Tag: ವಸ್ತು ಸಂಗ್ರಹಾಲಯ

  • ರಾಮ ಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ವಿಶೇಷ ಗೌರವ – ಟ್ರಸ್ಟ್ ಚಿಂತನೆ ಏನು?

    ರಾಮ ಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ವಿಶೇಷ ಗೌರವ – ಟ್ರಸ್ಟ್ ಚಿಂತನೆ ಏನು?

    ಲಕ್ನೋ: ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರ (Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಜನವರಿಯಲ್ಲಿ ದೇವಸ್ಥಾನದ ಉದ್ಘಾಟನೆಯಾಗಲಿದೆ. ರಾಮ ಮಂದಿರದ ಉದ್ಘಾಟನೆ ಜೊತೆಗೆ ರಾಮ ಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಚಿಂತಿಸಿದೆ.

    ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಸಭೆಯಲ್ಲಿ ಹುತಾತ್ಮ ಹೋರಾಟಗಾರರ ಪ್ರತಿಮೆಗಳು, ಸ್ಮಾರಕಗಳ ಸ್ಥಾಪನೆ, ರಸ್ತೆ, ಬೀದಿಗಳು ಮತ್ತು ಕಟ್ಟಡಗಳಿಗೆ ಅವರ ಹೆಸರಿಸಿಡುವುದು ಅಂತಿಮವಾಗಿ, ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಉದ್ದೇಶಿತ ರಾಮ್ ಮ್ಯೂಸಿಯಂನಲ್ಲಿ (Museum) ಸ್ಥಾನ ನೀಡುವ ಮೂಲಕ ಅಂತಹ ಎಲ್ಲ ಹುತಾತ್ಮರನ್ನು ಗೌರವಿಸುವ ಬಗ್ಗೆ ಸಮಾಲೋಚನೆ ನಡೆದಿದೆ. ರಾಮಮಂದಿರ ಆಂದೋಲನದಲ್ಲಿ ಪ್ರಾಣ ತ್ಯಾಗ ಮಾಡಿದ ರಾಮನ ಭಕ್ತರಿಗೆ ಗೌರವಧನ ನೀಡಬೇಕು ಎನ್ನುವ ಮನವಿಯನ್ನು ಟ್ರಸ್ಟ್ ಸಭೆಯಲ್ಲಿ ಗಂಭೀರವಾಗಿ ಪರಿಗಣಿಸಿದೆ.

    ಹುತಾತ್ಮ ರಾಮಭಕ್ತರ ಪ್ರತಿಮೆ ಸ್ಥಾಪನೆ ಒಮ್ಮತ ಮೂಡಿ ಬಂದಿಲ್ಲ ಎಂದು ಮೂಲಗಳು ಹೇಳಿವೆ. ದೇವಾಲಯದ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ರಾಮಭಕ್ತರ ನಿಖರ ಸಂಖ್ಯೆ ತಿಳಿದಿಲ್ಲ. ಸುಮಾರು 500 ವರ್ಷಗಳ ಕಾಲ ನಡೆದ ರಾಮಮಂದಿರ ಆಂದೋಲನದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ. 1990ರ ದಶಕದ ಚಳುವಳಿಗೂ ಮುಂಚಿನ ಚಳುವಳಿಗಳಲ್ಲಿ ಪ್ರಾಣ ಕಳೆದುಕೊಂಡ ರಾಮಭಕ್ತರ ಬಗ್ಗೆ ನಿಖರವಾದ ಮಾಹಿತಿಯನ್ನು ಕಂಡುಹಿಡಿಯುವುದು ಕಷ್ಟಕರವಾಗಿರುತ್ತದೆ. ಹುತಾತ್ಮರ ಸಂಖ್ಯೆಯು ತುಂಬಾ ಹೆಚ್ಚಿರುವ ಕಾರಣ ಎಲ್ಲರ ವಿಗ್ರಹಗಳನ್ನು ಮಾಡಲು ಸಾಧ್ಯವಾಗದಿರಬಹುದು. ಈ ಕಾರಣದಿಂದಲೇ ಪ್ರಾಣ ಕಳೆದುಕೊಂಡ ರಾಮಭಕ್ತರಿಗೆ ಪ್ರತ್ಯೇಕ ಮೂರ್ತಿಗಳನ್ನು ನಿರ್ಮಿಸುವ ಆಲೋಚನೆ ಸೂಕ್ತವಾಗಿಲ್ಲ ಎಂದು ನಿರ್ಧರಿಸಲಾಗಿದೆ. ಇದನ್ನೂ ಓದಿ: Himachal Pradesh Rain: ರಣಭೀಕರ ಮಳೆಗೆ 74 ಮಂದಿ ಸಾವು – 10 ಸಾವಿರ ಕೋಟಿ ನಷ್ಟ!

    ಚಳವಳಿಯಲ್ಲಿ ಕೊಲ್ಲಲ್ಪಟ್ಟವರ ಬಗ್ಗೆ ಸಂಪೂರ್ಣವಾಗಿ ನಿಖರವಾದ ಮಾಹಿತಿ ಇರುವ ಕಾರಣ ಅವರಿಗೆ ರಾಮ ಮಂದಿರ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ನೀಡಬಹುದು. ಬೆಳಕು ಮತ್ತು ಧ್ವನಿ ಪ್ರದರ್ಶನ ಮತ್ತು ಚಲನಚಿತ್ರ ಪ್ರದರ್ಶನದ ಮೂಲಕ ಹುತಾತ್ಮ ರಾಮಭಕ್ತರ ಪಾತ್ರವನ್ನು ನೆನಪಿಸಿಕೊಳ್ಳಬಹುದು ಮತ್ತು ಗೌರವಿಸಬಹುದು ಎನ್ನುವ ಅಭಿಪ್ರಾಯಕ್ಕೆ ಸಹಮತ ವ್ಯಕ್ತವಾಗಿದೆ. ಇದನ್ನೂ ಓದಿ: `ಕೈ’ ಹಿಡಿಯಲು ಮುಂದಾದ್ರಾ BJP ಶಾಸಕ – ರಾತ್ರಿ ರಹಸ್ಯ ಸಭೆ ಬಳಿಕ ಶಿವರಾಮ್‌ ಹೆಬ್ಬಾರ್ ಹೇಳಿದ್ದೇನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Karnataka Budget 2023: ಡಾ.ರಾಜ್ ಸ್ಮಾರಕದ ಬಳಿ ಸಿನಿ ವಸ್ತು ಸಂಗ್ರಹಾಲಯ

    Karnataka Budget 2023: ಡಾ.ರಾಜ್ ಸ್ಮಾರಕದ ಬಳಿ ಸಿನಿ ವಸ್ತು ಸಂಗ್ರಹಾಲಯ

    ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ (Karnataka Budget 2023) ಮಂಡನೆ ಮಾಡಿದ್ದು, ಹಲವು ವರ್ಷಗಳ ಒಂದು ಬೇಡಿಕೆಯನ್ನು ಈಡೇರಿಸಿದ್ದಾರೆ. ಚಿತ್ರಂಗದ ಇತಿಹಾಸವನ್ನು ಸಾರುವಂತಹ ವಸ್ತು ಸಂಗ್ರಹಾಲಯ (Museum) ಬೇಕು ಎನ್ನುವುದು ಸಿನಿ ಇತಿಹಾಸಕಾರರ ಆಗ್ರಹವಾಗಿತ್ತು. ಅದನ್ನು ಈ ಬಾರಿಯ ಬಜೆಟ್ ನಲ್ಲಿ ಈಡೇರಿಸಿದ್ದಾರೆ.

    ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲಿರುವ ಡಾ.ರಾಜ್ ಕುಮಾರ್ ಸ್ಮಾರಕದ (Dr. Raj Kumar) ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯವನ್ನು ನಿರ್ಮಿಸುವುದಾಗಿ ಈ ಬಾರಿಯ ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಮೂಲಕ ಚಿತ್ರರಂಗದ ಬೆಳವಣಿಗೆ ಇತಿಹಾಸ ಪರಿಚಯಿಸಲು ಮುಂದಾಗಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್ ಭೇಟಿಗಾಗಿ ಮಲೇಷ್ಯಾಗೆ ಹೊರಟು ನಿಂತ ರಾಕಿಭಾಯ್ ಯಶ್

     

    ಡಾ.ರಾಜ್ ಕುಮಾರ್ ಸ್ಮಾರಕದ ಬಳಿ ವಸ್ತು ಸಂಗ್ರಹಾಲಯದ ಜೊತೆಗೆ ಸುಸಜ್ಜಿತದ ಥಿಯೇಟರ್ ನಿರ್ಮಾಣವಾಗಬೇಕು ಎನ್ನುವುದು ಹಲವರ ಕೋರಿಕೆಯಾಗಿತ್ತು. ಜೊತೆಗೆ ಡಾ.ರಾಜ್ ಕುಮಾರ್ ಅವರ ಕುರಿತಾಗಿಯೇ ವಸ್ತು ಸಂಗ್ರಹಾಲಯ ಇರಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಸಮಗ್ರ ಚಿತ್ರರಂಗವನ್ನು ಒಳಗೊಳ್ಳುವಂತಹ ಸಂಗ್ರಹಾಲಯಕ್ಕೆ ಸಿದ್ದರಾಮಯ್ಯ ಸರಕಾರ ಅಸ್ತು ಎಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ಶೈಲಿಯಲ್ಲಿ ಹೈದ್ರಾಬಾದ್ ಮ್ಯೂಸಿಯಂನಿಂದಲೇ 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ದರೋಡೆ!

    ಸಿನಿಮಾ ಶೈಲಿಯಲ್ಲಿ ಹೈದ್ರಾಬಾದ್ ಮ್ಯೂಸಿಯಂನಿಂದಲೇ 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ದರೋಡೆ!

    ಹೈದರಾಬಾದ್: ತೆಲಂಗಾಣದ ರಾಜಧಾನಿಯಲ್ಲಿರುವ ಪ್ರಸಿದ್ಧ ನಿಜಾಮ್ ಮ್ಯೂಸಿಯಂ ಸಂಗ್ರಹಾಲಯದಲ್ಲಿ ಸಿನಿಮೀಯಾ ಶೈಲಿಯಲ್ಲಿ ಕಳ್ಳರು 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳನ್ನು ಎಗರಿಸಿದ್ದಾರೆ.

    ದೇಶದಲ್ಲೇ ಪ್ರಸಿದ್ಧ ಹಾಗೂ ಅತಿ ಭದ್ರತೆ ಹೊಂದಿರುವ ನಿಜಾಮಾ ಮ್ಯೂಸಿಯಂನಲ್ಲಿ ಎರಡು ದಶಕಗಳಿಗೂ ಹಳೆಯದಾದ 2 ಕೆಜಿ ತೂಕದ ಚಿನ್ನದ ಟಿಫಿನ್ ಬಾಕ್ಸ್, ಟೀ ಕಪ್, ಸಾಸರ್ ಹಾಗೂ ಸ್ಪೂನ್‍ಗಳನ್ನು ಕಳ್ಳರು ಸಿನಿಮಾ ಶೈಲಿಯಲ್ಲಿ ಎಗರಸಿ ಪರಾರಿಯಾಗಿದ್ದಾರೆ.

    ಕಳ್ಳತನವಾಗಿದ್ದು ಹೇಗೆ?
    ದರೋಡೆಕೋರರು ಭಾನುವಾರ ತಡರಾತ್ರಿ ಮೊದಲನೇ ಮಹಡಿಯಲ್ಲಿರುವ ಕಬ್ಬಿಣದ ಸರಳು ಮತ್ತು ವೆಂಟಿಲೇಟರ್ ಗಳನ್ನು ಮುರಿದು ಹಗ್ಗದ ಮೂಲಕ ಟಿಫಿನ್ ಬಾಕ್ಸ್ ಇರುವ ಕೊಠಡಿಗೆ ಬಂದಿದ್ದಾರೆ. ಮಾಣಿಕ್ಯ, ವಜ್ರ ಮತ್ತು ಪಚ್ಚೆಗಳಿಂದ ಅಲಂಕರಿಸಲಾಗಿದ್ದ ಟಿಫಿನ್ ಬಾಕ್ಸ್ ಸೇರಿದಂತೆ ಇತರೆ ಚಿನ್ನದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಸೋಮವಾರ ಎಂದಿನಂತೆ ಕೊಠಡಿಯನ್ನು ಪರೀಕ್ಷಿಸಿದ ಸೆಕ್ಯೂರಿಟಿ ಸಿಬ್ಬಂದಿಗಳು ಕಳ್ಳತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ಮೀರ್ ಚೌಕ್ ಪೊಲೀಸ್ ಠಾಣಾ ಅಧಿಕಾರಿಗಳು ಆಗಮಿಸಿದ್ದಾರೆ. ಈ ವೇಳೆ ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ, ಸಿಸಿಟಿವಿಯ ದೃಶ್ಯಾವಳಿಗಳನ್ನು ಪರೀಕ್ಷಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಸಂಗ್ರಾಹಲಯದ ಸಿಬ್ಬಂದಿಗಳೇ ಕಳ್ಳತನದಲ್ಲಿ ಭಾಗಿಯಾಗಿರುವುದರ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಹೈದರಾಬಾದಿನ ಕೊನೆಯ ನಿಜಾಮ 7 ನೇ ಮೀರ್ ಒಸ್ಮಾನ್ ಅಲಿ ಖಾನ್ ಅಸಫ್ ಜಾ 1936 ರಲ್ಲಿ ತನ್ನ ಬೆಳ್ಳಿ ಮಹೋತ್ಸವದ ಜ್ಞಾಪಕಾರ್ಥವಾಗಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದ್ದನು. ಈ ಮ್ಯೂಸಿಯಂನಲ್ಲಿ ಹೈದರಾಬಾದಿನ ನಿಜಾಮರಿಗೆ ಸೇರಿದ ಪ್ರಮುಖ ಕಾಣಿಕೆಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=dN3WLhctcCE