Tag: ವಸತಿ ಸಚಿವ

  • ಸಚಿವ ಖಾದರ್‌ಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಯೇ ಮುಖ್ಯ: ಸುನೀಲ್ ಕುಮಾರ್

    ಸಚಿವ ಖಾದರ್‌ಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಯೇ ಮುಖ್ಯ: ಸುನೀಲ್ ಕುಮಾರ್

    ಉಡುಪಿ: ವಸತಿ ಸಚಿವ ಯು.ಟಿ.ಖಾದರ್ ಅವರಿಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಗಳ ಬಗ್ಗೆ ಜಾಸ್ತಿ ಆಸಕ್ತಿ ಇದೆ ಅಂತ ವಿಧಾನ ಸಭೆಯ ವಿಪಕ್ಷ ಮುಖ್ಯ ಸಚೇತಕ ಹಾಗೂ ಶಾಸಕ ಸುನೀಲ್ ಕುಮಾರ್ ಆರೋಪ ಮಾಡಿದ್ದಾರೆ.

    ಕಾರ್ಕಳದಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಸುಂದರ ನಗರವನ್ನು ಬಯಸುತ್ತಾರೆ. ಆದರೆ ಕಸಾಯಿಖಾನೆ ಮುಚ್ಚಲು, ಅಕ್ರಮ ಗೋವು ಸಾಗಾಟ ತಡೆಯಲು ರಾಜ್ಯ ಸರ್ಕಾರಕ್ಕೆ ತಾಕತ್ತಿಲ್ಲ. ಸ್ಮಾರ್ಟ್ ಸಿಟಿಯ ಅನುದಾನ ಹಣವನ್ನು ಅಭಿವೃದ್ಧಿಗೆ ಬಳಸಬೇಕಾಗಿತ್ತು. ಅದರ ಬದಲು ಕಸಾಯಿಖಾನೆಗೆ ಹಣ ಬಳಸಿರುವ ಹಿಂದೆ ದೊಡ್ಡ ಹುನ್ನಾರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಸಚಿವ ಯು.ಟಿ.ಖಾದರ್ ಇದಕ್ಕೆ ಸ್ಪಷ್ಟನೆ ಕೊಡಬೇಕು. 15 ಕೋಟಿ ರೂಪಾಯಿ ಹಣವನ್ನು ನಾವು ಕಸಾಯಿಖಾನೆಗೆ ಬಳಕೆ ಮಾಡಲು ಬಿಡಲ್ಲ. ಇದು ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ವಿಷಯವಲ್ಲ. ಮೂರು ಜಿಲ್ಲೆಗಳಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ. ಹಿಂದೂ ವಿರೋಧಿ ನೀತಿಯನ್ನು ತಕ್ಷಣ ಕೈಬಿಟ್ಟು, ಅವರ ನಿಲುವನ್ನು ಸ್ಪಷ್ಟ ಪಡಿಸಬೇಕೆಂದು ಆಗ್ರಹಿಸಿದರು.

    ಖಾದರ್ ಮತ್ತು ಬೆಂಬಲಿಗರು ಅಪರಾಧಿ ಚಟುವಟಿಕೆಗೆ ಬೆಂಬಲಿಸುತ್ತಿದ್ದಾರೆ. ಸರ್ಕಾರಿ ಹಣ ಅಭಿವೃದ್ಧಿಗೆ ಉಪಯೋಗವಾಗಲಿ. ಅಲ್ಲದೇ ಮಹಾನಗರಪಾಲಿಕೆ ಅಧಿಕಾರಿಗಳೂ ಸಹ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಬಿಎಂಪಿ ಜಾಗದಲ್ಲಿ ಸಚಿವ ಕೃಷ್ಣಪ್ಪ ಬಂಟನ ದರ್ಬಾರ್- ಸರ್ಕಾರಿ ಜಾಗ ಬಾಡಿಗೆಗೆ ಕೊಟ್ಟು ಕಮಾಯಿ

    ಬಿಬಿಎಂಪಿ ಜಾಗದಲ್ಲಿ ಸಚಿವ ಕೃಷ್ಣಪ್ಪ ಬಂಟನ ದರ್ಬಾರ್- ಸರ್ಕಾರಿ ಜಾಗ ಬಾಡಿಗೆಗೆ ಕೊಟ್ಟು ಕಮಾಯಿ

    ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಆಯ್ತು, ನಾರಾಯಣಸ್ವಾಮಿ ದಾಂಧಲೆ ಆಯ್ತು, ಈಗ ಬಿಬಿಎಂಪಿ ಜಮೀನಿನಲ್ಲಿ ಸಚಿವ ಲೇಔಟ್ ಕೃಷ್ಣಪ್ಪ ಬಂಟ ಗುರುಲಿಂಗಯ್ಯ ದರ್ಬಾರ್ ಜೋರಾಗಿದೆ.

    ಕೃಷ್ಣಪ್ಪ ಬೆಂಬಲಿಗನಾಗಿರುವ ಗುರುಲಿಂಗಯ್ಯ, ಕೆಪಿ ಅಗ್ರಹಾರದ ಭುವನೇಶ್ವರಿನಗರದಲ್ಲಿರುವ 30 ಗುಂಟೆ ಬಿಬಿಎಂಪಿ ಜಾಗವನ್ನು 30 ವರ್ಷಗಳಿಂದ 2 ಲಕ್ಷಕ್ಕೆ ಬಾಡಿಗೆಗೆ ಕೊಟ್ಟಿದ್ದಾನೆ.

    2010ರಲ್ಲೇ ಬಿಬಿಎಂಪಿ ತೆರವುಗೊಳಿಸುವಂತೆ ಆದೇಶ ಮಾಡಿತ್ತು. ಈ ಆದೇಶದ ವಿರುದ್ಧ ಗುರುಲಿಂಗಯ್ಯ ಕೋರ್ಟ್ ಮೆಟ್ಟಿಲೇರಿದ್ದ. 2018 ಜನವರಿಯಲ್ಲಿ ಕೋರ್ಟ್ ಗುರುಲಿಂಗಯ್ಯನ ಅರ್ಜಿ ವಜಾ ಮಾಡಿದೆ.

    ಅರ್ಜಿ ವಜಾ ಆದ ಬಳಿಕ ಕಾರ್ಪೊರೇಟರ್ ಗಾಯಿತ್ರಿ ಗಣೇಶ್, ಬಿಬಿಎಂಪಿ ಅಧಿಕಾರಿಗಳು ತೆರವು ಮಾಡೋಕೆ ಮುಂದಾದ್ರೆ ಅವರ ಮೇಲೆಯೇ ದಬ್ಬಾಳಿಕೆ ಮಾಡಿದ್ದಾನೆ. ಈತ ವಸತಿ ಸಚಿವ ಕೃಷ್ಣಪ್ಪ ಆಪ್ತನಾಗಿರೋದ್ರಿಂದ ಪೊಲೀಸರು ಕಂಡೂ ಕಾಣದಂತೆ ಕುಳಿತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.