Tag: ವಶ

  • ಅಬಕಾರಿ ಇಲಾಖೆಯಿಂದ ಲಕ್ಷ ಲಕ್ಷ ಮೌಲ್ಯದ ಮದ್ಯ ವಶ

    ಅಬಕಾರಿ ಇಲಾಖೆಯಿಂದ ಲಕ್ಷ ಲಕ್ಷ ಮೌಲ್ಯದ ಮದ್ಯ ವಶ

    ರಾಯಚೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಅಬಕಾರಿ ಇಲಾಖೆ 37 ಮದ್ಯದಂಗಡಿಗಳ ಪರವಾನಿಗೆಯನ್ನ ಅಮಾನತು ಮಾಡಿ ಆದೇಶ ಹೊರಡಿಸಿದೆ.

    ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆರೆಯಲಾದ 5 ಕಂಟ್ರೋಲ್ ರೂಂ.ಗಳಲ್ಲಿ ಒಟ್ಟು 177 ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆ ಅಬಕಾರಿ ಇಲಾಖೆ, ಅಕ್ರಮ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದೆ. ಚಿಲ್ಲರೆಗೆ ಮದ್ಯ ಕೊಡುವುದು, ಎಂಆರ್‍ಪಿ ಗಿಂತ ಹೆಚ್ಚು ಬೆಲೆ ಹಾಗೂ ಬಿಲ್ ಕೊಡದ 37 ಮದ್ಯದಂಗಡಿಗಳ ಪರವಾನಿಗೆಯನ್ನ ಅಮಾನತು ಮಾಡಲಾಗಿದೆ.

    ಇನ್ನೂ ಇದುವರೆಗೆ ಅಕ್ರಮ ಸಾಗಣೆ ಮಾಡುತ್ತಿದ್ದ 1600 ಲೀಟರ್ ಮದ್ಯ, 193 ಲೀಟರ್ ಬೀಯರ್, 769 ಲೀಟರ್ ಕಲಬೆರಿಕೆ ಸೇಂದಿ, 10 ಲೀಟರ್ ಕಳ್ಳಭಟ್ಟಿ ಹೆಂಡವನ್ನ ಜಪ್ತಿ ಮಾಡಲಾಗಿದೆ. ದಾಳಿ ವೇಳೆ ಒಟ್ಟು 22 ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ವಾಹನ ಸೇರಿದಂದ 18 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಬಕಾರಿ ಉಪ ಆಯುಕ್ತ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

  • ಇಂಡಿಕಾ ಕಾರಿನಲ್ಲಿ 20 ಲಕ್ಷ ಹಣ ಪತ್ತೆ

    ಇಂಡಿಕಾ ಕಾರಿನಲ್ಲಿ 20 ಲಕ್ಷ ಹಣ ಪತ್ತೆ

    ಚಿಕ್ಕಬಳ್ಳಾಪುರ: ಇಂಡಿಕಾ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ 20 ಲಕ್ಷ ರೂಪಾಯಿ ನಗದನ್ನು ಜಿಲ್ಲೆಯ ಗೌರಿಬಿದನೂರು ಪೊಲೀಸರು ಪತ್ತೆ ಮಾಡಿದ್ದಾರೆ.

    ಗೌರಿಬಿದನೂರು ತಾಲೂಕು ಹುದುಗೂರು ಗ್ರಾಮದ ಬಳಿ ಇಂಡಿಕಾ ಕಾರು ತಪಾಸಣೆ ವೇಳೆ ನಗದು ಪತ್ತೆಯಾಗಿದೆ. ನಂತರ ಪೊಲೀಸರು ಚುನಾವಣಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಗಳು 20 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

    ಕಾರಿನಲ್ಲಿದ್ದವರು ಈ ನಗದು ಬ್ಯಾಂಕಿಗೆ ಕಟ್ಟಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲಾತಿ ನೀಡಿಲ್ಲ. ಹೀಗಾಗಿ ದಾಖಲಾತಿ ಕೊಟ್ಟು ಹಣ ಪಡೆದುಕೊಂಡು ಹೋಗುವಂತೆ ಚುನಾವಣಾಧಿಕಾರಿಗಳು ಸೂಚನೆ ನೀಡಿದ್ದಾರೆ.

  • ಕೊಡಗಿನಲ್ಲಿ 28 ಲಕ್ಷ ಮೌಲ್ಯದ ಮದ್ಯ, 6.31 ಲಕ್ಷ ರೂ. ನಗದು ವಶ

    ಕೊಡಗಿನಲ್ಲಿ 28 ಲಕ್ಷ ಮೌಲ್ಯದ ಮದ್ಯ, 6.31 ಲಕ್ಷ ರೂ. ನಗದು ವಶ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಡೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.31 ಲಕ್ಷ ರೂ. ನಗದು ಮತ್ತು 28 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.

    ಕೊಡಗು ಅಬಕಾರಿ ಇಲಾಖೆಯೂ ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಮಹಾರಾಷ್ಟ್ರದ ಮದ್ಯ ವಶ ಪಡಿಸಿಕೊಂಡಿದ್ದಾರೆ. ಮೈಸೂರಿಂದ ವಯನಾಡಿಗೆ ಲಾರಿಯಲ್ಲಿ ಮದ್ಯವನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದ ಮೇರೆಗೆ ಕೊಡಗು ಜಿಲ್ಲೆಯ ಪೆರುಂಬಾಡಿ ಬಳಿ ಕೊಡಗು ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮದ್ಯ ಪತ್ತೆಯಾಗಿದೆ.

    28 ಲಕ್ಷ ಮೌಲ್ಯದ ಮದ್ಯ, ಲಾರಿ ಮತ್ತು ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕುಶಾಲನಗರದಲ್ಲಿ ಕೇರಳ ನೋಂದಣಿಯ ಜೀಪ್‍ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6 ಲಕ್ಷ ನಗದು ಪತ್ತೆಯಾಗಿದೆ.

    ಕೊಪ್ಪ ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸುವಾಗ ಈ ಹಣ ಪತ್ತೆಯಾಗಿದೆ. ಕೇರಳ ಮೂಲದ ಜೀವನ್ ಹಾಗೂ ಸಂತೋಷ್ ಬಳಿ ಹಣ ಪತ್ತೆಯಾಗಿದೆ. ಸದ್ಯಕ್ಕೆ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್ ಅವರು 6,31,050 ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಜವರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬೆಂಗ್ಳೂರಿನಲ್ಲಿ 500, 1 ಸಾವಿರ ಮುಖಬೆಲೆಯ 1 ಕೋಟಿ ಹಣ ವಶ

    ಬೆಂಗ್ಳೂರಿನಲ್ಲಿ 500, 1 ಸಾವಿರ ಮುಖಬೆಲೆಯ 1 ಕೋಟಿ ಹಣ ವಶ

    ಬೆಂಗಳೂರು: 500 ರೂ. ಮತ್ತು 100 ಮುಖಬೆಲೆ ಹಳೆ ನೋಟು ಬ್ಯಾನ್ ಆಗಿ ಎರಡು ವರ್ಷ ಕಳೆದರೂ ಸಿಲಿಕಾನ್ ಸಿಟಿಯಲ್ಲಿ ಬ್ಲಾಕ್ ಅಂಡ್ ವೈಟ್ ದಂಧೆ ಇನ್ನೂ ನಿಂತಿಲ್ಲ.

    ನಗರದಲ್ಲಿ ಹಳೆಯ ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತನೆ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರ ಬಳಿಕ ಇದ್ದ ಬರೋಬ್ಬರಿ ಒಂದು ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಒಂದು ಕೋಟಿ ಪೂರ್ತಿ ಹಳೆಯ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳಾಗಿವೆ. ಆರೋಪಿಗಳು ಮತ್ತೆ ಅದೇ ನೋಟುಗಳ ಚಲಾವಣೆಗೆ ಬರುತ್ತೆ ಎಂದು ಜನರಿಗೆ ವಂಚನೆ ಮಾಡುತ್ತಿದ್ದರು.

    ವಂಚನೆ ಹೇಗೆ?
    ಆರೋಪಿಗಳ ಗ್ಯಾಂಗ್ ಮತ್ತೆ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬರುತ್ತವೆ ಎಂದು ಮೊದಲು ಹೇಳಿ ಸಾರ್ವಜನಿಕರನ್ನು ನಂಬಿಸುತ್ತಿದ್ದರು. ನೀವು ನಮಗೆ 25 ಲಕ್ಷ ರೂ. ಹಣವನ್ನು ಕೊಡಿ. ನಾವು ನಿಮಗೆ 1 ಕೋಟಿ ಹಳೆಯ ನೋಟನ್ನು ಕೊಡುತ್ತೇವೆ. ಮುಂದಿನ ಸರ್ಕಾರದಲ್ಲಿ ಹಳೆಯ ನೋಟು ಚಲಾವಣೆಗೆ ಬಂದಾಗ ನಿಮಗೆ 75 ಲಕ್ಷ ರೂ. ಲಾಭವಾಗುತ್ತದೆ ಎಂದು ಹೇಳುವ ಮೂಲಕ ತಮ್ಮ ಬಳಿ ಇದ್ದ ಹಳೆಯ ನೋಟನ್ನು ಬದಲಾವಣೆ ಮಾಡಲು ಮುಂದಾಗಿದ್ದರು.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇಂದು ವಿನೋದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಹಣ ಎಲ್ಲಿಂದ ಬಂದಿದ್ದು, ಯಾರಿಗಾಗಿ ಹಳೆ ನೋಟು ಬದಲಾವಣೆ ಮಾಡುತ್ತಿದ್ದೀರ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ದಾಖಲೆ ಇಲ್ಲದೆ ಹಣ ಒಯ್ಯುವಾಗ ಹುಷಾರ್ – ರಾಜ್ಯಾದ್ಯಂತ ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಅಲರ್ಟ್

    ದಾಖಲೆ ಇಲ್ಲದೆ ಹಣ ಒಯ್ಯುವಾಗ ಹುಷಾರ್ – ರಾಜ್ಯಾದ್ಯಂತ ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಅಲರ್ಟ್

    – ಲಕ್ಷಾಂತರ ರೂಪಾಯಿ ನಗದು, ಮದ್ಯ ಸೀಜ್

    ಬೆಂಗಳೂರು: ರಾಜ್ಯದೆಲ್ಲೆಡೆ ದಾಖಲೆಯಿಲ್ಲದ ಹಣ ಸಾಗಾಟ ನಡೆಯುತ್ತಿದ್ದ ಪರಿಣಾಮ ಚೆಕ್‍ಪೋಸ್ಟ್ ಗಳಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

    ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದಾಖಲೆ ಇಲ್ಲದೆ ಹಣ ಸಾಗಾಣಿಕೆಗೆ ಯತ್ನಿಸುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ಹಣವನ್ನು ಜಪ್ತಿ ಮಾಡಲಾಗಿದೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು 20 ಲಕ್ಷ ರೂಪಾಯಿಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಜಗದೀಶ್ ಗುರುಗುಂಟ, ನಾಗಪ್ಪ ಸನದೆ ಮತ್ತು ದೇವನ್ ಅಪ್ಪಾ ಸಾಹೇಬ್ ದೇಸಾಯಿ ಅವರಿಗೆ ಸೇರಿದ್ದ ಹಣ ಎನ್ನಲಾಗಿದೆ. ದಾಖಲೆ ಇಲ್ಲದೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ. ತಹಶೀಲ್ದಾರ್ ಶಶಿಧರ್ ಮಾಡ್ಯಾಳ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಈ ಹಣ ಯಾರದ್ದು, ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

    ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಬೆಳ್ಳಿ ಹಾಗೂ ಬಂಗಾರದ ಒಡವೆಗಳನ್ನು ದಾವಣಗೆರೆಯಲ್ಲಿ ಫ್ಲೇಯಿಂಗ್ ಸ್ಕ್ವಾಡ್ ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಗರದ ರಿಲಯನ್ಸ್ ಮಾರ್ಕೆಟ್ ಬಳಿ ಹೊಸಪೇಟೆ ಮೂಲದ ಏಂ 35-ಓ-7446 ನಂಬರ್ ಕಾರಿನಲ್ಲಿ ಸಾಗಿಸುತ್ತಿದ್ದ 10 ಕೆಜಿ ಬೆಳ್ಳಿ ಆಭರಣ, 650 ಗ್ರಾಂ ಬಂಗಾರದ ಮೂಗುತಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್.ಪಿ ಚೇತನ್ ರವರ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥ ಸಾಹಿಲ್ ಅಬ್ದುಲ್ ಬಾಷಾ ನೇತೃತ್ವದಲ್ಲಿ ಕಾರ್ ಪರಿಶೀಲನೆ ನಡೆಸಿದಾಗ ದಾಖಲೆ ಇಲ್ಲದೆ ಬೆಳ್ಳಿ ಹಾಗೂ ಚಿನ್ನಾಭರಣಗಳು ಪತ್ತೆಯಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರು, ಆಭರಣ ಹಾಗೂ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಅಪಾರ ಪ್ರಮಾಣದ ಆಭರಣಗಳನ್ನು ತಂದು ಅಭ್ಯರ್ಥಿಗಳಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

    ಬೀದರ್‍ನಲ್ಲಿ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಮದ್ಯವನ್ನು ಜಪ್ತಿ ಮಾಡಿದ್ದಾರೆ. ವಿದೇಶಿ ಬ್ರ್ಯಾಂಡ್‍ನ 1300 ಮದ್ಯ ಬಾಟಲ್‍ಗಳನ್ನು ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಚಂಡಕಾಪೂರ್ ಚಕ್ ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಒಟ್ಟು 54 ಲಕ್ಷ ಮೌಲ್ಯದ ಮದ್ಯ ಹಾಗೂ 2 ಕಾರನ್ನು ವಶಕ್ಕೆ ಪಡೆದಿದ್ದು, ಜೊತೆಗೆ ಇಬ್ಬರು ಆರೋಪಿಗನ್ನು ಅಬಕಾರಿ ಪೊಲಿಸರು ವಶಕ್ಕೆ ಪಡೆದಿದ್ದಾರೆ.

    ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರದ ಆಚಮಟ್ಟಿ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ 76,22 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ನರಗುಂದ ತಹಶೀಲ್ದಾರ್ ಆಶಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಹಾಸನದಿಂದ ಗೋಕಾಕ್‍ಗೆ ಮದ್ಯವನ್ನು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. 1,700 ಬಾಕ್ಸ್ ಮದ್ಯವನ್ನು ವಶಕ್ಕೆ ಪಡೆದು ಗದಗಕ್ಕೆ ಅಧಿಕಾರಿಗಳು ಕಳುಹಿಸಿದ್ದಾರೆ.

    ರಾಯಚೂರಿನಲ್ಲಿ ತೆಲಂಗಾಣದಿಂದ ಅಕ್ರಮವಾಗಿ ಸಾಗಣೆಯಾಗುವ ಮದ್ಯ ಹಾಗೂ ಕಲಬೆರಕೆ ಸೇಂದಿ ದಂಧೆಯ ನಿಯಂತ್ರಣಕ್ಕೆ ಅಂತರ್ ರಾಜ್ಯ ಪೊಲೀಸರು ಪಣತೊಟ್ಟು ನಿಂತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಐದು ಗಡಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಒಟ್ಟಾಗಿ ಗಡಿಭಾಗದಲ್ಲಿ ಅಕ್ರಮ ಸಾಗಾಣೆ ನಿಯಂತ್ರಣಕ್ಕೆ ಶಿಸ್ತು ಕ್ರಮ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಹನ ತಪಾಸಣೆ ವೇಳೆ 1.70 ಕೋಟಿ ಹಣ ಪತ್ತೆ

    ವಾಹನ ತಪಾಸಣೆ ವೇಳೆ 1.70 ಕೋಟಿ ಹಣ ಪತ್ತೆ

    ಚತ್ತೀಸ್‍ಗಢ: ಪ್ರತಿದಿನ ವಾಹನಗಳ ತಪಾಸಣೆ ವೇಳೆ ಪೊಲೀಸರು ರಾಯ್ಪುರದಲ್ಲಿ ಬರೋಬ್ಬರಿ 1.70 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

    ವಾಹನವೊಂದರಲ್ಲಿ ಹಣ ಸಾಗಾಣೆ ಮಾಡುತ್ತಿದ್ದರು. ಈ ವೇಳೆ ರಾಯ್ಪುರದಲ್ಲಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಹಣ ಪತ್ತೆಯಾಗಿದೆ. ಈ ಸಂಬಂಧ ಹವಾಲಾ ನೆಟ್ವರ್ಕ್ ಮೂಲಕ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಬಂಧಿತರು ಹವಾಲಾ ದಂಧೆ ಮೂಲಕ ತಾವೂ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಗುಜರಾತ್‍ನ ಚೇತನ್ ಭಾಯ್ ಸೂಚನೆ ಮೇರೆಗೆ ಈ ಹಣವನ್ನು ಸಾಗಾಣೆ ಮಾಡುತ್ತಿದ್ದೇವೆ ಎಂದು ತಿಳಿಸಿರುವುದಾಗಿ ರಾಯ್‍ಪುರ್ ಎಸ್‍ಪಿ ಪ್ರಫೂಲ್ ಠಾಕೂರ್ ಹೇಳಿದ್ದಾರೆ.

    ಬಂಧಿತ ಆರೋಪಿಗಳು ಗುಜರಾತ್‍ನ ಪರ್ಟರ್ ಪ್ರದೇಶದವರಾಗಿದ್ದು, ದೇವೇಂದ್ರ ನಗರ ವಲಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಈ ಕೆಲಸ ಮಾಡಲು ತಿಂಗಳ ವೇತನ ಮತ್ತು ಕಮಿಷನ್ ಕೂಡ ನೀಡಲಾಗುತ್ತಿದೆ ಎಂದು ಠಾಕೂರ್ ತಿಳಿಸಿದ್ದಾರೆ.

    ಆರೋಪಿಗಳು ತನ್ನ ಮನೆಯ ವಿಳಾಸ ಹೇಳಿದ ಬಳಿಕ ಅಲ್ಲಿ ಕೂಡ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ನೋಟ್ ಕೌಟಿಂಗ್ ಯಂತ್ರ ಮತ್ತು 1.35 ಲಕ್ಷ ರೂ. ಹಣ ಸಿಕ್ಕಿದೆ. ಸದ್ಯಕ್ಕೆ ತೆರಿಗೆ ಇಲಾಖೆಯ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋಕರ್ಣದಲ್ಲಿ ರೇವ್ ಪಾರ್ಟಿ- ವಿದೇಶಿಗರು ಸೇರಿ ಮೂವರ ಬಂಧನ!

    ಗೋಕರ್ಣದಲ್ಲಿ ರೇವ್ ಪಾರ್ಟಿ- ವಿದೇಶಿಗರು ಸೇರಿ ಮೂವರ ಬಂಧನ!

    ಕಾರವಾರ: ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ವಿದೇಶಿಗರು ಸೇರಿ ಮೂವರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ನಡೆದಿದೆ.

    ಅರಣ್ಯದಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮಾದಕವಸ್ತುಗಳಾದ ಚರಸ್ ಹಾಗೂ ಕೆಟೋಮಿನ್ ಇಟ್ಟುಕೊಂಡಿದ್ದ ಇಸ್ರೇಲ್ ಮೂಲದ ಗೆಲ್‍ಸೆಲ್ ಮನ್(30), ಪಿಂಟೋ(30) ಹಾಗೂ ಕಾಸರಗೋಡು ಮೂಲದ ಗೋಕರ್ಣದ ರೆಗ್ಯುಲರ್ ರೆಸಾರ್ಟ್ ನಲ್ಲಿ ಕೆಲಸ ಮಾಡುವ ಇರ್ಫಾನ್ ಎಂಬವರನ್ನು ಬಂಧನ ಮಾಡಲಾಗಿದೆ.

    ಕುಡ್ಲೆ ಕಡಲ ತೀರದ ರೆಗ್ಯೂಲಸ್ ರೆಸಾರ್ಟ್ ಹಾಗೂ ಅರಣ್ಯವೊಂದರಲ್ಲಿ ಪಾರ್ಟಿ ನಡೆಸಲಾಗುತಿತ್ತು. ರಾತ್ರಿ ವೇಳೆ ನಡೆಸುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆಸಲಾಗಿದೆ. ಈ ಪಾರ್ಟಿಯಲ್ಲಿ ಮಾದಕದ್ರವ್ಯ ಹಾಗೂ ಮಾದಕ ವಸ್ತುಗಳನ್ನ ಬಳಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.

    ಎರಡು ಕಡೆ ಪಾರ್ಟಿಯಲ್ಲಿ ಬಳಸಿದ್ದ ಮದ್ಯ, ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಸೌಂಡ್ ಸಿಸ್ಟಮ್ ಗಳನ್ನ ವಶಕ್ಕೆ ಸಹ ಪಡೆಯಲಾಗಿದೆ. ಗೋಕರ್ಣದ ಸಿಪಿಐ ಸಂತೋಷ್ ಶಟ್ಟಿ, ಪಿ.ಎಸ್,ಐ ಸಂತೋಷ್, ಅಂಕೋಲದ ಪಿಎಸ್‍ಐ ನೇತೃತ್ವದಲ್ಲಿ ದಾಳಿ ನಡೆದಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸ್ಸಿನಲ್ಲಿ ಸುಮಾರು 40 ಕೆ.ಜಿಯ 700 ಬೆಳ್ಳಿ ದೀಪಗಳು ವಶ

    ಬಸ್ಸಿನಲ್ಲಿ ಸುಮಾರು 40 ಕೆ.ಜಿಯ 700 ಬೆಳ್ಳಿ ದೀಪಗಳು ವಶ

    ಬೆಂಗಳೂರು: ಐರಾವತ ಕ್ಲಬ್ ಕ್ಲಾಸ್ ಬಸ್ಸಿನಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 15 ಲಕ್ಷ ಮೌಲ್ಯದ ಬೆಳ್ಳಿ ದೀಪಗಳನ್ನು ವಶಕ್ಕೆ ಪಡೆಯಲಾಗಿದೆ.

    ಕೆಎಸ್‍ಆರ್ ಟಿಸಿ ವಿಶೇಷ ತನಿಖಾ ದಳ ಬೆಳ್ಳಿ ದೀಪಗಳನ್ನ ವಶಕ್ಕೆ ಪಡಿಸಿಕೊಂಡಿದೆ. ಬಸ್ ಡ್ರೈವರ್ ಮತ್ತು ಕಂಡಕ್ಟರ್ ಐರಾವತ ಕ್ಲಬ್ ಕ್ಲಾಸ್ ಬಸ್ಸಿನಲ್ಲಿ ಕರ್ನಾಟಕದಿಂದ ಆಂಧ್ರಗೆ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಕೆಎಸ್‍ಆರ್ ಟಿಸಿ ತನಿಖಾ ಸಿಬ್ಬಂದಿ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಹೊಸಕೋಟೆ ಬಳಿಯ ಟೋಲ್‍ನಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಸ್ಸಿನ ಡಿಕ್ಕಿಯಲ್ಲಿ ನಾಲ್ಕು ಬ್ಯಾಗ್ ನಲ್ಲಿ ಸುಮಾರು 40 ಕೆ.ಜಿ ತೂಕದ 700 ಬೆಳ್ಳಿ ದೀಪಗಳು ಪತ್ತೆಯಾಗಿವೆ. ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 15 ಲಕ್ಷ ರೂಪಾಯಿ ಎಂದು ವರದಿಯಾಗಿದೆ.

    ಈ ಘಟನೆ ಸಂಬಂಧ ಕೆಎಸ್‍ಆರ್ ಟಿಸಿಯ ಐರಾವತ ಕ್ಲಬ್ ಕ್ಲಾಸ್ ಬಸ್ ಚಾಲಕ, ನಿರ್ವಾಹಕನನ್ನು ಅಮಾನತು ಮಾಡಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಈ ಸಂಬಂಧ ತನಿಖೆಯನ್ನ ಮುಂದುವರಿಸಿದ್ದಾರೆ. ಸದ್ಯ ವಶಪಡಿಸಿಕೊಂಡಿದ್ದ ದೀಪಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಪತ್ತೆ- ಮೂವರ ಬಂಧನ

    ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಪತ್ತೆ- ಮೂವರ ಬಂಧನ

    – ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 4.4 ಕೆಜಿ ಬಂಗಾರ ವಶ

    ಚಿಕ್ಕಬಳ್ಳಾಪುರ: ಏರ್ ಇಂಟಲಿಜೆನ್ಸಿ ಕಸ್ಟಮ್ಸ್ ಆಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ ಬರೋಬ್ಬರಿ 4.4 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಒಟ್ಟು 1.45 ಕೋಟಿ ರೂ. ಮೌಲ್ಯದ 4.4 ಕೆಜಿ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಧಿಕಾರಿಗಳು ಏರ್ ಪೋರ್ಟ್ ನಲ್ಲಿ ಶೋಧಕಾರ್ಯ ಮಾಡುವಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಪತ್ತೆಯಾಗಿದೆ. ಈಕೆ ಸುಡಾನ್ ದೇಶದವಳಾಗಿದ್ದು, ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಇತ್ತ ಜರ್ಮನ್ ಪಾಸ್ ಪೋರ್ಟ್ ಹೊಂದಿದ್ದ ವ್ಯಕ್ತಿಯ ಶಾರ್ಟ್ಸ್ ನಲ್ಲಿ 1.4 ಕೆ.ಜಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. ಇನ್ನು ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಬಂದ ವಿಮಾನದ ಸೀಟಿನ ಕೆಳಗೆ 1.2 ಕೆ.ಜಿ. ಚಿನ್ನ ಪತ್ತೆಯಾಗಿದೆ.

    ಗುದದ್ವಾರದದಲ್ಲಿ ಚಿನ್ನ ಸಾಗಿಸಿದ್ದ ಕೇರಳ ಮೂಲದ ವ್ಯಕ್ತಿಯಿಂದ 500 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮೂವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಣ ವರ್ಗಾವಣೆ ಮಾಡಲು ಹೋದಾಗ ಸಿಕ್ಕಿಬಿದ್ದ- ಬರೋಬ್ಬರಿ 1.65 ಕೋಟಿ ರೂ. ವಶ

    ಹಣ ವರ್ಗಾವಣೆ ಮಾಡಲು ಹೋದಾಗ ಸಿಕ್ಕಿಬಿದ್ದ- ಬರೋಬ್ಬರಿ 1.65 ಕೋಟಿ ರೂ. ವಶ

    ಹೈದರಾಬಾದ್: ಅಕ್ರಮ ಹಣ ವರ್ಗಾವಣೆ ಮಾಡು ತೆರಳುತ್ತಿದ್ದಾಗ ಸಿಕ್ಕಿಬಿದ್ದಿದ್ದರಿಂದ ಚೈತನ್ಯಪುರಿ ಪೊಲೀಸ್ ಮತ್ತು ಎಲ್.ಬಿ. ನಗರ ಸ್ಪಷೆಲ್ ಕಾರ್ಯಾಚರಣೆ ತಂಡವು ಇಬ್ಬರನ್ನು ಬಂಧಿಸಿದೆ. ಜೊತೆಗೆ ಅವರ ಬಳಿ ಇದ್ದ 1.65 ಕೋಟಿ ರೂ. ನಗದು ಮತ್ತು ಎರಡು ಕಾರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಬಂಧಿತರನ್ನು ಕೋತಪೇಟ್ ನಿವಾಸಿ ಟಿ. ವೆಂಕಟ ಶಿವ ಮಹೇಶ್ವರ ರಾವ್ ಮತ್ತು ಕುಕಟ್ಪಲ್ಲಿಯ ಎಸ್. ವೆಂಕಟೇಶ್ವರ ರಾವ್ ಎಂದು ಗುರುತಿಸಲಾಗಿದೆ. ಬಂಧಿತರು ಅಕ್ರಮ ಹಣ ವರ್ಗಾವಣೆ ಮಾಡುವ ಏಜೆಂಟ್‍ರನ್ನು ಭೇಟಿ ಮಾಡಲು ಬಂದಿದ್ದಾರೆ. ಆಗ ಅಕ್ರಮ ವರ್ಗಾವಣೆಯ ಕೆಲಸದಿಂದ ಲಾಭವಿದೆ ಎಂದು ತಿಳಿದುಕೊಂಡು ನಂತರ ಅವರು ಕೂಡ ಅದೇ ಕೆಲಸಕ್ಕೆ ಸೇರಿಕೊಂಡಿದ್ದಾರೆ.

    ಕಾರ್ಯಾಚರಣೆ ತಂಡವು ಕೊಥೆಪೆಟ್ ನಲ್ಲಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಸೂರ್ಯ ಮಿತ್ರ ಟ್ರೇಡರ್ಸ್ ಎಕ್ಸ್ ಪೋರ್ಟ್ಸ್ ಮಾಲೀಕ ಮಹೇಶ್ವರ ರಾವ್ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತ ತನ್ನ ಗೆಳೆಯ ಸತ್ಯನಾರಾಯಣ ಎಂಬಾತ 1 ಕೋಟಿ ರೂ. ಹಣ ಹೊಂದಿಸಿಕೊಡುವಂತೆ ಹೇಳಿದ್ದಾನೆ. ಅಲ್ಲದೇ ಆ ಹಣವನ್ನು ಮತ್ತೆ ನಿನಗೆ ಬೇರೆ ಬೇರೆ ಖಾತೆಗಳ ಮೂಲಕ ವಾಪಸ್ ಮಾಡುವುದಾಗಿ ಹೇಳಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ.

    ಸ್ನೇಹಿತ ಕೇಳಿದ್ದಕ್ಕೆ ಸದ್ಯ 85 ಲಕ್ಷ ಹಣ ಹೊಂದಿಸಿಕೊಂಡು ರಾವ್, ತನ್ನ ಕಾರಿನಲ್ಲಿ ದಿಲ್ ಸುಖ್ ನಗರದತ್ತ ಹೊರಟಾಗ ಸ್ಪೆಷಲ್ ಕಾರ್ಯಾಚರಣಾ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆತನ ಕೈಯಿಂದ ನಗದು ವಶಪಡಿಸಿಕೊಂಡಿರೋ ತಂಡ ತನಿಖೆ ಮುಂದುವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv