Tag: ವಸ್ತ್ರಸಂಹಿತೆ

  • ಶಿರಸಿ ಮಾರಿಕಾಂಬಾ ದರ್ಶನಕ್ಕೆ ವಸ್ತ್ರಸಂಹಿತೆ ಜಾರಿ

    ಶಿರಸಿ ಮಾರಿಕಾಂಬಾ ದರ್ಶನಕ್ಕೆ ವಸ್ತ್ರಸಂಹಿತೆ ಜಾರಿ

    – ಭಾರತೀಯ ಸಂಸ್ಕೃತಿಯ ಉಡುಗೆ ಧರಿಸಿ ಬರುವಂತೆ ಸೂಚನೆ

    ಕಾರವಾರ: ದಕ್ಷಿಣ ಭಾರತದ ಶಕ್ತಿ ಪೀಠಗಳಲ್ಲಿ ಒಂದಾದ ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿಯ (Sirsi) ಮಾರಿಕಾಂಬ ದೇವಸ್ಥಾನದಲ್ಲಿ ಆಡಳಿತ ಕಮಿಟಿ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ.

    ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಉಡುಗೆಗಳನ್ನು ಧರಿಸಿ ಬರುವಂತೆ ಸೂಚನೆ ನೀಡಲಾಗಿದ್ದು, ಈ ಸಂಬಂಧ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಫಲಕ ಅಳವಡಿಸಲಾಗಿದೆ. ಈ ಹಿಂದೆ ಗೋಕರ್ಣ, ಮಹಾಬಲೇಶ್ವರ ದೇವಸ್ಥಾನದಲ್ಲಿ ಸಹ ವಸ್ತ್ರಸಂಹಿತೆ ಜಾರಿ ಮಾಡಲಾಗಿದ್ದು, ಇದೀಗ ಮಾರಿಕಾಂಬಾ ದೇವಸ್ಥಾನದಲ್ಲಿ ಸಹ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.ಇದನ್ನೂ ಓದಿ: ಮೈಸೂರಿನಿಂದ ದರ್ಭಾಂಗ್‌ಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್, ಗೂಡ್ಸ್ ರೈಲಿಗೆ ಡಿಕ್ಕಿ – ಹೊತ್ತಿ ಉರಿದ ಬೋಗಿಗಳು

    ದೇಗುಲಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ದೇವರ ದರ್ಶನ ಪಡೆಯಬೇಕೆಂದು ಮುಜರಾಯಿ ಇಲಾಖೆ ಆದೇಶ ಮಾಡಿತ್ತು. ಇದರ ಬೆನ್ನಲ್ಲೇ ರಾಜ್ಯದ ವಿವಿಧ ದೇಗುಲಗಳ ಜೊತೆ ಶಿರಸಿಯಲ್ಲಿಯೂ ವಸ್ತ್ರಸಂಹಿತೆ ಕಡ್ಡಾಯ ಮಾಡಲಾಗಿದೆ. ನವರಾತ್ರಿಯ ಸಂದರ್ಭದಲ್ಲಿ ಭಕ್ತರು ಹೆಚ್ಚು ಬರುತಿದ್ದು, ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳನ್ನು ಕಡ್ಡಾಯ ಮಾಡುವ ಉದ್ದೇಶವಿದೆ.

    ಇದಕ್ಕೆ ಸಂಬಂಧಿಸಿದಂತೆ ಶಿರಸಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ್ ಮಾತನಾಡಿದ್ದು, ದೇವಸ್ಥಾನಕ್ಕೆ ಹೋಗುವಾಗ ಸಂಪ್ರದಾಯ ಪಾಲನೆ ಮಾಡಬೇಕೆಂಬ ಉದ್ದೇಶದಿಂದ ಈ ಆದೇಶ ಮಾಡಲಾಗಿದೆ. ಭಕ್ತರ ಸ್ಪಂದನೆ ಕೂಡಾ ಪರಿಗಣಿಸಿ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಎಡಿಜಿಪಿ ಚಂದ್ರಶೇಖರ್‌ ದೂರು – ಎನ್‌ಸಿಆರ್‌ ದಾಖಲು

  • ಇಂಥದ್ದೇ ಡ್ರೆಸ್‌ ಹಾಕೊಳ್ಳಿ, ಬಟ್ಟೆ ಬಿಚ್ಚಾಕ್ಕೊಂಡು ಹೋಗಿ ಹೇಳಲ್ಲ- ದೇಗುಲಗಳಲ್ಲಿನ ಡ್ರೆಸ್‌ ಕೋಡ್‌ಗೆ ಸಿಎಂ ವಿರೋಧ

    ಇಂಥದ್ದೇ ಡ್ರೆಸ್‌ ಹಾಕೊಳ್ಳಿ, ಬಟ್ಟೆ ಬಿಚ್ಚಾಕ್ಕೊಂಡು ಹೋಗಿ ಹೇಳಲ್ಲ- ದೇಗುಲಗಳಲ್ಲಿನ ಡ್ರೆಸ್‌ ಕೋಡ್‌ಗೆ ಸಿಎಂ ವಿರೋಧ

    ಬೆಂಗಳೂರು: ಇತ್ತೀಚೆಗೆ ಹಂಪಿಯಲ್ಲಿ ಡ್ರೆಸ್ ಕೋಡ್ (Dress Code Temple) ಜಾರಿ ಮಾಡಲಾಗಿತ್ತು. ಆದರೆ ಇದೀಗ ದೇಗುಲಗಳಲ್ಲಿ ವಸ್ತ್ರಸಂಹಿತೆ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ವಿವಾದಾತ್ಮಕ ಹೇಳಿಕೆಯೊಂದನ್ನು ಕೂಡ ನೀಡಿದ್ದಾರೆ.

    ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಬಗ್ಗೆ ಹಿರಿಯ ಸಾಹಿತಿ ಮರುಳಸಿದ್ಧಪ್ಪ ಅವರು ಸಿಎಂ ಮುಂದೆಯೇ ಅಕ್ಷೇಪ ವ್ಯಕ್ತಪಡಿಸಿದ್ದರು. ಮೈತುಂಬಾ ಬಟ್ಟೆ ಹಾಕಿಕೊಂಡು ಹೋಗಬೇಕು ನಿಜ. ಹಾಗಂತ‌ ಮಹಿಳೆಯರು ಸೀರೆ, ಪುರುಷರು ಪಂಚೆ ಉಡಬೇಕು ಅನ್ನೋದು ಯಾಕೆ? ಇದು ಪ್ರಜಾಪ್ರಭುತ್ವ ತತ್ವಕ್ಕೆ ಮಾರಕ ಅಂತಾ ಮರುಳ ಸಿದ್ಧಪ್ಪ ಆಕ್ಷೇಪ ಎತ್ತಿದರು.

    ಇದಾದ ಬಳಿಕ ವೇದಿಕೆಯಲ್ಲಿಯೇ ಸ್ಪಷ್ಟೀಕರಣ ನೀಡಿದ ಸಿಎಂ, ನಮ್ಮ ಮುಜರಾಯಿ ಇಲಾಖೆ ಈ ತೀರ್ಮಾನ ಎಲ್ಲಾ ಮಾಡಿಲ್ಲ. ಇಂಥದ್ದೇ ಡ್ರೆಸ್ ಹಾಕಬೇಡಿ ಅಥವಾ ಹಾಕಿ ಅನ್ನೋದು ತಪ್ಪು. ಶರ್ಟ್, ಪ್ಯಾಂಟ್ ಧರಿಸಿಕೊಂಡು ಹೋಗಬೇಡಿ, ಸೀರೆ ಹಾಕ್ಕೊಂಡು ಹೋಗಿ ಅಂತಾ ಹೇಳೋದು ಸರಿಯಲ್ಲ. ನಾವು ಇಂಥದ್ದೇ ಡ್ರೆಸ್ ಹಾಕಿಕೊಳ್ಳಿ ಅಥವಾ ಬಟ್ಟೆ ಬಿಚ್ಚಾಕ್ಕೊಂಡು ಬನ್ನಿ ಅಂತಾ ಹೇಳಲ್ಲ ಎಂದು ಸಿಎಂ ವಿವಾದಾತ್ಮಕ ಹೇಳಿಕೆ ನೀಡಿದರು.

    ಶುದ್ಧ ಮನಸ್ಸಿನಿಂದ ದೇವಸ್ಥಾನಕ್ಕೆ ಹೋಗಬೇಕು, ಶುದ್ಧ ಭಕ್ತಿ ಇಲ್ಲದೇ ಬಟ್ಟೆ ಸರಿಯಾಗಿ ಹಾಕಿಕೊಂಡು ಹೋದರೆ ಏನ್ ಪ್ರಯೋಜನ ಎಂದು ಸಿಎಂ ಇದೇ ವೇಳೆ ಪ್ರಶ್ನೆಯನ್ನು ಹಾಕಿದರು.  ಇದನ್ನೂ ಓದಿ: ವಿಕ್ಷಿತ್ ಭಾರತ್ ಬಜೆಟ್ – ಹಣಕಾಸು ಸಚಿವೆಗೆ ಪ್ರಧಾನಿ ಮೋದಿ ಶ್ಲಾಘನೆ

    ಖಾಸಗಿ ದೇಗುದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತಂದಿದ್ದು ನಿಜ. ಆದರೆ ಸಿದ್ದರಾಮಯ್ಯ ಸರ್ಕಾರದ ಮುಜರಾಯಿ ಇಲಾಖೆ ದೇಗುಲದಲ್ಲಿ ಹಲವೆಡೆ ವಸ್ತ್ರ ಸಂಹಿತೆ ತಂದಿರುವ ನಿರ್ಧಾರಕ್ಕೆ ಖುದ್ದು ಸಿಎಂ ಅವರೇ ವಿರೋಧ ವ್ಯಕ್ತಪಡಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಶಿವಮೊಗ್ಗದ ಕಾಲೇಜಿನಲ್ಲಿ ಬುರ್ಖಾ ವಿವಾದ- ಕೇಸರಿ ಶಾಲು ಧರಿಸಿ ಬರ್ತಿರೋ ವಿದ್ಯಾರ್ಥಿಗಳು

    ಶಿವಮೊಗ್ಗ: ಮಲೆನಾಡಿನ ಶಿಕ್ಷಣ ಸಂಸ್ಥೆಗಳಿಗೂ ವಸ್ತ್ರಸಂಹಿತೆ ವಿವಾದ ಕಾಲಿಟ್ಟಿದೆ. ಕುವೆಂಪು ವಿವಿಯ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ಬುರ್ಖಾ ವಿವಾದ ಆರಂಭಗೊಂಡಿದೆ.

    ಕಾಲೇಜಿನಲ್ಲಿ ಇದೂವರೆಗೂ ಸಮವಸ್ತ್ರ ಕಡ್ಡಾಯವಾಗಿತ್ತು. ಆದರೆ ಕೆಲವರು ಶಾಲಾ ಕೊಠಡಿಯೊಳಗೆ ಬುರ್ಖಾ ಧರಿಸಿ ಬರುತ್ತಿದ್ದರು. ಇದನ್ನು ಖಂಡಿಸಿ ಗುರುವಾರದಂದು ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಸಂಜೆ ವೇಳೆ ವಿವಿ ಕುಲಸಚಿವ ಭೋಜಾನಾಯ್ಕ ಪತ್ರಿಕಾ ಹೇಳಿಕೆ ನೀಡಿ, ಕ್ಯಾಂಪಸ್ ನಲ್ಲಿ ಸಮವಸ್ತ್ರ ಕಡ್ಡಾಯವಿಲ್ಲ. ಆದರೆ, ಐಡಿ ಕಾರ್ಡ್ ಕಡ್ಡಾಯ ಎಂದು ತಿಳಿಸಿದ್ದರು. ಇದು ವಿದ್ಯಾರ್ಥಿಗಳ ಇನ್ನಷ್ಟು ಕೆರಳಿಸಿದೆ.

    ಸಾವಿರಾರು ರೂ. ವೆಚ್ಚ ಮಾಡಿ ಸಮವಸ್ತ್ರ ಕೊಂಡಿದ್ದೇವೆ. ಈಗ ಸಮವಸ್ತ್ರ ಕಡ್ಡಾಯವಿಲ್ಲ ಎನ್ನುತ್ತಿದ್ದಾರೆ. ಕ್ಯಾಂಪಸ್ ನಲ್ಲಿ ಬುರ್ಖಾ ನಿಷೇಧಿಸುವ ಬದಲು ಸಮವಸ್ತ್ರವನ್ನೇ ರದ್ದು ಮಾಡಿದ್ದಾರೆ. ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

    ಇಂದು ಕೂಡ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತಿದ್ದಾರೆ. ಕಾಲೇಜು ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.