Tag: ವಲಸೆ ಕಾರ್ಮಿಕ

  • ಭಯೋತ್ಪಾದಕರ ಗುಂಡಿನ ದಾಳಿಗೆ ವಲಸೆ ಕಾರ್ಮಿಕ ಬಲಿ

    ಭಯೋತ್ಪಾದಕರ ಗುಂಡಿನ ದಾಳಿಗೆ ವಲಸೆ ಕಾರ್ಮಿಕ ಬಲಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರ್‌ನಲ್ಲಿ ಬಿಹಾರದ ವಲಸೆ ಕಾರ್ಮಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಡಿಪೋರ್ ಜಿಲ್ಲೆಯ ಅಜಾಸ್ ಪ್ರದೇಶದಲ್ಲಿ ಮಧ್ಯರಾತ್ರಿ ಈ ದಾಳಿ ನಡೆದಿದೆ.

    ಮಧ್ಯರಾತ್ರಿಯಲ್ಲಿ ಭಯೋತ್ಪಾದಕರು ವಲಸೆ ಕಾರ್ಮಿಕ ಬಿಹಾರದ ಮಾಧೇಪುರದ ನಿವಾಸಿ ಮೊಹಮ್ಮದ್ ಅಮ್ರೇಜ್‌ಗೆ ಗುಂಡು ಹಾರಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಕಾರ್ಮಿಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಕಾರ್ಮಿಕ ಸಾವನ್ನಪ್ಪಿದ್ದಾನೆಂದು ವೈದ್ಯರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬೈಕ್, ರಿಕ್ಷಾಗೆ ಗುದ್ದಿದ ಕಾರ್ – 6 ಜನರ ಸಾವಿಗೆ ಕಾರಣವಾದ ಕಾಂಗ್ರೆಸ್ ಶಾಸಕನ ಅಳಿಯ

    ರಜೌರಿ ಜಿಲ್ಲೆಯ ಸೇನಾ ಶಿಬಿರದ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು. ಇದಾದ ಒಂದು ದಿನದ ನಂತರ ವಲಸೆ ಕಾರ್ಮಿಕರ ಮೇಲೆ ಉದ್ದೇಶಿತ ದಾಳಿ ನಡೆದಿದೆ.

    ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು, ಕರ್ತವ್ಯದ ವೇಳೆ ತಮ್ಮ ಪ್ರಾಣವನ್ನು ಅರ್ಪಿಸಿದ ಸೈನಿಕರಿಗೆ ಗೌರವ ಸಲ್ಲಿಸಿದ್ದಾರೆ. ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಎಂದು ಸೇನಾ ವಕ್ತಾರರು ನಿನ್ನೆ ಟ್ವೀಟ್‌ ಮಾಡಿ ತಿಳಿಸಿದ್ದರು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ

    ಕಳೆದ ವಾರ, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಿಹಾರದ ವಲಸೆ ಕಾರ್ಮಿಕ ಮೊಹಮ್ಮದ್ ಮುಮ್ತಾಜ್ ಸಾವಿಗೀಡಾಗಿ, ಇಬ್ಬರು ಗಾಯಗೊಂಡಿದ್ದರು. ಗಾಯಗೊಂಡಿರುವ ಕಾರ್ಮಿಕರಾದ ಮೊಹಮ್ಮದ್ ಆರಿಫ್ ಮತ್ತು ಮೊಹಮ್ಮದ್ ಮಕ್ಬೂಲ್ ಕೂಡ ಬಿಹಾರ ಮೂಲದವರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಲಸೆ ಕಾರ್ಮಿಕರ ನೋಂದಣಿ ಮಾಡ್ಕೊಂಡು ರಾಜ್ಯ ಸರ್ಕಾರಗಳು ಕೆಲಸ ನೀಡ್ಬೇಕು- ಸುಪ್ರೀಂಕೋರ್ಟ್

    ವಲಸೆ ಕಾರ್ಮಿಕರ ನೋಂದಣಿ ಮಾಡ್ಕೊಂಡು ರಾಜ್ಯ ಸರ್ಕಾರಗಳು ಕೆಲಸ ನೀಡ್ಬೇಕು- ಸುಪ್ರೀಂಕೋರ್ಟ್

    ನವದೆಹಲಿ: ಇತರೆ ರಾಜ್ಯಗಳಿಂದ ತವರು ರಾಜ್ಯಗಳಿಗೆ ವಲಸೆ ಹೋಗುತ್ತಿರುವ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯ ಸರ್ಕಾರಗಳು ಕೆಲಸ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

    ಇಂದು ಲಾಕೌಡೌನ್ ನಲ್ಲಿ ವಲಸೆ ಕಾರ್ಮಿಕರ ಅನಾನುಕೂಲಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ.ಎಸ್.ಎ ಬೊಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಹೊಸ ನಿರ್ದೇಶನಗಳನ್ನು ನೀಡಿದೆ. ಕಾರ್ಮಿಕರು ಇಚ್ಛೆ ಪಟ್ಟಲ್ಲಿ ಮುಂದಿನ 15 ದಿನಗಳಲ್ಲಿ ಅವರನ್ನು ತವರು ರಾಜ್ಯಗಳಿಗೆ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ ಬ್ಲಾಕ್ ಮಟ್ಟದಲ್ಲಿ ವಲಸೆ ಕಾರ್ಮಿಕರ ನೋಂದಣಿ ಆರಂಭಿಸಿ ಅವರಿಗೆ ದಿನನಿತ್ಯ ಕೆಲಸ ನೀಡಬೇಕು ಎಂದು ಆದೇಶಿಸಿದೆ.

    ಇಂದು ವಿಚಾರಣೆ ಈ ವೇಳೆ ಅರ್ಜಿಯಲ್ಲಿ ಭಾಗಿದಾರನ್ನಾಗಿ ಮಾಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸುಪ್ರೀಂಕೋರ್ಟಿಗೆ ಮನವಿ ಮಾಡಿತು. ಕೆಲವು ಸಲಹೆಗಳೊಂದಿಗೆ ಬಂದಿದ್ದು ತಮ್ಮನ್ನು ಪರಿಗಣಿಸಲು ಮನವಿ ಮಾಡಿದರು. ಆದರೆ ಇದಕ್ಕೆ ನಿರಾಕರಿಸಿದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆವರೆಗೂ ಕಾಯುವಂತೆ ಸೂಚನೆ ನೀಡಿದೆ.

    ಈ ಹಿಂದೆ ವಿಚಾರಣೆ ವೇಳೆ ವಲಸೆ ಕಾರ್ಮಿಕರಿಂದ ಪ್ರಯಾಣದ ದರ ಪಡೆಯದೇ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕು ಹಾಗೂ ಪ್ರಯಾಣದ ವೇಳೆ ರಾಜ್ಯ ಸರ್ಕಾರಗಳು ಆಹಾರದ ವ್ಯವಸ್ಥೆ ಮಾಡಬೇಕು ಮಾಡಬೇಕು ಎಂದು ಸೂಚಿಸಿತ್ತು.

  • ದೆಹಲಿ To ಬಿಹಾರ್ ಸೈಕಲ್ ಜರ್ನಿ – ಮನೆಗೆ ಹೋಗುವ ಖುಷಿಯಲ್ಲಿದ್ದ ಕಾರ್ಮಿಕ ಮಸಣ ಸೇರಿದ

    ದೆಹಲಿ To ಬಿಹಾರ್ ಸೈಕಲ್ ಜರ್ನಿ – ಮನೆಗೆ ಹೋಗುವ ಖುಷಿಯಲ್ಲಿದ್ದ ಕಾರ್ಮಿಕ ಮಸಣ ಸೇರಿದ

    – ದಾರಿ ಮಧ್ಯೆಯೇ ಸುಸ್ತಾಗಿ ಸಾವನ್ನಪ್ಪಿದ
    – ಕಾರ್ಮಿಕನ ಜೊತೆಗಿದ್ದವರು ಈಗ ಕ್ವಾರಂಟೈನ್

    ಲಕ್ನೋ: ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ದೇಶಾದ್ಯಂತ ಜಾರಿಮಾಡಿದ್ದ ಲಾಕ್‍ಡೌನ್ ವಿಸ್ತರಿಸಲಾಗಿದೆ. ಲಾಕ್‍ಡೌನ್‍ನಿಂದ ಕೆಲಸ ಅರಸಿ ನಗರಗಳಿಗೆ ಬಂದಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲಾಗದೆ ಪರದಾಡುತ್ತಿದ್ದಾರೆ. ಈ ನಡುವೆ ಸೈಕಲ್ ಏರಿ ಮನೆ ಸೇರುವ ಖುಷಿಯಲ್ಲಿದ್ದ ಬಿಹಾರ್ ಮೂಲದ ವಲಸೆ ಕಾರ್ಮಿಕನೋರ್ವ ಮಸಣ ಸೇರಿದ್ದಾನೆ.

    ಬೀಹಾರ್ ಮೂಲದ ಧರಮ್‍ವೀರ್(32) ದೆಹಲಿಗೆ ಕೆಲಸ ಅರಸಿ ಬಂದಿದ್ದನು. ಆದರೆ ಲಾಕ್‍ಡೌನ್‍ನಿಂದ ತನ್ನ ಊರಿಗೆ ವಾಪಸ್ ಹೋಗಲು ಆಗದೇ ಪರದಾಡುತ್ತಿದ್ದನು. ಈ ವೇಳೆ ಏಪ್ರಿಲ್ 28ರಂದು ತನ್ನ ಜೊತೆಗಿದ್ದ ಇತರೆ ಕಾರ್ಮಿಕರ ಜೊತೆಗೂಡಿ ದೆಹಲಿಯಿಂದ ಸೈಕಲ್‍ನಲ್ಲಿಯೇ ಬಿಹಾರ್ ಸೇರಲು ನಿರ್ಧರಿಸಿ, ದೆಹಲಿಯಿಂದ ಬಿಹಾರ್ ರಾಜ್ಯದತ್ತ ಪ್ರಯಣ ಆರಂಭಿಸಿದನು. ಆದರೆ ಮನೆ ಸೇರುವ ಖುಷಿಯಲ್ಲಿದ್ದ ಕಾರ್ಮಿಕ ಮಾರ್ಗ ಮಧ್ಯೆ ದೆಹಲಿ-ಉತ್ತರಪ್ರದೇಶ ಹೆದ್ದಾರಿಯಲ್ಲಿ ಜಹಜಾನ್‍ಪುರದ ಬಳಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ:  100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ

    ಶುಕ್ರವಾರ ರಾತ್ರಿ ಜಹಜಾನ್‍ಪುರದ ಬಳಿ ಬರುತ್ತಿದ್ದಂತೆ ಧರಮ್‍ವೀರ್ ಬಹಳ ಸುಸ್ತಾಗಿದ್ದನು. ಹೀಗಾಗಿ ಆತನ ಜೊತೆಗಿದ್ದ ಇತರೆ ಕಾರ್ಮಿಕರು ಹಾಗೂ ಆತ ಸ್ವಲ್ಪಹೊತ್ತು ವಿಶ್ರಾಂತಿ ಪಡೆಯಲು ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಧರಮ್‍ವೀರ್ ಸುಸ್ತಾಗಿ ಕೆಳಗೆ ಬಿದ್ದಿದ್ದು, ಆತನನ್ನು ಜೊತೆಗಿದ್ದವರು ಹತ್ತಿರದ ಆಸ್ಪತ್ರಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಕಾರ್ಮಿಕ ಸಾವನ್ನಪ್ಪಿದ್ದನು.

    ದೆಹಲಿಯಿಂದ ಬಂದಿದ್ದ ಹಿನ್ನೆಲೆ ಆಸ್ಪತ್ರೆ ಸಿಬ್ಬಂದಿ ಧರಮ್‍ವೀರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಕೊರೊನಾ ಪರೀಕ್ಷೆ ಕೂಡ ಮಾಡಿದ್ದಾರೆ. ಅಲ್ಲದೆ ಆತನ ಜೊತೆಗಿದ್ದ ಕಾರ್ಮಿಕರನ್ನು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಕಾರ್ಮಿಕರಿಗೆ ಸೋಂಕು ತಗುಲಿದೆಯಾ? ಇಲ್ಲವಾ ಎಂಬುದು ಪರೀಕ್ಷಾ ವರದಿ ಬಂದಮೇಲೆ ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.