Tag: ವಾಂಖೆಡೆ

  • ಹೊಸ ತಂಡಗಳಿಗಿಂದು ಮೊದಲ ಪಂದ್ಯ – ಗೆಲುವು ಯಾರಿಗೆಂಬುದೇ ಕುತೂಹಲ?

    ಹೊಸ ತಂಡಗಳಿಗಿಂದು ಮೊದಲ ಪಂದ್ಯ – ಗೆಲುವು ಯಾರಿಗೆಂಬುದೇ ಕುತೂಹಲ?

    ಮುಂಬೈ: ಟಾಟಾ ಐಪಿಎಲ್-2022 ಟೂರ್ನಿಯ ೪ನೇ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಸೇರ್ಪಡೆಗೊಂಡಿರುವ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಲಿವೆ.

    hardik

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಚೊಚ್ಚಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಶುಭಾರಂಭ ಮಾಡುವ ತವಕದಲ್ಲಿ ಎರಡೂ ತಂಡಗಳಿವೆ. ಇದನ್ನೂ ಓದಿ: ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪಿ.ವಿ ಸಿಂಧು

    ಉಭಯ ತಂಡಗಳಲ್ಲೂ ಬಲಿಷ್ಠ ಆಟಗಾರರಿದ್ದು, ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ನ್ನು ಮುನ್ನಡೆಸಲಿದ್ದಾರೆ. ಈ ಋತುವಿನ ಟಿ-20 ಸಮರದಲ್ಲಿ ಹೊಸ ತಂಡಗಳಲ್ಲಿ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ. ಐಪಿಎಲ್-೨೦೨೨ರಲ್ಲಿ ಈ ಎರಡೂ ತಂಡಗಳೂ ಯಾವ ರೀತಿ ಎದುರಾಳಿಗಳಿಗೆ ಪೈಪೋಟಿ ನೀಡುತ್ತವೆ ಎಂಬ ಕುತೂಹಲವೂ ಇದೆ.

    KLH

    ಗುಜರಾತ್ ಟೈಟನ್ಸ್ ನಲ್ಲಿ ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಮಾಡ್ಯೂ ವಾಡೆ( ವಿಕೆಟ್ ಕೀಪರ್), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತಿವಾಟಿಯಾ, ವರುಣ್ ಅರೋನ್, ರಷೀದ್ ಖಾನ್, ಮೊಹಮ್ಮದ್ ಶಮಿ, ಲಾಕೀ ಫರ್ಗುಸನ್ ಕಣದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ನಲ್ಲಿ ಕೆ.ಎಲ್.ರಾಹುಲ್ (ನಾಯಕ), ಮನನ್ ವೋರಾ, ಎವಿನ್ ಲೆವಿಸ್, ಮನೀಷ್ ಪಾಂಡೆ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಡಸ್ಲಾಂಟಾ ಚಮೀರಾ, ಅಂಕಿತ್ ರಜಪೂತ್, ಅವೇಶ್ ಖಾನ್, ರವಿ ಬಿಷ್ಣೋಯ್ ಇರಲಿದ್ದಾರೆ. ಇದನ್ನೂ ಓದಿ: ಬಿಗ್ ಹಿಟ್ಟರ್‌ಗಳ ಪಂಚ್ ಹಿಟ್ – ಆರ್​ಸಿಬಿ ವಿರುದ್ಧ ಪಂಜಾಬ್‍ಗೆ ರೋಚಕ ಗೆಲುವು

    ಕನ್ನಡಿಗ ಕೆ.ಎಲ್.ರಾಹುಲ್ ಈವರೆಗೆ 94 ಪಂದ್ಯಗಳಲ್ಲಿ 3,273 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 92 ಪಂದ್ಯಗಳಲ್ಲಿ 1,476 ರನ್ ಗಳಿಸಿದ್ದಾರೆ. ಆಪ್ತಮಿತ್ರರಾಗಿರುವ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಸೆಣಸಲಿದ್ದು, ಗೆಲುವು ಯಾರಿಗೆ ಎಂಬ ಕುತೂಹಲ ನೀಡಿದೆ. ರಾಹುಲ್ ಈಗಾಗಲೇ ಹಲವು ಬಾರಿ ಕಿಂಗ್ಸ್ ಪಂಜಾಬ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ನಲ್ಲಿ ಮಧ್ಯಂತರ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುತ್ತಿದ್ದ ಹಾರ್ದಿಕ್ ಪಾಂಡ್ಯ ನೂತನ ತಂಡದ ಸೇರ್ಪಡೆಯಿಂದ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ತಂಡದ ನಾಯಕನಾಗಿದ್ದು ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ.

     

  • ವಾಂಖೆಡೆ ಮೈದಾನದ ಸಿಬ್ಬಂದಿ, ಅಕ್ಷರ್ ಪಟೇಲ್‍ಗೆ ಕೊರೊನಾ ಪಾಸಿಟಿವ್

    ವಾಂಖೆಡೆ ಮೈದಾನದ ಸಿಬ್ಬಂದಿ, ಅಕ್ಷರ್ ಪಟೇಲ್‍ಗೆ ಕೊರೊನಾ ಪಾಸಿಟಿವ್

    – ಐಪಿಎಲ್ ಪಂದ್ಯಗಳ ಕುರಿತು ಭಾರೀ ಚರ್ಚೆ

    ಮುಂಬೈ: ಇನ್ನೇನೂ ಕೆಲವೇ ದಿನಗಳಲ್ಲಿ ಕ್ರಿಕೆಟ್ ರಸದೌತಣ ನೀಡುವ ಐಪಿಎಲ್ ಪ್ರಾರಂಭವಾಗುತ್ತಿದೆ. ಆದರೆ ಇದೀಗ ಪ್ರಾರಂಭಕ್ಕೂ ಮೊದಲೇ ಪಂದ್ಯಾಟ ನಡೆಯುವ ಮೈದಾನದ ಸಿಬ್ಬಂದಿಗೆ ಮತ್ತು ಡೆಲ್ಲಿ ತಂಡದ ಆಟಗಾರ ಅಕ್ಷರ್ ಪಟೇಲ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಹಾಗಾಗಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯಾಟಗಳು ನಡೆಯುವುದು ಅನುಮಾನವಾಗಿದೆ.

    ವಾಂಖೆಡೆ ಮೈದಾನದ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ಒಬ್ಬರಲ್ಲಿ ಕೊರೊನಾ ದೃಢಪಟ್ಟಿದೆ. ಇದರಿಂದಾಗಿ ಇದೀಗ ಉಳಿದ ಸಿಬ್ಬಂದಿಗಳಲ್ಲಿ ಭಯದ ವಾತಾವರಣ ಮೂಡಿದೆ. ವಾಂಖೆಡೆ ಮೈದಾನದಲ್ಲಿ ಎಪ್ರಿಲ್ 10 ರಿಂದ ಐಪಿಎಲ್ ಪಂದ್ಯಾಟಗಳು ಆರಂಭಗೊಳ್ಳಲಿದೆ ಆದರೆ ಇದೀಗ ಅಲ್ಲಿನ ಮೈದಾನದ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿರುವುದರಿಂದಾಗಿ ಪಂದ್ಯಾಟಗಳು ನಡೆಸಲು ಆ ಮೈದಾನ ಎಷ್ಟು ಸುರಕ್ಷಿತಾ ಎಂದು ಕ್ರಿಕೆಟ್ ಪ್ರಿಯರು ಪ್ರಶ್ನೆ ಎತ್ತಿದ್ದಾರೆ.

    ಡೆಲ್ಲಿ ತಂಡದ ಆಟಗಾರ ಅಕ್ಷರ್ ಪಟೇಲ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಪಟೇಲ್ ಡೆಲ್ಲಿ ತಂಡದೊಂದಿಗೆ ಮುಂಬೈನ ಹೊಟೇಲ್ ಒಂದರಲ್ಲಿ ತಂಗಿದ್ದರು ಇದೀಗ ಅವರನ್ನು ಹೊಟೇಲ್‍ನಲ್ಲೇ ಐಸೋಲೇಶನ್‍ಗೆ ಒಳಪಡಿಸಲಾಗಿದೆ.

    ವಾಂಖೆಡೆಯಲ್ಲಿ 14ನೇ ಆವೃತ್ತಿಯ ಒಟ್ಟು 10 ಪಂದ್ಯಗಳು ಈಗಾಗಲೇ ನಿಗದಿಯಾಗಿದ್ದು ಮೊದಲ ಪಂದ್ಯ ಎಪ್ರಿಲ್ 10 ರಂದು ಚೆನ್ನೈ ಮತ್ತು ಡೆಲ್ಲಿ ನಡುವೆ ನಡೆಯಲಿದೆ. ಆದರೆ ಇದೀಗ ಐಪಿಎಲ್ ಪ್ರಾರಂಭಕ್ಕೂ ಮೊದಲೇ ವಿಘ್ನ ಪ್ರಾರಂಭವಾಗಿದೆ.

    ಕಳೆದ ಬಾರಿಯು ಕೊರೊನಾ ಕಾರಣದಿಂದಾಗಿ ಟೂರ್ನಿಯನ್ನು ಯುಎಇ ಯಲ್ಲಿ ನಡೆಸಲಾಗಿತ್ತು. ಆದರೆ ಈ ಬಾರಿ ಭಾರತದಲ್ಲೇ ನಡೆಸಲು ಬಿಸಿಸಿಐ ತೀರ್ಮಾನಿಸಿ ಐಪಿಎಲ್ ಪಂದ್ಯಾಟಗಳಿಗಾಗಿ ಈಗಾಗಲೇ 6 ನಗರಗಳನ್ನು ಗೊತ್ತುಪಡಿಸಿತ್ತು, ಅದರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣ ಕೂಡ ಒಂದಾಗಿತ್ತು.

    ಈ ಬಾರಿಯ ಐಪಿಎಲ್ ಎಪ್ರಿಲ್ 9 ರಂದು ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಮುಂಬೈ ಹಾಗೂ ಬೆಂಗಳೂರು ತಂಡಗಳು ಸೆಣಸಾಡಲಿವೆ. 14 ನೇ ಆವೃತ್ತಿಯ ಐಪಿಎಲ್ ಪಂದ್ಯಾಟಗಳು ಏಪ್ರಿಲ್ 9 ರಿಂದ ಮೇ 30ರ ವರೆಗೆ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್ ಸೇರಿದಂತೆ 6 ನಗರಗಳಲ್ಲಿ ನಡೆಯಲಿದೆ.