Tag: ವಸೂಲಿ

  • ಬಿಗ್ ಬಾಸ್ ಹೆಸರಿನಲ್ಲಿ ಹಣ ವಸೂಲಿಗೆ ಇಳಿದ್ರಾ? ಚಾನೆಲ್ ಹೇಳುವುದೇನು?

    ಬಿಗ್ ಬಾಸ್ ಹೆಸರಿನಲ್ಲಿ ಹಣ ವಸೂಲಿಗೆ ಇಳಿದ್ರಾ? ಚಾನೆಲ್ ಹೇಳುವುದೇನು?

    ನ್ನಡ ಕಲರ್ಸ್ ವಾಹಿನಿಯ ಅತ್ಯಂತ ದುಬಾರಿ ಶೋ ಬಿಗ್ ಬಾಸ್ ಮುಂದಿನ ತಿಂಗಳಿಂದ ಶುರುವಾಗಲಿದೆ ಎನ್ನುವ ಮಾಹಿತಿ ಇದೆ. ಈಗಾಗಲೇ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಲವು ಕೆಲಸಗಳು ನಡೆಯುತ್ತಿವೆ. ಬಿಗ್ ಬಾಸ್ ಮನೆ ರೆಡಿ ಆಗುತ್ತಿರುವ ಕುರಿತು ವಾಹಿನಿಯ ಮುಖ್ಯಸ್ಥರೆ ಈಗಾಗಲೇ ತಿಳಿಸಿದ್ದಾರೆ. ಅಲ್ಲದೇ, ಮೊನ್ನೆಯಷ್ಟೇ ಕಿಚ್ಚ ಸುದೀಪ್ ಅವರ ಪ್ರೊಮೋಗಳನ್ನು ಚಿತ್ರೀಕರಣ ಮಾಡಲಾಗಿದೆ. ಈ ನಡುವೆ ಬಿಗ್ ಬಾಸ್ ಆಯ್ಕೆಯ ಹೆಸರಿನಲ್ಲಿ ವಸೂಲಿಗೆ ಇಳಿದಿದ್ದಾರಾ ಎನ್ನುವ ಅನುಮಾನ ಹುಟ್ಟಿದೆ.

    ಈ ಕುರಿತು ವಾಹಿನಿಯೇ ಒಂದಷ್ಟು ಪೋಸ್ಟರ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಬಿಗ್ ಬಾಸ್ ಶೋ ಸ್ಪರ್ಧಿಗಳು ನೇರವಾಗಿ ಆಯ್ಕೆ ಆಗುವುದರಿಂದ ಮತ್ತು ಅವರನ್ನು ವಾಹಿನಿಯೇ ಆಯ್ಕೆ ಮಾಡುವುದರಿಂದ ಈ ವಿಷಯದಲ್ಲಿ ಯಾರಾದರೂ ದುಡ್ಡು ಕೇಳಿದರೆ ದೂರು ಕೊಡಿ ಎಂದು ಹೇಳಿದೆ. ಕೆಲವರು ಬಿಗ್ ಬಾಸ್ ಹೆಸರಿನಲ್ಲಿ ವಸೂಲಿಗೆ ಇಳಿದಿರುವ ಕುರಿತು ಮಾಹಿತಿಯು ವಾಹಿನಿಗೆ ಬಂದಿದ್ದರಿಂದ, ಇಂಥದ್ದೊಂದು ಪೋಸ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

    ಬಿಗ್ ಬಾಸ್ ಮನೆಗೆ ಹೋಗಲು ತರಬೇತಿ, ಇನ್ಫ್ಯೂಲೆನ್ಸ್ ಹೆಸರಿನಲ್ಲಿ ಕೆಲವರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಹಿತಿಯು ವಾಹಿನಿಗೆ ಸಿಕ್ಕಿದೆ ಅಂತೆ. ಹಾಗಾಗಿ ಯಾರೂ ದುಡ್ಡು ಕೊಡಬೇಡಿ, ಮೋಸ ಹೋಗಬೇಡಿ ಎಂದು ವಾಹಿನಿಯು ಎಚ್ಚರಿಸಿದೆ. ಹಾಗೇನಾದರೂ ದುಡ್ಡು ಕಳೆದುಕೊಂಡರೆ ವಾಹಿನಿಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಟಿಕೆಟ್ ರಹಿತ ಪ್ರಯಾಣ – ನೈರುತ್ಯ ರೈಲ್ವೆ ವಲಯದಿಂದ 5.55 ಕೋಟಿ ದಂಡ ವಸೂಲಿ!

    ಟಿಕೆಟ್ ರಹಿತ ಪ್ರಯಾಣ – ನೈರುತ್ಯ ರೈಲ್ವೆ ವಲಯದಿಂದ 5.55 ಕೋಟಿ ದಂಡ ವಸೂಲಿ!

    ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 3 ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಬರೋಬ್ಬರಿ 5.55 ಕೋಟಿ ದಂಡ ವಸೂಲಿ ಮಾಡಲಾಗಿದೆ.

    ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 1,16,521 ಜನ ಟಿಕೆಟ್ ರಹಿತ ಪ್ರಯಾಣಿಕರನ್ನು ಹಿಡಿಯಲಾಗಿದೆ. ಇವರಿಂದ 5.52 ಕೋಟಿ ದಂಡ ವಸೂಲಿ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2435 ಪ್ರಕರಣಗಳನ್ನು ದಾಖಲಿಸಿ 13.74 ಲಕ್ಷ ದಂಡ ವಸೂಲಿ ಮಾಡಲಾಗಿತ್ತು. ಟಿಕೆಟ್ ತಪಾಸಣಾ ಸಿಬ್ಬಂದಿ ಕಾರ್ಯ ನಿರ್ವಹಣೆ ಈ ಸಲ ಪ್ರಶಂಸನೀಯವಾಗಿದೆ ಎಂದು ವಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    ಹುಬ್ಬಳ್ಳಿ ವಿಭಾಗದಲ್ಲಿ 3ತಿಂಗಳಲ್ಲಿ 20457 ಪ್ರಕರಣ ದಾಖಲಿಸಿ 89.57 ಲಕ್ಷ, ಬೆಂಗಳೂರು ವಿಭಾಗದಲ್ಲಿ 61502 ಪ್ರಕರಣಗಳನ್ನು ದಾಖಲಿಸಿ 316.05 ಲಕ್ಷ ಅಂದರೆ 3.16 ಕೋಟಿ, 24659 ಪ್ರಕರಣ ದಾಖಲಿಸಿ 1.03 ಕೋಟಿ, ಸ್ಕಾuಟಿಜeಜಿiಟಿeಜಡ್ ತಂಡವೂ 9903 ಪ್ರಕರಣ ದಾಖಲಿಸಿ 43.33 ಲಕ್ಷ ರೂ. ಸೇರಿದಂತೆ ಒಟ್ಟು 1,16521 ಪ್ರಕರಣ ದಾಖಲಿಸಿದೆ. ಇದರಿಂದ ಒಟ್ಟು 552.27 ಲಕ್ಷ ಅಂದರೆ 5.52 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!

  • 2 ಗಂಟೆಗಳಲ್ಲಿ ಖಾಸಗಿ ಕಂಪನಿಯಿಂದ 75,88,650 ದಂಡ ವಸೂಲಿ ಮಾಡಿದ ಕೊಪ್ಪಳ ಜಿಲ್ಲಾಡಳಿತ!

    2 ಗಂಟೆಗಳಲ್ಲಿ ಖಾಸಗಿ ಕಂಪನಿಯಿಂದ 75,88,650 ದಂಡ ವಸೂಲಿ ಮಾಡಿದ ಕೊಪ್ಪಳ ಜಿಲ್ಲಾಡಳಿತ!

    ಕೊಪ್ಪಳ: ಕೇವಲ ಎರಡು ಗಂಟೆಗಳಲ್ಲಿ ಖಾಸಗಿ ಕಂಪನಿಯಿಂದ 75,88,650 ರೂಪಾಯಿಗಳ ದಂಡ ವಸೂಲಿ ಮಾಡುವಲ್ಲಿ ಕೊಪ್ಪಳ ಜಿಲ್ಲಾಡಳಿತ ಯಶಸ್ವಿಯಾಗಿದೆ.

    ಜಿಲ್ಲೆಯ ಕುಷ್ಟಗಿ ಬಳಿ ಹಾದು ಹೋಗಿದ್ದ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿಗೆ ಅಕ್ರಮವಾಗಿ ಬಳಸಿಕೊಂಡು ರಾಜಧನ ಪಾವತಿಸದೇ ಕಾಮಗಾರಿ ಪೂರ್ಣಗೊಳಿಸಿದ್ದಕ್ಕೆ ರೈತ ಸಂಘಟನೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ದೂರು ನಿಡಿದ್ದವು. ಈ ಹಿನ್ನಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ನವದೆಹಲಿ ಮೂಲದ ಓರಿಯಂಟಲ್ ಸ್ಟ್ರಕ್ಚರಲ್ ಎಂಜಿನಿಯರಿಂಗ್ ಪ್ರೈ.ಲೀ ಕಂಪನಿಯಿಂದ ದಂಡ ವಸೂಲಿಗೆ ಆದೇಶಿಸಿತ್ತು. ಆದರೆ ದಂಡ ವಸೂಲಿ ಕಾರ್ಯ ಇಲ್ಲಿಯವರೆಗೂ ವಿಳಂಬವಾಗಿತ್ತು.

    ನಿನ್ನೆ ಜಿಲ್ಲಾಧಿಕಾರಿ ಸುರಳ್ಕರ ವಿಕಾಸ ಕಿಶೋರ್ ಅವರ ಖಡಕ್ ಆದೇಶ ಹಾಗೂ ಉಪವಿಭಾಗ ಅಧಿಕಾರಿ ನಾರಾಯಣ ರೆಡ್ಡಿ ಕನಕ ರೆಡ್ಡಿ ಅವರ ನೇತೃತ್ವದ ಅಧಿಕಾರಿಗಳ ತಂಡ ಖಾಸಗಿ ಕಂಪನಿಯ ವಣಗೇರಿ ಹಾಗೂ ಹಿಟ್ನಾಳ ಬಳಿಯ ಹೆದ್ದಾರಿ ಟೋಲ್ ಬಂದ್ ಮಾಡಿದ ಹಿನ್ನೆಲೆಯಲ್ಲಿ ಕಂಪನಿಯು ಎರಡು ಗಂಟೆಗಳಲ್ಲಿಯೇ 75,88,650 ರೂಪಾಯಿಗಳನ್ನು ಸ್ಥಳದಲ್ಲಿಯೇ ಚೆಕ್ ನೀಡುವ ಮೂಲಕ 7 ವರ್ಷದ ಹಳೆ ಪ್ರಕರಣಕ್ಕೆ ಕೇವಲ ಎರಡು ಗಂಟೆಗಳಲ್ಲಿ ಇತ್ಯರ್ಥವಾಗಿರುವುದು ವಿಶೇಷವಾಗಿದೆ.

    ಅಧಿಕಾರಿಗಳ ನೇತೃತ್ವದ ತಂಡಕ್ಕೆ ಜಿಲ್ಲೆಯ ಜನರು ಶಬ್ಬಾಸ್ ಹೇಳಿದ್ದಾರೆ. ಕುಷ್ಟಗಿ ತಹಶೀಲ್ದಾರ್ ಎಂ.ಸಿದ್ಧೇಶ್, ಕೊಪ್ಪಳ ತಹಶೀಲ್ದಾರ್ ಮಜ್ಜಿಗಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಮುತ್ತಪ್ಪ, ಗಣಿ ವಿಜ್ಞಾನಿಗಳಾದ ದೀಲಿಪ್ ಕುಮಾರ್, ರಾಮಲಿಂಗಪ್ಪ ಮತ್ತು ನವೀನ್ ಕುಮಾರ್, ಕುಷ್ಟಗಿ ಸಿಪಿಐ, ಪಿಎಸ್‍ಐ ಸೇರಿದಂತೆ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕೆ.ಆರ್ ಮಾರ್ಕೆಟ್‍ನಲ್ಲಿ ನಿಲ್ಲುತ್ತಿಲ್ಲ ರೋಲ್ ಕಾಲ್ ದಂಧೆ – ಬಾಲಕನಿಗೆ ಹೆದರಿಸಿ ಬಾಳೆ ದಿಂಡು ಪಡೆದ ಬಿಬಿಎಂಪಿ ಅಧಿಕಾರಿ

    ಕೆ.ಆರ್ ಮಾರ್ಕೆಟ್‍ನಲ್ಲಿ ನಿಲ್ಲುತ್ತಿಲ್ಲ ರೋಲ್ ಕಾಲ್ ದಂಧೆ – ಬಾಲಕನಿಗೆ ಹೆದರಿಸಿ ಬಾಳೆ ದಿಂಡು ಪಡೆದ ಬಿಬಿಎಂಪಿ ಅಧಿಕಾರಿ

    ಬೆಂಗಳೂರು: ಕೆ.ಆರ್ ಮಾರ್ಕೆಟ್‍ನಲ್ಲಿ ಬಡ ವ್ಯಾಪರಸ್ಥರ ಮೇಲೆ ಪಾಲಿಕೆಯ ಅಧಿಕಾರಿಗಳು ಘರ್ಜಿಸುತ್ತಿದ್ದಾರೆ. ಹಾಡಹಗಲೇ ರೋಲ್ ಕಾಲ್ ದಂಧೆಗಿಳಿದು, ಕಾಸು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಕೆ.ಆರ್ ಮಾರ್ಕೆಟ್‍ನ ಮಾಮೂಲು ಜಗತ್ತಿನ ಕರಾಳ ದಂಧೆಯನ್ನ ನಿಮ್ಮ ಪಬ್ಲಿಕ್ ಟಿವಿ ಬಟಾಬಯಲು ಮಾಡುತ್ತಿದೆ.

    ಕೆ.ಆರ್ ಮಾರ್ಕೆಟ್‍ನಲ್ಲಿ ನಡೆಯುವ ಮಾಮೂಲು ವಸೂಲಿ ದಂಧೆಗೆ ವ್ಯಾಪಾರಸ್ಥರು ಹೈರಣಾಗಿದ್ದಾರೆ. ಗಸ್ತು ತಿರುಗುವ ಪೊಲೀಸರು, ಕಸ ಎತ್ತುವ ಬಿಬಿಎಂಪಿಯ ಸಿಬ್ಬಂದಿ, ಅವರ ಮೇಲ್ವಿಚಾರಕರು, ಪುಡಿ ರೌಡಿಗಳು, ಹೀಗೆ ಇಲ್ಲಿ ಎಲ್ಲರೂ ಮಾಮೂಲಿ ವೀರರಾಗಿ ಘರ್ಜಿಸುತ್ತಿದ್ದಾರೆ.

    ತುತ್ತಿನ ಚೀಲ ತುಂಬಿಸಿಕೊಳ್ಳಲು ಅದೆಷ್ಟೋ ವ್ಯಾಪಾರಸ್ಥರು ಕೆ.ಆರ್ ಮಾರ್ಕೆಟ್‍ಗೆ ಬರುತ್ತಾರೆ. ಆದರೆ ಪಾಲಿಕೆಯ ಅಧಿಕಾರಿಗಳು, ಪೊಲೀಸರು ರಾಜಾರೋಷವಾಗಿ ಪ್ರತಿಯೊಬ್ಬ ವ್ಯಾಪಾರಸ್ಥರಿಂದ ದಿನಕ್ಕೆ 10, 20, 50 ರೂ.ಯಂತೆ ಬೆಳಗ್ಗೆಯಿಂದ ಸಂಜೆ ತನಕ 30ಕ್ಕೂ ಹೆಚ್ಚು ಜನರು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡಲ್ಲ ಎಂದರೆ ಅವರ ಮೇಲೆ ಅಟ್ಯಾಕ್ ಮಾಡಿ ಅಂಗಡಿಯನ್ನು ಎತ್ತಿಸುತ್ತಾರೆ. ಅದಕ್ಕಾಗಿಯೇ ಈ ಬಗ್ಗೆ ಧ್ವನಿಯೆತ್ತಲು ವ್ಯಾಪಾರಸ್ಥರು ಹೆದರುತ್ತಾರೆ.

    ಪ್ರತಿನಿತ್ಯ ಈ ಅಧಿಕಾರಿ, ಪುಡಿ ರೌಡಿಗಳಿಂದ ರೋಸಿ ಹೋಗಿದ್ದ ಕೆಲ ವ್ಯಾಪಾರಸ್ಥರು ಪಬ್ಲಿಕ್ ಟಿವಿಯೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಳೆದ ಎರಡು ದಿನದ ಹಿಂದೆ ದಸರಾ ಹಬ್ಬಕ್ಕೆ ಬಾಳೆ ದಿಂಡನ್ನು ಖರೀದಿಸಲು ಬಂದಿದ್ದ ಬಿಬಿಎಂಪಿ ಅಧಿಕಾರಿಯೊಬ್ಬ ಪುಟ್ಟ ವ್ಯಾಪಾರಿ ಬಾಲಕನ ಮೇಲೆ ದರ್ಪ ತೋರಿಸಿದ್ದಾನೆ. ಪುಗ್ಸಟ್ಟೆಯಾಗಿ ಬಾಳೆ ದಿಂಡನ್ನು ಕೇಳಿದ್ದಾನೆ. ಕೊಡಲ್ಲ ಎಂದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ, ದರ್ಪ ಮೆರೆದಿದ್ದಾನೆ.

    ಉತ್ತರ ಕುಮಾರನ ಪೌರುಷ ಒಲೆ ಮುಂದೆ ಅಂತಾರಲ್ಲ. ಹಾಗಾಯ್ತು ಈ ಬಿಬಿಎಂಪಿ ಅಧಿಕಾರಿಯ ದರ್ಪ, ದೌಲತ್ತು. ಊರಿಗೆಲ್ಲಾ ಬುದ್ಧಿ ಹೇಳುವ ಬಿಬಿಎಂಪಿ, ತನ್ನ ಸಿಬ್ಬಂದಿಯೇ ಹಗಲು ದರೋಡೆಗೆ ಇಳಿದಿರುವುದು ಇದು ಬಿಬಿಎಂಪಿಗೆ ನಾಚಿಕೆಗೇಡಿನ ಸಂಗತಿಯೇ ಸರಿ. ಪ್ರತಿನಿತ್ಯ ಅಂದಾಜು ಲೆಕ್ಕದಲ್ಲಿ ಎಷ್ಟು ಹಣವನ್ನು ವಸೂಲಿ ಮಾಡುತ್ತಾರೆ ಎನ್ನುವುದನ್ನು ನೋಡುವುದಾದರೆ,

    (ಒಂದು ದಿನಕ್ಕೆ ವಸೂಲಿಯಾಗುವ ಹಣ) ಅಂದಾಜು ಲೆಕ್ಕದಲ್ಲಿ
    1 ಸಾವಿರ ವ್ಯಾಪಾರಿಗಳಿಂದ ವಸೂಲಿ
    ಒಂದು ದಿನಕ್ಕೆ 30 ರೂ. 30 ಜನರಿಂದ ವಸೂಲಿ ಮಾಡಿದರೂ ಒಂದು ದಿನಕ್ಕೆ 90 ಸಾವಿರ ರೂ.

    ಇದು ಕೇವಲ ಸಣ್ಣಪುಟ್ಟ ವ್ಯಾಪಾರಸ್ಥರಿಂದ ವಸೂಲಿಯಾಗುವ ಹಣ. ದೊಡ್ಡ ದೊಡ್ಡ ಅಂಗಡಿಗಳಲ್ಲಿ 50, 60 ರೂ.ಯಂತೆ ವಸೂಲಿ ಮಾಡುತ್ತಾರೆ. ಇವೆಲ್ಲವನ್ನು ಲೆಕ್ಕಚಾರ ಮಾಡಿದರೆ, ದಿನಕ್ಕೆ ಏನಿಲ್ಲಾ ಅಂದರೂ 2 ಲಕ್ಷ ರೂ. ದಾಟುತ್ತೆ. ತಿಂಗಳಿಗೆ ಮೈ ಬಗ್ಗಿಸದೆ, ಬೆವರು ಸುರಿಸದೇ ಪುಕ್ಕಟ್ಟೆಯಾಗಿ ಅಕ್ರಮವಾಗಿ ಸಂಪಾದಿಸುವ ಹಣವಿದು. ಹಾಡಹಗಲೇ ಈ ವಸೂಲಿ ದಂಧೆ ನಡೆಯುತ್ತಿದ್ದರೂ ನಮ್ಮ ಬೆಂಗಳೂರು ಪೊಲೀಸ್ ಕಮೀಷನರ್ ಕಣ್ಣಿಗೆ ಬಿದ್ದಿಲ್ವಾ ಎಂದು ಬಡ ವ್ಯಾಪಾರಸ್ಥರು ಪ್ರಶ್ನಿಸುತ್ತಿದ್ದಾರೆ.

  • ಠಾಣೆಯೆದುರು ನಡುರಸ್ತೆಯಲ್ಲೇ ಚಾಲಕರಿಂದ ಪೊಲೀಸರು ವಸೂಲಿ!

    ಠಾಣೆಯೆದುರು ನಡುರಸ್ತೆಯಲ್ಲೇ ಚಾಲಕರಿಂದ ಪೊಲೀಸರು ವಸೂಲಿ!

    ರಾಯಚೂರು: ಮಧ್ಯ ರಸ್ತೆಯಲ್ಲಿಯೇ ನಿಂತು ಓಡಾಡುವ ಭಾರದ ವಾಹನಗಳಿಂದ ಪೊಲೀಸರು ಕೈಚಾಚಿ ದುಡ್ಡು ವಸೂಲಿ ಮಾಡುತ್ತಿರೋ ಪ್ರಕರಣವೊಂದು ರಾಯಚೂರಿನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರು ಈ ರೀತಿ ಭ್ರಷ್ಟರಾಗಿದ್ದಾರೆ. ದಿನ ಬೆಳಗಾದರೆ ಸಾಕು ಸ್ಟೇಷನ್ ರಸ್ತೆಯಲ್ಲಿ ಓಡಾಡುವ ಭಾರದ ವಾಹನಗಳಿಂದ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಇನ್ನು ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರಿರುವುದರಿಂದ ರಸ್ತೆ ಕಾಮಗಾರಿ ನಡೆದಿದ್ದು, ವಾಹನ ಸಂಚಾರ ಕಠಿಣವಾಗಿದೆ.

    ಇಂತಹ ಇಕ್ಕಟ್ಟಿನ ರಸ್ತೆಯಲ್ಲಿ ಭಾರದ ವಾಹನಗಳ ಸಂಚಾರವನ್ನ ನಿಲ್ಲಿಸಿ ಮಾರ್ಗ ಬದಲಿಸುವಂತೆ ಸಾರ್ವಜನಿಕರು ಎಷ್ಟೇ ಮನವಿ ಮಾಡಿದರೂ ತಲೆಕೆಡಿಸಿಕೊಳ್ಳದ ಪೊಲೀಸರು ವಸೂಲಿ ದಂಧೆಗೆ ಇಳಿದಿದ್ದಾರೆ. ಪೊಲೀಸ್ ಠಾಣೆಯ ಮುಂದೆಯೇ ಲಾರಿಗಳನ್ನ ನಿಲ್ಲಿಸಿ ಮನಬಂದಂತೆ ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿದ್ದಾರೆ.

    ಅಪ್ಪಿ ತಪ್ಪಿ ಯಾವುದಾದರೂ ಲಾರಿ ಚಾಲಕ ಹಣ ನೀಡದೆ ತಪ್ಪಿಸಿಕೊಂಡು ಹೋದರೆ ಮುಂದಿನ ವೃತ್ತದಲ್ಲಿ ಇನ್ನಿಷ್ಟು ಪೊಲೀಸರು ಎದುರಾಗಿ ಡಬಲ್ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಹೆದರಿರುವ ಲಾರಿಗಳ ಚಾಲಕರು ಸ್ವಯಂ ಪೊಲೀಸರ ಬಳಿಬಂದು 200 ರಿಂದ 300 ರೂ. ಹಣ ಕೊಟ್ಟು ಹೋಗುತ್ತಿದ್ದಾರೆ. ಇದು ರಾಯಚೂರು ಪೊಲೀಸರ ಹಣೆಬರಹವಾಗಿದೆ.