Tag: ವಸತಿ ಶಾಲೆ

  • 5 ದಿನಗಳ ಹಿಂದಷ್ಟೇ ವಸತಿ ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಸಾವು

    5 ದಿನಗಳ ಹಿಂದಷ್ಟೇ ವಸತಿ ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಸಾವು

    – ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ

    ಶಿವಮೊಗ್ಗ: ಖಾಸಗಿ ವಸತಿ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಸಾಗರದಲ್ಲಿ (Sagar) ನಡೆದಿದೆ.

    ಮೃತ ವಿದ್ಯಾರ್ಥಿನಿಯನ್ನು ಸೊರಬ ತಾಲೂಕಿನ ಶಿವಪುರ ಗ್ರಾಮದ ತೇಜಸ್ವಿನಿ (13) ಎಂದು ಗುರುತಿಸಲಾಗಿದೆ. ಈಕೆ ಸಾಗರದ ವನಶ್ರೀ ವಸತಿ ಶಾಲೆಗೆ (Residential School) ಕಳೆದ ಐದು ದಿನಗಳ ಹಿಂದೆ ದಾಖಲಾಗಿದ್ದಳು. ಗುರುವಾರ ಪ್ರಜ್ಞಾ ಹೀನಾ ಸ್ಥಿತಿಯಲ್ಲಿದ್ದ ತೇಜಸ್ವಿಯನ್ನು ಶಾಲೆಯ ಶಿಕ್ಷಕರು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಬೆಂಬಲಿಗರಿಂದ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ

    ಇದೀಗ ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ (Shivamogga) ಮೆಗ್ಗಾನ್ ಆಸ್ಪತ್ರೆಯಲ್ಲಿ (McGann Hospital) ಮರಣೋತ್ತರ ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ ವಿದ್ಯಾರ್ಥಿನಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ವಿದ್ಯಾರ್ಥಿನಿ ಕುಟುಂಬಸ್ಥರು ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: 32 ವರ್ಷದ ಗೆಳತಿಯನ್ನು ಕೊಂದು ಪೀಸ್ ಪೀಸ್ ಮಾಡಿದ 56 ವರ್ಷದ ವ್ಯಕ್ತಿ ಅರೆಸ್ಟ್

  • ವಸತಿ ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ – ಪ್ರಾಂಶುಪಾಲರು ಸೇರಿ ಐವರು ಅರೆಸ್ಟ್

    ವಸತಿ ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ – ಪ್ರಾಂಶುಪಾಲರು ಸೇರಿ ಐವರು ಅರೆಸ್ಟ್

    ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಯ (Residential School) ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ (Sexual Abuse) ನಡೆಸಿರುವ ಆರೋಪದಡಿ ಐವರನ್ನು ಬಂಧಿಸಲಾಗಿದೆ.

    ಇದೇ ಮಾರ್ಚ್ 7ರಂದು ಘಟನೆ ನಡೆದಿದ್ದು, ಮರುದಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮೋದಿ ರೋಡ್ ಶೋ – ಭಾನುವಾರ ಏನೇನು ಕಾರ್ಯಕ್ರಮ?

    ಮಾ.7 ರಂದು ಸದರಿ ಹಾಸ್ಟೆಲ್‌ನಲ್ಲಿ ಸೌಲಭ್ಯ ಇಲ್ಲ ಎಂದು ಮಕ್ಕಳು ದಿಢೀರ್ ಪ್ರತಿಭಟನೆಗಿಳಿದಿದ್ದರು. ಈ ವೇಳೆ ಕೆಲವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಸಂಬಂಧ ಪ್ರಾಂಶುಪಾಲರಿಗೆ, ಶಿಕ್ಷಕರಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದರು. ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಕೋಳಿ ಸಾರು ಮಾಡಲ್ಲ ಅಂದಿದ್ದಕ್ಕೆ ಹೆಂಡತಿ ಕೈಮುರಿದ ಪತಿರಾಯ

    ಇದಾದ ಬಳಿಕ ವಿವಿಧ ಇಲಾಖೆಗಳನ್ನೊಳಗೊಂಡ ಅಧಿಕಾರಿಗಳ ತಂಡ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ವೇಳೆ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದಾಗ 10ನೇ ತರಗತಿಯ ಮೂವರು, 7ನೇ ತರಗತಿಯ ಐವರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

    crime 1

    ಹಾಸ್ಟೆಲ್ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವವರ ನಿರ್ಲಕ್ಷ್ಯವೂ ಇದಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ದೂರಿನ ಮೇರೆಗೆ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು, ಒಬ್ಬ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿ ಸೇರಿ ಐವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಳಿಕ ಬಂಧಿತ ಆರೋಪಿಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಐವರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ (SC ST Act) ಹಾಗೂ ಪೋಕ್ಸೋ ಕಾಯ್ದೆ (POCSO Act) ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

  • ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ವಸತಿ ಶಾಲೆಯ ಪ್ರಾಂಶುಪಾಲ ಬಂಧನ

    ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ – ವಸತಿ ಶಾಲೆಯ ಪ್ರಾಂಶುಪಾಲ ಬಂಧನ

    ಹಾಸನ: ಹಾಸ್ಟೆಲ್‌ನ (Hostel) ಅಪ್ರಾಪ್ತ ವಿದ್ಯಾರ್ಥಿನಿಯರಿಗೆ (Students) ಲೈಂಗಿಕ ಕಿರುಕುಳ (Sexual Harassment) ನೀಡುತ್ತಿದ್ದ ಆರೋಪದಡಿ ವಸತಿ ಶಾಲೆಯ ಪ್ರಾಂಶುಪಾಲನನ್ನು (Principal) ಪೊಲೀಸರು ಬಂಧಿಸಿರುವ ಘಟನೆ ಹಾಸನ (Hassan) ಜಿಲ್ಲೆ, ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.

    ವಸತಿ ಶಾಲೆಯ ಪ್ರಾಂಶುಪಾಲ ಶಿವಕುಮಾರ್ ಬಂಧಿತ ಆರೋಪಿಯಾಗಿದ್ದು, ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು. ದೂರಿನ ಅನ್ವಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ.

    ಆಪ್ತ ಸಮಾಲೋಚನೆ ವೇಳೆ ಪ್ರಾಂಶುಪಾಲ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ವೇಳೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಹೆಚ್.ಟಿ ಕೋಮಲ ಪ್ರಾಂಶುಪಾಲ ಶಿವಕುಮಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಚಿಕಿತ್ಸೆಗೆಂದು ಬಂದಿದ್ದ ತಾಯಿ, ಮಗಳು – ಆಸ್ಪತ್ರೆಯ ಕಬೋರ್ಡ್‍ನಲ್ಲಿ, ಹಾಸಿಗೆಯ ಕೆಳಗೆ ಶವವಾಗಿ ಪತ್ತೆ

    ದೂರು ದಾಖಲಿಸಿಕೊಂಡ ಪೊಲೀಸರು ಪ್ರಾಂಶುಪಾಲ ಶಿವಕುಮಾರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಶಿವಕುಮಾರ್ ಮೂಲತಃ ಕೊಡಗು ಜಿಲ್ಲೆಯವನಾಗಿದ್ದು, ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಅರಕಲಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸೌದಿ ಪರೀಕ್ಷಾ ಕೇಂದ್ರಗಳಲ್ಲಿ ಬುರ್ಖಾ ಬ್ಯಾನ್

    Live Tv
    [brid partner=56869869 player=32851 video=960834 autoplay=true]

  • ಕುಡಿದ ಮತ್ತಿನಲ್ಲಿ ಬೆಲ್ಟ್, ದೊಣ್ಣೆಯಿಂದ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ – ಶಾಲಾ ನಿರ್ದೇಶಕ ವಿರುದ್ಧ ದೂರು

    ಕುಡಿದ ಮತ್ತಿನಲ್ಲಿ ಬೆಲ್ಟ್, ದೊಣ್ಣೆಯಿಂದ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ – ಶಾಲಾ ನಿರ್ದೇಶಕ ವಿರುದ್ಧ ದೂರು

    ತುಮಕೂರು: ಕುಡಿದ ಮತ್ತಿನಲ್ಲಿ ಶಾಲಾ ವಿದ್ಯಾರ್ಥಿಗಳ ಮೇಲೆ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕ ಮನಸೋ ಇಚ್ಚೆ ದಾಳಿ ಮಾಡಿರುವ ಘಟನೆ ತುಮಕೂರು (Tumkuru) ತಾಲೂಕಿನ ಮಲ್ಲಸಂದ್ರದ ವಿಶ್ವಭಾರತಿ (VishwaBharathi) ವಸತಿ ಶಾಲೆಯಲ್ಲಿ ನಡೆದಿದೆ.

    ಆರೋಪಿಯನ್ನು ಶಾಲೆಯ ಕಾರ್ಯದರ್ಶಿ ಎನ್ ಮೂರ್ತಿಯ ಮಗ ಮತ್ತು ನಿರ್ದೇಶಕ ಭರತ್ ಎಂದು ಗುರುತಿಸಲಾಗಿದ್ದು, ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಬೆಲ್ಟ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ನಾಲ್ಕು ದಿನಗಳು ಕಳೆದರೂ ಈ ವಿಚಾರವನ್ನು ಶಾಲಾ ಆಡಳಿತ ಮಂಡಳಿ ಮುಚ್ಚಿಟ್ಟಿತ್ತು. ಆದರೆ ನಂತರ ಪೋಷಕರು ವಿಚಾರ ತಿಳಿದು ಮಕ್ಕಳನ್ನು ಭೇಟಿ ಮಾಡಿದ್ದಾರೆ.  ಇದನ್ನೂ ಓದಿ: ಮಧ್ಯದ ಬೆರಳು ತೋರಿಸಿದ ಬೈಕ್ ಸವಾರನಿಗೆ ಮನಬಂದಂತೆ ಥಳಿಸಿದ BMTC ಚಾಲಕ ಅಮಾನತು

    ಕುಡಿತ ಮತ್ತಿನಲ್ಲಿ ಬಂದ ಭರತ್ ಮಕ್ಕಳು ಬೇಗ ಮಲಗಿದ್ದಾರೆಂದು ಮಕ್ಕಳ ತೊಡೆ ಮತ್ತು ಮರ್ಮಾಂಗಗಳ ಮೇಲೆ ಕಾರಣವಿಲ್ಲದೇ ಹಲ್ಲೆ ನಡೆಸಿದ್ದಾನೆ. ರಾತ್ರಿ ಹತ್ತುಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಕ್ಕಳು ದಮ್ಮಯ್ಯ ಅಂದರೂ, ಕಾಲಿಗೆ ಬಿದ್ದರೂ ಬಿಟ್ಟಿಲ್ಲ. ಎಣ್ಣೆ ನಶೆ ಕಡಿಮೆಯಾಗುವವರೆಗೂ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಒಂದು ಮಗುವಿನ ಕೈ ಮುರಿದು ಹೋಗುವಂತೆ ಥಳಿಸಿದ್ದಾನೆ.

    ಮೂರು ದಿನಗಳ ನಂತರ ಈ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ವಸತಿ ಶಾಲೆಗೆ ಬಂದ ಪೋಷಕರು, ಸದ್ಯ ತಲೆ ಮರೆಸಿಕೊಂಡಿರುವ ಭರತ್ ವಿರುದ್ಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಫುಟ್ ಬೋರ್ಡ್‍ನಲ್ಲಿ ವಿದ್ಯಾರ್ಥಿಗಳ ಪ್ರಯಾಣ – ಬಸ್ ಸಿಬ್ಬಂದಿಗೆ 25 ಸಾವಿರ ರೂ. ದಂಡ

    Live Tv
    [brid partner=56869869 player=32851 video=960834 autoplay=true]

  • ಮಂಡ್ಯದ ವಸತಿ ಶಾಲೆಯಿಂದ 9ನೇ ತರಗತಿ ವಿದ್ಯಾರ್ಥಿ ನಾಪತ್ತೆ – ಪೊಲೀಸರಿಗೆ ಸವಾಲಾಯ್ತು ಕೇಸ್

    ಮಂಡ್ಯದ ವಸತಿ ಶಾಲೆಯಿಂದ 9ನೇ ತರಗತಿ ವಿದ್ಯಾರ್ಥಿ ನಾಪತ್ತೆ – ಪೊಲೀಸರಿಗೆ ಸವಾಲಾಯ್ತು ಕೇಸ್

    ಮಂಡ್ಯ: ತಾಯಿ ಇಲ್ಲದ ತಬ್ಬಲಿ ಮಗು ಎಂದು ಅಜ್ಜಿ ಆ ಹುಡುಗನನ್ನು ಮುದ್ದಾಗಿ ಸಾಕಿದ್ದಳು. ಇದೀಗ ಆ ಹುಡುಗ ವಸತಿ ಶಾಲೆಯಿಂದ (Residential School) ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಇತ್ತ ಮುದ್ದಾಗಿ ಸಾಕಿದ್ದ ಮೊಮ್ಮಗ ಕಾಣುತ್ತಿಲ್ಲ ಎಂದು ಅಜ್ಜಿ ಕಣ್ಣೀರಿಡುತ್ತಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡ ಎಂಬುವವರ ಪುತ್ರ ಕಿಶೋರ್ ನಾಪತ್ತೆಯಾಗಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ತಾಯಿ ಕಳೆದುಕೊಂಡು ತಬ್ಬಲಿಯಾದ ಕಿಶೋರ್‌ನನ್ನು ತಂದೆ ಹಾಗೂ ಅಜ್ಜಿ ಪ್ರೀತಿಯಿಂದ ಸಾಕಿ ಸಲಹಿದ್ದರು. ಕಿಶೋರ್‌ನನ್ನು ವಿದ್ಯಾವಂತನನ್ನಾಗಿ ಮಾಡಬೇಕೆಂಬ ಕನಸನ್ನು ಕಟ್ಟಿಕೊಂಡಿದ್ದರು. ಹೀಗಾಗಿ ಕಿಶೋರ್‌ನನ್ನು ಮಂಡ್ಯದ ತಂಗಳಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ (Morarji Desai Residential School) ಸೇರಿಸಿದ್ದರು. ಇದನ್ನೂ ಓದಿ: ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ

    ವಸತಿ ಶಾಲೆಯಲ್ಲಿ ಕಿಶೋರ್ 9ನೇ ತರಗತಿ ವಿದ್ಯಾಭ್ಯಾಸ (Education) ಮಾಡುತ್ತಿದ್ದ. ಜು.27ರಂದು ರಜೆ ಇದ್ದ ಕಾರಣ ಕಿಶೋರ್ ವಸತಿ ಶಾಲೆಯಿಂದ ಮನೆಗೆ ಬಂದಿದ್ದ. ನಂತರ ರಜೆ ಮುಗಿದ ಬಳಿಕ ತಂದೆ ಈರೇಗೌಡ ಕಿಶೋರ್‌ನನ್ನು ಆ.8 ರಂದು ಮತ್ತೆ ವಸತಿ ಶಾಲೆಗೆ ಬಿಟ್ಟು ಬಂದಿದ್ದರು. ಇದಾದ ನಂತರ ಮತ್ತೆ ಗೌರಿ-ಗಣೇಶ ಹಬ್ಬಕ್ಕೆ (Ganesha Festoival) ತಾಯಿಗೆ ಎಡೆ ಇಡಲು ಕಿಶೋರ್‌ನನ್ನು ಮನೆಗೆ ಕರೆತರಲು ಹೋದ ವೇಳೆ ಇಲ್ಲಿನ ಶಿಕ್ಷಕರು 20 ದಿನಗಳಿಂದ ನಿಮ್ಮ ಮಗ ಶಾಲೆಗೇ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಕ್ಸ್ ಚಚ್ಚಿ ಅಂಪೈರ್‌ರನ್ನು ಬಡಿದೆಬ್ಬಿಸಿದ ಸ್ಮಿತ್ – ಆಸಿಸ್ ಆಟಗಾರನ ಕ್ರೀಡಾ ಬದ್ಧತೆಗೆ ಮೆಚ್ಚುಗೆ

    ಆ.8 ರಂದು ಈರೇಗೌಡ ಕಿಶೋರ್‌ನನ್ನು ಮೊರಾರ್ಜಿ ದೇಸಾಯಿ ಶಾಲೆಗೆ ಬಿಡುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಕಿಶೋರ್ ಮತ್ತೆ ಶಾಲೆಯಿಂದ ಹೊರ ಬರುವ ದೃಶ್ಯ ಮಾತ್ರ ಇಲ್ಲ. ಇದಲ್ಲದೇ ಕಿಶೋರ್ ಟ್ರಂಕ್ ಹಾಗೂ ಬಟ್ಟೆಗಳು ಹಾಸ್ಟೆಲ್‌ನಲ್ಲೇ ಇವೆ. ಟ್ರಂಕ್ ಬಳಿ ಒಂದು ಲೆಟರ್ ಸಿಕ್ಕಿದ್ದು, ಇದ್ರಲ್ಲಿ ನನಗೆ ಈ ಶಾಲೆಯಲ್ಲಿ ಓದಲು ಇಷ್ಟವಿಲ್ಲ. ಈ ಬಗ್ಗೆ ನಿಮಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಅಪ್ಪ-ಚಿಕ್ಕಪ್ಪ ನನ್ನ ಹುಡುಕಬೇಡಿ ಎಂದು ಬರೆದಿದೆ. ಆದ್ರೆ ಕಿಶೋರ್ ಪೋಷಕರು ಇದು ನನ್ನ ಮಗನ ಕೈಬರಹವಲ್ಲ ಎಂದು ಹೇಳುತ್ತಿದ್ದಾರೆ. ಇತ್ತ ಪ್ರೀತಿಯಿಂದ ಸಾಕಿದ ಮೊಮ್ಮಗ ಕಾಣೆಯಾಗಿರುವ ಸುದ್ದಿಯನ್ನು ಕೇಳಿ ಅಜ್ಜಿ ಕಣ್ಣೀರು ಹಾಕುತ್ತಿದ್ದಾಳೆ. ಇದನ್ನೂ ಓದಿ: ಕೆರೆ ಮಧ್ಯ ತೆಪ್ಪದಲ್ಲಿ ತೆರಳಿ ಬೆಸ್ಕಾಂ ಸಿಬ್ಬಂದಿಯಿಂದ ವಿದ್ಯುತ್ ದುರಸ್ತಿ – ಎಲ್ಲೆಡೆ ಮೆಚ್ಚುಗೆ

    ವಿದ್ಯಾರ್ಥಿಯೊಬ್ಬ ಮೊರಾರ್ಜಿ ದೇಸಾಯಿ ಶಾಲೆಯಿಂದ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿಸಿಟಿವಿ ದೃಶ್ಯದಲ್ಲಿ ವಿದ್ಯಾರ್ಥಿ ಶಾಲೆಯಿಂದ ಹೊರಗೆ ಹೋಗುವುದು ಸೆರೆಯಾಗಿಲ್ಲ. ಹೀಗಿರುವಾಗ ವಿದ್ಯಾರ್ಥಿ ಎಲ್ಲಿಗೆ ಹೋದ ಎಂಬ ಪ್ರಶ್ನೆಗಳು ಮೂಡುತ್ತಿದೆ. ಈ ಬಗ್ಗೆ ಕಿಶೋರ್ ಪೋಷಕರು ಕೆರಗೊಡು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಕೇಳಿದ್ರೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ವಿದ್ಯಾರ್ಥಿಯನ್ನು ಹುಡುಕುತ್ತೇವೆ, ಅಲ್ಲದೇ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಸತಿ ಶಾಲೆಗಳಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ ಪೋಷಕರು

    ವಸತಿ ಶಾಲೆಗಳಿಂದ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ ಪೋಷಕರು

    ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬಹುತೇಕ ವಸತಿ ಕಾಲೇಜುಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ವಸತಿ ಶಾಲೆಯಲ್ಲಿರುವ ಮಕ್ಕಳನ್ನು ಪೋಷಕರು ಮನೆಗಳಿಗೆ ಕರೆದೊಯ್ಯುತ್ತಿದ್ದಾರೆ.

    ದಾವಣಗೆರೆಯ ಸಿದ್ದಗಂಗಾ ಶಾಲೆ ಸೇರಿದಂತೆ ಹಲವು ಶಾಲೆಗಳಲ್ಲಿ ಮಕ್ಕಳನ್ನು ಮನೆಗೆ ಕರೆದೊಯ್ಯುಲಾಗುತ್ತಿದೆ. ವಸತಿ ಶಾಲೆಯಲ್ಲಿ ಇದ್ದರೆ ಕೊರೊನಾ ಸೋಂಕು ನಮ್ಮ ಮಕ್ಕಳಿಗೂ ಸಹ ಬರಬಹುದು ಎಂದು ಪೋಷಕರು ಆತಂಕ ಪಡುತ್ತಿದ್ದಾರೆ. ಈ ಪರಿಣಾಮ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾಡಿ ಎಂದು ಹೇಳಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ರಾಯಚೂರು ಕೋರ್ಟ್ ಮುಂದೆ ಜನಜಂಗುಳಿ

    ಪೋಷಕರ ಒತ್ತಾಯದಂತೆ ಮಕ್ಕಳನ್ನು ಕಾಲೇಜು ಅಡಳಿತ ಮನೆಗೆ ಕಳುಹಿಸುತ್ತಿದೆ. ದಾವಣಗೆರೆಯಲ್ಲಿ ಒಂದು ವಾರದಲ್ಲಿ 213 ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಈಗ ಇನ್ನಷ್ಟು ಪ್ರಕರಣಗಳು ಹೆಚ್ಚಾಗಬಹುದು ಎಂದು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.

    ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಮಕ್ಕಳನ್ನು ಓದಲು ಬಿಟ್ಟಿರುವ ನಗರ ಸಮೀಪದ ಊರಿನ ಪೋಷಕರು ಆಡಳಿತ ಮಂಡಳಿಗೆ ಫೋನ್ ಮಾಡಿ ಮಕ್ಕಳ ಸುರಕ್ಷತೆ ವಿಚಾರಿಸುತ್ತಿದ್ದಾರೆ.

    2 ಅಥವಾ 3 ತಿಂಗಳಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳಿರುವ ಕಾರಣ ವಿದ್ಯಾರ್ಥಿಗಳಿಗೆ ಇದು ತುಂಬಾ ಮಹತ್ವದ ಸಮಯ. ಹಾಗೆಂದು ಅವರನ್ನು ಇಲ್ಲೇ ಇರಲು ಬಿಟ್ಟು ಕೊರೊನಾಗೆ ತುತ್ತಾಗಿಸಲು ಪೋಷಕರು ಸಿದ್ಧರಿಲ್ಲ. ಇತ್ತ ರಿಸ್ಕ್ ತೆಗೆದುಕೊಳ್ಳಲು ಆಡಳಿತ ಮಂಡಳಿಯವರು ಸಿದ್ಧರಿಲ್ಲ. ಹೀಗಾಗಿ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಮಕ್ಕಳು ಶಾಲೆಗಿಂತ ಮನೆಯಲ್ಲಿ ಇರುವುದೇ ಹೆಚ್ಚು ಸುರಕ್ಷಿತ ಎಂಬುದು ಹೆತ್ತವರ ಅಭಿಪ್ರಾಯವಾಗಿದೆ. ಇದನ್ನೂ ಓದಿ:  ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    ಈಗಾಗಲೇ ನಗರದ ಸರ್‍ಎಂವಿ ಕಾಲೇಜಿನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಲೆಬೆನ್ನೂರಿನ ಸರ್ಕಾರಿ ಪಿಯು ಕಾಲೇಜು, ಹರಿಹರದ ಪಾಲಿಟೆಕ್ನಿಕ್ ಕಾಲೇಜು ಹಾಗೂ ಚನ್ನಗಿರಿ ತಾಲೂಕು ಮಾವಿನಹೊಳೆ ವಸತಿ ಶಾಲೆ ಕೆಲ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲಾಧಿಕಾರಿ ಸೂಚನೆಯಂತೆ ಈ ಸೋಂಕು ಕಾಣಿಸಿಕೊಂಡ ಶಾಲಾ ಕಾಲೇಜುಗಳಿಗೆ ಒಂದುವಾರ ರಜೆ ಘೋಷಿಸಲಾಗಿದೆ. ಉಳಿದಂತೆ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ನಗರದ ಹಲವು ಖಾಸಗಿ ಕಾಲೇಜುಗಳು ಸ್ವಯಂಪ್ರೇರಿತವಾಗಿ ಆನ್ ಲೈನ್ ಪಾಠಕ್ಕೆ ಮೊರೆ ಹೋಗಿವೆ.

  • ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ..!

    ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ..!

    – ಶಾಲೆ ಉದ್ಘಾಟನೆ ನಿಲ್ಲಿಸಿ ರಂಪಾಟ

    ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ ನಡೆಸಿದ ಘಟನೆ ಯಾದಗಿರಿ ತಾಲೂಕಿನ ಬಂದಳ್ಳಿ ಬಳಿ ನಡೆದಿದೆ.

    ಇಂದು ಏಕಲವ್ಯ ವಸತಿ ಶಾಲೆ ಉದ್ಘಾಟಣಾ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಬಾಬುರಾವ್ ಅವರಿಗೆ ಆಹ್ವಾನ ಮಾಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಾಜಿ ಸಚಿವರು, ಕಾರ್ಯಕ್ರಮವನ್ನೇ ನಿಲ್ಲಿಸಿ, ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

    ಇದು ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಈ ಶಾಲೆಯನ್ನು ನಾನು ಹೋರಾಟ ಮಾಡಿ ತಂದಿದ್ದೇನೆ. ಆದರೆ ಉದ್ಘಾಟನೆಗೆ ನನ್ನ ಕರೆದಿಲ್ಲ. ಜಿಲ್ಲಾಡಳಿತ ನನ್ನ ಕಡೆಗಣಸಿದೆ ಅದಕ್ಕಾಗಿ ನಾನು ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ

    ಏಕಲವ್ಯ ವಸತಿ ಶಾಲೆ ಉದ್ಘಾಟನಾ ಕಾರ್ಯಕ್ರಮಕ್ಕೆ ನನ್ನ ಯಾಕೆ ಕರೆದಿಲ್ಲ. ನನ್ನ ಕಡೆಗಣಿಸಿದ ಕಾರ್ಯಕ್ರಮವನ್ನು ಬಹಿಷ್ಕರಿಸ್ತೇನೆ. ಜಿಲ್ಲಾಡಳಿತದ ಅಧಿಕಾರಿಗಳು, ಸಿಬ್ಬಂದಿಗೆ ಚಿಂಚನಸೂರ್ ತರಾಟೆ ತೆಗೆದುಕೊಂಡರು. ಈ ವೇಳೆ ಕೈಮುಗಿದು ಮನವಿ ಮಾಡಿದ್ರೂ ಬಾಬುರಾವ್ ಒಪ್ಪಲಿಲ್ಲ. ಶಾಲೆ ಇನ್ನೂ ಒಂದು ಕಿಲೋಮೀಟರ್ ಅಂತರದಲ್ಲಿ ಬಾಬುರಾವ್ ಈ ಹೈಡ್ರಾಮಾ ಮಾಡಿದ್ದಾರೆ. ಹೀಗಾಗಿ ಸಚಿವ ಶ್ರೀರಾಮುಲು ಅವರು ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದರು. ಇದನ್ನೂ ಓದಿ: ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ

    ಇತ್ತ ಶ್ರೀರಾಮುಲು ಅಭಿಮಾನಿಗಳು ಕಾರ್ಯಕ್ರಮವನ್ನು ನಿಲ್ಲಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಬಾಬುರಾವ್ ಅವರು ಮಾಧ್ಯಮಗಳ ಕಣ್ತಪ್ಪಿಸಿ ಯಾದಗಿರಿಯಿಂದ ಎಸ್ಕೇಪ್ ಆದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿ ಹಾಗೂ ಪಕ್ಷದ ಮುಖಂಡರು ಚಿಂಚನಸೂರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರಿಂದಾಗಿ ವೇದಿಕೆ ಕಾರ್ಯಕ್ರಮಕ್ಕೆ ಬಾರದೇ ಜಾಗ ಖಾಲಿ ಮಾಡಿದ್ದಾರೆ. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ

  • ವಸತಿ ಶಾಲೆ ಸೀಟು ನೀಡಲು ಲಂಚ ಕೇಳಿದ ಪ್ರಾಂಶುಪಾಲ ACB ಬಲೆಗೆ

    ವಸತಿ ಶಾಲೆ ಸೀಟು ನೀಡಲು ಲಂಚ ಕೇಳಿದ ಪ್ರಾಂಶುಪಾಲ ACB ಬಲೆಗೆ

    ಚಿತ್ರದುರ್ಗ: ವಸತಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗೆ ಸೀಟು ನೀಡಲು ಲಂಚ ಕೇಳಿದ್ದ ಪ್ರಾಂಶುಪಾಲನೋರ್ವ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಮೊರಾರ್ಜಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

    ಸೈಯದ್ ನಿಜಾಮುದ್ದೀನ್ ಎಸಿಬಿ ಬಲೆಗೆ ಬಿದ್ದ ವಿವಿಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ. ಸೈಯದ್ ನಿಜಾಮುದ್ದೀನ್ ಬಳಿ ಹಿರಿಯೂರು ತಾಲೂಕಿನ ಬೆಳಘಟ್ಟ ಗ್ರಾಮದ ಎಚ್.ಮೂರ್ತಿ ಅವರ ಪುತ್ರ ಎಂ.ಯಲ್ಲಪ್ಪನನ್ನು ವಿವಿಪುರ ಮೊರಾರ್ಜಿ ಶಾಲೆಗೆ ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದರು. ನಿಮ್ಮ ಪುತ್ರನಿಗೆ ಮೊರಾರ್ಜಿ ಶಾಲೆ ಸೇರ್ಪಡೆ ಒಂದು ಅಂಕ ಕಡಿಮೆ ಇದ್ದು 10 ಸಾವಿರ ರೂ. ನೀಡಿದರೆ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಬೇಡಿಕೆ ಇಟ್ಟಿದ್ದನು. ನಿಜಾಮುದ್ದೀನ್ ವರ್ತನೆ ವಿರುದ್ಧ ಎಚ್.ಮೂರ್ತಿ ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ದೂರು ನೀಡಿದ್ದರು. ಉಪಾಯದಿಂದ ಈಗ ಹಣವಿಲ್ಲ. ಸೀಟು ನೀಡಿದ ಬಳಿಕ ಹಣ ನೀಡುವುದಾಗಿ ನಂಬಿಸಿ ಇಂದು ಹಣವನ್ನು ತಂದು ನಿಜಾಮುದ್ದೀನ್ ಗೆ ನೀಡುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಮೂರ್ತಿ ಅವರ ದೂರು ಆಧರಿಸಿ ಎಸಿಬಿ ಅಧೀಕ್ಷಕ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಸವರಾಜ್ ಮುಗದಮ್ ಹಾಗೂ ಪಿಐ ಪ್ರವೀಣ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಪ್ರಾಂಶುಪಾಲ ಸೈಯದ್ ನಿಜಾಮುದ್ದೀನ್ ನನ್ನು ಬಂಧಿಸಿದೆ.

  • ವಸತಿ ಶಾಲೆ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 19 ಜನ್ರಿಗೆ ಕೊರೊನಾ ಪಾಸಿಟಿವ್

    ವಸತಿ ಶಾಲೆ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 19 ಜನ್ರಿಗೆ ಕೊರೊನಾ ಪಾಸಿಟಿವ್

    ಗದಗ: ಕೊರೊನಾ 2ನೇ ಅಲೆಯ ಆತಂಕ ಈಗ ಶಾಲಾ ಮಕ್ಕಳಿಗೂ ಕಾಡತೊಡಗಿದೆ. ಗದಗ ಜಿಲ್ಲೆಯ ರೋಣ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಒಟ್ಟು 19 ಜನ್ರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.

    ಎರಡು ದಿನಗಳ ಹಿಂದೆ ಇದೇ ವಸತಿ ಶಾಲೆಯಲ್ಲಿನ ನಾಲ್ಕು ವಿದ್ಯಾರ್ಥಿಗಳು ಹಾಗೂ ಓರ್ವ ಅಡುಗೆ ಸಿಬ್ಬಂದಿ ಸೇರಿ ಒಟ್ಟು 5 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಆರೋಗ್ಯ ಇಲಾಖೆ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ತಪಾಸಣೆ ಒಳಪಡಿಸಿದಾಗ, ಇಂದು ಮತ್ತೆ 14 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

    ವಾಜಪೇಯಿ ವಸತಿ ಶಾಲೆಯ 18 ವಿದ್ಯಾರ್ಥಿಗಳು, ಓರ್ವ ಅಡುಗೆ ಸಿಬ್ಬಂದಿ ಸೇರಿ ಒಟ್ಟು 19 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಶಾಲೆಯಲ್ಲಿ 175ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಹುತೇಕ ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಿದೆ.

    ರೋಣ ಪುರಸಭೆ ಸಿಬ್ಬಂದಿ ವಸತಿ ಶಾಲೆಯನ್ನು ಸಂಪೂರ್ಣ ಸ್ಯಾನಿಟೈಜೆಷನ್ ಮಾಡಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ತಪಾಸಣೆ ಮಾಡಲಾಗುತ್ತಿದ್ದು, 25 ಜನರ ವರದಿ ಬರುವುದು ಬಾಕಿ ಇದೆ. ಸ್ಥಳಕ್ಕೆ ರೋಣ ತಹಶೀಲ್ದಾರ್ ಜಕ್ಕನಗೌಡ್ರ, ಬಿ.ಇ.ಓ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪಾಲಕರಲ್ಲಿ ಆತಂಕ ಮನೆ ಮಾಡಿದೆ. ವಸತಿ ಶಾಲೆ ಮಕ್ಕಳು ಆ ಏರಿಯಾದ ಅನೇಕ ಕಡೆಗಳಲ್ಲಿ ಓಡಾಡಿರುವುದರಿಂದ, ವಸತಿ ಶಾಲೆಗೆ ಕೊರೊನಾ ಕಂಠಕವಾಗಿ ಪರಿಣಮಿಸುತ್ತಾ ಎಂಬ ಭಯ ಸ್ಥಳೀಯರಲ್ಲಿ ಶುರುವಾಗಿದೆ.

  • ಬೀದಿಗಿಳಿದು ಪ್ರತಿಭಟಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು!

    ಬೀದಿಗಿಳಿದು ಪ್ರತಿಭಟಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು!

    ಯಾದಗಿರಿ: ಜಿಲ್ಲೆಯ ಶಹಪುರ ತಾಲೂಕಿನ ಬೇವಿನಾಳ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ರಸ್ತೆಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ, ಸರಿಯಾದ ಊಟದ ವ್ಯವಸ್ಥೆ ಇಲ್ಲದೆ ಪಿಯುಸಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹೀಗಿದ್ದರೂ ವಾರ್ಡನ್ ಸುಮಮಂಗಲ ನಿರ್ಲಕ್ಷ್ಯ ಧೋರಣೆಯನ್ನು ತಾಳಿದ್ದಾರೆ. ಇದರಿಂದಾಗಿ ಬೇಸರಗೊಂಡ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲ್ನಡಿಗೆಯಲ್ಲಿ ಜಿಲ್ಲಾಕೇಂದ್ರಕ್ಕೆ ಬರಲು ಯತ್ನಿಸಿದ್ದಾರೆ.

    ವಿದ್ಯಾರ್ಥಿಗಳನ್ನು ರಸ್ತೆ ಮಧ್ಯೆಯೇ ಶಾಲಾ ಸಿಬ್ಬಂದಿ ತಡೆದ ಹಿನ್ನೆಲೆ ಶಹಪುರ ತಾಲೂಕಿನ ದೋರನಹಳ್ಳಿ ಬಳಿಯ ಮುಖ್ಯ ರಸ್ತೆಯಲ್ಲಿ ಧರಣಿ ಕೂರುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

    ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ತಮ್ಮ ಕಷ್ಟಗಳನ್ನು ಆಲಿಸುವವರಿಗೂ, ಪ್ರತಿಭಟನೆ ಕೈ ಬಿಡುವ ಮಾತೇ ಇಲ್ಲ ಅಂತ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.