Tag: ವಸ್ತು ಪ್ರದರ್ಶನ

  • ಮೈಸೂರಿನಲ್ಲಿ ಶಾಶ್ವತ ವಸ್ತು ಪ್ರದರ್ಶನಕ್ಕೆ ಚಿಂತನೆ: ಸಿಎಂ

    ಮೈಸೂರಿನಲ್ಲಿ ಶಾಶ್ವತ ವಸ್ತು ಪ್ರದರ್ಶನಕ್ಕೆ ಚಿಂತನೆ: ಸಿಎಂ

    ಮೈಸೂರು: ವಸ್ತು ಪ್ರದರ್ಶನ ಮೈದಾನವನ್ನು ವರ್ಷವಿಡೀ ಉಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಶಾಶ್ವತ ವಸ್ತುಪ್ರದರ್ಶನ ಆಯೋಜಿಸುವ ಬಗ್ಗೆ ಯೋಜನೆ ರೂಪಿಸಲಾಗುವುದೆಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಪ್ರವಾಸೋದ್ಯಮ ಸರ್ಕಿಟ್ ರೂಪಿಸಲು ಸಮಗ್ರ ಚಿಂತನೆ ನಡೆಸಿ ನಿರ್ಣಯವನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು. ಉತ್ತಮ ರೀತಿಯಲ್ಲಿ ದಸರಾ ನಡೆಸಿಕೊಟ್ಟ ಮೈಸೂರಿನ ಜನತೆಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು. ಮುಂಬರುವ ವರ್ಷಗಳಲ್ಲಿ ಪರಿಸ್ಥಿತಿ ಉತ್ತಮಗೊಂಡರೆ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಸಾಂಪ್ರದಾಯಿಕ ಆಚರಣೆಗೆ ಬ್ರೇಕ್ ಹಾಕಿ ಪೀಠಾರೋಹಣ ಮಾಡಿದ ಮುರುಘಾ ಶರಣರು

    ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆ ಸಂಬಂಧ ನಾಲ್ಕು ದಿನಗಳ ಪ್ರಚಾರಕ್ಕೆ ತೆರಳುವುದಾಗಿ ತಿಳಿಸಿದ ಅವರು, ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

  • ನೆಲಮಂಗಲಕ್ಕೆ ಬಂದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

    ನೆಲಮಂಗಲಕ್ಕೆ ಬಂದ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ

    ನೆಲಮಂಗಲ: ದಕ್ಷಿಣ ಏಷ್ಯಾ ಹಾಗೂ ದಕ್ಷಿಣ ಭಾರತದ ಅತೀ ದೊಡ್ಡ ಕಟ್ಟಡ ನಿರ್ಮಾಣ ಹಾಗೂ ಯಂತ್ರೋಪಕರಣಗಳ ವಸ್ತು ಪ್ರದರ್ಶನಕ್ಕೆ ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಇಂದು ಭೇಟಿ ನೀಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದಾವಾರ ಬಳಿಯ ಬಿಐಇಸಿಯಲ್ಲಿ ಕ್ರಿಕೆಟಿಗ ಎಂ.ಎಸ್ ಧೋನಿ ಇಂದು ಉದ್ಯಮಶೀಲತೆ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ. ಎಕ್ಸಾನ್ 10 ನೇ ಆವೃತ್ತಿಯ ವಸ್ತು ಪ್ರದರ್ಶನ ಇದ್ದಾಗಿದ್ದು, ಐದು ದಿನಗಳ ಕಾಲ ನಡೆದ ವಸ್ತು ಪ್ರದರ್ಶನಕ್ಕೆ ನಾಳೆ ತೆರೆಬೀಳಲಿದೆ.

    ಈ ಹಿನ್ನೆಲೆಯಲ್ಲಿ ಇಂದು ಆಗಮಿಸಿದ್ದ ಮಹೇಂದ್ರ ಸಿಂಗ್ ಧೋನಿ ಹಲವಾರು ಮಾಹಿತಿ ಪಡೆದರು. ವಸ್ತು ಪ್ರದರ್ಶನದಲ್ಲಿ ಉದ್ಯಮಿಗಳ ಹಾಗೂ ಗ್ರಾಹಕರ ಜೊತೆ ಭಾಗಿಯಾಗಿದ್ದ ಧೋನಿ, ಗಲ್ಫ್ ಕಂಪನಿಯಲ್ಲಿ ಕೆಲಹೊತ್ತು ಕಾಲ ಕಳೆದಿದ್ದಾರೆ. ತನ್ನ ನೆಚ್ಚಿನ ಕ್ರಿಕೆಟಿಗ ಧೋನಿಯನ್ನು ನೋಡಲು ಅಭಿಮಾನಿಗಳ ಮುಗಿಬಿದ್ದ ಪ್ರಸಂಗ ನಡೆಯಿತು.