Tag: ವಶಕ್ಕೆ

  • ರಾಖಿ ಸಾವಂತ್ ಪತಿ, ಮೈಸೂರು ಹುಡುಗ ಆದಿಲ್ ಪೊಲೀಸ್ ವಶಕ್ಕೆ

    ರಾಖಿ ಸಾವಂತ್ ಪತಿ, ಮೈಸೂರು ಹುಡುಗ ಆದಿಲ್ ಪೊಲೀಸ್ ವಶಕ್ಕೆ

    ನಿನ್ನೆಯಷ್ಟೇ ಪತಿ ಆದಿಲ್ ಖಾನ್ ದುರಾನಿ ( Adil Khan) ವಿರುದ್ಧ ಪೊಲೀಸ್ (Police) ಠಾಣೆಯಲ್ಲಿ ದೂರು ದಾಖಲಿಸಿದ್ದರು ನಟಿ ರಾಖಿ ಸಾವಂತ್ (Rakhi Sawant). ಸಂಜೆ ರೆಸ್ಟೋರೆಂಟ್ ನಲ್ಲಿ ಆದಿಲ್ ಖಾನ್ ಜೊತೆ ಊಟ ಮಾಡುತ್ತಿದ್ದ ವಿಡಿಯೋವನ್ನೂ ಹಂಚಿಕೊಂಡಿದ್ದರು. ಆದಿಲ್ ನನ್ನ ಬಳಿ ಕ್ಷಮೆ ಕೇಳಲು ಬಂದಿದ್ದ, ನಾನು ಕ್ಷಮಿಸಲಿಲ್ಲ ಎಂಬ ಹೇಳಿಕೆ ನೀಡಿದ್ದರು. ಇವತ್ತು ಬೆಳಗ್ಗೆ ತನ್ನನ್ನು ಭೇಟಿ ಮಾಡಲು ಮನೆಗೆ ಬಂದಿದ್ದ ಆದಿಲ್ ನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ ರಾಖಿ. ಹಾಗಾಗಿ ಮೈಸೂರು ಹುಡುಗ ಆದಿಲ್ ಸದ್ಯ ಪೊಲೀಸ್ ವಶದಲ್ಲಿ ಇದ್ದಾನೆ.

    ಮದುವೆ ವಿಷಯ ಬಹಿರಂಗ ಪಡಿಸಿ ಇನ್ನೂ ಎರಡು ತಿಂಗಳೂ ಕಳೆದಿಲ್ಲ. ಆಗಲೇ ಪತಿಯ ಮೇಲೆ ದಿನಕ್ಕೊಂದು ಆರೋಪ ಮಾಡಿ, ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು ನಟಿ ರಾಖಿ ಸಾವಂತ್. ಹಲವು ದಿನಗಳ ಹಿಂದೆಯಷ್ಟೇ ಮೈಸೂರು (Mysore) ಹುಡುಗ ಆದಿಲ್ ಜೊತೆ ಮದುವೆ ಆಗಿರುವುದಾಗಿ ರಾಖಿ ಹೇಳಿಕೊಂಡಿದ್ದರು. ತಮ್ಮ ಮದುವೆಯಾಗಿ ಆರೇಳು ತಿಂಗಳು ಕಳೆದರೂ, ಆದಿಲ್ ಗಾಗಿ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದಾಗಿಯೂ ಅವರು ತಿಳಿಸಿದ್ದರು. ಇದನ್ನೂ ಓದಿ: ರಾಮ್ ಚರಣ್ ಅದೃಷ್ಟವನ್ನೇ ಬದಲಿಸಿದ ಆರ್.ಆರ್.ಆರ್ ಚಿತ್ರ

    ರಾಖಿ ಸಾವಂತ್ ಮದುವೆ ವಿಚಾರವಾಗಿ ಹಾದಿರಂಪ ಬೀದಿ ರಂಪ ಮಾಡುತ್ತಿದ್ದಂತೆಯೇ ಆದಿಲ್ ಕೂಡ ಮದುವೆ ವಿಷಯವನ್ನು ಒಪ್ಪಿಕೊಂಡಿದ್ದ. ಕೆಲ ಕಾರಣಗಳಿಂದಾಗಿ ಅದನ್ನು ಬಹಿರಂಗ ಪಡಿಸಲು ಸಾಧ್ಯವಾಗಲಿಲ್ಲ ಎಂದೂ ಅವನು ತಿಳಿಸಿದ್ದ. ಇನ್ನೇನು ಮದುವೆ ವಿಚಾರ ಸುಖಾಂತ್ಯ ಕಾಣಲಿದೆ ಎನ್ನುವ ಹೊತ್ತಿನಲ್ಲಿ, ಆದಿಲ್ ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ ಎನ್ನುವ ವಿಚಾರವನ್ನು ರಾಖಿ ಕಣ್ಣಿರಿಡುತ್ತಾ ಹೇಳಿದ್ದರು. ಇಬ್ಬರ ಮಧ್ಯ ಯಾವುದೂ ಸರಿಯಿಲ್ಲ ಎನ್ನುವುದನ್ನು ಹೇಳಿಕೊಂಡಿದ್ದರು.

    ರಾಖಿ ತಮ್ಮ ಮರ್ಯಾದೆಯನ್ನು ತಗೆಯುತ್ತಿದ್ದಾರೆ ಎಂದು ಆದಿಲ್ ಆರೋಪಿಸಿದ್ದರು. ಹಾಗಾಗಿ ಪತ್ನಿಯಿಂದ ಅಂತರ ಕಾಪಾಡಿಕೊಂಡಿದ್ದೇನೆ ಎಂದೂ ಅವರು ತಿಳಿಸಿದ್ದರು. ಆದಿಲ್ ಉಲ್ಟಾ ಹೊಡೆಯುತ್ತಿದ್ದಂತೆಯೇ ರಾಖಿ ಮತ್ತೆ ಪತಿಯ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದಾರೆ. ಆದಿಲ್ ಗೆ ಬೇರೆ ಹುಡುಗಿಯ ಜೊತೆ ಸಂಬಂಧವಿದೆ. ಆ ಹುಡುಗಿಗಾಗಿಯೇ ತಮ್ಮ ಮದುವೆಯನ್ನು ಮುಚ್ಚಿಟ್ಟಿದ್ದ ಎಂದು ಆರೋಪಿಸಿದ್ದಾರೆ.

    ಈ ಇಬ್ಬರ ಜಗಳ ತಾರಕಕ್ಕೇರಿದೆ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದೀಗ ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಪತಿಯ ವಿರುದ್ಧ ರಾಖಿ ಸಾವಂತ್ ಮುಂಬೈನ ಓಶಿವಾರ್ ಠಾಣೆಗೆ ದೂರು ನೀಡಿದ್ದು, ತನಗೆ ಪತಿಯಿಂದ ಮೋಸ ಆಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ರಾಖಿ. ಇದೀಗ ಪತಿಯನ್ನು ಅವರೇ ಪೊಲೀಸನವರಿಗೆ ಹಿಡಿದುಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೇತನ ವಿಳಂಬ ಖಂಡಿಸಿ ಮಲ ಸುರಿದು ಪೌರ ಕಾರ್ಮಿಕರಿಂದ ಪ್ರತಿಭಟನೆ

    ವೇತನ ವಿಳಂಬ ಖಂಡಿಸಿ ಮಲ ಸುರಿದು ಪೌರ ಕಾರ್ಮಿಕರಿಂದ ಪ್ರತಿಭಟನೆ

    ಹುಬ್ಬಳ್ಳಿ: ವೇತನ ವಿಳಂಬ ನೀತಿ ವಿರೋಧಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿಯೇ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರು ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿತು. ನೇರ ವೇತನ, ವಿವಿಧ ಬೇಡಿಕೆ ಹಾಗೂ ನಾಲ್ಕು ತಿಂಗಳುಗಳಿಂದ ವೇತನ ನೀಡದ ಮಹಾನಗರ ಪಾಲಿಕೆ ಕ್ರಮ ಖಂಡಿಸಿ ಘೋಷಣೆ ಕೂಗಿದರು. ಕೆಲವರು ಪಾಲಿಕೆ ಆವರಣದಲ್ಲಿಯೇ ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ 200 ಜನ ಪ್ರತಿಭಟನಾ ನಿರತರನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದರು.

    ಇದಕ್ಕೂ ನವನಗರದಲ್ಲಿರುವ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಮುಂದೆ ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿ, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ್‍ನನ್ನು ಬಂಧಿಸುವಂತೆ ಒತ್ತಾಯಿಸಿ, ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

    ವಿಜಯ ಗುಂಟ್ರಾಳ್, ಗುತ್ತಿಗೆ ಕಾರ್ಮಿಕರೊಂದಿಗೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿದ್ದಾರೆ. ಜೊತೆಗೆ ಆತನಿಂದ ಕಿರುಕುಳ ಹೆಚ್ಚಾಗಿದೆ. ಹೀಗಾಗಿ ವಿಜಯ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ಎಂ.ಎನ್.ನಾಗರಾಜ್ ಅವರಿಗೆ ಪಾಲಿಕೆ ಸದಸ್ಯರು ಮನವಿ ಸಲ್ಲಿಸಿದರು.