Tag: ವಾಕಥಾನ್

  • 2,500 ಅಡಿ ಉದ್ದದ ತಿರಂಗಾ ವಾಕಥಾನ್‍ಗೆ ಸುಧಾಕರ್ ಚಾಲನೆ

    2,500 ಅಡಿ ಉದ್ದದ ತಿರಂಗಾ ವಾಕಥಾನ್‍ಗೆ ಸುಧಾಕರ್ ಚಾಲನೆ

    ಚಿಕ್ಕಬಳ್ಳಾಪುರ: 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಅಂಗವಾಗಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ಹಾಗೂ ಪ್ರೇರೇಪಣೆ ಮೂಡಿಸುವ ಸಲುವಾಗಿ ಇಂದು ಚಿಕ್ಕಬಳ್ಳಾಪುರ ನಗರದಲ್ಲಿ 2,500 ಅಡಿ ಉದ್ದದ ತಿರಂಗಾ ಯಾತ್ರೆ ನಡೆಸಲಾಯಿತು.

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ 2,500 ಅಡಿ ಉದ್ದದ ತ್ರಿವರ್ಣ ಧ್ವಜದ ವಾಕಥಾನ್ ನಡೆಸಲಾಗಿಯಿತು. ನಗರದ ಎಂಜಿ ರಸ್ತೆಯ ಜೈ ಭೀಮ್ ವಿದ್ಯಾರ್ಥಿನಿಲಯದಿಂದ ಬಿಬಿರಸ್ತೆಯ ಮೂಲಕ ಸಾಗಿ ಒಕ್ಕಲಿಗರ ಕಲ್ಯಾಣಮಂಟಪದ ಬಳಿ ವಾಕಥಾನ್ ಅಂತ್ಯವಾಯಿತು. ಈ ವಾಕಥಾನ್‍ನಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಊಟ ನೀಡೋ ವಿಚಾರಕ್ಕೆ ಜಗಳ – ಬಾಮೈದನಿಂದಲೇ ಯೋಧನ ಕೊಲೆ

    ಆಗಸ್ಟ್ 13 ರಿಂದ 15 ರವರೆಗೆ ದೇಶದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇಂದು ಆಯೋಜಿಸಿದ್ದ ವಾಕಥಾನ್ ಇಡೀ ನಗರದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಸುಮಾರು 2,500 ಅಡಿಗಳ ಉದ್ದದ ರಾಷ್ಟ್ರಧ್ವಜದೊಂದಿಗೆ ಹೆಜ್ಜೆ ಹಾಕಿದ ಸಾವಿರಾರು ಶಾಲಾ-ಕಾಲೇಜ್ ವಿದ್ಯಾರ್ಥಿಗಳೊಂದಿಗೆ ಬೆಳ್ಳಂ ಬೆಳಗ್ಗೆ ಆರೋಗ್ಯ ಸಚಿವರು ಹೆಜ್ಜೆ ಹಾಕಿ ಹುರುಪು ತುಂಬಿದರು. ಹೆಜ್ಜೆ ಹೆಜ್ಜೆಗೂ ಭಾರತ್ ಮಾತಾಕಿ ಜೈ ಉದ್ಘೋಷ ಅನುಕರಣಿಸುತ್ತಿದ್ದ ಮೆರವಣಿಗೆಯಲ್ಲಿ ಎಲ್ಲರ ಕೈಯಲ್ಲೂ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಬ್ಯಾಂಡ್ ಸೆಟ್‌ಗಳು, ಡಿಜೆ ಶಬ್ದದ ಅಬ್ಬರದ ನಡುವೆ ರಾಷ್ಟ್ರಪ್ರೇಮ ಉಕ್ಕೇರಿಸುವ ಘೋಷಣೆಗಳು ಮೊಳಗಿದವು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ

    ರಸ್ತೆಯುದ್ದಕ್ಕೂ ತ್ರಿವರ್ಣ ಧ್ವಜಗಳ ಹಾರಾಟ ಯುವ ವಿದ್ಯಾರ್ಥಿಗಳ ಜೈಕಾರದ ಅರ್ಭಟ ಕೇಳಿಬಂತು. ನಾಗರಿಕರು, ಅಧಿಕಾರಿಗಳು, ಶಿಕ್ಷಕರು ವಾಕಥಾನ್‍ನಲ್ಲಿ ಭಾಗವಹಿಸಿ ತಿರಂಗಾ ಅಭಿಯಾನ ಜಾಗೃತಿ ನಡಿಗೆಗೆ ಮೆರುಗು ತುಂಬಿದರು.

    Live Tv
    [brid partner=56869869 player=32851 video=960834 autoplay=true]

  • ಸಮೃದ್ಧ, ಸದೃಢ ಭಾರತ ನಿರ್ಮಾಣಕ್ಕೆ ಯುವ ಜನಾಂಗ ಕೊಡುಗೆ ನೀಡಬೇಕು: ಉದಯ ಗರುಡಾಚಾರ್

    ಸಮೃದ್ಧ, ಸದೃಢ ಭಾರತ ನಿರ್ಮಾಣಕ್ಕೆ ಯುವ ಜನಾಂಗ ಕೊಡುಗೆ ನೀಡಬೇಕು: ಉದಯ ಗರುಡಾಚಾರ್

    ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಶುಭ ಸಂದರ್ಭದಲ್ಲಿ ಚಿಕ್ಕಪೇಟೆ ವಿಧಾನಸಭಾ ಶಾಸಕರಾದ ಉದಯ ಉದಯ ಗರುಡಾಚಾರ್‌ ಅವರ ನೇತೃತ್ವದಲ್ಲಿ ಗರುಡಾ ಫೌಂಡೇಷನ್ ಸಂಸ್ಥಾಪಕಿ ಶ್ರೀಮತಿ ಮೇದಿನಿ ಗರುಡಾಚಾರ್‌ ಅವರ ಸಹಕಾರದಿಂದ ಅಮೃತ ಘಳಿಗೆ ವಾಕಥಾನ್ (ನಡಿಗೆ ಜಾಥ)ಆಯೋಜಿಸಲಾಗಿತ್ತು.

    ಶಾಸಕರ ಕಛೇರಿಯಿಂದ ಅಶೋಕ ಸ್ಥಂಭದವರಗೆ ಸಾವಿರಾರು ಜನರು ವಾಕಥಾನ್‍ನಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಉದಯ ಗರುಡಾಚಾರ್‌ ಅವರು, ತ್ಯಾಗ, ಬಲಿದಾನದಿಂದ ಬ್ರಿಟಿಷ್‍ರ ಆಳ್ವಿಕೆಯಿಂದ ಮುಕ್ತರಾಗಿ ಭಾರತ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಸಂದಿದೆ. ಈ ಶುಭ ಸಂದರ್ಭದಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಹರ್ ಘರ್ ತಿರಂಗಾ ಆಂದೋಲನವಾಗಿ ರೂಪುಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರತಿಯೊಬ್ಬರ ಮನೆಯ ಮೇಲೆ ಭಾರತೀಯ ತ್ರಿರ್ವಣ ಧ್ವಜ ಹಾರಲಿದೆ.

    ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಮೃತ ಮಹೋತ್ಸವ ಅಂಗವಾಗಿ ವಾಕಥಾನ್ ಮತ್ತು ಉಚಿತವಾಗಿ ತ್ರಿರ್ವಣ ಧ್ವಜ ವಿತರಣೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸಂದೇಶಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಗುಂಡನನ್ನು ಹುಡುಕಿಕೊಟ್ಟವರಿಗೆ 30 ಸಾವಿರ ರೂ. ಬಹುಮಾನ – ಮಗನಂತೆ ಸಾಕಿದ್ದ ಶ್ವಾನಕ್ಕಾಗಿ ಮಹಿಳೆ ಕಣ್ಣೀರು

    ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ತಮ್ಮ ಜೀವವನ್ನು ತ್ಯಾಗ, ಬಲಿದಾನ ಮಾಡಿದ ಮಹನೀಯರುಗಳು ಜೀವನ ಚರಿತ್ರೆಯನ್ನು ಇಂದಿನ ಯುವ ಸಮೂಹ ಅರಿತುಕೊಳ್ಳಬೇಕು. ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಕೊಂಡು ಸಾಗಬೇಕು. ಭಾರತ ಸಮೃದ್ಧ, ಸದೃಢ ಯುವ ಜನಾಂಗದ ಕೊಡುಗೆ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಫ್ಲ್ಯಾಶ್‌ಲೈಟ್‌ನಲ್ಲಿ ಇಸಿಜಿ ಟೆಸ್ಟ್ ಮಾಡಿದ ಸರ್ಕಾರಿ ಆಸ್ಪತ್ರೆ ವೈದ್ಯರು

    Live Tv
    [brid partner=56869869 player=32851 video=960834 autoplay=true]

  • ಭಜರಂಗಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಚಿವ ಸುಧಾಕರ್

    ಭಜರಂಗಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಸಚಿವ ಸುಧಾಕರ್

    ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಭಜರಂಗಿ ಹಾಡಿಗೆ ಬೆಂಬಲಿಗರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.

    ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ 131ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ 115ನೇ ಜಯಂತಿ ಅಂಗವಾಗಿ ನಗರದಲ್ಲಿ ‘ಸಾಮಾಜಿಕ ನ್ಯಾಯದೆಡೆಗೆ’ ಎಂಬ ವಿನೂತನ ಕಾಲ್ನಡಿಗೆ (ವಾಕಥಾನ್) ಜಾಥಾಗೆ ಡಾ.ಕೆ.ಸುಧಾಕರ್ ಚಾಲನೆ ನೀಡಿದರು. ವಾಕ್ ಥಾನ್ ವೇಳೆ ಜೈ ಭಜರಂಗಿ ಡಿಜೆ ಹಾಡಿಗೆ ಸುಧಾಕರ್ ಅವರು ಸಖತ್ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದರು. ಇದನ್ನೂ ಓದಿ: ರಾಮನ ಭಜನೆ ಮಾಡೋರ ಹೃದಯ ಇಷ್ಟೊಂದು ಕಠೋರವಾಯ್ತಾ: ಲಕ್ಷ್ಮಿ ಹೆಬ್ಬಾಳ್ಕರ್

    ನಗರದ ಎಂಜಿ ರಸ್ತೆಯ ಜೈ ಭೀಮ್ ಹಾಸ್ಟೆಲ್ ಬಳಿಯಿಂದ ಆರಂಭವಾದ ರ್‍ಯಾಲಿ ಎಂಜಿ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದ ಮೂಲಕ ಬಿಬಿ ರಸ್ತೆಯಲ್ಲಿ ಸಾಗಿ ನಂದಿರಂಗಮಂದಿರದ ಬಳಿ ಅಂತ್ಯ ಮಾಡಲಾಯಿತು. ವಾಕ್ ಥಾನ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿ ಸಾವಿರಾರು ಮಂದಿ ಭಾಗವಹಿಸಿದ್ದರು. ಈ ವೇಳೆ ಸಹಬಾಳ್ವೆ, ಸಮಾನತೆ, ಸಹ ಮಾನವರೊಂದಿಗೆ ಸಹೋದರೆತೆ ಹಾಗೂ ಸಾಮಾಜಿಕ ನ್ಯಾಯದ ಜಾಗೃತಿ ಕುರಿತಾಗಿ ಸಚಿವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ಬ್ಯಾರಿಕೇಡ್ ಹತ್ತಿ ಪೊಲೀಸರ ಮೇಲೆ ಡಿಕೆಶಿ ಜಂಪ್

  • ಪೌರ ಕಾರ್ಮಿಕರಿಗಾಗಿ ಕ್ಯಾನ್ಸರ್ ಜಾಗೃತಿ ವಾಕಥಾನ್

    ಪೌರ ಕಾರ್ಮಿಕರಿಗಾಗಿ ಕ್ಯಾನ್ಸರ್ ಜಾಗೃತಿ ವಾಕಥಾನ್

    ಬೆಂಗಳೂರು: ಸ್ವಚ್ಛ, ಸ್ವಾಸ್ತ್ಯ, ಸುಂದರ ಬೆಂಗಳೂರು ನಿರ್ಮಾಣಕ್ಕಾಗಿ ಟೊಂಕಕಟ್ಟಿ ಶ್ರಮಿಸುತ್ತಿರುವ ನಮ್ಮ ಪೌರಕಾರ್ಮಿಕರಿಗಾಗಿ ಬಿಬಿಎಂಪಿ ಆವರಣದಿಂದ ವಾಕಥಾನ್ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು. ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲೇ ಈ ವಾಕಥಾನ್ ಆಯೋಜಿಸಲಾಗಿತ್ತು. ವಿಶೇಷವಾಗಿ ಪೌರ ಕಾರ್ಮಿಕರಿಗಾಗಿಯೇ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಸಹ ಆಯೋಜನೆ ಮಾಡಲಾಗಿತ್ತು.

    “ಸಂಕಲ್ಪ” ಚೇಸ್ ಕ್ಯಾನ್ಸರ್ ಫೌಂಡೇಶನ್ ಆ್ಯಂಡ್ ರೀಸರ್ಚ್ ಟ್ರಸ್ಟ್, ನವೋದಯನ್ಸ್ ನವೋದಯ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಈ ಜಾಗೃತಿ ವಾಕಥಾನ್ ಅನ್ನು ಆಯೋಜನೆ ಮಾಡಲಾಗಿತ್ತು. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು “ಕ್ಯಾನ್ ವಾಕ್” 2020ಕ್ಕೆ ಚಾಲನೆ ನೀಡಲು ಸಚಿವ ಡಾ. ಸುಧಾಕರ್ ಬಂದಿದ್ದರು. ಸಚಿವ ಡಾ. ಸುಧಾಕರ್ ಕೆ, ಬಿಗ್ ಬಾಸ್ 7 ನೇ ಆವೃತ್ತಿಯ ವಿನ್ನರ್ ಶೈನ್ ಶೆಟ್ಟಿ ಸೇರಿ ಹಲವರು ವಾಕಥಾನ್ ಅಲ್ಲಿ ಭಾಗವಹಿಸಿದ್ದು ವಿಷೇಶವಾಗಿತ್ತು.

    ನಂತರ ಮಾತನಾಡಿದ ಸಚಿವ ಡಾ. ಕೆ ಸುಧಾಕರ್ ಕ್ಯಾನ್ಸರ್ ಜೊತೆ ಹೋರಾಡಬೇಕು ಎಂದರೆ ಮೊದಲಿಗೆ ಅದರ ಬಗ್ಗೆ ಅರಿವಿರಬೇಕು. ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಬೇಕು. ಜನರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಈ ರೀತಿಯ ಕಾರ್ಯಕ್ರಮದ ಅಗತ್ಯವಿದೆ. ಯುವ ಜನತೆ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯ. ವೈದ್ಯಕೀಯ ಸಚಿವನಾಗಿ, ಸ್ವತಃ ವೈದ್ಯನಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಖುಷಿಯಾಗಿದೆ ಎಂದರು.