Tag: ವಶೀಕರಣ

  • ಬೈಕ್‍ಗೆ ದೆವ್ವ ಹಿಡಿದಿದೆ ಅಂದ್ಳು- ಚಿತ್ರ, ವಿಚಿತ್ರ ಪೂಜೆ ಮಾಡಿ ವಶೀಕರಿಸಿಕೊಂಡ್ಳು

    ಬೈಕ್‍ಗೆ ದೆವ್ವ ಹಿಡಿದಿದೆ ಅಂದ್ಳು- ಚಿತ್ರ, ವಿಚಿತ್ರ ಪೂಜೆ ಮಾಡಿ ವಶೀಕರಿಸಿಕೊಂಡ್ಳು

    – ದಾವಣಗೆರೆಯಲ್ಲಿ ಹುಣ್ಣಿಮೆ ದಿನ ಜೋಗಮ್ಮನ ಜಾದು

    ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಮಾಟ ಮಂತ್ರ, ವಶೀಕರಣವನ್ನು ಅಷ್ಟಾಗಿ ಯಾರೂ ನಂಬಲ್ಲ. ಆದರೂ ಇಲ್ಲೊಂದು ಕಡೆ ಅಮವಾಸ್ಯೆ ಹುಣ್ಣಿಮೆ ದಿನದಂದು ವಶೀಕರಣ ನಡೆಯುತ್ತದೆ. ಶ್ರೀಮಂತ ಯುವಕರೇ ಇವರ ಟಾರ್ಗೆಟ್ ಆಗಿದೆ.

    ದಾವಣಗೆರೆಯ ನಿಟ್ಟುವಳ್ಳಿ ನಿವಾಸಿ ಬಸವಯ್ಯ ಅವರು ನಮ್ಮ ಮಗನನ್ನು ಬಿಟ್ಟು ಬಿಡು ಎಂದು ಜೋಗಮ್ಮನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಹಲವು ವರ್ಷಗಳಿಂದ ಮಕ್ಕಳ ಜೊತೆ ಸುಖವಾಗಿ ಜೀವನ ನಡೆಸುತ್ತಿದ್ದರು. ಇವರ ಎರಡನೇ ಮಗ ಮಿಥುನ್ ಚಕ್ರವರ್ತಿ ಕೆಇಬಿಯಲ್ಲಿ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಕೆಲ ತಿಂಗಳ ಹಿಂದೆ ನಗರದ ಯರಗುಂಟೆ ಬಳಿ ಯಾವುದೋ ಕಾಂಟ್ಯ್ರಾಕ್ಟ್ ಕೆಲಸಕ್ಕೆ ಹೋಗಿದ್ದನು. ಅಲ್ಲಿಯೇ ಶಕುಂತಲಾ ಎನ್ನುವ ಜೋಗಮ್ಮ ಪರಿಚಯವಾಗಿ ನಿನ್ನ ಪಲ್ಸರ್ ಬೈಕ್‍ಗೆ ದೆವ್ವ ಹಿಡಿದಿದೆ. ನಾನು-ನೀನು ಕಳೆದ ಜನ್ಮದಲ್ಲಿ ಹಾವುಗಳಾಗಿದ್ವಿ ಆ ದೋಷ ಹೋಗಬೇಕು ಎಂದರೆ ಪೂಜೆ ಮಾಡಬೇಕು ಎಂದು ಹೇಳಿ ಪೂಜೆ ಮಾಡಿಸಿ ವಶೀಕರಣ ಮಾಡಿಕೊಂಡಿದ್ದಾರೆ.

    ಎಷ್ಟರ ಮಟ್ಟಿಗೆ ಎಂದರೆ ಪೋಷಕರು ಹೋಗಿ ಮಿಥುನ್‍ನನ್ನು ಕರೆದರೆ, ಅವರನ್ನು ಹೊಡೆದು ಹೊರ ಹಾಕುವಷ್ಟೂ ವಶೀಕರಣ ಮಾಡಿಕೊಂಡಿದ್ದಾಳೆ. ಇದರಿಂದ ಮಿಥುನ್ ಚಕ್ರವರ್ತಿಯ ಪೋಷಕರು ಆಕೆಯನ್ನು ಆಕೆಯ ಜೊತೆಗಿದ್ದ ವ್ಯಕ್ತಿಯನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

    ಮಿಥುನ್‍ಗೆ ಜೋಗಮ್ಮ ಪರಿಚಯವಾದಾಗಿನಿಂದ ವಿಚಿತ್ರವಾಗಿ ವರ್ತಿಸಲು ಶುರುಮಾಡಿಕೊಂಡಿದ್ದಾನೆ. ಅಮವಾಸ್ಯೆ, ಹುಣ್ಣಿಮೆಯ ದಿನ ಚಿತ್ರ ವಿಚಿತ್ರವಾದ ಪೂಜೆ ಮಾಡುತ್ತಿದ್ದನು. ಹೊಸದಾಗಿ ತೆಗೆದುಕೊಂಡ ಪಲ್ಸರ್ ಬೈಕ್ ಯರಗುಂಟೆಯಲ್ಲಿರುವ ಜೋಗಮ್ಮನ ಮನೆಯ ಮುಂದೆಯೇ ನಿಲ್ಲಿಸಿ ಸ್ನೇಹಿತರ ಬೈಕ್‍ನಲ್ಲಿ ಓಡಾಡುತ್ತಿದ್ದನು. ತಮ್ಮ ಮಗನನ್ನು ಬಿಡಿಸಿಕೊಡಿ ಎಂದು ಪೋಷಕರು ಬೇಡಿಕೊಂಡ್ರು ಯಾವುದೇ ಪ್ರಯೋಜನವಾಗಿಲ್ಲ ಎಂದು ಯುವಕನ ಸ್ನೇಹಿತ ಬಾಬು ಹೇಳಿದ್ದಾರೆ.

    ಒಟ್ಟಿನಲ್ಲಿ ಆಧುನಿಕ ಯುಗದಲ್ಲಿ ಇಂತಹ ಘಟನೆಗಳು ನಂಬಲು ಸಾಧ್ಯವಾಗದಿದ್ದರೂ ಇಲ್ಲಿನ ಪರಿಸ್ಥಿತಿ ನೋಡಿದರೆ ಆ ಜೋಗಮ್ಮ ಯಾವ ರೀತಿ ಯುವಕನ ತಲೆ ಕೆಡೆಸಿದ್ದಾರೆ ಎನ್ನುವುದು ತಿಳಿದುಬರುತ್ತದೆ. ಈಗಲಾದರೂ ಸಂಬಂಧಪಟ್ಟವರು ಇವರ ಸಮಸ್ಯೆಯನ್ನು ನಿವಾರಿಸಿ ಎಂದು ಯುವಕನ ಪೋಷಕರು ಅಂಗಲಾಚುತ್ತಿದ್ದಾರೆ.

  • ಮಕ್ಳಾಗಿಲ್ಲ ಅಂದ್ರೆ ದೆವ್ವ ಮೆಟ್ಕೊಂಡಿದೆ ಅಂತಾನೆ- ವಶೀಕರಣ ಮಾಡಿ ವಂಚಿಸ್ತಾನೆ ಕಳ್ ಸ್ವಾಮಿ

    ಮಕ್ಳಾಗಿಲ್ಲ ಅಂದ್ರೆ ದೆವ್ವ ಮೆಟ್ಕೊಂಡಿದೆ ಅಂತಾನೆ- ವಶೀಕರಣ ಮಾಡಿ ವಂಚಿಸ್ತಾನೆ ಕಳ್ ಸ್ವಾಮಿ

    – ಛಾಟಿಯೇಟು ಕೊಟ್ಟು ಮಹಿಳೆಯರಿಗೆ ಚಿತ್ರಹಿಂಸೆ

    ಕೋಲಾರ: ಆತ ಖ್ಯಾತ ಜ್ಯೋತಿಷಿಯೂ ಅಲ್ಲ, ಮಂತ್ರ- ತಂತ್ರ ಗೊತ್ತಿರುವ ಕೊಳ್ಳೆಗಾಲದ ಸ್ವಾಮೀಜಿನೂ ಅಲ್ಲ. ಆದರೂ ದಿಢೀರ್‌ನೆ ದೆವ್ವ ಬಿಡಿಸೋ ಶಕ್ತಿ ಇರೋ ಕಳ್ಳ ಸ್ವಾಮಿ. ಅಮಾಯಕ ಹೆಣ್ಣು ಮಕ್ಕಳಿಗೆ ದೆವ್ವ ಮೈಮೇಲೆ ಇದೆ ಎಂದು ಹೊಡೆದು, ಬಡೆದು ಚಿತ್ರ ಹಿಂಸೆ ಕೊಟ್ಟು ಕೋಲಾರದ ಸ್ವಘೋಷಿತ ಸ್ವಾಮೀಜಿಯೋರ್ವ ಕಾಟ ಕೊಟ್ಟಿದ್ದಾನೆ.

    ಕೋಲಾರ ತಾಲೂಕಿನ ಅಬ್ಬಣಿ ಗ್ರಾಮದ ಕಾಳಿಕಾಂಬ ದೇವಾಲಯದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಈ ರೀತಿ ಮಹಿಳೆಯರಿಗೆ ಚಿತ್ರಹಿಂಸೆ ಕೊಡುತ್ತಿದ್ದಾನೆ. ಮಹಿಳೆಯರ ಮೇಲೆ ದೆವ್ವ ಬಂದಿದೆ ಅಂತ ಮನಸ್ಸೋ ಇಚ್ಛೆ ಛಾಟಿಯಿಂದ ಹೊಡೆಯೋದಕ್ಕೆನೇ ಈ ಮಲ್ಲಿಕಾರ್ಜುನ ಸ್ವಾಮೀಜಿ ಫೇಮಸ್. ದೆವ್ವ ಬಿಡಿಸುವ ನೆಪದಲ್ಲಿ ಈತ ಮಹಿಳೆಯನ್ನ ಛಾಟಿಯಿಂದ ಹೊಡೆದು ಮಾನಸಿಕ, ದೈಹಿಕವಾಗಿ ಚಿತ್ರಹಿಂಸೆ ಕೊಡುತ್ತಾನೆ.

    ಈ ಮಲ್ಲಿಕಾರ್ಜುನ ಸ್ವಾಮೀಜಿ ಸ್ವಯಂ ಘೋಷಿತ ಸ್ವಾಮೀಜಿಯಾಗಿದ್ದು, ಇತ್ತೀಚೆಗೆ ಅಬ್ಬಣಿಯಲ್ಲಿ ಕಾಳಿಕಾಂಬ ದೇವಾಲಯವನ್ನು ನಿರ್ಮಿಸಿಕೊಂಡಿದ್ದಾನೆ. ತನ್ನ ಬಳಿ ಬರುವ ಮಹಿಳೆಯರಿಗೆ ದೆವ್ವ ಬಿಡಿಸುವ ಕೆಲಸ ಮಾಡುತ್ತಾನೆ. ಮಕ್ಕಳಾಗಿಲ್ಲ ಎಂದು ದೇವರಿಗೆ ಹರಕೆ ಹೊತ್ತು ಬರುವ ಭಕ್ತಾದಿಗಳ ಬಳಿ ನಿಮಗೆ ದೆವ್ವ ಹಿಡಿದಿದೆ, ಅದನ್ನು ಹೋಗಿಸಬೇಕು. ಆಗ ಮಾತ್ರ ನಿಮಗೆ ಒಳ್ಳೆಯದಾಗುತ್ತೆ ಎಂದು ಛಾಟಿಯಿಂದ ಮನಸ್ಸೋ ಇಚ್ಛೆ ಹೊಡೆಯುತ್ತಾನೆ.

    ಮಲ್ಲಿಸ್ವಾಮಿ ದೇಗುಲಕ್ಕೆ ಬಂದ ಮಹಿಳೆಯರಿಗೆ ಛಾಟಿಯಲ್ಲಿ ಹೊಡೆಯುವ ದೃಶ್ಯಗಳು ಪಬ್ಲಿಕ್ ಟಿವಿಗೆ ದೊರೆತಿದೆ. ಈತ ಕಳೆದ ಕೆಲವು ವರ್ಷಗಳಿಂದ ಮಾಟ ಮಂತ್ರ-ತಂತ್ರ ಮಾಡುವುದು, ವಶೀಕರಣದ ಮೂಲಕ ಅಮಾಯಕ ಮಹಿಳೆಯರನ್ನ ವಂಚಿಸುತ್ತಿದ್ದಾನೆ. ಅಲ್ಲದೆ ತನ್ನ ಬಳಿ ಬರುವ ಮಹಿಳೆಯರಿಗೆ ಕೆಲವು ವಾಗ್ದಾನಗಳನ್ನ ನೀಡಿ ಸಂಸಾರಗಳನ್ನ ಹಾಳು ಮಾಡಿದ್ದಾನೆ. ಮಹಿಳೆಯರಿಗೆ ವಶೀಕರಣ ಆಗಿದೆ. ನೀನು ನಿನ್ನ ಗಂಡನನ್ನ ಬಿಟ್ಟು ಕೆಲವು ತಿಂಗಳು ದೂರ ಇರು ಎಂದು ಭೀತಿ ಹುಟ್ಟಿಸಿ, ಸಂಸಾರ ಒಡೆಯುತ್ತಿದ್ದಾನೆ.

    21ನೇ ಶತಮಾನದಲ್ಲೂ ಹೀಗೆ ದೆವ್ವ, ಗಾಳಿ ಎಂದು ನಂಬಿ ಇಂತಹ ಕಳ್ಳ ಸ್ವಾಮೀಜಿಗಳ ಮಾತಿಗೆ ಮಹಿಳೆಯರು ಮರಳಾಗುತ್ತಿರುವುದು ದುರಂತವೇ ಸರಿ. ದೆವ್ವ ಆದರೆ ಹೋಗು ಎಂದು ಮಹಿಳೆಯನ್ನ ಛಾಟಿಯಲ್ಲಿ ಹೊಡೆಯುವ ಮಲ್ಲಿ ಸ್ವಾಮಿಯ ಭಕ್ತರಂತೂ ಇದೇನು ಕರ್ಮ ಎನ್ನುತ್ತಿದ್ದಾರೆ.

  • ಮಹಿಳೆ ವಶೀಕರಣಕ್ಕೆ ಬಂದವರನ್ನ ಥಳಿಸಿದ ಗ್ರಾಮಸ್ಥರು

    ಮಹಿಳೆ ವಶೀಕರಣಕ್ಕೆ ಬಂದವರನ್ನ ಥಳಿಸಿದ ಗ್ರಾಮಸ್ಥರು

    ದಾವಣಗೆರೆ: ಮಹಿಳೆಯನ್ನು ವಶೀಕರಣ ಮಾಡಲು ಬಂದ ಇಬ್ಬರಿಗೆ ಗ್ರಾಮಸ್ಥರು ಥಳಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಚ್ವಂಗಿಪುರ ಗ್ರಾಮದಲ್ಲಿ ನಡೆದಿದೆ.

    ಉಚ್ವಂಗಿಪುರ ಗ್ರಾಮದ ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಎಂಬವರನ್ನು ವಶೀಕರಣ ಮಾಡಲು ಬಂದಿದ್ದೇವೆ ಎಂದು ಯುವಕರು ಹೇಳಿದ್ದಾರೆ. ಇಂದು ಗ್ರಾಮಕ್ಕೆ ಆಗಮಿಸಿದ್ದ ಮಹಿಳೆಯನ್ನು ವಶೀಕರಣ ಮಾಡಲು ಯುವಕರು ಮುಂದಾಗಿದ್ದರು. ವಿಷಯ ತಿಳಿದು ಗ್ರಾಮಸ್ಥರು ಯುವಕರನ್ನು ಹಿಡಿದು ಥಳಿಸಿದ್ದಾರೆ.

    ಗ್ರಾಮದಲ್ಲೇ ವ್ಯಕ್ತಿಯೊಬ್ಬರಿಂದ 70 ಸಾವಿರ ರೂ. ಪಡೆದು ಮಹಿಳೆಯನ್ನು ವಶೀಕರಣ ಮಾಡಲು ಬಂದಿದ್ದು, ವಶೀಕರಣ ಮಾಡಲು ಹಣ ನೀಡಿದ್ದ ವ್ಯಕ್ತಿಯ ಹೆಸರನ್ನು ಮಾತ್ರ ಯುವಕರು ಬಾಯಿ ಬಿಡುತ್ತಿಲ್ಲ. ನಾವು ವಶೀಕರಣ ಮಾಡಲು ಬಂದಿದ್ದು ಮುಂಗಡವಾಗಿ 20 ಸಾವಿರ ರೂ. ನೀಡಿದ್ದರು ಎಂದು ಒಪ್ಪಿಕೊಂಡಿದ್ದಾರೆ.

    ವಶೀಕರಣ ಮಾಡಲು ಬಂದವರು ದಾವಣಗೆರೆಯ ಗಡಿಯಾರ ಕಂಬದ ಬಳಿ ವಾಸವಾಗಿದ್ದೇವೆ ಎಂದು ಹೇಳುತ್ತಿದ್ದು, ಮಣಿಕಂಠ ಮತ್ತು ವಿವೇಕ್ ಎಂದು ಹೆಸರು ಹೇಳಿದ್ದಾರೆ. ಇಬ್ಬರನ್ನು ಬಿಳಚೋಡು ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ. ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.