ಕಾಂಗ್ರೆಸ್‍ನ ಕೆಲವು ಮುಖಂಡರು ಪ್ರಶ್ನಿಸಿದ್ದರು ಹಾಗೂ ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ಬೆಳವಣಿಗೆಗೆ ಗುರುವಾರ ಜಯಮಾಲಾ ಉತ್ತರ ನೀಡಿದ್ದಾರೆ.

    ಜಗತ್ತನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ಕಾಂಗ್ರೆಸ್ ಸಚಿವ ಎಚ್.ಎಂ.ರೇವಣ್ಣ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಜಯಮಾಲಾ ಟಾಂಗ್ ನೀಡಿದ್ದಾರೆ. ಇದನ್ನು ಓದಿ:  ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಜಯಮಾಲಾ ಸೇವೆ ಪಕ್ಷದ ನಾಯಕರಿಗೆ ಇಷ್ಟವಾಗಿದೆ ಎಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಿರುಗೇಟು ನೀಡಿದ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಪದ ಪ್ರಯೋಗ ನನಗೆ ಸರಿ ಅನಿಸಲಿಲ್ಲ. ಅವರ ಮಾತುಗಳು ರಾಹುಲ್ ಗಾಂಧಿಯವರ ನಿರ್ಧಾರವನ್ನೇ ಪ್ರಶ್ನಿಸುವಂತಿದೆ ಎಂದಿದ್ದಾರೆ.

    ಸಂವಿಧಾನ ಇಲ್ಲದಿದ್ದರೇ ಕೇವಲ ಪುರುಷರು ಮಾತ್ರ ದೇಶವನ್ನು ಆಳುತ್ತಿದ್ದರು. ನಮ್ಮನ್ನ ನಾಲ್ಕು ಗೋಡೆ ಮಧ್ಯೆ ಕೂಡಿ ಹಾಕುತ್ತಿದ್ದರು. ಕಾಂಗ್ರೆಸ್ಸಿಗೆ ಧ್ವನಿಪೆಟ್ಟಿಯಾಗಿದ್ದು ಹೆಣ್ಣು, ಇಂದಿರಾ ಗಾಂಧಿ ಪಕ್ಷಕ್ಕೆ ಬಲ ತುಂಬಿದ್ದರು. ಅಧಿನಾಯಕಿ ಸೋನಿಯಾ ಗಾಂಧಿ ಪಕ್ಷಕ್ಕೆ ಮರು ಚೇತನ ನೀಡಿದ್ದಾರೆ. ನನಗೆ ವಿಧಾನ ಪರಿಷತ್ ಸಭಾ ನಾಯಕಿಯಾಗಿ ಕೆಲಸ ಮಾಡುವ ಶಕ್ತಿಯಿದೆ. ನಾನು ಏನು ಗೊತ್ತಿಲ್ಲದೇ ರಾಜಕೀಯಕ್ಕೆ ಬಂದಿಲ್ಲ ಎಂದು ಟಾಂಗ್ ನೀಡಿದರು.